ತ್ರೈಲೋಕ್ಯಭೂಷಣಮೆಂಬ ನೋಂಪಿಯಂ | ಪುಷ್ಯಮಾಸದ ಶುಕ್ಲಪಕ್ಷದ ತದಿಗೆಯಂದುಪವಾಸಂಗೆಯ್ದು | ಶ್ರೀವರ್ಧಮಾನಭಟ್ಟಾರಕರ ಪ್ರತುಮೆಯಂ | ಯಕ್ಷಾಯಕ್ಷಿನವಗ್ರಹಸಹಿತಮಪ್ಪುದಕ್ಕೆ | ಅಭಿಷೇಕಂಗೆಯ್ದುಷ್ಟವಿಧಾರ್ಚ್ಚನೆಯಿಂದರ್ಚ್ಚಿಸಿ | ಕಂಮನೆಯ ಹೂವಿನಮಾಲೆಗಳಿಂದವಗಹನಮಿರಿಸೂದಿಂತು | ಮೂವ್ವತ್ತೆರಡು ತದಿಗೆ ನೆರದಂದು ತಂಮುಂಚಿನ ಪ್ರಮಾಣದೊಳು | ಶ್ರೀವರ್ದ್ಧಮಾನಭಟ್ಟಾರಕರ ನೋಂಪಿಯಂ ಕೈಕೊಂಡು | ಇಂತೆಂಟು ತದಿಗೆವರಂ ಕಂಮನಪ್ಪ | ಹೂವಿನಮಾಲೆಯನರ್ಹನ್ತಂ ಗಿರಿಸೂದು | ಮತ್ತೆಂಟು ತದಿಗೆ ನೆರದಂದು ತಂಮುಂಚಿನ ಪ್ರಮಾಣದೊಳು ಅರ್ಚ್ಚಿಸುವದು | ಶ್ರೀವರ್ದ್ಧಮಾನಸ್ವಾಮಿಯ ಪ್ರತುಮೆಯಲ್ಲಿ ನೋಂಪಿಯಂ ಕೈಕೊಂಡು | ಯಿಂತೆಂಟು ತದಿಗೆವರಂ ಕಮ್ಮನಪ್ಪ | ಹೂವ್ವಿನಮಾಲೆಯಲವಗಹನಮಿರಿಸೂದು | ಮತ್ತೆಂಟು ತದಿಗೆಮರಂ ಕಬ್ಬಿನಖಂಡಿಕೆವರಂ | ಅವಗಹನಮಿರಿಸೂದು | ಅನ್ತು ಮೂವತ್ತೆರಡು ತದಿಗೆ ನೆರದಂದು | ತಂಮುಂಚಿನ ಪ್ರಮಾಣದೊಳು ಶ್ರೀವರ್ದ್ಧಮಾನ ಭಟ್ಟಾರಕರ ಪ್ರತುಮೆಯಂ | ತಗಡೊಳಾನುಂ | ಪಟದೊಳಾನುಂ | ಚಿತ್ರದೊಳಾನುಂ | ಕಾಷ್ಠದೊಳಾನುಂ | ಲೆಪ್ಪದೊಳಾನುಂ | ಕಲ್ಲೊಳಾನುಂ ಪೊಂನಳಾನುಂ ಬೆಳ್ಳಿಯೊಳಾನುಂ ಪ್ರತುಮೆಯಂ ಮಾಡ್ಸಿ | ಆ ದೇವರ ಪ್ರತುಮೆಯಂ ಅಭಿಷೇಕಂಗೆಯ್ದು | ಪಲವು ತೆರದಕ್ಷತೆಗಳಿಂ | ಪಲವು ತೆರದ ಪುಷ್ಟಂಗಳಿಂ | ಪಲವು ತೆರದ ದೀಪಧೂಪಂಗಳಿಂ | ಪಲವು ತೆರದ ಚರುಗಳಿಂದರ್ಚ್ಚಿಸೂದು | ನೋಂಪಿಯನೆರದು ಈ ನೋಂಪಿಯ ಫಲಮೆಂತೆನೆ | ನೋಂತುಜ್ಜವಣೆಯಂ ಮಾಡಿದವರು | ಭವಭವಾಂತರದೊಳೆಲ್ಲಂ | ಕುಲಜರು | ಗುಣಿಗಳುಂ | ಸುರೂಪಿಗಳುಮಾರೋಗ್ಯವಂತರುಂ | ತ್ಯಾಗಿಗಳುಂ | ಭೋಗಿಗಳುಮಾಗಿ ಪುಟ್ಟಿಬೆಳೆದು | ಮತ್ತ ಮಿಂತೀ ಪೇಳಲ್ಪ್‌ಟ್ಟು ಗುಣಂಗಳ್ನೆರದು | ಕಲತ್ರ ಪುತ್ರ ಮಿತ್ರ ಪ್ರಭೃತಿ ವರ್ಗ್ಗಂಗಳಿಂದ ಪ್ರಿಯರಾಗಿ | ಧನ ಕನಕ ಸಮೃದ್ಧರಾಗಿ | ಅನೇಕ ಮಹಾಮಣಿ ಮಾಣಿಕ್ಯಂಗಳಿಂ ಸಮೆದ ಮಕುಟ ಕುಂಡಲ ಕೇಯೂರ ಹಾರ ಕಟಕ ಕಟಿಸೂತ್ರ ನೂಪುರಾದ್ಯಾಭರಣಂಗಳಂ ತೊಡಲ್ಕೊಡೆಯರಾಗಿ ಬೆಲೆಗೆ ಪಿರಿಯಮಪ್ಪ ಸಂಣವಂಸುಂಣಿದವಪ್ಪ ಅಮೂಲ್ಯ ಪಟ್ಟಾವಳಿಯ ನೇತ್ರ ಪಟ್ಟಿಯುಮುಭಯಕರ್ಮ್ಮಮುಂ ಚೀನಿ ಮಹಾಚೀನಿ ಮೊದಲಾದವಗೊಡೆಯನಪ್ಪುದು | ಅನೇಕ ವಸ್ತ್ರಂಗಳುಮನುಡಲುಂ ತೊಡಲುಂ | ಭೋಗಂಗೆಯ್ಯಲೊಡೆಯರಾಗಿ | ಬೇಡಿದವರ್ಗ್ಗೆಲ್ಲಂ | ಬೇಡಿದ ವಸ್ತ್ರಾಭರಣ ವಸ್ತುವಾಹನಂ ರತ್ನಂಗಳನೀವುತ್ತಂ | ಅನುಮಿಷೆಯರೊಳಿಷ್ಟವಿಷಯ ಕಾಮಭೋಗಂಗಳನನುಭವಿಸಿ ನಿರಂತರಮಪ್ಪ ಸುಖ ದೊಳ್ಕೊಡಿರ್ಪ್ಪರು ತದನಂತರಂ ಸರ್ವ್ವಜ್ಞ ಶ್ರೀಯೊಳ್ಕೊಡಿರ್ಪ್ಪರೂ || ಜಯ ಮಂಗಳ ಮಹಾ || ಶ್ರೀ ಶ್ರೀ ಶ್ರೀ