ನಂದೀಶ್ವರದಷ್ಟಮಿ ಚತುರ್ದ್ದಶಿಗಳಲ್ಲಿ | ಯಾನುಂ ತೊಡಗಿ ಪರ್ವ್ವತಿಥಿಗಳಲ್ಲಿ ಯಾಕರ‍್ಮವನಾಚರಿಸುವುದೆಂದು ಗುರುಶಿಕ್ಷಾಪ್ರಕಾರಮಿಂತೀ | ಪರ್ವ್ವತಿಥಿಗಳಲ್ಲಿ | ಪ್ರೋಷಧೋಪವಾಸ ಸಹ ಜಪದೇವ್ಯವ್ರತಸ್ಮರಣೆಯನುಳ್ಳ ಶಾಸ್ತ್ರಮಂ ವಿಚಾರಿಸುತ್ತ ತೊಡಗುವಲ್ಲಿ ಬಿಡುವಲ್ಲಿ ಪಂಚಾಮೃತ ಅಭಿಷೇಕಂ ಜಿನೇಶ್ವರಂಗೆ ಮಾಡಿ ನಡಸುವದು | ಉದ್ಯಾಪನಾ ಪಾರಣೆಯ ದಿನದಲ್ಲಿ ವಂದುಪ್ರಕಾರ ಭಕ್ಷಸಹಿತ | ಮಿಪ್ಪತ್ತಾರು | ನೈವೇದ್ಯಸಹ | ಪಂಚಾಣುವ್ರತ ಮಂತ್ರ ವಿಧಿಯಿಂ ಪೂಜೆಯಂ | ಶ್ರುತಗುರುಪೂಜೆಯಂ ಮಾಳ್ಪುದು | ವಂದುತಂಡ ಋಷಿಯರಂ ನಿಲಿಸೂದು | ನಿರಂತರಾಯಾನಂತರಂ | ಪಾರಣೆಯಂ ಮಾಳ್ಪುದು | ಯಿದು ಉದ್ಯಾಪನಾಕ್ರಮ | ಮಿದರ ಫಲಮೆಂತೆಂದೊಡೆ | ಪಂಚಾಣುವ್ರತನಿಧಯೋ ನಿರತಿಕ್ರಮಣಾಚರಂತಿಸುರಲೋಕಂ || ಯತ್ರಾವಧಿರಷ್ಟಗುಣಾಃ ದಿವ್ಯಶರೀರಂ ಚ ಲಭ್ಯಂತೆ || ಓಂಹ್ರೀಂಅರ್ಹಂಪಂಚವಿಂಶತಿ ಅತೀಚಾರಃರಹಿತಾಯ ಪಂಚಾಣುವ್ರತಾಯನಮಃ || ಅಹಿಂಸಾಣುವ್ರತಾಯನಮಃ || ೨ || ಓಂಹ್ರೀಂ ಅರ್ಹಂಬಂಧನಾತೀಚಾರರಹಿತಾಯ || ಅಹಿಂಸಾಣುವ್ರತಾಯನಮಃ || ೨ || ಓಂಹ್ರೀಂಅರ್ಹಂ ಪೀಡನಾತೀಚಾರರಹಿತಾಯ || ಅಹಿಂಸಾಣುವ್ರತಾಯನಮಃ || ೩ || ಓಂಹ್ರೀಂಅರ್ಹ ಅತಿಭಾರಾರೋಪಣಾತಿಚೌರ ರಹಿತಾಯ ಅಹಿಂಸಾಣುವ್ರತಾಯ ನಮಃ || ಓಂಹ್ರೀಂಅರ್ಹಂಅನ್ನಪಾನನಿರೋಧಾತೀಚಾರ ರಹಿತಾಯ || ಅಹಿಂಸಾಣುವ್ರತಾಯನಮಃ || ೫ || ಓಂ ಹ್ರೀಂ ಅರ್ಹಂಮಿಥ್ಯೋಪದೇಶ | ಪರಿವಾದಾತೀಚಾರ ರಹಿತಾಯ || ಸತ್ಯಾಣುವ್ರತಾಯನಮಃ | ಜಪ ೧ ಉಪವಾಸ || ೧ || ಓಂಹ್ರೀಂರಹೋಭ್ಯಾಖ್ಯಾನಾತೀಚಾರ ರಹಿತಾಯ || ಸತ್ಯಾಣುವ್ರತಾಯ ನಮಃ || ೨ || ಓಂಹ್ರೀಂಅರ್ಹಂ ವೈಶೂನ್ಯಾತೀಚಾರ ರಹಿತಾಯ || ಸತ್ಯಾಣುವ್ರತಾಯ ನಮಃ || ೩ || ಓಂಹ್ರೀಂಅರ್ಹಂಕೂಟಲೇಖಕರಣಾತೀಚಾರ ರಹಿತಾಯ || ಸತ್ಯಾಣುವ್ರತಾಯನಮಃ || ೪ || ಓಂಹ್ರೀಂಅರ್ಹಂನ್ಯಾಸಾಪಹಾರಾತೀಚೌರ ರಹಿತಾಯ| ಸತ್ಯಾಣುವ್ರತಾನಮಃ || ೫ || ಓಂಹ್ರೀಂಅರ್ಹಂನ್ಯಾಸಾಪಹಾರಾತೀಚೌರ ರಹಿತಾಯ | ಅಚೌರ್ಯ್ಯಾಣುವ್ರತಾಯನಮಃ || ೧ || ಓಂಹ್ರೀಂ ಅರ್ಹಂ ಚೋರಾಹೃತಾದಾನಾತೀಚಾರ ರಹಿತಾಯ ಅಚೌರ್ಯ್ಯಾಣುವ್ರತಾಯನಮಃ || ೨ || ಓಂಹ್ರೀಂಅರ್ಹಂವಿಲೋಪನಾತಿಚಾರರಹಿತಾಯ ಅಚೌರ್ಯ್ಯಾಣುವ್ರತಾಯ ನಮಃ || ೩ || ಓಂಹ್ರೀಂಅರ್ಹಂ ಸದೃಶನ ಮ್ಮಿಶ್ರಾಂತಿಚಾರರಹಿತಾಯ || ಅಚೌರ್ಯ್ಯಾಣುವ್ರತಾಯನಮಃ || ೪ || ಓಂ ಹ್ರೀಂ ಅರ್ಹಂಹೀನಾಧಿಕವಿನಿಮಾನಾತೀಚಾರ ರಹಿತಾಯ || ಅಚೌರ್ಯ್ಯಾಣುವ್ರತಾಯನಮಃ || ೫ || ಓಂಹ್ರೀಂ ಅರ್ಹಂಅನ್ಯವಿವಾಹಕರಣಾತೀಚಾರ ರಹಿತಾಯ | ಅಸ್ಮರಾಣುವ್ರತಾಯನಮಃ || ೧ || ಓಂಹ್ರೀಂ ಅರ್ಹಂ ಅನಂಗಕ್ರೀಡಾತೀಚಾರರಹಿತಾಯ | ಅಸ್ಮರಾಣುವ್ರತಾಯ ನಮಃ || ೨ || ಓಂಹ್ರೀಂ ಅರ್ಹಂವಿಟತ್ಯಾತೀಚಾರರಹಿತಾಯ || ಅಸ್ಮರಾಣುವ್ರತಾಯನಮಃ || ೩ || ಓಂಹ್ರೀಂಅರ್ಹಂ ವಿಪುಲತ್ರುಷಾತೀಚಾರ ರಜಿತಾಯ || ಅಸ್ಮರಾಣುವ್ರತಾಯನಮಃ || ೪ || ಓಂಹ್ರೀಂ ಅರ್ಹಂ ತ್ಯಿರಿಕಾಗಮನಾತೀಚಾರರಹಿತಾಯ || ಅಸ್ಮರಾಣುವ್ರತಾಯನಮಃ || ೫ || ಓಂ ಹ್ರೀಂ ಅರ್ಹಂ ಅತಿವಾಹನಾತೀಚಾರ ರಹಿತಾಯ || ಪರಿಮಿತ ಪರಿಗ್ರಹಾಣುವ್ರತಾಯ ನಮಃ || ೧ || ಓಂಹ್ರೀಂ ಅರ್ಹಂ ಅತಿಸಂಗ್ರಹಾತೀಚಾರರಹಿತಾಯ ಪರಿಮಿತಿಪರಿಗ್ರಹಾಣು ವ್ರತಾಯನಮಃ || ೨ || ಓಂ ಹ್ರೀಂ ಅರ್ಹಂವಿಸ್ಮ ಯಾತೀಚಾರರಹಿತಾಯಪರಿಮಿತಪರಿಗ್ರಹಾಣುವ್ರತಾಯನಮಃ || ೩ || ಓಂ ಹ್ರೀಂ ಅರ್ಹಂತಿರಲೋಭಾತೀಚಾರರಹಿತಾಯ || ಪರಿಮಿತಪರಿಗ್ರಹಾಣು ವ್ರತಾಯನಮಃ || ೪ ಓಂಹ್ರೀಂ ಅರ್ಹಂ ಅತಿಭಾರವಹನಾತೀಚಾ ರಹಿತಾಯ || ಪರಿಮಿತ ಪರಿಗ್ರಹಾಣುವ್ರತಾಯನಮಃ || ೫ || ಮೊದಲಲ್ಲಿವಟ್ಟು, ಮಂತ್ರ ೧ ವುಪವಾಸ ೧ || ಆಮೇಲೆ ಅಣುವ್ರತ ವಂದೊಂದುಪ್ರಕಾರಕ್ಕೆ | ಅತಿಚಾರ ಪರಿಹಾರಾರ್ತ್ಥಮಾದ ಮಂತ್ರೋಕ್ತಕ್ರಮದ ಜಪ ೫ ವುಪವಾಸ ೫ | ಯಿಕ್ರಮದಲ್ಲಿ ಆಯ್ದು ಅಣುವ್ರತಗಳಿಗೂ ಸಹ | ವುಪೋಷ್ಯ ಜಪಂಗಳ ೨೫ ಯಿಪ್ಪತ್ತೈದು | ಈ ಪ್ರಕಾರದಿಂ ಕೈಕೊಂಡು | ಯಥಾವಿಧಿಯಿಂದಮಾಚರಿಸಿ | ಯುಜ್ಜಣೆಯಂಮಾಡಿ | ಸುರಲೋಕದ ವಿಮಾನದೊಳಣಿಮಾದ್ಯಷ್ಟ ಗುಣೈಶ್ವರ್ಯ್ಯಮಂ | ಧಾತು ವಿರಹಿತನಿರ್ಮಳ ಶರೀರರುಮಾಗಿರ್ದ್ದು | ಕ್ರಮದಿಂ | ಮೋಕ್ಷದ ದಿವ್ಯಪದವಿಯಲ್ಲಿಪ್ಪರೆಂಬುದೀ ಕಥಾಭಿಪ್ರಾಯಂ ||

ಪಂಚಾಣುವ್ರತಾತಿಕ್ರಮಂ ವಿಲಿಖ್ಯತೆ | ಕೊಲೆ | ಹುಸಿ || ಕಳವು | ಪರದಾರ | ಅತಿಕಾಂಕ್ಷೆ ಯೆಂಬಿವೈದುಂ | ಕ್ರಮದಿನಪುದಿದಕ್ಕೆ | ಆಯ್ದು ಅಣುವ್ರತಗಳಿಗೈದೈದು | ಅತೀಚಾರಂಗಳಪ್ಪವದೆಂತೆಂದೊಡೆ | ಅಹಿಂಸಾಣುವ್ರತಕ್ಕೆ | ಛೇದನಾತಿಚಾರ | ಬಂಧನಾತಿಚಾರ ಪೀಡಾತಿಚಾರ | ಅತಿಭಾರಾರೋಪಣಾತಿಚಾರ | ಅಂನಪಾನ ನಿರೋಧಾತಿಚಾರಮೆಂಬಿವೈದು ೫ ಅಕ್ಕುಂ || ಸತ್ಯಾಣುವ್ರತಕ್ಕೆ | ಮಿಥ್ಯೋಪದೇಶಾತಿಚಾರ | ರಹೋಭ್ಯಾಖ್ಯಾನಾತಿಚಾರ | ಪೈಶೂನ್ಯಾತಿಚಾರ | ಕೂಟಲೇಖ ಕರಣಾತಿಚಾರ | ನ್ಯಾಸಾಪಹಾರಾತಿಚಾರ | ಮೆಂಬೀವೈದಪ್ಪವು || ೫ || ಕಳ್ಳೆನೆಂಬ ಅಚೌರ್ಯ್ಯಾಣುವ್ರತಕ್ಕೆ ಚೋರಪ್ರಯೋಗಾತಿಚಾರ || ಚೋರಾಹೃತಾ ದಾನಾತಿಚಾರ | ವಿಲೋಪನಾತಿಚರ | ಸದೃಶಸಂ ಮಿಶ್ರಿತಿಚಾರ | ಹೀನಾಧಿ ಕವಿನಿಮಾನಾತಿಚಾರ | ಸಹ ೫ || ಪರಸ್ತ್ರೀಯ್ಯರನೆಯ್ದೆನೆಂದೆಂಬ ಅಸ್ಮರಾಣುವ್ರತಕ್ಕೆ | ಅನ್ಯವಿವಾಹಕರಣಾತಿಚಾರ | ಅನಂಗಕ್ರೀಡಾತಿಚಾರ ವಿಟತ್ವಾತಿಚಾರ ನಿಪುಲತೃಷಾತಿಚಾರ | ಇತ್ಯರಿಕಾಗಮನಾತಿಚಾರ | ಮೆಂಬಿ ೫ ವೈದಪ್ಪವೂ ೫ || ಪರಿಮಿತ ಪರಿಗ್ರಹಾಣುವ್ರತಕ್ಕೆ ಅತಿವಾಹನಾತಿಚಾರ ಅತಿ ಸಂಗ್ರಹಾತಿಚಾರ | ವಿಸ್ಮಯಾತಿಚಾರ | ಲೋಭತಿಚಾರ | ಅತಿ ಭಾರವಹನಾತಿಚಾರ ಮೆಂಬೀವೈದುಅಹವೂ | ಸಹ ೧ ವ್ರತಕ್ಕೆ ಅಯ್ದತೀಚಾರಗಳು ೫ ವ್ರತಕ್ಕೆ ೨೫ ಅತಿಚಾರಂಗಳಹವೂ || ಜಯಮಂಗಳಮಹಾ ||

ಶ್ರೀ ಆದೀಶ್ವರಾಯ ನಮಃ ||