|| ಕ || ರಥಿಕರನಾಗಂಗಳು ಮಾ
ರಥಿಕರಗಳ್ನೋಳ್ಪಜನದ ಕಣ್ಗಂ ಮನಕಂ
ರತಿಪತಿ ಮದಮದರ್ಕ್ಕಳ ಜಿನ
ಪತಿ ಗೃಹದಾರಿಗಳು ಮೆಱೆಉವೊಂದೊಂದನಿಶಂ ||

ಸುರಚಿರ ತಡವೇದಿಗಳಿಂ
ನಿರುಪಮ ಕುಜಸಮೃದ್ಧ ವನಪಂಕ್ತಿಗಳಿಂ
ಪರಿಕಿಪೊಡೆ ಮೂಲಮಗ್ರ
ನಿರಂತರಂ ಮೆಱೆವುವಂಜನಾದ್ಯಗತತಿಯುಂ ||

|| ವ || ಅಂತತೀವ ಮನೋಹರಂಗಳಾದ ಪರ್ವ್ವತಂಗಳೆಲ್ಲಂ ಕೂಡಿ ದ್ವಿಪಂಚಂಶತ್ಪ ರ್ವ್ವತಂಗಳಪ್ಪ ೫೨ ವವಗ್ಗ್ರಭಾಗಂಗಳೊಳ್ಪ್ರತ್ಯೇಕ ಮೊಂದೊಂದು ಚೈತ್ಯಾಲಯಗಳಿರ್ಪ್ಪುವವೆಂತಪ್ಪುವೆಂದೊಡೆ

|| ಕ || ಯೋಜನ ಶತ ೧೦೦ ಮಾಯಮಂ
ಯೋಜನ ಪಂಚಾಗ್ರ ಸಪ್ತತಿ ೭೫ ಮ್ಯುತ್ಸೇದಂ
ಯೋಜನ ಶತಾರ್ದ್ಧ ೫೦ ಮಗಲಂ
ಯೋಜನದಳ ೧೨ ಮಾ ಜಿನಾಲಯಂಗಳ ಗಾಢಂ ||

ದ್ವಿಗುಣಾಷ್ಟ ೧೬ ಯೋಜನೊಚ್ಚಂ
ದ್ವಿಗುಣಂ ಚತುರ್ಯ್ಯೋಜನ ೮ ಪ್ರಮಾಣ ವ್ಯಾಸಂ
ಸೊಗಯಿಸುವ ಮಹಾದ್ವಾರಂ
ಬಗೆಗುತ್ಸವಮಂ ನಿಮಿರ್ಚ್ಚುಉದು ನೋಳ್ಪವರ ||

ದ್ವಿತಯಘ್ನ ಚತುಃ ೮ ರ್ಯ್ಯೋಜನ
ಮಿತತುಂಗಂಗಳ್ತ ಉರ್ದ್ದ ೪ ವಿಸ್ತಾರಂಗ
ಳ್ನುತ ತಮಸದ್ವಾರಂಗಳ್ಪ್ರ
ಳ್ಸತತಮಪಾಚಿಯೊಳಮುತ್ತ ರಾಸಿಯೊಳ ಸರಿಊ ||

ದವಾರಸಮೋತ್ಸೇಧಂಗ
ಳ್ಚಾರಜ್ವಲ ವಜ್ರಮಯ ಕವಾಟ ಯುಗಂಗಳು
ರಾರಾಜಿಪ ವನವರತಂ
ಸಾರತರಾನೇಕ ರತ್ನತತಿ ಖಚಿತಂಗಳೂ ||

ನಿರುಪಮ ಭಿತ್ತಿಗಳೆಸೆ ವುವು
ತರದಿಂದಂ ಸ್ಫಟಿಕ ರತ್ನತತಿಗಳ್ಕರ ಮಾ
ಶ್ಚರಿರ್ಯ ಕರಂಗಳುಸು
ರುಚಿರ ಬಹುಭಂಗಿಯುಕ್ತಿ ಚಿತ್ರಯುತಂಗಳೂ ||

ವರಪಂಚರತ್ನ ರಚಿತಸ್ವುರ
ಸ್ಕರಸ್ತಂಭಂಗಳ್ವಿರಾಜಿಪುವನೀಶಂ
ಸ್ಥರತರಗಳ್ವಿಸ್ಮಯಕರ
ಸುರುಚಿರ ಬಹುಸಾಲಭಂಜಿಕೋಪೇತಂಗಳೂ ||

ಆ ರತ್ನಸ್ತಂಭಗಳ
ಚಾರುತರಾಭ್ಯಂತರ ತನಿತಳಮೆಸಗುಂ
ಆರೈವೊಡತಳ ಶೋಭಾ
ಚಾರುವರ ಪಂಚರತ್ನ ಮಯಮನವರತಂ ||

ಶುಭ ಕುಂದಶಂಖ ಹಿಮಕರ
ಗಭಸ್ತಿ ಶುಚಿಗಳ್ನಿಜಾಂಶು ಹತ ತಿಮಿತರಂಗ
ಳ್ತ್ರಿ ಭುವನ ವಿಸ್ಮಯ ಕರಗ
ಳ್ತ್ರಿ ಭುವನ ತಿಲಕಾಭಿವಂಗಳಾ ಜಿನಗೃಹಂಗಳೂ ||

ಸುರುಚಿರ ವಿತಾನದಿಂದ
ವರಮೌಕ್ತಿಕಧಾಮ ಚಾಮರಾಳಿಗಳಿಂ ದಂ
ನಿರುಪಮ ಮಣಿ ತೋರಣದಿಂ
ಕರಮೆಸೆವುವು ತಜ್ಜಿ ನಾಲಯಂಗಳ್ಸತತಂ ||

ಎಸೆವುವು ನೊಱೆಂಟು ನಿಶಂ
ವಸ್ತಿಗಳೊಳ್ಚಾರುತರಸುಗರ್ಭ್ಭ ಗೃಹಂಗಳು
ವಿಸುಗುವ ರತ್ನ ಮರೀಚಿ
ಪ್ರಸರ ವಿನಾಶಿ ಕೃತಾಂಧಕಾರ ಚಯಂಗಳು ||

ಪಾವನಮಪ್ಪ ವಸತಿತಯೊಳು
… ಗಳ್ವೆ ರತ್ನ ರಚಿತ ಸುಸ್ತಂಭಯುತಂ
ದೇವಚ್ಛಂದಂ ಸೊಗಯಿಪು
ದಾವಗಮತ್ಯಂತ ಮಂಲಂ ಹೇಮಮಯಂ ||

ಸಮದಲ ಘಂಟಾಜಾಲದಿ
ನಮಲಾಬ್ದಕ ಕಲಶ ಕೇತು ಭೃಂಗಾರಗಳಿಂ
ಕಮನೀಯಧೂಪ ಧುಮದಿ
ನಮಯ ಬಹುರತ್ನ ಕಿರದಿಂ ರಂಜಿಪುಗುಂ ||

ದ್ವಿತಯಾ ೨ ಷ್ಟಂ ಚತು ೪ ಯ್ಯೋರ್ಜನ
ಮಿತಮದಱ ವ್ಯಾಸಂ ದೀರ್ಗ್ಘ ತುಂಗತ್ವಂ
ಮತ್ತತಿ ಸುರಭಿ ಕುಸುಮ ಮಾಲಾ
ಪ್ರತತಿ ಸುರತ್ನ ಪ್ರದೀಪ ದಿಂ ಕರಮೆಸೆಗುಂ ||

|| ವ || ಮತ್ತಮಾ ಗರ್ಬ್ಬಗೃಹಂಗಳೊಳು ಸ್ಫಟಿಕ ರತ್ನಮಯ ಸಿಂಹ ವಿಷ್ಟ ರಾಗ್ರನಿವಿಷ್ಟರಂಗಳುಂ ದಶತಾಳಮಾನ ಲಕ್ಷಣ ಸಂಯುಕ್ತಂಗಳುಮಷ್ಟೋತ್ತರ ಸಹಸ್ರವ್ಯಂಜನ ವ್ಯಂಜಿತಂಗಳುಂ | ದ್ವಾತ್ರಿಶಂತ್ಸುಭಲಕ್ಷಣ ಲಕ್ಷಿತಂಗಳುಂ ಛತ್ರತ್ರಯ ಚಾಮರಾದ್ಯುಪ ಶೋಭಿತಂಗಳು ಪ್ರದಕ್ಪ್ರಥಕ್‌ ಸದ್ರುಶ ಪಂಕ್ತಿ ಕ್ರಮಸ್ಥಿತ ಚಾಮರಾಂಕಿತ ನಾಗ ಯಕ್ಷ ದ್ವಾತ್ರಿಂಶ ನ್ಮಿಥುನ ವಿರಾಜಿತಂಗಳುಮುಭಯ ಪಾರ್ಶ್ವದೊಳಂ ಶ್ರೀದೇವಿ ಶ್ರುತದೇವಿ ಸರ್ವ್ವಾಹ್ಣ ಸನತ್ಕುಮಾರ ಯಕ್ಷತ್ಪ್ರತಿ ಬಿಂಬೋಪ ರಂಜಿತಂಗಳುಂ ರತ್ನಮಯಂಗಳಪ್ಪಷ್ಟೋತ್ತರ ಶತಶ್ರೀ ಜಿನೇಶ್ವರ ಪ್ರತಿಬಿಂಬಳೊಪ್ಪುತಿರ್ಪ್ಪುವವು ಮತ್ತಮೆಂತಪ್ಪವೆಂದೊಡೆ

|| ವೃ || ಹರಿ ನೀಳಾಳಕ ಪಂಕ್ತಿ ನೇತ್ರ ಯುಗಲೋಮ ಸ್ತೋಮ ಸಭ್ರೂಲತಾ
ಹರಿ ನೀಲ ಸ್ಫಟಿಕಾ ಸಿತಾತಿ ಶುಚಿಯಿಂದುಗ್ಧಪ್ರವಾಲಾರುಣಾ
ಧರ ವಜ್ರೋಜ್ವಲ ದಂತ ಪಂಕ್ತಿ ನಖರ ವ್ರಾತಾರುಣಾ ಸ್ಮೋಲ್ಲಸ
ತ್ಕರ ಸತ್ಪಾದ ತಳಂಗಳಿಂದಮೆಸೆಗಂತಾ ಜೈನ ಬಿಂಬೋತ್ಕರಂ ||

|| ಕ || ನೋಡುವವೊಲ್ಚೆಲ್ವಿಂ ಮಾ
ತಾಡುವವೋಲ್ನೆಱೆಉವಾ ಜಿನಾರ್ಚ್ಚೆಗಳೆಲ್ಲಂ
ನೋಡುವಡ ನಾದ್ಯ ನಿದನಂ
ಗಳೀಡಿತಂಗಳಾಪಂಚ ೫೦೦ ತುಂಗಂಗಳೂ ||

ಘನ ಘಂಟಾ ಜಾಲಂಗ
ಳ್ಚಿನವರ ಪೂಜೋಪಕರಣ ಸಂದೋಹಂ ತ
ಜ್ಜಿನ ಬಿಂಬೋದಯ ಪಾರ್ಶ್ವದೊ
ಳನಿಶಂ ಶೋಭಿಸುವುವಷ್ಟ ಮಂಗಳ ತತಿಯುಂ ||

ಅಷ್ಟಮಂಗಲಂಗಳವಾವುವೆಂದೊಡೆ

|| ಕ || ಕಲಶಾತ ಪತ್ರ ಚಾಮರ
ವಿಸದ್
ಭೃಂಗಾರ ಸುಪ್ರತಿಷ್ಟಕ ಕೇತೂ
ಜ್ವಲ ಮುಕುರ ವೀಜನಂ ಮಂ
ಗಲಮೆಂದಿವು ಬೇಱೆ ಬೇಱೆ ನೋಱೆಂಟಕ್ಕುಂ ||

ದೇವಚ್ಛಂದಮಂದತಿ
ಭೂವಿಶ್ರುತ ಜೈನವಾಸ ಮಧ್ಯಾವನಿಯೊಳೂ
ಸೌವರ್ಣ್ನ ರಜತಂಗ
ಳ್ಪಾವನತರ ವಿವಿಧ ರತ್ನತತಿ ಖಚಿತಂಗಳೂ ||

|| ವ || ಮೂವರ್ತ್ತಿಚ್ಛಾಸಿರ (೩೨,೦೦೦) ಪೂರ್ಣ್ನ ಕಲಶಂಗಳತ್ಯಂತ ಮನೋಹರಂಗಳಾಗಿಪ್ಪಉ ಮತ್ತಮಲ್ಲಿಂ ಮುಂದೆ ಮಹಾದ್ವಾರೋಭಯ ಪಾರ್ಶ್ವದೊಳಂ ಪೃಥಸ್ಪೃಥತ್ಕನಕ ರಜತಮಯಂಗಳುಂ ಕರ್ಪ್ಪೂರ ಕಾಳಾಗರು ಗೋಶೀರ್ಷ ಸುರಭಿ ಧೂಪ ಧೂಮಾಢ್ಯಂಗಳಪ್ಪ ದ್ವಾದಶ ಸಹಸ್ರ ೧೨,೦೦೦ ಧೂಪ ಘಟಂಗಳೊಪ್ಪುತಿಪ್ಪುವಾ ದ್ವಾರ ಬಾಹ್ಯುಭಯ ಪಾರ್ಶ್ವದೊಳಂ ಪ್ರತ್ಯೇಕಂ ಚತುಃ ಸಹಸ್ರ ೪,೦೦೦ ಚತುಸಹಸ್ರ ೪,೦೦೦ ರತ್ನಮಾಲೆಗಳತ್ಯಂತ ಮನೋಹರಂಗಳಾಗಿ ಲಂಬಿಸುತಿರ್ಪ್ಪುವವಱೆಡೆಯೊಳ್ಪುರಃ ಕಿರಣ ಭಾಸುರಂಗಳಪ್ಪ ದ್ವಾದಶ ಸಹಸ್ರ ೧೨,೦೦೦ ದ್ವಾದಶ ಸಹಸ್ರ ೧೨,೦೦೦ ಸುವರ್ಣ್ನ ಮಾಲೆಗಳೊಪ್ಪುತಿರ್ಪ್ಪವು | ಮತ್ತಂ ಮುಖಮಂಟಪದೊಳು ಚೈತ್ಯಾಲಯ ದ್ವಾರಾಗ್ರ ಭೂಮ್ಯಾಭಯ ಪಾರ್ಶ್ವದೊಳ್ಪ್ರತೈಕ ಮಷ್ಟಸಹಸ್ರಾ ೮,೦೦೦ ಅಷ್ಟ ಸಹಸ್ರ ೮,೦೦೦ ಕನಕ ಕಲಶಂಗಳುಂ | ತತ್ಪ್ರಮಾಣ ಸುವರ್ಣ್ನ ಮಾಲೆಗಳುಮನಿತೆ ಮಾಲೆಗಳುಮನಿತೆ ಧೂಪ ಘಟಂಗಳುಂ | ನೇತ್ರಾನಂದಕಾರಿಯಗಳಾಗಿರ್ಪ್ಪವು | ಮತ್ತಂ ಮುಖಮಂಡಪ ಮಧ್ಯ ಪ್ರದೇಶದೊಳ್ಮಧುರ ಝಣ ಝಣ ನಿನಾದ ಮುಖರಂಗಳುಂ ಮೌಕ್ತಿಕ ಮಣಿ ಖಚತಂಗಳುಂ ಕಿಂಕಿಣಿ ಸಹಿತಂಗಳುಂ ನಾನಾ ರಚನಾ ಯುಕ್ತಂಗಳುಮಪ್ಪ ವಿವಿಧ ಗಂಟಾಜಾಲಂಗಳು ನವರತ್ನ ಶೋಭಾಕರಂಗಳಾಗಿರ್ಪ್ಪವು

|| ಕ || ಅನುಪಮ ಮುಖ್ಯ ದ್ವಾರ
ಕೈನಿತನಿತು ವಿಧಾನಮುಕ್ತಮಾಯ್ತನಿತನಿತುಂ
ಜಿನಗ್ರಹದ ದಕ್ಷಿಣೋತ್ತರ
ತನು ಸದ್ವಾರ ದ್ವಯಕ್ಕಮಕ್ಕರ್ದ್ದಾರ್ದ್ಧಂ ||

ವಸತಿಯ ಪಶ್ಚಿಮ ಭಾಗದೊಳೆಸೆವುವು ಮಣಿಮಾಲೆಗಳ್ದಷ್ಟ ಸಹಸ್ರಂ ೮,೦೦೦ ಮಿಸುಗುವ ಸುವರ್ಣ್ನ ಮಾಲೆಗಳೆಸವುವು ಸತತಂ ತ್ರಿತಾಡಿತಾಷ್ಟ ಸಹಸ್ರಂ || ೨೪,೦೦೦ ||

ಜಿನ ಗೃಹದೀರ್ಗ್ಘ ವ್ಯಾಸಂ
ಜಿನ ವ್ಯಾಸಂ ಜಿನಭವನ ದ್ವಾರಸದೃಶ ತುಂಗತ್ವಂ
ಜಿನವಾಸದ ಮುಂದೊಪ್ಪುವು
ದನಿಶಂ ಮುಖ ಮಂಡಪಂ ಜನಾನಂದಕರಂ ||

ಕ್ರೋಶಯುಗಮದಱ ಗಾಢಂ
ನಾಶವಿರಹಿತಂ ವಿಚಿತ್ರ ರತ್ನಮಯಂ
ಆಸುರ ಕಂಪಿನ ಕೇತನ
ಭಾಸುರ ಶಶಿವದನ ಮಂಟಪಂ ಕಣ್ಗೆಸಗುಂ ||

|| ವ || ಮತ್ತಂತಃಪುರಭೋಗದೊಲು ಶತಯೋಜನ ೧೦೦ ವಿಸ್ತಾರಮುಂ | ಸಾಧಿಕ ಷೋಡಷ ೧೬ ಯೋಜನಮುತ್ಸೇದಮುಂ | ಸಮ ಚತುರಸ್ರಮುಮಪ್ಪ ಪ್ರೇಕ್ಷಣಾ ಮಂಡಪ ಮಿಪ್ಪುದದಱ ಮುಂದೆ ಯೋಜನ ೨ ದ್ವಿತಯೋತ್ಸೇದಮುಮಷ್ಟ ಶಿತಿ ೮೦ ಯೋಜನ ವಿಸ್ತಾರಮುಂ ಸಮಚತುರಸ್ರಮು… (ತ್ರುಟಿತ) ಸುವರ್ಣ್ನಮಯ ಪೀಠಮಿಪ್ಪುದದಱಮಧ್ಯ ಪ್ರದೇಶದೊಳು ಚತುಃಷಷ್ಟಿ ೬೪ ಯೋಜನ ವ್ಯಾಸ ವ್ಯಾಸಮುಂ ಷೋಡಶ ೧೬ ಯೋಜನೋತ್ಸೇದಮಂ ಸಮಚತುರಸ್ರಮುಮಪ್ಪ ರತ್ನಮಯ ಸಭಾಮಂಟಪಮಿರ್ಪ್ಪುದದಱೊಳುತ್ಕೃಷ್ಟ ರತ್ನಮಯಂಗಳುಂಮತ್ಯಂತ ಮನೋಹರಂಗಳುಮಪ್ಪ ಸಿಂಹಾಸನ ಭದ್ರಾಸನಾದಿನಾನಾ ವಿಧಾಸನಂಗಳಿರ್ಪ್ಪುವು ಮತ್ತಂ ತದಾಸ್ಥಾನ ಮಂಟಪ ಪುರೋಭಾಗದೊಳು ಚತುರ್ಗ್ಗೋಪುರೋಪ ಶೋಭಿತ ದ್ವಾದಶಾಂಬುಜ ವೇದಿಕಾ ಪರಿವೃತಮುಂ ಚತ್ವಾರಿಂಶ ೪ ದ್ಯೋಜನೋತ್ಸೇಧಮುಂ ಸರ್ವ್ವಜ್ಞಾ ಲೋಕಿತಮುಂ ನಾನಾ ರತ್ನಮಯಮುಮಪ್ಪ ಸ್ತೂಪ ಪೀಠಮಿರ್ಪ್ಪುದಾ ಪೀಠದ ಮಧ್ಯ ಪ್ರದೇಶದೊಳ್ಚತುಃ ಷಷ್ಟಿ ೬೪ ಯೋಜನೋತ್ಸೇಧವ್ಯಾಸಾಯಾಮಾಮುಂ ತ್ರಿಮೇಖಲೋಪಿತ ಶೋಭಿಮುಂ | ನಾನಾ ರತ್ನಮಯಮುಮಪ್ಪ ಸ್ತೂಪಯಿಪ್ಪುದದಮೆಂತಪ್ಪುದೆಂದೊಡೆ

|| ಕ || ಛತ್ರಚೌಮರೋಪಯುಕ್ತಂ
ಚಿತ್ರಾಮಲ ರತ್ನ ಕಿರಣ ನಿರಸಿತ ತಿಮಿರಂ
ನೇತ್ರಾನಂದ ಕರಂ ಸುಪ
ವಿತ್ರಾರ್ಹತ್ಸಿದ್ದ ಬಿಂಬ ನಿಚಿತಮನಿನದಂ ||

|| ವ || ಅಂತೆಸೆವಾ ಸ್ತೂಪಿಯ ಮುಂದೆ ಮುಂದೆ ಪೂರ್ವೋಕ್ತ ಸರ್ವ ಲಕ್ಷಣ ಸಮೇತಂಗಳಪ್ಪಷ್ಟ ಸ್ತೂಪಿಗಳಿರ್ಪ್ಪುವವಱ ಮುಂದೆ ಸಹಸ್ರ ೧,೦೦೦ ಯೋಜನ ವ್ಯಾಸಾಯಾಮಮುಂ | ಜಿನದೃಷ್ಟೋತ್ಸೇಧಮುಂ | ಚತುರ್ಗ್ಗೋಪುರೋಪಶೋಭಿತ ದ್ವಾದಶ ವೇದಿಕಾ ಪರಿತಮುಮಪ್ಪ ಹೇಮಮಯ ಪೀಠಮುಮಿಪ್ಪದದಱ ಮಧ್ಯದೊಳ್ಚತು ೪ ಯೋಜನ ದುತ್ಸೇದ್ಯಕ ಯೋಜನ ೧ ವ್ಯಾಸ ಸ್ಕಂಧಂಗಳುಂ ನಾನಾ ರತ್ನಮಯಂಗಳುಂ ಸಾಲತ್ರಯಾಭಿರಾಮಂಗಳುಂ | ೧೨ ದ್ವಾದಶ ೧೨ ಯೋಜನಾಯತ ಚತುರ್ಮ್ಮಹಾ ಶಾಖಾ ಶೋಭಿತಂಗಳುಮನೇಕ ತನು ಶಾಖಾ ರಂಚಿತಂಗಳುಂ | ದ್ವಾದಶಯೋಜನ ಶಿಖರವಿಸ್ತಾರಂಗಳುಮ ವಿಂಶತ್ಯುತ್ತರ ಶತ ಸಮಧಿಕ ಚತ್ವಾರಿಂ ಶತ್ಸಹಸ್ರಾಣಿತಯಕಲಕ್ಷ ೧,೪೦,೧೨೦ | ಪರಿವಾರ ವೃಕ್ಷ ಸಹಿತಂಗಳುಂ | ನಿಜ ನಿನಮೂಲ ಚತುರ್ದ್ದಿರ್ಗ್ಗತ ಪೀಠಾಗ್ರೋಪವಿಷ್ಟ ಮಣಿಮಯ ಚತುಚ್ಚತುಸ್ಸಿದ್ಧ ಜಿನ ಪ್ರತಿಮಾ ವಿರೋಜಿತಂಗಳುಮಪ್ಪ ಸಿದ್ಧಾರ್ತ್ಥ ಚೈತ್ಯನಾಮ ವೃಕ್ಷಂಗಳೆರಡಿರ್ಪ್ಪುದಾ ವೃಕ್ಷಂಗಳೆಲ್ಲಮೆಂತಪ್ಪವೆಂದೊಡೆ

|| ಕ || ನಿರುಪಮ ಮಣಿಮಯ ಶಾಖಾ
ಭರಣಗಳ್ಮರಕತಮಯೋರು ಪತ್ರೋತ್ಕರಗಳು
ವರಪದ್ಮರಾಗ ಫಲಗ
ಳ್ಸುರುಚಿರ ತಪನಿಯ ರಜತಮಯ ಕುಸುಮಂಗಳೂ ||

ತರುನಿಕರಂಗಳವೆಲ್ಲಂ
ಸುರುಚಿರ ಪೃಧ್ವಿಮಯಂಗಳತಿ ಕಾಂತಂಗಳು
ವಿರಹಿತನಿದನಾದ್ಯಂಗ
ಳ್ನಿರಂತರಂ ಶೋಭೆವೆತ್ತು ರಂಜಿಪುವಾದಂ ||

ಆ ತರುಗಳ ಮುಂದೆಸಗುಮ
ದೇಂ ತೊದಳೊಹೇಂಪೀಠಮತಿ ರಮಣೀಯಂನ
ಮಿತಾ ದೋಷೋತ್ಕರ
ಪೂತ ಜಿನಾಲೋಕಿತೋಚ್ಚ ದೀರ್ಗ್ಘ ವ್ಯಾಸಂ ||

|| ವ || ಮತ್ತಂ ಚಯ್ಯಾಟ್ಟಳಕ ಗೋಪುರ ದ್ವಾರಮಣಿ ತೋರಣೋಪಯುಕ್ತ ದ್ವಾದಶ ವೇದಿಕಾ ಪರಿತಮಪ್ಪ ತತ್ಪೀಠದೊಳು ಷೋಡಶ ೧೬೦ ಯೋಜನೋತ್ಸೇಧಂಗಳು | ಯೋಜನ ಚತುರ್ತ್ಥಾಂಶ ೧೪ ವಿಸ್ತಾರಂಗಳು ಸುವರ್ಣ್ನ ಮುಖಂಗಳುಮಪ್ಪಸ್ತಂಭಗಳ ಮೇಲೆ ಗಂಟಾ ಟಣತ್ಕಾರ ಮುಖಂಗಳುಂ | ರತ್ನತ್ರಯ ಚಾಮರೋಪ ಶೋಭಿತ ಶಿಕರಂಗಳುಂ | ನಾನಾ ರತ್ನಮುಖಂಗಳುಮಪ್ಪ ಮಹೀಂದ್ರ ನಾಮ ಮಹಾ ಧ್ವಜಂಗಳೊಪ್ಪತಿಪ್ಪುವವಱ ಮುಂದೆ

|| ಕ || ಅನುಪಮ ಮಣಿಮಯ ಭಿತ್ತಿ ಕ
ಮನ ಇದ್ಯುತಿ ಪದ್ಮರಾಗ ಮಣಿಮಯ ಕಳಸಂ
ಜನ ನಯನಾನಂದಕರಂ
ಜಿನ ಭವನಂ ಮಱೆಉದಾದಿನಿದನ ವಿಹೀನಂ ||

|| ವ || ಅಂತೆಸೆವಾ ಜಿನಾಲಯದ ನಾಲ್ಕು ದಿಕ್ಕುಗಳೊಳ್ನಾಲ್ಕು ವಾಪಿಗಳಿಪ್ಪುವವೆಂತೆಂದೊಡೆ

|| ಕ || ದಶ ೧೦ ಯೋಜನ ಗಾಢಂಗಳ್
ದಶ ೧೦ ಸಂಗುಣ ಪಂಚ ೫೦ ಯೋಜನಂ ವ್ಯಾಸಂಗಳು
ದಶ ಸಂತಾಡಿತ ಯೋಜನ
ದಶ ೧೦೦ ಮಿತಥೆಗ್ಘ್ಯಂಗಳತುಳಮಣಿ ವೇದಿಕೆಗಳೂ ||

ಆಕಲುಷ ಜಲಭರಿತಂಗ
ಳ್ವಿಕಚೋತ್ಪಲ ಪುಂಡರೀಕ ರಕ್ತಾಂಬೋಜ
ಪ್ರಕರಕಲ್ಪಾರ ಸುರಖಿತ
ಸಕಲಾಶಾ ಭಿತ್ತಿಗಳ್ವಿರಾಜಿಪವನೀಶಂ ||

|| ವ || ಅಂತೆಸೆವ ಪಾಪಿಗಳಿಂ ಮುಂದೆ ವಿದ್ಯುಜಯ ಪಾರ್ಶ್ವದೊಳಂ ಪಂಚಾಶ ೫೦ ದ್ಯೋಜನೋತ್ಸೇದಮುಂ ಪಂಚವಿಂಶತಿ ೨೫ ಯೋಜನಾವ್ಯಾಸಮುಂ | ರತ್ನಮಯಮುಮಪ್ಪ ದೇವ ಕ್ರೀಡಾ ಪ್ರಸಾದ ದ್ವಯಮಿಪ್ಪುದಲ್ಲಿಂ ಮುಂದೆ ಪಂಚಾಸದ್ಯೋ ೫೦ ಜನೋತ್ಸೇದ ಮುಂ ಪಂಚ ವಿಂಶತಿ ೨೫ ಯೋಜನ ವ್ಯಾಸಮುಮಪ್ಪ ಮಣಿ ತೊರಣಮೊಪ್ಪುತಿಕ್ಕುಂ

|| ಕ || ಅದು ಸ್ತಂಭ ಸ್ತಿತ
ಮದುನಿಸ್ತುಲ ಮೌಕ್ತಿಮಾಂಚಿತಮಂ
ತದು ಘಂಟಾ ಜಾಲಯುತಂ
ಸದಮುಲ ಜಿನ ಬಿಂಬ ವೃಂದ ರಮಣೀಯತರಂ ||

|| ವ || ಅಂತೆಸೆವ ತೊರಣದ … ಗದೊಳು

|| ಕ || ಅತಿಶಯ ಮಣಿ ಸಂಘಟಿತಂ
ಶತ ಯೋಜನ ೧೦೦ ತು.ಗ…. ೫ ವ್ಯಾಸ
ಯತಮಪ್ಪ ಪ್ರಾಸಾದ
ದ್ವಿತಯಂ ಕಡು ಶೋಭೆವೆತ್ತು ರಂಜಿಸುತಿಕ್ಕುಂ ||

|| ವ || ವದನಾಲೋಕನ ಮುಂಡಪಾದಿಗಳ ಮಾನಂ ಪ್ರೋಕ್ತಮಾದತ್ತು ಪೂರ್ವ್ವದ್ವಾ
ರದ ಮುಂದೆ ತತ್ಸಕಲಮರ್ದ್ದಂ ಕ್ಷುಲ್ಲಕ ದ್ವಾರಯು
ಗ್ಯದ ಮುಂದಿಕ್ಕುವುವೆಲ್ಲಮಂ ಬಳಸಿ ಹೈಮಮಿವೇ … ಶೋಭೆಗಾ
ಸ್ಪದಮಾಗಿಪ್ಪುದು ನಾಡೆ ನೋಳ್ವರಿಗೆ ನೇತ್ರಾನಂದಮಂ ಮಾಡುತಂ ||

|| ವ || ಅಂತೆಸೆವ ವೇದಿಕಾ ಪುರೋಭಾಗ ದೊಳೊ

|| ಕ || ಕನಕ ಮಣಿ ಸ್ತಂಭಾಗ್ರೌದೊ
ಳನಿಸಂ ಶೋಭಿಪವು ನಾಡೆ ನಾಲ್ದೆಸೆಗಳೊಳಂ
ನಿ….. ಗಳ್ದಶ ವಿಧಕೇ
ತನಗಳ್ಪರ ಚಾಮರಾತಪತ್ರ ಯುತಂಗಳೂ ||

ಆವಾವುವೆಂದೊಡೆ

|| ಕ || ಕರಿಹರಿ ವೃಷಭ ಶಿಖಿ ಶಶಿ ರವಿ
ಸರಸಿರುಹ ಚಕ್ರಹಂನ ಗರುದಧ್ವಜಗಳುಮೊಪ್ಪುವ
ದರ ವೊಂದೊಂದೊಂದಷ್ಟೋ
ತ್ತರ ಶತ ೧೦೦ ಸಂಖ್ಯಂ ದಲಕ್ಕುಮವಱೊಳ್ಮತ್ತಂ ||

|| ವ || ವೊಂದೊಂದು ಮಹಾಧ್ವಜಕ್ಕೆ ೧೦೮ ನೂಱೆಂಟು ಪರಿವಾರ ಧ್ವಜಂಗಳಕ್ಕುಮವೆಲ್ಲವಂ ವೇಷ್ಟಿಸಿ

|| ಕ || ಕನಕಮಯವೇದಿಯೊಪ್ಪುಗು
ಅನುಪಮ ಮಣಿಗೋಪುರ ಧ್ವಜೋತ್ಕರದಿಂ ಯೋ
ಜನಯುಗಂ ೨ ತುಂಗತೆಯುಂ ಯೋ
ಜನದ ಚತುರ್ಬ್ಭಾಗ ಮಿತ ವಿಶಾಲತೆಯಿಂದಂ ||

ವ || ಅಂತೆಸೆವ ವೇದಿಕೆಯಂ ಬಳಸಿಯಶೋಕ ಸಪ್ತದಚಂಪಕ ಚೂತವನವೆಂಬ ನಾಲ್ಕುಂ ವನಂಗಳಿಪ್ಪುವವಱೊಳು

|| ವೃ || ಮರಕತ ಪತ್ರ ಸಂತತಿ ಸುಕಾಂಚನ ಪುಷ್ಟ ಸಮೂಹ ಶೋಭಿಗ
ಳ್ಸುರಚಿರಮಪ್ಪ ವಿದ್ರುಮಸುಶಾಖೆಗಳುತ್ತಮ ಪದ್ಮರಾಗ ಭಾ
ಸುರ ಫಲಭಾರಗಳಶ ವಿಧಾಮರ ಭೂಮಿಜ ರಾಜಿಗಳ್ನಿರತಂ
ತರಮುಮವರೋತ್ಕರಕ್ಕೆ ಸಲೆ ಮಾಳ್ಪುವು ನೇತ್ರಮನೋನುರಾಗಮಂ ||

ವ || ಮತ್ತಮಾ ನಾಲ್ಕುಂ ವನಂಗಳ ಮಧ್ಯ ಪ್ರದೇಶಂಗಳ್ಸಾಲತ್ರಯ ಪೀಠತ್ರಯೋಪಶೋಭಿತಂಗಳುಂ | ಚತುರ್ದ್ದಿಗ್ಮೂಲ ಗತಾಷ್ಟಮಹಾ ಪ್ರಾತಿಹಾರ್ಯ್ಯ ಸಮೇತಪರ್ಯ್ಯಂಕಾಶನಸ್ತಿತ ಜಿನ ಪ್ರತಿಮಾಭಿರಾಮಂಗಳುಂ ರತ್ನಮಯಸ್ಕಂದ ಶಾಖಾ ಪತ್ರ ಪಲೋಪ ಶೋಭಿತಂಗಳುಂಮಪ್ಪ ಚೈತ್ಯ ವೃಕ್ಷಂಗಳತ್ಯಂತ ಮನೋಹರಂಗಳಾಗಿಪ್ಪುವು ಮತ್ತಮಾವನ ಭೂ ಪ್ರಣಿಧಿ ಚತುರ್ವ್ವೀಧಿ ಮಧ್ಯದೊಳು

|| ವೃ || ಮಾನಸ್ತಂಭಂಗಳೊಂದೊಂದನಣು ಮಣಿಮಯಂಗಳ್ಲಸಚ್ಛತ್ರಕೆ ತ್ಪ
ನ್ಯೂನಮೆಯೊಲ್ಲ ಸತ್ಕಿಂಕಿಣಿ ಚಮರಜ ಘಂಟಾನ್ವಿತಂಗಳ್ಚತುರ್ದ್ದಿ
ಗ್ದೈನಾರ್ಚ್ಛನಾ ಶೋಭಿತಂಗಳ್ಸುರಚಿರ ಮಣಿಪೀಠತ್ರಯಾಗ್ರ ಸ್ಥಿತಂಗ
ಳ್ಪೇನೊಚ್ಚಂಗಳ್ನಿತಾಂತಂ ಸೊಗಯಿಸುವನಾದ್ಯಂತ ರೂಪಂಗಳೆಂದುಂ ||

|| ವ || ಅಂತತಿ ರಮಣೀಯವಾದ ವನ ಭೂಮಿಯಂ ಪರಿವೇಷ್ಟಿಸಿ

|| ವೃ || ನಾನಾ ರತ್ಯಮಯಂ ಮನೋಹರತರಂ ಸಾಲಂಕರಂ ರಂಜಿಕ್ಕುಂ
ನಾನಾ ಕೇತನ ಪಂಕ್ತಿಯಿಂದಮುರು ಚರ್ಯ್ಯಾಟ್ಟಳಕಾನೀಕದಿಂ
ನಾನಾತ್ಯುಂನತ ರಮ್ಯ ಗೋಪುರ ಚತುರ್ದ್ವಾರಂಗಳಿಂ ಸಂತತಂ
ನಾನಾ ರತ್ನ ಕದಂಬ ಭೂರಿ ಕಿರಣ ಪ್ರೋದ್ಭಾಸಿತಾಶಾಮುಖಂ ||

|| ವ || ಅಂತು ನಾನಾ ವಿಧ ಪರಿಕರಂಗಳಿಂದೊಪ್ಪುತಿಪ್ಪ ಜಿನ ಭವನಂಗಳೊಳೂ

|| ವೃ || ಜಲದಿಂ ಗಂಧದಿಂ ನಕ್ಷತ್ರೌಘುದಿ ಲತಾಂತಾನಿಕದಿಂ ಸಂತತಂ
ವಿಲಸಚ್ಛಾರು ನಿವೇದ್ಯದಿಂನಘತಮೋನಿರ್ನ್ನಾಶಿ ದೀಪಂಗಳಿಂ
ಕಲಿತಾನೂನ ಸುಗಂಧಧೂಪದಿನಮೆಯಾತ್ಯಂತ ಸೌರಭ್ಯ ಸ
ತ್ಪಲ ಸಂದೋಹದಿನರ್ಚ್ಚಿಸಿ…. ರಂ ದೇವರ್ಕ್ಕಳಾನಂದದಿಂ ||

ಭವನ ವೆಂತರ ದೇವ ಕಾಮಿನಿಯರುಂ ಜ್ಯೋತಿಷ್ಕ ದೇವಾಂಗನಾ
ನಿವಹಂಕಲ್ಪ ಸುರಾಗನಾ ವಿತತಿಯುಂ ತಜ್ಜೈನ ವಾಸಂಗಳೊ
ಳ್ಭವ ವಿದ್ವಂಶಿ ಜಿನೇಂದ್ರವನಮಂ ಸದ್ಗೀತದಿಂ ಪಾಡುತಂ
ವಿವಿಧಾಶ್ಚರ್ಯ್ಯ ಸುಭಂಗಿಂ… ಯಿಸುತ್ತಿರ್ಪ್ಪರ್ಮ್ಮಹೋತ್ಸಾಹದಿಂ ||

ಮತ್ತಂ

|| ವೃ || ಭೇರಿ ಮರ್ದ್ಧಳೆ ತಾಳ ಶಂಖ ಕಹಳಾ ವೀಣಾದಿ ವಾದ್ಯಂಗಳಂ
ಪಾರಾ ವಾರ ಗಭೀರ ಭೂರಿತರ ನಾದಂ ಪೊಣ್ಮೆ ದೇವರ್ಕ್ಕಳ್

ಚಾರುಶ್ರೀ ಜಿನಮಂದಿರಂಗಳೊಳು ನಿಚ್ಚಂ ಬಾಱಿಸುತಂತೆ
ವೊಳ್ಪಸೆವುತ್ತತಿ ಭಕ್ತಿಯಿಂ ನುತಿಸುತಿರ್ಪ್ಪರ್ಜ್ಜಿನಾಧೀಶ್ವರನಂ ||

|| ವ || ಅಂತತ್ಯಂತ ಶೋಭಾಕರಂಗಳುಂ ತ್ರೈಲೋಕ್ಯಾಶ್ಚರ್ಯ್ಯ ಕರಂಗಳುಮಪ್ಪ ಚೈತ್ಯಾಲಯಂಗಳ್ಗೆ ಪ್ರತಿವರ್ಷಮಾಷಾಢ ಕಾರ್ತ್ತಿಕ ಫಾಲ್ಗುಣ ಮಾಸಂಗಳೊಳ್ಸಾ ಧರ್ಮ್ಮದೀನ ನಾದಿ ದ್ವಾದಶ ವಿಧ ಕಲ್ಪಾ… ಪ್ರ ವೈಮಾನಿಕ… ತ್ರಯಾಮರ ಸ್ತೋಮನ್ವಿತರುಂ ಕರಿ ತುರಗ ಹರಿ ವೃಷಭ ಸಾರಸ ಪಿಕ ಹಂಸ ಕೋಕ ಗರುಡ ಮಕರ… ಕಮ.. ಪು ಱ್ವಕವಿಮಾನಾದಿ ವಾಹನಾರೂಢರುಂ ದಿವ್ಯ ಫಲ ಪುಷ್ಪಾಂಕಿತ ಹಸ್ತರುಂ ಪ್ರಶಸ್ಥ ವಸ್ತ್ರಾಭರಣ ಭೂಷಿತರುಂ | ವಿವಿಧ ಧ್ವಜಚ್ಛತ್ರ ಚಾಮರಾದಿ ವೈಭವಾಂನ್ವಿತರುಂ ನಾನಾವಿಧ ವಾದ್ಯಾರಾವ ಬದರೀಕೃತ ಧಿಕ್ಕರಿ ಕರ್ಣ್ನ ಕುಹರರುಮಾಗಿ ಬಂದಷ್ಟಮಿ ಪ್ರಭೃತಿ ಪೂರ್ಣ್ನಮೀ ಪರ್ಯ್ಯಂತಂ | ನಿಜ ನಿಜಾಮರ ಸಮಿತಿ ವೆರಸು ಸೌಧರ್ಮ್ಮೈಶಾನ ಚಮರ ವೈರೋಚನೇಂದ್ರಪ್ಪೂರ್ವ್ವಾಪರ ದಕ್ಷಿಣೋತ್ತರ ದಿಕ್ಕುಗಳೊಳ್ಪ್ರತಿ ದಕ್ಷಿಣ ಕ್ರಮದಿಂದೆರಡು ಜಾವಂಬರಮೈಂದ್ರಾದಿ ಧ್ವಜಾದಿ ಮಹಾಪೂಜೆಗಳಂ ಮಾಳ್ಪರೆಂದರಿಂಜಯ ಮಹಾಮುನೀಶ್ವರಂ ನಂದೀಶ್ವರ ದ್ವೀಪ ಚೈತ್ಯಾಲಯಸ್ವರೂಪಮಂಸವಿಸ್ತರಮಾಗಿ ಪೇಳ್ದನಂತರಮಾ ನೋಂಪಿಯ ಸ್ವರೂಪಮನಿಂತೆಂದು ಪೇಳ್ದರದೆಂತೆಂದೊಡೆ

|| ಕ || ಮುದದಿಂ ನೋಂಪವರಾಷಾ
ಢದ ಸಿತ ಸಪ್ತಮಿಯೊಳಾಗಿ ಶುಚಿಗಳ್ಮಧ್ಯಾ
ಹ್ನದೊಳಿರದೆ ಚೈತ್ಯವಾಸ
ಕ್ಕೊದವಿದ ಭಕ್ತಿಯೊಳೆ ಬಂದು ತಜ್ಜಿನ ಗೃಹಮಂ ||

|| ವ || ತ್ರಿಃ ಪ್ರದಕ್ಷಿಣಂಗೆಯ್ದು ಪಾದ ಪ್ರಕ್ಷಾಲನಂ ಮಾಡಿ ನಿಷಿಧಿಯೆಂದೊಳಗಂ ಪೊಕ್ಕು ಅನಂತ ಚವಿ (ದು)ರ್ಲ್ಲಭ ಜಿನಮುಖ ದರ್ಶನ ಸಂಜಾತಾನಂದಾಶ್ರುಜಲ ವಿಲುಳಿತ ಲೋಚನರುಂ ಕರಕಮಲ ಮುಕುಲಾಂಕಿತ ಬಾಲಸ್ತಲರುಮಾಗಿ

|| ವೃ || ಜಯ ದೇವ ಶರಣಾಗತ ರಕ್ಷಕ ಭವ್ಯ ಬಂಧು ದು
ರ್ಜಯಮದನೇಭ ಪಂಚಮುಖದೊ ಗತಿದೂರ ಹತಿ ಕರ್ಮ್ಮ ಸಂ
ಚಯಿರಿಪ್ರಹಾರಿ ಜಲ್ಮಶಿಖಿವಾರಿ ನಿರತ್ಯಯ ನಿರ್ವ್ವೈಪೇಕ್ಷ ನಿ
ರ್ಭಯ ಕೃಪೆಯಿಂದ ನಿಂನಚಲ ಸೌಖ್ಯಮನೀಯೆನಗಂ ಜಿನೇಶ್ವರಾ ||

|| ಕ || ಶ್ರೀ ಮುಖ ದರ್ಶನಮಾಡಲ್
ಶ್ರೀ ಮುಖದರ್ಶಮದಕ್ಕುದಿರದಿಂ ನಿಂನೀ
ಶ್ರೀ ಮುದರುಷನ ದೂರಂ
ಶ್ರೀ ಮುಖದರ್ಶನಿ ವಿದೂರನಕ್ಕುಂ ಜಿನಪಾ ||

|| ವ || ಯೆಂದಿವು ಮೊದಲಾದ ಸ್ತುತಿ ಸಹಸ್ರಂಗಳಿಂ ಜಿನೇಂದ್ರ ಸ್ತವನಂಗೆಯ್ದು ತದನಮತರಂ || ತ್ರೋಟಕ ದ್ವಯಂ ||

ಅಭಿಷೇಕ ಪೂಜೆಯ ಮಾಡಿ ಜಿನರಿಗೆ ಭವಾಂಬುಧಿ ಪೂತಗೆಸದ್ವಿದಿಯಿಮ
ದಿಭು ಜೈನಮುಖೋದ್ಭವ ಭಾರತಿಯಂ ಶುಭ ಚಿತ್ತದಿ ಪೂಜಿಸಿ ಸದ್ಗುರುವಂ ||

ಮುನಿ ವೃಂದಕೆ ಭೂರಿ ಸುಭಕ್ತಿಯಿಂದಂ ವಂದನೆಯಂ ಸಲೆ ಮಾಡಿಯನು ಕ್ರಮದಿಂ
ಮುನಿವರ್ಯ್ಯನ ಮುಂದಕೆ ಬಂದು ಮಹಾ ವಿನಯಾನತ ಮಸ್ತಕರಾಗಲೊಲವಿಂ ||

|| ವ || ದಿಗ್ಘ್ರತ ದೇಶವ್ರತಾದಿ ವ್ರತಂಗಳುಮನೇಕಭುಕ್ತ ಪೂರ್ವ್ವಕಮಾಗಿಯಾ ನೋಂಪಿಯುಮಂ ಕೈಕೊಂಡು ನಿಜ ನಿಜಾವಾಸಕ್ಕೆ ಬಂದು