|| ತರಳ || ಯೆಲೆ ದಳಿರ್ನ್ನನೆ ಮೊಗ್ಗೆ ಪೊಮಿಡಿ ಗೋರೆಗಾಯ್ತುನಿವಣ್ಗಿಳಿಂ
ದಳಿನಿಕಾಯ ಶುಕಾಳಿ ಕೋಕಿಲ ವೃಂದದಿಂ ಕಡು ಶೋಭೆಯಂ
ತಳೆದು ತದ್ವನ ಭುಜರಾಜಿಯ ನೋಳ್ಪ ವಾಂಚ್ಛೆಯೀ ನಾಕದಿಂ
ದಿಳಿದು ಬಂದು ಸರಾಗಮೆಂಬವೋಲಿರ್ದ್ದುದೊಂದೆಳೆ ಮಾಮರಂ ||

|| ವ || ಅನ್ತು ಮನೋನಯನಾನಂದಕಾರಿಯಾಗಿರ್ದ್ದ ಪೂತ ಭೂಜಾತಮಂ ಕಂಡು ಮೆಚ್ಚುತಂ ಬಪ್ಪಂನೆಗಮತ್ಯಂತ ನಿರ್ಮ್ಮಲಮಪ್ಪ ಗಗನ ತಳದೊಳುದಯಿಸಿದ ಚಂದ್ರಬಿಂಬ ಯುಗಳಮೆಂಬಂತೆ ತಚ್ಚೂತ ಮಹೀರುಹದಸ್ಥಿತ ವಿಶಾಲಾತಿ ವಿಶುದ್ಧ ಚಂದ್ರಕಾಂತಾ ಶಿಲಾತಳದೊಳ್ಪರ್ಯ್ಯಂಕಾಸನಾಸೀನಮಾಗಿರ್ದ್ದರಿಂ ಜಯಾಮಿತಂಜಯಾಭಿಧಾನ ಚಾರಣಮುನಿಯುಗಳಮಂ ಕಂಡು

|| ಕ || ಕರವಲಯಯಿರದೆ ಮುನಿದ
ತ್ತರಸನ ಹೃತ್ಕೈರವಂ ವಿಕಾಶ ಶ್ರೀಯಂ
ಧರಿಸಿದುದು ಜನಕೆ ತನ್ಮು ನಿ
ವರ ಯುಗಲದ ಶೀತಗುಲ್ಮಮಂ ಪ್ರಕಟಿಪ ವೋಲೂ ||

|| ವ || ಅಂತಾ ಹರಿಷೇಣ ಮಹಾರಾಜನತ್ಯಂತ ಪ್ರಮೋದದಿಂ ಗಾಂಧಾರಿ ಮೊದಲಾದಂತಃಪುರ ಕಾಂತಾಜನಂ ಬೆರಸು ಪ್ರದಕ್ಷಿಣಂ ಗೆಯ್ದು ವಿವಿಧ ಸುರಭಿ ಕುಸುಮಂಗಳಿಂ ನಾನಾ ವಿಧ ಸರಸ ಫಲಂಗಳಿದರ್ಚ್ಚಿಸಿ ಸಾಷ್ಟಾಂಗ ಪರಣುತನಾಗಿ ತತ್ಪುರೋಭಾಗದೊಳ್ಕರ ಕಮಲ ಮುಕುಲಾಂಕಿತ ಬಾಲಸ್ಥಲನಾಗಿ ಕುಳ್ಳಿರ್ಪ್ಪುದುಮಾ ಮುನೀಶ್ವರ ಕಾಯೋತ್ಸರ್ಗ್ಗಮಂ ನಿಷ್ಪಾಪಿಸಿ ದಂತ ಕಾಂತಿ ದೆಸೆಗೆ ಪಸರಿಸಿ ಮೃದು ಮಧುರ ಗಂಭೀರ ಧ್ವನಿಯಿಂ ಧರ್ಮ್ಮ ವೃದ್ಧಿಯಕ್ಕೆಂದು ಪರಸಿ ಉಚಿತ ಸಂಭಾಷಣಾನಂತರ ಮಿಂತೆಂದನೆಲೆ ಮಹಾರಾಜಾ ನೀಂ ಪುರಾಕೃತಧರ್ಮ ಪ್ರಸಾದದಿಂದಿಂತಪ್ಪ ಮಹಾರಾಜ ಪದವಿಯಂ ಪಡದೆಯಿಂನುಮಭ್ಯುದಯ ನಿಃಶ್ರೇಯ ಸಂಪದ ಪ್ರಾಪ್ಯರ್ಹಂತ ಧರ್ಮ್ಮಮನತೀವಾನು ರಾಗದಿನನುಷ್ಟಿ ಸುಉದೆಂದು ಪೇಳ್ದಾ ಧರ್ಮ್ಮಮನಿಂತೆಂದು ಪೇಳಲ್ತಗುಳ್ದರೂ

|| ವೃ || ಧರಿಸುಗುಮಾವುದೊಂದು ಸಲೆ ಜೀವಿಗಳಂ ಭವದುಃಖದತ್ತಣಿಂ
ಭರದಿನಗಲ್ಪ ನಾಗ ನರ ನಾಕ ಪತಿತದೊಳಂತೆ ಮೋಕ್ಷದೊ
ಳ್ನಿರುತಮದಂ ಜಿನಾಧಿಪರುಸಿರ್ವ್ವರಿಳಾಸ್ತುತ ಧರ್ಮಮೆಮದು ದ
ಲ್ಪರಿಕಿಸೆ ತಾನಹಿಂಸೆ ಮೊದಲಾದ ಲಕ್ಷಣಮದಕ್ಕು ನಿಚ್ಚಲಂ ||

|| ಕ || ಅನಗಾರ ಧರ್ಮ್ಮಮೆಂದುಂ
ಜನನುತ ಸಾಗಾರ ಧರ್ಮ್ಮಮೆಂದಾ ಧರ್ಮ್ಮಂ
ಜನಹಿತಕರಮಿತ್ತೆಱನೆಂ
ದನಘು ಜಿನೇಶಾಜ್ಞೆಯಿಂದ ಮುನಿಪರುಸಿರ್ದ್ದರೂ ||

|| ವ || ಆ ಯೆರಡಱೊಳನಾಗಾರ ಧರ್ಮ್ಮಮುತ್ತಮ ಕ್ಷಮಾ ಮಾರ್ದ್ಧವಾರ್ಜ್ಜವ ಶೌಚ ಸತ್ಯ ಸಯ್ಯಮ ತಪಸ್ತ್ಯಾಗಾಚಕಿಂಚನ್ಯ ಬ್ರಹ್ಮಚರ್ಯ್ಯ ಬೇಧದಿಂ ದ್ವಿವಿಧಮಕ್ಕುಂ | ಮಲ್ಲಿದುಷ್ಟಜನ ಕೃತಾಕ್ರೋಶ ಪ್ರಹಸನವಜ್ಞಾನ ತಾಡನ ಶರೀರ ವ್ಯಾಪಾರನಾದಿಗಳಂ ನನೆಯ್ದಿದೊಡಂ ಕಾಲುಷ್ಯಮಿಲ್ಲದಿರ್ಪ್ಪುದುತ್ತಮ ಕ್ಷಮೆಯೆಂಬುದಕ್ಕುಂ | ಜಾತಿ ಕುಲಾದಿ ಮದಾವೇಶದತ್ತಣಿಂದಭಿಮಾನಮಿಲ್ಲದಿರ್ಪ್ಪುದುಂ | ಮಾರ್ದವಮೆಂಬುದಕ್ಕುಂ | ಮನೋವಾಕ್ಕಾಯ ಯೋಗಂಗಳ ಋಜುತ್ವಮಾರ್ಜ್ಜವಮೆಂಬುದಕ್ಕು ಪ್ರಕರ್ಷಪ್ರಾಪ್ತ ಲೋಭದತ್ತಣಿಂದಪ್ಪ ನಿವೃತಿ ಶೌಚಮೆಂಬುದಕ್ಕುಂ | ಪ್ರಶಸ್ತ ಜನಂಗಳೊಳಪ್ಪ ಸಾಧುವಚನಂ ಸತ್ಯಮೆಂಬುದಕ್ಕುಂ | ವ್ರತಧಾರಣಮುಂ ಸಮಿತಿ ಪಾಲನಮಂ ಕಷಾಯ ನಿಗ್ರಹಮುಂ | ದಂಡತ್ಯಾಗಮುಮಿಂದ್ರಿಯ ಜಯಮುಂ | ಸಂಯಮಮೆಂಬುದಕ್ಕುಂ | ರತ್ನತ್ರಯಾವಿರ್ಬ್ಭಾವಾರ್ತಮಿಚ್ಛಾನಿರೋದಂ ತಪಮೆಂಬುದಕ್ಕುಂ | ಬಾಹ್ಯಾಭ್ಯಂತರ ಪರಿಗ್ರಹತ್ಯಾಗಮುಂ ಜ್ಞಾನಾದಿ ದಾನಂ ಮೇಣು ತ್ಯಾಗಮೆಂಬುದಕ್ಕುಂ || ಉಪಾತ್ತ ಶರೀರಾದಿಗಳೊಳಂ ಸಂಸ್ಕಾರ ವ್ಯಪೋತಾರ್ತ್ಥಮಿದೆಂನದೆಂಬ ಪರಿಣಾಮಾಭಾವಮಾಕಿಂಚನ್ಯ ಮೆಂಬುದಕ್ಕುಂ | ಮನುಭೂತಾಂಗನಾ ಸ್ಮರಣ ತತ್ಕಥಾ ಶ್ರವಣ ಸ್ತ್ರೀ ಸಂಸಕ್ತ ಶಯನಾಸನಾದಿವರ್ಜ್ಜನಂ ಬ್ರಹ್ಮಚರ್ಯ್ಯಂ ಮೆಂಬುದಕ್ಕುಂ ಯಿಂತೂ

|| ಕ || ಅತಿಶಯಂ ಮಹಾತ್ಯ್ಯಂ ವಿ
ಶ್ರುತಮುರಗ ನರಾಮರೇಂದ್ರ ಸಂನುತಮಪ್ಪೀ
ಯತಿ ಧರ್ಮ್ಮಂ ಮುಕ್ತಿ ಶ್ರೀ
ಸತಿಯ ಕರ ಗ್ರಹಣದಲ್ಲಿ ಶಲ್ಕಮೇನಕ್ಕುಂ ||

|| ವ || ಮತ್ತಂ ಸಾಗಾರ ಧರ್ಮ್ಮಂ ದರ್ಶನಿಕ ವ್ರತಿಕ ಸಾಮಾಯಿಕ ಪ್ರೋಷ ಧೋಪವಾಸ ಸಚ್ಚಿತ್ತವಿರತ ರಾತ್ರಿ ಭುಕ್ತ ವ್ರತ ನಿರತ ಬ್ರಹ್ಮಚರ್ಯ್ಯ ಆರಂಭ ನಿವೃತ್ತ ಪರಿಗ್ರಹ ನಿವೃತ್ತ ಅನುಮತಿ ವಿರತ ಉದ್ದಿಷ್ಟ ವಿರತರೆಂಬೀನಿಲಯ ಭೇದದಿಂದೇಕಾದಶವಿಧ ಮಕ್ಕುಮವಱೊಳೂ

|| ಕ || ವರದರ್ಶನ ಸಂಸುದ್ಧಂ
ಗುರು ಪಂಚಕ ಚರಣನಿವಕಂ ಪಂಚೌದುಂ
ಬರ ಫಲಮಂ ಮಧುಮಂ ಮ
ತ್ತಿರುಳುಣಸಂ ವ್ಯಸನ ಸಪ್ತ ಕಮನುಱೆ ತೊಱೆವಂ ||

ವ್ರತ ವೊಂದನಪ್ಪೊಡಂತಾ
ನತಿ ಮುದದಿಂ ತಾಲ್ದುವಂ ನಿಧಾನ ವಿಹೀನಂ
ಮತಿವಂತಂ ದೃಢ ಚಿತ್ತಾ
ನ್ವಿತ ಪುರುಷಂ ತಪ್ಪದೆನಿಸುಗುಂ ದರ್ಶನಿಕಂ ||

ನಿಂದಾಗರ್ಹಯುಕ್ತನ
ನಿಂದ್ಯಂ ತಂನಂತೆ ಬಗೆವನಂನ್ಯರುಮಂ ಮ
ತ್ತೆಂದು ದಯಾರ್ದ್ರ ಹೃದಯಂ
ನಿಂದ್ಯ ಮಹಾರಂಭಮಂತದಂ ಪರಿಹರಿಪಂ ||

ಅಣುಗುಣ ಶಿಕ್ಷಾವ್ರತ
ನ್ಮಣಿ ಭೂಷಣ ಭೂಷಿತಾಂಗನತಿ ಧೃಢಚಿತ್ತಂ
ಪ್ರಣುತೋಪಶಮ ಸಮೇತಂ ಭ
ರಣನಿಯಂವ್ರತಿಕನೆಂದುದಲ್ನಿಶ್ಚಯದಿಂ ||

ಯೆರಡು ನಮಸ್ಕೃತಿಯೊಳ್ಪಂ
ನೆರಡಾವರ್ತ್ತದೊಳು ನಾಲ್ಕು ತಲೆಯಱಕದೊಳಂ
ಬೆರಸಿದ ಕಾಯೋತ್ಸರ್ಗ್ಗಮ
ನಿರದತಿ ಮುದದಿಂದ ಮಾಳ್ಪ ನಿರ್ಮ್ಮಲ ಚಿತ್ತಂ ||

ನೆನೆವುತಾತ್ಮನ ತೆಱನಂ
ಜಿನ ಬಿಂಬಮನಲ್ಲದಂದು ಪ೦ರಮಾಕ್ಷರಮಂ
ನೆನೆವಂ ಕರ್ಮ್ಮ ವಿಪಾಕಮ
ನನವರತಂ ಮುಱು ಕಾಲದೊಳ್ಸಾಮಾಯಿಕಂ ||

|| ವೃ || ಸಪ್ತಮಿಯೊಳ್ತ್ರಯೋದಶಿಯೊಳಂ ಮುದದಿಂದಪರಾಹ್ಣದಲ್ಲಿ ಸಂ
ದಾಪ್ತ ಗೃಹಕ್ಕೆ ಪೋಗಿ ಕೃತಿ ಕರ್ಮ್ಮಮುಮಂ ನೆಱೆ ಮಾಡಿ ಭಕ್ತಿಯಿಂ
ದಾಪ್ತ ತಪೋಧನಾತ್ಮ ಪರ ಸಾಕ್ಷಿಕ ಮೂರುಪವಾಸಮಂ ಬಹಿಃ
ಕ್ಷಿಪ್ತಮನಂ ಸರಾಗದೆ ಚತುರ್ವ್ವಿಧಮಪ್ಪುದನಾಂತು ರಾತ್ರಿಯೊಳೂ ||

|| ಕ || ಯಿರದೆ ಗೃಹ ವ್ಯಾಪಾರಮ
ನುರು ಮುದದಿಂ ಬಿಟ್ಟು ಧರ್ಮ್ಮಮಂ ಕೇಳುತ್ತಂ
ಯಿರುಳಂ ಕಳಿದುದಯದೊಳಂ
ಪರಮಾನಂದದೊಳು ಮಾಡಿ ಕೃತಿಕರ್ಮ್ಮಮುಮಂ ||

ಅಧ್ಯಯನಾನಂತರದೊ
ಳ ಹ್ನಿಕಮಂ ದಲಾಪರಾಹ್ಮಿಕಮಂ ಮ
ತ್ತಿದ ವಿಶುದ್ಧಿಯಿನೊಡರಿಸಿ
ಸದ್ಧರ್ಮ್ಮ ಶ್ರವಣದಿಂದ ಕಳಿದಾ ಯಿರುಳಂ ||

|| ವೃ || ಪ್ರಾತಃ ಕಾಲದೊಳೆದ್ದು ವಂದನೆಯಯನತ್ಯಾಹ್ಲಾದದಿಂ ಮಾಡಿ ವಿ
ಖ್ಯಾತಾನಂತ ಸುಬೋಧ ಜೈನ ಪತಿಗಂ ಪೂಜಾಭಿಷೇಕಮಗಳಂ
ಜಾತಾನಂದದಿ ಮಾಡಿ ಪಾತ್ರಕಿರದಿತ್ತಾಹಾರದಾನಮಂ ಪೂ
ಜಾತಾತ್ಮಂ ಬಳಿಕುಂಬವಂ ಸುಚರಿತಂ ತಾಕ್ಕವಂ ಪ್ರೊಷಧಂ ||

|| ಕ || ವೊಂದುಪವಾಸಮನಾದೊಡ
ಮೊಂದುಂದಂದುಗದೊಳಂದುದಾವಂ ಮಾಳ್ಪಂ
ಸಂದಿರ್ದ್ದ ಕರ್ಮರಿಪುಗಳ
ಗೊಂದಳಮಂ ಲೀಲೆಯಿಂದ ಕಡಿಸುವ ಮಾತಂ ||

ಅನಶನಮಂ ಮಾಳ್ಪಾತಂ
ಘನಮಪ್ಪಾರಂಭದೊಳ್ಪ್ರವರ್ತ್ತಿಪೊಡಾತಂ
ತನುವಂ ಶೋಷಿಪುದಲ್ಲದೆ
ತನುತಾರ ಕರ್ಮ್ಮಮುಮನಪ್ಪೊಡಂ ಶೋಕಿಪನೆ ||

|| ಉತ್ಸಾಹ || ಹಸಿಯವಪ್ಪ ಪತ್ರಮೂಲ ಕಂದ ಶಾಕ ಶಾಖೆಯಂ
ಪ್ರಸವ ಫಲಶರೀರ ಬೀಜಪಲ್ಲವತ್ವಗಾದಿಯಂ
ಅಸುನಿಕಾಯ ಕೃಪೆಯಿನಾವನೊರ್ವ್ವನರನು ಸೇವಿಸಂ
ವಸುಧೆಯೊಳ್ಸಚಿತ್ತವಿರತ ನೆನಿಸುಗಾತನವಿತಥಂ ||

|| ಕ || ಮೆಲವೇಳನಂನ್ಯರಂ ತಾಂ
ಮೆಲ್ಲನೆಂದುಂ ಹಸಿಯ ಫಲಫಲಾಶಾದಿಗಳಂ
ಮೆಲಿಸಿದವಂಗಂ ತಾನುಂ
ಮೆಲ್ವಂಗಿಳೆಯೊಳ್ಪಾವಿಪೊಡೆ ಭೇದಮಿಲ್ಲೆನಿತಂ ||

|| ಉತ್ಸಾಹ || ಆವನೋರ್ವ್ವನಿಂದ ಹಸಿಯ ವಸ್ತುವ ತೊಱೆಯೆ ಪಟ್ಟುದಾ
ಪಾವನಾತ್ಮನಿಂದ ದುಷ್ಟ ಜಿಹ್ವೆ ಗೆಲಲು ಪಟ್ಟುದಾ
ಭೂವಿನುತ ನಿಂದ ಮವಿತವದುದರ್ಹದ ಬಿಹಿತಂ
ಜೀವನಿಕರದಲ್ಲಿ ಕೃಪೆಯು ಮಾಡೆ ಪಟ್ಟುದಾತನಿಂ ||

ಚತುರಾಹಾರಮನಿರೊ
ಳ್ಪೊತಿವಂತಂ ಕೊಳಿಸನಂನ್ಯರಂ ತಾಂ ಕೊಳ್ಳಂ
ಸತತಮನು ಕಂಪೆಯುಳ್ಳಂ
ಕ್ಷಿತಿಯೊಳವಂ ರಾತ್ರಿಭುಕ್ತವಿರತನೆನಿಕ್ಕುಂ ||

ಪರಿಹರಿಸಿದುರಾರಂಭಮ
ನಿರುಳುಣಸಂ ನೆಱೆಯೆ ಪರಿಹರಿಪ್ಪಾ ಮನುಜಂ
ವರುಷದೊಳಗಾಱು ತಿಂಗ
ಳ್ಪರಮುಪವಾಸವನೆ ಮಾಡಿದಾತನೆನಿಕ್ಕುಂ ||

ತ್ರಿಕರಣ ಸಂಶುದ್ಧಿಯೊಳಂ
ಸಕಲ ವಧೂಜನದ ವಾಂಚ್ಛೆಯಂ ತೊಱೆದವನಂ
ಸಕಲಾಮರೇಂದ್ರ ವಂದ್ಯಂ
ಸಕಲಜ್ಞ ಬ್ರಹ್ಮಚಾರಿಯೆಂದುಱೆ ಪೇಳ್ವರೂ ||

ನಾರಿಯರಪಾಂಗ ಬಾಣದಿ
ನೋರಂತಿರೆ ವಿದ್ದನಾದೊಡಂ ವಿಕೃತಿಯುಮಂ
ಸಾರನವಂ ಶೂರರೊಳತಿ
ಶೂರಂ ರಣದೊಳತಿ ಶೂರನಲ್ಲನೆಂದುಂ ಸೂರಂ ||

ಮಾಡಂ ತಾನಾರಂಭಮ
ಮಾಡಿಸನಾರಿಂದಮಧಿಕ ಪಾಪಕರಮಂ
ನಾಡೆಯು ಹಿಂಸಾಭೀರುಕ
ನೀಡಿತನಾರಂಭ ವಿರತನೆನಿಸುಗುಮಾತಂ ||

ಪರಿಹರಿಪಂ ಬಾಹ್ಯಾಭ್ಯಂ
ತರ ಭೇದ ಪರಿಗ್ರಹಂಗಳಂ ಮುದದಿಂದಂ
ಕರಮಘಕರಮೆಂದಾತಂ
ಪರಿಗ್ರಹ ನಿವೃತ್ತನೆಂಬ ಪೆಸರಂ ಪಡೆಗುಂ ||

|| ವೃ || ಶೋಕಂ ವಿಥ್ಯಾತ್ವ ಹಾಸ್ಯಂ ರತಿ ಭಯಮರತಿ ದ್ವೇಷರಾಗಂ ಜಿಗುಪ್ಸಾ
ಲೋಕಘ್ನಂ ಕ್ರೋಧ ವೇದಂ ವಿಕೃತಿ ಕುಗತಿಗಂ ಮಾನಮಾಯಂ ಸ ಲೋಭಂ
ರೇಕಂಗಳ್ನಾಡಲಿರೆಳೆಉದಲವರೊಳಭ್ಯಂತರ ಗ್ರಂಥ ಮೇದಾ
ಲೋಕಾಲೋಕಾವ ಭೋಧೆ ಪ್ರವಣ ಜನವರಂ ಪೇಳ್ವರಿಂದ್ರಾದಿ ವಂದ್ಯರೂ ||

|| ಕ || ಧನಧಾನ್ಯ ಕೂಪ್ಯ ಬಾಂಡಂ
ಮನೆಯುಂ ದ್ವಿಪದಂಗಳು ಚತುಃಪದಂ ಕ್ಷೇತ್ರಂಗಳ
ತನು ಸುಖಯಾನಂ ಶಯ್ಯಾ
ಸನಮೆಂಬೀ ಪತ್ತುಮಲ್ತೆ ಬಾಹ್ಯಗ್ರಂಥಂ ||

|| ವ || ವಿರಹಿತ ಬಾಹ್ಯ ಗ್ರಂಧರ್ದ್ದಂದ್ರ ಮನುಜ ಸ್ವಮನುಜ ಸ್ವಭಾವಿದಿಂದೊಳಗಭ್ಯಂತರಮಂ ಗ್ರಂಥಮಮಳಿವರ್ಪ್ಪರಿಕಿಪೊಡತ್ಯಂತ ದುರ್ಲ್ಲಭರ್ವ್ವಸು ಮತಿಯೊಳು ಪಾಪನಿಮಿತ್ತ ಗೃಹಸ್ತ ವ್ಯಾಪಾರಂಗಳೊಳು ಮಾಡನನುಮತಿಯಂತಾಂ ಪಾಪಾತಿ ಭೀರು ಜೀವ ಕೃಪಾಪರ ಮನುಜಂ ದಲಕ್ಕುಮನಮತಿ ವಿರತಂ ||

ಬೇಡದ ಭಿಕ್ಷಾಚರದಿಂ
ನಾಡೆಯು ನವಕೋಟಿ ಶುದ್ಧ ಯೋಗ್ಯಾಸನಮಂ
ನೋಡಿ ಹವಣಿಸಿದ ಉಂಬವ
ನೀಡಿತನುದ್ದಿಷ್ಟ ವಿರತನೆನಿಪಂ ಪೂತಂ ||

ಪಂನೊಂದನೆಯ ಶ್ರಾವಕ
ನುಂನತನುತ್ಕೃಷ್ಟವೀ ತೆಱಂ ಮೊದಲಾತಂ
ಸಂನುತ ವಸ್ತ್ರೇಕಧರಂ
ಮಾನ್ಯಂ ಕೌಪೀನ ಧಾರಿಯೆರಡನೆಯಾತಂ ||

ಯೆರಡನೆಯಾತಂ ನಿಯಮದಿ
ನಿರುಳೊಳ್ಪ್ರತಿಮಾ ನಿಯೋಗದಿನಿರ್ಪ್ಪಂ ಲೋಭಂ
ಧರಿಯಿಸಿ ಪಿಂಚಿಯುಮುಂ ತಾಂ
ಪರಿಕಿಸೆ ಕುಳ್ಳಿರ್ದ್ದು ಭುಂಚಿಪಂ ಕರಪುಟದೊಳೂ ||

ವೀರಚರ್ಯ್ಯಾನಿದಾನಂ
ಸೂರ್ಯ್ಯಾಪ್ರತಿಮಾದಿ ತ್ರಿಕಾಲಯೋಗ ಸುನಿಯಮಂ
ಆರಯ್ಯಿದಾಂತಾದ್ಯದ್ವಿ
ಕಾರಂ ತಾನಿಲ್ಲ ದೇಶವಿರತರ್ಗ್ಗೆಂದುಂ ||

ಅಱುವರ್ಜ್ಜಘನ್ಯರಾದ
ರ್ಪ್ಪೆಱತೇಂ ಮಧ್ಯಮರು ಮೂವರಲ್ಲಿಂದತ್ತ
ಲ್ನೆಱೆದ ಗುಣರಿರ್ವ್ವರುತ್ತ
ಮರಱೆಕೆಯ ಪನ್ನೊಂದು ನೆಲೆಗಳ್ಜಿನ ಮತದೊಳೂ ||

|| ವೃ || ನಿರುತಂ ಶ್ರಾವಕ ಸದ್ವ್ರತಂಗಳೊಳು ಸುಶುದ್ಧಂ ದಲಾಗಂತ್ಯದೊ
ಳ್ಪರಮಾರಾಧನೆಯಂ ಮನೋಮುದದಿನಾವಂ ಮಾಳ್ಕುಮಾ ಭೂನುತಂ
ಕರಮೊಪ್ಪಂಬಡೆದಭ್ಯುತಾಹ್ವಯ ಮಹಾಲೇಶನಕ್ಕುಮಾ ಪರಂ
ಪರೆಯಿಂದಂತ ವಿಹೀನ ಮುಕ್ತಿ ಸುಖಮಂ ತಾನೆಯ್ದುವಂ ನಿಶ್ಚಯಂ ||

|| ಕ || ಧರ್ಮ್ಮಮೆ ಸಹಾಯವರ್ಗ್ಗಂ
ಧರ್ಮ್ಮಮೆ ಸಂಸಾರ ಸಾರ ಸುಖ ತರು ಬೀಜಂ
ಧರ್ಮ್ಮಮೆ ಚಿಂತಾರತ್ನಂ
ಧರ್ಮ್ಮಮೆ ಸರ್ವಾರ್ತ್ಥ ಸಾಧಕಂ ಧರಣೀಶಾ ||

ಮಾಳಿನಿ || ನಿರುಪಮ ಕುಲಜಲ್ಮಂ ದೀರ್ಗ್ಘಮಾಯುಂ ಸುರೂಪ
ಸುರ ನಿಕರ ಪತಿತ್ವಂ ಚಕ್ರರತ್ನಾಧಿಪತ್ವಂ
ಸುರಚಿರ ಧೀಷಣತ್ವಂ ಕೀರ್ತ್ತಿ ಕಾಂತಾಪತಿತ್ವಂ
ನಿರವಧಿ ಸುಖ ಭೌಕ್ತ್ವಂ ಧರ್ಮ್ಮದಿಂ ತಪ್ಪದಕ್ಕುಂ ||

|| ವ || ಇಂತುಭಯಭವ ಹಿತಕಾರಿಯಪ್ಪುಭಯ ಧರ್ಮ್ಮ ಸ್ವರೂಪಣಾನಂತರಮುಭಯ ತಪಃ ಶ್ರೀ ರಮಣರಪ್ಪರಿಂಜಯ ಮಹಾಮುನೀಶ್ವರರಿಂತೆಂದರೂ

|| ಕ || ಪೋದ ಭವದೊಳ್ನರೇಶ್ವರ
ಮೇದಿನಿಯಳ್ಪ್ರಥಿತಮಪ್ಪಯೋಧ್ಯೆಯೊಳಿದಱೊಳು
ಶ್ರೀ ಧನ ನಿಧಿಗಂ ಸೈಪಿಂ
ದಾದಂ ವೈಶ್ಯಂ ಕುಬೇರಮಿತ್ರಂ ಪೆಸರಿಂ ||

ಆತಂಗೆ ಸುನಂದಾಹ್ವಯೆ
ಪೂತೆ ಸ್ತ್ರೀಯಾದಳಾಕೆ ಶೀಲೋಂನತಿಯಿಂ
ಸೀತೆಗೆ ಮತ್ತೆ ಸುರೂಪಿಂ
ಮಾತೇಂ ಮನಸಿಜನ ವನಿತೆಗಂ ದೊರೆಯಪ್ಪಳೂ ||

ಆ ವೈಶ್ರಗಮಾ ಮಧುಗಂ
ಭೂವಿನುತರ್ಮ್ಮಾರ ರೂಪರಾದರನಿಂದ್ಯರು
ಶ್ರೀವರ್ಮ್ಮಂ ಜಯವರ್ಮ್ಮಂ
ಭಾವಿಸೆ ಜಯಕೀರ್ತ್ತಿಯೆಂಬ ಮೂವರ್ತ್ತನಯರೂ ||

ಅವರೊಳು ಶ್ರೀ ವರ್ಮ್ಮಾಖ್ಯಂ
ಭುವನ ನುತ ಶ್ರೀಧರಾಖ್ಯ ಮುನಿ ಸಂನಿಧಿಯೊ
ಳ್ಭವ ಭಯ ಹರಮಂ ಧರ್ಮ್ಮಮಂ
ನವಿತಥಮಂ ಕೇಳ್ದು ತಾಳ್ದಿ ಮುದಮಂ ಬಳಿಕಂ ||

ನಂದೀಶ್ವರದೊಳು ನೋಂಪಿಯ
ನಂದಾ ಮುನಿವರನನುಜ್ಞೆಯಿಂ ಕೈಕೊಂಡಾ
ನಂದದಿ ನೋಂತುಜ್ಜೈಸಿಯ
ನಿಂದಿತನಾತ್ಮಾ ಯುತರಂತ್ಯದೊಳ್ವಿಧಿಯಿಂದಂ ||

ಉಳಿದಂಗಮನಾ ನೋಂಪಿಯ
ಫಲದಿಂದಂ ಮತ್ತಮೀ ಪುರಿ ವರದೊಳೂ ಭೂ
ತಳನಾಥ ವಜ್ರಬಾಹುಗ
ಮಳ ಕುಂತಳೆಯಪ್ಪ ವಿಮಳಮತ್ಯಾಹ್ವಯೆಗಂ ||

ಹರಿಷೇಣನೆಂಬ ತನೆಯಂ
ವರಗುಣಿ ನಿನಾದೆ ಧರ್ಮ್ಮ ಫಲದಿಂದೀಗಳೂ
ಸುರರಾಜ ವಿಭವ ಸದ್ರುಶಮ
ನಿರದೀ ಮಹಾರಾಜ ಪದವಿಯಂ ಸಲೆ ಪಡೆದೈ ||

|| ವೃ || ಆ ಜಯವರ್ಮ್ಮನುಂ ತದನುಜಂ ಜಯಕೀರ್ತ್ತಿಯಮೆಂಬರಿರ್ವ್ವರುಂ
ಭೂಜನವಂದ್ಯ ಧರ್ಮ್ಮಧರನಾಮ ಮಹಾ ಮುನಿರಾಜಪಾದ ನೀ
ರೇಜ ಸಮೀಪದೊಳ್ಮುದದಿಂ ತಾಳ್ದಿಯಣು ವ್ರತಮಂ ನಿರಂತರಂ
ರಾಜಿಸಿ ಮಾಡುತಂ ಭುವನದೊಳ್ಸಲೆ ಜೈನ ಮತ ಪ್ರಭಾವಮಂ ||

|| ವ || ಮಹಾ ಪ್ರಸಿದ್ಧವಡೆದನಂತರಂ ನಂದೀಶ್ವರದ ನೋಂಪಿಯಂ ಕೈಕೊಂಡು ನೋಂತುದ್ಯಾಪನೆಯಂ ಮಾಡಿ ನಿಜಾನುರವಸಾನದೊಳು ಶುಭ ಭಾವನೆಯಿಂ ಶರೀರ ಭಾರಮಂ ಬಿಟ್ಟೀ ಧರಿತ್ರಿಯೊಳತ್ಯಂತ ಶೋಭಾಸ್ಪದಮಾದ ಹಸ್ತನಾಖ್ಯ ಪುರಿವರದೊಳಾದವಾತ್ಮಜ ಸಮಾನ ರೂಪನುಮರ್ಹ ದಾರಾಧನಾಸಕ್ತಚಿತ್ತನುಮಪ್ಪ ವಿಮಲವಾಹನನೆಂಬ ವಣಿಗ್ವರೇಣ್ಯಂಗಮಾತನ ಮನೋವಲ್ಲಭೆಯಪ್ಪ ವ್ರತ ಶೀಲಗುಣ ಮಣಿ ಗಣಾಭರಣ ಧಾರಿಣಿ ಶ್ರೀಧರೆಗಮರಿಂಜಯಾಮಿತಂ ಜಯಾಭಿದಾನ ಪುತ್ರರ್ನ್ಮಾವಾದೆವನಂತರಂ ನಾವಿರ್ವ್ವರುಂ

|| ಕ || ಕತಿಯಪ ವತ್ಸರದಿಂ ಮೇ
ಲತಿಶಯ ವೈರಾಗ್ಯಭಾವದಿಂ ಯಮಧರ ಸಂ
ಯುತ ಪಾದ ಮೂಲದೊಳ್ಸಂ
ನುತಮಂ ಸಲೆ ಜೈನ ದೀಕ್ಷೆಯಂ ಕೈಕೊಂಡೆವೂ ||

|| ವ || ಅಂತೂ ದುರ್ದ್ಧರ ತಪೋನುಷ್ಠಾನನಿಷ್ಟತರಾಗಿ ನಂದೀಶ್ವರದ ನೋಂಪಿಯಂ ನೋಂತಾ ನೋಂಪಿಯ ಫಲದಿಂ ಚಾರಣ ವೃದ್ಧಿಯಂ ಪಡದೆವದು ಕಾರಣದಿಂಪೂರ್ವ್ವಭವ ಸ್ನೇಹಾನುಬಂಧದಿಂ ಭವತ್ಸಂದರ್ಶನಾರ್ತ್ಧನಮಾಗಿ ಯಾ ನಂದೀಶ್ವರದ ವ್ರತ ಮಹಾತ್ಮ ನಿವೇದನಾರ್ತ್ಧಮಾಗಿಯುಂ ಮಿಲ್ಲಿಗೆ ಬಂದೆವೆಂದು ಪೇಳಲಾ ಹರಿಷೇಣ ಮಹಾರಾಜಂ ಪರಮಾನಂದ ಮಾನಸನಾಗಿ | ಯಾ ನಂದೀಶ್ವರ ದ್ವೀಪ ಚೈತ್ಯಾಲಯ…. (ತ್ರುಟಿತ) ಮನಾನೋಂಪಿಯ ಸ್ವರೂಪಮುಮಂ ಸವಿಸ್ತರಂ ಬೆಸಸಿಮೆಂಬುದುಂ

|| ಕ || ದುರಿತ ಕರಿನಿಕರ ನಿರಸನ
ಹರಿವರ್ಯ್ಯರ್ಭ್ಭವ್ಯ ಹೃದಯ ಸರಸಿಜ ಸೂರ್ಯ್ಯ
ರ್ಪ್ಪರಮಾಗಮಾಬ್ಧಿ ಪಾರಗರ
ರಿಂಜಯರ್ಮ್ಮಾರ ವಿಜಯರಂದಿಂತೆಂದರೂ ||

|| ವ || ಜಂಬೂ ವೃಕ್ಷೋಪಲಕ್ಷಿತ ಜಂಬೂ ದ್ವೀಪ ಲವಣೋದಧಿ ಧಾತಕೀ ಷಂಡದ್ವೀಪ ಕಾಳೋದಕಾಂಬೋನಿಧಿ ಪುಷ್ಕರವರ ದ್ವೀಪ ಪುಷ್ಕರವರ ತರಂಗಿಣಿನದ ವಾರಣಿ ವರದ್ವೀಪ ವಾರುಣಿ ವರವಾರಾಕರ | ಕ್ಷೀರವರ ದ್ವೀಪ | ಕ್ಷೀರವರ ನಿರಾಕರ | ಘೃತವರ ದ್ವೀಪ | ಘೃತವರ ರತ್ನಾಕರ ಕ್ಷುದ್ರ ವರ ದ್ವೀಪ | ಕ್ಷುದ್ರ ವರ ಸಮುದ್ರಂಗಳೆಂಬ ಸಪ್ತ ದ್ವೀಪ ಸಪ್ತ ಸಮುದ್ರಂಗಳಂ ಪರಿವೇಷ್ಟಿಸಿ

|| ಕ || ನಂದೀಶ್ವರ ದ್ವೀಪಂ
ನಂದೀಶ್ವರ ವಾರ್ದ್ಧಿವೇಷ್ಟಿತಂ ರಂಜಿಸುಗುಂ
ಕುಂದದೆ ಸುರಗಣ ಕಿಂನರ
ವೃಂದದ ಲೀಲಾ ವಿಹಾರದಿಂದನವರತಂ ||

|| ವ || ಅಂತು ರಂಜಿಸುವ ನಂದೀಶ್ವರ ದ್ವೀಪದ ವಲಯ ವಿಸ್ತಾರಂ | ಚತುರ ಶಿತಿಲಕ್ಷಯುತ ತ್ರಿಷಸ್ಟ್ಯಧಿಕ ಶತಕೋಟಿ ೧,೬೩,೮೪,೦೦೦,೦೦ ಯೋಜನ ಪ್ರಮಾಣಮಕ್ಕು ಮಾದ್ವೀಪದ ದಿ‌ಕ್ಕು ಚತುಷ್ಟಯ ಮಧ್ಯ ಪ್ರದೇಶಂಗಳೊಳು ವಜ್ರಮಯ ಸಹಸ್ತ ೧,೦೦೦ ಯೋಜನಾವಗಾಢಂಗಳುಂ | ಚತುರಸಿತಿ ಸಹಸ್ರ ೮೪,೦೦೦ ಯೋಜನೋಂನತಿ ವ್ಯಾಸಂಗಳುಂ ಸಮವೃತ್ತಂಗಳುಮಷ್ಟಾ

|| ಕ || ಮಂಜುಲ ತರಂಗಳಮರಿ
ಮಂಜಿರಕನಾದ ಹೂರಿತಾಗ್ರ ಸ್ತ್ವಲಿಗಳು
ರಂಜಿಪುವೆಕ್ಸೆಕಾದ್ರಿಗ
ಳಂಜನಾ ನಾಮಂಗಳಿಂದ್ರ ನೀಲಮಂಗಳೂ ||

|| ವ || ಮತ್ತಂ ಸಹಸ್ರ ೧,೦೦೦ ಯೋಜನಾವಗಾಢಂಗಳೇಕ ಲಕ್ಷ ೧,೦೦೦,೦೦ ಯೋಜನ ಪ್ರಮಾಣ ಸಮ ಚತುರಸ್ರಂಗಳುಂ | ಟಂಕೋತ್ಕೀರ್ಣ್ನಂಗಳಂತೆ ತಳಮಧ್ಯಮುಖ ಸಮಾನಂಗಳುಂ | ರತ್ನಮಯ ತಟಾಕಂಗಳುಂ | ವೇದಿ ಕೋಹುತಂಗಳುಮಪ್ಪ ನಂದೆಯುಂ | ನಂದಾವತಿಯುಂ | ನಂದೋತ್ತರೆಮುಂ | ನಂದಿಷೇಣೆಯುಮೆಂಬ ನಾಲ್ಕು ವಾಪಿಗಳ್ಪೂವ್ವಾಂಜನ ಪರ್ವ್ವತದ ಪೂರ್ವ್ವ ದಿಕ್ಕುಗಳೊಳ್ಪ್ರದಕ್ಷಿಣ ಕ್ರಮದಿಂದಪ್ಪುಉ ಮತ್ತಮಮರಜೆಯುಂ | ವಿರಜೆಯುಂ | ಗತ ಶೋಕೆಯುಂ ವಿತಶೋಕೆಯಮೆಂಬ ನಾಲ್ಕು ವಾಪಿಗಳ್ದಕ್ಷಿಣಾಂಜನ ಪರ್ವ್ವತದ ಪೂರ್ವ್ವಾದಿ ದಿಕ್ಕುಗಳೊಳಿಪ್ಪಉ ಮತ್ತಂ | ಜಯೆಯುಂ ವೈಜಯಂತಿಯುಂ ಜಯಂತಿಯುಮಪರಾಜಿ ತೆಯುಮೆಂಬ ನಾಲ್ಕು ವಾಪಿಗಳ್ಪಶ್ಚಿಮಾಂಜನ ಪರ್ವ್ವತದ ಪೂವ್ವಾದಿ ದಿಕ್ಕುಗಳೊಳಿಪ್ಪಉ ಮತ್ತಂ | ರಮ್ಯೆಯುಂ | ರಮಣಿಯೆಯುಂ | ಸುಪ್ರಭೆಯುಂ ಸರ್ವ್ವತೋಭದ್ರೆಯುಮೆಂಬ ನಾಲ್ಕು ವಾಪಿಗಳುತ್ತರಾಂಜನ ಪರ್ವ್ವತದ ಪೂವ್ವಾದಿ ದಿಕ್ಕುಗಳೊಳತ್ಯಂತ ಶೋಭಾಸ್ತದಂಗಳಾಗಿರ್ಪ್ಪಉ ಮತ್ತಮವೆಂತಪ್ಪವೆಂದೊಡೆ

|| ಕ || ಕಮಲ ಕಲ್ಹಾರ ಕುವಲಯ
ಕುಮುದೋತ್ಪಲ ನಿಕರರಾಜಿತಂಗಳ್ಮತ್ತಂ
ವಿಮಲ ಪಯೋಭರಿತಂಗ
ಳ್ಕಮಲಕುಳಿರಾದಿ ಜಲಚರೋನ್ಮುಕ್ತಂಗಳೂ ||

ಮತ್ತಂ

|| ಕ || ಆಪೊತ್ತುಂ ರಂಜಿಸುವುವು
ವಾಪಿಗಳ್ಯಿಂದ್ರಾದಿ ದೇಶಗಳೊಳ್ಕಾಂತಂ
ಗಳ್ವಾಪೆಸಮ ೧,೦೦೦,೦೦ ದ್ವೆರ್ಗ್ಘ್ಯಂಗ
ಳ್ವಾಪ್ಯರ್ತ್ಥ ೫೦,೦೦೦ ವ್ಯಾಸಗಳ್ಪ್ರದಕ್ಷಿಣದಿಂದಂ ||

ಪುದಿದೆಸೆವಶೊಕಸಪ್ತ
ಚ್ಚದ ಚಂಪಕ ಚೂತಮೆಂಬ ನಾಲ್ಕು ವನಂಗ
ಳ್ಮುದಮಂ ಮಾಳ್ಪುವು ನೋಳ್ಪರ
ಹೃದಯಕ್ಕಂ ದೃಷ್ಟಿಬಳನಾರರಮಾದಂ ||

|| ವ || ಅಂತತೀವ ರಂಮ್ಯಂಗಳಪ್ಪ ಚತುಃಷಷ್ಟಿ ೬೧ ವನಂಗಳ ಮಧ್ಯಂ ಪ್ರದೇಶಂಗಳೊಳು | ದ್ವಿತೆಯಾಧಿಕ ಷಷ್ಠಿ ೬೨ ಯೋಜನೋತ್ಸೇದಂಗಳುಮೇಕತ್ರಿಂಶ ೩೧ ದ್ಯೋಜನ ವ್ಯಾಸಾಯ ಮಂಗಳಪ್ಪ ಏಕೈಕ ಪ್ರಾಸಾದಂಗಳಿಪ್ಪಉ ಮವೆಂತಪ್ಪದುದೆಂದೊಡೆ

|| ಕ || ವರ ಮಣಿಕನಕ ಮಯಂಗ
ಳ್ಮರುದಾಂದೋಳಿತ ವಿಚಿತ್ರ ಕೇತನತತಿಗಳು
ಸುರಚಿರವೇದಿ ವ್ರತಗ
ಳ್ನಿರುಪಮ ತೋರಣ ಚತುಷ್ಕರ ಮಣಿಮಯಂಗಳು ||

|| ವ || ಅಂತು ನೇತ್ರಾನಂದ ಮನೋಹಾರಿಗಳಪ್ಪ ಪ್ರಸಾಂದಂಗಳೊಳೂ ಅವಣುತರ ವಿಭವ ಸಹಿತಕ್ಕಾರನದುತ್ತಮ ರತ್ನಭೂಷಣೋಜ್ವಲ ದೇಹರ್ಗ್ಭನ ಪರಿವಾರ ಸಮೇತರ್ವ್ವನ ಷಂಡಾಭಿಕ್ಯಾವಾನರಿರ್ಪ್ಪರ್ಸ್ಸತತಂ || ವ || ಮತ್ತಮಾ ವಾಪಿಗಳ ಮಭ್ಯ ಪ್ರದೇಶಂಗಳೊಳ್ವಜ್ರಮಯ ಸಹಸ್ರ ೧,೦೦೦ ಯೋಜನಾವಗಾಢಂಗಳುಂ ದಶಸಹಸ್ರ ೧೦,೦೦೦ ಯೋಜನೋಂನತಿ ವ್ಯಾಸಂಗಳುಂ ಸಮವೃತ್ತಗಳುಮಪ್ಪಾದರಿವರ್ನ್ನಂಗಳ್ಸ ಕಲವಿಭುದ ನೀಲಾವಿರಾಹ ಣೋಚಿತಾಗ್ರಸ್ತಲಿಗಳ್ದಧಿ ಮುಖ ನಾಮಂಗಳ್ನದ ನವಿರ ಹಿತಂಗದೊಂದೊಂದು ನಿಶಂ || ವ || ಮತ್ತಮಾ ವಾಪಿಗಳ ಬಾಹ್ಯಾದ್ವಿ ಕೋಣಂಗಳ್ವಜ್ರಮಯ ಪಂಚಾದಶಕದ್ವಿಶತ ೨೫೦ ಯೋಜನಾವ ಗಾಢಮಗಳುಂ ಸಹಸ್ರ ೧,೦೦೦ ಯೋಜನೋತ್ಸೇದ ವ್ಯಾಸಂಗಳುಂ | ಸಮ ವೃತ್ತಂಗಳುಂ | ಸುವರ್ನ್ನವರ್ನ್ನಂಗಳುಮಪ್ಪ