ಶ್ರೀ ಮನ್ನಿರ್ಜ್ಜಿತ ಘತಿ ಕರ್ಮ್ಮರ್ಜ್ಜಿನಪರ್ನ್ನಷ್ಟ ಕರ್ಮ್ಮಾರಿಗಳಾ
ಸಾಮಾಹಿತ ಸುಖರ್ಗ್ಗುಣಾಷ್ಟಯುತ ಸಿದ್ಧರ್ಸ್ಸೂರಿಗಳ್ಪಂಚ ಸಂ
ಖ್ಯಾಮೆಯ ಚಾರಣರ್ನ್ನಿಜಾನ್ಯಮತ ಶಸ್ತ್ರೋದ್ಭಾದಕರ್ದ್ದೇಶಕ
ರ್ಭ್ಭೂಮಿ ಸ್ತುತ್ಯರ್ಗ್ಗುಣರ್ನ್ನಿಜಾಭ್ಯುದಯಮಂಮಾಳ್ಕೆಂ ಮೊಳಂ ಸಾಧುಗಳ್
‌ ||

|| ಕ || ಪರಮ ಜಿನೇಶ್ವರ ವದನಾಂ
ಬುರುಹಾದ್ಭವೇ ಜಲ್ಮ ಘೋರ ವಾರಾಸಿಗಮು
ತ್ತ ರಣೋರು ನಾವೆ ಭಾರತೀ
ಕರುಣದಿನೆಮಗೀಗೆ ಸದ್ವಚಃ ಪ್ರೌಢತೆಯಂ ||

ನಿರುಪಮ ತಪಃ ಪ್ರಭಾವ
ರ್ಪ್ಪರಮಾಗಮವಾರ್ದ್ಧಿ ಪಾರಗರ್ಜ್ಜನ ವಿನುತ
ರ್ವ್ವರ ವೃಷಭಸೇನರ್ಮ್ಮುಖ್ಯ
ರ್ಕ್ಕರುಣದಿನೆಮಗೀಗೆ ಗಣಧರರ್ನ್ನಿಜ ಪದಮಂ ||

ಶ್ರೀಮತ್ಸಮಂತಭದ್ರ
ಸ್ವಾಮಿ ಪ್ರಮುಖಾಭಿವಂದ್ಯ ಮುನಿವರರ ಗುಣೋ
ದ್ಧಾಮಾದ್ಯತನ ಮುನೀಶ
ಸ್ತೋಮದ ಚರಣಾಬ್ಧವಿರ್ಕ್ಕೆ ಮನ್ಮಾನಸದೊಳೊ ||

ವೃ || ಜಿನವರ ಸತ್ಪುರಾಣ ತತಿಯಂ ಪರಮಾಗಮಮಂ ರಥಾಂಗ ಭೃ
ನ್ಮ ನಸಿಜ ಶೌರಿ ಪಾಂಡು ತನಯಾದಿ ಕಥಾನ್ವಿತಮಂ ಸುಕಾವ್ಯಮಂ
ಮುನಿಸದುಪಾಸಕಾ ಚರಣಮಂ ಸಲೆ ಪೇಳ್ದ ಕವೀಶ ಭಾಸ್ಕರರ್ಜ್ಜನ
ವಿನುತರ್ಮ್ಮಡಿಯ ಮತಿ ಪದ್ಮಿನಿಗೀಗೊಲವಿಂ ವಿಕಾಸಮಂ ||

ಕವಿತಾಹಂಕೃತಿಯಿಂದಮಲ್ತಧಿಕವೆಂದಾದಾಢ್ಯದಿಂದಲ್ತು ತ
ದ್ಭವ ವಿಖ್ಯಾತಿ ಸಲಾಭ ಪೂಜೆಗಳನೆಂತುಂ ಪಾರ್ದ್ಧುಮಲ್ತಾಂ ಮಹಾ
ಭವ ದುಃಖಕ್ಷಯ ಕಾರಿಯುಂ ವಿರಚಿಪೆಂ ನಂದೀಶ್ವರಾಭೀಕ್ಯ ಭೂ
ಭುವನ ಸ್ತುತ್ಯ ಮಹಾವ್ರತ ಪ್ರಕಥೆಯಂ ಮೋಕ್ಷರ್ತ್ಥಮಾನಂದದಿಂ ||

ಅದೆಂತೆಂದೊಡೆ ಜಿನಬೋಧಸಾರ ನಿರಾಶಯದದೊಳೆಸೆಗಮಭ್ರಂವ್ಯತಿತಾಂ ತಮಂಭೋಜನಿಭಂ | ತತ್ಕರ್ನ್ನಿಕಾಕಾರದಿನನವರತಂ ರಂಜಿಕುಂ ಮೂಱು ಲೋಕ ಘನ ಷಡ್ದ್ರವ್ಯರು ಬಿಜಂತ್ರಿಮರುದುರು ಪರಾಗಾನ್ವಿತಂ ಬೂರಿಶೋಭಾತ್ಯಾಶ್ವರ್ಯ್ಯಭೂತಂ ನಿಜ ಪರಿಣತಿ ಸತ್ಸೌರಭಂ ನಿತ್ಯರೂಪಂ ||

ಆದಱೊಳ್ಮಧ್ಯಮಮಾಗಿಯುಂ ಬಹುವಿಧ ದ್ವೀಪಾಳಿ ನೀರಾಕರ
ಹೃದಶೈಲೋತ್ಕರ ನಿಮ್ನಗಾ ನಿಕರದಿಂದತ್ಯುತ್ತಮಂ ನೋಳ್ಪಡಾ
ದುದು ಲೋಕ ತ್ರಿತಯೇಂದಿರಾ ಸತಿಯಮಧ್ಯಂ ತಾನಿದೆಂಬಬಂದದಿಂ
ಪದಪಿಂ ಶೋಭೆಯನಾಂತು ರಂಜಿಪುದು ತಿರ್ಯ್ಯಲ್ಲೋಕಮತ್ಯಾರ್ಜ್ಜಿತಂ ||

|| ವ || ಅಂತತಿ ಮನೋಹರಮುಮಾಶ್ಚರ್ಯ್ಯಸ್ಪದಮುಮಾದ ತಿರ್ಯಲ್ಲೋಕದ ಮಧ್ಯದೊಳೊ

|| ವೃ || ಮನಸಿಜನಂತೆ ನೋಡೆ ಮಕಾರಾಕರಮುಪೇಂದ್ರ ಕರದ್ವಯಂಬೊಲಾಂ
ತನುಪಮ ಶಂಕ ಚಕ್ರಮಮರಾಧಿಪನಂತೆಸವ ವಜ್ರಮುತ್ತಮಾಂ
ಗನೆಯರ ವಕ್ಷದಂತುರು ಪಯೋಧರಮುತ್ತಮ ನಾಕ ಲೋಕದಂ
ತನುಪಮಮೀಷ ಸಂಕುಳಂ ಲವಣಸಾಹಾರಮೊಳ್ಪಿನಾಗರಂ ||

|| ಕ || ಆ ಲವಣಾಂಬುಧಿ ಪರಿಖೆಯ
ಲೀಲೆಯನಾಂತೆಸೆಯೆ ವಜ್ರಮಯ ವೇದಿಕೆಯಂ
ಸಾಲದ ವೋಲಿರೆಯುಮೆಸೆಗುಂ
ಮೇಲೆನಿಸುವ ನಗರದಂತೆ ಜಂಬೂದ್ವೀಪಂ || ವ ||

ಅಂತತ್ಯಂತ ಪ್ರತಿತಮುಮನೂನ ಶೋಭಾನಿಕೇತನಮುಮಾದ ಜಂಬೂದ್ವೀಪದ ನಟ್ಟ ನಡುವೆ

|| ಕ || ಯೋಜನ ಲಕ್ಷೋತ್ಸೇಧಂ
ಭೂಜನನುತ ಜಿನನ ಮಜ್ಜನೋಚಿತ ಪೀಠಂ
ಶ್ರೀ ಜಿನವಾಸಾನ್ವಿತಮತಿ
ರಾಜಿಸುಗುಂ ಮೇರುಶೈಲಮಮರ ಸುಲೀಲಂ ||

|| ವ || ಚಿತ್ತೆಯ ಕೆಳಗಣ ದಿಗ್ಭಾಗದೊಳತ್ಯಂತ ಮನೋಹರಮಾಗಿ ಭರತ ಕ್ಷೇತ್ರಮೆಸಉತಿರ್ಕ್ಕುಂ

|| ಕ || ಅಂತೆಸೆವ ಭರತ ವಸುಧಾ
ಕಾಂತೆಯ ಲಸದಾನನಾಂಬುಜಾತ ನಿಕಾಶಂ
ಸಂತತಮತಿ ರಂಜಿಸುಗುಂ
ಕಾಂತಂ ವಿಷ್ಯಂಗಳ್ಸು ಕೌಶಲ ವಿಷಯಂ ||

ಆ ವಿಷಯದ ವನಗಿರಿಗ
ಳ್ದೇವಾಸುರ ಕಿಂನರ ಪ್ರಮೋದ ಕ್ರುತ ಕ್ರೀ
ಡಾ ವಿಷಯಂಗಳ್ನದಿಗ
ಳ್ಪಾವನವಿದು ಕಾಂತ ನಿಸೃತ ಜಲ ವಿಷಯಂಗಳೂ ||

|| ವ || ಮತ್ತವಾಗ್ರಹಮಾನೆಗಳೊಳಲ್ಲದೆ ವಿಗ್ರಹಂ ಪಂಜರದೊಳಲ್ಲದೆ | ಆಱಡಿ ಭ್ರಮರಂಗಳೊಳಲ್ಲದೆ ಬಂದನಂ ಕೇಶದೊಳಲ್ಲದೆ | ಬಡತನಮುತ್ತಮಾಂಗನೆಯರ ನಡುವಿನೊಳಲ್ಲದೆ | ತಿರಿಹಂ ತಲಾಱನೊಳಲ್ಲದೆ | ಚಿಂತೆ ಯೋಗಿಗಳೊಳಲ್ಲದೆ | ವಕ್ರತೆ ಪುರ್ವಿನೊಳಲ್ಲದೆ | ಅಸತೆ ವರಾಂಗನೆಯರ ಗಮನದೊಳಲ್ಲದೆ | ಕರವೀಡನಂ ಧೇನುಸ್ತನ ದೊಲಲ್ಲದಾ ವಿಷಯದೊಳೆಲ್ಲಿಯುವಿಲ್ಲದಲ್ಲದೆಯುಮಾ ವಿಷಯಂ ಸಲವತ್ಸರ ಪ್ರಕರದಂತೆ ಬಹುಧಾನ್ಯ ಪ್ರಭವ ವಿಭವಮುಂ ಭಾಸ್ವದ್ವಾಸವಾಸನದಂತೆ ಸುಧಾರ್ಮ್ಮಾದಿಷ್ಟಿತಮುಂ | ಕಾಂತಾ ಕಾಂತವಕ್ಷೋಜದಂತಗ್ರಹಾರಾಭಿರಾಮಮುಂ | ಗ್ರಹಸಮುದಾಯದಂತೆ ಭಾಸ್ವತ್ಸೋಮ ಬುಧ ಮಂಗಳ ಸಮೇತಮುಂ | ಅದಿತ್ಯ ಬಿಂಬದಂತೆ ಬಹಳ ಗೋಕದಂಬ ಸಂಶೋಭಿತಮುಂ | ಸತ್ಕವಿ ರಚಿತ ಕಾವ್ಯದಂತೆ ಸರಸ ಪದಾರ್ತ್ಥ ಸಾರ್ತ್ಥಾಲಂಕಾರಮುಮೆನಿ ಪುದಲ್ಲಿ

|| ವೃ || ಯೆತ್ತ ನೀರೀಕ್ಷಸಲ್ವಿಕಸಿತಾಬ್ಜಸರಂ ಬೆಳದಿಕ್ಷುವಾಟಮೆ
ತ್ತತ್ತಲು ನೋಳ್ಪಡಂ ಬೆಳೆದ ಶಾಲೀವನಂ ಫಲವಾದ ನಂದನಂ
ಸುತ್ತಲು ನೋಳ್ಪಡಂ ಶಲಿಲ ಶಾಲಿಕೆ ತಣ್ಪುಳಿಲಾಳವಾಳಮೆ
ತ್ತೆತ್ತಲುಂ ನೋಡೆ ಲೋಹಣ ಶಿಲೋಚ್ಚಯಮಿಲ್ಲದ ತಾಣಮಿಲ್ಲಣಂ ||

|| ವ || ಅಂತತ್ಯಂತ ವಿಶೃತಮುಮತೀನ ಶೋಭಾಸಮಾಶ್ರೀತಮುಮಾದ ಸುಕೌಶಲ ವಿಷಯದ ಮಧ್ಯದೊಳೊ

|| ವೃ || ನಿರುಪಮಮಪ್ಪ ತದ್ವಿಷಯ ನೂತನ ತಾಮರಸಕ್ಕೆ ಸುತ್ತಲುಂ
ಸುರುಚಿರ ಪತ್ರ ಸಂತತಿಯ ವೋಲ್ಪುರ ಸಂತತಿ ಶೋಭೆವೆತ್ತಿರ
ಲ್ಸಿರಿಗೆಡೆಯಾಗಿ ಕರ್ನ್ನಿಕೆಯ ವೋಲ್ಕರಮೊಪ್ಪುಗಯೋಧ್ಯೆಯೆಂಬ ಸ
ತ್ಪುರಮಮರಾಧಿನಾಥಪುರ ಸಂನಿಭಮುಂನತ ಹರ್ಮ್ಮ್ಯಸತ್ಪ್ರಭಂ ||

|| ಕ || ಹರಿದಂಗನೆಯರ್ನ್ನೋಡಿದೊ
ಡಿರದಕ್ಕುಂ ದೃಷ್ಟಿದೋಷಮಾ ಪುರಕೆಂದಂ
ಬುರುಹ ಭವನಚ್ಛ ಪಚ್ಚೆಯ
ತೆರೆಯಂ ಸುತ್ತಿದ ವೋಲೆಸಗುಮುಪವನವದಾ ||

ಅಂತತೀತ ಮನೋಹರಮಾದುಪವನದಿಂದಮೊಳಗೆ

|| ವೃ || ವಾರಿಜ ಸಂಭವಂ ಕನಕ ಶೈಲಮನೊಪ್ಪೆ ನಿಮಿರ್ಚ್ಛಿ ರಾಗದಿಂ
ಚಾರು ಸುಚೇಲಮಂ ಸಮೆದು ಬಂಣಮನಿಟ್ಟು ಮನೋಜ್ಞಮಾಗೆ ತಂ
ದಾ ರಮಣೀಯಮಪ್ಪ ಪುರಲಕ್ಷ್ಮಿಗೆ ತಾನುಡಿಸಲೈ ಸೌಂದರಾ
ಕಾರಮನಾಂತಮೊಲ್ಸೊಗಯಿಕುಂ ತಪನೀಯದ ಕೋಂಟೆ ಸುತ್ತಲುಂ ||

|| ಕ || ರತ್ನಂಗಳನೆಂನಂತಿರೆ
ನೂತ್ನಂಗಳನಾಂತುದೆಂಬ ಸಮಗುಣ ಮುದದಿಂ
ರತ್ನಾಕರಮಾ ಪುರಮಂ
ಯತ್ನದಿನಪ್ಪಿದ ವೋಲೊಪ್ಪುಗುಂ ಜಲಖಾತಂ ||

|| ವ || ಅಂತತೀತ ಶೋಭಾಸ್ಪದಮದ ತತ್ಪುರವರಾಭ್ಯಂತರದೊಳ್ಕೆಲವೆಡೆಯೊಳು ಪೊಂಬಲಗೆಯೊಳ್ಪುಂಜಿಸಿದ ವಿವಿಧ ಸುರಭಿ ಕುಸುಮಂಗಳುಂ | ನಿಜಾಸ್ಯ ಸೌರಂಭದಿಂ ಪರಿಮಳದಿಂ ದ್ವಿಗುಣಿಸಿ ಝಣಝಣಾಯಮಾನಪಾಹಿಹಾರ್ಯ್ಯವಾಚಾಲಕರ ಯುಗಲದಿಂ ಕುಸುಮ ಬಾಣಮಂ ಪೊದೆಗಟ್ಟುವಂತೆ ಮಾಲೆಗಟ್ಟುತಿರ್ದ್ದ ಮಾಲಾಕಾರ ಪುರಂಧ್ರಿಯರಿಂ ಕೆಲವೆಡೆಯೊಳ್ವಿಶಾಲ ಪೇಟಕ ಪ್ರಸಾರಿತ ಪ್ಫಸರದವಿರಲು ಸೌರಂಭ ಸಂಪಾದಿತ ಘ್ರಾಣ ಪಾರಣ ಯುಗಪದುಪಲಕ್ಕಮಾಣ ಸರ್ವ್ವರ್ತ್ತು ಫಲಂಗಳಿಂ | ಕೆಲವೆಡೆಯೊಳು ಗಂಧಲಬ್ಧ ಭುಜಂಗ ಸಂತತಿ ಸಂಗೃಹ್ಯಮಾಣ ಮಲಯಜಂಗಳಿಂ ಮಲಯಗಿರಿ ಪರಿಸರವನದಂತಿರ್ದ್ದ ಗಂಧಾಪಣಂಗಳೊಳ್ಚಂದ್ರಕಾಂತದ ಸರಿಣಿಗೆಗಳಿಂ ನಿಜ ಸುರಭಿ ನಿಸ್ವಾಸದಿಂ ದಳಂಗಳನದಿ ವಾಸಿಸುತ್ತಂ ಘಟ್ಟಿಮಗುಳ್ಚುವ ಘಟ್ಟಿವಳ್ತಿಯರಿಂ ಕೆಲವೆಡೆಯೊಳು ಕ್ಷೇತ್ರಜನ ವಾಂಚ್ಚಾವರ್ದ್ಧನಾರ್ತ್ಥ ಪ್ರಸಾರಿತ ವಿಜಿತ ಪಾರಿಜಾತ ದುಕೂಲಾನೂನ ಸ್ಪರ್ಶ ಸುಖ ಸಂಪಾದನಾ ದಕ್ಷ ಕ್ಷಾಮಂಗಳಿಂ ಕೆಲವೆಡಯೊಳ್ನಿಜಾರುಣ ಕಿರಣ ನಿಕರದಿಂ | ಮಧ್ಯಾಂನದೊಳಂ ಬಾಲತಪಮಂ ಪ್ರಕಟಂ ಮಾಳ್ಪ ಪದ್ಮರಾಗಮಾಣಿಕ್ಯಂಗಳಿಂದತ್ಯಂತ ಮನೋಹರಮುಮಾಶ್ಚರ್ಯ್ಯಕರಮುವದ ಪುಣ್ಯ ವೀಥಿಗಳಿಂ | ಮತ್ತಂ ಚತುರ ಭುಜಂಗ ಸಂಘ ಸಂತಾಟಿತ ಹಟದ್ಘಂಟಾ ಠಣತ್ಕಾರ ಮುಖರವೇಶ್ಯಾವಾಟಂಗಳಿಂ ಯಾಚಕ ಜನಂಗಳಂ ಕೈ ಸಂನೆಯಿಂ ಕರೆವಂತೆ ಪವನಾಂದೋಲಿತ ಪತಾಕಾ ನಿಕರದಿಂದೊಪ್ಪಂಬೆತ್ತಧ ನಿಕಾಗಾರಂಗಳಿಂ | ಭವ್ಯ ಜನ ಜಯ ಜಯಾರಾವ ಕೋಳಾಹಲ ಸಂಕಲಿತ ಶಂಖ ಕಹಳಾ ಭೇರಿ ವೃದಂಗ ತಾಳ ವೀಣಾ ವಾದ್ಯರವಂಗಳಿಂ ಶ್ರವಣ ರಮಣೀಯಂಗಳುಮಭ್ರಂ ಕಷಾದಭ್ರಶುಭ್ರಕೂಟ ಕೋಟಿಗಳಿಂ | ನೇತ್ರಾನಂದಕಾರಿಗಳುಮಪ್ಪನೇಕ ಜಿನಮಂದಿರಂಗಳಿಂದ ಮುಂ ಮಹಾ ಶೋಭೆವೆತ್ತ ತತ್ಪುರವರ ಮಧ್ಯ ಪ್ರದೇಶದೊಳಭ್ರಂತಿಹಾದಭ್ರ ವಜ್ರಮಯ ಪ್ರಾಕಾರದಿಂ ಪರ ನೃಪಾಲಕ ಪ್ರಕರೋಪಾಯ ನಿಕ್ರುತಮದಕರಿ ಕಪೋಲತಲ ವಿಗಲಿತ ಮದಜಲ ಪ್ರವಾಹ ಕರ್ದ್ಧಮಿತ ಮಹಾದ್ವಾರ ಪ್ರದೇಶದಿಂ | ಯಾತಯಾತರಾಜನ್ಯಕ ಪರಸ್ಪರ ಸಮ್ಮರ್ದ್ಧನತ್ರುಟಿತ ಹಾರಯುಕ್ತಾ ಫಲದಂತುರಿತ ಸಭಾ ಜೀರದಿಂ ಶೈಲಾಧಿ ಪತಿ ಶರ್ತ್ಥಂ ಬಂದು ಬಳಸಿರ್ದ್ದ ಕುಲ ಪರ್ವ್ವತಂಗಳೆಂಬಂತಿರ್ದ್ದ ಹೇಮ ರಜತ ವೈಢೂರ್ಯ್ಯ ಮಯಾಂತಃ ಪುರ ಕಾಂತಾ ರಂಮ್ಯ ಹರ್ಮ್ಯಂಗಳಿಂದಮುಮತೀವ ರಮಣೀಯಮಾಗಿ ಸಪ್ತ ಭೂಮಿ ಕೋಪೆತ ತಪನೀಯಮಯ ರಾಜಭವನಮೊಪ್ಪುತಿರ್ಪ್ಪುದಲ್ಲಿ

|| ವೃ || ಹರಿಷೇಣಾಖ್ಯಂ ಧರಾಧೀಶ್ವರನಖಿಳ ಕಳಾ ವಲ್ಲಭಂ ಮಾರರೂಪಂ
ಸ್ತಿರಮಿರ್ಪಂ ವೈರಿ ಭೂಭೃತ್ಯವಿದರನುರು ಶೌರ್ಯ್ಯಾಂನ್ವಿತಂ ಭೂರಿತೇಜಂ
ಪುರ ಭೋಗ ತ್ಯಾಗ ಲಕ್ಷ್ಮೀಪತಿಯತುಳ ಬಳಂ ಕೀರ್ತ್ತಿ ಗಂಗಾ ಹಿಮಾಂಗಂ
ಗುರು ಸೇವಾಸಕ್ತ ಜಿತ್ತಂ ಪರಮಜಿನ ಮತಾಂಬೋಧಿ ಪೀಯೂಷಧಾಮಂ ||

|| ಕ || ಶ್ರೀ ಲಲನೆಗುರಂ ವಿಜಯ
ಶ್ರೀ ಲಲನೆಗೆ ಬಾಹು ಕರಮಾಸ್ಯಂ ವಾಣಿ
ಶ್ರೀ ಲಲನೆಗೆ ನೆಲೆಯಾಗಿರೆ
ಲೀಲೆಯ ನೆಗಳ್ವಂ ಬುಧಾಶಯಾಂಬುಜ ಮಿತ್ರಂ ||

|| ವ || ಅಂತಾ ಹರಿಷೇಣ ಮಹಾರಾಜಂ ದುಷ್ಟರಂ ನಿಗ್ರಹಿಸುತ್ತಂ | ಶಿಷ್ಟರಂ ಪ್ರತಿ ಪಾಲಿಸುತ್ತಂ | ವನಾಶ್ರಮಂಗಳಂ ನಿಯಮಿಸುತ್ತಂ | ಮಾನೋನ್ಮಾನಂಗಳಂ ಶೋಧಿಸುತ್ತಂ | ನಿಜರಾಜ್ಯಮಂ ನಿಷ್ಕಂಟಕಮುಂ | ನಿರಾತಂಕಮಂ ಮಾಗಿ ಮಾಡಿ ರೂಪತುಲಿತ ರತಿ ದೇವಿಯರುಂ | ಶೀಲತುಲಿತ ಶೀತಾದೇವಿಯರುಮಪ್ಪ ಗಾಂಧಾರೀ ಪ್ರಿಯಶ್ರೀ ಪ್ರಿಯ ಮಿತ್ರಾದಿ ಪಂಚಶತಾಂತಃಪುರ ಪುರಂಧ್ರಿಯರೊಳು ಧರ್ಮ್ಮಾರ್ತ್ಥಂಗಳಿಂಗೆ ವಿರುದ್ದ ಮಾಗದಂತೆ ಯಿಷ್ಟವಿಷಯ ಕಾಮ ಭೋಗಂಗಳನುಭವಿಸುತ್ತಮಿರ್ದ್ದೊಂದು ದಿವಸಂ ನಿಜಸಭಾಮಂಪಟಪದೊಳು ಸಮಸ್ತ ರಾಜನ್ಯಕಂ ಬೆರಸಿಂದ್ರ ಲೀಲೆಯಿಂ ದೋಲಂಗಂಗೊಟ್ಟಿರ್ಪ್ಪುದುಮಾ ಸಮಯದೊಳು ದೌವಾರಿಕಂ ಬಂದು ದೇವಾನ ಮಹತ್ತರ ಬಂದಿರ್ದ್ದಪನೆಂದ ಬಿಂನವಿಸೆ ಬರವೇಳೆಂಬುದುಮಾ ದೌವಾರಿಕಾ ಪರಃ ಸರಂ ವನಪಾಲಕಂ ಬಂದು ನವೀನಪಲ್ಲವ ಪ್ರಸವಫಲಂಗಳಂ ಕಾಣಿಕೆಗೊಟ್ಟು ಸಾಷ್ಟಾಂಗ ಪ್ರಣುತನಾಗಿ ಮುಕುಳಿತಾಂಜನಿ ಪುಟನಿಂತೆಂದಂ

|| ವೃ || ಬಿಡದುಱೆ ಪೂತ ಚೂತಮತಿತಾಪವಾರಣಮಾಗೆ ಚಾಮರಂ
ಕುಡಿವರಮೊಪ್ಪಿ ಪೂತ ನವಮಾಧವೀ ಭೃಂಗವಧೂ ಕಲಸ್ವನಂ
ಗಡಣಿಪ ಶಂಖ ತೂತ್ಕೃತಿ ಪಿಕಾರವಮಾನಕ ಭೂರನೀಶ್ವನಂ
ಪಡೆದುರತೂತ್ಕರ ಪ್ರಭುತೆಯಂ ವನದೊಳ್ಮಧುವಿರ್ದ್ದಪಂ ನೃಪಾ ||

ತರುವಿರುಗುಲ್ಮವೃಂದಂ ಪಲಂ ಕುಸುಮ ಲಸತ್ಫಲವಾನಿಕದಿಂ ತ
ಳ್ಳಿರೆ ಮಂಜುಧ್ವಾನಮಾದ್ಯತ್ಪಿಕ ಶುಕ ಮಧುಪಾನಿಕಮಲ್ಲಲ್ಲಿ ಚೆಲ್ವಿಂ
ದಿರೆ ಸದ್ಗಂಧಾನಿವತೋದ್ಯನ್ಮಲಯ ಪವನೆನತ್ತೆತ್ತಲಂ ಕೂಡೆ ತೀಡು
ತ್ತಿರೆ ಶೋಭಲ ಬನಂ ಬೆತ್ತುದು ವಿರಹಿ ಕೃತಾಂತಂ ದಲಂತಾ ವಸಂತಂ ||

|| ವ || ಯೆಂದು ಬಿಂನವಿಸದವನ ಮಹತ್ತರನ ವಚನದಿಂ ವಸಂತಾಗಮವನಱೆದಾ ಹರಿಷೇಣ ಮಹಾರಾಜಂ | ವನಜಂ ಕೇಳಿ ಸಮುತ್ಕಂಠಮಾನಸನಾಗಿಯಾತಂಗಂಗ ಚಿತ್ತಮನಿತ್ತು ಪಟ್ಟಮಹಾದೇವಿ ಸಹಿತಂ ಪಟ್ಟವರ್ದ್ಧನ ಗಜೇಂದ್ರಮನೇಱಿ

|| ಕ || ಮತ್ತಾ ಗಜಾಗ್ರದೊಳೆತ್ತಿದ
ಮುತ್ತಿನ ಪತ್ತಿಗೆಯ ತೆಣ್ನೆಳಲುಱೆ ಸುಖಮಂ
ಚಿತ್ತಜನೆ ಬನಕೆ ನಡೆವಂ
ತತ್ಯುತ್ಸವದಿಂದ ನಡೆದನಾ ನರನಾಥಂ ||

ವನಜಲಕೇಳಿಗೆ ತಕ್ಕಂ
ತನಿತೆಜನಂ ಬಪ್ಪುದೆಂದು ಪೇಳದೊಡಮಂತಾ
ಜನತತಿಯಗಣಿತಮಾದ
ತ್ತನನ್ಯ ಸಾಧಾರಣಂ ಮಹೀಶನ ವಿಭವಂ ||

|| ವ || ಎಂಬಿನವಳುಂಬಮಾಗೆ ಕರಿಣಿಗಳೋಳ್ಬರ್ಪ್ಪಂತಃಪುರ ಕಾಂತಾಜನಂಗಳ ಪೀಲಿದಳೆಗಳಿಂ ಪೊಂನ ಸಿವಿಗೆಗಳೊಪ್ಪರ್ಪ್ಪ ವಿಳಾಸಿನಿ ಜನಂಗಳ ನೀಲಿಯ ಸತ್ತಿಗೆಗಳಿಂ ವಾರುವಂಗಳೊಪ್ಪರ್ಪ್ಪಂ ಕುಮಾರ ವರ್ಗ್ಗದ ಶ್ವೇತಚ್ಛಂತ್ರಗಳಿಂ ವಿವಿಧ ವಾಹನಂಗಳೊಳ್ಬರ್ಪ್ಪ ಪುರಜನ ಪರಿಜನಂಗಳ ವಿವಿಧಾಧ ಪತ್ರಗಳಿಂ ದಿಕ್ಕುಗಳುಂ ಮುಸುಂಕಿಯುಂ ನಿಜ ನಿಜ ರತ್ನಭೂಷಣಾಂಶುಗಳಿಂ ಕತ್ತಲೆಯಂ ಮುಸುಳಿಸಿಯುಮಿಂತನೂನ ವಿಭವದಿಂ ವನೋಪ ಕಂಠಕ್ಕೆ ಬರ್ಪ್ಪಾಗಳೂ

|| ಕ || ಇನಿವಿರಿದು ಪೊತ್ತು ಪೋದುದು
ವನ ಕೇಳಿಗೆ ಬರ್ಪ್ಪುದೀಗಳೆಂದಾ ನೃಪನಂ
ವನಲಕ್ಷ್ಮೀ ಕರೆವ ತೆಱದಿಂ
ವನ ಶುಕ ಪಿಕ ಮಧುಪ ನಿನದಮೆಸೆದತ್ತಾದಂ ||

|| ವ || ಅಂತಾ ವನ ನಿವಹಂಗಳ ಮನೋಜ್ಷಮಪ್ಪ ಕಲ ಧ್ವನಿಯನಾಲಿಸುತ್ತಂ ಬಂದು ದೇವಾವನಯೆಂಬ ಮನೋಹರೋದ್ಯಾನದ ದ್ವಾರ ಪ್ರದೇಶದೊಳು ಗಜೇಂದ್ರ ಸ್ಕಂದನದಿಂದಿಳಿದು ವನಕೇಳಿಯೋಗ್ಯ ಕತಿಪಯ ಪರಿಜನ ಸಮೇತಮಂನವಾರನಾರಿಜನ ಪರೀತನುಮಂತಃಪುರ ಕಾಂತಾಪಾಂಗ ಪ್ರಭಾ ಕವಚಿತಾಂಗನಂ ವನ ಮಹತ್ತರ ಪುರಸ್ಸರನುಮಾಗಿ ವನಮಂ ಪೋಗುವಾಗಳೂ

|| ವೃ || ಯಿರದಿದಿರ್ವ್ವಂದು ಪುಷ್ಪತತಿಯಂ ಸಲೆ ಕಾಣಿಕೆಗೊಟ್ಟು ತದ್ವನಾಂ
ತರಿತಸರಸ್ತಿರವಾಃಕಣಮದಿತ್ತುಱೆ ಪಾದ್ಯಮನಾಂತ ಸೌರಭಂ
ಮೆರೆದನು ವರ್ತ್ತಿಪ ಭ್ರಮರೂವದೆಮಂನಿಸಿದತ್ತು ಭೂಪನಂ
ಸುರಭಿ ಸಮೀರಣಂ ಮುದದಿ ಬಿದ್ದಿನನಂ ನೆಱೆ ಮಂನಿಪಂದದಿಂ ||

|| ವ || ಅನ್ತು ಶೈತ್ಯ ಸೌರಭ್ಯ ಮಾಂದ್ಯಗಣೋಚಿತ ವಾಯುಸ್ಪರ್ಶ ಜನಿತಾನಂದ ಮಾದರಸನೊಳಪೊಕ್ಕು ವಿರಹೀಜನ ಹೃದಯದಾರುದಾರಣ ಪ್ರವಣಮನೋಜ ತಕ್ಷಕ ಕರಪತ್ರಂಗಳಂತಿರ್ದ್ದೆಲೆಯ ಪರ್ವುಗೆಯಿಂದ ಗರ್ವ್ವುವಡೆದ ಕೇತಕೀ ಪಂತಿಗಳಂ ಕಾಮುಕ ಜನ ಮೃಗಯಾ ಪರಿಶ್ರಾಂತಾನಂಗರಾಜ ಪಿಪಾಸ ಪಸರಣಾರ್ತ್ಥಂ ವನದೇವಿ ದೇವಿಯರ್ಪ್ಪೊಂಗಳಶಂಗಳೊಳ್ತಿಳಿನೀರಂ ತುಂಬಿ ಗಾಳಿಗೊಳಲೆಂದು ನೆಱೆದಂತಿರ್ದ್ದ ತೋರಗಾಯಿಗಳಿಂ ತೂಗುತಿರ್ದ್ದ ಚಂದೆಂಗಿನ ಗೊಂದಣಂಗಳಂ | ನಿಜ ಜನನಿಯಪ್ಪ ಪೃಧ್ವಿಯೊಳು ಮುದ್ದಿಂ ಮುಂಡಾಡುವಂತೆ ಕಾಯಿದುಗಲಿಂ ನೆಲನಂ ತೊನೆವುತಿರ್ದ್ದ ಮಾತುಳುಂಗ ಸಂಘಂಗಳಿಂ ನಾವಿರ್ದ್ದಂತೆ ಬೀಜಪೂರ ಸಾರ್ತ್ಥಭಿದಾನಮಂ ವ್ಯರ್ತ್ಥಮಾಗಿ ಮಾತುಳುಂಗಕ್ಕೆ ಮಾತಿದನೆಂದು ಬ್ರಹ್ಮನಂ ನಗುವಂತಿರ್ದ ಬಿರಿವಣ್ಗಳಿಂದೊಪ್ಪಂಬೆತ್ತದಾಡಿಮ ಪ್ರಕರಂಗಳಿಂ ಪಲ್ಲವ ಪ್ರಸರ ಫಲಪಕ್ವ ಫಲಾಸಕ್ತ ಶುಕಪಿಕ ಮಧುಕರ ನಿಕರದಿಂ ಮದನನೋಲಗ ಸಾಲೆಯಂತಿರ್ದ್ದ ಭೂತಳಂ | ತನ್ನಲೆಡೆಗೊಟ್ಟ ಆಕಾಶ ಲಕ್ಷ್ಮಿಗೆ ವನಲಕ್ಷ್ಮಿಯೆತ್ತಿಸಿದ ಪಿಂಚಚ್ಚತ್ರಗಳಂತೆ ನೇತ್ರಾನಂದಕರಂಗಳಂ ಮಾಡುವ ಪೂಗರುಂದಗಳೀ || ವಾರಾಂಗನ ಪಾದ ತಾತನದೊಳಾಳಕೆಯ್ದ ರಾಗರಸಂ ಪೊರಪೊಣ್ಮಿದಂತಿರ್ದ್ದ ಕೆಂದಳಿರ ಗೊಂದಳದಿಂ ಬೆಡಂಗುವೆತ್ತಶೋಕ ಭೂಜರಾಜಿಗಳಂ | ಮತ್ತಂ ಪಲ್ಲವಿತ ಕುಸುಮಿತ ಫಲಿತಾನೇಕನೋಕ ಹಾನಿಕಂಗಳಂ | ದರ ವಿಶದ ವಿರಳ ಸುರಭಿ ಕುಸುಮ ಮಧುಪಾನಾಸಕ್ತ ಬೃಂದಾಂಗನಾ ಗಾನ ಧ್ವಾನದಿಂದನಂಗರಾಜನ ಸಂಗೀತ ಸಾಲೆಯಂತಿರ್ದ್ದ ವಿಭ ವಿಭಕಿ ದುಂಡ ಮಲ್ಲಿಗೆಯ ಲತೆಯ ಯೂತಿಕಾಲತೆಯ ಮಾಧವಿ ಲತೆಯ ಜಾತಿಲತೆಯ ಸೇವಂತಿಗೆಯ ಲತೆಯ | ವಾಸಂತಿಗೆಯ ಲತೆಯ | ನವಮಕಸ್ತೂರಿ ಮಲ್ಲಿಕಾಲತೆಯ ಮಂಟಪಂಗಳಂ ಶಿಖರಾರೂಢ ಪಾರಾವತ ಶುಕಸಾರಿಕಾ ವಿವಿಧ ಕಲಸ್ವನದಿಂ ಮಕರ ಧ್ವಜನಧ್ಯಯನ ಶಾಲೆಯಂತಿರ್ದ್ದ ಕೃತಕ ಗಿರಿಗಳಂ | ಪರಮಾನಂದದಿಂ ನೋಡುತಂ ಬಂದು ಮುಂದೊಂದು ಮನೋಹರಮಪ್ಪೆಡೆಯೊಳು ರತಿಯ ಮಕರ ಧ್ವಜನ ವಿವಾಹದೊಳತೀವ ಕುಶಲ ಶಿಲ್ಪಿಗಳಿಂ ಸಮೇದ ವಿವಾಹ ಗೇಹದಂತತ್ಯಂತ ಮನೋಜ್ಞಮಾಗಿರ್ದ್ದ ವಸಂತ ಗೃಹಮಂ ಪೊಕ್ಕು ತನ್ಮಧ್ಯದೊಳ್ವಿರಚಿಸಿದ ಕುಸುಮದೆಸೆವ ಪಸೆಯೊಳ್ಪಟ್ಟ ಮಹಾದೇವಿಯರುಂ ಸಹಿತಂ ಕುಳ್ಳಿರ್ದ್ದು ||

ಮಲ್ಲಿಕಾ ಮಾಲೆ || ಲೋಲ ನೇತ್ರೆಯರಿಂದ ವಕ್ತ್ರೆಯರನ್ಯ ಪುಷ್ಟ ಸುನಾದೆಯ
ರ್ಲ್ಲೀಲೆಯಿಂದ ಸುವೀಣೆಯಿಂ ನರಮೊಂದಿ ತಾಳಲಯಂಗಳೊ
ಳ್ಮೇಳಮಾಗಿರೆ ಭಾಜಿಸುತ್ತ ವಸಂತ ರಾಗದಿ ಪಾಡೆ ಭೂ
ಪಾಲಕಾಗ್ರಣಿಯಾಲಿಸುತ್ತಮನೂನ ರಾಗದಿಂದಿರ್ಪ್ಪುದುಂ ||

|| ವ || ಅಂತಾ ರಾಜಕುಂಜರನಿಪ್ಪುದುಮಿತ್ತಲಾ ನಾರಿಯರ್ಕ್ಕುಸುಮಾಪಚಯ ದೋಹಳ ಮಾನಸೆಯರಾಗಿ

|| ಕ || ತಳರ್ದ್ದಲರ್ಗ್ಗೆ ಮುಗುಳ್ಗೆ
ತಳಿರಿಂಗೆಳೆಗಾಯ್ಗಳೊಳಸಿ ಲತೆಗಳಿಂ ಲತೆಗಳಿಂ
ತಳಿರ್ತ್ಥಸುಕೆಯನಸುಕೆಗಯಂ
ತೆಳೆ ಮಾವಿಂಮಾವುಗಳ್ಗೆ ಪರಿದರ್ಭರದಿಂ ||

ಅಂತು ಪರಿದು

|| ಕ || ಕರವಲಯ ಹಾರಕಿವುತಾಂ
ಚರಣಾಂದುಕೆಗಿವುದಲೀ ಶಿರೋಭೂಷಣಕೆಂ
ದಿರದವರ್ಗ್ಗಳಾಯ್ದು ಕೊಯ್ದ
ರ್ಬ್ಬಿರಿ ಮುಗುಳನಲರ ವನೆಯಂ ಮುದದಿಂ ||

|| ವ || ಅಂತಾವನದ ತರುಲತಾ ಗುಲ್ಮಂಗಳೊಳು ಪಲ್ಲಪ್ರಸವ ಫಲಂಗಳೊಳೊಂದುಮುಳಿಯದಂತೆ ಕೊಯ್ಯದು ಮೃಣಾಳನಾಳ ಸೂತ್ರಂಗಳಿಂದಳೆವಾಳೆಯ ನಳನಳಿಪ ಸಂಣ ನಾರ್ಗಳೊಳಮರ್ಕ್ಕೆಯುಂ ಚೆಲುಉಮಾಗೆ ಕರ್ನ್ನಿಕಾರಂಗಳಂ ಕರ್ನ್ನಪೂರಂಗಳಂ | ಮೊಲ್ಲೆಯ ಮುಗುಳ್ಗಳಿಂ ಮುಗುಳುಗಳ್ಮಂ | ಸೇವಂತಿಗಳಂ ಸೀಮಂತಂಗಳಂ | ಚೆಂನೈಯ್ದಿಲಗಳಿಂ ಚಂನಊಗಳಂ | ಸಂಪಗೆಗಳಿಂ ಸವಡಿದೊಳಬಂಧಿಗಳಿಂ | ಶಿರೀಸಂಗಳಿಂ ಕುಸುರಿಗಂಕಣಗಳಂ | ಪೊಂದಾವರೆಯ ಕರ್ನ್ನಿಕೆಗಳಿಂ ಮುದ್ರಿಕೆಗಳಂ | ದಾಳಿಂಬದ ಬಿತ್ತುಗಳಿಂ ಮಾವಿನ ಸಂಣ ಗಾಯ್ದಗಳಿಂ ಬಂಣ ಸರಂಗಳಂ | ಕಾಂಚನಾಹಾರಗಳಿಂ | ಕಾಂಚಿ ಧಾಮಂಗಳಂ ವಿವಿಧ ಕಿಸಲಯ ಕುಸುಮಂಗಳಿಂ ಱವಕಿಗೆಗಳಂ ನಮೆದು ತಮ ತಮಗೆ ಪಸದಂಗೊಂಡು

|| ಕ || ನೂತನ ಕಿಸಲಯ ಕುಸುಮ ಫಲ
ಜಾತಾಕಿಲ ಭೂಷಣಂಗಳಂ ತೊಟ್ಟೂ ಮನೋ
ಜಾತನುಜಂಗಮ ಪೂತ
ತಾ ತತಿಯೆನೆ ಬಂದೋಲಗಕ್ಕವನೀಪನಾ ||

|| ವ || ಅಂತು ಬಂದೋಲಗಿಸುತಿರ್ದ್ದ ವಾರಾಂಗನೆಯರ ಬಾಲಸ್ಥಲಂಗಳೊಳಂ ರಾಜಾಂತರಾಳಂಗಳೊಳಂ ಸೀಮ್ಮುತ್ತುಗಳಂ ತಳಿದಿರ್ದ್ದ ಘರ್ಮ್ಮೋದ ಬಿಂದುಗಳನರಸಂ ಕಂಡಾ ಕಾಂತೆಯರ ವನ ವಿಹಾರದಿನಾದ ಶ್ರಮಮನರಿದದಂ ಕಮಳ ಸರೋವರ ಜಲವನ ವನಕೇಳಿಯಂ ಕಳೆಯಲೆಂದಲ್ಲಿ ತಳರ್ದ್ದು ಕಾಂತಾಜನಂ ಬೆರಸು ಬರ್ಪ್ಪಾಗಳ್ತತ್ಪುರೋಭಾಗದೊಳೂ

|| ಕ || ಪುಳಿನಮೆ ನತಂಬ ಬಿಂಬಂ
ನಳನಳಿಸುವ ತೆರೆಗಳೆಸೆವ ವಳಿಗಳ್ಮತ್ತಂ
ಸುಳಿನಾಭಿಯೆನೆ ವನಶ್ರೀ
ಲಲನೆಯ ಮಧ್ಯದವೊಲೊಪ್ಪಿದುದು ಸರಸಿಕರಂ ||

|| ವ || ಮತ್ತಂ ತೀರ ಪ್ರದೇಶದೊಳ್ಕಸ್ತೂರಿಕಾ ಜಲದಿಂ ಶ್ರೀಖಂಡ ಕರ್ಪ್ಪೂರವಾರಿಯಿಂ ಕುಂಕುಮೋದಕದಿಂ ಬೇಱೆವೇಱಿ ತುಂಬಿರ್ದ್ದುವಾಗಿಯುಂ || ನಿಜ ನಿಜವರ್ನ್ನಾ ವಿಶೇಷದಿಂ ಬಱಿದಿರ್ದಂತೆಸೆವಿಂದ್ರ ನೀಲ ಚಂದ್ರಕಾಂತ ಪದ್ಮರಾಗಮಯ ಕೊಪ್ಪರಿಗೆ ಕಟ್ಟಾಹಂಗಳಿಂದಮುಂ | ಯುವತಿ ಜನ ಸುಖಾರೋಹಣಾದಿ ರೋಹಣ ಕನಕಮಯ ಸೋಪಾನ ಪಂಕ್ತಿಗಳಿಂದಮುಂ | ಕನಕ ರಜತಮಯ ಭಂಗುರ ಶೃಂಗಜಯಂತ್ರಾದಿ ಜಲಕೇಳಿ ಯೋಗ್ಯಾನೇಕ ಪರಿಕರಂಗಳಿಂದಮುಂ | ಮಧುಪಾನಾಸಕ್ತ ಮಧುಪ ಸಮುದಯ ಪರಿಹಸಿತ ದರಹಸಿತ ಕಲ್ಹಾರ ಕಮಲ ಕುಮುದ ಕುವಲಯಂಗಳಿಂದಮತ್ಯಂತ ಮನೋಜ್ಞಮುಂ | ನಾಭಿದಘ್ನಾತ್ಯಂತ ಸ್ವಚ್ಛ ಜಲೋಪೇತಮುಮಪ್ಪ ಕ್ರೀಡಾ ಸರೋವರಮಂ ಕಂಡು ಮನದೆಗೊಂಡು ರಾಜಹಂಸಂ ಕಾಂತಾಸಮೂಹಂ ಬೆರಸು ರಾಜಹಂಸಂ ಸ್ತ್ರೀ ಸಮೂಹಂ ಬೆರಸು ಪುಗುವಂತೆ ಪೊಕ್ಕು

|| ಕ || ಕರಿಪತಿ ಕರ ಪುಷ್ಕರದಿಂ
ಕರಿಣಿಗಳಂ ಸೇಚಿಪಂದದಿಂ ನರನಾಥಂ
ಕರಗತ ಜಲಯಂತ್ರದಿ ತಂ
ನರಸಿಯರಂ ಸುಭಿ ಸಲಿಲದಿಂ ಚಿಂಮಿಸಿದಂ ||

|| ವ || ಲಲನೆಯರಂ ಮನೋಜ ನೃಪನೆಚ್ಚಪನಿಂದು ಕಲಂಭದಿಂದೆ ಕತ್ತಲೆಯ ಕಲಂಭದಿಂದುರಿಯ ಬಾಣದಿನೆಂಬಿನಮಾ ನೃಪಾಲಕಂ ಚಕೋರ ಹಂಸ ಚಕ್ರವಾಕದಿಂ ಗಾರುಡಾಶ್ಮನೀಲವಜ್ರ ಮೌಕ್ತಿಕಾರುಣಾಶ್ಮದಿಂ ಚಾರುತರಗಳಾಗೆ ಮೇದ ವಾರಿಯಂತ್ರ ನಿಕರಮುಂ ನಾರಿಯರ್ಕ್ಕಳಿಱದೆ ತೆಗೆದಕೊಂಡು ರಾಗದಿಂ

|| ಕ || ಭರದಿಂದೊತ್ತಲದತ್ತ
ಸುರ ನಿಪಯೊಧಾರೆಗಳ್ತದಂಗ ಪ್ರಭೆಯಂ
ಬೆರಸರಸನ ಮೇಲೊಗೆದವು
ಸರಿವಳಿಯಿಂ ಮಿಂಚುಮೊಡನೆ ಸರಿವಂತಾಗಳೂ ||

|| ವ || ಮತ್ತಮಾ ಕಾಂತೆಯರ್ಕ್ಕಳೂ

ತರಳ || ಮೃದು ಮದೋದಕ ಚಂದನೋದಕ ಕುಂಕುಮಾಂಬುಳಿಂ
ಮುದಂ ಮಿಗೆ ಪರಸ್ಪರಮೊತ್ತೆ ನೀಲದ ಚಂದ್ರಾಕಾಂ
ತದ ಪದ್ಮರಾಗದ ಶೋಭಿಪ ಪುತ್ರಿಕಾಳಿಗಳಂತೆ ಭೂಪನ ಕ
ಣ್ಗದೇಂ ಸೊಗಯಿಸಿರ್ದ್ದರೋ ನಾರಿಯರ್ಕ್ಕಳು ವಾರಿಕೇಳಿಯೊಳೆತ್ತಲುಂ ||

|| ವ || ಅಂತು ನಾನಾ ವಿಧ ವಿನೋದದಿನಂತು ಜಲಕೇಳಿಯಿಂ ಕ್ರೀಡಿಸುತ್ತಮಿರೆ

|| ಕ || ಕುಂತಳ ತತಿಯೀ ವಕ್ರತೆ
ದಂತಚ್ಛದದಿಂ ಸರಾಗತೆಯಮಾಯ್ತಂತಾ
ಕಾಂತನಿಗೆ ವಾರಿಕೇಳಿಯೊ
ಳೆಂತುಂ ನಿರ್ಮ್ಮಲರ ಸಂಗದಿಂದಾಗುದುದೇಂ ||

|| ವ || ಅಂತು ಪಿರಿದು ಪೊತ್ತು ಸಲಿಲಕೇಳಿ ವ್ಯಾಪಾರದಿಂ ಬಳಲ್ದ ಕಾಂತೆಯರ ಪಾಂಡಿಮಾಧರಂಗಳ್ಮನರುಣಿಮಾಕ್ಷಿಗಳಂ | ಹರಿಷೇಣ ಮಹಾರಾಜಂ ನಿಷ್ಠಾಪಿತ ಜಲಕಿದನಾಗಿ ಹಂಸಿಗಳ್ವೆರಸು ಪುಳಿನದಲೀಜಾಡಲಂದು ಸರೋವರದಿಂ ಪೊಱಮಡುವ ರಾಜಹಂಸನಂತೆ ಪ್ರಮದೆಯರ್ವೆರಸು ಸರೋವರಂಮ ಪೊಱಮಟ್ಟು ತತ್ಸಮೀಪದೊಲಿರ್ದ್ದ ಪುಲಿನ ತಳದೊಳ್‌ ನಿಂದಿರ್ದ್ದ ಸಮಯದೊಳ್ಭಾಂಡಾಗಾರಿ ಕರ್ವ್ವಿ ವಿಧ ವಿಶಾಲ ಪಟಲ ಕಂಗಳೊಳ್ತುಂಬಿ ತಂದು ಮುಂದಿಳಿಪಿದ ಸುವಸ್ತ್ರಾಭರಣಾನು ಲೇಪನ ಕುಸುಮ ಮಾಲ್ಯಾದಿಗಳಿಂ ತಾನುಮರಸಿಯರುಂ ಶೃಂಗಾರಂ ಮಾಡಿ ವಿಳಾಶಿನಿಯರ್ಗ್ಗಂ ಕುಡಲವರುಂ ಶೃಂಗಾರಂ ಮಾಡಿ ವಿಳಾಸಿನಿಯರ್ಗ್ಗಂ ಕುಡಲವರುಂ ಶೃಂಗಾರಂ ಮಾಡಿ ಬರಲಿಲ್ಲಿಂ ತಳರ್ದ್ದು ಕುಸುಮಾಪಚಯದೊಳು ವಾರಾಂಗನೆಯರ್ಪ್ಪಲ್ಲವ ಪ್ರಸವ ಫಲಂಗಳೆಲ್ಲಮಂ ಕೊಳೆ ಭೀತಂತಿರ್ದ್ದುಮತ್ತಂ ತದಂಗನಾಪಾಂಗ ಮರೀಚಿ ಮಾಲೆ ಬಳಸಿ ತಳಿರ್ತ್ತುಂ ಪೂತಂತಿರ್ದ್ದ ತರುಲತಾಗುಲ್ಮಂಗಳಂ ಮನೋನುರಾಗದಿನವಳೋಕಿಸುತ್ತಂ ಬರ್ಪ್ಪಾಗಳೂ