|| ಶ್ರೀ ವೀತರಾಗಾಯ ನಮಃ ||

ಭವದುಃಖ ನಿವಾರನಮೆಂಬ ನೋಂಪಿಯಂ ಜೇಷ್ಠಮಾಸದ ದ್ವಾದಶಿಯಂದುಪವಾಸಂಗೆಯ್ದು | ಉಪವಾಸಮಂ ಮಾಳ್ಪದಿನದೊಳಪರಾಹ್ಣದೊಳು ಪೂರ್ವ್ವಾಹ್ಣದೊಳೆರಡು ಜಾವಮುಮೆಂದುಪವಾಸಮಂ ಕೈಕೊಂಬುದು ಪೂಜಿಸಿರ್ದ್ಧ ಪ್ರತಿಮೆಗಭಿಷೇಕಮಂ ಮಾಡಿಯಷ್ಟವಿಧಾರ್ಚ್ಛನೆಯಂ ಮಾಡಿಸೂದುಮೀ ನೋಂಪಿಯ ಫಲಮೆಂತೆಂದೊಡೆ ಭವ ಭವಾತರದೊಳೆಲ್ಲಂ ಸರ್ವ್ವಜ್ವರ ಕೋಷ್ಟದೃಕೋವ್ಯಾದಿ ವ್ಯಸನ ಶಸ್ತ್ರಾಯಾಗಂತುಕುರ್ಬ್ಬಿ ಘಾತಾರ್ತ್ಥ ಸಹ ಜ | ರಾಮಯ | ಪಾವಯಮೆಂಬ ಚತುರ್ವ್ವಿಂಶತಿಗಳುಮಪ್ಪ ದುಃಖವೆಂದು ಕಂಡುಂ ಕೇಳ್ದುಮಱಿಯರು | ಸುರ ನರ ಸುಖಮನುಂಡು ಬೆಳೆದಿರ್ದ್ದು ಪೆಱರ್ಗ್ಗೆ ಸುಖಂಗಳನೆ ಮಾಡಿ ಪಲಕಾಲಂ ಸಂದು ಸ್ವರ್ಗ್ಗ ಮೋಕ್ಷಂಗಳನನುಭವಿಸಿ ತದನಂತರದೊಳ್ಮೋಕ್ಷ ಶ್ರೀಯೊಳ್ಕೂಡಿರ್ಪ್ಪರುಮೀ ನೋಂಪಿಯಂ ಪಂನೆರಡು ನೋಂಪಿಯಂ ನೋಂತವರ್ಗ್ಗಳು ಮೊದಲೊಂದು ನೋಂಪಿಯಂ ಪೇಳ್ದಾಚಾರ್ಯ್ಯರ್ಗ್ಗೆ ಆಸನವಟ್ಟಿಗೆಯಂ | ಶ್ರುತ ಪೂಜೆಯಂ ಮಾಡಿ ನೋಂಪಿಯಂ ಕೈಕೊಳ್ವುದು | ಯೀ ಪಂನೆರಡು ನೋಂಪಿಯಂ ಸಂಪೂರ್ಣ್ನಂ ನೋಂತುಜ್ಜವಣೆಯಂ ಮಾಡಿದವರು ಭವ ಭಚಾಂತರದೊಳೆಲ್ಲಂ ಮನುಷ್ಯ ಲೋಕದೊಳ್ಪುಟ್ಟಿ ಸಕಳ ಚಕ್ರವರ್ತ್ತಿತ್ವಮುಂ ಸ್ತ್ರೀ ರತ್ನಮುಂ ಮೊದಲಾಗಿ ಚತುರ್ದ್ದಶ ರತ್ನಂಗಳ್ಗಂ ನವನಿಧಿಗಳ್ಗೊಡೆಯರಾಗಿ ಪರಮ ಸಮಾಧಿಯಿಂ ಸ್ವರ್ಗ್ಗದೊಳ್ಪುಟ್ಟುವರು | ಯಿಂದ್ರನ ಶಚಿ ಮಹಾದೇವಿಯಂ | ಪಂಚಾಣುತ್ತರೆಯೊಳು ಸರ್ವ್ವರ್ತ್ಥ ಸಿದ್ಧಿಯೊಳ್ಪುಟ್ಟಿಯಷ್ಟ ಮಹಾ ಪ್ರಾತಿಹಾರ್ಯ್ಯದೊಳ್ಕೂಡಿಯನಂತ ಸುಖದೊಳಿರ್ಪ್ಪರು

|| ಕ || ನೋಂತು ಬಡವಕ್ಕೆ ತನು ಗುಣ
ವಂತ ಜನಕ್ಕೆತ್ತು ತಿರ್ಗ್ಗೆ ಕಸವರವಱನಂ
ಚಿಂತಿಸುಗೆ ಚಿತ್ತಮೆನಗರ
ಹಂತರ್ಶರಣಕ್ಕೆ ಜನ್ಮ ಜನ್ಮಾಂತರದೊಳೂ ||

ಯೀ ನೋಂಪಿಯಿಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಮಂಗಳ ಮಹಾಶ್ರೀ