ಶ್ರೀ ವೃಷಭಜಿನಾಯನಮಃ ||

ಕಲ್ಯಾಣದಾಯಿಯಂ ಗುಣ
ಸಲ್ಲಲಿತ ವ್ರತ ಶುಶೀಲ ರತ್ನಾಕರನುಂ
ಪುಲ್ಲಶರಾಂತಕನಂ ಭವ
ವಲ್ಲೀಹರನಂ ಜಿನೇಂದ್ರನಂ ವಂದಿಸುವೇಂ ||

          ಶಾರದೆಯಂ ಸಕಲಕಲಾ
ವಾರಿಧಿಯಂ ನಮಿಸಿ ಭವವಿನಾಶ ನಿಮಿತ್ತಂ
ಸಾರಮೆನಿಸಿರ್ಪ ಷೋಡಶ
ಕಾರಣಮಂ ಪುಣ್ಯ ನಿಲಯಮಂವಿರಚಿಸುವೇಂ ||

ಅದೆಂತೆಂದೊಡೆ ಜಂಬೂದ್ವೀಪದ ಭರತಕ್ಷೇತ್ರದ ಮಗಧವಿಷಯದೊಳ ಮರಾವತಿಯಂತತಿ ರಮಣೀಯಮಪ್ಪ ರಾಜಗೃಹಮೆಂಬ ಪೊಳಲುಂಟದನಾಳ್ವನ ಪ್ರತಿಮಪ್ರತಾಪಂ ನಿರ್ಜಿತ ನಿಜಶತೃಭೂಪಕಲಾಪಂ ಸತುಪ್ರಷಸೇವನಾಸಾವಧಾನಂ | ವಿತರಣಗುಣಪ್ರಣುತಾ ಖಿಲಾರ್ತ್ಥಿಜನಂ | ಹೇಮಪ್ರಭನೆಂಬನಾತನ ಮನೋವಲ್ಲಭೆ ರೂಪ ಲಾವಣ್ಯಾದಿ ಗುಣಗಳಂ ವಿಜಿತಸುರಸೌಂದರೀ ವಿಜಯಂಧರಿಯೆಂಬಳುಂ | ಆ ಹೇಮಪ್ರಭರಾಜಂಗೆ ಯಜನಾದಿ ಷಟ್ಕರ್ಮ್ಮ ಚರಣ ಸಮರ್ತ್ಥಂ | ವಿನಯನಿದಾನಂ ಜನತಾವತ್ಸಲಂ | ಸಕಲಜಗತ್ಫ್ರಖ್ಯಾತನುಮಪ್ಪ ಮಹಾಶರ್ಮ್ಮನೆಂಬ ಪುರೋಹಿತನೊಳಗಾತಂಗೆ ಪ್ರಿಯಹಿತವಚನರಚನಾ ಚತುರೆಯಂ | ಸುಶೀಲತ್ವಾದಿ ಗುಣಾಭರಣ ಭೂಷಿತೆಯುಂ | ಹಂಸಗಮನೆಯುಮಪ್ಪ ಜಯೆಯೆಂಬಳು | ಚಂದ್ರಗೆ ರೋಹಿಣಿಯಂತೆ ಪ್ರಿಯತಮೆಯಾದಳಂತಾ ಮಹಾಶರ್ಮನುಂ ಜಯೆಯುಂ | ಸತಾನಾರ್ತ್ಥಿಗಳಾಗಿ ಪೂರ್ವಾರ್ಜಿತ ಪಾಪಕರ್ಮ್ಮವೆ ಮೂರ್ತ್ತಿಗೊಂಡಂತೆ ಕುರೂಪಿಯುಂ ದುರ್ಭೆಗೆಯುಂ ಸರ್ವರಿಂ ನಿಂದ್ಯಳುಂ ಸಕಲರೊಳ್‍ದ್ವೇಷಿಸುತ್ತಿರ್ಪ್ಪಳುಂ ವೊಟ್ಟಿಯಂತೆ ನಿಷ್ಠುರ ಸ್ವರೆಯುಂ | ನೀಳ್ದಜಘೆಗಳ್ಳಳುಂ ಕತ್ತಲೆಯಂತೆ ಕಲ್ಮಷಾಂಗಿಯುಂ ಬಿರಿದಪಚ್ಚೆಗಳನುಳ್ಳಳುಂ | ದೃಷ್ಟಿಗಪ್ರಿಯಳುಂ | ವಕ್ರಗ್ರೀವೆಯುಂ ರಕ್ತಾಕ್ಷಿಯುಂ | ಸ್ತೋಕನಾಸಿಕೆಯುಂ | ಕುಬ್ಜೆಯುಂ | ಭಯಂಕರಮೂರ್ತ್ತಿಯುಂ | ಪ್ರಸ್ಯಹಸ್ತೆಯುಂ | ರೋಗಾದಿದೋಷದಿಂ ಕಣ್ಗಾಣದಳುಂ | ಅನೇಕ ರೋಗಾಕುಲಿತ ಶರೀರೆಯುಂ | ಸರ್ವ್ವಜುಗುಪ್ಸನೀಯ ಮೂರ್ತಿಯಪ್ಪ ಚಂಡಕುಮಾರಿ ಎಂಬ ಮಗಳಾದಳಾ ಆಕೆಯುಂ ಪ್ರೌಢಯವ್ವನೆಯಾದಾಗಳಾರುಂ ವಿವಾಹನಿಮಿತ್ತಂ ಪ್ರಾರ್ಥಿಸದಿರಲು ಪುರೋಹಿತಂ ವ್ಯಾಕುಲಚಿತ್ತರಾಗಿ ಪೂರ್ವೋಪಾರ್ಜಿತ ಕರ್ಮೋದಯದಿಂ ಚತುರ್ಗತಿಭ್ರಮಣರೂಪ ಸಂಸಾರಸಮುದ್ರದಲ್ಲಿ ಬೀಳ್ದು ಬಹುದುಃಖಮನನುಭವಿಸುತ್ತಿರ್ದ ಜೀವಕರ್ಮಂಗಳಂ ಕೆಡಿಸಿ ಶಾಶ್ವತಮಪ್ಪಮೃತಸುಖಮಂ ಪಡೆವೆ ನಾಂ ಪುಣ್ಯಹೀನನಪ್ಪುದರಿಂದಿಂತೀ ದುಃಖಕ್ಕೊಳಗಾದೆನೆಂದು ತನ್ನ ತಾನೆ ನಿಂದಿಸುತ್ತಂ ನಿಜಪುತ್ರಿಯ ನಿಕೃತಾಕೃತಿಯಂ ನೋಡಿ ನೋಡಿ ದುಃಖಿಸುತ್ತಿಹನ್ನೆರವರಂ | ಚರ್ಯ್ಯಾರ್ತ್ಥಂ ಚಾರಣ ಯುಗಮೆಯಿತರಲದಂ ಕಂಡು ಇದಿರ್ವ್ವೋಗಿ ನಮಸ್ಕರಿಸಿ ಎಲೈ ಕೃಪಾರಾತಿಷ್ಟಯೆಂದವರಂ ನಿಲ್ಲಿಸಿ ನಿರ್ದ್ದೋಪಮಪ್ಪಾಹಾರಮನಿತ್ತು ನಿರಂತರಾಯಾನಂತರಂ ಎಲೆ ಮುನೀಶ್ವರ ಎಂತಪ್ಪ ಪಾಪದಿಂದೆನ್ನ ಮಗಳು ಕುರೂಪಿಯಾದಳದು ನಿರೂಪಿಸ ವೇಳ್ಕುಮೆಂದು ಬೆಸಗೊಳ ಸಕಲ ಸತ್ಯಹಿತ ಚರಿತ್ರಂ ಪರಮ ನಿಸ್ಪೃಹನಪ್ಪ ಮುನಿನಾಥನಾಕೆಯ ಮುಂದೆ ತದೀಯ ಭವಪ್ರಪಂಚ ಮಿಂತೆಂದು ಪೇಳ್ದರು ಅವಂತೀ ವಿಷಯದೊಳು ವಿಶಾಲ ನಗರಿಯೊಳು ಗೋಪಾಲನಂತೆ ಪ್ರಜಾಪಾಲನ ದಕ್ಷನುಂ ಸಕಲ ರಾಜ್ಯ ವಿಶಾರದನುಮಪ್ಪ ಮಹೀಪಾಳನೆಂಬರಸಾದನಾತಂಗೆ ಪುರುಷೋತ್ತಮಂಗೆ ಲಕ್ಷ್ಮೀದೇವಿಯಂತೆ ಸಕಲಗುಣ ಸಂಪನ್ನೆಯಹ ವೇಗವತಿಯಂಬಳು ಪ್ರಾಣವಲ್ಲಭೆಯಾದಳು ಆಕೆಯ ಗರ್ಭದೊಳ್ವಿವೇಕ ವಿಕಲೆಯುಮಪ್ಪ ಕಲ್ಯಾಣಾಂಗಿಯುಂ ನಿರ್ಲ್ಲಜ್ಜೆಯುಂ ನಿರ್ಬ್ಭೀತಿಯುಮಪ್ಪ ವಿಶಾಲೆಯೆಂಬ ಮಗಳ್ಪುಟ್ಟಿ ನವಯೌವ್ವನ ಮದದಿಂ ಭವ್ಯಜನಶರಣ್ಯನುಂ ಸಂಸಾರೋತ್ತಾರಕನುಮಪ್ಪ ಯತೀಶ್ವರ ನರಮನೆಗೆ ಭಾವಲಿ ವಿಧಿಯಿಂ ಬರುತಿರಲಾತನೆಂ ಮಹೀಪಾಲ ಮಹಾರಾಜಂ ಕಂಡು ಭಾವ ಶುದ್ಧಿಯಿಂದಾಹಾರಮನೀಯೆ ನೈರಂತರಾಯಾನಂತರಂ ಅಕ್ಷಯದಾನಮಸ್ತು ಎಂದು ಮುನೀಶ್ವರಂ ಪರಸಿಪೋಪಾಗಳ್ಕಿರಿದು ದೂರಮರಸನುಮವರ ಪಿಂತೆ ಪೋಗುತ್ತಿರಲಲ್ಲಿ ಒಂದು ಪ್ರಸಾದಾದ ಕೆಳಗವರೀರರೊಂದಾಗಿ ಬರ್ಪ್ಪುದುಂ ದುಶ್ಚೇಷ್ಟಿತೆಯಪ್ಪವಳ್ ವಿಶಾಲೆ ಗವಾಕ್ಷದಿಂ ಕಂಡು ಮುನೀಶ್ವರನ ಮೇಲುಗುಳ್ದಳದನರಸಂ ಇದೇನೆಂದು ವಿಸ್ಮಿತನಾಗಿ ದೆಶೆ ದೆಶೆಗಳಂ ನೋಡುತ್ತಂ ಮದಾಂಧೆಯಪ್ಪ ತನ್ನ ಮಗಳಂ ಕಂಡು ಪಾಪಿಷ್ಟೆ ಯಿವಳುಗುಳ್ದಳೆಂದು ನಿಶ್ಚೈಸಿ ಪರಮ ಭಕ್ತಿನಪ್ಪ ಮಹೀಪಾಳಂ ತಾಂ ಪೊದೆದಿರ್ದ್ದ ವಸ್ತ್ರಾಚಲದಿಂದದನೊರಸಿ ಮಗುಳೆ ಬಂದು ಪಿರಿದು ರೋಷದಿಂ ಬಂದು ಮಗಳಂ ಸ್ವಹಸ್ತದಿಂ ನೋಯವೊಯ್ದು ಮತ್ತಂ ಸಂಬೋಧಿಸಲ್ಬೇಡ ಎಲೆ ಪಾಪಿಷ್ಟೆ ನಿನ್ನ ಯೌವ್ವನ ಮದೋದ್ಧತೆಯಿಂ ಮಾಡಿದ ದುಶ್ಚೇಷ್ಟಿಮಿದು ನಿನ್ನಂ ಘೋರಸಂಸಾರಾರ್ಣ್ನವದೊಳ್ಚಿರಕಾಲಂ ಮುಳುಗಿಸಲ್ಲದೆ ಬಿಡದೆಂತನೆ ಮುನ್ನೋರ್ವ ಚಂದನೆಯೆಂಬವಳೋರ್ವ್ವ ಮುನೀಶ್ವರಂಗೆ ಆಹಾರಮನೀವಾಗಳ್ಕಾಮಾಕುಲಿತೆ ಯಾದುದರಿಂ ಜನ ನಿಂದಿತೆ ಯಾದಳಂತೆ ಮುನ್ನೋರ್ವ್ವಳ್ಸಿಂಧುಮತಿಯಂಬರಸಿ ಮುನೀಶ್ವರಂಗೆ ಕೋಧ್ರ ಪರಿಣಾಮದಿಂ ಕಹಿಸೋರೆಯ ರಸ ಮಿಶ್ರಮಪ್ಪನ್ನಮನಿತ್ತು ಸೂಕರಾದಿ ಯೋನಿಗಳೊಳ್ಪುಟ್ಟಿ ಬಹುಕಾಲಂ ಸಂಸಾರದೋಳ್ಘ್ರಮಿಸಿದಳೆಲೆ ಮಗಳೆ ನೀಂ ಸಂಸ್ಕೃತಿಯೋಳ್ತಿರುಗಿದಪೆ ಸಂದೇಹಮಿಲ್ಲದು ಕಾರಣದಿನಾರ್ಕ್ಕೆಲರ್ಮ್ಮಹಾಪುರಷರಪ್ಪ ಮುನೀಂದ್ರರಂ ವಿವೇಕ ವಿಕಲತೆಯಿಂ ಮಳಿಯುತಿರ್ಪರವರ್ನ್ನಿಯಮದಿಂ ನರಕಮನೆಯ್ದಿರುವರೆಂದು ತಂದೆ ಪೇಳೆ ಕೇಳ್ದು ಪಿರಿದುಂ ಲಜ್ಜಿತೆಯಾಗಿ ಪಾಪ ಕರ್ಮ್ಮರತೆಯುಂ ಪುಣ್ಯಹೀನೆಯುಮಪ್ಪಾಂ ಮುನೀಶ್ವರನಂ ನಿಂದಿಸಿದೆನೆಂದು ತನ್ನ ಮನದೋಳ್ನೊಂದು ನಾಂ ಮಾಡಿದ ದುಃಕೃತಮಂ ಕ್ಷಮಿಸು ನನ್ನಪರಾಧಮಂ ಪರಿಹರಿಸಲುಪಾಯಮಾವುದೆಂಬುವಂ ನಿರೂಪಿಸೆನೆ ತಂದೆ ಯಿಂತೆಂದಂ ಸಕಲ ದೋಷರಹಿತಂ ಸರ್ವ್ವಜ್ಞತ್ಯಾದಿ ಗುಣಸಹಿತಂ ಜಿನನೇ ದೇವಂ ನಿಗ್ರಂಥನೆ ಗುರು ದಶಲಕ್ಷಣ ಯುಕ್ತವೇ ಧರ್ಮವೆಂದಿವಂ ನೀಂ ಶರಣಾಗು ರತ್ನತ್ರಯ ರೂಪಮಪ್ಪ ಮೋಕ್ಷಮಾರ್ಗದೊಳ್ನಿಶ್ಚಲ ರುಚಿಯಂ ಧರಿಸು ಯತಿಗಳಿಗಾಹಾರದಾನಮಂ ಕೊಡು ಶ್ರೀಯಿಂದ ಅಜ್ಞಾಅಧಿಗಮಾದಿ ಸಮ್ಯಕ್ತ್ಯ ಪ್ರಕೃತಿಗಳಂ ಪಂಚವಿಂಶತಿ ಮಲಂಗಳಂ ವಿಸ್ತರಿಸಿ ತಿಳಿವಂತಾಗಿ ಪೇಳೆ ಇಂತು ವರ್ತಿಸುತ್ತಿರೆ ಪಾಪಂಗಳ್ಕಿಡುವುವೆಂದು ನಿಜ ಜನಕಂ ಪೇಳೆ ಕೇಳ್ದು ಮೌಢ್ಯಮಂ ಬಿಟ್ಟು ತನ್ನಂ ತಾನೇ ನಿಂದಿಸಿಕೊಳ್ಳುತ್ತಂ ಮುನೀಶ್ವರನ ಸನ್ನಿಧಿಗೆ ಬಂದು ಎಲೆ ಸ್ವಾಮಿ ಸ್ವಾಮಿ ಎನ್ನವರಂ ಜರೆಯಂಬ ರಕ್ಕಸಿ ಜವ್ವನಮಂ ತಿನ್ನಲೆನ್ನಳು ಮೃತ್ಯು ವ್ಯಾಘ್ರಂ ಪ್ರಾಣಮ ನಪಹರಿಸದಂದು ಬದ್ಧ ಕರ್ಮ್ಮೇಂದ್ರಿಯಂ ಪುಟುತ್ವಂ ಕೆಡದನ್ನವರಮೆ ಸಹಿತಮ ನಾಚರಿಸಲ್ವೇಳ್ಕುಮಪ್ಪುದರಿನೆನಗೊಂದು ಪ್ರತಮಂ ಕರುಣಿಪುದೆಂದು ಬಿನ್ನಪಮ್ಗೆಯ್ದು ಬಾಲತ್ವದೊಳೆ ವ್ರತಮಂ ತೆಳೆದು ಮುನೀಶ್ವರನ ಪದಕಮಂಗಳ್ಗೆರಗಿ ಪರಮಾಗಮಕೋವಿದೆರಪ್ಪಜ್ಜಿಕೆಯರ ಸಮೀಪದೊಳಿರ್ದು ಸಕಲ ದುರಿತ ಸಂಹರಣದೋಳ್ ಸಮರ್ತ್ಥಮಪ್ಪಾವಶ್ಯಕ ಷಟ್ಕರ್ಮಮಂ ಸ್ಬಯಂಭು ವಿತ್ಯಾದಿ ಚತುರ್ವ್ವಿಂಶತಿ ಸ್ತೋತ್ರಮಂ ತಚ್ಚಾರಿತ್ರಮುಮಂ ಶುಭಪ್ರಾಪ್ತಿ ನಿಮಿತ್ತಮಾದ ಪರಮೈಶ್ವರ್ಯದಾಯಕಮಪ್ಪ ಪಂಚವಿಂಶತಿ ಭಾವನೆಯುಮಂ ಮೋಕ್ಷಾ ರ್ತ್ಥಿಚಿತ್ತದೋಳ್ ಭಾವಿಸುತ್ತುಂ ಕೆಲವುಕಾಲಂ ತಪಂಬಟ್ಟು ಸನ್ಯಸನ ವಿಧಿಯಿಂ ಪ್ರಾಣಮಂ ಪರಿತ್ಯಜಿಸಿ ಶೇಷಪಾಪೋದಯದಿಂ ಪುರೋಹಿತನ ಮಗಳಾದೆಯೆಂದು ಚಾರಣ ಮುನೀಶ್ವರಂ ಚಂಡಕುಮಾರಿ ಕನ್ನಿಕೆಗೆ ಪೇಳೆ ಕೇಳ್ದು ಎಲೆ ಮುನೀಂದ್ರ ನೀಂ ಸರ್ವ್ವಜೀವ ದಯಾಪರ ನಪ್ಪುದರಿಂದನ್ನೊಳಾದ ಕೃಪೆಯಿಂ ಸುವ್ರತ ಸಂಪನ್ನನಪ್ಪ ನೀಂ ಪಾಪವಿಚ್ಛತ್ತಿ ನಿಮಿತ್ತಮಪ್ಪುದೊಂದು ವ್ರತಮನೆನಗೆ ಕರುಣಿಪುದೆನೆ ಪಾಪಭೀತಿಯಪ್ಪಾಯಕನಂ ಕಂಡು ಚಾರಣ ಮುನಿಶ್ರೇಷ್ಠನೆಂದನೆಲೆ ಮಗಳೆ ನೀಂ ದುಃಕರ್ಮ್ಮ ನಿಮ್ಮೂಲನಮಪ್ಪ ಷೋಡಶಭಾವನಾ ವ್ರತಮಂ ಸ್ವೀಕರಿಸು ಮತ್ತಾವನೊರ್ವ್ವ ವ್ರತವಿರಹಿತನುತ್ತರ ಭವದೋಳ್ನರಕಾದಿ ದುರ್ಗತಿಗಳೊಳು ದುಃಖಮನುಂಬಂ ಮತ್ತಾವನೋರ್ವ್ವಂ ಸದ್ರ್ಯತ ಸಂಪನ್ನನಾತಂ ಸ್ವರ್ಗ್ಗಾದಿ ಸುಖಮನುಂಬಂ ಪರನಿಂದೆಯಂ ಮಾಳ್ಪಾತನುಂ ಸಮ್ಯಕ್ತ್ವಹೀನನುಂ ಭೂಭಾರಕನಲ್ಲದೆ ಪ್ರಯೋಜನಮಾತನಿಂದಮೇನುಮಿಲ್ಲೆನೆ ಮಗುಳೆ ನಮಸ್ಕರಿಸಿ ಎಲೆ ಸ್ವಾಮಿ ಆ ನೋಂಪಿಯ ವಿಧಾನಮೆಂತೆನೆ ಪೇಳ್ದರು ಭಾದ್ರಪದ ಮಾಸದೊಳಂ ಮೇಣು ಮಾಘ ಮಾಸದೊಳಂ ಘಟಿಸಿ ಬಂದೊಂದು ಮಾಸದೊಳಾನುಂ ನೋಂಪುದರಲ್ಲಿ ಭಾದ್ರಪದೊಳ್ನೋಂಪಾಗಳು ಶುಕ್ಲಪಕ್ಷಂ ಪೂರ್ವ್ವಪಕ್ಷಂ ಕೃಷ್ಣಪಕ್ಷಂ ಅಪರಪಕ್ಷಂ ಎಂಬ ಪರಿಭಾಷಿತೆ ಲೋಕದೊಳುಂಟಾದೊಡಂ ಕಲ್ಪತರುತೇಜೋರಂಗ ಕಳೆಗುಂದಿದಾದಿಕ್ರಮದೋಳ್ ಪರಮಾಗಮದಲ್ಲಿ ಕೃಷ್ಣಪಕ್ಷಮೆ ಪೂರ್ವ್ವಪಕ್ಷಂ ಶುಕ್ಲ ಪಕ್ಷಮೆ ಅಪರಪಕ್ಷಮಪ್ಪುದುಂಟಾದುದರಿಂ ಶ್ರಾವಣಮಾಸದ ಕೃಷ್ಣ ಪಕ್ಷಮಂ ಭಾದ್ರಪದಮಾಸದ ಪೂರ್ವ್ವಪಕ್ಷಮೆಂದುಕಂಡು ಶ್ರಾವಣ ಮಾಸದ ಹುಣ್ಣುಮೆ ಹೋದ ಪಾಡ್ಯ ಮೊದಲ್ಗೊಂಡು ವೊಂದುತಿಂಗಳು ನೋಂಪುದು ಆ ನೋಂಪಿ ಜಘನ್ಯ ಮಧ್ಯಮೋತ್ಕೃಷ್ಟಭೇದದಿಂ ಮೂರುತೆರನಕ್ಕುಂ | ಅಲ್ಲಿ ಏಕಾಂತರಮಂಮಾಡಿ ನೋಂಪುದು ಜಘನ್ಯಮಕ್ಕುಂ ತನ್ನ ಶಕ್ತ್ಯಾನುಸಾರ ಮಧ್ಯಮೋತ್ಕೃಷ್ಟಂಗಳಾಚರಿಸಲ್ಪಡುವುವು ನೋಂಪಿಯಂ ಪ್ರಾರಂಭಿಸುವ ದಿನದೊಳು ಸ್ನಾಮಂ ಮಾಡಿ ಧೌತವಸ್ತ್ರಮನುಟ್ಟು ಶುಚಿರ್ಬ್ಭೂತರಾಗಿ ಜಿನಾರ್ವನಾದ್ರವ್ಯ ಸಹಿತಂ ಚೈತ್ಯಾಲಯಕ್ಕೆ ಬಂದು ಜಿನೇಂದ್ರನಂ ತ್ರಿಃಪ್ರದಕ್ಷಿಣೆಗೆಯ್ದು ಸ್ರಾಷ್ಟಾಂಗಪ್ರಣುತನಾಗಿ ನಾನಾ ಸ್ತೋತ್ರಂಗಳಿಂ ಸ್ತುತಿಸಿ ಪೂಜಿಸಿ ತದನಂತರಂ ವೃದ್ಧಾನುಕ್ರಮದಿಂ ಯತಿಗಳಂ ವಂದಿಸಿ ಮತ್ತಾಚಾರ್ಯ್ಯರ್ಗೆಬಂದು ನಮಸ್ಕರಿಸಿ ಸಕಲಾಭ್ಯುದಯ ನಿಶ್ರೇಯಸ ಸುಖಪ್ರದಮುಂ ಅನರ್ಘ್ಯಮುಮಪ್ಪ ಷೋಡಶಭಾವನಾ ವಿಧಾನಮಂ ಕೈಕೊಂಡು ದಿವಸದೋಳ್ನೋಂಪುದು ನೋಂಪ್ಯಾಗಳರ್ಹತ್ಪರಮೇಷ್ಠಿಗಳಂ ಶ್ರುತಗಣಧರ ಪರಮೇಷ್ಠಿಗಳಂ ಪಂಚಾಮ್ರುತಂಗಳಿಂದಭಿಷೇಕಮಂ ಮಾಡಿ ತದನಂತರಂ ಪದಿನಾರೆಸಳ ಯಂತ್ರಮನುದ್ಧರಿಸಿ ಕರ್ನ್ನಿಕೆಯ ಮಧ್ಯದೊಳರ್ಹಂಕಾರಮಂ ಬರೆದು ಅದರ ಸುತ್ತಲೂ ಓಂ ಹ್ರೀಂ ಷೋಡಶಕಾರಣೇಭ್ಯೋನಮಃ | ಎಂದು ಬರೆದು ಮತ್ತಂ ಷೋಡಶಸ್ವರಂಗಳಿಂ ವೇಷ್ಟಿಸುವುದು ಬಳಿಕ ಅತೀತ ವರ್ತ್ತಮಾನ ಅನಾಗತ ಈ ಕ್ರಮದಿಂತೀರ್ತ್ಥಂಕರರ ನಾಮಂಗಳಿಂ ವೇಷ್ಟಿಸೂದು ದಳಂಗಳೋಳ್ಪ್ರದಕ್ಷಿಣೆಯಾಗಿ ಕ್ರಮದಿಂ | ಈ ಹ್ರೀಂ ದರ್ಶನ ವಿಶುದ್ಧಯೇ ನಮಃ | ಎಂಬಿತ್ಯಾದಿ ಷೋಡಶ ಮಂತ್ರಂಗಳಂ ಬರೆವುದು ಮತ್ತೆ ಹ್ರೀಂಕಾರದಿಂ ಮೂರುಸೂಳ್ವೇಷಿಸಿ ಗ್ರೋ ನಿರುದ್ಧಂಮಾಡಿ ಪೃಥ್ವೀಮಂಡಲದಿಂ ವೇಷ್ಟಿಸೂದು ಇಂತಪ್ಪ ಷೋಡಶಭಾವನಾಯಂತ್ರಕ್ಕಭಿಷೇಕಮಂ ಮಾಡಿ ಜಿನರಂ ಶ್ರುತಗುರುಗಳ್ಗಷ್ಟವಿನಾರ್ಚನೆಯಂ ಮಾಡಿ ತದನಂತರಂ ನೋಂಪಿಯಂ ಮಾಳ್ಪಾಗಳುಂ | ಓಂ ಹ್ರೀಂ ಷೋಡಶಕಾರಣೇಭ್ಯೋ ಜಲಂ ನಿರ್ವ್ವಪಾಮಿಸ್ವಾಹಾ | ಇತ್ಯಾದಿ ಸಮುಚ್ಚಯದಿಂದಷ್ಟವಿಧಾರ್ಚನೆಯಂಮಾಡಿ ಮತ್ತಂ | ಓಂ ಹ್ರೀಂ ದರ್ಶನ ವಿಶುದ್ಧಯೇ ಜಲಂ ನಿರ್ವ್ವಪಾಮಿಸ್ವಾಹಾ | ಓಂ ವಿನಯಸಂಪನ್ನತಾಯ ಜಲಂ ನಿರ್ವ್ವಪಾಮಿಸ್ವಾಹಾ | ಓಂ ಶೀಲವ್ರತೇಷ್ವನತೀಚಾರಾಯ ಜಲಂ | ಓಂ ಅಭಿಕ್ಶಣಜ್ಞಾನೋಪಯೋಗಾಯ ಜಲಂ | ಓಂ ಸಂವೇಗಾಯ ಜಲಂ | ಓಂ ಶಕ್ತಿಸ್ತ್ಯಾಗಾಯ ಜಲಂ | ಓಂಶಕ್ತಿತಸ್ತವನೇ ಜಲಂ | ಓ || ಸಾಧುಸಮಾಧಯೇ ಜಲಂ | ಓಂ ವೈಯ್ಯಾಪೃತ್ಯಕರಣಾಯ ಜಲಂ | ಓಂ ಅರ್ಹದ್ಭಕ್ತಯೇ ಜಲಂ | ಓಖಂ ಆಚಾರ್ಯ್ಯ ಭಕ್ತಯೇ ಜಲಂ | ಓಂ ಆವಸ್ಯಕಾ ಪರಿಹಾರಯೇ ಜಲಂ | ಓಂ ಮಾರ್ಗಪ್ರಭಾವನಾಯೈ ಜಲಂ | ಓಂ ಪ್ರವಚನ ವತ್ಸಲತ್ಯಾಯೈ ಜಲಂ | ಎಂಬೀ ಮಂತ್ರಂಗಳನೋದುತ್ತಂ | ಸಕಲ ಕರ್ಮ್ಮ ನಿರ್ಮ್ಮೂಲನ ವಾಂಚ್ಛೆಯಿಂ ಜಲ ಗಂಧಾಕ್ಷತಂಗಳಂ ಸೌರಭ್ಯ ಸೌರಭಾದಿ ಗುಣಾತಿಶಯ ಸಹಿತಂಗಳಪ್ಪ ಪಲತೆರದ ಪುಷ್ಪ ಪಕ್ವಾನ್ನಗಳಿಂ ದೀಪಧೂಪಂಗಳಿಂ ನಾನಾಪ್ರಕಾರಂ ನಯ ನಮನೋಹರಗಳಪ್ಪ ಫಲಂಗಳಿಂ ಪೂಜಿಸಿ ಅರ್ಘ್ಯಮನಿತ್ತು ಷೋಡಶ ಭಾವನಾರಾಧನೆಯ ಕಥೆಯಂ ಕೇಳ್ದು ಈ ತೆರದಿಂ ಮೂವತ್ತು ದಿವಸಂ ಬರಂ ನೋಂಪುದು ಇಂತು ಪದಿನಾರುವರ್ಷಂ ಬರಂ ನೋಂತು ದ್ಯಾಪನೆಯಂ ಮಾಳ್ಪುದೆಂತೆನೆ ಪದಿನೇಳನೆಯ ವರ್ಷದೊಳು ಚತುರ್ವ್ವಿಂಶತಿ ತೀರ್ಥಂ ಕರರುಗಳ ಪ್ರತಿಮೆಯಂ ಮೇಣ್ ವೃಷಭಾದಿ ಷೋಧಶತೀರ್ತ್ಥಕರ ಪ್ರತಿಬಿಂಬಂಗಳಂ ಮಾಣಿಕ್ಯತೀರ್ತ್ಥ ಕೃತ್ಪ್ರತ್ತಿ ಕೃತಿಗಳಂ ಮಾಡಿಸಿ ಪ್ರತಿಷ್ಠಾಪಿಸಿ ನಿತ್ಯಾರ್ಚನೆಯ ನಿರ್ವಾಹಮಂ ಮಾಡಿಕೊಟ್ಟು ಪೂರ್ವ್ವಕ್ರಮದಿಂ ಮೋಂತು ಪದಿನಾರು ತಂಡಯತಿಗಳ್ಗಮಾ ಅಜ್ಜಿಕೆಯರ್ಗ್ಗ ಜ್ಞಾನ ಸಂಯಮ ಶೌಚೋಪಕರಣಗಳನಿತ್ತು ಪದಿನಾರುಮಂದಿ ಸುವಾಸಿನಿಯರ್ಗೆ ವಸ್ತ್ರಾಭರಣ ಸಹಿತಂ ಪದಿನಾರು ಲಡ್ಡುಗೆಗಳ ನಿರಿಸಿ ಬಾಯಿನಮಂ ಕೊಡುವದು ಇಂತು ಘಟಸಸಿರ್ದ್ದೊಡೆ ಮೂವತ್ತೆರಡು ವತ್ಸರಂ ಬರಂ ನೋಂಪುದು ಇಲ್ಲಿ ಷೋಡಶಕಾರಣಂಗಳೇನೆಂದೊದೆ ಪೇಳ್ವಲಡುಗುಂ | ಶಂಕಾ ಕಾಂಕ್ಷಾ ವಿಚಿಕಿತ್ಸಾನ್ಯದೃಷ್ಟಿ ಪ್ರಶಂಸಾ ಸಂಸ್ತವಗಳೆಂಬ ದೋಷಂಗಳಿಲ್ಲದ ಸಮ್ಯಕ್ತ್ಯಂ ದರ್ಶನ ವಿಶುದ್ಧಿಯಂಬುದು || ೧ || ತನ್ನಿಂಗುಣಾಧಿಕರೋಳ್ಪ್ರಣಾಮಾದಿಗಳುಂ ಜ್ಞಾನಾದ್ಯಾಚರಣದೋಳ್ನಿರ್ಮ್ಮಲ ಪ್ರವರ್ತ್ತನಂ ವಿನಯ ಸಂಪನ್ನತೆಯಂಬುದು || ೨ || ವ್ರತಂಗಳೊಳುಂ ಶೀಲಂಗಳೊಳುಂ ಅತೀಚಾರ ಮಿಲ್ಲದಂತೆ ವರ್ತ್ತಿಪುದು ಶೀಲವ್ರತಾನತೀಚಾರಮೆಂಬುದು || ೩ || ವೀತರಾಗಪ್ರಣಿತಮುಂ ಸಕಲ ದೋಷರಹಿತಮುಮಪ್ಪ ಪರಮಾಗಮನನಡಿಗಡಿಗಭ್ಯಾಸಿಪುದು ಅಭೀಕ್ಷಣ ಜ್ಞಾನೋಪಯೋಗಮೆಂಬುದು || ೪ || ದಯಾಮೂಲಮುಮಭ್ಯುದಯ ನಿಶ್ರೇಯಸ ಸುಖಸಾಧನೆ ಮುಮಪ್ಪಧರ್ಮ್ಮದೊಳನುರಾಗಂ ಸಂವೇಗಮಕ್ಕು || ೫ || ಮಹಾವ್ರತ್ಯಾಣುವ್ರತ್ಯಂ ಸಂಯತಸಮ್ಯಗ್ದೃಷ್ಟಿಗಳೆಂಬ ತ್ರಿವಿಧ ಪಾಂತ್ರಗಳ್ಗೆ ವಿಧಿದ್ರವ್ಯದಾತೃಪಾತತ್ವಮಪ್ಪ ಚತುರ್ವ್ವಿಧ ದಾನವ ನೀವುದು ಶಕ್ತಿತಸ್ತ್ಯಾಗಮೆಂಬುದು || ೬ || ಸ್ವಶಕ್ತಾನುಸಾರದಿಂ ದುಶ್ವರಿತಮಪ್ಪ ತಪವನಾಚರಿಪುದು ಶಕ್ತಿತಸ್ತಪಮೆಂಬುದು || ೭ || ಮರಣದೊಳಮುಪಸರ್ಗದೊಳಂ ವ್ಯಾಧಿ ಪೀಡೆಯೊಳು ಭಯಮಿಲ್ಲದೆ ಸನ್ಮಾರ್ಗದೊಳು ವರ್ತ್ತಿಪುದು ಸಾಧುಸಮಾಧಿ ಯೆಂಬುದು |||| ಶ್ಚಾಸಖಾಸ ಜ್ವರಾದಿ ವಿವಿಧ ವ್ಯಾಧಿಪೀಡಿತರಹ ತಪಸ್ವಿಗಳ್ಗೆ ವೈಯ್ಯಾಪೃತ್ಯಗಳಂ ಮಾಳ್ಪುದು ವೈಯ್ಯಾಪೃತ್ಯವೆನಿಸುವುದು || ೯ || ತ್ರಿಕರಣ ಶುದ್ದಿಯಿಂದರ್ಹತ್ಪರಮೇಶ್ವರನಂ ನಿತ್ಯ ಸ್ಮರಿಸುತ್ತಿರ್ಪುದು ಅರ್ಹದ್ಭಕ್ತಿಯೆಂಬುದು || ೧೦ || ಆಚಾರ್ಯನಂ ಕಂಡೊಡೆ ಆಸನದಿಂದೆದ್ದು ಕೈಗಳಂ ಮುಗಿದು ಯಿದಿರ್ವ್ವೋಗಿ ಪೊಡಮಡುವುದುಂ ಪರೋಕ್ಷದೊಳಾತನ ಗುಣಕೀರ್ತನಂ ಮಾಳ್ಪುದುಂ ಆಚಾರ್ಯಭಕ್ತಿ ಎಂಬುದು || ೧೧ || ಆವನೀರ್ವನಜ್ಞಾನಾಂಧಕಾರವಂ ಹರಣಸಮರ್ತ್ಥಮಪ್ಪರ್ಹದ್ವಚನಮಂ ಲೇಸಾಗಿ ತಿಳಿದರ್ದನಾತನೋಳ್ ಭಕ್ತಿಯಿಂದಿರ್ಪುದು ಬಹು ಶ್ರುತಭಕ್ತಿ ಎಂಬುದು || ೧೨ || ಪಂಚಾಸ್ತಿಕಾಯ ಷಡ್ದ್ರವ್ಯ ಸಪ್ತತ್ವ ನವಪದಾರ್ಥಂಗಳ ಸ್ವರೂಪಮಂ ಯಥಾಕ್ರಮಮಾಗಿ ಪೇಳ್ವೆ ಪರಮಾಗಮದೋಳ್ ಭಕ್ತಿಯು ಪ್ರವಚನ ಭಕ್ತಿಯೆಂಬುದು || ೧೩ || ಪ್ರತಿದಿನಂ ಕಾಲಕಾಲದೋಳ್ಪ್ರಣಾಮದ್ವಯ ದ್ವಾದಶವರ್ತ್ತ ಸಹಿತಮಪ್ಪಾವಶ್ಯಕ ಷಟ್ಕರ್ಮ್ಮಮಂ ಮಾಳ್ಪುದು ಅವಶ್ಯಕ ಪರಿಹಾಣಿ ಎಂಬುದು || ೧೪ || ಜಿನಪೂಜೋತ್ಸವ ವಿಧಾನದಿಂದ ಜಿನಶಾಸ್ತ್ರೋಪದೇಶದಿಂದ ಮೇಣು ದುರ್ದ್ಧರ ತಪದಿಂದ ಜಿನಮಾರ್ಗ ಪ್ರಭಾವನೆಯಂ ಮಾಳ್ಪುದು ಮಾರ್ಗಪ್ರಭಾವನೆಯೆಂಬುದು || ೧೫ || ಚತುರ್ಗತಿ ಭ್ರಮಣ ಬೀರುಗಳುಂ ಸಕಲ ಗುಣಶಾಲಿಗಳುಮಪ್ಪವರೊಳು ಗೌರವಮನಿತ್ತು ನಡೆವುದು ಪ್ರವಚನ ವತ್ಸಲತೆಯೆಂಬುದು || ೧೬ || ಇಂತಪ್ಪ ಸ್ವರೂಪಮುಳ್ಳ ಷೋಡಶ ಭಾವನೆಗಳು ಮೋಕ್ಷಸಾಧನ ಸೋಪಾನಂಗಳುಮಪ್ಪುದರಿಂ ಮೋಕ್ಷಾರ್ತ್ಥಿಗಳುಮಪ್ಪಾರಾಧಕರು ಘೃತಸಂಸ್ಕೃತಗಳಪ್ಪ ಷೋಡಶ ಪ್ರಕಾರ ಪಕ್ವಾನ್ನಗಳಿಂದವನ ನರ್ಚಿಸುವದು ಎಂದು ಮುನೀಶ್ವರರು ಪೇಳೆ ಕೇಳ್ದು ಹರ್ಷಚಿತ್ತೆಯಾಗಿ ಷೋಡಕ ಕಾರಣ ವ್ರತಮಂ ಕೈಕೊಂಡು ಚಾರಣ ಯುಗಮನಭಿವಂದಿಸಲಾ ಚಾರಣ ಪರಮೇಷ್ಠಿಗಳಾಕಾಶಮಾರ್ಗದಿಂ ಪೋದರಿತ್ತಲಾ ಪುರೋಹಿತ ಪುತ್ರಿ ಪದ್ಮಾಕರಮೆಂತು ಜಲಮಿಲ್ಲದೆ ಕಮಲಂಗಳಂ ಪಡೆಯದಂತು ಗುರುವಿಲ್ಲದೆ ಭವ್ಯಾತ್ಮನಪ್ಪ ಶಿಷ್ಯನೊಪ್ಪಲರಿಯಂ ಮತ್ತಂ ಚಂದ್ರನಿಲ್ಲದ ರಾತ್ರಿಯೆಂತು ಸೂರ್ಯನಿಲ್ಲದ ದಿವಸಮೆಂತು ಮತ್ತಂ ಪುಣ್ಯದಿಂ ಪೃಥ್ವೀಪತಿಯೆಂತು ಶೀಲದಿಂ ಪ್ರಮದಾಜನಮೆಂತು ಗುರುವಿಂದಲ್ಲದೆ ಶಿಷ್ಯನೊಪ್ಪಲ್ಲರಿಯನು ಮತ್ತಂ ಅಂತುಮಲ್ಲದೆಯುಂ ವಿಕರಣ ಗುಣವಿಂದಲ್ಲದೆ ಶಿಷ್ಯನೊಪ್ಪಲ್ಲರಿಯನು ಮತ್ತಂ ಅಂತುಮಲ್ಲದೆಯುಂ ವಿಕರಣ ಗುಣದಿಂದೈಶ್ವರ್ಯ್ಯ ಮೊಪ್ಪುವಂತೆ ಶೀಲಸಂಯಮಾದಿ ಲೋಕೋತ್ತರ ಗುಣಸಾಗರನಪ್ಪಂ ಗುರುವಿಲ್ಲದೆ ಶಿಷ್ಯ ನೊಪ್ಪನೆಂದು ಮರಳಿ ಚಾರಣ ಮುನೀಶ್ವರರಂ ಆಚಾರ್ಯ್ಯಭಕ್ತಿ ಕ್ರಮದಿಂ ಪೊಗಳಿ ಮತ್ತವರ ಗುಣಂಗಳನೆ ನೆನೆಯುತ್ತಿರ್ದ್ದು ಭಾದ್ರಪದ ಮಾಸದೋಳ್ ಶುದ್ಧ ಚಿತ್ತದಿಂ ಷೋಡಶಭಾವನೆಯ ನೋಂಪಿಯಂ ಮಾಡುತ್ತಂ ತತ್ಸ್ವರೂಪಮಂ ಪೆರರ್ಗ್ಗುಪದೇಶಿಸುತ್ತಂ ತಾನುಂ ತದೇಕಾಗ್ರಚಿತ್ತೆಯಾಗಿ ಚಿಂತಿಸುತ್ತಮಿಂತು ಕಾಲಮಂ ಕಳಪಿ ಕಾಳಕೂಟ ವಿಷ ಸಮಾನಮಪ್ಪ ಮಿಥ್ಯಾತ್ವವಂ ಪರಿಹರಿಸಿ ಸಮ್ಯಕ್ತ್ವಸಮಂ ನ ಕಿಂಚಿತ್ತೈ ಕಾಲ್ಯೇತ್ರಿಜಗದ್ಯಪಿಶ್ರೇಯಃ ಎಂಬೀ ಸಮ್ಯಕ್ತ್ವ ಸಹಿತಂ ತಾಂ ಕೈಕೊಂಡ ವ್ರತಮಂ ಲೇಸಾಗಿ ಪಾಲಿಸಿ ಪ್ರಾಣಾವಸಾನದೋಳ್ ಪಂಚ ಪರಮೇಷ್ಠಿಗಳಂ ಚಿತ್ತದೋಳ್ ನೆನಸಿ ಸಮಾಧಿವಿಧಿಯಂ ಶರೀರಭಾರಮನಿಳುಪಿ ಸಂಸಾರ ಸೌಖ್ಯದಾಗರವೆರಸಿ ಅಚ್ಯುತಮೆಂಬ ಪದಿನಾರನೆಯ ಸ್ವರ್ಗದೊಳು ಮಹರ್ಧಿಕ ದೇವನಾದಳಲ್ಲಿ ಈ ದೇವನಣಿಮಾದಿ ಗುಣಾಷ್ಟಕ ವಿಶಿಷ್ಟನುಂ ದ್ವಾವಿಂಶತಿ ಸಾಗರೋಪಮಾಯುಷ್ಯನುಂ ಹಸ್ತತ್ರಯೋತ್ಸೇಧ ಶರೀರನುಂ ವಿದ್ಯುತ್ಪ್ರಭಾಖ್ಯನುಂ ಜಿನಭಕ್ತಿಪರಾಯಣನುಂ ಪದ್ಮಸದೃಶ ದೇಹವರ್ಣ್ನನುಂ ಶುಕ್ಲಲೇಶ್ಯನುಂ ದೋಷರಹಿತನುಂ ಮನಃ ಪ್ರವೀಚಾರ ಸಹಿತನುಂ ಸೂರ್ಯದ್ಯುತ ವಿಮಾನದೋಳ್ ಚಿರಕಾಲಂ ದಿವ್ಯಾಂಗನೆಯರೊಡನೆ ಸಂಸಾರ ಸುಖವನನುಭವಿಸಿ ಸ್ವಯೋಗ್ಯ ದ್ವಾಂವಿಂಶತಿ ಸಾಗರೋಪ ಮಾಯುಷ್ಯಗಳೊಳು ಆರುತಿಂಗಳುಳಿದೆಲ್ಲಂ ಸಂಪೂರ್ಣ್ನಮಾಗಳಾ ವಿಷಯದ ಗಂಧರ್ವ್ವರಾಜನಗರದಧೀಶಂ ಶೌರ್ಯ್ಯಾದಿ ಗುಣ ಸಂಪನ್ನಂ ಸೀಮಂಕರನೆಂಬಾತನ ಪಟ್ಟಮಹಾದೇವಿ ರಾಜೀವಲೋಚನೆಯೆಂಬಳಾಕೆಯಗರ್ಭದೋಳ್ ಜನಿಸಿದಪನೆಂದರಿದು ಕುಬೇರನಂ ಬೆಸಸಿದೊಡಾತಂ ಬಂದು ಸೀಮಂಕರ ಮಹಾರಾಜನ ಅರಮನೆಯಂಗಣದೋಳ್ ಗಗನ ಗಂಧಜಲದಿಂ ಛಳೆಯಂ ತೊಟ್ಟು ರತ್ನಸುವರ್ಣ್ನ ವೃಷ್ಟಿಯಂ ಮಾಡುತ್ತಿರಲಿಂದ್ರನಾಜ್ಞೆಯಿಂ ದಿಕ್ಕುಮಾರಿಯರು ದಿವ್ಯೌಷಧ ಜಲಂಗಳಿಂ ಜಿನ ಜನನಿಯ ಗರ್ಭಶೋಧನೆಯಂ ಮಾಡಿ ತತ್ಸೇವಾ ಸಾಧನೆಯರಾಗಿರಲೊಂದು ದಿವಸಂ ರಾಜೀವಲೋಚನೆ ರಜಸ್ವಲೆಯಾಗಿ ಚತುರ್ತ್ಥ ಸ್ನಾನದಿಂ ಶುಚಿರ್ಭೂತೆಯಾಗಿ ಸಕಲ ದೋಷರಹಿತನುಂ ಸಮಸ್ತ ಗುಣಸಂಪಯುತನುಂ ಸ್ವರ್ಗಾಪವರ್ಗ ಸುಖಪ್ರದಾಯಕನುಮಪ್ಪ ಜಿನೇಶ್ವರನಂ ನಮಿಸಿ ಸ್ತುತಿಸಿ ಶುದ್ಧ ಅರ್ಚನಾ ದ್ರವ್ಯಗಳಿಂದರ್ಚಿಸಿ ಭೋಜನಕ್ರಿಯೆಯಂ ನಿರ್ವ್ವರ್ತ್ತಿಸಿ ದಿನಾವಸಾನದೋಳ್ ಸೀಮಂಕರ ಮಹಾರಾಜನ ಸೂಳ್ಗೆ ಬಂದು ಬೆಳಗಪ್ಪಜಾವದೊಳು ಗಜೇಂದ್ರನಂ ವೃಷಭೇಂದ್ರನಂ ಕೆದರ್ಕ ಕೇಸರಿಯಂ ಲಕ್ಷ್ಮಿದೇವಿಯಂ ಮಾಲಾಯುಗಲಮಂ ಚಂದ್ರನಂ ಸೂರ್ಯನಂ ಮತ್ಸ್ಯಯುಗ್ಮಮಂ ಪೂರ್ಣ್ನಕಲಶದ್ವಯಮಂ ಸ್ವಚ್ಛಜಲಪರಿಪೂರ್ಣ್ನಮಪ್ಪ ಸರೋವರಮಂ ಸಮುದ್ರಮಂ ರತ್ನಮಯಸಿಂಹಾಸನಮಂ ಸ್ವರ್ಗದ ವಿಮಾನಮಂ ನಾಗೇಂದ್ರ ಭವನಮಂ ರತ್ನ ರಾಶಿಯಂ ಜಾಜ್ವಲ್ಯಮಾನಮಪ್ಪಗ್ನಿಯುಮೆಂಬೀ ಪದಿನಾರು ಸ್ವಪ್ನಂಗಳವಸಾನದೊಳೊಂದು ಗಜಂ ತನ್ನ ಮುಖದಿಂದುದರಮಂ ಪ್ರವೇಶಿಸುವುದಂ ಕಂಡು ಎಚ್ಚೆತ್ತು ಮುಖ ಪ್ರಕ್ಷಾಲನಾದಿ ಕ್ರಿಯಾನಂತರಂ ಪ್ರಾಭಾತಿಕ ದೇವತಾ ನಮಸ್ಕಾರಾಷ್ಟ ವಿಧಾರ್ಚನೆಗಳಂ ಮಾಡಿ ಸಭಾಮಂಟಪದೋಳ್ಕುಳ್ಳಿರ್ದ್ದಾ ಸ್ವಪ್ನಗಳಂ ನಿವೇದಿಸಿ ತತ್ಫಲಂಗಳಂ ಸವಿಸ್ತಾರಂ ಕೇಳ್ದು ಜಗತ್ರಯೈಕ ಪೂಜ್ಯನುಂ ಧರ್ಮ್ಮೋದ್ಧರಣ ಧರನುಂ ಅದ್ಭುತ ವೀರ್ಯ್ಯನುಮಪ್ಪ ತೀರ್ತ್ಥಂಕರಂ ತನ್ನುದರದೋಳ್ ಜಯಿಸುವನೆಂದು ತಿಳಿದು ಪರಮಾಮೃತಾನಂದ ಸಮುದ್ರದೊಳೋಲಾಡುತ್ತಮಹರ್ನಿಶಂ ದೇವಸ್ತ್ರೀಯರಿಂ ಸೇವ್ಯಮಾನೆಯುಂ ದಿವ್ಯವಸ್ತ್ರಾಭರಣಾಲಂಕೃತೆಯುಮಾಗಿರ್ದು ನವಮಾಸಂ ತೀವಿದಾಗಳ್ ತೀರ್ತ್ಥಕರ ಕುಮಾರನಂ ಪಡೆಯಲಾ ಸಮಯದೋಳ್ಕಲ್ಪವಾಸಿಕ ಜ್ಯೋತಿಷ್ಕ ವ್ಯಂತರ ಭವನವಾಸಿಕ ಲೋಕಂಗಳೋಳ್ ಕ್ರಮದಿಂ ಘಂಟಾನಾದಮುಂ ಸಿಂಹನಾದಮುಂ ಭೇರೀನಾದಮುಂ ಶಂಖ ನಿಸ್ವನಮುಮುದ್ಭವಿಸಿ ನಿಜಾಸನ ಕಂಪನದಿಂ ಇಂದ್ರನರಿದು ಚತುರ್ನ್ನಿಕಾಯಾಮರರು ವೆರಸಿ ಬಂದು ಸೀಮಂಕರ ಮಹಾರಾಜನರಮನೆಯಂಗಣದೋಳ್ ಐರಾವತಾರೂಢನಾಗಿ ನಿಂತು ಶಚಿಮಹಾದೇವಿಯನೊಳಗೆ ಕಳುಪಲಾಯತಂ ಸೂತಿಕಾ ಗೃಹಮಂ ತಿರೋಹಿತ ಶರೀರೆಯಾಗಿ ಪೊಕ್ಕು ಬಾಲಾರ್ಕ್ಕನಂತೆ ಥಳಥಳಿಸಿ ಬೆಳಗುತ್ತಿರ್ಪ್ಪ ಪರಮೌದಾರಿಕ ಶರೀರಮನುಳ್ಳ ಜಿನಬಾಲಕನಂ ಕಂಡು ಪರಮಾನಂದದಿಂ ತದ್ಬಾಲಕನೊಡನೆ ಕೂಡಿದ ಜಿನ ಜನನಿಯ ಸಮೀಪದೋಳ್ನಾಯಾ ಶಿಶುವನಿರಿಸಿ ಜಿನಬಾಲಕನಂ ಪಿಡಿದೆತ್ತಿಕೊಂಡು ಜಾತ್ಯಂಧಂ ಕಣ್ಗಳಂ ಪಡೆದಂತೆ ಬಡೆವಂ ನಿಧಾನಮಂ ಕಂಡಂತೆ ಸಂತಸಂ ಬಡುತಂ

|| ಕಂದ || ಪಡೆಯಲ್ಬಾರದ ನಿಧಿಯಂ
ಬಡವಂ ಪಡೆದಂತೆ ಕಮಲದಳ ಕರತಳದಿಂ
ಪಿಡಿದೆತ್ತಿಕೊಂಡು ಸಂತಸ
ದೊಡನೆಯೆ ತಾಂ ಪೋಗಲರಿಯೆ ನಿದ್ರಾಂಗನೆಯುಂ ||

|| ವ || ತಂದು ಸೌಧರ್ಮ್ಮೇಂದ್ರನ ಹಸ್ತದೋಳ್ಕುಡಲಾತ ಜಿನ ಕುಮಾರಕನ ದಿವ್ಯಾಂಗ ಸೌಂದರ್ಯಮಂ ದೃಗ್‍ದ್ವಯದಿಂದೀಕ್ಷಿಸಿ ದಣಿಯದೆ

|| ಕಂ || ಪರಮನ ನಿರತಿಶಯಾಂಗ
ಸ್ವರೂಪಮುಂನೆರೆಯ ನೋಳ್ವದಾವೆಡೆಗಂ ತಂ
ನೆರಡು ಕಣ್ಗಳ್ನೆರೆಯದಾ
ಸುರೆಂದ್ರನಂಗದೆ ಸಹಸ್ರಲೋಚನನಾದಂ ||

|| ವ || ಸಹಸ್ರ ದೃಷ್ಟಿಗಳಂ ನಿರ್ಮ್ಮಸಿಕ್ಕೊಂಡು ನೋಡಿ ಪಿರಿದುಂ ಸಂತಸಮೈಯ್ದಿಯಾ ಪರಮನ ಚರಣಪಲ್ಲವಂಗಳಂ ತನ್ನ ಶಿರದೊಳಂ ವದನದೊಳಂ ನಯನ ಯುಗದೊಳಂ ಹೃದಯದೊಳಂದೊತ್ತಿಕೊಂಡು ತೊಡೆಯಮೇಲೆ ಕುಳ್ಳಿರಿಸಿ ಜನ್ಮಾಭಿಷೇಕ ಕ್ರಿಯೆಯಂ ನಿರ್ವ್ವರ್ತ್ತಿಸಲೆಂದು ಶಚಿ ಮಹಾದೇವಿ ವೆರಸು ಗಿರಿಗೆ ಪೋಪಾಗಲೈರಾವತದೇವಂ ತಾನುಮಾಸನ್ನ ಭವ್ಯನಪ್ಪುದರಿಂದ ತ್ರಿಲೋಕಸ್ವಾಮಿಯ ಸೇವೆಯಂ ಮಾಳ್ಪ ಸುಕೃತಮೆನಗೆ ಸಂಭವಿಸಿ ತಾಂ ಕೃತಾರ್ತ್ಥನಾದೆನೆಂದು ನಲಿವುದು

|| ವೃ || ಸುರರಾಜನೇಕಪಕ್ಕಾನನಮೊಗೆದವು ಮೂವತ್ತೆರಳ್ಪ್ರಕ್ರಮಮೊಂದ
ಕ್ಕೆರಡುಂ ತಾನೆಂಟು ವೋರೊಂದಲರ್ಗೊಳನೊಂದಬ್ಜಮೊಂದಕ್ಕೆ ಮೂವ
ತ್ತೆರಡನೊಂದಬ್ಜಕ್ಕೆ ಮೂವತ್ತೆರಡೆಸಳೆಸಳೊಂದೊಂದರೊಳ್ಪಿತ್ತಂಬೆ
ತ್ತಿರೆ ಮೂವರ್ತ್ತೀರ್ವ್ವರಿಂ ನರ್ತ್ತಿಸಿದರಾ ದಿವಿಜಸ್ತ್ರೀಯರಾನಂದದಿಂದಂ ||

ವ || ಇಂತು ಪೇಳ್ದ ಕ್ರಮದಿಂ ಮೂವತ್ತೆರಡು ಮುಖಂಗಳೊಂದೊಂದು ಮುಖಕ್ಕೆ ಎಂಟು ದಂತಗಳುಮನೊಂದೊಂದು ದಂತದೊಳೊಂದು ಪೂಗೊಳನುಮನೊಂದು ಪೂಗೊಳಾದೊಳ್ಮೂವತ್ತೆರಡು ಕಮಲಂಗಳುಮನೊಂದು ಕಮಲದೊಳ್ಮೂವತ್ತೆರಡೆಸಳುಮ ನೊಂದೆಸಳೊಳ್ಮೂವ್ವರ್ತ್ತಿರ್ವ್ವರ್ ಸುರನರ್ತ್ತಕಿಯರುಮಂ ವಿಗುರ್ವ್ವಿಸಿಕೊಂಡು ನಡೆದಾಗಳಾ ಜಗತ್ರಯ ಚೂಡಾಮಣಿಗೆ ಈಶಾನೇಂದ್ರ ಚಾಮರವಂ ವಿಚಿತ್ರ ರತ್ನ ನಿರ್ಮಿತಮಪ್ಪ ಶ್ವೇತಾತಪತ್ರಮನೆಯ್ದಿಸಿ ಸನತ್ಕುಮಾರ ಮಾಹೇಂದ್ರರು ಚಾಮರವಂ ಢಾಳಿಸಿ ಸದ್ಧರ್ಮ್ಮ ಸಮಾರಾಧನೆಯಂ ಮಾಳ್ಪವರ್ಗ್ಗಿಂತು ತ್ರೈಲೋಕ್ಯ ಸಾಮ್ರಾಜ್ಯಧಿಪತ್ಯಮವಶ್ಯಮಕ್ಕು ಮೆಂದರಿಪುವಂತೆ ಮಹೋತ್ಸಾಹದಿಂ ಸುರಗಿರಿಯನೆಯ್ದಿ ಪಾಂಡುಕವನದಾರ್ಯದಿಕ್ ಸ್ಥಿತಮುಮರ್ದ್ಧ ಚಂದ್ರಾಕೃತಿಯುಂ ರಕ್ತವರ್ಣ್ನಮುಂ ಶತಯೋಜನಾಯಾಮಮುಂ ಪಂಚಾಶದ್ಯೋಜನ ವಿಸ್ತಾರಮುಂ ಅಷ್ಟ ಯೋಜನೋತ್ಸೇಧಮುಂ ಮಧ್ಯಸ್ಥಿತಾಸನತ್ರಯ ರಾಜಿತಮುಮಪ್ಪ ರತ್ನಕಂಬಲಮೆಂಬೀ ಶಿಲೆಯಮೇಲಿರ್ದ್ದ ಸಿಂಹಾಸನದೋಳ್ ಸೌಧರ್ಮ್ಮೇಂದ್ರ ಜಿನಕುಮಾರನಂ ಕುಳ್ಳಿರಿಸಿ ತಾನುಂ ತದ್ದಕ್ಷಿಣಭಾಗದೋಳಿರ್ದ್ದ ಭದ್ರಾಸನದೋಳ್ನಿಂದು ಸಿಂಹಾಸನದಿರ್ಕೆಲದೊಳಮರನಿಕಾಯಮಳವಟ್ಟು ಕ್ಷೀರಸಮುದ್ರಂ ಬರಂ ನಿಂದು ಕ್ಷೀರಮಂ ಸುವರ್ಣ್ನಕಳಶಂಗಳೊಳ್ತೀವಿ ತೀವಿ ನೀಡುತ್ತಿರಲ್ ಸೌಧರ್ಮ್ಮೇಂದ್ರಂ ಮೊದಲೇ ಪ್ರಸ್ತಾವನಾದಿ ಕ್ರಿಯೆಗಳಿಂ ನಿರ್ವ್ವತ್ತಿಸಿ ಅಭಿಷೇಕ ಪೂಜೆಯಂ ಮಾಡಿ ತದಂಗಾಲಿಪ್ತ ಶ್ರೀಚಂದನ ದ್ರವ್ಯದಿಂ

|| ಕಂದ || ತಿಲಕಂ ವಶ್ಯಮೆ ಜಡಜನ
ಮೊಲಗರಿಯದು ಸಕಲ ಭವ್ಯ ತಿಲಕಂಗೆ ಜಗ
ತ್ತಿಲಕ ಭವತ್ವದ ಚಂದನ
ತಿಲಕಂ ತ್ರೈಲೋಕ್ಯವಶ್ಯಂ ಭವನತ್ರಯದೋಳ್ ||

|| ವ || ಎಂದು ತಿಲಕಮಂ ತಾನಿಟ್ಟುಕೊಂಡಾ ಭುವನತ್ರಯ ವಲ್ಲಭನ ದಿವ್ಯ ಶರೀರಮಂ ದಿವ್ಯ ವಸ್ತ್ರಾಭರಣದಿಂದಲಂಕರಿಸಿ ಜೀವಂಧರ ತೀರ್ತ್ಥೇಶ್ವರನೆಂದು ಪೆಸರಿಟ್ಟು ಪೊಡಮಟ್ಟು ಸಮಸ್ತ ದೇವನಿಕಾಯಂಬೆರಸು ಮೇರುಗಿರಿಯಂ ಮಗುಳೆ ವಂದು ರಾಜಾಂಗಣದೊಳ್ನಿಂದು ತಜ್ಜನನೀ ಜನಕರ್ಗ್ಗೆ ತದ್ವೃತ್ತಾಂತಮನರುಪಿ ಸಭಾಮಧ್ಯಸ್ಥಿತ ಸಿಂಹಾಸನದೋಳ್ ಜೀವಂಧರ ತೀರ್ತ್ಥಂಕರ ಕುಮಾರನಂ ಕುಳ್ಳಿರಿಸಿ ಈ ಪರಮಾಚಿಂತ್ಯ ಪ್ರಭಾವನ ಸಾನ್ನಿಧ್ಯದಿಂ ಭರತಶಾಸ್ತ್ರಂ ತಾನೆ ಮೂರ್ತ್ತಿಗೊಂಡು ನರ್ತ್ತಿಸಿದಪುದೆಂಬಂತೆ ಪಿರಿದಪ್ಪ ಚಮತ್ಕಾರದಿಂದಾನಂದ ನಾಟಕಮನಾಡಿ ತಾಯ್ತಂದೆಗಳ್ಗೆ ದಿವ್ಯ ವಸ್ತ್ರಾಭರಣಂಗಳನುದಲುಂ ತೊಡಲುಂ ಯಿತ್ತು ತ್ರಿಜಗಾರಾಧ್ಯನ ಸೇವೆಯೊಳ್ಸಂತಂ ಸುರಕುಮಾರರ ನಿಯಮಿಸಿ ಜಿನಕುಮಾರಂಗೆರಗಿ ಬೀಳ್ಕೊಂಡು ಸಮಸ್ತ ದೇವರ್ಕಳಂ ತಮ್ಮ ತಮ್ಮ ತಾಣಂಗಳ್ಗೆ ಕಳುಪಿ ಸೌಧರ್ಮ್ಮಕಲ್ಪಕ್ಕೆ ವೋದನು ಯಿತ್ತಲಾ ಭವ್ಯಂಜನ ಚಿಂತಾರತ್ನಮಪ್ಪ ಜಿನಕುಮಾರಂ ನಿಸ್ವೇದನಿತ್ಯ ನಿರ್ಮ್ಮಲತ್ವಾದಿ ದಶವಿಧ ಸಹಜಾತಿಶಯ ಸಂಪನ್ನನಾಗಿ ಸುರಕುಮಾರರೊಡನೆ ಬೆಳೆದು ಬಾಲತ್ವಮಂ ಪತ್ತುವಿಟ್ಟು ಕೆಲವು ಕಾಲಂ ರಾಜ್ಯ ಸುಖಮನನುಭವಿಸಿ ಮತ್ತೊಂದು ದಿವಸದೋಳ್ಸೀನು ಕಾರಣಮಾಗಿ ವಿಷಯಸುಖ ವಿರಕ್ತ ಚಿತ್ತನಾಗಿರೆ ಲೈಕಾಂತಿಕಾಮರರ್ಬಂದು ಬೋಧಿಸಿ ಪೋಗಲತ್ತಲ್ ಸೈಧರ್ಮ್ಮೇಂದ್ರಾದಿಗಳ್ಮುನಿನಂತೆ ಸಮಸ್ತ ದೇವನಿಕಾಯಂ ಬೆರಸು ಬಂದು ನಮಸ್ಕರಿಸಿ ಮರ್ತ್ತ್ಯೇಂದ್ರರೇಳಡಿಯಂ ವಿದ್ಯಾಧರೇಂದ್ರರೇಳಡಿಯಂ ಮತ್ತಂ ಸುರೇಂದ್ರರ್ಕ್ಕೊಂಡೊಯ್ದು ಶುಚಿಪ್ರದೇಶದೋಳ್ ಶಿಬಿಕೆಯನಿಳುಪೆ ಆ ಪ್ರಚಂಡ ಕುಸುಮಕಾಂಡ ಸುಂಡಾಲ ಪಂಚಕುಂಡ ಹಸಿತ ಲಸಿತ ಮಂಡಶ್ರೇಯಸಾನಂದ ಪಿಂಡನೆನಿಸಿದ ಜಿನಕುಮಾರಂ | ಸಿದ್ಧಂನಮಃ | ಎಂದುಚ್ಚರಿಸುತ್ತಂ ತನ್ನ ವಿನೀಳ ಕುಂತಳಂಗಳಂ ಪಂಚಮುಷ್ಠಿಯಿಂ ಪರಿಯಲದನಿಂದ್ರ ರತ್ನಪಡಲಿಗೆಯೊಳಿಟ್ಟೊಯ್ದು ಕ್ರಮದಿಂ ಪೊಡಮಟ್ಟು ಪೋದನಿತ್ತಲಾ ಮುನೀಶ್ವರನು ಧ್ಯಾನ ಧೀರಾಗ್ನಿ ಕುಂಡನೆನಸಿ ಉಗ್ರೋಗ್ರ ತಪಸ್ಸಿಂ ಘಾತಿಕರ್ಮ್ಮ ಚತುಷ್ಟಯಂಗಳಂ ಕೆಡಿಸಿ ಲೋಕತ್ರಯ ಕಾಲತ್ರಯ ವರ್ತ್ತಿ ಜೀವಾಂದಿ ಸಕಲ ಪದಾರ್ಥಂಗಳನನಂತಗುಣ ಪರ್ಯ್ಯಾಯ ವಿಶಿಷ್ಟಂಗಳಂ ಕರತಳಾಮಳಕದಂತರಿಯಲ್ಸಮರ್ಢಮಪ್ಪ ಕೇವಲಜ್ಞಾನಮಂ ಪಡೆಯಲಿಂದ್ರನರಿದು ಕುಬೇರಂಗೆ ಬೆಸಸಲಾತಂಗಾಶ್ಚರ್ಯ್ಯಮಪ್ಪಂತು ಸಮವಸರಣಮಂ ನಿರ್ಮ್ಮಿಸಿದನದೆಂತೆಂದೊಡೆ ಘಾತಿಕರ್ಮ್ಮಂಗಳ್ಕೆಡಲೊಡಂ ತೀರ್ತ್ಥೇಶ್ವರನ ಶರೀರ ಭೂಮಿಯಂ ಮೇಲೈ ಸಾಸಿರ ಬಿಲ್ಲುತ್ತಂಗಂ ಪೋದಲ್ಲಿ ಗಗನಾಂಗಣದೊಳ್ನೆಲಸಿದುದು ಕಾರಣದಿಂದಲ್ಲಿಯೇ ದ್ವಾದಶಯೋಜನ ವಿಸ್ತಾರಾತಿ ಯಕ್ತೈಕೇಂದ್ರ ನೀಲ ಶಿಲಾತಳಮಂ ಚತುರ್ದಿಸೆಗಳೊಳ್ಪ್ರತ್ಯೇಕ ವಿಂಶತಿಸಹಸ್ರ ಸೋಪಾನ ಶೋಭಿತಮುಮೇಕಾದಶಭೂಮಿ ವಿರಾಜಿತಮುಂ ಪ್ರಾಕಾರ ಚತುಷ್ಟಯು ರಾಜಿತಮುಂ ಚತುರ್ಮ್ಮಹಾ ವೀಧೀಮಧ್ಯಸ್ಥಿತ ಮಾನಸ್ತಂಭ ಚತುಷ್ಟಯ ಶೋಭಿತಮುಮನೇಕ ಜಿನಸಿದ್ಧ ಪ್ರತಿಮಾಕೀರ್ಣ್ನಚ್ಚೈತ್ಯಸಿದ್ಧ ವೃಕ್ಷಸಮುಪಲಕ್ಷಿತಮುಂ ಅಶೇಷ ಸಪ್ತಚ್ಛದ ಚಂಪಕಾಮ್ರುತ ವನ ಸಮುಪೇತಮಂ ಪ್ರತ್ಯೇಕಾಷ್ಟೋತ್ತರಶತ ಮಂಗಳ ನವನಿಧಿ ಸಮಾಶ್ರಿತಮುಂ ಯಥೋಚಿತ ದ್ವಾರಸ್ಥಿತ ಕಲ್ಪವಾಸಿಕಾದಿ ದೇವ ದೌವ್ವಾರಿಕಾ ವಿಭೂಷಿತಮುಂ ಪೀಠತ್ರಯೋಪರಿಸ್ಥಿತಗಂಧಕುಟಿ ಬಾಹ್ಯ ವಿದಿಗ್ಗತ ದ್ವಾದಶ ಕೋಷ್ಠಂಗಳೊಳು ಪ್ರದಕ್ಷಿಣ ಕ್ರಮದಿಂದ ಇರಲ್ಪಟ್ಟ ಮತಿ ಶ್ರುತಾವಧಿ ಮನಃ ಪರ್ಯ್ಯಯ ಕೇವಲಜ್ಞಾನ ಸಂಪನ್ನರುಂ ಋದ್ಧಿ ತಪೋವಿಕ್ರಿಯೌಷಧ ರಸವಲಾಕ್ಷೀಣರ್ದ್ಧಿ ಸಮೇತರುಮಪ್ಪ ಯತಿಗಳುಂ ಕಲ್ಪವಾಸಿಕ ಸ್ತ್ರೀಯರು ಮನುಷ್ಯ ಸ್ತ್ರೀಯರೊಡನೆ ಕೂಡಿದ ಆರ್ಯ್ಯಿಕೆಯುರುಂ ಜ್ಯೋತಿಷ್ಕಸ್ತ್ರೀಯರುಂ ವ್ಯಂತರ ಸ್ತ್ರೀಯರುಂ ಭವನವಾಸಿಕ ಸ್ತ್ರೀಯರುಂ ಭವನವಾಸಿಕ ದೇವರುಂ ವ್ಯಂತರ ದೇವರುಂ ಜೋತಿಷ್ಕ ದೇವರುಂ ಕಲ್ಪವಾಸಿಕ ದೇವರುಂ ಮನುಷ್ಯರು ತಿರ್ಯ್ಯಂಚರುಮೆಂಬೀ ದ್ವಾದಶ ಗಣಂಗಳಿಂ ಪರಿಶೋಭಿತಮಪ್ಪುದಿಂತಪ್ಪ ಸಮವಸರಣದೋಳ್‍ದ್ವಾದಶ ಗಣಂಗಳಿಂ ಪರಿವೇಷ್ಟಿತನಾಗಿ ಹಂಧಕುಟಿಮಧ್ಯಗತ ಸಿಂಹಾಸನಾಗ್ರಸ್ಥಿತ ಸಹಸ್ರದಳ ಸುವರ್ಣ್ನ ಕಮಲದ ಮೇಲೆ ನಾಲ್ವೆರಳಂ ಬಿಟ್ಟು ನೆಲಸೆ ಚತುರ್ಮ್ನುಖತ್ವಾದಿ ದಶವಿಧ ಘಾತಿಕ್ಷ್ಯಯಜಾತಿಶಯ ಸಂಪನ್ನಮುಂ ದೇವೋಪನೀತ ಚತುರ್ದಶ ಅತಿಶಯ ಸಮನ್ವಿತನುಮಪ್ಪ ಮಹಾಪ್ರಾತಿಹಾರ್ಯ್ಯ ಸಮೇತನುಂ ದಿವಾಕರ ನಿಶಾಕರ ಕೋಟಿಬಿಂಬ ವಿಡಂಬ ನಿಜ ಪರಮೌದಾರಿಕ ದೇಹದೀಪ್ತಿ ಮಂಡಲ ಮಂಡಿತನುಮಾಗಿ ತೀರ್ತ್ಥೇಶ್ವರಂ ನಾನಾ ದೇಶಗಳೊಳ್ವಿಹರಿಸಿ ಮೃದು ಮಧುರ ಗಂಭೀರ ಸರ್ವ್ವಭಾಷಾತ್ಮಕ ದಿವ್ಯಧ್ವನಿಯಂ ಧರ್ಮ್ಮಾಮೃತ ವರ್ಷದಿಂ ಸಕಲ ಭವ್ಯ ಸಸ್ಯಂಗಳಂ ಸಲಹುತ್ತಮಿರ್ದ್ದು ನಿಜಾಯುಷ್ಯಂ ಪ್ರತ್ಯಾಸನ್ನಮಾದಾಗಳು ಸಮವಶರಣಾದಿಗಳಂ ಬಿಟ್ಟು ನಿರ್ಮ್ಮಲಮಪ್ಪೊಂದು ಪ್ರದೇಶದೋಳ್ ಪರಮ ಶುಕ್ಲಧ್ಯಾನಮಂ ಧ್ಯಾನಿಸುತ್ತಿರ್ದ್ದು ಶೇಷಾಘಾತಿಗಳಂ ಕೆಡಿಸಿ ಏಕ ಸಮಯಮಾತ್ರದಿಂ ಪದಿನಾರನೆ ಸ್ವರ್ಗದ ಸಂಜ್ಞೆಯ ಪದವಿಯಪ್ಪ ಮತ್ತೀಷತ್ಪ್ರಾಗ್ಭಾರಮೆಂಬಷ್ಟಮಾವನಿಯಲೆ ರಜತ ಮಯಮುಮಪ್ಪ ಯೋಜನೋತ್ಸೇಧಮುಂ ಮನುಷ್ಯ ಕ್ಷೇತ್ರ ಪರಿಪ್ರಮಾಣಮು ಮುಕ್ತಾವಸ್ಥಿತಾರ್ದ್ಧಗೋಲ ಸಮಾನ್ಯಮುಮಪ್ಪ ಸಿದ್ಧಕ್ಷೇತ್ರದ ಮೇಲಣ ತನುವಾತದೋಳ್ನೆಲಸಿ ಕ್ಷಾಯಿಕ ಸಮ್ಯಕ್ತ್ವಾದ್ಯಷ್ಟಗುಣ ವಿಶಿಷ್ಟನುಮನಂತ ಸುಖ ತೃಪ್ತನುಂ ನಿತ್ಯನುಂ ನಿರಂಜನನುಂ ಆಚ್ಛೇದ್ಯನುಮಭೇದ್ಯನುಂ ಕಿಂವಿನ್ಯೂನ ಚರಮ ಶರೀರ ಪ್ರಮಾಣನುಂ ಜೀವಘಾನಾಕಾರನುಂ ಭವನತ್ರಯೋತ್ತುಂದ ಪ್ರಾಸಾದ ಮಂಗಳ ಕಲಶನುಂ ಜಗತ್ರಯ ಚೂಡಾಮಣಿಯುಮೆನಿಸಿ ಸಾಕಾರ ನಿರಾಕಾರದಿಂ ಪೊಳೆವ ಜೀವಂಧರ ತೀರ್ತ್ಥೇಶ್ವರನೀ ನೋಂಪಿಯನೋದುವ ಕೇಳುವ ಪೇಳುವ ಆಚರಿಸುವ ಭವ್ಯರ್ಗೆ ಸಕಲ ವಿಪತ್ತುಗಳಂ ಪರಿಹರಿಸಿ ಮತ್ಯಂತಚಿತ್ರಾಭ್ಯುದೆಯಂಗಳನಿತ್ತು ಪಾಲಿಸುತ್ತಿರ್ಕ್ಕೆ || ಯಿಂತೀ ಪಾಪಿಷ್ಟೆಯಪ್ಪ ಪುರೋಹಿತ ಪುತ್ರಿಯಮೀ ನೋಂಪಿಯಂ ತ್ರಿಕರಣ ಶುದ್ಧಿಯಿಂ ಸಾಂಗಮಪ್ಪಂತು ನೋಂತುದರಿಂ ಯಿಂತಪ್ಪ ಸ್ವರ್ಗ್ಗಾಪವರ್ಗ್ಗವನನುಭವಿಸಿದಳೆನಲನ್ಯರಿಗೀ ಅದುಕಾರಣದಿಂ ಶಕ್ತ್ಯನುಸಾರದಿಂ ಭಕ್ತಿ ಸಹಿತಮಾಗಿ ಷೋಡಶಭಾವನೆಯ ನೋಂಪಿಯಂ ಭ್ಯವ್ಯಜನಂಗಳ್ ನೋನಲುವೇಳ್ಕುಮೆಂಬುದವರ ತಾತ್ಪರ್ಯ್ಯಂ

ಕಂದ || ಇಳೆಯೊಳ್ ಜಿನಧರ್ಮ್ಮಕ್ಕಿದು
ನಿಲಯಂ ತಾನೆನಿಸಿ ಮೆರೆದ ನಗಿರೀನೃಪಸಂ
ಕುಲತಾಹಿತ ಮಂಡಲೀಕನುಜ್ಜಳತೇಜಂ
ದಲಿತಾಹಿತ ಮಂಡಲೀಕನುಜ್ವಳತೇಜಂ || ೧ ||

          ಚಲುವಂ ಛಲಿಗಳದೇವಂ
ಸಲೆ ಬಲ್ಲಂ ಸಕಲಕಲೆಗಳನ್ನುಡೆಜಾಣಂ
ಸುಲಲಿತ ಜಿನಪದಪಲ್ಲವ
ವಿಲಸತ್ಕೋಕಿಲ ಸುಸ್ವರನುದಾತ್ತಪವಿತ್ರಂ || ೨ ||

          ಮಾನಧನಂವಿದ್ವಸ್ಸುರ
ಧೇನುಮಮಾನಪ್ರ ಭಾವ ಜಿನವರ ಧರ್ಮ್ಮ
ಧ್ಯಾನೈಕ ತಾನಚಿತ್ತಂ
ಮಾನಿತಗುಣಶೀಲನ ಮಮಸಾಳುವಮಲ್ಲಂ || ೩ ||

          ಎನೆ ನೆಗಳ್ದ ಮಲ್ಲಭೂಪನ
ವಿನುತಾಗ್ರಜ ಭೈರವೇಂದ್ರನರಸಿ ಸರೋಜಾ
ನನೆ ನಾಗಲದೇವಿ ಮಹಾ
ವಿನೆಯಾನ್ವಿತೆ ಷೋಡಶಾಖ್ಯ ಕಾರಣ ವಿಧೇಯಂ || ೪ ||

          ವರ ಸುಖಭಾಷಾಮಯಮಂ
ಸುರಚಿರ ಕರ್ಣ್ನಾಟಭಾಷೆಯಿಂ ವಿರಚಿಸಿ ಭ
ವ್ಯರ ಮನದಜ್ಞಾನತಮೋ
ಹರಣಮನಾಗಿಸಿದಳೇಂ ವಿದಗ್ಧೆಯೊ ಜಗದೊಳ್ || ೫ ||

          ಶ್ರೀ ಶ್ರೀ ಶ್ರೀ