|| ಶ್ರೀ ವೀತರಾಗಾಯನಮಃ ||

ಸಮಾಧಿ ವಿಧಾನದ ನೋಂಪಿಯಂ ವೈಶಾಖಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಉಪವಾಸಗೆಯ್ದು ಪಂಚವರ್ಣ್ಣದ ವೇದಿಕೆಯಂ ಬರದು ಪಂಚಪರಮೇಷ್ಠಿಗಳ ಪ್ರತುಮೆಯಂ ಬೇರೊಂದೆಡೆಯೊಳಿರಿಸಿ ಅಭಿಷೇಕಮಂ ಮಾಡಿಸಿತಂದು ವೇದಿಕೆಯ ನಡುವಿರಿಸಿ | ಕರ್ಪೂರಂ ಬೆರಸಿರ್ದ ನೀರಿಂ | ಗಂಧೋಕದಿಂ ಮೊನೆ ಮುಱಿಯದ ಕಳವೆಯಕ್ಕಿಯಂ ಪಂಚವರ್ಣ್ನದಂ ವಿದವಪ್ಪ ಪೂಗಳಿಂದಂ ಬೆರಸಿದ | ಪಂಚ ವರ್ಣ್ನದ ಚರುವಂ | ಪಲವು ಬತ್ತಿಯಾರತಿ ಸೊಡರಂ | ಪಂಚವರ್ಣ್ನದ ಪಂಚಾಂಗ ಧೂಪಮಂ ಪಂಚ ವರ್ಣ್ಣದ ಫಲಂಗಳಾ ಫಲ… ಗ್ಯಂಗಳಪ್ಪ ಷಡ್ದ್ರವ್ಯಂಗಳಿಂದ ಬೆರಸಿ ದೇವರ ಮುಂದಿಟ್ಟು ಶುಕ್ಲಧ್ಯಾನಂಗಳಿಂ ಅವಱ ಫಲಂಗಳುಮಂ ನೆನಉದು | ಅವನೆ ಕೇಳ್ಪುದು | ಅವನೆ ವೋದುಉದು ವೋದಿಸುವುದುಂ ಮೇಣ್ಪಂಚನಮಸ್ಕಾರಂಗಳುಮಂ ನೂಱೆಂಟನೆಣಿಸೂದು | ಯಿಂತು ಮೊದಲ್ಗೊಂಡು ಉಪವಾಸಂ ಮಾಡಿ ನೂಱೆಂಟನೆಸೂದು | ಯಿಂತು ಮೊದಲ್ಗೊಂಡು ಉಪವಾಸಂ ಮಾಡಿ ನೆರದುಜ್ಜವಣೆಯಂ ಮಾಡಿ ಅಲಿವಿಡಿಯಂ ದಾನವಿಧಿಯ ಪುಸ್ತಕನೈದಂ ಬರಸಿ ಪಂಚ ಪರಮೇಷ್ಠಿಗಳ ಪ್ರತುಮೆಯನಭಿಷೇಕಂ ಮಾಡಿಸಿ ಮುನ್ನ ಪೇಳ್ದ ಉಜ್ಜವಣೆಯ ಕ್ರಮದೊಳೆ ಅಯ್ವರಾಚಾರ್ಯ್ಯರ್ಗ್ಗೆ ಪುಸ್ತಕಂಗಳಂ ಕುಡುವುದು | ಯಥಾ ಶಕ್ತಿಯಿಂ ಚಾತುರ್ವ್ವರ್ಣ್ನ ಸವಣ ಸಂಘಕ್ಕಾಹಾರ ದಾನಮಂ ಮಾಡುವುದು ನೋಂಪಿನೆಱಗು ಈ ನೋಂಪಿಯ ಫಲವೆಂತೆಂದೊಡೆ ಜನ್ಮಜನ್ಮಾಂತರದೊಳೆಲ್ಲಾ ದೇವರು ಮನುಷ್ಯರುಮಾಗಿಯಿಲ್ಲಿ ಉತ್ತಮ ಕುಲಮಂ | ಲಘುಮಾರೋಗ್ಯತೆಮುಂ | ಬುದ್ಧಿಯುಂ ನಿರ್ಮಳಿಕೆಯುಂ ಮುತ್ತಲಿಲ್ಲದವು ಮೆಂದಿವು ಮೊದಲಾಗೊಡೆಯನೇಕ ಕಳೆಗೆಯರೊಡೆಯರಾಗಿ ಅಪಮ್ರಿತ್ಯುವಿಂದಪ್ಪ ಸಾವುಂ | ತಂಮಿಂದಕ್ಕೆ ಪೆಱರಿಂದಕ್ಕೆ ಸಂಕ್ಲೇಶಮಿಲ್ಲದ ದುಃಖಮಿಲ್ಲದವರಾಗಿ ತಂತಂಮ ಪ್ರಾಣದಾಯುಷ್ಯಂಬರಂ ಸುಖಮನುಂಡು ಪೆರವನೋಡಿಯುಂಬಳದು ಕಾಲಾಂತರ ದೊಳುವೊಂದು ಭಾದೆಯಿಲ್ಲದೆ ಪರಮಾತ್ಮಸ್ವರೂಪಮಂ ನೆನೆಉತ್ತಂ ಜಘನ್ಯ ಮಧ್ಯಮೋತ್ತಮ ಸಮಾಧಿಯೋಳ್ಕೊಡಿ ಪೂವಿನೊಳಗಣ ಕಂಪು ಪೊಱಮಡುವಂತೆ ತದಾತ್ಮಂ ಪೊಱಮಟ್ಟುಪೋಗಿ ಸ್ವರ್ಗ್ಗಾದಿ ಸುಖಮಮನುಭವಿಸಿ ತದನಂತರದೊಳು ಸರ್ವಜ್ಞ ಪದವಿಯೊಳ್ಕೂಡಿಹರುಮಿಂತುವೀ ನೋಂಪಿಯ ನೋಂತವರ್ಗ್ಗಂ ನೋನಿಸಿದವರ್ಗ್ಗಂ ಮಂಗಳ ಮಹಾ ಶ್ರೀ