|| ವೃ || ನವ ವಿಧ ಪುಂಣ್ಯದೊಳ್ನೆಱೆದು ಸಪ್ತಗುಣಂಗಳೊಳಮೊಂದಿ ಸ
ದ್ವಿವಿಧರಸಾಢ್ಯ ಭಕ್ತ್ಯತತಿಯಂ ಪರಮಾಂನಮುಮಂ ವಿಶುದ್ಧಮಂ
ಭುವನ ವಿನೂತರಪ್ಪ ಮುನಿಪರ್ಗ್ಗಿತ್ತು ಬಳಿಕ್ಕನಾಥ ಬಾಂ
ಧವ ಜನ ಪಂಡಿತರ್ಗ್ಗಮುಣಲಿಕ್ಕಿಯೆ ಮಾಡುವುದೇಕ ಭುಕ್ತಮಂ ||

ತದನಂತರಂ ಚೈತ್ಯಾಲಯಕ್ಕೆ ಬಂದು ದೇವ ಶ್ರುತ ಗುರವಂದನೆಯಂ ಮಾಡಿ ಚತುರ್ತ್ಥಮಿಯಲುಪವಾಸಮಂ ಕೈಕೊಂಡು ಸಪ್ತಮಿ ಮೊದಲಾಗಿ ಪೌರ್ಣ್ನಮಿ ಪರ್ಯ್ಯಂತ ಮಧಃ ಶಯನ ಬ್ರಹ್ಮಚರ್ಯ್ಯ ವ್ರತಮಂ ಕೈಕೊಂಬುದು | ದುಃಶ್ರುತಿ ದುಃಪರಿಣಾಮಂಗಳಂ ಪರಿಹರಿಸಿ ಧರ್ಮ ಕಥಾಶ್ರವಣ ಶುಭ ಪರಿಣಾಮಂಗಳಿಂದಂ ಪೊತ್ತಂ ಕಳೆದಷ್ಟಮಿಯ ದಿವಸದೊಳು

|| ತರಳ || ಜಿನ ನಿಕೇತನದಲ್ಲಿ ಮಂಟಪಮಂ ಸಮಸ್ತವಿತಾನ ನೂ
ತನ ಫಲಾವಳಿಯಿಂದ ಸಾರ ಸುಭಕ್ಷ ಸಂತತಿಯಿಂದಮುಂ
ಜನ ಮನೋಹರಮಪ್ಪ ವೋಲ್ಸಲೆ ಮಾಡಿ ಶೋಭೆಯನಲ್ಲಿ ಮ
ತ್ತನಣು ಸಂಮದದಿಂದಮದರಮಂ ಸುಸಾರಧರಮಪ್ಪುದಂ ||

ಸುಸ್ಥಿರಮಪ್ಪಂತು ಸ್ಥಾಪ್ಯಂ ಮಾಡಿ ತದನಂತರಂ || ಲಲಿತರಗಳೆ ||

ಯಾಗ ಭೂಶೋಧನಂಗೆಯ್ದು ಸಲಿಲಾದ್ಯದಿಂ
ನಾಗ ಸಂತರ್ಪ್ಪಣಂ ಮಾಡಿಸಲೆಯಮೃತದಿಂ ||

ರಾಗದಿಂ ದರ್ಭ್ಭೆಗಳನಿರಿಸಿ ನವದೆಶೆಗಳೊಳು
ಯಾಗ ಭೂಮ್ಯರ್ಚ್ಚನಂಗೆಯ್ದು ತೋಯಾಧಿಯೊಳು ||

ವೀತರಾಗಾರ್ಚ್ಛಿತ ಸುಚಂದನ ಸುಪುಷ್ಟಮಂ
ದೌತ ಶೀತ ವಸ್ತ್ರ ಶೇಖರ ಯಜ್ಞಸೂತ್ರಮಂ ||

ರತ್ನಮಯ ಕಟಕ ಕುಂಡಲ ಮುದ್ರಿಕಾದ್ಯಮುಂ
ಯತ್ನದಿಂ ಧರಿಸಿ ಸಲೆ ಷೋಡಶಾಭರಣಮಂ ||

ಭೂತ ಸತ್ಪಲ ವಾದ್ಯಂಚಿ. ಮುಖಂಗಳಿಂ
ಶ್ವೇತ. ತ್ಸು. ತ್ರದಿಂ ಪರಿವೇಷ್ಟಿತಂಗಳಂ ||

ಪೂತ ಕಳಶಂಗಳ ಸ್ಥಾಪಿಸಿ ವಿಧಾನದಿಂ
ಜಾತ ಸಂತೋಷದಿಂದರ್ಚ್ಚಿಸಿ ಜಲಾದ್ಯದಿಂ ||

ಮೇರು ಶೈಲಸ್ಥ ಪಾಂಡುಕಮೆಂಬ ಭಾವದಿಂ
ಚಾರುತರ ಪೀಠಮಂ ಸ್ಥಾಪಿಸಿ ಸುಭಾವದಿಂ ||

ಪ್ರಕ್ಷಾಲನಂಗೆಯ್ದು ಪೀಠಮಂ ಶುಚಿ ಜಲದಿ
ಸಾಕ್ಷತ. ದರ್ಭ್ಭೆಯಂ ಸ್ಥಾಪಿಸಿ ಮಹಾದರದಿ ||

ಗೋತ್ರಚಿದ್ಭಕ್ತಿ ಚರ ವಂದಿತ ಜಿನೇಶ್ವರನ
ಗಾತ್ರ ಸ್ಪರ್ಶನಂಗೆಯ್ದು ಸರ್ವ್ವೇಶ್ವರನ ||

ಈಡಿತ ಜಿನೇಶನಂ ಸ್ಥಾಪಿಸಿ ಮನೋಮುದದಿಮಾ…. (ತ್ರುಟಿತ) ನನು ಕ್ರಮದಿನವತರಾನೇಕ ನೀರಾಜನ ದ್ರವ್ಯದಿಂದವತರಮಂ ಕ್ರಮಪೆ ಮಾಡಿ… ದಿಂ ಇಂದ್ರಾಣಿ ರಾತ್ರಿಚರ ವರುಣ ಪವನರಂ | ವೃಂ (ದ್ರ) ವೈಭವದನದ ಗೀರೀಶಶೆ…. ಭೂರಿಮು. ಕ್ರಮದಿ ಮಾಡಿಯಾಹ್ವಾನಮಂ ವಾರಿ ಗಂದಾಧಿಯಿಂ ಮಾಡಿ ಸ… ರಮಂ | ನಿಜ ನಿಜಾಯುಧ ವಧೂವಾಹನಾದ್ಯುಕ್ತರಂ | ನಿಜ ನಿಜಸ್ಥಾನದೊಳಿರಿಸಿತದ ನಂತರಂ | ಭೇರಿ ಮೃದಂಗ ಶಂಖಾದಿ ನಿಶ್ವನಮೆಸೆಯ | ಚಾರು ಕಲಶೋದ್ಧರಣಮಂ ಮಾಡಿ ಜನಮೊಸೆಯ ಜೈನಮತದಂತಖಿಲ ಲೋಕಹಿತಕಾರಿಯಿಂ | ದ್ರಾಕ್ಷಾರಸ ಶರ್ಕ್ಕರೆಯಿಂ ಲೋಭನ ಮನೋಹಾರಿ ವರ್ನ್ನ ಸದ್ರುಚಿಗಳಿಂ ಚೂತದಾಡಿಮ ಪುಂಡ್ರೇಕ್ಷು ರಸಶೀತಂಗಳಿಂ | ಗಾಂಗೇಯ ರಸಮಸೇಣ ಭೂರಿ ಸೌರಭ್ಯದಿಂ ಗಾಂಗೇಯ ಘಟ ಚರಿತ ಹಯ್ಯಂಗವಿನದಿಂ | ಅಪಹಸಿತ ಹರಸನ ವಿದುಕರ ತುಷಾರಂ ಸಂಪವಿತ್ರ ಸುಶಾ ಮಾಷಿಷಿ ಕ್ಷೀರದಿಂ ಇಂದುಕಾಂತ ಸಕಲ ಸಂಘಾತ ಸಂಕಾಶದಿ | ದಧಿಯಿನತ್ಯಂತ ನೀಹಾರಿಕಾಠಿನ್ಯದಿಂ | ಅಭಿಷೇಕಮಂ ಮಾಡಿ | ಸನ್ಮಂತ್ರ ಪೂರ್ವ್ವಕಂ | ವಿಭುಜಿನಾಧೀಶಂಗೆ ಸದ್ಭಕ್ತಿಪೂರ್ವ್ವಕಂ | ವಿವಿಧ ಸುರಭಿ ದ್ರವ್ಯತತಿ ಚೂರ್ಣ್ನ ನಿಕರದಿಂ | ಪ್ರವರ ತರ ಕಮತಂಡುಲ ಷಿಷ್ಟ ಖಂಡದಿಂ | ಉದ್ವರ್ತ್ತನಂಗೆಯ್ದು ತೊಲಗಿಸಿ ಸ್ನಿಗ್ಧಮಂ | ವಿದ್ವಜ್ಜನಾದಿ ತಾ ರ್ಹತ್ತ ನೂಲಗ್ನಮಂ | ಸಿತ ಪಿತಹರಿದರುಣ ಕೃಷ್ಣ ವರ್ನ್ನಂಗಳಿಂ | ದತಿ ಸುರಭಿ ಮಿಲಿತ ಶಾಲ್ಯಂ ನ ಪಿಂಡಂಗಳಿಂ | ಭೂರಿ ನಿರಾಜನ ದ್ರವ್ಯ ಸಂಘಾತದಿಂ | ನೀರಾಜನಂಗೆಯ್ದು ಪರಮಾನುರಾಗದಿಂ | ಚೂತಾದಿ ಶುಭತರುತ್ವ ಕ್ಕೃತಕಷಾಯದಿಂ ವೀತರಾಗಂಗೆಸಗಿ ಸುಮನಮನಮೆಯದಿಂ | ಈಡಿತಾಮೋದಸದ್ವಾದಿ ಭರಿತಂಗಳಿಂ | ಮಾಡಿಯುಭಿಷೇಕಮಂ ಕೋಣಕುಂಭಂಗಳಿಂ | ಗಂಧ ಘನಸಾರ ಘೃಸೃಣೈಲಾದಿ ಮಿಶ್ರಿತದಿಗಂಧಾಂಬುವಿಂ ಮಾಡಿಯಭಿಷೇಕವನಾದರದಿ | ಶಿಷ್ಟ ಮುನಿಜನ ಮಿತಾಂಘ್ರಿ ಜಿನನಂಗ ಮಂ | ಅಷ್ಟ ಗಂಧದಿ ಲೇಪನಂಗೆಯ್ದು ಕಾಂತಮಂ | ನೋಂಪರೆಲ್ಲಂ ಗಂಧ ತೋಯಮಂ ಮಸ್ತಕದಿನಾಂಪುದುಱೆ ಹಸೂದು ಮೆಯ್ಯೊಳತ್ಯಾದರದಿ ಶೀತಕರ ಕರನಿಕರ ಸಮಶೈತ್ಯಾದಾಕೆಯಿಂ ಶಾತಕುಂಬೋರು ಘಟ ಚರಿತ ಜಲಧಾರೆಯಿಂ | ನಿಸೃತ ಪರಿಮಳಕೆಳಸಿ ಬಳಸುವಳಿಯಾಳಿಯಿಂ | ಘಸೃಣ ಘನ ನಾಯುತ ನಂದನ ಸುಚರ್ಚ್ಚೆಯಿಂ | ಕ್ಷೀರ ಸರನಿಧಿಹೀನ ಪಿಂಡ ಪಾಂಡುರಗಳಿಂ | ಭೂರಿ ಸೌರುಭಮಿಲಿತ ಕಲಮತಂಡುಲಗಳಿಂ | ಸುರ ಕುಜಲತಾಂತ ತತಿಮಂದಾಕ್ಷತಂಗಳಿಂ | ಸರಸಿಜೋತ್ಪಲ ಚಂಪಕಾದಿ ಪುಷ್ಪಂಗಳಿಂ | ಕ್ಷೀರಾಜ್ಯದಧಿ ಶರ್ಕ್ಕರಾದಿ ಸಂಮಿಶ್ರದಿಂ | ಪೂರಿಕಾಶಾಲ್ಯೋದ ದಿನವೈದ್ಯದಿಂ | ಅನಣುತರ ತಿಮಿರಾಪಹರಣದಕ್ಷಂಗಳಿಂ | ಘನಸಾರ ವರ್ತ್ತಿಕಾದ್ರೋತ್ಥ ದೀಪಂಗಳಿಂ | ಸುರಭಿತಾಷಾವಧೂ ವದನ ಸಧೂಮದಿಂ | ಸುರಭೀಜೋಂಗಿಕ ತುರುಷ್ಕಾ ದೀವರ ಧೂಪದಿಂ | ಭೂರಿಮಾಧುರ್ಯ್ಯಾ ಗುಣವಿಜಿತ ಸುರಕುಜ ಫಲದಿಂ | ಚಾರುತರ ಚೋಚ ಮೋಚಾಂ ಮಾದ್ರಿ ಸತ್ಪಲದಿಂ | ಚ್ಛತ್ರ ಚಾಮರ ಕೇತು ಕಲಶ ಘಟಾದ್ಯದಿಂ | ನೇತ್ರ ಸಮದ ಕಾರಿಮಂಗಲ ದ್ರವ್ಯದಿಂದರ್ಚ್ಚಿಸಿ ಜಿನೆಂದ್ರನಂ ಭಕ್ತಿ ಪೂರ್ವ್ವಕಮಾಗಿ ಪೆರ್ಚ್ಚಿದನುರಾಗದಿಂ ಶಾಂತಿ ಧಾರೆಯನೆಸಗಿ ಸುಭಿಜಲ ಗಂಧ ಶಾಲ್ಯಕ್ಷತಾಢ್ಯಂಗಳಿಂ ವಿರಚಿಸಿ ಕುಸುಮಾಂಜಲಿಯನೊಲಿದು ಕುಸುಮಂಗಳಿಂ

|| ತರಳ || ಯಿರದೆ ಮಂದರದಲಿ ಪಂಚ ಸುಚೂರ್ಣ್ನದಿಂ ಚೆಲುವಪ್ಪಿನಂ
ಬರೆದು ರಾಗದಿ ಪಂಚಮಂಡಲ ಯಂತ್ರಮಂ ಕಣೆಯದಳೊ
ಳ್ಕರಮೆ ರಂಜಿಪ ನಾಲ್ಕಱೊಳ್ಸಲೆ ನಾಲ್ಕು ನಾಲ್ಕು ಮನೊಪ್ಪುವಂ
ತಿರಿಸಿ ಮಂಜುಲ ಜೈನಬಿಂಬಂಗಳಂ ಪ್ರಭೂತ ಸುಭಕ್ತಿಯಿಂ ||

|| ವ || ತದನಂತರಂ || ಓಂ ಹ್ರೀಂ ಶ್ರೀಂ ಕ್ಲೀಂ ಐಂ ಅರ್ಹಂ ನಮೊರ್ಹತೇ ಸ್ವಾಹಾ || ಯೀ ಮಂತ್ರಮನೋದುತ್ತಮಾಹ್ವಾನಮಂ | ಅತ್ರತಿಷ್ಟ = ಠ = ಅತ್ರ = ಸ ….. ತೋ ಭವ = ವಷಟ್‌ನಮೊ ಆರ್ಹತೇ ಸ್ವಾಹಾ || ಆಹ್ವಾನ ಸ್ಥಾಪನ ಸಂನಿಧೀ ಕರಣಮಂ ಮಾಡಿ ತದನಂತರಂ

|| ವೃ || ಜಲಧಿ ನಮೆಯದಿಂ ಸುರಭಿ ಚಂದನದಿಂ ಕಲಮಾಕ್ಷತಂಗಳಿಂ |
ಜಲರುಹ ಚಂಪಕಾದಿ ಕುಸುಮೋತ್ತರದಿಂದ ಮೃತೋಪಮಾನ…
ಜಲಘೃತ ವಿಶ್ರಹಾರಿ. ವರ ದೀಪದಿಮುತ್ತಮ ರೂಪದಿಂದ ಮುಂಫಲ…..
ಸುಗಂಧ ಸುರ ಸಾಥ್ಯದಿನೊಪ್ಪಿರೆ ಮಾಳ್ಕೀ ಪೂಜೆಯಂ

|| ವ || ಅಂತು ಮಹೋತ್ಸಾಹದಿಂ ಸಮಂತ್ರಕಮಷ್ಟ ವಿಧಾರ್ಚ್ಛನೆಯಂ ಮಾಡಿ ತದ ನಂತರಂ

|| ಕ || ನಂದಮಹಮಂ ಬಲಗೊಂಡು
ನಂದೀಶ್ವರ ನುತಿಯನೋದುತ ಮೂಱಂಸ …..
ಬಂದರ್ಗ್ಘಮನೆತ್ತುವುದಾ
ನಂದದಿಜಲಗಂಧೋಧಕ ಕುಸುಮಾದಿಗಳಿಂ ||

|| ವ || ತದನಂತರಮೊಂದು ಜಪ ಮೊದಲಾಗಿ ಶಕ್ತಿಗೆತಕ್ಕಂತೆ ಶ್ರೀಂ. ಚ. ದಂಗಳಂ …. | ಓಂ ಹ್ರೀಂ ಶ್ರೀಂ ಕ್ಲೀಂ ಅರ್ಹಂ ಸ್ವಸ್ಥಾನಂ ಗಚ್ಚ = ಜಃ=ಜಃ=ನಮೋ ರ್ಹತೇ ಸ್ವಾಹಾ…. ಎಂಬೀ ಮಂತ್ರಮನೋದುತ್ತಂ ವಿಸರ್ಜ್ಜನೆ ಮಾಳ್ಪುದಾ ದಿವಸಮಂ ಧರ್ಮ್ಮವ್ಯಾಸಂಗ….. ಪರಿಣಾಮ ಕಳಪಿ ರಾತ್ರಿಯೊಳ್ನಾಲ್ಕು ಜಾವದೊಳಮಭಿಷೇಕ ಪೂಜಾಪೂರ್ವಕಮಾಗಿ ಧರ್ಮ್ಮ ಕಥೆಯಂ ಕೇಳುತ್ತಂ ಜಾಗರಮಂ ಮಾಳ್ಪುದಾ ದಿನದ ಪೆಸರ್‌ ನಂದೀಶ್ವರ ಸಂಪತ್ಕರಮೆಂಬುದಕ್ಕುಂ | ತದುಪವಾಸದ ಫಲಂ ದಶ ಸಹಸ್ರಾದಿ ದಶಲಕ್ಷ ೧೦,೧೦,೦೦೦ ಉಪವಾಸದ ಫಲಮಕ್ಕುಂ

|| ಕ || ಯೆರಡನೆಯ ದಿವಸದೊಳರ್ಹ
ತ್ಪರಮೇಷ್ಟ್ಯಭಿಷೇಕಪೂಜೆಯಂ ಮುಂ ಪೇಳ್ದಂತಿರೆ
ಮಾಳ್ಕೆಜಪ ಮುಮನಂತು ಮಾ
ನೆರಡು ಮೊದಲಾಗಿ ಶಕ್ತಿ ಯನುರುಗುಣದಿಂದಂ ||

|| ತದನಂತರಂ || ಭಕ್ತಿಪೂರ್ವ್ವಕವಾಗಿ ದೇವರಂ ಬಲಂಗೊಂಡು ಶ್ರುತಪೂಜೆಯಂ ಗುರುಪೂಜೆಯಂ ಮಾಡಿ ನಿಜಗೃಹಕ್ಕೆ ವಂದು ಚಾತುರ್ವ್ವರ್ಣ್ಣ ಸಂಘಕ್ಕೆ ಆಹಾರದಾನಮಂ ಮಾಡಿ ಪಾರಣೆಯಂ ಮಾಳ್ಪುದಾ ದಿನದ ಪೆಸರಷ್ಟ ಮಹಾಪ್ರಾತಿಹಾರ್ಯ್ಯಮೆಂವುದಕ್ಕುಂ | ತತ್ಫಲಂ ವಿಂಶತಿ ಸಹಸ್ರಾಧಿಕವಿಂಶತಿ ಲಕ್ಷೋ ೨೦,೨೦,೦೦೦ ಉಪವಾಸದ ಫಲಮಕ್ಕುಂ

|| ಕ || ಮೂಱ್ನೆಯ ದಿನದೊಳಂತಿರೆ
ತೋಱೆ ಮಹಾ ಶೋಭೆಯಭಿಷವಾದಿಯನೊಲವಿಂ
ಮೂಱು ಜಗದೆಱೆಯಗೊಡರಿಸಿ
ಮೂಱುಂ ಜಪಮಾದಿಯಾಗಿ ಶಕ್ತ್ಯನುಗುಣದಿಂ ||

|| ವ || ಪಂಚಪದಂಗಳಜಪಿಯಸಿ ದೇವರಂ ಬಲಗೊಂಡು ಶ್ರುತ ಗುರು ಪೂಜೆಯಂ ಮಾಡಿ ನಿಜಾಲಯಕ್ಕೆ ಬಂದು ಬಱೆಯಶನಮನೇಕ ಭುಕ್ತಮಂ ಮಾಳ್ಪುದಾ ದಿನದ ಪೆಸರು ತ್ರಿಳೋಕ ಸಾರಮೆಂಬುದಕ್ಕುಂ ತತ್ಫಲಂ ತ್ರಿಂಶತ್ಸಹಸ್ರಾಧಿಕ ತ್ರಿಂ ಶತಲಕ್ಷೋ ೩೦,೩೦,೦೦೦ ಉಪವಾಸದ ಫಲಮಕ್ಕುಂ

|| ವ || ದೇವರಂ ಬಲಂಗೊಂಡು ಶ್ರುತ ಗುರುಪೂಜೆಯಂ ಮಾಡಿ ನಿಜಮಂದಿರಮನೆಯ್ದಿ ಏಕಬಡಿಣದಿಂದೇಕಭುಕ್ತಮಂ ಮಾಳ್ಪುದು ತದ್ದಿನದ ನಾಮಂ ಚತುರ್ಮ್ಮುಖಮೆಂದಕ್ಕುಂ || ತತ್ಫಲಂ || ಚತ್ವಾರಿಶತ್ಸಹಸ್ರೋತ್ತರ ಚತ್ವಾರಿಂಶಲಕ್ಷೋ ೪೦,೪೦,೦೦೦೦ ಒಪವಾಸದ ಫಲಮಕ್ಕುಂ

|| ಕ || ಅಯ್ದನೆಯ ದಿನದೊಳಂ ಮ
ತ್ತಯ್ದ ಜಿನಂಗಭಿಷೇಕವಾದಿಯಂ ಮುಂದಿನ ವೋಲ್

ಮೆಯ್ದೆಗೆಯದೆಸಗಿ ಮುದದಿಂ
ದಯ್ದು ಜಪಂ ಮಾದಿ ಯಾಗಿ ಶಕ್ತ್ಯಾನುಗುಣದಿ ||

|| ವ || ಪಂಚ ಪದಾಕ್ಷರಂಗಳಂ ಜಪಿಯಸಿ ದೇವರಂ ಬಲಗೊಂಡು ಶ್ರುತಚಾರ್ಯಾರಾಧನೆಯಂ ಮಾಡಿ ಸ್ವಭವನಮಂ ಪೊಕ್ಕು ಮೂಱುಜಾವದಿಂ ಮೇಲೆ ಸಂಪೂರ್ಣ್ನಮಾಗಿ ಯೇಕಭುಕ್ತಂ ಮಾಳ್ಪುದಾದಿನದ ಪೆಸರು ಪಂಚಕಲ್ಯಾಣಮೆಂದಕ್ಕುಂ | ತತ್ಫಲಂ ಪಂಚಾಶತ್ಸ ಹಸ್ರೋಗ್ರ ಪಂಚಾಸಲಕ್ಷೋ ೫೦,೫೦,೦೦೦ ಉಪವಾಸದ ಫಲಮಕ್ಕುಂ

|| ಕ || ಷಷ್ಟವಾಸದೊಳಂತು ಭೂ
ತಿಷ್ಟಮನೋರಾಗದಿಂ ತ್ರಿಲೋಕ ಲೋಕಗುರು
ಜೇಷ್ಠನೆನಿಪ್ಪರ್ಹತ್ಪರ
ಮೇಷ್ಠಿಗೆಯಭಿಷೇಕ ಪೂಜೆಯಂ ಮುಂನಿನ ವೋಲ್
‌ ||

|| ವ || ಮಾಡಿಯಾಱು ಜಪಂ ಮೊದಲಾಗಿ ಯಥಾಶಕ್ತಿಯಿಂ ಪಂಚಪದಂಗಳಂ ಜಪಿಯಸಿ ದೇವರಂ ಬಲಗೊಂಡು ಶ್ರುತಗುರು ಪೂಜೆಯಂ ಮಾಡಿಯಾತ್ಮ ನಿಲಯಕ್ಕೆ ಪೋಗಿಯಸಂಸ್ಕೃತ ತಿಂತ್ರಿಕಾಧ್ಯಾಮ್ಲದಿಂದಶನಮಂ ಕಲಸಿಯೇಕ ಭುಕ್ತಮಂ ಮಾಳ್ಪುದು | ಆ ದಿನದ ಪೆಸರು ಸ್ವರ್ಗ್ಗ ಸೋಪಾನಮೆಂಬುದಕ್ಕುಂ | ತತ್ಫಲಂ ಷಷ್ಟಿ ಸಹಸ್ರಾನ್ವಿತ ಷಷ್ಟಿ ಲಕ್ಷೋ ೬೦,೬೦,೦೦೦ ಉಪವಾಸದ ಫಲಮಕ್ಕುಂ

|| ಕ || ಸಪ್ತಮದಿವಸದೊಳಂ ಮುದ
ದಾಪ್ತಂಗಭೀಷೇಕ ನಾದಿಯಂ ಮಾಡಿ ಬಹಿಃ
ಕ್ಷಿಪ್ರಚೇತಸ್ಕನಾಗದೆ
ಸಪ್ತಕ ಜಪಮಾದಿಯಾ ಶಕ್ತ್ಯನುಗುಣದಿಂ ||

|| ವ || ಪಂಚ ಪದಂಗಳಂ ಜಪಿಯಸಿ ದೇವರಂ ಬಲಗೊಂಡು ಶ್ರುತಗುರು ಪೂಜೆಯಂ ಮಾಡಿ ನಿಜ ನಿವಾಸಕ್ಕೆ ಬಂದು ಪಂಚರಸ ರಹಿತ ಯಶನಮಂ ಮೂಱು ಮೇಲೋಗರ ಸಹಿತಮಾಗಿ ಏಕ ಭುಕ್ತಮಂ ಮಾಡಿ

|| ಕ || ಅತಿ ಮುದದಿಂದಂ ಬಸದಿಗೆ ವಿ
ನತ ಯಶರ್ಬ್ಬಂದು ಭಕ್ತಿಯಿಂ ನಿಜವರರಂ
ಯತಿನಿಕರಮುಮುಂ ಬಂಧಿಸಿ
ಚರುರ್ತ್ಥವೆಲ್ಲೋಪಾವಾಸಮಂ ಕೈಕೊಂಬುದು ||

ತದ್ದಿವಸಾಭಿದಾನಂ ಸಪ್ತ ಪರಮ ಸ್ಥಾನ ಸಂಪತ್ಕರಮೆಂಬುದಕ್ಕುಂ | ತತ್ಫಲಂ ಸಪ್ತತಿಸಹಸ್ರೋಪೇತ್ಯ ಸಪ್ತತಿ ಲಕ್ಷೋ ೭೦,೭೦,೦೦೦ ಪವಾಸದ ಫಲಮಕ್ಕುಂ

|| ಕ || ಅಷ್ಟಮ ದಿವಸದೊಳಂ ಮ
ತ್ತಿಷ್ಟ್ಯಭಿಷೇಕಮುಮನೆಸಗಿ ಮುಂ ಪೇಳ್ದತೆಱದಿಂ
ಶಿಷ್ಟ ಜನಾರ್ಚ್ಛಿತ ಜಿನಪಂ
ಗಷ್ಟಕ ಜಪಮಾದಿಯಾಗಿ ಶಕ್ತ್ಯನುಗುಣಂ ||

|| ವ || ಶ್ರೀಮತ್ಪಂಚ ಪದಂಗಳಂ ಜಪಿಯಿಸಿ ಜಿನೇಶ್ವರಂ ಬಲಗೊಂಡು ಶ್ರುತ ಚಾರ್ಯ್ಯ ಪೂಜೆಯಂ ಮಾಡಿ ಧರ್ಮ್ಮ ಕಥಾ ಶ್ರವಣ ಶುಭಭಾವದಿಂದಾ ದಿವಸಮಂ ಕಳೆದು ತದ್ರಾತ್ರಿಯೊಳು ನಾಲ್ಕುಂ ಜಾವದಳೊಪ್ಪಿರೆ ನಾಲ್ಕಭಿಷೇಕಂಗಳಂ ಮಮೋಮುದದಿಂದಂ ನಾಲ್ಕು ಪೂಜೆಯಂ ಧರಿಸಿ ಧರ್ಮ್ಮ ಕಥೆಯ ಕೇಳುತಂ ಜಾಗರಮಂ ಮಾಳ್ಪುದು ಆ ದಿನದ ಪೆಸರಷ್ಟ ಮಹಾವಿಭೂತಿ ಯೆಂಬುದಕ್ಕುಂ | ತತ್ಫಲಮಶಿತಿಲಕ್ಷಾಧಿಕ ತ್ರಿಕೋಟ್ಯು ೩೮,೦೦,೦೦೦ ಪವಾಸದ ಫಲಮಕ್ಕುಂ

|| ಕ || ನವಮ ದಿವಸದೊಳು ಮುಂಪೇ
ಳ್ದ ವೋಲೊಪ್ಪಿರಲಭಿಷೇಕಾಷ್ಟವಿಧಾರ್ಚನೆಯೊ
ಲವಿಂ ಭುವನಾರಾಧ್ಯ ಜಿನೇಶ್ವರಂ
ಗವಿರಳ ಭಕ್ತಿಯಿಂದ ಮಾಡಿ ಬಳಿಕ್ಕಂ ||

|| ವ || ಯಥಾ ಶಕ್ತಿಯಿಂ ಪಂಚ ಪದಾಕ್ಷರಂಗಳಂ ಜಪಿಯಿಸಿ ಶುತ ಗುರು ಪೂಜೆಯಂ ಮಹಾ ಶೋಭೆಯಪ್ಪಂತು ಮಾಡಿ ತದನಂತರಂ ಋಷಿ ಸಮುದಾಯಮಂ ನಿಲಿಸಿನವವಿಧ ಪುಂಣ್ಯ ಶ್ರದ್ಧಾದಿ ಗುಣಸಮೇತರಾಗಿ ಪಂಚಭಕ್ಷ ಪಾಯಸಮಂ ಕೈಯಲಿಕ್ಕಿ ತದನಂತರಂ ದೀನಾನಾಥ ಪಂಡಿತಮಾಶ್ರಿತ ಜನಂಗಂಳಂ ಭೋಜನ ವಸ್ತ್ರ ತಾಂಬೂಲಾದಿ ದಾನದಿಂ ಸಂತುಷ್ಟರಂ ಮಾಡಿ ಬಳಿಕಂ ಪಾರಣೆಯಂ ಮಾಳ್ಪುದೀ ಕ್ರಮದಿಂ | ಅಷಾಢ ಮಾಸದೊಳಂ ಕಾರ್ತ್ತಿಕ ಮಾಸದೊಳು | ಪಾಲ್ಗುನ ಮಾಸದೊಳು ನೋಂಪುದೀ ನೋಂಪಿಯಂ ಜಘನ್ಯದಿಂ ೩ ವರ್ಷಂಬಂರಂ ಮಧ್ಯಮದಿಂ ೫ ವರ್ಷಂಬಂರಂ ಮುತ್ಕೃಷ್ಟದಿಂದೇಳು ವರ್ಷಂಬಂರಂ ಅತ್ಯುತ್ಕೃದಿಂ ೯ ವರ್ಷಂಬಂರಂ ನೋಂತುದ್ಯಾಪನೆಯಂ ಮಾಳ್ಪುದಾವು ದ್ಯಾಪನೆಯಕ್ರಮಮೆಂತೆಂದೊಡೆ

|| ವೃ || ಯೆಸೆವಂತಿಪ್ಪತ್ತನಾಲ್ಕುಂ ಬಸದಿಗಲನೀತೀವಾಭಿರಾಮಂಗಳಂ ಮಾ
ಡಿಸಿಯಂತಿಪ್ಪತ್ತನಾಲ್ಕುಂ ಪ್ರತುಮೆಗಳನತಿ ಪೌಢಶ್ರೈಲ್ಪಿಯಿಂ ಮಾ
ಡಿಸಿ ಪೊಂನಿಂ ಬೆಳ್ಳಿಯಿಂ ಮೇಣ್ಯರಮೆಸೆವಿನೆಗಂ ಲೋಹದಿಂ ಗ್ರಾವದಿಂಮೆ
ಣ್ದೆಸೆಯಂ ಸತ್ಕೀರ್ತ್ತಿಯುಂ ಮಂಗಳ ಪಟಹಾರರವಂತೀವೆ ಸಂತೋಷದಿಂದಂ ||

|| ವ || ಶುಭ ದಿನ ಮೂಹೂರ್ತ್ತದೊಳ್ಪ್ರತಿಮೆಯಂ ಮಾಡಿಸಿ ಯಾ ದಿನ ದೊಳ್ಪ್ರಹ್ಮಚರ್ಯ್ಯ ಪೂರ್ವ್ವಕಮಾಗಿಯುಪವಾಸಮಂ ಕೈಕೊಂಡು ಯಥಾ ವಿಧಿಯಿಂ ಮಹಾಭಿಷೇಕ ಪೂಜೆಯಂ ಮಾಡಿಯಾ ಚೈತ್ಯಾಲಯದ ಮಂಟಪಮನಲಂಕರಿಸಿ ಯಿಪ್ಪತ್ತನಾಲ್ಕು ತೆಱದ ಫಲಾವಳಿಯಂ ಕಟ್ಟುವುದಲ್ಲಿ ಮಂದರಮಂ ಸ್ಥಾಪಿಸಿ ಯಾ ಮಂದರದ ಕಣಯಂಗಳೊಳ್ಮುಂ ಪೇಳ್ದಂತೆ | ಪ್ರತಿಮೆಗಳಂ ಸ್ಥಾಪಿಸಿ ೨೪ ತೆಱದ ಭಕ್ಷಂಗಳಂ ಚರುವನಿಟ್ಟು ಬಲಗೊಂಬುದಾ ರಾತ್ರಿಯೊಳು ನಾಲ್ಕು ಜಾವದೊಳಮಭಿಷೇಕ ಪೂಜಾ ಪೂರ್ವ್ವಕಂ ಮಹಾಪುರಾಣಮಂ ಕೇಳುತ್ತಂ ಜಾಗರಮಂ ಮಾಳ್ಪುದು | ಶ್ರುತಗುರು ಪೂಜೆಯಂ ಮಾಳ್ಪುದು | ನಿತ್ಯ ಪೂಜಾರ್ತ್ಥಂ ಗ್ರಾಮ ಕ್ಷೇತ್ರಂಗಳಂ ಸರ್ವ್ವ ಬಾಧಾರಹಿತಮಪ್ಪಂತು ಶಾಸನ ಪೂರ್ವ್ವಕಮಾಗಿ ಕೊಡುಉದು | ನಿತ್ಯಾಭಿಷೇಕಾರ್ತ್ಥಮಿತಪ್ಪತ್ತನಾಲ್ಕು ಕಪಿಲೆಯಂ ಕೊಡುವುದು ಮತ್ತಂ

|| ಕ || ಕಲಶ ದರ್ಶನ ಸುಘುಂಟಾ
ವಿಲಸಿತ ನಕ್ಷತ್ರಮಾಲಿಕಾ ಜಯಘುಂ
ಟೌ ಲಲಿತಾರಾತ್ಯಾಧಿಕ
ಪಲವುಂ ಪೂಜೋಪಕರಣಂ ಮುದದಿಂದೀವುದೂ ||

|| ವೃ || ಯತಿಗಳಿಪ್ಪತ್ತ ನಾಲ್ವರ್ಗ್ಗನುಪಮ ಗುಣಿಗಳ್ಗೀವುದಾನಂದದಿಂದಂ
ಕೃತ ವಸ್ತ್ರೋಪೇತ ಸತ್ಪುಸ್ತಕಮನೆಸೆವ ಸತ್ತಟ್ಟಿಕಾ ಕುಂಡಿಕಾ ಸಂ
ಯುತಮಂ ಸತ್ಕಂಥೆಯಂ ಮುತ್ತಿರದೆದಲನಿಬರ್ಗ್ಗೆಯಜ್ಜಿಯರ್ಗ್ಗಂ ಸುಬಂದಾ
ನ್ವಿತ ಗುಂಡೀ ವಸ್ತ್ರಮಂ ಪುಸ್ತಕಮನೊಲವಿನಿಂದೀವುಮಂದಿತ್ತು ಮತ್ತಂ ||

|| ಕ || ಚಾತುರ್ವ್ವರ್ಣ್ನಕ್ಕಧಿಕ
ಪ್ರೀತಿಯೊಳಾಹಾರದಾನಮಂ ಮಾಡಿಯತಿ
ಖ್ಯಾತಿ ವಡೆವಿನೆಗಮಾತ್ಮ
ಜ್ಞಾತಿ ಬುಧಾನಾಥ ಜನಗಳಿಂಗಾರದರದಿಂ ||

|| ವ || ಸುವರ್ಣ್ನ ವಸ್ತ್ರಾದಿ ದಾನಮಂ ಮಾಳ್ಪುದಿದಕ್ಕಂ ಶಕ್ತಿಯಿಲ್ಲದವರೊಂದು ಚೈತ್ಯಾಲಯಮನೊಂದು ಪ್ರತಿಮೆಯುಮಂ ಮಾಡಿಸಿ ಪ್ರತಿಷ್ಟೆಯಂ ಮಾಡಿಸುವುದದಕ್ಕೆ ತಕ್ಕ ಕ್ಷೇತ್ರ ಪೂಜೋಪಕರಣಂಗಳಂ ಕೊಡು ಉದೊಂದು ತಂಡ ರುಷಿಯರ್ಗ್ಗೆ ತಟ್ಟು ಕುಂಚ ಕಮಂಡಲ ಪುಸ್ತಕ ಮೊದಲಾದುವಂ ಕೊಡುಉದೊಂದು ತಂಡಜ್ಜಿಯರ್ಗ್ಗೆ ವಸ್ತ್ರ ಕಮಂಡಲು ಪಿಂಚಾಧಿಕಮಂ ಕೊಡುವುದಿದಕ್ಕಂ ಶಕ್ತಿಯಿಲ್ಲದವರು ಮುಂನೆನಿತು ವರ್ಷಂ ನೋಂತರ್ಮ್ಮತ್ತಮಿನಿತು ವರ್ಷಂಬರಂ ನೋಂಪುದಿದುದ್ಯಾಪನೆಯ ಕ್ರಮಂ

|| ಉತ್ಸಾಹ || ಧರೆಯೊಳಗ್ರಮಹಿಷೆಯಪ್ಪ ಪ್ರಧಾನ ಮುಖ್ಯ ವಲ್ಲಭೋ
ತ್ಕರಮು ನೋಂಪುದಾತ್ಮ ನಿಲಯಮಂ ಪ್ರಮಾರ್ಜ್ಜನಾದಿಯಿಂ
ಕರಮೆಪ್ರತುಮಗೆ ಮಾಡಿ ರಂಗವಲಿಯನಿಕ್ಕಿ ವಿ
ಷ್ಟರದಮೇಲೆ ಮುದದಿನಿರಿಸಿ ಕುಂಚಮಂ ನವೀನಮಂ ||

|| ಕ || ಫಲ ಕಮಲಮನಾ ಕುಂಚದ ಮೇ
ಲೊಲಿದಿರಿಸುವುದಲ್ಲಿ ಕಥೆಯ ಪುಸ್ತಕಮಂ ಸ
ಲ್ಲಲಿತಮಾಗಿರಿಸಿ ಬಳಿಕ್ಕಂ
ಜಲಗಂಧಾಕ್ಷತ ಕುಸುಮಾದಿಯಿಂ ಪೂಜಿಸುವುದು ||

|| ವ || ಅಂತು ಪೂಜಿಸಿ ಮೂರು ಸೂಳ್ಬಲಗೊಂಡು ಮುಂ ಪೇಳ್ದ ಕ್ರಮದಿಂದೆಂಟು ದಿವಸಂಬರಂ ನೋಂಪುದೀ ನೋಂಪಿಯಂ ಪೂರ್ವ್ವಭವದೊಳು ನೋಂತಾ ಫಲದಿಂದನಂತ ವೀರ್ಯ್ಯಂ ಅಪರಾಜಿತರ್ಸ್ಸಾರ್ವ್ವ ಭೌಮರಾದರ್ವ್ವಿಜಯ ಕುಮಾರಂ ಚಕ್ರವರ್ತ್ತಿಗೆ ಸೇನಾಪತಿಯಾದಂ ಜರಾಸಂಧಂ ತ್ರಿಖಂಡಮಂಡಲಾಧಿಪತಿಯಾದಂ | ಮೇಘ ರಥನವಧಿ ಜ್ಞಾನಿಯಾದಂ ಮಕರಧ್ವಜಂ ಸಕಲ ಜಗನ್ಮೋಹನ ಪ್ರವಣ ರೂಪನಾದಂ | ರುಗ್ಮಿಣಿ ದೇವಿ ಜನಾರ್ದ್ಧನಂಗೆ ಮಹಾದೇವಿಯಾದಳನೇಕ ಸ್ತ್ರೀಯರಿಂದ್ರಾದಿ ದೇವಿಯರಾದರೀ ನೋಂಪಿಯಂ ಸಮ್ಯಕ್ತ್ವ ಪೂರ್ವ್ವಕಮಾಗಿ ೩ (ವರುಷಂ) ಬರಂ ನೋಂತವರೇಳು ೭ ಭವಕ್ಕೆ ಮುಕ್ತರಪ್ಪರು ೫ ವರುಷಂಬರಂ ನೋಂತವರು ೫ ಭವಕ್ಕೆ ಮುಕ್ತರಪ್ಪರು ೭ ವರ್ಷಂಬರಂ ನೋಂತವರು ೩ ಭವಕ್ಕೆ ಮುಕ್ತರಪ್ಪರು | ೯ ವರ್ಷಂಬರಂ ನೋಂತವರು ತದ್ಭವದೊಳೇ ಮುಕ್ತರಪ್ಪರೆಂದರಿಂಜಯ ಮಹಾಮುನೀಶ್ವರರ್ಪ್ಪೇಳೆ ಹರಿಷೇಣ ಮಹಾರಾಜನುಂ ಗಾಂಧಾರಿ ಪ್ರಮುಖಾಂತಃಪುರಕಾಂತೆಯರುಂ ಕೇಳ್ದು ಪರಮಾನಂದ ಮಾನಸರಾಗಿಯಾ ನೋಂಪಿಯಂ ಕೈಕೊಂಡು ತನ್ಮು ನಿಯುಗಳಕ್ಕಮತ್ಯಂತ ಭಕ್ತಿಯಿಂ ಪುನರ್ವ್ವಂದನೆಯಂ ಮಾಡಿ ಬೀಳ್ಕೊಂಡು

|| ಕ || ಸುರಗಿರಿ ಸಂನಿಭ ಕರಿಯಂ
ಧರಣೀಶ್ವರನೇಱಿ ವನಿತಯರ್ಕ್ಕರಿಣಿಗಳಂ
ಯಿರದೇಱಿ ಪರಿಜನಂಗ
ಳ್ತುರಗಾದಿಯನೇಱಿ ನಗರಿಗಭಿಮುಖರಾಗಲೂ ||

|| ವೃ || ಘೋರ ಸಮೀರ ಸಂಕ್ಷುಭಿತವಾರಿಧಿ ಘೋಷಮನೇಳಿಸಲ್ಮಹೋ
ದಾರ ಮೃದಂಗ ಕಹಳಾ ಪಟಹಾದಿ ಸುಹಾದ್ಯ ನಿಶ್ವನಂ
ಭೂರಿತರಾತ ಪತ್ರ ಬಹು ಕೇತನರ್ಗ್ಮಱಸಲ್ಸರಾಧಮಂ
ಪೂರಿಸಿ ಪಾಠಕ ಪ್ರಕರ ಮಂಗಳ ಗೇಯರವಂ ದಶಾಶೆಯಂ ||

|| ವ || ಅಂತತಿ ಪ್ರಭೂತ ವಿಭವಸನಾಥನಾಗಿಯಾ ಹರಿಷೇಣ ಮಹಿನಾಥಂ ಬಂದಾ ಚಂದನ ಪಲ್ಲವಾಂಚ್ಛಿತ ವಂದನಮಾಲಾ ಸೌಂದರಮುಂ | ಮೃಗ ಮದಘನ ಸಾರ ಘೃಶೃಣ ಚಂದನಾಂಬು ಸೇಕ ನೀರಜೀಕೃತ ಮಹಾವಿಧಿ ಸನಾಥಮಂ | ಸಮುತ್ತುಂಗ ಸಮೀಚೀನ ಕೇತನ ವಿತಾನ ವಿರಾಜಿತಮುಂ | ಪ್ರಕಾರ ಗೋಘರಾಟ್ಟಾಲಕ ಸೌಧಾಗ್ರಂಗಳನೇಱಿ ನಿಜಾಗಮನ ಲೋಕನೋತ್ಸುಕ ಪುರಜನ ಕೋಳಾಹಳ ಪ್ರತಿಧ್ವನಿಯ ತರಮ್ಯ ಹರ್ಮ್ಮ್ಯೋದರಮುಮತಿ ಹೃದ್ಯಮುಮಪ್ಪಯೋಧ್ಯಾನಗರಿಯಂ ಪೊಕ್ಕು ಪುಂಣ್ಯಾಂಗನಾ ಜನಂಗಳ್ತೀವ ಶೇಷಾಕ್ಷತಂಗಳನಾಂತು ಕೊಳುತ್ತಂ ಕುಲವೃದ್ದರ್ಪರಸುವ ಪರಮಾಶೀರ್ವ್ವಚನಂಗಳನಕರ್ಣ್ನಿಸುತ್ತಂ ರಾಜಮಂದಿರಮಂ ಪೊಕ್ಕು | ಸಹಾಗತ ಸಾಮಂತಾದಿಗಳಂ ತಾಂಬೂಲಾದಿ ದಾನದಿಂ ಮಂನಿಸಿ ಕಳಿಪಿ

|| ವೃ || ಜಿನ ಪೂಜೋತ್ಸವದಿಂ ಜಿನಾಭಿಷವಣ ವ್ಯಾಪಾರದಿಂ ನಿಚ್ಛಲುಂ
ಜಿನ ಮರ್ಗ್ಗಾನುಗ ಶಾಸ್ತ್ರ ಸಚ್ಚ್ರವಣದಿಂ ಜೈನಾಂಘ್ರಿ ಸದ್ಭಕ್ತಿಯಿಂ
ಜಿನ ಯೋಗೀಶ್ವರ ಸಂಗ ಚಾರು ಚರಣಾಂಬೋಜಾತ ಸತ್ಸೇವೆಯಿಂ
ಜಿನನಾಥಂ ಕ್ವಚಿದ್ದಿನಂಗಳನತೀವಾನಂದದಿಂದಿರ್ಪ್ಪುದುಂ ||

|| ಕ || ಆ ನೋಂಪಿಯ ದಿವಸಂ ಬರೆ
ಭೂನಾಥಂ ತಂನ ದೇವಯರ್ಸ್ಸಹಿತಂ ತಂ
ನ್ಮಾನಿತ ಮುನಿಪತಿ ಪೇಳ್ದ ವಿ
ಧಾನದಿನತ್ಯಂತ ಭಕ್ತಿಯಿಂದಂ ನೋಂತಂ ||

|| ವ || ಅಂತತಿಯಾನಂದದಿಂದೇಳು ವರುಷಂ ಬರಂ ನೊಂತು ೯ ವರುಷಂ ನೋತು ಯಥಾಶಕ್ತಿಯಿಂ ವಿಧಿಪೂರ್ವ್ವಕಂ ಉದ್ಯಾಪನೆಯಂ ಮಾಡಿ ಸುಖದಿಂ ರಾಜ್ಯಂಗೆಯ್ಯುತಿರ್ದ್ದಾನೊಂದು ಕಾರಣದಿಂ ವೈರಾಗ್ಯ ಪಾರಾಯಣನಾಗಿ ರಾಜ್ಯಭಾರಮಂ ನಿಜಸುತನ ಮಸ್ತಕದೊಳಿರಿಸಿ ತಾಂ ತಪೋರಾಜ್ಯ ಭಾರಮನುಪ್ಪುಗೆಯ್ದು ದುರ್ದ್ಧರ ತಪೋನುಷ್ಟಾನದಿಂ ನೆಗಳ್ದು ಸಮಾಧಿ ವಿಧಿಯಿಂ ಸುರಲೋಕದೊಳ್ಪುಟ್ಟಿ ತಜ್ಜಾತಾನಲ್ಪಸುಖಮನನುಭವಿಸಿಯಲ್ಲಿಂ ಬಂದು ಕ್ರಮದಿಂದಷ್ಟವಿಧ ಕರ್ಮ್ಮ ನಿಮ್ಮಾಲಂಗೆಯ್ದು ಮೋಕ್ಷ ಲಕ್ಷ್ಮೀ ಕಟಾಕ್ಷೈಕ ಲಕ್ಷ್ಯನಾದನನೇಕ ಸ್ತ್ರೀ ಪುರುಷರು ನೋಂತು ಯಥಾ ಯೋಗ್ಯಮಪ್ಪ ದೇವಗತಿಯಂ ಪಡೆದಿರಿಂತೂ

|| ವೃ || ಯಿಂತೀ ನೋಂಪಿಯನೊಲ್ದು ನೋಂಪ ನರರುಂ ನೋಂಪರ್ಗ್ಗೊಡಂಬಟ್ಟರುಂ
ಸಂತೋಷಂ ಮಿಗೆ ನೋಣಿಪ ವಿನೆಯದಿದಂದಂತಾದರಂ ಮಾಳ್ಪರುಂ
ಶಾಂತೋತ್ಯುಗ್ರ ಭವಾಟವಿ ಭ್ರಮ ಸಂತಾಪಾರ್ದ್ಧಲಾಗಿ ದ್ರುತಂ
ಭ್ರಾಂತೇನೆಯ್ದುವರಲ್ತೆ ಸಪ್ತ ಪರಮ ಸ್ಥಾನಂಗಳಂ ಲೀಲೆಯಿಂದಂ ||

|| ವೃ || ರತಿಪತಿ ಮಾನ ಮರ್ದ್ದಿಪರಮಾಗಮ ವಾರಿಧಿ ಪಾರದೃಶ್ಯಂ
ನುತ ಗುಣ ರತ್ನಾರೋಹಣ ಶೀಲೋಚ್ಛಯ ಭವ್ಯ ಸರೋಜ ಭಾಸ್ಕರ
ಶ್ರುತಮುನಿರಾಜ ಸೂನು ನತಭವ್ಯಜನಾಮರ ಧೇನು ಭೂಮಿ ವಿ
ಶ್ರುತ ಶುಭಚಂದ್ರಯೋಗಿ ಸಲೆ ಕೀರ್ತ್ತಿಯ ನಾಲ್ತದೆಸೆಗಂ ಧರಿತ್ರಿಯೊಳೂ ||

|| ಕ || ಆ ಶುಭಚಂದ್ರಾಹ್ವಯ ಯೋ
ಗೀಶಾತ್ಮಜ ಚಂದಣಾಖ್ಯ ವರ್ಣ್ನಿ ಬುಧ ಸ್ತೋ
ಮಾಶಯ ಹರಮಂ ರಚಿಸಿದ
ನೀ ಶುಭ ನಂದೀಶ್ವರಾಖ್ಯ ಸದ್ವ್ರತ ಕಥೆಯಂ ||

|| ವ || ಯಿದರೊಳ್ತಪ್ಪುಳ್ಳೊಡೊಲ್ದಾದರದಿ ಬುಧ ಜನಂ | ತಿರ್ದ್ದುಗಾನಂದದಿಂ ಮತ್ತಿದು ಸರ್ವ್ವಕ್ಷೋಣಿಯೊಳ್ವರ್ತ್ತಿಸುಗೆ ಕುಲಗಿರಿ ಸ್ತೋಮಮಿರ್ಪ್ಪಂನೆಗಂ ಸಂಮದಮಂ ತಾಳ್ದಿದಿಂತಿದಂ ಭಾಜಿಪ ಬರೆವೊಲವಿಂ ಪೇಳ್ವ ಕೇಳ್ವರ್ಗ್ಗೆ ನಾಕಾಸ್ಪದಮಂ ಚಕ್ರಾಧಿಪತ್ಯಂ ಸಮನಿಸುಗೆ | ಜಯಂ ಮಂಗಳಂ ನಿತ್ಯ ಸೌಖ್ಯಂ ಅನಶನಮಾದಾವಂತೆ ಸಂಪೂರ್ಣ್ನ ಸ್ಸಜ್ಜಲಮೇಕವಾರಂ ವಾಭುಕ್ತಿ ತೃತೀಯ ಯಾವಂ ನಿರ್ಲ್ನವಣಾಂ ಭ್ರಂತಿ ಶಾಕಮಪರೆ ಶಾಂ || ಯೀ ನಂದೀಶ್ವರನ ನೋಂತ ಮಹಾಪುರಷರ್ಗ್ಗಂ ನೋನಿಸದವರ್ಗ್ಗಂ ಬರದವರ್ಗ್ಗಂ ಬರಸಿದವರ್ಗ್ಗಂ ಕಥೆಯಂ ಪೇಳ್ದವರ್ಗ್ಗಂ ಕೇಳ್ದವರ್ಗ್ಗಂ ಮಂಗಳ ಮಹಾ ಶ್ರೀ || ಆದಿ ಪರಮೇಶ್ವರನೇ ಗತಿ || ಶ್ರೀಮಚ್ಚಾರು ಕೀರ್ತ್ತಿ ಮುನಯೇ ನಮಃ || ೦ || ಶುಭಮಸ್ತು || ಶ್ರೀ ವರ್ದ್ಧಮಾನ ಸ್ವಾಮಿಯ ಪಾದವೇ ಶರಣು || ೦ ||