|| ಶ್ರೀ ವೀತರಾಗಾಯನಮಃ ||

          ಶ್ರೀ ವರ್ದ್ಧಮಾನನಾನತ
ದೇವೇಂದ್ರ ಕಿರೀಟ ಕೋಟಿ ತಾಟಿತ ಚರಣಂ
ಕೈವಲ್ಯ ಬೋಧಿದಾಮಂ
ಕೈವಲ್ಯಾಸ್ಪದಮನೀಗೆ ನಮಗೆ ಜಿನೇಂದ್ರಾ || 

|| ವ || ಯೆಂದಿಷ್ಟ ದೇವತಾ ನಮಸ್ಕಾರಂ ಮಾಡಿ ಹಿಡಿಯಕ್ಕಿಯ ನೋಂಪಿಯ ವಿಧಾನಮೆಂತೆಂದೊಂಡೀ ಜಂಬೂ ದ್ವೀಪದ ಭರತ ಕ್ಷೇತ್ರದೊಳು ಮಗಧೆಯೆಂಬುದು ನಾಡು ರಾಜಗೃಹಯೆಂಬುದು ಪೊಳಲದನಾಳ್ವಂ ಶ್ರೇಣಿಕಮಾಮಂಡಲೇಶ್ವರನಾತನ ಪಟ್ಟದರಸಿ ಚೇಳಿನಿ ಮಹಾದೇವಿಯೆಂಬಳಂತವರಿರ್ವ್ವರುಂ ಸುಖ ಸಂಕಧಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲೊಂದು ದಿವಸಂ ತ್ರಿಗುಪ್ತಭಟ್ಟಾರಕರು ಚರ್ಯ್ಯಾ ಮಾರ್ಗ್ಗಾದಿ ಬರೆ ಕಂಡು ಶ್ರೇಣಿಕಮಹಾರಾಜನಿದಿರೆರ್ದ್ದು ಬಂದು ಭಕ್ತಿಯ ಭರದಿಂ ವಂದಿಸಿ ವಿಧಿಪೂರ್ವಕಮಾಹಾರಂಗೊಟ್ಟು ನಿರಂತರಾಯಮಂ ಮಾಡಿಸಿ ತದನಂತರಂ ತದ್ದಂಪತಿಗಳು ಪೊಡೆವಟ್ಟುಮನಂತರ ಚೇಳಿನಿ ಮಹಾದೇವಿ ಕರಕಮಲಂಗಳಂ ಮುಗಿದು | ಯೆಲೆ ಸ್ವಾಮಿ ಬಿಂನಪಮೆಂದಿಂತೆಂದಳು ಗೃಹಸ್ತವ್ಯಾಪಾರದಿಂ ಮಱವೆಯಿಂ ಬಂದದೋಷ ಪರಿಹಾರಾರ್ತ್ಥಮಾಗಿ ಆಉದಾನುಮೊಂದು ನೋಂಪಿಯಂ ಬೆಸಸಿಯೆನಲವರು ಪಲವು ನೋಂಪಿಗಳೊಳಧಿಕಮಪ್ಪ ಹಿಡಿಯಕ್ಕಿಯ ನೋಂಪಿಯುಂಟೆನೆ ಅದಱ ವಿಧಾನಮೆಂತೆಂದೊಡಾಷಾಢ ಕಾರ್ತ್ತೀಕ ಫಾಲ್ಗುಣಮೆಂಬಿ ಮೂಱು ನಂದೀಶ್ವರದೊಳು ನೋಂಪಿಯಂ ಕೈಕೊಂಡು ಮಾಡುವ ಕ್ರಮ ಆಷಾಢ ಮಾಸದೆರಡು ಪಕ್ಷದೊಳು ಪಾಡ್ಯಂ ಮೊದಲ್ಗೊಂಡು ನಿಚ್ಚನಿಚ್ಚಲೊಂದು ಹಿಡಿಯಕ್ಕಿಯಂ ಮಱೆಯದೆ ಮಡಗಿ ಮಡಗಿ ಅಮವಾಸೆ ಪೌರ್ಣ್ನಮಿಗಳೊಳು ದೇವರಿಗೆ ಪಂಚಾಮೃತದಿಂದಭಿಷೇಕಮಂ ಮಾಡಿ ಮಡಗಿದಕ್ಕಿಯಚರು ಸಹಿತಂ ಅಷ್ಟವಿಧಾರ್ಚ್ಚನೆಯಂ ಮಾಡಿ ಶ್ರುತಗುರುಗಳುಮಂ ಪೂಜಿಸಿ ವಂದಿಸಿ ಬ್ರಹ್ಮಚರ್ಯ್ಯ ಸಹಿತಂ ಉಪವಾಸಮಂ ಕೈಕೊಂಬುದು ಮಱುದಿವಸ ಕಥೆಯಂ ಕೇಳಿ ತಪಸ್ವಿಗಳ್ಗಾಹಾರ ದಾನಮಂ ಕೊಟ್ಟು ಬಳಿಕ್ಕ ಪಾರಣೆಯಂ ಮಾಳ್ಪುದು ಯಿ | ಉಪವಾಸದ ಪೆಸರು ಸೌಧರ್ಮ್ಮ ಕಲ್ಪಮೆಂಬುದು | ಯೀ ಉಪವಾಸದ ಫಲಂ ಹಂನೆರಡು ಸಾವಿರ ಉಪವಾಸದ ಫಲಮಕ್ಕುಂ | ಶ್ರಾವಣಮಾಸದೆರಡು ಪಕ್ಷದೊಳಂ ಮುಂದಿನಂತೆ ದೇವ ವ್ರತ ಸಹಿತಂ ಉಪವಾಸ ದೇವ ಪೂಜೆಯಂ ಮಾಳ್ಪುದು | ಅದಱ ಪೆಸರೀಶಾನ ಕಲ್ಪಮೆಂಬುದು ಹದಿನಾಱು ಸಾವಿರ ಉಪವಾಸಮಂ ಮಾಡಿದ ಫಲಮಕ್ಕುಂ ಭಾದ್ರಪದ ಮಾಸದೊಳಾ ಕ್ರಮದಿಂ ದೇವ ವ್ರತಮಂ ಉಪವಾಸ ದೇವ ಪೂಜೆಯಂ ಮಾಳ್ಪುದದಱ ಪೆಸರು ಸನತ್ಕುಮಾರಮೆಂಬುದು ಹದಿನೆಂಟು ಸಾವಿರ ಉಪವಾಸದ ಫಲಮಕ್ಕು | ಅಶ್ವಯಿಜಮಾಸದೆರಡು ಪಕ್ಷದೊಳೀ ಕ್ರಮದಿಂ ಜಿನ ಪೂಜೆಯಂ ಮಾಡಿ ದೇವ ವ್ರತ ಸಹಿತುಪವಾಸಮಂ ಮಾಳ್ಪುದದು ಮಾಹೇಂದ್ರಕಲ್ಪಮೆಂಬ ಪೆಸರಮಳ್ಳದು | ಯಿಪ್ಪತ್ತೆಂಟು ಸಾವಿರುಪವಾಸಮಂ ಮಾಡಿದ ಫಲಮಕ್ಕುಂ ಕಾರ್ತ್ತಿಕ ಮಾಸದೊಳಾಕ್ರಮದಿಂ ಜಿನಪೂಜೆಯುಪವಾಸಾದಿಗಳ ಮಾಳ್ಪುದುದು ಕಾಪಿಷ್ಟಮೆಂಬ ಪೆಸರನುಳ್ಳುದು | ಮೂವತ್ತು ಸಾವಿರುಪವಾಸದ ಫಲಮಕ್ಕುಂ | ಮಾರ್ಗ್ಗಶಿರ ಮಾಸದೊಳಾಕ್ರಮದಿಂ ಜಿನಪೂಜೆಯುಪವಾಸಾದಿಗಳ ಮಾಳ್ಪುದುದು ಕಾಪಿಷ್ಟಮೆಂಬ ಪೆಸರನುಳ್ಳುದು ಮೂವತ್ತೆರಡು ಸಾವಿರುಪವಾಸದ ಫಲಮಕ್ಕುಂ ಪುಷ್ಯಮಾಸದೊಳಾ ಕ್ರಮದಿಂ ಜಿನಪೂಜೆಯುಪವಾಸಾದಿಗಳಂ ಮಾಳ್ಪುದದಱ ಪೆಸರು ಶುಕ್ಲಮೆಂಬ ಪೆಸರನುಳ್ಳದದಱ ಫಲಂ ಮೂವತ್ತನಾಲ್ಕು ಸಾವಿರುಪವಾಸದ ಫಲಮಕ್ಕುಂ | ಮಾಘ ಮಾಸದೊಳಾ ಕ್ರಮದಿಂ ಜಿನಪೂಜೆಯುಪವಾಸಾದಿಗಳಂ ಮಾಳ್ಪುದು | ಮಹಾ ಶುಕ್ಲಮೆಂಬ ಮೆಂಬ ಪೆಸಱನುಳ್ಳದದು ಮೂವತ್ತನಾಱು ಸಾವಿರುಪವಾಸದ ಫಲಮಕ್ಕುಂ | ಪಾಲ್ಗುಣ ಮಾಸದೊಳಾ ಕ್ರಮದಿಂ ಜಿನ ಪೂಜೆಯುಪವಾಸಾದಿಗಳಂ ಮಾಳ್ಪುದುದು | ಶತಾರ ಕಲ್ಪಮೆಂಬ ಪೆಸರನುಳ್ಳದದು ಮೂವತ್ತೆಂಟು ಸಾವಿರುಪವಾಸಮಂ ಮಾಡಿದ ಫಲಮಕ್ಕುಂ | ಚೈತ್ರಮಾಸದೊಳಾಕ್ರಮದಿಂ ಜಿನಪೂಜೆ ಉಪವಾಸಾದಿಗಳಂ ಮಾಳ್ಪುದದು ಸಹಸ್ರಾರ ಕಲ್ಪಮೆಂಬ ಪೆಸರುನುಳ್ಳುದದು ನಾಲ್ವತ್ತು ಸಾವಿರ ಉಪವಾಸದ ಫಲಮಕ್ಕುಂ | ವೈಶಾಖ ಮಾಸದೊಳಾ ಕ್ರಮದಿಂ ಜಿನ ಪೂಜೆಯುಪವಾಸಾದಿಗಳಂ ಮಾಳ್ಪುದದು | ಆತನ ಕಲ್ಪಮೆಂಬ ಪೆಸರನುಳ್ಳದದು ನಾಲ್ವತ್ತುನಾಲ್ಕು ಸಾವಿರ ಪವಾಸದ ಫಲಮಕುಂ | ಜ್ಯೇಷ್ಠ ಮಾಸದೊಳಾ ಕ್ರಮದಿಂ ಜಿನ ಪೂಜೆ ಉಪವಾಸಾದಿಗಳಂ ಮಾಳ್ಪುದದು ಪ್ರಾಣತಕಲ್ಪಮೆಂಬ ಪೆಸರನುಳ್ಳುದದು | ಅಯ್ವತ್ತು ಸಾವಿರುಪವಾಸಮಂ ಮಾಡಿದ ಫಲಮಕ್ಕುಂ | ಯಿಂತೀ ನೋಂಪಿಯಂ ನೆಱದಿಯಂರಿದಾವುದಾನುಮೊಂದು ನಂದೀಶ್ವರದ ಹುಣ್ಣಮೆಯ ಪಾಡ್ಯಂ ಮೊದಲ್ಗೊಂಡು ಹಂನೆರಡು ತಿಂಗಳು ಪರಿಯಂತರಂ ಕ್ರೋಧ ಮಾನ ಮಾಯಾ ಲೋಭಮಿಲ್ಲದೆ ನೋಂತುದ್ಯಾಪನೆಯಂ ಮಾಳ್ಪಾಗಳು ದೇವರ್‍ಗೆ ಹಂನೆರಡು ಮಾನ ತುಪ್ಪ | ಹಂನೆರಡು | ಬಳ್ಳ ಪಾಲು | ಹಂನೆರಡು ಬಳ್ಳ ಮೊಸರು ಸಹಿತಂ ಅಭಿಷೇಕಮಂ ಮಾಡಿ ಹಂನೆರಡು ಬಳ್ಳ ಅಕ್ಕಿಯಲು ಚರುವನಿಡಿಸಿ ಅಷ್ಟವಿಧಾರ್ಚ್ಚನೆಯಂ ಮಾಡಿ ತಂನ ಪರಿಣಾಮಾನುಸಾರಿಯಾಗಿ ಹೊಂನ ಕೇದಗೆಯೆಸಳಂ ಮಾಡಿಸಿ ಆ ಎಸಳು ಸಹ ಅರ್ಗ್ಘ್ಯಮನೆತ್ತೂದು | ಘಂಟೆ ಜಯಘಂಟೆ ಮೊದಲಾದ ಉಪಕರಣಂಗಳಂ ದೇವರ್ಗ್ಗೆ ಮಾಡಿಸಿ ಕೊಡುಉದು | ಪುಸ್ತಕ ಠವಣೆ ಕೋಲು ಶ್ರುತ ಪಾವಡೆ ಸಹಿತಂ ಶ್ರುತಪೂಜೆಯಂ ಮಾಳ್ಪುದು | ರುಷಿಯರ್ಗ್ಗೆ ತಟ್ಟು ಕುಂಚ ಕಮಂಡಲಮಂ ಕೊಡುಉದು ನೋನಿಸಿದಜ್ಜಿಯರ್ಗ್ಗುಡ ಕೊಡುಉದು ಪಂಡಿತರ್ಗ್ಗಂ ಶ್ರಾವಕರ್ಗ್ಗಂ ಆಹಾರ ದಾನಮಂ ಮಾಳ್ಪುದು | ಹಂನೆರಡು ತಿಂಗಳ ಕಡೆಯೊಳು ಕಥೆಯಂ ಪೇಳ್ದುಪಾಧ್ಯಾಯರ್ಗ್ಗೆ ಉಪಕೊಡುಉದು | ದೇವರಿಗೆ ಹೊಂನ ಪೊಕ್ಕುಳು ದೀಪಾರತಿ ಧೂಪಘಟಂ ಮೊದಲಾದುಪಕರಣಂ ಮಾಡಿಸಿ ಕೊಡುಉದು | ಯಕ್ಷ ಯಕ್ಷಿಯರಿಂಗೆ ಹೊಂನ ಕಂಣಮಣಿ ಬೆಳ್ಳಿಯ ಕಂಣಮಣಿಯಂ ಮಾಡಿಸಿ ಅರ್ಚ್ಚಿಸೂದು | ಯೀ ನೋಂಪಿಯಂ ಯೆಡವಱಿಯದೆ ನೋಂತವರು ಹದಿನಾಱನೆಯ ಸ್ವರ್ಗ್ಗದೊಳು ಯಿಂದ್ರರಾಗಿ ಬಳಗುವ ಕಲ್ಪವೃಕ್ಷದ ರತ್ನ ಬೆಳಗಿಂ | ಯಿಪ್ಪತ್ತೆರಡು ಸಾಗರೋಪಮಾಯುಷ್ಯಂ | ಹದಿನಾಱು ಸಾವಿರ ಮಹತ್ತರ ದೇವಿಯರುಂ | ಹದಿನಾಱು ಸಾವಿರ ಅಂತಃಪುರ ದೇವಿಯರುಂ | ಯಿಪ್ಪತ್ತು ಸಾವಿರ ಕಿಲ್ವಷದೇವಿಯರುಂ ಹತ್ತುಸಾವಿರ ಪಡಿಯಱ ದೇವಿಯರುಂ | ಅನಿತೆ ವಾಹನ ದೇವಿಯರುಂ | ವೆರಸು ಅಣಿಮಾ ಮಹಿಮಾ ಲಘಿಮಾಘರಿಮಘ್ರಾಗಲ್ಪ್ಯಯಿಸಿತ್ವಂ ಮೊದಲಾದಪ್ಪಗುಣಂಗಳಂ ಮೆಱೆದು | ದೇವಲೋಕದೊಳಾದ ಸುಖಮನನ ಭವಿಸಿ ಬಂದು | ಮರ್ತ್ಯಲೋಕದೊಳು ಹರಿವಂಶ ನಾಥವಂಶುಉಗ್ರವಂಶ ಯಿಕ್ಪ್ವಾಕು ವಂಶಂ ಮೊದಲಾದ ಕುಲಂಗಳೊಳ್ಪುಟ್ಟಿ ಸುಖಮನನುಭವಿಸಿ ವ್ರತ ಶೀಲಮುಪವಾಸಂಗಳೊಳ್ನೆಗಳ್ದು ಕಡೆಯೊಳು ಮೋಕ್ಷವಾಸಿಗಳಪ್ಪುರು | ಈ ನೋಂಪಿಯಂ ಪುರುಷರು ನೋಂತು ಪಂಚ ಕಲ್ಯಾಣ ಭಾಗಿಗಳಪ್ಪರು | ಸ್ತ್ರೀಯರು ನೋಂತು ಪುರುಷತ್ವಮಂ ಪಡೆವರು | ಯೀ ನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಕ್ರಮದಿಂದೊಂಡಂ ಬಟ್ಟವರ್ಗ್ಗಂ ಮಂಗಲ ಮಹಾ