ಶ್ರೀ ವೀತರಾಗಾಯನಮಃ ||      

ಶ್ರೀ ವರ್ದ್ಧಮಾನ ಜಿನಪಂ
ಗಾವುಗ ಮೊಲಿದೆಱಗಿ ಭಕ್ತಿಯಂ ವಿರಚಿಸುವೆಂ
ಭೂವಳಕ್ಕೆಯ್ದೆ ಮುದದಿಂ
ಪಾವನತರವೆನಿಪ ಸಪ್ತ ಜ್ಯೋತಿಯ ಕಥೆಯಂ ||

|| ವ || ಅದೆಂತೆಂದೆಂಡೊಡೆ ಜಂಬೂದ್ವೀಪದ ಭರತಕ್ಷೇತ್ರದೊಳ್ಮಗಧೆಯೆಂಬುದು ನಾಡು ರಾಜಗೃಹಮೆಂಬುದು ಪೊಳಲನದನಾಳ್ವಂ ಶ್ರೇಣಿಕ ಮಹಾರಾಜನೆಂಬನಾತನರಸಿ ಚೇಳಿನಿ ಮಹಾದೇವಿಯೆಂಬಳಂತರಿರ್ವ್ವರುಂ ಸುಖಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲಾ ಪುರದ ಪುರದಂ ಜಿನದತ್ತನೆಂಬನಾತನ ಪರಿದಿತಿ ಜಿನದತ್ತಿಯೆಂಬಳಂತವರ ದೋರಿಗಂ ವೃಷಭದತ್ತನೆಂಬನಾತನ ಭಾರ್ಯ್ಯೆ ಸುಮತಿ ಬಾಮೆಯೆಂಬಳಂತವರಿರ್ವ್ವರುಂ ಸುಖದಿನಿರಲೊಂದು ದಿವಸಂ | ರುಷಿ ನಿವೇದಕಂ ಬಂದು ವೊಡ್ಡೋಲಗದಲಿರ್ದ್ದರಸಂಗೆ ಸಾಷ್ಟಾಂಗವೆಱಗಿ ಪೊಡವಟ್ಟುಮಿಂತೆಂದು ಬಿಂನಪಗೆಯ್ದು ವಿಪುಲಗಿರಿಯೆಂಬ ಪರ್ವ್ವತದ ಸಮೀಪಕ್ಕೆ ಶ್ರೀ ವರ್ದ್ಧಮಾನಸ್ವಾಮಿಯ ಸಮವಸರಣಂ ಬಂದು ನೆಲೆಸಿದುದಂ ಕಂಡೆನೆನೆ | ಅರಸಂ ಹರ್ಷೊತ್ಕರುಷ ಚಿತ್ತನಾಗಿ ಆತಂಗೆ ಅಂಗ ಚಿತ್ತಮಂ ಕೊಟ್ಟು ಆನಂದ ಭೇರಿಯಂ ಪೊಯಿಸಿ ಪರಿ ಜನ ಪುರಜನ ಬಂಧು ಜನಂ ಬೆರಸು ಪಾದಮಾರ್ಗ್ಗದಿಂ ಪೋಗಿ ಸಮವಸರಣಮಂ ತ್ರಿಃಪ್ರದಕ್ಷಿನಂಗಯ್ದು ಸ್ತುತಿ ಶತ ಸಹಸ್ತಂಗಳಿಂ ಸ್ತುತಿಯಿಸಿ ಗಣಧರ ದೇವಾದಿ ರುಷಿ ಸಮುದಾಯಮಂ ಯಥೋಚಿತ ಕ್ರಮದಿಂ ವಂದಿಸಿ ನಿಜೋಚಿತ ಸ್ಥಾನದೊಳ್ಕುಳ್ಳಿರ್ದ್ದು ಧರ್ಮ್ಮ ಶ್ರವಣಮಂ ಕೇಳ್ದು ತದನಂತರಂ ಚೇಳಿನಿ ಮಹಾದೇವಿ ಗೌತಮ ಸ್ವಾಮಿಗಳ್ಗೆ ಕರಕಮಲಂಗಳಂ ಮುಗಿದು ಪೊಡವಟ್ಟು ಯೆನಗಾಉ ದಾನುಮೊಂದು ನೋಂಪಿಯಂ ಬೆಸಸಿಮೆನೆ ಸಪ್ತ ಜ್ಯೋತಿಯ ನೋಂಪಿಯ ನೋಂಪುದೆನೆ ಅದಱ ವಿಧಾನಮೆಂತೆಂದೊಡೆ ಆಯ್ದಾನುಮೊಂದು ನಂದೀಶ್ವರದಷ್ಟಮಿ ಮೊದಲ್ಗೊಂಡು ನಿಚ್ಚ ನಿಚ್ಚ ಯೇಳು ಬತ್ತಿಯಂ ಪೊತ್ತಿಸಿ ಆತ್ಮ ಜ್ಯೋತಿ | ಬಂಧು ಜ್ಯೋತಿ | ಯೆಂದು ಯೇಳು ಜ್ಯೋತಿಯಂ ಪೆಸರ್ಗ್ಗೊಂಡು ದೇವರ್ಗ್ಗಂ ನಿವಾಳಿಸೂದು | ನಿತ್ಯಾಭಿಷೇಕ ಅಷ್ಟ ವಿಧಾರ್ಚ್ಚನೆಯಂ ಕುಂದಲೀಯದೆ ಮುಂದಣ ನದೀಶ್ವರದ ಪೌರ್ಣ್ನಮಿ ಪರಿಯಂತರಂ ಮಾಡಿಸೂದು | ಉಜ್ಜವಣೆಯ ಕ್ರಮಮೆಂತೆಂದೊಡೆ ನೋಂಪಿಯಂ ಕೈಕೊಂಡು ನಂದೀಶ್ವರದಷ್ಟಮಿಯಾದಿಯಾಗಿ ಮುಂದಣ ನಂದೀಶ್ವರದ ಪೌರ್ಣ್ನಮಿ ಪರಿಯಂತರಂ ನೋಂತು ಆ ಪೌರ್ಣ್ನಮಿಯ ದಿನದೊಳು ಚತುರ್ವ್ವಿಂಶತಿ ತೀರ್ಥಕರ ಪ್ರತುಮೆಗೆ ಮಹಾಭಿಷೇಕ ಪೂಜೆಯಂ ಮಾಡಿಸಿ ಹೊಂನ ಬತ್ತಿಯನೇಳಂ ಮಾಡಿಸಿ | ಯೇಳುಬೆಳ್ಳಿಯ ಪಣತೆಯೊಳಿರಿಸಿ ತುಪ್ಪಮಂ ತೀವಿ ದೇವರ್ಗಗರ್ಚ್ಚಿಸೂದು | ಯಥಾ ಯೋಗ್ಯದಿಂ ಶ್ರುತ ಪಾವಡೆ ಸಹಿತಂ ಶ್ರುತಗುರುಪೂಜೆಯಂ ಮಾಡಿ ಪಂಚಭಕ್ಷದಿಂದೈವರು ಸೋವಾಸಿನಿಯರ್ಗ್ಗೆ ಅಯ್ದು ಬಾಯಿನಮಂ ಕೊಡುಉದು | ಅಯ್ದು ತಂಡರುಷಿಯರ್ಗ್ಗೆ ತಟ್ಟು ಕುಂಚ ಗುಮ್ದಿಗೆ ಠವಣೆ ಕೋಲು ಪುಸ್ತಕ ಶ್ರುತ ಪಾವಡೆ ಸಹಿತಂ ಶ್ರುತ ಗುರು ಪೂಜೆಯಂ ಮಾಳ್ಪುದು | ಯಿಲ್ಲದ ಬಡವರು ಯಥಾಶಕ್ತಿಯಿಂ ಭಕ್ತಿ ಪೂರ್ವ್ವಕದಿಂ ಮಾಳ್ಪುದು | ಯಿದು ಉಜ್ಜವಣೆಯ ಕ್ರಮಮೆಂದು ಗೌತಮಸ್ವಾಮಿಗಳು ಪೇಳೆ ಕೇಳ್ದು ಚೇಳಿನಿ ಮಹಾದೇವಿಯುಂ ತಂನಂತಃ ಪುರದ ಸ್ತ್ರೀಯರು ಸಹಿತಂ ಕೈಕೊಂಡಳು | ಜಿನದತ್ತನ ದೋರಿಗನಪ್ಪ ವೃಷಭದತ್ತನ ಪೆಂಡತಿ ಸುಮತಿಭಾರ್ಯ್ಯೆಂಯುಂ ಕೈಕೊಂಡು ನೋನುತ್ತಿರೆ ವೊಂದು ದಿವಸಂ ನಿಂನ ಗಂಡನ ಬೇಡರು ಪಿಡಿದೊಯ್ದರೆಂದು ಪೇಳೆ ಕೇಳ್ದು ಸುಮತಿ ಭಾರ್ಯ್ಯೆ ಬಸದಿಗೆ ಪೋಗಿ ಬಂದು ವಿಚಾರಿಸಿದಪನೆಂದು ಪೋಗಿ ಅಭಿಷೇಕಾಷ್ಟ ವಿಧಾರ್ಚ್ಚನೆಯಂ ಜ್ಯೋತಿಯಂ ನಿವಾಳಿಸಿ ಪೋಗಿ ಮನೆಯ ಪೊಕ್ಕಿಪ್ಪನೆಂಗಂ ನಿಂನ ಪುರುಷನಂ ಪಿಡಿದೊಯ್ದ ಬೇಡರು | ವುಡ ಕೊಟ್ಟು ಕಳುಹೆಂದರೆಂದು ಕೇಳ್ದು ಸಂತೋಷಂಬಟ್ಟಿರ್ದ್ದು ಮತ್ತೊಂದು ದಿವಸಂ ಸುಮತಿಭಾರ್ಯ್ಯೆ ಬಸದಿಗೆ ಪೋಗಿ ಅಭಿಷೇಕಾಷ್ಟ ವಿಧಾರ್ಚ್ಚನೆಯಂ ಜ್ಯೋತಿಯಂ ನಿವಾಳಿಸಿ ಮನೆಗೆ ಬಂದು ಮೃತವಾಗಿರ್ದ್ದ ಮಗನ ಮೇಲೆ ಗಂಧೋದಕಮಂ ಮಂತ್ರಿಸಿ ತಳಿದು ಸಪ್ತಜ್ಯೋತಿಯ ಕರಿಯ ಬೊಟ್ಟನಿಡಲೊಡನೆದ್ದು ಕುಳ್ಳಿರ್ಪ್ಪುದುಂ ಸಂತೋಷಂ ಬಟ್ಟಿರ್ಪ್ಪುದುಂ | ಮತ್ತೊಂದು ದಿವಸಂ ಸುಮತಿ ಭಾರ್ಯ್ಯೆ ಬಸದಿಗೆ ಪೋಪ ಸಮಯದೊಳರ್ವ್ವಂ ಬಂದು ನಿಂಮ ಪೇಱು ಕಾಳ್ಗಿಚ್ಚಿನಿಂ ಬೆಂದವು ಯೆತ್ತು ಕಳ್ಲರೊಯ್ದರೆನೆ ಕೇಳ್ದಾನೇನಂ ಮಾಡುವೆ ಪುಂಣ್ಯಮುಳ್ಳೊಡೆ ಮುಕ್ಕುಮಲ್ಲದೊಡೆ ಪೊಕುಮೆಂದು ಬಸದಿಗೆ ಭಾರ್ಯ್ಯೆ ಬಸದಿಗೆ ಪೋಪಾ ಸಮಯದೊಳೊರ್ವ್ವಂ ಪರಿತಂದು ನಿಂನ ವೊಡಹುಟ್ಟಿದನ ಪುಲಿ ಪಾಯೆ ಸತ್ತನೆನೆ ಕೇಳ್ದು ಬಸದಿಗೆ ಪೋಗಿ ಅಭಿಷೇಕಾಷ್ಟ ವಿಧಾರ್ಚ್ಚನೆಯಂ ಮಾಡಿ | ಸೊಡರಂ ನಿವಾಳಿಸಿ | ಮನೆಗೆ ಪೋಗಿ ಗಂಧೋದಕಂ ಆತನ ಮೇಲೆ ತಳಿಯೆ ಯೆದ್ದು ಕುಳ್ಳಿರ್ವ್ವುದುಂ | ಮತ್ತೊಂದು ದಿವಸಂ ಸುಮತಿಭಾರ್ಯ್ಯೆ ಬಸದಿಗೆ ಪೋಪ ಸಮಯದೊಳೊರ್ವ್ವಂ ಬಮ್ದು | ನಿಂನ ಬಂಧುಗಳರ್ದ್ಧ ಪಟ್ಟಣಮಂ ಮುತ್ತಿದರೆನೆ ಬಸದಿಗೆ ಪೋಗಿ ಅಭಿಷೇಕಾಷ್ಟ ವಿಧಾರ್ಚ್ಚನೆಯಂ ಮಾಡಿಸಿ ಸೊಡರಂ ನಿವಾಳಿಸಿ ಮನೆಗೆ ಪೋಗಿ ಕುಳ್ಳಿರ್ಪ್ಪ ಸಮಯದೊಳು ಯಕ್ಷ ದೇವತೆ ಉಪಸರ್ಗ್ಗಮಂ ಪಿಂಗಿಸಿದಳೆಂದು ಯಕ್ಷಂ ಪೇಳ್ದು ತಮ್ನ ನಿವಾಸಕ್ಕೆ ಪೋಪುದುಂ | ಯಿತ್ತಲು ಸುಮತಿ ಭಾರ್ಯ್ಯೆ ಸಪ್ತಜ್ಯೋತಿನೋಂಪಿಯಂ ನೋಂತು ಸುಖದಿಂದಿರ್ದ್ದು ಸ್ವರ್ಗ್ಗಾಪವರ್ಗ್ಗಮಂ ಪಡೆದಳು || ಚೇಳಿನಿ ಮಹಾದೇವಿ ಮೊದಲಾಗಿ ಸಮಸ್ತ ಜನಂಗಳೆಲ್ಲಾ ನೋಂಪಿಯಂ ನೋಂತು ತಂತಮ್ಮ ಯಿಷ್ಟಾರ್ಥ ಫಲಮಂ ಪಡೆದರು | ಸಪ್ತ ಜ್ಯೋತಿಯ ನೋಂಪಿಯಂ ನೋಂತವರ್ಗ್ಗಳು ಕ್ರಮದಿಂ ಚಕ್ರವರ್ತ್ತಿಪದವಿಯಂ ಪಡೆದು ಸುಖವನನುಭವಿಸಿ ಮೋಕ್ಷಮಂ ಪಡೆದರು || ಸಪ್ತ ಜ್ಯೋತಿಯ ಸಮ್ಯಕ್ತ್ವಪೂರ್ವ್ವಕವಾಗಿ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಕಥೆಯಂ ಪೇಳಿದವರ್ಗ್ಗಂ ಕೇಳಿದವರ್ಗ್ಗಂ ಕ್ರಮದಿಂದೊಡಂಬಟ್ಟವರ್ಗ್ಗಂ ಶ್ರೀ ಶ್ರೀ ಶ್ರೀ