|| ಶ್ರೀ ವೀತರಾಗಾಯನಮಃ ||

          ಶ್ರೀ ಸಕಲ ಭುವನ ವಂದ್ಯಂ
ನಾಕಾಧಿಪ ರಚಿತ ಪಂಚ ಕಲ್ಯಾಣೇಶ
ಶ್ರೀಕರ ಚಂದ್ರಪ್ರಭಜಿನ
ಲೋಕಸ್ತುತನೀಗೆ ಭವ್ಯರಿಗಭಿಮತ ಫಲಮಂ ||

ಶ್ರುತಸ್ಕಂದಮೆಂಬ ನೋಂಪಿಯಂ ಕಾರ್ತ್ತೀಕ ಮಾಸದ ಶುಕ್ಲ ಪಕ್ಷದ ಶ್ರೀ ಪಂಚಮಿಯಂದುಪವಾಸಮಂ ಮಾಡಿ ಚತುರ್ವ್ವಿಂಶತಿ ತೀರ್ತ್ಥಕರ ಪ್ರತುಮೆಗಭಿಷೇಕಂ ಗೆಯ್ದು ಅಷ್ಟವಿಧಾರ್ಚ್ಚನೆಯಿಂದರ್ಚ್ಚಿಸಿ ಶ್ರುತಮಂ ಆಚಾರ್ಯ್ಯರುಮನರ್ಚ್ಚಿಸುಉದು | ಶ್ರುತಮಂ ಆಚಾರ್ಯ್ಯರುಮನರ್ಚ್ಚಿಸುಉದು ಆ ಪೊತ್ತು ಪೆರಉಂ ವ್ಯಾಪಾರಮನುಳಿವುದು ಶ್ರುತಸ್ಕಂಧಮೆಂಬುದಕ್ಕೆ ಶ್ರೀಪಂಚಮಿಯೆಂಬುದಕ್ಕೆ ನೋಂತವರ ಕಥೆಯನಕ್ಕೆ ಭಜಿಸಿ ಕೇಳುತ್ತಿರ್ಪ್ಪುದಿಂತೆಂದು ಮೊದಲೊಂದು ಪದಿನಾಲ್ಕು ಪಂಚಮಿ ವರಮಿರ್ದ್ದುಜ್ಜವಣಿಯೊಳು ಶ್ರುತದೇವಿಯ ಪ್ರತುಮೆಯನಕ್ಕೆ ಮಾಡಿಸಿ ಶ್ರುತಾವತಾರಮೆಂಬ ಪುಸ್ತಕಮನಕ್ಕೆ ಶ್ರುತ ಸ್ಕಂಧಮೆಂಬ ಪುಸ್ತಕಮನೇನಾನುಂ ಶ್ರೀ ಪಂಚಮಿಯ ಪುಸ್ತಕಮನೇನಾನಂ ಶ್ರುತಸ್ಕಂಧದ ಚಿತ್ರಮನೇನಾನುಂ ಬರೆಯಿಸಿಯಯ್ವರಾಚಾರ್ಯ್ಯರ್ಗ್ಗೆ ಶ್ರುತಪೂಜೆಯಂ ಮಾಡಿ ಕೊಡುವುದುಮೀ ನೋಂಪಿಯಂ ಸಂಪೂರ್ಣ್ನ ಮೀ ನೋಂಪಿಯ ಫಲಮೊಂದು ಭವದೊಳು ನೋಂತವರ್ಗ್ಗಳು ಭವ ಭವಾಂತರದೊಳೆಲ್ಲ ಕೋಷ್ಠ ಬುದ್ಧಿಯುಂ ಪದಾನುಸಾರಿ ಬುದ್ಧಿಯುಂ ಸಂಭಿನ್ನ ಶ್ರೋತ್ರು ಬುದ್ಧಿಯಂ ನವಬೋಧಿತ ಬುದ್ಧಿಯುಂ ಪ್ರತ್ಯಕ್ಷ ಸ್ವಯಂಬುದ್ಧಿಯುಂ ಭಾವಿತ ಸ್ವಯಮೆಂಬೀ ಬುದ್ಧಿಯನೊಡೆಯರಾಗಿಯುಂ ಕವಿ ಗಮಕಿ ವಾದಿ ವಾಗ್ಮಿತ್ವ ಗುಣಂಗಳೊಳ್ ಪರಿಚಿತರಾಗಿ ತತ್ವಾತತ್ವ ಸವ್ಯವಹಾರ ಶಾಸ್ತ್ರಾರ್ತ್ಥ ಪರಿಣತರೂ ಶ್ರುತಕೇವಳಿಗಳಾಗಿಯ ಮತಿಶ್ರುತಾವಧಿ ಮನಃ ಪರ್ಯ್ಯಯ ಕೇವಲಿಗಳಾಗಿಯು ಮನಂತಜ್ಞಾನಾದಿ ಚತುಷ್ಟಯ ಗುಣಂಗಳೊಳ್ಕೂಡಿ ಸಂಪನರಪ್ಪಷ್ಟಮಹಾ ಪ್ರಾತಿಮಾರ್ಯ್ಯದೊಳ್ಕೂಡಿಯನಂತ ಸುಖಮನೆಯ್ದುವರೂ | ಮತ್ತಂ ಸಿದ್ಧ ಪರಮೇಷ್ಠಿ ಸುಖದೊಳ್ತಂಣನೆ ತಣಿಯುತ್ತಮಿರ್ಪ್ಪರುಮಿಂತೀ ನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಕ್ರಮದಿಂದೊಡಂಬಟ್ಟವರ್ಗ್ಗಂ ಮಂಗಳಂ ಮಹಾ ಶ್ರೀ