ಜಿನಾಧೀಶಮಹಂ ನತ್ವಾವಕ್ಷೆ ನಿರ್ದ್ದುಃಖ ಸಪ್ತಮಿಂ
ಕಥಾ ಭವ್ಯಜನಾನಂದಕಾರಿಣಂ ಮೋಕ್ಷಲಿಪಯಾ ||

          ಜಿನನಿಗೆಱಗಿ ಪೇಳ್ವೆನೊಲವಿಂ
ದನುಪಮ ನಿರ್ದ್ದುಃಖ ಸಪ್ತಮಿಯ ಸತ್ಕಥೆಯಂ
ಜಿನನತಿ ಹಿತಮಂ ನುತಮಂ
ಜನನ ಜರಾಮರಣ ಹರಣ ಕಾರಣಮದಱಿಂ ||

|| ವ || ಅದೆಂತೆಂದೊಡೇ ಜಂಬೂದ್ವೀಪದ ಭರತ ಕ್ಷೇತ್ರದ ಆರ್ಯ್ಯಾಖಂಡದ ಮಗಧ ವಿಷಯದ ರಾಜಗೃಹ ನಗರಮನಾಳ್ವ | ಪರಮ ಜಿನ ಸಮಯ ಕ್ಷೀರವಾರ್ದ್ಧಿವರ್ದ್ಧನ ಸುಧಾಸೂತಿ ಮಂಡಲನುಂ ಖಂಡಿತಾರಾತಿ ಮಂಡಲನುಂ ನಿಜ ನಿರಂಜನನುಂ ಪರಮ ಸಮರಸ ಸ್ವಾದಕಾರಕ್ಷಣ ಕ್ಷಾಯಿಕ ಸಮ್ಯಕ್ತ್ವ ರತ್ನಾಕರನುಂ ಮುನಿಚರಣ ಯುಗಲ ಕಮಲ ಲೋಲಂಬನೆನಿಸಿದ ಶ್ರೇಣಿಕ ಮಹಾಮಂಡಲೇಶ್ವರನಾತನ ಪಟ್ಟ ಮಹಿಷಿ ಜಿನ ಮುನಿಸೇವೆಯೇ ನದೆ ನುಡಿ ಗಲಿವಂತೆಯುಂ ಹಾವಭಾವ ವಿಲಾಸ ವಿಭಮಮಂಗಳಿಂ ರತಿ ಸಮಯ ಸೌಭಾಗ್ಯ ಭಾಗ್ಯೋದಯದಿಂ ಮಂಗಲೆಯೆನಿಪಳೀಕೆಯಗಾಡಿ ಪ್ರೌಢಿಯಿಂದುಮೆಯಗೆಲ್ದ ಪ್ರಾಣನಾಢನ ಚಿತ್ತ ವೃತ್ತಿಯೆ ಪೆಂಣಾದಂತೆಸೆವ ಚೇಳಿನಿ ಮಹಾದೇವಿಯಂತಿರ್ವ್ವರು ಮಹಾಮಂಡಲೇಶ್ವರ ಪದವಿಯಂ ತಾಳ್ದಿಷ್ಟಕಾಮ ಸುಖ ಸುಧಾಂಬುಧಿಯೊಳೋಲಾಡುತ್ತಲಿರ್ದ್ದೊಂದು ದಿವಸಂ | ಶ್ರೇಣಿಕಮಹಾರಾಜನೊಡ್ಡೋ ಲಂಗೊಟ್ಟಿರಲ್ಲಿಗೆಗಕಾಲ ಪುಷ್ಪ ಪುಷ್ಪ ಫಲಹಸ್ತಮಂ ಸಂತುಷ್ಟ ಚಿತ್ತ ದರಸಹಿತ ಪ್ರಸಂನ ವದನ ವನಜನುಂ | ಅತಿರಭಸಾಗಮನ ಜನಿತ ನಿಶ್ವೇದ ಜಲ ಹರಿತ ಸರ್ವ್ವಾಂಗವನ ವನಪಾಲಕಂ ಬಂದತಿ ದೂರದೊಳ್ಕರಕಮಲಂಗಳಂ ಮುಗಿದೆಲೆದೇವ ಯೆಂಮ ನಗರಿಗತಿ ದೂರಮಾದ ವಿಪುಲಗಿರಿಯ ಶಿಖರಮನಲಂಕರಿಸಿದ ವೀರ ಸ್ವಾಮಿಯ ಸಮವಸರಣಂ ಬಂದುದೆನಲಂಬೋಧರದಾಗಮನಮನಾಲಿಸಿದ ಮಯೂರನಂತೆ | ಕೆನೆವಾಲಂ ಕಂಡಂಚೆಯಂತೆ | ಚಂದ್ರನುದಯಮಂ ಕಂಡುಬುಧಿಯಂತೆ | ಪೆರ್ಚ್ಚಿ ಸಂತಸ ಗಡಲೊಳೋಲಾಡಿ ತಂನನೆ ಮಱದು ನಿಮಿಷಮಿರ್ದ್ದು ಪರಮಪುರುಷ ದರ್ಶನ ನೋತ್ಕಟೆಯೆಚ್ಚಱಿಸಲೆಚ್ಚತ್ತಾ ದೆಸೆಗೇಳಡಿಯಂ ನಡದಾನಂದ ಭೇರಿಯಂ ಪೊಯ್ಸಿ ಯೊಸಗೆದಂದಂಗಂಗ ಚಿತ್ತಮಂ ಕೊಟ್ಟಮಲತರ ಭಕ್ತಿಭರವಿನಮ್ರ ಮಸ್ತಕನಾಗಿ ಅತಿ ನಿರ್ಮ್ಮಲದಷ್ಟವಿಧಾರ್ಚ್ಚನಾ ದ್ರವ್ಯ ಸಮೇತಾನೇಕಾತೋದ್ಯ ನೃತ್ತಗೀತ ಸಮೇತ ಜಯ ಜಯ ನಿನಾದ ಮುಖ ಮುಕುರಿತ ಪುರಜನ ಪರಿಜವ ಸಮೇತನುಂ | ಚೇಳಿನಿ ಮಹಾದೇವಿವೆರಸಮರ ನಾಯಕಂ ಸಚಿವವೆರಸಮರ ಸಮರ ಗಜವನೇಱುವಂತೆ ವಿಜಯ ಗಜಮನಡರ್ದ್ದು ಬಂದತಿ ದೂರದೊಳು ಛತ್ರ ಚಾಮರಾದಿ ರಾಜಚಿಂಹ್ನಂಗಳಂ ಬಿಟ್ಟು ವಾಹನಮಂ ಪರಿಹರಿಸಿ ಪಾದ ಮಾರ್ಗ್ಗದಿಂ ಬಂದು ತರಣಿ ಮಂಡಲವನಂಡಲೆವ ಸಮವಸರಣಮಂ ಪೊಗುತ್ತ ಮುಂ ಧೂಳಿಸಾಲ ಮಾನಸ್ತಂಭ ಖಾತಿಕಾಪುಷ್ಟವಾಟಿ ಪ್ರಕಾರ ನಾಟ್ಯ ಸಾಲಾದಿ ತಯೋಪವನವೇದಿಕಾ ಧ್ವಜ ಪಟ್ಟಿ ಶಾಲಾಕಲ್ಪಾವನಿಜ ಸ್ತೂಪ ಹರ್ಮ್ಯ ಭೂಮಿಗಳಿಂದ ಪೊಳಗಣಸ್ಫಟಿಕ ಪ್ರಕಾರದೊಳಗಣ ಪಂನೆರಡು ಕೋಷ್ಯಮಂ ಕ್ರಮದಿಂ ನೋಡುತ್ತಂ ಸ್ವಾಮಿಯಂ ವದನೇಂದುವಂ ಕಾಣಲೊಡಂ ತತ್ಕರಕಮಲಂಗಳಂ ಮುಗಿಯೆ ನಯನ ಕುವಲಯಂ ಮಲರೆ ಪುಳಕ ಸಸ್ಯಾಂಕುರಮುಣ್ಮೆ ಪರಮಾನಂದ ವಾರಿಧಿ ಮೇಱೆಯಲ್ಲದೆ ಮೀಱೆ ಗಂಧ ಕುಟಿಯಂ ಮೂಮೆ ಬಲವಂದೂ

|| ಕ || ಜಯನಿರ್ಮ್ಮಲ ಕರ್ಮ್ಮಹರಾ
ಜಯ ನಿರ್ಮ್ಮದ ಕಾಮದಂತಿ ಮದಹರ ಸಿಂಹಾ
ಜಯ ಮುಕ್ತಿ ಕಾಂತೆಯರಸಾ
ಜಯ ರಕ್ಷಿಸು ವೀರ ಜಿನಪ ಕರುಣಾಧಾರಾ ||

ಯೆಂದಿಂತು ಸ್ತುತಿಗೆಯ್ದಷ್ಟವಿಧಾರ್ಚ್ಚನೆಯಿಂದರ್ಚ್ಚಿಸಿ ತ್ರಿಕರಣ ಶುದ್ಧಿ ಪೂರ್ವ್ವಕಂ ನಮಿಸಿ ಗೌತಮಿ ಗಣಧರರ್ಮ್ಮುಖ್ಯ ಮುನಿಸಮುದಾಯಮಂ ಬಂದಿಸಿ ಮನುಷ್ಯ ಕೋಷ್ಠದೊಳ್ಕುಳ್ಳಿರ್ದು ಗೌತಮಗಣಧರರ್ಬ್ಬೆಸಸೆ ನಿರ್ಮ್ಮಲ ಚಿತ್ತದಿಂ ಧರ್ಮ್ಮ ಶ್ರವಣಮಂ ಕೇಳಿ ತದನಂತರಂ ಚೇಳಿನಿಮಹಾದೇವಿ ಕರಕಮಲಂಗಳಂ ಮುಗಿದೆಲೆ ಸ್ವಾಮಿಯೆನಗಾವುದಾನೊಂದು ಸರ್ವ್ವದುಃಖಹರಣ ಕಾರಣವಾದದೊಂದು ನೋಂಪಿಯಂ ಬೆಸಸಿಮೆನಲವರಿಂತೆಂದರೆಲೆ ಮಗಳೆ ಸಾರ್ತ್ಥಕ ನಾಮಮಂ ತಾಳ್ದ ನಿರ್ದ್ದುಃಖ ಸಪ್ತಮಿಯಂ ನೋನಿಮೆನಲದ ನೋನುವ ಉಜ್ಜವಣೆಯ ಕ್ರಮಮಂ ಬೆಸಸಿಮೆನಲವರಿಂತೆಂದು ಬೆಸಸಿದುರು ಭಾದ್ರಪದ ಶುದ್ಧ ಸಪ್ತಮಿಯ ದಿನದಲ್ಲಿ ನೋಂಪುದಾ ಪೂರ್ವ್ವ ದಿವಸ ನೋಂಪವರೆಲ್ಲಂ ಶುಚಿರ್ಬ್ಭೂತರಾಗಿ ಜಿನಭವನಕ್ಕೆ ಬಂದು ದೇವಗುರು ಪೂಜೆಯಂ ಮಾಡಿ ಗುರು ನಿರೂಪದಿಂ ನೋಂಪಿಯಂ ಕೈಕೊಂಡು ಮನೆಗೆ ಬಂದೇಕ ಠಾಣದಿಂದೇಕ ಭುಕ್ತಮಂ ಮಾಡಿ ಮರಳಿ ಚೈತ್ಯಾಲಯಕ್ಕೆ ಬಂದು ಪ್ರೋಷಧೋಪವಾಸ ಪ್ರತ್ಯಖ್ಯಾನ ಪೂರ್ವ್ವಕಂ ಕೈಕೊಂಡು ಪೂರ್ವ್ವ ಸೇವೆಯಂ ಮಾಡಿ ಮುನಿಜನ ನಿರೂಪಿತ ಆಪ್ತಾಗಮ ತಪೌದನ ಪದಾರ್ತ್ಥ ತತ್ವಶ್ರವಣಂಗಳು ಪೂರ್ವ್ವಕ ರಾತ್ರಿಯಂ ಕಳೆದು ಸಪ್ತಮಿಯಪರಾಹ್ಣದೊಳು ನೋಂಪವರೆಲ್ಲ ಸ್ನಾನ ಧೌತಾಂಬರಂಗಳಿಂ ದೇಹಮಂ ಶುಚಿಮಾಡಿ ದ್ರವ್ಯ ಭಾವಾದಿ ಶುದ್ಧಿ ಪೂರ್ವ್ವಕಂ ಸಕಲದ್ರವ್ಯ ಸಂದತ್ತಿಯನೊದವಿಸಿ ರಾತ್ರಿಯಲ್ಲಿ ಶ್ರೀ ಪಾರಿಶ್ವ ತೀರ್ತ್ಥೇಶ್ವರಂಗೆ ಅನೇಕ ವಿಭವಂ ಬೆರೆಸು ಪಂಚಾಮೃತಾಭಿಷೇಕಮಂ ಮಾಡಿ ತದನಂತರಂ ಚೆಲುವಪ್ಪಂತು ಫಟ್ಟಾವಳಿ ಮೇಲ್ಕಟ್ಟು ಪುಷ್ಪಮಾಲಿಕ್ಷು ದಂಡಾದಿ ಕದಳಿ ಸ್ತಂಭಂಗಳಿಂದಲಂಕರಿಸಿ ಆ ಮಂಟಪದ ಮಧ್ಯದಲ್ಲಿ ಧಾನ್ಯ ರಾಸಿಯನಿಕ್ಕಿ ಯಾರಾಸಿಯ ಮೇಲೆ ಸುವರ್ನ್ನ ಕುಂಭದೊಳಾನುಂ ರೂಪ್ಯ ಕುಂಭದೊಳಾನುಂ | ನೂತನ ಮೃತ್ಯುಂಭದೊಳಾನುಂ | ಸತ್ಕ್ಷೀರಮಂ ತುಂಬಿ ಯಾ ಕುಂಭಮಂ ವಸ್ತ್ರ ಗಂಧ ಪುಷ್ಪಮಾಲಾದಿಗಳಿಂದಲಕಂರಿಸಿಯಾ ಕುಂಭದೊಳಗೆ ಯಕ್ಷ ಯಕ್ಷಿ ಸಹಿತಂ ಶ್ರೀಪಾರ್ಶ್ವನಾಥ ಪ್ರಥುಮೆಯಂ ಅಷ್ಟಮಹಾ ಪ್ರಾತಿಹಾರ್ಯ್ಯ ಸಹಿತಂ ಶ್ರುತಮಂಡಲ ಮಧ್ಯಸ್ಥಿತ ಜಿನೇಂದ್ರ ಚಂದ್ರಮನಂ | ಅತಿಧವಲಮಯ ಮಂತ್ರಾಕ್ಷಾರಾವಲಿಯಂ ಚಂದ್ರಕಾಂತಿ ಸಹಿತ ಶುದ್ಧಾತ್ಮನಂ ಕ್ಷೀರವಾರಾಸಿ ಮಧ್ಯಗತ ಸರ್ವ್ವಸಾಧ್ಯಂಗಳಂ ಸುಖಸರಸದಿ ಸ್ಥಿರ ಮೆಂದಿವು ಮೊದಲಾಗೊಡೆಯ ಶುಭ ಭಾವನೆಯ ಸಹವಾದಮೃತಮಂತ್ರಗಳಿಂ ಹೃದಯದೊಳುಚ್ಚರಿಸುತ್ತಂ ಬಿಜಯಂ ಗೆಯಿಸಿ ನೋಂಪವರೆಲ್ಲಂ ಸ್ತುತಿ ಸಕಲೀಕರಣ ಯಜ್ಞ ದೀಕ್ಷೆ ನಾಂದಿ ಮಂಗಲಾದಿ ವಿಧಿಯಂ ನಿರ್ವ್ವರ್ತ್ತಿಸಿ ನಿತ್ಯಾರ್ಚ್ಛನೆಯಂ ಮಾಡಿ ತದನಂತರಂ ಪ್ರತ್ಯೇಕ ಅಷ್ಟವಿಧ ಪ್ರಕಾರ ಪಂಕ್ವಾನ ಫಲಂಗಲೊಳೇಳಂ ಗಂಧಾದಿ ಅಷ್ಟ ವಿಧಾರ್ಚ್ಛನೆಯಂ ಮಾಡಿ ಬಳಿಕ್ಕ ಅಷ್ಟವಿದಾರ್ಚ್ಛನಾ ಸಹ ಧಧಿ ದೂರ್ವ್ವೆದಸಿದ್ಧಾರ್ತ್ಥ ಸ್ವಸ್ತಿಕ ಮುಂತಾದ ಮಂಗಲ ದ್ರವ್ಯ ಸುವರ್ಣ್ನ ಕೇದಗೆ ದಲ ಸಹ ಅರ್ಗ್ಘ್ಯಮನೆತ್ತಿ ಶಾಂತಿಧಾರಾ ಪುಷ್ಪಾಂಜಲಿಯ ಮಾಡಿ | ಜ್ ಣ ಮೋ ಅರಹಂತಾಣಂ | ಜ್ ಣಮೋ ಸಿದ್ಧಾಣಂ | ಜ್ ಣಮಾ ಆಯುರಿಯಾಣಂ | ಜ್‍ಣಮೋ ಉವಝಾಯಾಣಂ | ಜ್ ಣಮೋ ಳೋಯೆ ಸಂವ ಸಾಹೂಣಂ ಮಂಗಳ ಚತ್ತಾರಿಮಿತ್ಯಾದಿ ಸ್ವಾಹಾಂತ ಪೂರ್ವ್ವಕಮನಾದಿ ಸಿದ್ಧಮಂತ್ರಂಗಳಂ ಜಪಿಸುತ್ತ ಶುಭ್ರ ಪುಷ್ಪಾಕ್ಷತ ಗಂಧ ಸಮೇತಂ | ಮಂತ್ರಪುಷ್ಪವನೇಕ ವಿಂಶತಿ ವಾರಮಿಕ್ಕಿ ಣಮೋ ಅರಹಂತಾಣಮಿತ್ಯಾದಿ ಅಪರಾಜಿತ ಮಂತ್ರದಿಂ ನೂಱೆಂಟು ಜಪಂ ಮಾಡಿ ಸಹಸ್ರನಾಮ ಸಮಂತ ಭದ್ರ ಯೇಕೀಭಾವ ವಿಷಾಪಹಾರಾದಿ ದಿವ್ಯ ಸ್ತೋತ್ರಂಗಳಂ ಪಠಿಸುತ್ತಂ ಪೂರ್ವ್ವ ಪುಂಣ್ಯ ಪುರುಷರ ಕಥೆ ಪುರಾಣ ಚರಿತಂ ಶ್ರವಣಂಗಳಿಂ ರಾತ್ರಿಯಂ ಕಳೆದುದಯದಲ್ಲಿ ಕುಂಭ ಸ್ಥಿತಿ ಪಾರಿಶ್ವನಾಥ ಪ್ರತುಮೆಗೆ ಪಂಚಾಮೃತಾಭಿಶೇಕಮಂ ಮಾಡಿ ಯಥಾಕ್ರಮದಿಂದಷ್ಟ ವಿಧಾರ್ಚ್ಚನೆಯಂ ಮಾಡಿ ಸ್ತೋತ್ರಮುಖರಿತಮುಖರಾಗಿ ನೃತ್ಯಗೀತ ವಾದ್ಯಾದಿ ವಿಭವ ಸಮೇತಂ ಮಹಾರ್ಗ್ಘ್ಯ ಸಮೇತಂ ಚೈತ್ಯಾಲಯಮಂ ಬಲಗೋಡು ಶ್ರುತಗುರು ಪೂಜೆಯಂ ಮಾಡಿ ಯೇಳು ತಂಡ ಋಷಿಯರು ಮೇಣು ಯೇಳು ತಂಡಜ್ಜಿಯರು ಮೇಣು ಯೇಳು ಮಂದಿ ಸಮ್ಯಗ್‍ದೃಷ್ಟಿ ಶ್ರಾವಕರು ಮೇಣು ಕೂಡಿಕೊಂಡು ಪಾರಣೆಯಂ ಮಾಡಿ ಯಾ ದಿವಸಮಂ ಚೈಯಾಲಯದಲ್ಲಿಯಾನುಂ ರಮ್ಯ ಪ್ರದೇಶದೊಳಾನುಂ ಕಾಲಮಂ ಕಳಿವುದುಮೆಂದು ನೋಂಪಿಯ ಕ್ರಮದಿಂದೇಳು ವರುಷಂ ನೋಂತುಜೈಸುವ ಕ್ರಮಂ | ನೋಂಪವರೆಲ್ಲಂ ಶ್ರೀಪಾರಿಶ್ವಜಿನಬಿಂಬಮಂ ಮಾಡಿಸಿ ಪ್ರತಿಷ್ಟೆಯಂ ಮಾಡಿಸಿ ನಿತ್ಯ ನಮಿತ್ತಿಕಾದ್ಯಾರ್ಚ್ಚನಾ ವಿಧಿಗೆ ಕ್ಷೇತ್ರಂಗಳಂ ಕೊಟ್ಟು ಯಥಾಶಕ್ತಿಯಿಂದೇಳು ಜಯಘಂಟೆ ದೀಪ ಧೂಪಾರತಿ ಚ್ಛತ್ರ ಚಾಮರವೀಜನ ಸಿಂಹಾಸನ ಭೃಂಗಾರ ಕಲಶಂ ಧ್ವಜಾದಿ ಮಂಗಲೋಪಕರಣಂ ಕೊಟ್ಟು ಪೂರ್ವ್ವ ಕ್ರಮದಿಂದಭಿಷೇಕಾಷ್ಟ ವಿಧಾರ್ಚ್ಚನೆಯಂ ಮಾಡಿಯೇಳು ತಂಡ ರುಷಿಯರ್ಗ್ಗೆ ಶ್ರುತೋಪಕರಣ ಶುದ್ಧೋಪಕರಣ ಸಯ್ಯಮೋಪಕರಣಂ ಮುಂತಾದವಂ ಕೊಡುವುದನಿತೆ ಅಜ್ಜಿಯರ್ಗ್ಗೆ ವುಡಕೊಡುವುದು ಸಮ್ಯಗೃಷ್ಟಿ ಮಿಥುನಕ್ಕೆ ಸನ್ಮಾನ ಪೂರ್ವ್ವಕಂ ಭೋಜನಮುಂ ಮಾಡಿಸೂದು ದಿನಾನಾಥರ್ಗ್ಗೆ ತುಷ್ಟಿದಾನಮಂ ಮಾಡಿ ಪೋಷಿಸೂದು ನೋಂಪಿಯೊಳುಪವಾಸಂ ಘಟಿಸದಶಕ್ತನಾಗಲುಮಾ ಪೂಱು ದಿವಸಂ ರಸಪರಿತ್ಯಾಗ ಸಮೇತಮೇಕ ಠಾಣದೊಳೇಕ ಭುಕ್ತಮಂ ಮಾಳ್ಪುದೆಂದು ನೋಂಪಿಯುದ್ಯಾಪನೆಯ ಕ್ರಮಮೆಂದು ಬೆಸಸಲು ಸಂತೋಷಂಗೊಂಡು ನೋಂಪಿಯಂ ಕೈಕೊಂಡು ಮತಮಿಂತೆಂದು ಬಿಂನಮಂಗೆಯ್ದರೆಲೆ ಸ್ವಾಮಿಯೀ ಮುಂನ ನೋಂತು ನಿರ್ದ್ದುಃಖರಾದವರ ಕತೆಯಂ ಬೆಸಸೊದೆನಲವರಿಂತೆಂದು ಪೆಳ್ದರೂ || ಯೀ ಜಂಬೂ ದ್ವೀಪದ ಭರತ ಕ್ಷೇತ್ರದಾರ್ಯ್ಯಾ ಖಂಡದ ಭೂಷಣಮೆಂಬುದು ನಾಡದಱೊಳು ಧವಲವರ್ತ್ತಮೆಂಬ ಪೊಳಲದನಾಳ್ವಂ | ರ್ವ್ವಾ. ಖರ್ವ್ವಗರ್ವ್ವ ಸರ್ವ್ವ ತೋಘ್ವಿನಾಥ ಗಜಯೂಥವೇತಂಡ ಕಂಠೀರವನುಂ ಕವಿ ಗಮಕಿ ವಾದಿ ವಾಗ್ಮಿಕ ಜನ ಪರಿವೇಷ್ಟಿತನುಂ | ಶಕ್ತಿತ್ರಯ ಸಿದ್ಧಿತ್ರಯ ಸಪ್ತಾಂಗ ಮಂತ್ರರಾಜ್ಯಾಂಗ ಸಮೇತನುಂ ಜನಪತಿ ಮತ ಪುಂಡರೀಕ ಷಡಮಾರ್ತ್ಥಂಡ ಮಂಡಲನುಂ ಸರ್ವ್ವಜನ ಜನಸೇವಿತ ಪೃಥ್ವೀ ಪಾಲಮಹಾರಾಜನಾತನ ಪಟ್ಟದರಸಿ ಸಕಲ ಗುಣಮಣಿಕರಂಡ ಮದನಮಾಲೆಯೆಂಬಳವರಿರ್ವ್ವರುಮಭೀಪ್ಸಿತ ಸುಖಾನುಭವದಿಂ ರಾಜ್ಯಂಗೆಯ್ಯುತ್ತಮಿರಲಾ ಪೊಳಲ ರಾಜಶ್ರೇಷ್ಟಿ ನೂತನ ಪುರಾತನ ಜೀರ್ನ್ನಜಿನಾಲಯೋದ್ಧರಣಮಂ ಚತುರ್ವ್ವಿಧ ದಾನ ನಿರತ ಚಿತ್ತಮಂ ದೇವಪೂಜಾದಿ ಷಟ್ಕರ್ಮ್ಮ ನಿರತನುಂ ಸಕಲಮಲಂ ರಹಿತ ಶ್ರೀಮದರ್ಹದ್ಭಟ್ಟಾರಕ ದಿವ್ಯಾಂಗ ಸಂಗಮ ಮಂಗಲ ಭೂತನುಂ ಗಂಧೋದಕ ಬಿಂದು ಸಂದೋಹ ಪರಿಸಿಂಚನ ಪವಿತ್ರತರ ಶರೀರನುಂ | ಉಭಯ ರತ್ನತ್ರಯ ಕುಲವೆನಿಸಿದರ್ಹದ್ದಾಸನಾ ವೈಶ್ಯೋತ್ತಮನ ಮನೋವಲ್ಲಭೆ ಸುರಚಿರವರ ಶೃಂಗಾರ ರಸ ಪೂರಿತ ಲಾವಂಣ್ಯವಿಶದ ವದನವನಜೆಯುಂ | ಸುಶೀಲ ಚಾರು ಚರಿತೆಯುಂ ಅಲಸಧವಲಾಂಗಪಾಂಗ ರುಚಿರ ಎರಚಿತ ರೋಚಿ ವದನೆಯುಂ | ಸಕಲ ಕಲಾ ಕುಶಲೆಯುಂ | ವೀತರಾಗ ಸರ್ವ್ವಾಚರಣ ಕಮಲ ಯುಗಲ ಭಕ್ತಿಯುಕ್ತೆ ಚಿತ್ತೆಯುಂ | ಜಿನಮುನಿ ಸಮುದಯ ಪರಿಚರಿಯ ಹರ್ಷಿತಾಂತರಂಗೆ ರೂಪಲಕ್ಷ್ಮಿಯೆಂಬ ನೆಂದೆಯವರಿರ್ವ್ವರಿಗೊಗೆದ ಮಗ ಮುರಾರಿಯಾನತನೆಲ್ಲರ್ಬ್ಬಾರಿಸೆ ಕೇಳದೆ ರಾತ್ರಿಯೊಳು ಕ್ಷೀರದೇವಾಸಕ್ತನಾಗಲಾ ಕ್ಷೀರ ಭಾಜನದೊಳು ಪಂನಗವಿಷಂ ಕಳಲ್ದು ಬೀಳಲದನಱಿಯದೆ ಯಾತನಾ ಪಾಲಂ ಸೇವಿಸಿ ವಿಷಪೂರಿತನಾಗಿ ಗತಪ್ರಾಣನಾಗಲಾತನ ಜನನಿ ಜನಕರ್ಮ್ಮೊದಲಾದಖಿಲ ಬಂಧುಗಳು ಮಹಾ ಶೋಕಂಗೆಯುತ್ತಿರಲಲ್ಲಿಯದಂ ರೂಪಲಕ್ಷ್ಮಿ ಕೇಳ್ದು | ಅದೃಷ್ಟ ಪೂರ್ವ್ವಮು ಮನನ್ಫೂತಮಹಾಗಾನಮೆಂದೆ ಬಗೆದು | ಅಲ್ಲಿಗೆ ಬಂದು ಅತಿ ಸಂತಸದಿಂದೆಲೆಯಕ್ಕಾ ಯಿಂತೆಲ್ಲರ್ಕ್ಕೂಡಿಯದ್ಭುತ ಗಾನಂಗೆಯ್ದಿರೆನಲಾ ನುಡಿಯ ಯೆದೆಯೊಳಂಗು ಮುಱಿದಂತಾಗಿ ಸಲ್ಯವೆರಸೆಯಂಮ ಮಗನಳಿದುದಕ್ಕೆ ದುಃಖಂ ಮಾಡಿದಪ್ಪೆವೆನೆ ಯಾ ದುಃಖಗಾಮನೆನಗೆ ಕೊಡಿಮೆಂದು ಪೀಡಿಸಿ ಬೇಡಲುಮಾಕೆ ಯೆಂಮನಪಹಾಸ್ಯಂಗೆಯ್ದಳೆಂದಳಲಿ ದುಃಖಮಂ ಕೊಡುವೆ ನಾಳೆ ಬಂನಿಮೆನಲಾಕೆಯಂತೆಗೆಯ್ವೆನೆಂದು ಪೋಗಲಿತ್ತ ನಂದೆನೊಂದು

|| ಕ || ಅಕಟಕಟ ವಿಧಿಯೆ ನಂನೀ
ಸುಕುಮಾರನನೆಳೆದು ಕೊಂದುದಲ್ಲದೆ ಬೇಱೆ
ವಿಕಟಾಂಗಿಯಿಂದೆ ನೋಯಿಸಿ
ಪ್ರಕಟಂ ಮುಖಗೆಡಿಪಲೇಕೆ ದುಃಖಿಯನೆಂನಂ ||

          ಕಂದನಳಿದಳಲುಂ ಕುಂದದೆ
ನೊಂದಿಕ್ಕಿ ಬೆಂದೊಡಲೊಳುರಿವ ಕಿಚ್ಚಂ
ತುಂಬಿದ ರೂಪೆಯ ಮಗನಂ
ಕೊಂದಲ್ಲದೆ ಕೃತವ್ಯಥೆ ಪೋಗದೆಂನ ಮನದುದ್ರೇಕಂ ||

          ಹೃದಯಮುಮನಱೆಯದೆ ಸುಜನರ
ಮದ ಮುಖದಿಂ ಕೊಂದು ಕೂಗವೀ ಖಳಜನದಿಂ
ಮೊದಲೊಳು ನಂದೆಯ ಪಡೆದೀ
ಬಿದಿ ಪಾತಕನಲ್ಲ ದಿರ್ದ್ದಡಿಂತಾದಪುದೇಂ ||

|| ವ || ಯೆಂದು ರೂಪಲಕ್ಷ್ಮಿಯ ನಿಃಕಪಟ ವೃತ್ತಿಯಂ ಸಪೂಜೆ ಸಮುಗ್ಫತೆಯಂ ಬಗೆಯಲ್ಲದೆ ಯಾ ಮಾಗಿನಿ.. ವಾಡಿದಳೆಂದೆ ತಿಳಿದು ನಂದೆ ತಂನ ಮನದೊಳಗೆ ಯಿದ್ದ ಕ್ರೋಧಮಂ ಮಹಾಹಿಯಾದಂತೆ ಹಯಾಕುಟಿಲೆ ಮುಂದೆ ನರಕದೊಳು ಸೂಯಿವ ಸೂಯನನು ಕಡಿಸುವ ಪೂತ್ಕಾರದಿಂದಾದ ಪಾಪಿಯ ಚತುರ್ಗ್ಗತಿ ಭ್ರಮಣೆಯಂ ಪೇಳ್ವಂತೆ ತಿರುಗುತ್ತಂ ನಂದೆಗೆ ಜನ್ಮಾಂತರದೊಳಂ ಭಯಂ ಬಿಡದೆಂದು ಪೇಳುವಂತತಿ ಭೀಕರಮಾದ ಕಾಳೋರಗ ಕೃಷ್ಣಸರ್ಪ್ಪನಂ ಗಾರುಡಿಗರಿಂ ತರಿಸಿ ಮಹ ಬಂಧನ. ಡಾಬಂಧನಂಗಳಂ ತೆಗಸಿ ನೂತನ ಘಟದೊಳು ತುಂಬಿ ಬಾಯಂ ವಸ್ತ್ರದಿಂ ದೃಢಮಾಗಿ ಕಟ್ಟಿ ಬಿಚ್ಚಿರಲಾ ಮಱುದಿವಸಂ ರೂಪಲಕ್ಷ್ಮಿ ಬಂದು ಮುಂನಿನಂತೆ ಬೇಡಿದರೆ ರೂಪಲಕ್ಷ್ಮಿ ನಿಂನೀ ಘಟಮಂ ಕೊಂಡುಪೋಗಿ ಅನೇಕಾರ್ಚ್ಛನಗಳಿಂ ಪೂಜಿಸಿ ನಿಂನ ಪಿರಿಯ ಮಗನಂ ಬರಿಸಿ ಸ್ನಾನಾದಿಗಳಿಂ ಶುಚಿಯಂ ಮಾಡಿ ಯಾ ಕುಂಭದ ಬಾಯಂ ಬಿಡಿಸಲು ದುಃಖಂ ಮೇರೆದಪ್ಪಿ ಕಡಲಂತೆ ಮೇಲ್ವಾಯ್ದು ಬರ್ಪ್ಪುದೆಂದು ಕೊಡಲಾ ಶುದ್ಧಾಂತಃಕರಣಿಯುಂ ಸದ್ದೃಷ್ಟಿಯುಂ | ಜನ್ಮಾಂತರಾರ್ಜ್ಜಿತ ಪುಣ್ಯಂ ಪಣ್ಯೆಯಪ್ಪ ರೂಪಲಕ್ಷ್ಮಿ ತಂನ ಮನೆಗೊಯ್ದು ನಂದೆ ಪೇಳ್ದಂದದಿಮೆಲ್ಲಮಂ ಸವಿಸ್ತರಂ ಮಾಡಿ ತಂನ ಜೇಷ್ಠ ಪುತ್ರನ ಕಯ್ಯಂ ತೆಗಯಿಸೆ

|| ಕ || ಕೃತ ಪುಂಣ್ಯರೂಪಲಕ್ಷ್ಮಿಯ
ಗತ ಭವದೊಳು ಪದೆದುದೊಂದು ಪುಂಣ್ಯದ ಫಲದಿಂ
ದತಿ ಭಯದಾಯಕ ಫಣಿಯುಂ
ನುತಮಣಿಮಯ ಹಾರಮಾದುದಮಮೆನೆ ಲೋಕಂ |

          ಹರಿ ನರಿಯಪ್ಪುದು ಪುಣ್ಯದಿ
ಸರನಿಧಿ ತಾಂ ಚುಲುಕ ಜಲಮೆನಿಪ್ಪುದು ಪೆಱತೇಂ
ನಿರುತಂ ಪಗೆ ಕೆಳೆಯಪ್ಪುದು
ಪರಮ ಜಿನಾಧೀಶ ಚರಣ ಭಕುತರಿಗೆಂದುಂ ||

|| ಶ್ಲೋಕ || ವಿಪಶ್ಧ ಸಂಪದೆ ಪುಂಣ್ಯಾತ್ಕಿಮತ್ರಗಣತೇ | ಯೆಂಬೀ ಮೊದಲಾದವರಾಂತರವಚನಮಂ ಪಟ್ಟುವಱಿಂದಾ ಕುಮಾರನ ಕರತಲಗತ ಸರೀಸೃಪಂ ಅತಿ ಕಿರಣಲಹರಿಚರ ವಿಥುರಿತ ತರಿಮಿಘ್ರಣಿ ತತಿಯಂ | ಸಕಲ ಜನನಯನಯುಗಲ ಹರ್ಷ ಪುಂಜವೆನಿಸಿದ ಮೆಱೆವ ನೂತನ ರತ್ನಹಾರಮಾಗಲು ಹಾರಮಂ ತಂನ ಕುಮಾರನ ಕೊರಳೊಳಿಕ್ಕಿ ಸಂತಸಗಡಲೊಳೋಲಾಡಿ ಸುಖಮಿರೆಯದನರುಹದ್ದಾಸಂ ಕಂಡಿದೇನೆಂದು ಕೇಳೆ ರೂಪಲಕ್ಷ್ಮಿ ನೋಂಪಿಯ ಪೂರ್ವ್ವವೃತ್ತಾಂತಮಂ ಸವಿಸ್ಥರಂ ಪೇಳೆ ಕೇಳ್ದಾಕೆಯ ಸುಕೃತದೇಳ್ಗೆಯಂ ನಂದೆಯಾ ಸುಕೃತಮಂ ತಂನ ಮನದೊಳೆ ತಿಳಿದು ಸಂತಸದಿಂದಿರಲು ನಂದೆಯಲ್ಲಮಂ ಕಂಡು ತಂನ ಕಂದನಳಿದುದಱಿಂ ನೂರ್ಮ್ಮಡಿ ದುಃಖಮಂ ತಳೆದುಮಿರೆ ಮತ್ತೊಂದು ದಿವಸದೊಳು ರೂಪಲಕ್ಷ್ಮಿ | ಸಂನಾಪ ಭಕ್ತಿ ನಿಮಿತ್ತಂ ಪುರದ ಬಹಿರುದ್ಯಾನವನದ ಮಹಾಪೂತ ಚೈತ್ಯಾಲಯಕ್ಕೆ ಪೋಗುತ್ತಂ | ರತ್ನಹಾರಮನಿಕ್ಕಿ ಪೋಗಲಾ ಸಮಯದಲ್ಲಿ | ಪೃಥ್ವಿಪಾಲ ಮಹಾರಾಜಂ ಮದನಮಾಲೆ ಮುಖ್ಯವಾದಬಲಾನಿಕರವೆರಸು ವನಕ್ರೀಡೆಗೆ ಬಂದಿರಲಾ ಮದನಮಾಲೆ ಜಿನವಂದನಾರ್ತ್ಥಮಾಗಿ ಜಿನ ಭವನಕ್ಕೆ ಬಂದು ನುತಿಗೆಯ್ದು ಅಲ್ಲಿರ್ದ್ದ ರೂಪಲಕ್ಷ್ಮಿಯಂ ಕಂಡುಚಿತ ವಚನದಿಂ ನುಡಿದು ನುಡಿಸಿ ಪೋಪ ಸಮಯದೊಳು ಅನರ್ಗ್ಘ್ಯ ರತ್ನಹಾರಮಂ ಕಂಡಾಸಕ್ತ ಚಿತ್ತೆಯಾಗಿ ತಂನರಮನೆಯಂ ಪೊಕ್ಕು | ಅರಸಂಗೆ ರತ್ನಹಾರದ ವೃತ್ತಾಂತಮಂ ಬಿಂನಪಮ್ಗೆಯ್ಯಲರಸನರುದ್ದಾಸನಂ ಬರಿಸಿ ಸನ್ಮಾನ ಪೂರ್ವ್ವಕಂ ಅಮೂಲ್ಯ ರತ್ನ ಹಾರಮಂ ನಮಗೆ ಕೊಡಿಮನೆ ಅರುಹದ್ದಾಸ ರತ್ನಹಾರಮಂ ತರಿಸಿ ಅರಸಿನ ಹಸ್ತಕ್ಕೆ ಕುಡಲದುಗ್ರಾಹಿಯಾಗಲಾ ಭೂಪನಚ್ಚರಿವಟ್ಟಿದೇನೆಂದು ಸೆಟ್ಟಿಯ ಕರದೊಳು ಕುಡಲದು ಮುಂನಿನಂತೆ ಹಾರಾಕಾರಮಂ ತಳೆಯಲದೇನೆಂದು ನಾಲ್ಕು ಸೂಳಂತೆ ಕೊಂಡು ಕೊಡುತ್ತಮಿರಲು ಮುಂನಿನಂತಾಗೆ ಆ ವೃತ್ತಕಮಂನಿದೇನೆಂದು ಅರುಹದ್ದಾಸ ಸೆಟ್ಟಿಯಂ ಬೆಸಗೊಳಲು ಭಯಂಗೊಂಡೆಲೆ ಸ್ವಾಮಿ ಯನಗೆ ಗೋಚರವಲ್ಲ ಯಂನ ವಲ್ಲಭೆಯ ಸಂಮಂದಿ ಯಾಕೆಯ ಮುಖ ಮುಖವಾರ್ತ್ತೆಯಿಂದಱಿಯಲ್ವೇಳ್ಕುಂ | ಮಂತೆಗೆಯ್ಯೆಂದು ಕಳುಪಲವಂ ರೂಪಲಕ್ಷ್ಮಿಯಂ ಬೆಸಗೊಳಲಾ ಮುಗ್ಧೆ ತನಗೆ ಗೋಚರಮಲ್ಲೆಂದು ನುಡಿಯೆ | ಮಗುಳ್ದು ಬಂದರಸಂಗೆ ಬಿಂನಪಂಗೆಯ್ಯಲರಸಂ ಗುರು ಮುಖ ವಿದ್ಯದಿಂದಱಿಯಲ್ವೇಳ್ಕುಮೆಂದಱಿದು | ಪುರದ ಬಹಿರ್ವ್ವಲಯದ ಚೈತ್ಯಾಲಯಕ್ಕೆ ಅವಧಿ ಬೋಧಲೋಚನರು ಜಿನಚಂದ್ರ ಭಟ್ಟಾರಕರು ಬಿಜಯಂಗೆಯ್ದಿರ್ದ್ದುದಂ ವನಪಾಲಕಂ ಮುಖವಾರ್ತ್ತೆಯಿಂ ತಿಳಿದು ಅರ್ಹದ್ದಾಸ ಪ್ರಮುಖ ಪುರಜನ ಪರಿಜನಂ ಬೆರಸಿ ಪೋಗಿ ಜಿನಪತಿಯ ಭವನಮಂ ದೂರದೊಳ್ಕಂಡು ವಾಹನಾದಿಯಂ ಪರಿಹರಿಸಿ ಪಾದಮಾರ್ಗ್ಗದಿಂ ಬಂದು ಜಿನರಂ ಸ್ತುತಿಗೆಯ್ದು ತದನಂತರಂ ಗುರುಭಕ್ತಿ ಪೂರ್ವ್ವಕಂ ಜಿನಚಂದ್ರ ಭಟ್ಟಾರಕರಂ ಪೂಜಿಸಿ ವಂದಿಸಿ ತತ್ವ ಸ್ವರೂಪಮಂ ಕೇಳ್ದು ಬಳಿಕ್ಕಮಾ ಹಾರದ ವೃತ್ತಂತಮಂ ಕೇಳೆಯವರವಧಿಯಿಂದಱಿದಲೆ ಭವ್ಯೋತ್ತಮಾ ನಿಂನ ಪಟ್ಟಣದ ಪರದ ಧನಪತಿಸೆಟ್ಟಿಯ ಪೆಂಡತಿ ನಂದೆಯ ಮಗಂ ಕ್ಷೀರಪಾನಮಂ ಕೊಂಬಾಗ ಪ್ರಮಾದದಿಂ ವಿಷಂಕೊಂಡು ಮರಣನೆಯ್ದಲವರು ಶೋಕಂಗೆಯ್ವುದನು ಕೇಳ್ದು ರೂಪಲಕ್ಷ್ಮಿ ಪೂರ್ವ್ವಗಾನಮಿದೇನೆಂದು ಮಱಿವೆನೆಂದು ನಂದೆಯ ಮನೆಗೆ ಪೋಗಿ ಯಿದೇನು ಕಾರಣ ಗಾನಮಂ ಮಾಡಿದಿಪಿರಿಯೆನಲು ಸುತನಳಿದುಕ್ಕೆ ದುಃಖಂ ಮಾಡಿದಪ್ಪೆವೆನೆ ದುಃಖಮಂ ಬೇಡಲಾ ಪಾಪಿ ಕೋಪದಿಂ ಸರ್ಪ್ಪನಂ ಘಟದೊಳು ತುಂಬಿ ಕೊಡಲಾ ಪರಮ ಪವಿತ್ರ ಚರಿತೆ ಪೂರ್ವ್ವಭವದೊಳು ನಿರ್ದ್ದುಃಖ ಸಪ್ತಮಿಯ ನೋಂಪಿಯಂ ಮಾಡಿದ ಫಲದಿಂ ಕ್ಷೀರಸಾಗರದ ಮಧ್ಯಗತಾದಿ ಭಾವನೆಗಳಿಂ ಶ್ರೀ ಪಾರಿಶ್ವ ತೀರ್ತ್ಥಕರ ಯಕ್ಷ ಯಕ್ಷಿ ಸಹಸ್ಥಾಪಿಸಿದ ಶುಭ ಭಾವನಾ ಬಲದಿಂದನರ್ಗ್ಘ್ಯ ಹಾರಮಾದುದೆಂದು ವೃತ್ತಕಮಂ ಪೇಳೆ ಅರಸನುಂಪುರಜನ ಪರಿಜನಂ ಅರ್ಹದ್ದಾಸನುಂ ರೂಪಲಕ್ಷ್ಮಿಯುಂ ನೋಂಪಿಯಂ ಕೈಕೊಂಡು ಗುರುಗಳಂ ಬೀಳ್ಕೊಂಡರಮನೆಯಂ ಪೊಕ್ಕು ನೋಂಪಿಯ ದಿನಂ ಬರಲು ಸರ್ವ್ವರುಂ ನೋಂತು ಸ್ವರ್ಗ್ಗಾಪವರ್ಗ್ಗಮಂ ಪಡೆದರು ರೂಪಲಕ್ಷ್ಮಿಯುಂ ನೋಂತು ಸ್ತ್ರೀಯತ್ವಮಂ ಪತ್ತುವಿಟ್ಟು ಸ್ವರ್ಗ್ಗದೊಳ್ದೇವನಾಗಿ ಪುಟ್ಟಿ ಅಲ್ಲಿಂ ಬಂದು ಮನುಷ್ಯ ಕ್ಷೇತ್ರದೊಳುತ್ತಮ ಕ್ಷತ್ರಿಯ ಕುಲೋತ್ತಮರಾಗಿ ಪುಟ್ಟಿ ಸಂಸಾರ ಸಾಮ್ರಾಜ್ಯಮಂ ಪಡೆದು ಬಳಿಕ್ಕಮಲ ಜಿನರೂಪಂ ತಳೆದು ಕರ್ಮ್ಮ ನಿರ್ಮ್ಮೂಲಂಗೆಯ್ದು ಮುಕ್ತಿಕಾಂತಾ ವಲ್ಲಭತ್ವಮಂ ಪಡೆವಳೆಂದು ಗೌತಮ ಸ್ವಾಮಿಗಳ್ಪರಮ ಕರುಣದಿಂ ಬೆಸಸೆ ಕೇಳ್ದಾ ನೋಂಪಿಯಂ ಕೈಕೊಂಡು ವಂದಿಸಿ ಶ್ರೇಣಿಕ ಮಹಾ ಮಂಡಲೇಶ್ವರನುಂ ಚೇಳಿನಿ ಮಹಾದೇವಿಗೂಡಿ ಜಿನರಂ ವಂದಿಸಿ ಗುರುಗಳಂ ಬೀಳ್ಕೊಂಡು ಸಮವಸರಣಮಂ ಪೊಱಮಟ್ಟು ಬಂದು ಪುರಮನರಮನೆಯಂ ಪೊಕ್ಕು ನಿರ್ದ್ದುಃಖ ಸಪ್ತಮಿಯ ನೋಂಪಿಯಂ ನೋಂತುಜ್ಜವಣೆಯಂ ಮಾಡಿ ಸ್ವರ್ಗ್ಗ ಮೋಕ್ಷಮಂ ಪಡೆದರು |

          ಯಿಂತೀ ನೋಂಪಿಯ ಕಥೆಯಂ
ಸಂತಸದಿಂದೋದಿ ಕೇಳ್ವ ನೋಂಪವರೆಲ್ಲಂ
ಕಂತುಹರ ಜಿನನ ಪದೆದವರು
ಯಿಂತಿರ್ಪ್ಪುದು ದುಃಖಹರಣಮದಱಿಂ ||

ಯಿಂತೀ ನೋಂಪಿಯಂ ಸವಿಧಾನಮಾಗಿ ನೋಂತವರುಂ ನೋನಿಸಿದವರುಂ | ಕ್ರಮದಿಂದೊಡಂಬಟ್ಟವರುಂ | ಮುಕ್ತಿಲಕ್ಷ್ಮೀಕಾಂತರಪ್ಪರು || ಮಂಗಳ ಮಹಾಶ್ರೀ || ನಿರ್ದ್ದುಃ ಖ ಸಪ್ತಮಿಯ ನೋಂಪಿಯ ಕಥೆಗೆ ಮಂಗಲ ಮಹಾ ಶ್ರೀ ಪಾರಿಶ್ವ ನಾಥಾಯ ನಮಃ || ನಿರ್ವ್ವಿಘ್ನ ಮಸ್ತು || ಶುಭಮಸ್ತು