ಶ್ರೀ ವೀತರಾಗಾಯ ನಮಃ |

ಪುರಜಿನರ ಚರಣಕಮಲ
ಕ್ಕುರು ಮುದದಿಂದೆಱಗಿ ಸಪ್ತ ಪರಮ ಸ್ಥಾನಂ
ಬರಮೈದಿಸುವೀ ನೋಂಪಿಯ
ವರ ಕಥೆಯಂ ವಿರಚಿಪೆಂ ನಾಂ ಮಹೋತ್ಸವದಿಂ ||         

ಅದೆಂತೆಂದೊಡೆ ಜಂಬೂ ದ್ವೀಪದ ಭರತ ಕ್ಷೇತ್ರದೊಳು ಕಾಂಭೋಜಮೆಂಬುದು ನಾಡು ಜಗತ್ತಿಲಕಮೆಂಬುದು ಪೊಳಲದನಾಳ್ವಂ ದೇವಪಾಲಮಹಾರಾಜನೆಂಬಂ | ರೂಪಿನೊಳು ಮನೋಜನುಂ | ವಿಭವೈಶ್ಚರ್ಯ್ಯದೊಳು ದೇವೇಂದ್ರನುಂ | ಸಮಸ್ತ ಭೋಗೋಪ ಬೋಗಂಗಳೊಳು ಭೋಗೀಂದ್ರನುಮಂ | ಸಕಲ ಕಲಾಪ್ರೌಢಿಯೊಳು ಚತುರ್ಮ್ಮುಖನುಮಂ | ಗಾಂಭೀರ್ಯ್ಯದೊಳು ರತ್ನಾಕತನುಮಂ | ಸಮುನ್ನತಿಯೊಳು ಸುರೇಂದ್ರ ಗಿರಿಯುಮಂ | ಜಿನೇಂದ್ರಮತಾಭಿರುಚಿಯೊಳು ವಾರಿಷೇಣ ಮಹಾರಾಜನುಮಂ ಪೋಲ್ತೆಸೆವನಾತನ ಪಟ್ಟದರಸಿ ಲಕ್ಷಿಮತಿ ಮಹಾದೇವಿಯೆಂಬಳು | ರೂಪಿನೊಳು ರತಿ ದೇವಿಯುಮಂ | ಸಕಲ ಕಲಾ ಪ್ರೌಢಿಯೊಳು ಸರಸ್ವತಿಯಮಂ | ಪತಿವ್ರತಾ ಗುಣದೊಳು ಸೀತಾದೇವಿಯುಮಂ | ಗುರುಭಕ್ತಿಯೊಳು ರುಗ್ಮಿಂಇ ಮಹಾದೇವಿಯುಮಂ | ಶ್ರೀ ಮಜ್ಜಿನೇಂದ್ರವರ ಭಕ್ತಿಯೊಳು ಶಚಿಮಹಾದೇವಿಯುಮಂ | ಪೋಲ್ತೆಸೆವಳಂತವರಿರ್ವ್ವರುಂ ಮಹಾ ಮಂಡಲೇಶವ್ರ ಪದವಿಯೊಳ್ಕೂಡಿ ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯುತ್ತಮಿರಲಾ ಪುರದ ರಾಜಶ್ರೇಷ್ಠಿ ನಂದಿಮಿತ್ರನೆಂಬನಾತನ ಪೆಂಡತಿ ನಂದ ಶ್ರೀಯೆಂಬಳೊಂದು ದಿವಸಂ ಶುಚಿರ್ಭ್ಭೂತೆಯಾಗಿ ದೇವಾಂಗ ವಸ್ತ್ರಾಮನುಟ್ಟು ದಿವ್ಯಾ ಭರಣಂಗಳಂ ತೊಟ್ಟು ದುಕೂಲಮಂ ಮೇಲುವೊದಕೆಗೊಂಡು ಪರಿಚಾರಕಿಯರುಂ ತಾನುಂ ಸಮಸ್ತ ಬಂಧು ಜನಂಗಳುಮಂ ಕೂಡಿಕೊಂಡು ಸಹಸ್ರಕೂಟ ಚೈತ್ಯಾಲಯಕ್ಕೆ ಪೋಗಿ ತ್ರಿಃಪ್ರದಕ್ಷಿಣಂಗೆಯ್ದು ನಿಷಿಧಿಯೆಂದೊಳಗಂ ಪೊಕ್ಕು ಉಪಾಧಿಯಿಂದರ್ಹತ್ಪರಮೇಶ್ವರನಂ ವಸ್ತು ಸ್ತವ ರೂಪ ಸ್ತವ ಗುಣಸ್ತವ ಶತಸಹಸ್ರಂಗಳಿಂ ಸ್ತುತಿಯಿಸಿ ದಿವ್ಯಾರ್ಚ್ಛನೆಗಳಿಂದರ್ಚ್ಛಿಸಿ ವಂದಿಸಿ ತದನಂತರಂ ಶ್ರುತಮಂ ಪೂಜಿಸಿ ವಂದಿಸಿ ತದ ನಮ್ತರಂ ಪಂಚ ಮಹಾವ್ರತ ನಿರತರುಂ ಸಪ್ತರ್ದ್ದಿ ಸಂಪನರುಂ ನವ ವಿಧ ಬ್ರಹ್ಮಚರ್ಯ್ಯ ಸಮನ್ವಿತರುಂ | ದಶಲಾಕ್ಷಿಣಿಕ ಧರ್ಮ್ಮೋಪೇತರುಂ | ದ್ವಾದಶ ವಿಧ ತಪೋನಿರತರುಂ ತ್ರಯೋದಶ ಚಾರಿತ್ರಾಂಚಿತರುಮಪ್ಪ ಜ್ಞಾನ ಸಾಗರ ಭಟ್ಟಾರಕರೆಂಬವಧಿ ಜ್ಞಾನ ನಾಗಭಟ್ಟಾರಕರೆಂಬವಧಿ ಜ್ಞಾನಿಗಳ್ಗೆ ಭಕ್ತಿಪೂರ್ವ್ವಕದಿಂ ಪಾದಾರ್ಚ್ಚನೆಯಂ ಮಾಡಿ ಗುರುಭಕ್ತಿಯಿಂ ನಮೋಸ್ತು ಮಾಡಿ ಮುಂದೆ ಕುಳ್ಳಿರ್ದ್ದು ನಿರ್ಮ್ಮಲ ಚಿತ್ತದಿಂ ಧರ್ಮ್ಮ ಶ್ರವಣಮಂ ಕೇಳ್ದು ತದನಂತರಂ | ನಂದಶ್ರೀ ವಿನೆಯದಿಂ ಕರಕಮಲಮಂ ಮುಗಿದು | ಸ್ವಾಮಿಯೆನಗೆ ಪರಮ ಸುಖಕ್ಕೆ ಕಾರನಮಪ್ಪದಾವುದಾನುಮೊಂದು ನೋಂಪಿಯಂ ಬೆಸಸಿಮೆನಲವರು ಸಪ್ತ ಪರಮ ಸ್ಥಾನದ ನೋಂಪಿಯಂ ನೋನಿಮೆನಲದಱ ವಿಧಾನಮೆಂತೆನೆ ಪೇಳ್ದಪರು ಶ್ರಾವಣ ಶುದ್ಧ ಪಾಡ್ಯಮಾದಿಯಾಗಿ ಸಪ್ರಮಿ ಪರಿಯಂತಂ ದಿನಂ ಪ್ರತಿ ಯಥಾ ಶಕ್ತಿಯಿಂದ ರ್ಹತ್ಪರಮೇಶ್ವರಂಗೆ ಬಾಳಿಕೇಂ ರಸ ಲೀಲೆಕ್ಷ್ರಸ ಶರ್ಕ್ಕರೆ ತುಪ್ಪದಭಿಷೇಕಮಂ ಮಾಡಿಸಿ ಮಹಾ ಪೂಜೆಯಂ ಮಾಳ್ಪುದು ಯೇಳು ಬಂನಗೆಯ ಪಕ್ವಾಂನ ಸಹಿತೆ ಸೇವಗೆಯ ಪಾಯಸಂ ತುಪ್ಪ ಶರ್ಕ್ಕರೆಯಂ ಚರುವನಿಟ್ಟು ಪ್ಕಪ್ಪೀರಾದಾರತಿಯನೆತ್ತೂದು ದಶಾಂಗ ಧೂಪಮಂ ನಿವಾಳಿಸುವುದು ಯೇಳು ಪ್ರಕಾರದ ಫಲಗಳಿಂದರ್ಚೀಸುವುದು | ಓಂ ಶ್ರೀ ಕ್ಲೀಂ ಅರ್ಹಂ ನಮೋರ್ಹತೇ ಸ್ವಾಹಾ | ಯೆಂಬೀಮಂತ್ರಮನೋದುತ್ತಮಷ್ಟ ವಿಧಾರ್ಚನೆಯಂ ಮಾಳ್ಪುದು | ದಿನಂ ಪ್ರತಿಯೊಂದು ಪಡಿಯಕ್ಕಿಯುಮಂ ದೇವರಮುಂದೆ ಅರ್ಚ್ಛಿಸೂದು | ಕಥೆಯಂ ದಿನಂ ಕೇಳ್ವುದು | ದಿನಂ ಪರ್ತಿಯೊಮ್ದು ತಂಡ ಋಷಿಯರಂ ನಿಲಿಸೂದು | ಮೇಣೊಂದು ತಂಡಜ್ಜಿಯರಂ ನಿಲಿಸೂದು | ರುಷಿಯರಜ್ಜಿಯರು ದೊರಕದಿರ್ದ್ದಡೆ | ಸಮ್ಯಗ್ದೃಷ್ಟಿ ಯಪ ಶ್ರಾವಕರು ಮೇಣು ಶ್ರಾವಕಿತ್ತಿಯರುಮಂ ಕೂಡಿಕೊಂಡೇಕ ಭುಕ್ತಮಂ ಮಾಳ್ಪುದು | ತಾನುಂಬ ವಸ್ತುವನೊಂದಾದಿಯಾಗಿ ದಿನಂ ಪ್ರತಿಯೊಂದನಧಿಕಂ ಮಾಳ್ಪುದು | ಯಿಂತೀ ಕ್ರಮದಿಂದೋಳು ವರುಷ ಪರ್ಯ್ಯಂತ ತಪ್ಪದೆ ನೋಂತು ಕಥೆಯೊಳುಜ್ಜಯಿಸುವ ಕ್ರಮಮೆಂತೆಂದೊಡೆ ದೇವರಿಗೆ ಮಹಾಭಿಷೇಕ ಪೂಜೆಯಂ ಸವಿಸ್ತರಂ ಮಾಳ್ಪುದು | ಕುಂಕುಮ ಕರ್ಪ್ಪೂರ ಸಂಮಿಶ್ರ ಗಂದೋಧಕ ಉದ್ವರ್ತ್ತನಮಂ ಮಾಳ್ಪುದು | ಪುಷ್ಪರಚನೆಯಿಂದ ಮಹಾಪೂಜೆಯಂ ಮಾಳ್ಪುದು | ಏಅತೆಱದ ಭಕ್ಷರಚನೆಯಂ ಮಾಡೊವೊಂದು ಪೊಸ ಪರಿವಾಣದೊಳು ಅಣ್ನೆವಾಲಪಾಯಸದಿಂ ತುಪ್ಪ ಶರ್ಕ್ಕರೆವೆರಸು ದೇವರ ಮುಂದೆ ಚರುವನಿಡುವುದು | ಯೇಳು ನೀರಾಂಜನದೊಳು ಕರ್ಪ್ಪೂರದಾರತಿಯಂ ತೀವಿಯೆತ್ತೂದು | ಸುಗಂಧಮಪ್ಪ ದಶಾಂಗ ಧೂಪಮನಿಕ್ಕೂದು | ಪಲತೆಱದ ಫಲಗಂಳಿಂದರ್ಚ್ಚಿಸೂದು | ಬಳಿಕ್ಕರ್ಗ್ಘ್ಯಮಂ ಕೊಟ್ಟು ತದ ನಂತರಂ ವಸ್ತ್ರಾಬಹ್ರಣಂ ಸಹಿತಮಾಗಿ ಶ್ರುತ ಪೂಜೆಯಂ ಮಾಡಿ ಗುರುಗಳಿಗೆ ಪಾದರ್ಚ್ಛನೆಯಂ ಮಾಡಿ ಕಥೆಯಂ ಕೇಳ್ವುದು | ತದನಂತರಂ ಯೇಳು ತಂಡ ಋಷಿಯರ್ಗ್ಗೆ ಮೇಣು ಮೂಱು ತಂಡ ಋಷಿಯರ್ಗ್ಗೆ ಮೇಣೊಂದು ತಂಡ ರುಷಿಯರ್ಅಂ ನಿಲಿಸಿ ನಿರಂತರಾಯಂ ಮಾಡಿಸಿ | ತಟ್ಟು ಕುಂಚ ಗುಂಡಿಗೆ ಠವಣೆ ಕೋಲು ಕವಳಿಗೆ ಪೊಸ್ತಕ ಶ್ರುತ ವಸ್ತ್ರ ಸಹಿತಂ ಕೊಟ್ಟು | ಅನಿತೆಯಜ್ಜಿಯರ್ಗ್ಗುಂಡ ಕೊಡುವುದು | ಉಳಿದ ಚಾತುರ್ವ್ವರ್ಣ್ನಕ್ಕೆ ಆಹಾರ ದಾನಂ ಮಾಡಿಯಾಕ್ರಮದಿಂ ಯಥಾ ಶಕ್ತಿಯಿಂ ಸಂಘಪೂಜೆಯಂ ಮಾಳ್ಪುದು ಯಿದುಜ್ಜಯಿಸುವ ಕ್ರಮಂ | ಮತ್ತಂ ಬಡವರೊಡೆಯರೆಂನದೆ ಯಥಾಶಕ್ತಿಯಂ ಭಕ್ತಿ ಪೂರ್ವ್ವಕದಿಂ ನೋಂಪುದೆಂದು ಪೇಳೆ ಕೇಳ್ದು ಸಂತುಷ್ಟ ಚಿತ್ತೆಯಾಗಿ ಮತ್ತಮಿಂತೆಂದು ಬಿಂನಪಂಗೆಯ್ದಳು ಯೀ ನೋಂಪಿಯ ಮುಂನ ನೋಂತು ಫಲಮೆಯ್ದಿದವರ ಕಥೆಯಂ ಬೆಸಸಿಮೆನಲವರಿಂತೆಂದು ಪೇಳ್ದರೀ ಜಂಬೂ ದ್ವೀಪದ ಭರತ ಕ್ಷೇತ್ರದೊಳುನೇಪಾಳಮೆಂಬುದು ನಾಡು ಲಲಿತಪುರಮೆಂಬುದು ಪೊಳಲದನಾಳ್ವಂ ಭೂಪಾಲನೆಂಬರಸನಾತನ ಪಟ್ಟದರಸಿ ವಿಶಾಲ ನೇತ್ರೆಯೆಂಬಳಂತವರಿರ್ವ್ವರುಂ ಸುಖ ಸಂಕಥಾ ವಿನೋದದಿಂದಿರೆ ತಮಗೆ ಪುತ್ರ ಸಂತಾನಮಿಲ್ಲದೆ ಪಲಕಾಲಂ ಪೋಗಿ ಪಿರಿದುದುಮ್ಮಾನ ಚಿತ್ತರಾಗಿರ್ಪ್ಪಿನಲ್ಲಿಗೆ ನಾನಾ ದೇಶಂಗಳಂ ವಿಹಾರಿಸುತ್ತಂ ದೇಶಭೂಷಣ ಭಟ್ಟಾರಕರೆಂಬ ದಿವ್ಯಜ್ಞಾನಿಗಳು ಬಂದಾಪುರದ ಬಹಿರುದ್ಯಾನದೊಳಿರ್ಪುದು | ವನ ಪಾಲಕಂ ಬಂದರಸಂಗಕಾಲದ ಫಲ ಪುಷ್ಪಂಗಳ ದರ್ಶನಗಾಣಿಕೆಯಂ ಕೊಟ್ಟು ಸಾಷ್ಟಾಂಗ ಪ್ರಣತನಾಗಿ ಕರಕಮಲಂಗಳಂ ಮುಗಿದು ದೇವ ನಂಮ ಪುರದ ಬಹಿರುಅದ್ಯಾನವನದೊಳು ದೇಶಭೂಷಣ ಭಟ್ಟಾರಕರೆಂಬವಧಿ ಜ್ಞಾನಿಗಳು ಬಿಜಯಂಗಯ್ದಿರ್ದಪರೆಂದು ಭಿಂನಪಂಗೆಯ್ಯೆ ಹರ್ಷೋತ್ಕರುಷ ಚಿತ್ತನಾಗಿ ವನಪಾಲಂಕಗಂ ಚಿತ್ತಮ ಕೊಟ್ಟಾನಂದ ಭೇರಿಯ ಪೊಯಿಸಿ ಸಮಸ್ತ ಪರಿಜನ ಪುರಜನಂ ಬೆರಸು ಪಾದಮಾರ್ಗ್ಗದಿಂ ಪೋಗಿ ತ್ರಿಪ್ರದಕ್ಷಿಣಂಗೆಯ್ದು ಅನೇಕಾರ್ಚ್ಚನೆಗಳಿಂದರ್ಚ್ಚಿಸಿ ಗುರು ಭಕ್ತಿ ಪೂರ್ವ್ವಕಂ ನಮೋಸ್ತು ಮಾಡಿ ವಿನಯದಿಂ ಮುಂದೆ ಕುಳ್ಳಿರ್ದ್ದು ನಿರ್ಮ್ಮಲ ಚಿತ್ತದಿಂಧರ್ಮ್ಮ ಶ್ರವಣಂ ಕೇಳ್ದು ತದನಂತರಮಿರ್ವ್ವರು ಮತ್ತೆ ನಮೋಸ್ತು ಮಾಡಿ ಸ್ವಾಮಿ ಯೆಮಗೀ ಭವದೊಳು ಪುತ್ರ ಸಂತಾನವಿಲ್ಲದೆ ಯೆಂಮ ಜಲ್ಮಮಿಂತೇ ಪೋಕುಮೋಮೆಂದಾಗಿಯುಂ ಪುತ್ರೋತ್ಪತ್ತಿಯಕ್ಕುಮೊ ಬೆಸಸಿಮೆಂದು ಭಿಮ್ನವಿಸುಉದು ಅವರಿಂತೆಂದು ಪೇಳ್ದರ್ನ್ನಿಮಗೀ ಭವದೊಳೊರ್ವ್ವ ಲೋಕೋತ್ತಮನಂ ಭವ್ಯೋತ್ತಮನಮಪ್ಪ ಪುತ್ರ ಪುಟ್ಟುಗುಮೆಂದು ಪೇಳ್ವುದುಂ | ನಾನೃಥಾ ಜಿನಭಾಷಿತಂ | ಸಮಣಾ ಅಮೋಘ ವಯಣಾಯೆಂದು ನಿಶ್ವಯಿಸಿ ತಮಗಾಗಳಂತೆ ಪುತ್ರೋತ್ಸವಮಾದಂತೆ ರಾಗರಸದೊಳೋಲಾಡುತ್ತಂ ಗುರುಗಳಂ ವಂದಿಸಿ ಬೀಳ್ಕೊಂಡು ರಾಜಮಂದಿರಕ್ಕೆ ಬಂದು ಸುಖದಿಂದಿರ್ಪ್ಪುದುಮಂನೆಗೆಮಿತ್ತಲು ಕಾಶ್ಮೀರ ವಿಷಯದ ಹಸ್ತಿನಾಪುರದ ರುದ್ರದತ್ತನೆಂಬ ಪರದಂಗಮಾತನ ಪೆಂಡತಿ ರುದ್ರದತ್ತೆಗಂ ಕ್ರಮದಿ ನಿಂದ್ರಸೇನಂ | ಚಂದ್ರಸೇನ | ಸೂರಸೇನ | ವೀರಸೇನ | ನಾಗಸೇನ | ಅಮರಸೇನ | ಸಾಗರಸೇನ | ಮಾರವೀರ | ವೀರಬಾಹು | ಚಾರುದತ್ತ | ಮೇರುದತ್ತ | ನಾಗರುದ್ರ | ಅಶ್ವಸೇನರೆಂಬ ಪದಿನಾಱು ಮಕ್ಕಳು ಪುಟ್ಟುಉದು | ಆ ಮಕ್ಕಳೆಲ್ಲರ್ಗ್ಗಂ ಮದುವೆಯಂ ಮಾಡಿ ಬೇಱೆ ವೇಱೆ ಪದಿನೆಂಟು ಕೋಟಿ ದ್ರವ್ಯಂಗಳಂ ಪಚ್ಚುಗೊಟ್ಟು ಪೆಂಡತಿಗೆ ಬೇಱೆ ದಾನ ಪೂಜೆಗೆ ತಕ್ಕಂತು ನಾನು ನಾಲ್ಕು ಕೋಟಿ ದ್ರವ್ಯಮಂ ಕೊಟ್ಟು ತಾನುಳಿದೆಂಟು ಕೋಟಿ ದ್ರವ್ಯಮಂ ನಾನಾ ತೀರ್ತ್ಥ ಸ್ಥಾನಂಗಳಂ ಜೀರ್ಣ್ಣ ಜಿನಾಲಯಂಗಳನುದ್ಧಾರಣಕ್ಕಂ ದೀನನಾಥ ಆಶ್ರಿತ ಜನಂಗಳಂ ಯಥಾಯೋಗ್ಯಕ್ರಮದಿಂ ಕೊಟ್ಟು ತದನಂತರಂ ಬಾಹ್ಯಾಂಭ್ಯಂತರ ಪರಿಗ್ರಹ ನಿವೃತ್ತನಾಗಿ ಪಿಹಿತಾಸ್ರವ ಭಟ್ಟಾರಕರ ಸಮಕ್ಷದೊಳು ಜಿನದೀಕ್ಷೆಯಂ ಕೈಕೊಂಡು ಗುರುಪಾದ ಮೂಲದೊಳು ದ್ವಾದಶ ವರುಷಂ ಬರಮಿರ್ದ್ದು ಸಕಲಾಗಮ ದಾರಿಯಾಗಿ ಗುರುವಿನೊಡಂಬಡಿಕೆಯಿಂ ನಾನಾ ತೀರ್ಧವಂದನೆಗಳಂ ಮಾಡುತ್ತಂ ವಿಹಾರಿಸುತ್ತಮಿರ್ದ್ದರಿತ್ತಲು | ನಾಗರುದ್ರನೆಂಬ ಕಿಱಿಯ ಮಗಂ ದುರ್ಜನ ಸಂಸರ್ಗ್ಗದಿಂ ಕಿಱಿಯಂದಾದಿಯಾಗಿ ಸೂಳೆ ತಂಬುಲ ಜೂಜು ಮೊದಲಾದ ದುರ್ವ್ಯಸನಂಗಳೊಳ್ಕೂಡಿ ತಂನ ತಂದೆ ಕೊಟ್ಟ ಪದಿನೆಂಟು ಕೋಟಿ ದ್ರವ್ಯಮುಮಂ ಪೆಂಡತಿಯ ಮೈಯಲಿರ್ದ್ದ ಪಂನೆರಡು ಸಾಸಿರ ಪೊಂನ ತೊಡುಗೆಯುಮಂ ತಂನ ತಾಯ ನಾಲ್ಕು ಕೋಟಿ ದ್ರವ್ಯಮಂ ತನೇ ತಿಂದು ಬಳಿಯಂ ಕಟಿ ಕರ್ಪ್ಪಟ ಶೂನ್ಯನಾಗಿ ದೇಶಾಂತರಂ ಪೋಗಿ ಮರ್ಕ್ಕಟ ವೈರಾಗ್ಯದಿಂ ದೀಖ್ಶೆಯಂ ಕೈಕೊಂಡು ಮತ್ತಮಲ್ಲಿಯುಂ ಪರಮಾಗಮಾಭ್ಯಾಸಮನೊಲ್ಲದೆ ಲೌಕಿಕ ಶಾಸ್ತ್ರಂಗಳಂ ಕಲಿತು ಗುರುವನವಜ್ಞೆಗೆಯ್ದು ಸಂಘವಿರೋಧಿಯುಂ ದುರ್ಜ್ಜನ ಪ್ರಿಯನುಂ ಗರ್ವ್ವ ಪರ್ವ್ವತಾರೂಢನುಮಾಗಿ ತಪೋನುಷ್ಟಾನ ಧ್ಯಾನ ಮೂಢನುಂ ಸ್ವೇಚ್ಛಾಚಾರಿಯುಂ ವೇಷಧಾರಿಯುಮಾಗಿ ನೆಗಳುತ್ತಮಿರ್ದ್ದು ಜೀವಿತಾಂತ್ಯದೊಳು ದುರ್ಬ್ಭಾವದಿಂ ಗತಪ್ರಾಣನಾಗಿ ಮೂಱನೆಯ ನರಕದೊಳ್ಪುಟ್ಟಿ ಅಲ್ಲಿಯುಂ ಪುರಾಣ ನಾರಕರ ಭಯಂಕರಾಕಾರ ಮಂ ಕಂಡು ಮನದೊಳ್ವಿಭಂಗ ಜ್ಞಾನಮುಂ ಪುಟ್ಟಿ ನರಕದ ವೃತ್ತಾಂತಮನಱಿದು ಮತ್ತಮಲ್ಲಿಯುಂ ಸ್ವಭಾವದಿಂ ಪುಟ್ಟುವ ವೈರಂಗಳಿನೊನೊರ್ವ್ವರೊರ್ವ್ವರಂ ಪಿಡಿದು ಕಡಿ ಖಡಂಗೆಯುತ್ತ ಗರ್ಜ್ಜಿಸುತ್ತಂ ಕುಱಿ ತಱಿಉತ್ತಂ ಪಿಡಿ ತಱಿಉತ್ತಂ ಕರಗಸದಿಂ ಕೊಉರುತ್ತಂ ಸೀಳುತ್ತಂ ಪೊರಳುತ್ತ ಕಿವಿಗೊಳಳಂ ಮೂಗುಗಳೊಳಂ ಕಾಯ್ದು ಕಬ್ಬನದ ಸಲಾಕೆಗಳಂ ಬೆಟ್ಟುತಂ ಕಣ್ಗಳುಮಂ ನಾಲಗೆಗಳುಮಂ ಕರುಳುಮಂ ನರಉಗಳುಮಂ ಬರಿಯೆಲುಗಳುಮನುರ್ಚ್ಚುತ್ತಂ ಪಾದದಿಂ ಮಸ್ತಕಂ ಬರಂ ತಿದಿಯನುಗಿಉತ್ಅಂ | ಸಂಣಿಗೆಯೊಳಿಟ್ಟರಉತಂ ಕಾವಲಿಯೊಳು ಕಾಸುತಂ ಮೆಯ್ಯೆಲ್ಲಮಂ ಕತ್ತಿಯೊಳುಕಿಸುತ್ತಂ | ಕಡುಕಾಯ್ದು ಕುದಿದು ನೊರೆಗೊಂಡು ಕೆಂಗಲಿಸುವ ಲೋಹದರಸಮಂ ಬಾಯೊಳಿಕ್ಕುಳಿಂದಗಲಿಸಿ ಪೊಯ್ದು ಕುಡಿ ಕುಡಿಯೆಂದು ಗಡಗಡನೆ ಕುಡಿಯಿಸುತ್ತಂ ಮತ್ತಂ ಕಾಯ್ದು ಕೆಂಗಲಿಸುವ ಲೋಹದ ಪುತ್ರಿಕೆಯಂ ತಂದಪ್ಪೆಂದಪ್ಪಿಸುತ್ತಂ ಯಿದು ಮೊದಲಾದ ಪಲತೆಱದ ದಂಡಣೆಗಳಂ ದಂಡಿಸುತ್ತಮಿಪ್ಪ ನರಕ ದುಃಖಮನೇಳು ಸಾಗರೋಪಮಾಯುಷ್ಯಂ ಬರಂ ಅನುಭವಿಸಿದಿಂ ಬಳಿಯಮಲ್ಲಿಂ ಬಳ್ಚಿ ಬಂದಿಲ್ಲಿ ಸೌರಾಷ್ಟ್ರ ದೇಶದೇಶದ ಕುಕ್ಕುಟ ಗ್ರಾಮದೊಳು ಕಿವಿ ಗಡಿಕ ಬಾಲಗಡಿಕ ಮೂಗು ಹಱಿದ ಹುಳಿತ ನಾಯಾಗಿ ಪುಟ್ಟಿ ನಮೆದು ಸತ್ತು ಬಳಿಯಂ ಮುಂನಿನ ಜನ್ಮಾಂತರದಲುಳಿದ ಪುಂಣ್ಯದ ಫಲದಿಂ ಕಾಶ್ಮೀರ ವಿಷಯದ ಹಸ್ತಿನಾಪುರದೊಳು ಚಿರವ್ಯಾಸನೆಂಬ ಪಾರ್ವ್ವಂಗಂ ಆತನ ಪಾರ್ವ್ವತಿ ವಿಮಲಗಂಗೆಗಂ ಮನೋಹರದೇವನೆಂಬ ಪೆಸರ ಮಗನಾಗಿ ಪುಟ್ಟಿ ಆ ಪುರದ ರಾಜ ಶ್ರೇಷ್ಠಿಯಪ್ಪ ಕುಬೇರಕಾಂತಂಗಮಾತನ ಪೆಂಡತಿ ಕನಕಮಾಲೆಗಂ ಪುಟ್ಟಿದ ಮಗಂ ಧನದೇವನೆಂಬಾತನುಂ ಕಿಱಿಯಂದಿಂದಾದಿಯಾಗಿ ಪರಮ ಮಿತ್ರನಾಗಿದ್ದೊಂದು ದಿವಸಂ ಧನದೇವಂ ದೇವರಂ ಕಾಣಲೆಂದು ಚೈತ್ಯಾಲಯಕ್ಕೆ ಪೊಸವಸರದೊಳು ತಾನುಂ ಕೂಡಿ ಚೈತ್ಯಾಲಯಕ್ಕೆ ಪೋಗಿ ಕುಳ್ಳಿರ್ಪ್ಪುದುಮಾ ಸಮಯದೊಳು ಬುದ್ಧಿಸಾಗರ ಭಟ್ಟಾರಕರೆಂಬ ದಿವ್ಯ ಜ್ಞಾನಿಗಳು ಭವ್ಯ ಜನಂಗಳ್ಗೆ ಸಪ್ತಪರಮ ಸ್ತಾನದ ನೋಂಪಿಯ ವಿಧಾನಮೆಲ್ಲಮಂ ವಿಸ್ತರಮಾಗಿ ಪೇಳ್ವುದುಂ ಕೇಳುತ್ತಮಿರ್ದ್ದು ಮನೋಹರ ದೇವಂ ಸಪ್ತ ಪರಮಸ್ಥಾನಂಗಳುಮಾವುಮೆಂದು ಬೆಸಗೊಳ್ವುದುಂ ಗುರುಗಳುಮಿಂತೆಂದು ಪೇಳ್ದಪರು ಪರಮಸುಖಾನುಭವಕ್ಕೆ ಯೋಗ್ಯಮಪ್ಪ ಭವೋತ್ತಮ ಜಾತಿಯೊಳ್ಪುಟ್ಟುವುದುಂ | ಪರಮೈಶ್ವರ್ಯ ಸಂಪತ್ತಿಯನೆಯ್ದುಉದುಂ | ಪರಮೋತ್ಕೃಷ್ಟಮಪ್ಪ ತಪದೊಳೇಱುವುದಂ | ಪರಮ ಸುರರಾಜ ಪದವಿಯೊಳ್ಕೂಡುವುದಂ | ಪರಮ ಚಕ್ರವರ್ತ್ತಿ ಪದವಿಯಂ ಕೈಕೊಳ್ವುದುಂ | ಪರಮಾರ್ಹಂತ್ಯ ಲಕ್ಷ್ಮಿಯಂ ಧರಿಯಿಸುಉದುಂ | ಪರಮ ನಿರ್ವ್ವಾಣಗತಿಉಒಳ್ನಿಲ್ವುದುಮೆಂದಿಂತು ಸಪ್ತ ಪರಮ ಸ್ಥಾನಂಗಳೆಲ್ಲಮೀ ನೋಂಪಿಯ ಫಲದಿನಪ್ಪುದೆಂದು ಪೇಳ್ದು ಮತ್ತಮವಱ ಸ್ವರೂಪಂಗಳ ವಿಸ್ತರಮಾಗಿ ವ್ಯಾಖ್ಯಾನದಿಂ ಪೇಳೆ ಕೇಳ್ದು ಸಂತುಷ್ಟ ಚಿತ್ತನಾಗಿ ಯೆಂನ ಜಲ್ಮಮಿಂದಿನೊಳು ಸಫಲಮಾದುದೆಂದು ಮೂಢ ತ್ರಯಾದಿ ಪಂಚವಿಂಶತಿ ಮಲರಹಿತಮಪ್ಪ ಸಮ್ಯಕ್ತ್ವಪೂರ್ವ್ವಕಮಾಗಿ ನೋಂಪಿಯಂ ಕೈಕೊಂಡು ಯಥಾ ಕ್ರಮದಿಂ ನೋಂತು ಜೀವಿತಾಂತ್ಯದಿಂ ಭೂಪಾಲ ಮಹಾರಾಜಂಗಂ ವಿಶಾಲನೇತ್ರೆಗಂ ಶ್ರೀಪಾಲ ಕುಮಾರನಾಗಿ ಪುಟ್ಟಿ ಸಕಲ ಶಾಸ್ತ್ರವಿದ್ಯಾಪ್ರವೀಣನುಂ | ಲೋಕೋತ್ತಮನುಂ | ಭವ್ಯೋತ್ತಮನುಮೆನಿಸಿ ನೆಗಳ್ದು ಮಹಾ ಮಂಡಲೇಶ್ವರ ಪದವಿಯಂ ಕೈಕೊಂಡು ಪರಂಪರೆಯಿಂ ಸಪ್ತ ಪರಮ ಸ್ತಾನಂಗಳನೈದಿದನೆಂದು ಜ್ಞಾನ ಸಾಗರ ಭಟ್ಟಾರಕರು | ನಂದಶ್ರೀಗೆ ಪೇಳೆ ಕೇಳ್ದು ಸಂತೋಷಮುಂ ಮುಂನಿನಿಂದಿಂಮಡಿಯಾಗಿ ಪೆರ್ಚ್ಚಿ ಪಂಚಮುಷ್ಟಿಯಿಂದ ಪ್ರಣುತೆಯಾಗಿ ಗುರುಗಳಂ ಬೀಳ್ಕೊಂಡು ನಿಜಪುರಮನೆಯ್ದಿದಂ ಬಳಿಯ ಸುಖಮಿರ್ಪ್ಪುದುಂ | ಆ ನೋಂಪಿಯ ದಿನಂ ಬರೆ ಪತಿಯುಂ ತಾನುಂ ಯಥಾ ಕ್ರಮದಿಂ ನೋಂತು ಕಡೆಯೊಲುಜ್ಜಯ್ಸಿ ತತ್ಫಲದಿಂ ಸಪ್ತ ಪರಮ ಸ್ಥಾನಂಗಳನೆಯ್ದಿ ಸುಖಮಿರ್ದ್ದಪರು ತತ್ಕಥೆಯಂ ಪೇಳ್ದವರ್ಗ್ಗ ಅ ಸತ್ತು ಪರಮ ಸ್ಥಾನದ ನೋಂಪಿಯಂ ಯಥಾ ಶಕ್ತಿಯಂ ನೋಂಪವರ್ಗ್ಗಂ | ನೀನಿಸಿದವರ್ಗ್ಗಂ ಕ್ರಮದಿಂದೊಡಂಬಟ್ಟವರ್ಗ್ಗಂ ಮಂಗಳ ಮಹಾಶ್ರೀ ಶ್ರೀ ಶ್ರೀ.