ಶ್ರೀ ಸುರನರಖಚರೋರಗ
ಭಾಸುರ ಮಣಿಮಕುಟ ಕಿರಣ ರಂಜಿತ ಪಾದಂ
ದೋಷಾಪಹಾರಿ ಜಿನಪತಿ
ಲೇಸೆನಿಸಿಷ್ಟಾರ್ತ್ಥ ಸಿದ್ಧಿಯಂ ಕೊಡುಗನಿಶಂ ||

ವ || ಯಿ ಜಂಬೂದ್ವೀಪದ ಭರತಕ್ಷೇತ್ರದೊಳು | ಮಗಧೆಯಂಬುದು ನಾಡು | ರಾಜಗೃಹಮೆಂಬುದು | ಪೊಳಲದನಾಳ್ವಂ | ಶ್ರೇಣಿಕಮಹಾಮಂಡಲೇಶ್ವರನಾತನ ಪಟ್ಟದರಸಿ | ಚೇಳಿನಿಮಹಾದೇವಿಯಂಬಳಂತವರೀರ್ವ್ವರುಂ | ಇಷ್ಟವಿಷಯ ಕಾಮ ಭೋಗೋಪ ಭೋಗಂಗಳನನುಭವಿಸುತ್ತ | ಪಲವುಕಾಲಮಿರಲೊಂದು ದಿವಸಂ | ದೊರೆ ಒಡ್ಡೋಲಗಂಗೊಟ್ಟಿರ್ದ್ದರಾ ಪ್ರಸ್ತಾವದಳೋರ್ವ್ವಂ | ಋಷಿನಿವೇದಕಂ ಬಂದು | ಸಾಷ್ಟಾಂಗಪ್ರಣುತನಾಗಿ ದೇವಾ ನಂಮ ವಿಪುಲಗಿರಿಯಮೇಲೆ | ಶ್ರೀವರ್ದ್ಧಮಾನಸ್ವಾಮಿಗಳ ಸಮವಸರಣಂ ಬಂದು ನೆಲಸಿರ್ದ್ದಪುದೆಂದು ಬಿಂನಪಂಗೆಯ್ಯೆ | ಸಿಂಹಾಸನದಿಂದೆರ್ದಾದೆಸೆಗೇ ಳಡಿಯಂ ನಡದು ಸಾಷ್ಟಾಂಗಪ್ರಣುತನಾಗಿ ದೇವಾ ನಂಮ ವಿಪುಲಗಿರಿಯಮೇಲೆ | ಶ್ರೀವರ್ದ್ಧಮಾನಸ್ವಾಮಿಗಳ ಸಮವಸರಣಂ ಬಂದು ನೆಲಸಿರ್ದ್ದಪುದೆಂದು ಬಿಂನಪಂಗೆಯ್ಯೆ | ಸಿಂಹಾಸನದಿಂದೆರ್ದ್ದಾದೆಸೆಗೇ ಳಡಿಯಂ ನಡದು ಸಾಷ್ಟಾಂಗಪ್ರಣುತನಾಗಿ | ವಸಗೆದಂದಂಗೆ ಅಂಅಚಿತ್ತಮನಿತ್ತು ಆನಂದಭೇರಿಯಂ ವೊಯಿಸಿ | ಪರಿಜನ ಪುರಜನ ಬಂಧುಜನಂಗಳ್ವೆರಸಿ | ಸಮವಸರಣಮನೆಯ್ದಿಬಂದು | ಗಂಧಕುಟಿಯಂ ತ್ರಿಃಪ್ರದಕ್ಷಿಣಂಗೆಯ್ದು | ಅರ್ಹತ್ಪರಮೇಶ್ವರಂಗೆ ಅನೇಕ ಸ್ತುತಿಶತ ಸಹಸ್ರಂಗಳಿಂ ಸ್ತುತಿಯಿಸಿ | ಅನೇಕಾರ್ಚ್ಛನೆಗಳಿಂದರ್ಚ್ಚಿಸಿ | ಗುರುಭಕ್ತಿಪೂರ್ವ್ವಕಂ | ಗೌತಮಗಣಧರರು ಮೊದಲಾದ ಋಷಿಸಮುದಾಯಮನರ್ಚ್ಚಿಸಿ | ವಂದಿಸಿ | ಪಂನೊಂದನೆಯ ಮನುಷ್ಯಕೋಷ್ಠ ದೊಳ್ಕುಳ್ಳಿರ್ದ್ದು ಗವುತಮಸ್ವಾಮಿಗಳ್ಗೆ | ಶ್ರೇಣಿಕ ಮಹಾಮಂಡಲೇಶ್ವರಂ ಕಯಿಗಳಂ ಮುಗಿದು ಸ್ವಾಮಿ ಸಾಗಾರ ಧರ್ಮ್ಮಸ್ಥಿತಿಯಂ ಸವಿಸ್ತರಂ ಬೆಸಸಿಯೆನಲಂತರಂ | ಚೇಳಿನಿಮಹಾದೇವಿ ಕರಕಮಂಗಳಂ ಮುಗಿದು ಸ್ವಾಮಿ ಯೆನಗೆ ಅಕ್ಷಯ ಸುಖ ಪ್ರಾಪ್ತ್ಯರ್ತ್ಥಮಾಗಿ ಯಾವದಾನೊಂದು | ವಿಶಿಷ್ಟ ನೋಂಪಿಯಂ ಬೆಸಿಮೆನಲವರು | ಭವಸಾಗರೋತ್ತರಣದ ನೋಂಪಿಯಂ ಸವಿಸ್ತರಂ ನೋಂಪುದೆನಲು | ಆ ನೋಂಪಿಯ ವಿಧಾನಮೆಂತನೆ | ಆವುದಾನೊಂದು | ನಂದೀಶ್ವರದ ಶುದ್ಧ ಚತುರ್ದ್ಧಶಿಯಂದು ಶುಚಿರ್ಬ್ಭೂತರಾಗಿ | ಚೈತ್ಯಾಲಯಕ್ಕೆ ಬಂದು | ಚತುರ್ವ್ವಿಂಶತಿ ತೀರ್ತ್ಥೇಶ್ವರರ್ಗ್ಗೆ | ಪಂಚಾಮೃತದಿಂದಭಿಷೇಕಮಂ ಮಾಡಿಸಿ | ಗಂಧ ದ್ರವ್ಯಂಗಳಿಂದುರ್ದ್ವರ್ತ್ತನಂ ಮಾಡಿ | ತದನಂತರಂ | ಯಿಪ್ಪತ್ತನಾಲ್ಕು ಜಲಗಂಧಾಕ್ಷತೆ ಪುಷ್ಪ ಚರು ದೀಪ ಧೂಪ ಸಹಿತಂ ಯಿಪ್ಪತ್ತುನಾಲ್ಕು ತೆರೆದ ಫಲ ಯಿಪ್ಪತ್ತು ನಾಲ್ಕು ಅಡಕೆಯೆಲೆಯನರ್ಚ್ಚಿಪುದು | ತದನಂತರಂ | ಶ್ರುತಗುರುಪೂಜೆಯಂ ಮಾಡಿ ಕಥೆಯಂ ಕೇಳ್ದು ವುಪವಾಸಮಂ ಕೈಕೊಂಬುದು | ಆರದೊಡೇಕ ಠಾಣದೊಳೇಕ ಭುಕ್ತವಂ ಕೈಕೊಂಡು ವಿಕಢೆ ದುರ್ಬ್ಬಾವಂಗಳಂ ಪರಿಹರಿಸಿ | ಧರ್ಮ್ಮಶ್ರವಣಮನೋದುತ್ತಂ ಪೊತ್ತಂ ಕಳೆದು ಮರುದಿವಸಂ ಪಾರಣೆಯ ಪೊತ್ತಿನೊಳು | ಆಯಿದು ತಂಡಋಷಿಯರು | ಮೇಣೊಂದುತಂಡ ಋಷಿಯರ್ಗ್ಗೆ ನಿರಂತರಾಯಮಂ ಮಾಡಿ | ಸುವಾಸಿನಿ ಜನ ಸಹಿತಂ ಪಾರಣೆಯಂ ಮಾಳ್ಪುದು ಮಿಪ್ರಕಾರಂ ನಾಲ್ಕು ತಿಂಗಳು | ಯೆಂಟು ಚತುರ್ದ್ಧಶಿಗಳೊಳೆ ಸವಿಸ್ತರಂ ನೋಂತು | ಪೌರ್ನ್ನಮಿಯೊಳುದ್ಯಾಪನೆಯ ಕ್ರಮಮೆಂತೆಂದೊಡೆ | ದೇವರ್ಗ್ಗೆ ಪಂಚಾಮೃತದಿಂದಭಿಷೇಕಮಂ ಮಾಡಿಸಿ | ಶ್ರೀಖಂಡಾದಿ ದ್ರವ್ಯಂಗಳಿಂದುದ್ವರ್ತ್ತನಂಗೆಯ್ದು ಕಂಮನಪ್ಪ ಪುಷ್ಪ ಮಾಲ್ಯಾದಿಗಳಿಂದರ್ಚ್ಚಿಸಿ | ಯಿಪ್ಪತ್ತುನಾಲ್ಕು ಜಲಗಂಧಾಕ್ಷತೆ ಪುಷ್ಪಚರು ದೀಪ ಧೂಪ ಫಲ ಅಡಕೆ ಯೆಲೆ ಸಹಮಂದು ಚರುವನಿಟ್ಟು | ಶ್ರುತಗುರು ಪೂಜೆಯಂ ಮಾಡಿ ಕಥೆಯಂ ಕೇಳ್ದು ಕಥಕನಂ ಬಂದಿಸಿ | ಸೋವಾಸಿನಿ ಜನಂಗಳಂ ಬರಿಸಿ | ಚಂದನಾಕ್ಷತೆ ತಾಂಬೂಲದಿಂ ಮಂನಿಸಿ | ಚತುರ್ವ್ವರ್ನ್ನಕ್ಕಾಹಾರ ಭೈಷಜ್ಯ ಶಾಸ್ತ್ರ ದಾನಮಂ ಯಥಾಶಕ್ತಿಯಿಂ ಮಾಳ್ಪುದು | ಯಿದು ನೋಂಪಿಯಕ್ರಮವೆಂದು ಗವುತಮ ಗಣಧರರು | ಬೆಸಸೆ | ಚೇಳಿನಿಮಹಾದೇವಿ ಕೇಳ್ದು | ದಾರಿದ್ರ್ಯ ದ್ರವ್ಯಮಂ ಪಡೆದಂತೆ | ರೋಗಿ ದಿವ್ಯೌಷಧಿಯಂ ವಡೆದಂತೆ ವಂದಿವೃಂದಂ ಕಲ್ಪವೃಕ್ಷಮಂ ಪಡೆದಂತೆ ಹರ್ಷೋತ್ಕರ್ಷಚಿತ್ತೆಯಾಗಿ | ತಾನಂ ನಿಜವಲ್ಲಭನುಂ ಮುನಿಮುಖ್ಯರಂ ಬೀಳ್ಕೊಂಡು | ಸಮವಸರಣಮಂ ಪೊರಮಟ್ಟು ಪುರಮನರಮನೆಯಂ ಪೊಕ್ಕು | ಸುಖದಿಂದಿರ್ದ್ದು | ಆ ನೋಂಪಿಯ ದಿನಂಬರೆ ಯಥಾಯೋಗ್ಯ ವಿಸ್ತರದಿಂ ನೋಂತುಜ್ಜೈಸಿ ತತ್ಫಲದಿಂ ಪಲವುಂ ನಿಧಿನಿಧಾನಂಗಳಿಗೊಡೆಯರಾಗಿ | ಭವ್ಯೋತ್ತಮರೆನಿಸಿಕೊಂಡು | ಪಲವುಕಾಲಂ ದಿವ್ಯಸುಖವನನುಭವಿಸಿ | ಸಮ್ಯಕ್ತ್ಯಪೂರ್ವ್ವಕಂ ತ್ರಿಕರಣಶುದ್ಧಿಯಿಂ | ನೋಂತುವರ್ಗ್ಗಂ ನೋನಿಸಿದವರ್ಗ್ಗಂ ಬರೆದವರ್ಗ್ಗಂ ಕ್ರಮದಿಂದೊಡಂಬಟ್ಟವರ್ಗ್ಗಂ ಜಯಮಂಗಳ ಮಹಾ || ಶ್ರೀ ಶ್ರೀ