ಶ್ರೀಮದಕ್ಷಯಲಕ್ಷಣ ಲಕ್ಷಿತಗಾತ್ರಾಯ ನಮಃ ||

ರಸಪರಿತ್ಯಾಗದ ಕಥೆಯೆಂತೆಂದೊಡೆ ನೂಲಹಣ್ಣುಮೆಯ ಪಾಡ್ಯಮೊದಲ್ಲೊಂಡು ಹುಣ್ಣುಮೆಯ ಪರ್ಯ್ಯಂತರ ನಡಸುವುದಾಕ್ರಮವೆಂತೆಂದೊಡೆ | ಹಾಲು ಮೊಸರು ತುಪ್ಪ ಯಣ್ಣೆ ಸಕ್ಕರೆ ಬೆಲ್ಲ ಉಪ್ಪು ಈ ೭ ರಸವನು ಬಿಡುವುದು ಬಾಳೆಯಹಣ್ಣು ಮೊದಲಾದ ರಸದ್ರವ್ಯಂಗಳಪ್ಪ ವಸ್ತುಗಳಂ ಬಿಡುವುದು ಏಕಠಾಣ ಬ್ರಹ್ಮಚರ್ಯ್ಯ ಮೊದಲಾದ ವ್ರತನಿಯಮಮಂ ಕೈಕೊಂಡು ಹೀಗೆ ರಸವಸ್ತುಗಳಂ ಒಂದು ತಿಂಗಳಪರ್ಯ್ಯಂತಂ ಬಿಡುವುದು ಎಣ್ಣೆ ತುಪ್ಪ ಮೊದಲಾದವನ್ನು ವತ್ತಿಕೊಂಡು ಸ್ನಾನ ಮಾಡದಿರುವುದು ಸೂತಕವಾದಡೆ ಮಜ್ಜಿಗೆಯನೆರೆದುಕೊಂಡು ಸ್ನಾನಮಂ ಮಾಡುವುದು ಮತ್ತಂ ಪಾಡ್ಯದ ದಿನದಲ್ಲಿ ಉದ್ಯಾಪನೆಯಂ ಮಾಳ್ಪ ಕ್ರಮವೆಂತೆಂದೊಡೆ ಅರ್ಹತ್ಪರಮೇಶ್ವರರ್ಗೆ ಮಹಾಭಿಷೇಕಪೂಜೆಯಂ ಸವಿಸ್ತರಂ ಮಾಡುವುದು ಅಷ್ಟವಿಧಾರ್ಚನೆಯಂದದಿಂ ಪುಷ್ಪಫಲಮೊದಲಾಗಿ ಏಳುಬಗೆಯಿಂದ ಮೇಲಾಗಿ ಅರ್ಚಿಸೂದು ತದನಂತರಂ ಶ್ರುತಗುರು ಪೂಜೆಯಮಾಡುವುದು ಬಳಿಕ ಏಳುಬಗೆಯರಸ ದ್ರವ್ಯವನುಂ ಏಳುಮಡಕೆಯೊಳು ತುಂಬಿ ದೇವರ್ಗರ್ಚಿಸೂದು ತುಪ್ಪಮಂ ತುಂಬಿಯಿರುವ ಮಡಕೆಯಂ ದೇವರ್ಗರ್ಚಿಸೂದು ಸಕ್ಕರೆಯ ತುಂಬಿದಾ ಮಡಕೆಯಂ ಶ್ರುತಕ್ಕರ್ಚಿಸೂದು ಉಪ್ಪುತುಂಬಿದ ಮಡಕೆಯಂ ತಾನು ಕೊಂಬುದು ಉಳಿದ ಮೂರು ಮಡಕೆಯಂ ಸಮ್ಯಗ್ಢೃಷಿಶ್ರಾವಕರ್ಗೆ ಗಂಧಾಕ್ಷತೆ ತಾಂಬುಲಸಹಾ ಕೊಡುವುದು ಭೋಜನಮಂ ಮಾಡಿಸೂದು ಶ್ರುತಗುರುಪೂಜೆಯಂ ಮಾಡಿ ತದನಂತರಂ ಋಷಿಯರ್ಗೆ ತಟ್ಟುಕುಂಚ ಕಮಂಡಲ ಕೌಳಿಗ ಪುಸ್ತಕ ಶ್ರುತವಸ್ತ್ರಸಹಿತವಾಗಿ ಕೊಡುವುದು ಏಳುತಂಡ ಅಜ್ಜಿಯರ್ಗೆ ಉಡಕೊಡುವುದು ಯಿದು ಉದ್ಯಾಪನೆಯ ಕ್ರಮವಿಂತು ತಿಂಗಳು ನಡೆಸುವುದು ಯಿಂತೀಕ್ರಮದಿ ಬಡವರೊಡೆಯರೆನ್ನದೆ ಯಥಾಶಕ್ತಿಯಂ ಭಕ್ತಿಪೂರ್ವಕಂ ನೋಂಪ ಭವ್ಯರ್ಗೆ ಸ್ವರ್ಗ್ಗಾಪವರ್ಗಂಗಳಪ್ಪವು ರಸಪರಿತ್ಯಾಗದ ನೋಂಪಿಯಕ್ರಮಂ || ಜಯಮಂಗಳಂ