ಶ್ಲೋಕ || ಸುರೋರಗನೋಧೀರ ಲಾಲಿತಾಂಘ್ರಿ ಸರೋರುಹಂ
ನತ್ಯಾನೇಮಿಜಿನಾಧೀಶಂ ವಕ್ಷ್ಯ್ವೇಶ್ರೀ ಪಂಚಮೀಕಥಾಂ || ೧ ||

ವ || ಅದೆಂತೆಂದೋಡಿಜಂಬೂದ್ವೀಪದ ಭರತಕ್ಷೇತ್ರದಾರ್ಯ್ಯಾಖಂ ಡದ ಮಗಧ ದೇಶದ ರಾಜಗೃಹಪುರಾಧೀಶಂ ಶ್ರೇಣಿಕ ಮಹಾಮಂಡಲೇಶ್ವರನೆಂಬಾತನ ಪಟ್ಟದರಸಿ ಚೇಳಿನೀಮಹಾದೇವಿಯೆಂಬಳಂತವರೀರ್ವ್ವರುಂ ಸುಖಸಂಕಥಾವಿನೋದದಿಂ ರಾಜ್ಯಂಗೆಯ್ಯುತ್ತಮಿರಲೊಂದುದಿವಸಂ ಋಷಿನಿವೇದಕಂ ಬಂದು ಸಾಷ್ಟಾಂಗ ಪ್ರಣತನಾಗಿ ದೇವಾ ನಮ್ಮ ಪುರದ ಪಶ್ಚಿಮದಿಗ್ಭಾಗದಲ್ಲಿಯ ವಿಪುಲಾಚಲ ಪರ್ವ್ವತಾಗ್ರದಲ್ಲಿ ಶ್ರೀವರ್ಧಮಾನಸ್ವಾಮಿಯ ಸಮವಸರಣಂ ಬಿಜಯಂಗೈದು ನೆಲಸಿರ್ದ್ದುದೆನೆ ಆ ದೇಶೆಗೇಳಡಿಯಂ ಪಡೆದು ಹರ್ಷೋತ್ಕರ್ಷ ಚಿತ್ತನಾಗಿ ವಸಗೆಯಂ ತಂದಂ ಗಂಗಚಿತ್ತಮಂ ಕೊಟ್ಟಾನಂದ ಭೇರಿಯಂ ಪೊಯಿಸಿ ಪರಿಜನ ಪುರಜನಂಬೆರಸು ಸಮವಸರಣಮಂ ಪೊಕ್ಕು ಗಂಧಕುಟಿಯ ತ್ರಿಪದಕ್ಷಿಣಂಗೈಯ್ದು ಆ ಪರಮೇಶ್ವರನಂವಸ್ತುಸ್ತವ ಗುಣಸ್ತವ ರೂಪಸ್ತವ ಶತಸಹಸ್ರಂಗಳಿಂ ಸ್ತುತಿಯಿಸಿಗೌತ ಮಸ್ವಾಮಿ ಮೊದಲಾದ ಋಷಿ ಸಮುದಾಯಮಂ ವಂದಿಸಿ ತದನಂತರಂ ಮನುಷ್ಯಕೋಷ್ಠ ದೋಳ್ಕುಳಿರ್ದ್ದು ಬಳಿಕ ಶ್ರೇಣಿಕಮಹಾಮಂಡಲೇಶ್ವರಂ ಗೌತಮಸ್ವಾಮಿಗಳ್ಗೆ ಕರಕಮಲಂಗಳಂ ಮುಗಿದು ಬಿಂನಪಂಗೈದನೆಲೆ ಸ್ವಾಮಿ ನೆರಪಿದ ಪಾಪಕರ್ಮ್ಮಂಗಳಂ ಕೆಡಿಸುವುದಕ್ಕೆ ಆವುದಾನೊಂದು ನೋಂಪಿಯಂ ಬೆಸಸಿಮೆನಲವರಿಂತೆದರು, ವಸ್ತು ಕಲ್ಯಾಣ ಸುಗಂಧ ದಶಮಿ ಪಂಚಕಲ್ಯಾಣ, ಶ್ರುತಾವತಾರ ಕಲ್ಪಕುಜ ಸುಗಂಧಬಂಧುರ ನಂದ್ಯಾವರ್ತ ಮಹೋದಯ ವರ್ಧಮಾನಮಹೋಧಯ ಧರ್ಮ್ಮಚಕ್ರೋದಯ ಸರ್ವ ಮಂಗಳ ಮಂಗಳಾವರ್ತ ಸರ್ವತೋಭದ್ರ ಸಾರಸ್ವತ ರೂಪಾರ್ನವ ಲಕ್ಷ್ಮೀ ಮಂಗಲ ಜಿನಚಂದ್ರಾರ್ನವ – ಜ್ಞಾನಸಾರ ಧರ್ಮ್ಮಮಹೋಡಯ ಮಂಗಳಸಾರ ರತ್ನಾವಳಿ ಪುಣ್ಯಸಾರ ವಸುಧಾಭೂಷಣ ಕಲ್ಯಾಣಚೂಡಾಮಣಿ ಪ್ರಾತಿಹಾರ್ಯೋದಯ ಸಮವಸರಣಮಂಗಲ ಪರ್ವತಾಕೃತಿ ಕಲಧೌತಾರ್ನವ – ರತ್ನಕೋಸೋದಯ ಶುತಸ್ಕಂಧ ವಿದ್ಯಾಮಂಡನ ಕಂದರ್ಪಸಾರ ಭವದುಃಖನಿವಾರಣ ಅನಂತಸೌಂದರ್ಯ ಕೇವಲ ಸಿದ್ಧಚಕ್ರದ ನೋಂಪಿಗಳು ಮೊದಲಾದ ಎಲ್ಲಾ ನೋಂಪಿಗಳೊಳು ಸಪ್ತಜ್ಯೋತಿ ಚಕ್ರವಾಳ ಸಿದ್ಧಚಕ್ರದ ನೋಂಪಿಗಳು ಮೊದಲಾದ ಎಲ್ಲಾ ನೋಂಪಿಗಳೊಳು ಸಾರಮಪ್ಪ ಶ್ರೀಪಂಚಮಿಯ ನೋಂಪಿಯಂ ನೋಂಪುದೆನೆ ಆ ನೋಂಪಿಯ ವಿಧಾನಮೆಂತೆನೆ ಅವರಿಂತೆಂದು ಬೆಸಸಿದರು ಆಷಾಢಮಾಸದೊಳಾನುಂ ಕಾರ್ತೀಕ ಮಾಸದೊಳಾನುಂ ಫಾಲ್ಗುಣ ಮಾಸದೊಳಾನುಂ ಶುಕ್ಲಪಕ್ಷದ ಚವುತಿಯದಿನಂ ನೋಂಪವರೆಲ್ಲಂ ಶುಚಿರ್ಭೂತರಾಗಿ ಚೈತ್ಯಾಲಯಕ್ಕೆ ಬಂದು ಯಥಾಶಕ್ತಿ ಪೂರ್ವಕದಿಂತ್ರಿನೋಪವಾಸಮಂ ಕೈಕೊಂಡು ಷಷ್ಟಿಯ ಮಧ್ಯಾಹ್ನ ಪರ್ಯಂತಂ ಶುಭಧ್ಯಾನದೊಳು ದಿವಸಮಂ ಕಳೆಯುತ್ತಮಿರಲು ಶ್ರೀ ಪಂಚಮಿಯ ದಿನದೊಳುಸ್ನಾನಾಂಬರ ಗಂಧಾರ್ಚನಾಲಂಕಾರಂಗಳಿಂದಲಂಕಾರಂಗಳಂ ಮಾಡಿಕೊಂಡು ಮಂಗಲ ದ್ರವ್ಯ ಸಮನ್ವಿತನಾಗಿ ಚೈತ್ಯಾಲಯಕ್ಕೆ ಬಂದು ತ್ರಿಕರಣ ಶುದ್ಧಿಯಂ ತ್ರಿಃಪ್ರದಕ್ಷಿಣಂ ಗೈಯ್ದುನಿಷಿದ್ಧಿಯಿಂದೊಳಗಂ ಪೊಕ್ಕು ಜಿನೇಶ್ವರನ ವಸ್ತುಸ್ತವ ರೂಪಸ್ತವಗುಣಸ್ತವ ಶತಸಹಸ್ರಂಗಳಿಂ ಸ್ತುತಿಯೆಸಿ ಪಂಚಪರಮೇಷ್ಠಿಗಳಿಗೆ ಪಂಚಾಮೃತಾಭಿಷೇಕಮಂ ಮಾಡಿಸುವುದು ಸುಗಂಧ ಬಂದುರ ಗಂಧೋದಕಂ ಮಾಡಿ ನೋಂಪುವರೆಲ್ಲಂ

ಎಂಬೀ ಮತ್ರದಿಂ ಮಸ್ತಕಕ್ಕೆ ತಳಿದುಕೊಂಡು ಬಳಿಕ ಪರಮಾನ್ನ ಹುಗ್ಗಿ ಆಜ್ಯಗುದಾವೂಪ ನೈವೇದ್ಯ ದ್ವಾದಶ ಕ್ರಮುಕಮೇಣ ೨೪ ಕ್ರಮದ ಪ್ರಮಾಣ ನಾಗವಲ್ಲೀದಳ ಪರಿಣತಫಲಗಂಧ ತಂಡುಲ ಪುಂಜ ಕುಸುಮ ಕರ್ಪ್ಪೂರ ಪ್ರದೀಪಂಗಳಿಂ ನಾನಾ ಪ್ರಕಾರದ ಫಲಂಗಳಿಂ ದಿಕ್ಕಿರಿದಂತಾಗಿ ಮಂತ್ರಗಳಿಂ ಅಷ್ಟವಿಧಾರ್ಚ್ಚನೆಯಂ ಮಾಡಿ ಎಂಬೀ ಮಂತ್ರದಿಂ ಪುಷ್ಪಾಂಜಲಿಯಂ ನಿರ್ವ್ವರ್ತ್ತಿಸಿ ಬಳಿಕ ಸವಿಸ್ತರದಿಂ ಶ್ರುತಗುರು ಪೂಜೆಯಂಮಾಡಿ ಆ ದಿನದಿರುಳುಯಥಾಶಕ್ತಿಯಂ ಧರ್ಮ್ಮಾನುರಾಗ್ರದಿಂದಭಿಷೇಕಾಷ್ಟ ವಿಧಾರ್ಚ್ಚನಾಪುರಸ್ಸರಜಾಗರಮಂ ಮಾಳ್ಪುದು ತದನಂತರಂ ಪಾರಣೆಯದಿನದೊಳು ಅಭೀಷೇಕಾಷ್ಟ ವಿಧಾರ್ಚನೆಯಂಮಾಡಿ, ತದನಂತರಂ ಪಾಯಸಾಜ್ಯಚಿಗುಳಿ ನೆನಗಡಲೆ ತಂಬಿಟ್ಟು ನೆನೆಯಕ್ಕಿಗಳಿಂ ನಾನಾ ಫಲಗಳಿಂಶ್ರುತ ಪೂಜೆಯಂ ಮಾಡಿ ಬಳಿಕ ಪಾರಣೆಯ ಕಾಲದೊಳು ಐಯ್ದು ತಂಡ ಋಷಿಯರಂ, ಮೇಣು ಬಂದು ತಂಡ ಋಷಿಯರಂನಿಲಿಸುವುದು ಯಥಾ ಶಕ್ತಿಯಿಂ ಚಾತುರ್ವ್ವರ್ನ್ನಕ್ಕಾಹಾರದಾನಮಂ ಮಾಳ್ಪುದು ಬಳಿಕ ಪಾರಣಯಂ ಮಾಡಿ ಈ ಕ್ರಮದಿಂ ಪಂಚಮಾಸಾಧಿಕಂ ಪಂಚವರ್ಷಂಬರಂ ಮೇಣ ಪಂಚವರ್ಷಂ ನೋಂಪುದು ಉತ್ತಮ ಮಧ್ಯಮ ಜಘನ್ಯಕ್ರಮದೊಳೊಂದು ಪ್ರಕಾರದಿಂ ನೋಂತು ಬಳಿಕುದ್ಯಾಪನೆಯಂ ಮಾಳ್ಪಕ್ರಮಂ ಮೊದಲೊಳಾನುಂ ಕಡೆಯೊಳಾನುಂ ಪ್ರತ್ಯಗ್ರಜಿನಮಂದಿರಪೂರ್ವ್ವಕದಿಂ ಪಂಚಪರಮೇಷ್ಠಿಗಳ ಪ್ರಥುಮೆಯಂ ಮಾಡಿಸಿ ಅಷ್ಟವಿಧಾರ್ಚ್ಚನೆಯಂ ಮಾಡಿ ತದನಂತರದಲ್ಲಿ ನಿತ್ಯಾಭಿಷೇಕಕ್ಕೆ ಕಪಿಲೆ ಪಂಚಘಂಟೆ ನಕ್ಷತ್ರಮಾಲಾದ್ಯುಪಕರಣಂಗಳಂ ಮಾಡಿಸಿಕೊಂಡುವುದು ತದನಂತರಂ ಪರಮಾಗಮ ಪುಸ್ಯುಕಂಗಳೈದಂ ಬರಸಿ ಕೊಡುವುದು ಇದಕ್ಕೆ ಶಕ್ತಿಯಿಲ್ಲದಡಂ ಅಷ್ಟೋತ್ತರಶತಕಲಶಾಭಿಷೇಕಮಂ ಮಾಡಿಸಿ ಮೋದಕ ನೂರೆಂಟು ಚಕ್ಕುಲಿ ನೂರೆಂಟಡಕೆ ನೂರೆಂಟೆಲೆಗಳಿಂ ನಾನಾಪ್ರಕಾರದ ಫಲಂಗಳಿಂ ನೂತನವಾದ ೨೪ ಮೊಳದ ಶೀರೆಯ ಮೇಲೆ ನವದೇವತಾ ಯಂತ್ರಮನಾರಾಧನೆಯಂ ಮಾಡಿ ತದನಂತರಮಯಿದು ಸುವರ್ಣ್ನದ ಪುಷ್ಪಂಗಳಂ ಪಂಚಾಚಾರಮೆಂದು ಅರ್ಚ್ಚನಾ ಮಿಧಾನದಿಂದರ್ಘ್ಯಮನೀ ಮಂತ್ರದಿಂದ ತದನಂತರಂ ಜೈನ ಪುರಂಧ್ರಿಯರುಗಳಿಗೆ ಸ್ನಾನವಸ್ತ್ರಾಭರಣ ಗಂಧಚಂದ್ರಮಂ ಕೊಟ್ಟು ಸೂರ್ಪ್ಪದೊಳು ಪಂಚಭಕ್ಷ ಪಂಚಫಲ ದಕ್ಷಿಣೆ ಪೂರ್ವಕದಿಂ ಪಮ್ಚವರ್ಣದ ಸೂತ್ರಮಂಸುತ್ತಿ ಪಂಚಯಕ್ಷಿಯರುಗಳ ಭಾವನೆಯಿಂ ಬಾಯಿನಮಂ ಕೊಡುವುದು ಕಥೆಯಂ ಕೇಳ್ದು ಕಥಕಂಗೆ ಬಾಗಿನ ವಸ್ತ್ರದಕ್ಷಿಣೆ ಮೊದಲಾದವರಿಂ ಸನ್ಮಾನಂಗಳಂ ಮಾಡಿ ಚಾತುರ್ವರ್ನಂಗಳಿಗೆ ಆಹಾರದಾನಾದಿಗಳಂ ಮಾಡಿ ಈ ಕ್ರಮದಿಂದೀನೋಂಪಿಯ ಫಲದಿಂ ಸಕಲಕರ್ಮಂಗಳುಂ ಕೆಡುವವೆಂದು ಗೌತಮ ಸ್ವಾಮಿಗಳು ಶ್ರೇಣಿಕ ಮಹಾರಾಜಂಗೆ ಬೆಸಸಲು ಮುನ್ನ ನೋಂತ ಮಹಾಪುರಷರ ಕಥೆಯಂ ಬೆಸಸಿ ಮೆನಲವರಿಂತೆಂದರು ಈ ಜಂಬೂದ್ವೀಪದ ಭರತಕ್ಷೇತ್ರ ದಾರ್ಯಾಖಂಡದ ಮಗಧ ದೇಶದ ಕನಕ ಪುರಮನಾಳ್ವಜಯಂಧರ ಮಹಾರಾಜನಾತನರಸಿ ಪೃಥುವೀದೇವಿಯೆಂಬಳವರ ಕುಮಾರನಾದ ನಾಗಕುಮಾರನಾತನ ಮನೋವಲ್ಲಭೆ ಲಕ್ಷ್ಮೀಮತಿ ಮಹಾದೇವಿಗಂ ಪುಟ್ಟದ ದೇವಕುಮಾರಂಗೆ ರಾಜ್ಯಪಟ್ಟಮಂಕಟ್ಟಿತಾವು ಶ್ರೀಪಂಚಮಿಯ ನೋಂಪಿಯಂ ನೋಂತು ಸಕಲ ದಿಙ್ಮಂಡಲಂಗಳಂ ಸಾಧಿಸಿ ಸಮಸ್ತ ಸಾಮ್ರಾಜ್ಯ ಶ್ರೀಯಮನನುಭವಿಸಿ ಪರಮಮವೈರಾಗ್ಯದಿಂ ಜಿನ ದೀಕ್ಷಾಪ್ರಾಪ್ತರಾಗಿ ಸಕಲ ಕರ್ಮಂಗಳಂ ಕೆಡಿಸಿ ಮೋಕ್ಷ ಲಕ್ಷ್ಮೀ ಕಾಂತರಾದರೆಂಬುದು ಕಥಾಭಿಪ್ರಾಯಮೆಂದು ಗೌತಮಸ್ವಾಮಿಗಳು ಭವ್ಯಜನಂಗಳಿಗೆ ಪೇಳೆಕೇಳ್ದು ಯಥಾಕ್ರಮದಿಂ ಯಥಾಶಕ್ತಿಯಿಂ ಭಕ್ತಿ ಪೂರ್ವಕದಿಂ ಶ್ರೀ ಪಂಚಮಿಯ ನೋಂತವರ್ಗಂ ನೋನಿಸಿದವರ್ಗಂ ಪೇಳ್ದವರ್ಗಂ ಕ್ರಮದಿಂ ಡೊಡಂಬಟ್ಟವರ್ಗಂ

ಮಂಗಳ ಮಹಾ ಶ್ರೀ ಶ್ರೀ ಶ್ರೀ