ಕರ್ಮಾಷ್ಟ ವಿನಿರ್ಮುಕ್ತಂ
ಮೋಕ್ಷ ಲಕ್ಷ್ಮೀ ನಿಕೇತನಂ
|
ಸಮ್ಯಕ್ತ್ವಾದಿ ಗುಣೋಪೇತಂ
ಸಿದ್ಧ ಚಕ್ರ ನಮಾಮ್ಯಹಂ ||

          ಕರ್ಮ್ಮಾಷ್ಟಕ ವಿನಿರ್ಮ್ಮುಕ್ತಂ ಮೋಕ್ಷಲಕ್ಷ್ಮೀ ನಿಕೇತನಂ
ಸಮ್ಯಕ್ತ್ವಾದಿ ಗುಣೇಪೇತಂ ಸಿದ್ಧಚಕ್ರಂ ನಾಮನ್ಯಹಂ
||

ಯೆಂದಿಷ್ಟ ದೇವತಾ ನಮಸ್ಕಾರಮಂ ಮಾಡಿ ಸಿದ್ಧ ಚಕ್ರದ ನೋಂಪಿಯನಾರು ನೋಂತರದಱ ವಿಧಾನಮೆಂತೆಂದೊಡೆ | ಈ ಜಂಬೂ ದ್ವೀಪದ ಭರತ ಕ್ಷೇತ್ರದವಂತೀ ವಿಷಯದೊಳು ಚಂಪಾಪುರಮೆಂಬುದು ಪಟ್ಟಣಮದನಾಳ್ವಂ ಅಖಿಳ ದಿಶಾ ಚಕ್ರವರ್ತ್ತಿಯಂ ಪರಚಕ್ರವರ್ತ್ತಿಂ ಅನೇಕ ಭೂಪಾಲ ಮಕುಟ ಮಣಿ ಗಣ ರಾಗ ರಂಜಿತ ಚಾರು ಚರಣಾರವಿಂದನುಂ ಹರಿವಂಶಾಂಬರ ದಿವಾಕರನು ಮನುಕುಲ ಚರಿತನುಂ ಉಭಯ ಕುಲ ಶುದ್ಧನು ಸದ್ಧರ್ಮ್ಮ ದೀಪಕನುಂ ಜಗಜ್ಜನ ಚೂಡಾಮಣಿಯುಂ ಜೈನಧರ್ಮ್ಮ ರಕ್ಷಾಮಣಿಯುಮ್ | ಅಭಿನವ ಕಾಮದೇವನುಂ | ಅರವಿಂದ ಮಹಾರಾಜನೆಂಬಂಗಂ ವಿಜಯಾವತಿ ಮಹಾದೇವಿಗಂ ಪುಟ್ಟಿದ ಶ್ರೀಪಾಲ ಮಂಡಲೇಶ್ವರಂಗೆ ಆತನರಸಿ ಸಕಲ ಶಾಸ್ತ್ರಂಗಳುಂ ಧರ್ಮ್ಮ ಪುರಾಣಂಗಳುಂ ಅಷ್ಟಮಹಾನಿಮಿತ್ತಂಗಳು ಮೊದಲಾದ ಸಕಲ ಶಾಸ್ತ್ರಂಗಳೊಳು ಪ್ರವೀಣೆಯಪ್ಪ ಮದನಾವಳಿ ಮಹಾದೇವಿ ವೆರಸು ಯಿಪ್ಪತ್ತ ನಾಲ್ಕು ಸಾವಿರ ಅರಸಿಯರುಂ ಯೆಂಟು ಸಾವಿರ ಮಕುಟ ಬದ್ಧರುಂ ಯಿಪ್ಪತ್ತೊಂದು ಲಕ್ಷ ಭದ್ರಹಸ್ತಿಯುಂ | ನಾಲ್ಕು ಕೋಟಿಯುಮಯ್ವತ್ತು ಲಕ್ಷ ಜಾತ್ಯಶ್ವಮುಂ | ನಾಲ್ವತ್ತೆಂಟು ಕೋಟಿ ಪದಾತಿಗಳ್ಕೂಡಿದ ಸಕಲ ಸಾಮ್ರಾಜ್ಯ ಶ್ರೇಯನನುಭವಿಸುತ್ತಮಿರಲೊಂದು ದಿವಸಂ | ಆಸ್ಥಾನ ಮಂಟಪದೊಳು ಮಣಿಮಯ ಸಿಂಹಾಸನದೊಳೊಡ್ಡೋಲಗಂಗೊಟ್ಟಿರ್ಪ್ಪ ಸಮಯದೊಳು ವನಪಾಲಕಂ ಅನೇಕ ಪುಷ್ಪ ಫಲಂಗಳಂ ತಂದು ಕಾಣಿಕೆಯನಿತ್ತು ಶ್ರೀಪಾಲ ಮಹಾರಾಜಂಗಿಂತೆಂದು ಬಿಂನಪಂಗೆಯ್ದನೆಲೆ ಸ್ವಾಮಿ ನಿಂಮ ಪುರದ ಬಹಿರುದ್ಯಾನವನದೊಳು ಸ್ಫಟಿಕ ಶಿಲಾತಳದ ಮೇಲೆ ಪಲ್ಯಂಯಕಾಸನದೊಳಿರ್ದು ಪಂಥಾಚಾರ ನಿಯಮಮಂಗೆಯ್ವತಿರ್ದ್ದ ಜ್ಞಾನ ಸಂಪಂನರಪ್ಪ ಸಹಸ್ರ ಕೀರ್ತ್ತಿ ಭಟ್ಟಾರಕರು ಬಿಜಯಂಗೆಯ್ದಿರ್ದ್ದರೆಂದು ಪೇಳ್ದಾತಂಗೆ ತುಪ್ಪಿದಾನಮಂ ಕೊಟ್ಟಾನಂದ ಭೇರಿಯಂ ಪೊಯ್ಸಿ ಮದನಾವಳಿ ರತ್ನಾವಳಿ ವಿಶಾಲನೇತ್ರೆ ಕಪ್ಪೂರಮಂಜರಿ ಮೊದಲಾದರಸಿಯರಂ ಕೂಡಿ ಕೊಂಡು ವಿದಗ್ಧ ಮುಗ್ಧ ಪುಂಣ್ಯಾಂಗ ಸಂಕುಲಮಂ ಪರಿಜನ ಪುರಜನಂಬೆರಸುದ್ಯಾನವನಕ್ಕೆ ಬಂದಾ ಮುನೀಂದ್ರರಂ ತ್ರಿಪ್ರದಕ್ಷಿಣಂಗೈದರ್ಚ್ಚನೆಯಂ ಮಾಡಿ ಪೊಡವಟ್ಟು ಕುಳ್ಳಿರ್ದ್ದು ಕೈಗಳಂ ಮುಗಿದು ಧರ್ಮ್ಮಾಧರ್ಮ್ಮ ಫಲಂಗಳಂ ಸವಿಸ್ತರಂದಿಂ ಕೇಳ್ದು ಮತ್ತಂ ಶ್ರೀಪಾಲನಿಂತೆಂದು ಬೆಸಗೊಂಡನೆನಗೆ ಪಲಂಬರು ಸ್ತ್ರೀಯರೊಳು ಮದನಾವಳಿಯ ಮೇಲೆ ಅತ್ಯಂತ ಸ್ನೇಹಮಾದ ಕಾರಣಮುಮಾಮೀ ಭವದೊಳು ರಾಜ್ಯ ಭ್ರಷ್ಟನಾದುದಂ ಕುಷ್ಟವ್ಯಾಧಿಯಾದುದುಂ ಸಮುದ್ರದೊಳಗೆ ಬೀಳ್ದುದುಂ ಪಲಂಬರ ನಡುವೆ ಪೊಲೆಯನೆನಿಸಿಕೊಂಡುದುಂ ಯೆಂದೀ ತೆಱನೆಲ್ಲಮನೆಗಱೆವಂತು ಬೆಸಸೂದೆಂದವರವಧಿಲೋಭನರಪ್ಪ ಮುನೀಂದ್ರರಿಂತೆಂದರು | ಮುಂನ ಹಿಂದಣ ಭವದೊಳುಮೀ ಚಂಪಾಪುರಮನಾಳ್ವ ಕಾಲದೊಳು ನಿನಗೆ ಪದ್ಮರಥನೆಂಬ ಪೆಸರು | ನಿಂನ ಪಟ್ಟದರಸಿ ಪದ್ಮಾವತಿಯೆಂಬಳಂತವರಿರ್ವ್ವರುಂ ಯಿಷ್ಟ ಸುಖ ಕಾಮ ಭೋಗಂಗಳನನುಭವಿಸುತ್ತಮಿರಲು ನಿನಗೆ ದರ್ಶನ ಮೋಹನೀಯ ಕರ್ಮ್ಮೋದಯದಿಂದ ವಿಪರೀತ ಪರಿಣಾಮದೊಳು ವರ್ತ್ತಿಸುತ್ತಮಿರಲು ನಿಂನರಸಿ ಪದ್ಮಾವತಿ ಪಂಚವಿಂಶತಿ ಮಲರಹಿತಮಪ್ಪ ಸಮ್ಯಕ್ತ್ವಮಂ ಕೈಕೊಂಡು ಚಾತುರ್ವ್ವರ್ಣ್ನಕ್ಕೆ ಚತುರ್ವ್ವಿಧ ದಾನದಿಂ ತೃಪ್ತಿ ಮಾಡುತ್ತಮಿರಲು ಮತ್ತಂ ನೀನೊಂದು ದಿವಸಂ ವೈಹಾಳಿಗೆ ಪೋಗುತಂ ನಡುವೆ ವೊಂದೆಡೆಯೊಳು ದಿವ್ಯ ತಪೋಧನರುಂ ಶ್ವೇತವರ್ನ್ನರುಂ ಪೀತವರ್ನ್ನರುಂ ಕೃಷ್ಣವರ್ನ್ನರುಂಮಪ್ಪ ಮೂವರು ಮುನೀಶ್ವರರು ನಿನ್ನಿದಿರಂ ಬರುತ್ತಿರೆ ನೀನುಮವರಂ ಕಂಡು ವೊರ್ವ್ವಂ ತೊಂನರೆಂದು ಮತ್ತೊರ್ವ್ವಂ ಪೊಲೆಯರೆಂದು ಮತ್ತೊರ್ವ್ವರಂ ಕಾಲುವೆಯೊಳು ನೂಂಕಿ ಪಿರಭವಿಸಿ ನೀನುಂ ನಿಂನಾಳುಮಪಹಾಸ್ಯಂಗೆಯ್ದು ಪುರಮಂ ಪೊಗಲೀಯದೆ ಪೊಱಮಡಿಸಿ ಕಳಉದುಮಾಮಾರ್ತ್ತೆಯಂ ನಿಂನರಸಿ ಪದ್ಮಾವತಿ ಕೇಳ್ದು ತಂನ ಮನದೊಳಿಂತೆಂದು ಬಗೆದಳು ಯೀತನು ಮಿಥ್ಯಾ ದೃಷ್ಟಿಯುಮಭವ್ಯನುಮಪ್ಪೀತನೊಡನೆ ಪುದುವಾಳ್ವುದು ಭಯ ಭವ ಹಾನಿಯಕ್ಕುಮೆಂದು ಚಿಂತಾಕ್ರಾಂತೆಯಾಗಿರ್ದ್ದಳಂನೆಗ ವೈಹಾಳಿಯಂ ಪೋಗಿ ಬಂದರಮನೆಯಂ ಪೊಕ್ಕು ನಿಂನರಸಿಯ ಮನೆಗೆ ಬಂದು ಸಾರೆ ಕುಳ್ಳಿರೆ ಅರಸಿ ಮುಂನಿನ ವಿನಯ ಸನ್ಮಾನಂಗಳಂ ಮಾಡದೆ ಮೋನಂಗೊಂಡಿರ್ದ್ದಳಂ ಕಂಡು ನೀನು ಮಹಿತನಾಗಿ ಭಯಗೊಂಡಿರಲಾಱದೆಂನ ಮಾಡಿದ ತಪ್ಪುಳ್ಳಡೆ ಪೇಳಿಮೆಂದು ಪಿರಿದುಂ ಪ್ರಾರ್ತ್ಥಿಸಿದೊಡೆಲೆ ಪಾಪಕರ್ಮ್ಮ ಪಂಚ ಮಹಾಪಾತಕ ನಿನಗೇನಂ ಪೇಳ್ವೆನಾವೀ ಪಟ್ಟಣದೊಳಿರ್ದ್ದ ಕಾರಣದಿಂದಿಲ್ಲಿಗೆ ಋಷಿಯೆರ್ಕ್ಕಳು ಬರ್ಪ್ಪರಂ ನಿಂಮ ಪಟ್ಟಣಮಂ ಪುಗಲೀಯದೆ ಪರಿಭವಿಸಿ ಕಳೆದ ನಿಂಮೊಡನೆ ಪುದುವಾಳ್ವುದೆನಗೆ ಯಿಹಪರಂಗಳೆರಡುಂ ಕೆಡಗುಮೆಂದು ಪೇಳ್ದೊಡೆಂನ ಮಾಡಿದ ತಪ್ಪುಂಟದಕ್ಕೆ ಕ್ಷಮಿಯಿಸೂದೆಂದು ಬೇಡಿಕೊಂಡೆನಗೆ ನಿಂನ ಮುಂದಿಟ್ಟು ಶ್ರಾವಕ ವ್ರತಂಗಳಂ ಕೊಡಿಸೆಂದು ಪೇಳಲಾಗಳು ನೀನೆಗುದತ್ತ ಭಟ್ಟಾರಕರ ಸಮೀಪಕ್ಕೆ ಹೋಗಿ ವ್ರತಂಗಳಂ ಕೈಕೊಂಡು ನಡಸುತ್ತಮಿರೆ ಮತ್ತೊಂದು ದಿನಂ | ನೀಂ ಮುಂನಿನಂತೆ ವೈಹಾಳಿಯಂ ಪೊಗುತ್ತಂ ಸರೋವರದ ಶಿಲಾತಳದ ಮೇಲೆ ಕಾಯೋತ್ಸರ್ಗ್ಗಮಿರ್ದ್ದ ಪಿಹಿತಾಸ್ರವ ಭಟ್ಟಾರಕರಂ ಕಂಡೆತ್ತ ವೋದಡವನನೆ ಕಾಣ್ಬೆನೆಂದು ಕಂಡು ಮುಳಿದವರನೆತ್ತಿಕೊಂಡು ಪೋಗಿ ಸರೋವರದೊಳರ್ದ್ದಿತಂ ಅರಸಿಯ ಭಯದಿಂದೆನಗೆ ಪ್ರಮಾದಮೆಂದಾ ಋಷಿಯರಂ ಮುಂನಿನ ಯೋಗ ಪೀಠದೊಳಿರಿಸಿಪೋದಡಾ ವಾರ್ತ್ತೆಯಂ ಪದ್ಮಾವತಿ ಕೇಳ್ದು ಪಾಪಕರ್ಮ್ಮ ವ್ರಂತಗಳಂ ಕೈಕೊಂಡು ಋಷಿಯರ್ಗ್ಗೆ ಉಪಸರ್ಗ್ಗಂ ಮಾಡಿದನೆಂದನೆಂದುತಂನ ಮನದೊಳೀತನೊದನೆ ಪುದುವಾಳ್ಪುದಱೆಂದಂ | ದೀಕ್ಷೆಯಂ ಕೈಕೊಂಡುಪವಾಸಮಂ ಸಾಧಿಸುವೆನೆಂದು ತಂನ ಮನೆಯಂ ಪೊಱಮಟ್ಟು ಋಷಿಯರಿರ್ದ್ದ ಪ್ರದೇಶಕ್ಕೆ ಬಂದವರಂ ವಂದಿಸಿ ಉಪಸರ್ಗ್ಗಂ ಪಿಂಗಿತ್ತು ಕಯ್ಯೆತ್ತಿ ಕೊಳ್ಳಿಯೆನಲವವರ್ಕ್ಕೈಯೆತ್ತಿಕೊಂಡು ಕುಳ್ಳಿರ್ದ್ದು ಪದ್ಮಾವತಿಯಂ ಪರಸಿದರಾಕೆಯಿಂತೆಂದಳೀದುರಾತ್ಮ ನಿಮಗೀ ಉಪಸರ್ಗ್ಗಂ ಮಾಡಿದುದಕ್ಕೆ ಕ್ಷಮಿಯಿಸ ವುದೆನಗೆ ದೀಕ್ಷೆಯಂ ಕೊಡುವುದೆಂಬಷ್ಟಱೊಳಗೆ ವೈಹಾಳಿಯಂ ಬಂದರಸಿಯಂ ಕಾಣದತ್ತೆಂ ಪೋದಳೆಂದು ಕಾಸಿನವರಂ ಬೆಸಗೊಂಡೊಡವರ್ನ್ನಿಂನೊಡನೆ ಮುನಿದು ಋಷಿಯರ ಸಮೀಪಕ್ಕೆ ಪೋದರೆನೆ ಅರಸಂ ಭಯಸ್ತನಾಗಿ ಪರಿತಂದು ಋಷಿಯರ ಸಮೀಪದಲ್ಲಿ ಕುಳ್ಳಿರ್ದ್ದರಸಿಯಂ ಕಂಡೆನಂ ಜ್ಞಾನಚೇಷ್ಠೆಯಂ ಮಾಡಿದ ತಪ್ಪುಂಟು ಅದಕ್ಕೆ ಮೂರು ತಪ್ಪು ಆಱುಕ್ಷಮೆಯೆಂದು ಪ್ರಾರ್ತ್ಥಿಸಿ ಯೆಂನ ಮಾಡಿದ ಪಾಪಮಂ ಕರ್ಚ್ಛಿ ಕಳೆವಂತು ಪ್ರಾಯಶ್ವಿತ್ತಮಂ ಕೈಕೊಳ್ವೆನೆಂದು ಗುರುಗಳ ಶ್ರೀಪಾದಂಗಳಿಗೆಱಗಿ ಪೊಡೆವಟ್ಟು ಯೆಂನ ಮಾಡಿದ ಪಾಪಮಂ ಕರ್ಚ್ಛಿ ಕಳೆಯಲ್ಕೆ ತಕ್ಕ ಪ್ರಾಯಶ್ವಿತ್ತಮಂ ಕುಡುವುದೆಂದರವರ್ನಿನಗೆ ಸರ್ವ್ವ ದೋಷ ಪರಿಹಾರಾರ್ತ್ಥಮಾಗಿ ಸಿದ್ಧಚಕ್ರದ ನೋಂಪಿಯಂ ಕೈಕೊಳ್ಳೆಂದೊದಾ ನೋಂಪಿಯ ವಿಧಾನಮಂ ಪೇಳೆ ಕೈಕೊಂಡಿರ್ವ್ವರುಂ ಯಥಾಕ್ರಮದಿಂ ನೋಂತುಜ್ಜವಣೆಯಂ ಮಾಡಿ ಕಡೆಯೊಳು ಸಮಾಧಿ ಮರಣದಿಂ ಮುಡುಪಿ ಸೌಧರ್ಮ್ಮ ಕಲ್ಪದೊಳ್ಮಹರ್ದ್ದಿಕ ದೇವನಾಗಿ ಪುಟ್ಟಿದೆ ನಿಂನರಸಿಯುಂ ನಿನಗೆ ವಲ್ಲಭೆಯಾದಳು ನೀನು ದೇವಲೋಕದ ಸುಖಮನನುಭವಿಸಿ ಬಂದಿಲ್ಲಿ ಚಂಪಾಪುರಮನಾಳ್ವ ವೀರ ಧವಲ ಮಹಾರಾಜಂಗಂ ಜಯಾವತಿ ಮಹಾರಾಜದೇವಿಗಂ ಶ್ರೀಪಾಲನೆಂಬ ಮಗನಾಗಿ ಪುಟ್ಟಿದೆಯೆನೆ | ಮುಂನಿನ ಪದ್ಮಾವತಿಯು ದೇವಲೋಕದಿಂ ಬಂದುಜ್ಜೆನಿಯಾನಳ್ವ ವಸುಪಾಲ ಮಹಾರಾಜಂಗಂ ವಸುಮತಿ ಮಹಾದೇವಿಗಂ ಬಂದುಜ್ಜೆನಿಯನಾಳ್ವ ವಸುಪಾಲ ಮಹಾರಾಜಂಗಂ ವಸುಮತಿ ಮಹಾದೇವಿಗಂ ಮದನಾವಳಿಯಾಗಿ ಪುಟ್ಟಿ ನಿನಗೀಗ ಪಟ್ಟದರಸಿಯಾದಳು ಮೂಱು ಭವದೊಳು ಬಂದ ಸ್ನೇಹ ಕಾರಣಂದಿ ಯೀಗಳೂ ನಿನಗೆ ಅತ್ಯಂತ ಸ್ನೇಹಮಾದುದೆಂದರಿವರ ಭವ ಸಂಬಂಧಮಂ ತಿಳಿಪಿ ಮತ್ತಂ | ನೀ ಮುಂನ ಭವದೊಳು ವ್ರತಮಂ ಕೈಕೊಂಡು ಬಿಟ್ಟು | ನೀಂ ಹಿರಿಯರಂ ಕೈಸಾರ್ದ್ಧ ಸಕಲ ಸಾಮ್ರಾಜ್ಯಮಂ ನಿಂನ ದಾಯಾದ್ಯನೆಳದುಕೊಂಡು ನಿಂನನೆಚ್ಚೆಟ್ಟಿದಂ ಮತ್ತಂ | ನೀಂ ಶ್ವೇತ ರುಷುಯರಂ ಕಂಡು ತೊಂನನೆಂದು ನುಡಿದ ಫಲದಿಂ ನೀನೀ ಭವದೊಳು ಕುಷ್ಟವ್ಯಾಧಿ ಮೊದಲಾದ ಹಲವು ವ್ಯಾಧಿಗಳಾದವು ಮತ್ತಂ | ನೀನಂದು ಋಷಿಯರ ಸರೋವರದೊಳರ್ದ್ದಿದ ಫಲದಿಂ ನೀನೀ ಭವದೊಳು ಸಮುದ್ರದೊಳು ಬಿರ್ದ್ದೆ ಮತ್ತಂ | ನೀನಂದು ಕೃಷ್ಣವರ್ನ್ನದ ರುಷಿಯರಂ ಕಂಡು ಮಾದೆಗನೆಂದ ಪಾಪದ ಫಲದಿಂ ನೀನೀ ಭವದೊಳು ಪಲಂಬರ ನಡುವೆ ಪೊಲೆಯನೆನಿಸಿಕೊಂದೆಯಂದಯ್ದು ಪ್ರಶ್ನೆಗಳ ಸ್ವರೂಪಮಿಂತುಟೆಂದು ಪೇಳೆ ಕೇಳ್ದು ಸಂಸಾರ ಸ್ವರೂಪಮನಱಿದು ಮತ್ತಂ ಗುರುಗಳನಿಂತೆಂದು ಬೆಸಗೊಂಡೆನೆನಗೀ ಸಿದ್ಧ ಚಕ್ರದ ನೋಂಪಿಯ ವಿಧಾನಮಂ ಬೆಸಸಿಮೆಂದೊಡೆ ಅವರಿಂತೆಂದು ಪೇಳ್ದರು | ಮೂರು ನಂದೀಶ್ವರದೊಳು ಆವುದಾನೊಂದು ನಂದೀಶ್ವರದೊಳು ನೋಂಪಿಯ ಕೈಕೊಂಡು ಸಿದ್ಧ ಚಕ್ರಕ್ಕೆ ಅಭಿಷೇಕಾಷ್ಟ ವಿಧಾರ್ಚ್ಚನೆಯುಂ ಮಾಳ್ಪುದು | ಯೀ ನೋಂಪಿಯಂ ನೋಂಪವರುಮೀ ಯಂತ್ರಮನಂದಂದಿಗೆ ಉದ್ದರಿಸಿ ಅರ್ಚ್ಚಿಸುವುದು ಅಷ್ಟಾಹ್ನೀಕದೊಳು ಶುಚಿರ್ಭ್ಭೂತರಾಗಿ ಅಧಃಶಯನ ಬ್ರಹ್ಮಚರ್ಯ್ಯ ದ್ವಿಗರತದೇಶವ್ರತ ಮೊದಲಾದ ವ್ರತಂಗಳಂ ಕೈಕೊಂಡು ಅಷ್ಟಮಿ ಚತುರ್ದ್ದಸಿಯೊಳುಪವಾಸಮಂ ಮಾಳುದು ಮುಕ್ಕ ದಿನದೊಳು ಯೇಕರಾಣದಿಂ ಬ್ರಹ್ಮಚರ್ಯ್ಯ ಸಮೇತಂ ಯೇಕಭುಕ್ತಮಂ ಮಾಳ್ಪುದು ಅದಕ್ಕಾಱದವರು ಕಂಚಿ ಕಾಹಾರದಿಂದೇಕ ಭುಕ್ತಮಂ ಮಾಳ್ಪುದು | ಯೀ ಕ್ರಮದಿಂ | ಮೂರು ನಂದೀಶ್ವರಂ ತಪ್ಪದೆ ಮೂಱು ವರುಷಮಂ ನೋಂತು ಕಡೆಯೊಳುಜ್ಜವಣೆಯಂ ಮಾಳ್ಪುದು ಮೇಣು ಮೊದಲುಜ್ಜವಣೆಯಂ ಮಾಡಿ ತೊಡಗೂದು | ಮುಂನಿ ಕ್ರಮದಿಂದಷ್ಟ ವಿಧಾರ್ಚ್ಚನೆಯಂ ಮಾಡಿ ಕಡೆಯೊಳು ಪಂಚ ಪರಮೇಷ್ಠಿಗಳ ಪ್ರತುಮೆಯಂ ಮಾಡಿಸಿ ಶುಭಮೂಹೂರ್ತ್ತದೊಳು ಪ್ರತಿಷ್ಠಾ ವಿಧಾನಂ ಗೆಯ್ದು ಪಂಚಾಮೃತಂಗಳಿಂದಭೆಷೇಕಮಂ ಮಾಡಿಸಿ ಮುಂನಿನ ಕ್ರಮದಿಂದಷ್ಟ ವಿಧಾರ್ಚ್ಚನೆಯಂ ಮಾಡಿ ಕಡೆಯೊಳು ಪಂಚ ಪರಮೇಷ್ಠಿಗಳ ಸ್ವರೂಪದಿಂ ದೇವರು ಜೈನ ಬ್ರಾಹ್ಮಣ ಸ್ತ್ರೀ ಪುರುಷರ್ಗ್ಗೆ ಸ್ನಾನ ಭೋಜನ ವಸ್ತ್ರಾಭರಣ ದಕ್ಷಿಣೆ ತಾಂಬೂಲ ಗಂಧಾಕ್ಷತೆಯುಂ ಪುರಸ್ಸರ ಮಿಥುನಮನಿಕ್ಕೂದು ಅಷ್ಟ ವಿಧಾರ್ಚ್ಚನೆಗೆ ತಕ್ಕ ಗ್ರಾಮದೇಶಂಗಳಂ ತಂಮಶಕ್ತ್ಯಾನುಸಾರದಿಂ ಶಾಸನ ಬರಸಿ ಕೊಡುವುದು | ಮತ್ತಂ ಅಯ್ವತ್ತು ತಂಡ ಋಷಿಯರ್ಗ್ಗೆ ಶ್ರುತಸ್ವಸ್ತ್ರ ಸಹಿತಂ ಶ್ರುತ ಪ್ಪೂಜೆಯಂ ಮಾಳ್ಪುದು ಮತ್ತಮನಿಬರಜ್ಜಿಯರ್ಗ್ಗೆ ವಸ್ತ್ರಮನುಡ ಕೊಡುಉದು ಚಾತುರ್ವ್ವರ್ಣಕ್ಕಾಝಾರ ದಾನಮಂ ಮಾಳ್ಪುದು | ದೀನಾನಾಥ ಜನಮ್ಗಳ್ಗೆ ಶಕ್ತ್ಯಾನುಸಾರದಿಂ ವಸ್ತುವನಿತ್ತು ಮಂನಿಸೂದುಮೀ ನೋಂಪಿಯ ಕ್ರಮಮಿಂತುಟೆಂದು ಪೇಳೆ ಕೇಳ್ದು ತಾನುಂ ತಂನರಸಿಯುಮೀನೋಂಪಿಯಂ ಕೈಕೊಂಡು ಯಥಾ ಕ್ರಮದಿಂ ನೋಂತುಜ್ಜವಣೆಯಂ ಮಾಡಿ ಫಲೌ ಕಾಲಂ ರಾಜ್ಯಂಗೆಯ್ದು ಪಲಂಬರ್ಮ್ಮಕ್ಕಳಂ ಪಡೆದು ವೊಂದು ದಿವಸಂ ಸರ್ವ್ವಾಭರಣ ಭೂಷಿತನಾಗಿ ಕಂನಡಿಯಂ ನೋಡುವಲ್ಲಿ ತಂನ ಕದಪಿನೊಳು ಪಲವು ನರೆಗಳಂ ಕಂಡು ವೈರಾಗ್ಯಂ ಪುಟ್ಟಿ ಸಂಸಾರ ಶರೀರ ಭೋಗ ನಿರ್ವ್ವೇಗ ಪಾರಾಯಣನಾಗಿ ತಂನರಸಿ ಮದನಾವಳಿಯ ಮಗ ಭೂಪಾಲಂಗೆ ಸಕಲ ರಾಜ್ಯಮಂ ಕೊಟ್ಟು ಪಲಂಬರರುಮಕ್ಕಳ್ವೆರಸು ಜೀನದೀಕ್ಷೆಯಂ ಮೈಕೊಂಡುಗ್ರೋಗ್ರ ತಪಶ್ಚರಣಂಗೆಯ್ದು ಸಮಾಧಿ ಕಾಲದೊಳು ಪ್ರಾಯೋಪಗಮನದಿಂ ಮುಡಿಪಿ ಸರ್ವ್ವಾರ್ತ್ಥ ಸಿದ್ಧಿಯೊಳು ಮುವ್ವತ್ತು ಮೂರು ಸಾಗರೋಪಮಾಯುಷ್ಯಮನೊಡೆಯನಾಗಿ ದಿವ್ಯ ಸುಖ ಸಮುದ್ರದೊಳೋಲಾಡುತ್ತಿರ್ದ್ದಂ | ಮದನಾವಳಿ ನೋಂತು ತಂತಮ್ಮ ಸ್ವರ್ಗ್ಗ ಸುಖಮಂ ಪಡೆದಳು | ಮತ್ತೆಲ್ಲಾ ಸ್ತ್ರೀಯರುಂ ಪುರುಷರುಮೀ ನೋಂಪಿಯ ನೋಂತು ಯಿಷ್ಟಾರ್ತ್ಥ ಫಲಂಗಳಂ ಪಡೆದರೆಂದು ಭಾವಾರ್ತ್ಥಂ ಸಿದ್ಧ ಚಕ್ರ ಯಂತ್ರಾನುದ್ಧರಿಸುವ ಕ್ರಮಮಂ ಪೇಳ್ವೆನದೆಂತೆದೊಡೆ || ಊರ್ದ್ವಾಧೋರಯುತಂಸ ಬಿಂದು ಸಪರಂ ಬ್ರಹ್ಮಸ್ವರಾವೇಷ್ಟಿತಂ | ವರ್ಗ್ಗಾಪೂರಿತದಿಗ್ಗತಾಂಬುಜದಲಂ ತತ್ಸಂಧಿ ತತ್ವಾನ್ವಿತಂ | ಅಂತಃ ಪತ್ರತಟೇಷ್ಟನಾಹತಯುತಂ ಹ್ರೀಂಕಾರ ಸಂವೇಷ್ಟಿತಂ | ದೇವಂ ಧ್ಯಾಯತಿ ಯಃ ಸಮುಕ್ತಿ ಸುಭಗೋ ವೈರೀಭಕಂಠೀರವಃ || ಯೀ ಪದ್ಯದರ್ತ್ಥಮೆಂತೆಂದೊಡೆ ಅರ್ಹಮೆಂಬೀ ಅಕ್ಷರದ ನಡುವೆ ದೇವದತ್ತ ನಾಮಮಂ ಬರದು ಮತ್ತದಂ ಓಂಕಾರದಿಂ ವೇಷ್ಟಿಸಿ ಆಧಾರವಳಯಮಂ ಕೊಟ್ಟು ಅಷ್ಟ ದಳ ಪತ್ರಮಂ ಬರೆದು ಆ ಪತ್ರದೊಳು ಪೂರ್ವ್ವಾದಿ ಕ್ರಮದಿಂ ಆ ಈ ಉ ಓ ಯೆಂದು ಪ್ರಥಮ ಪತ್ರದೊಳು ಬರೆದು ಪತ್ರಾಗ್ರಂಗಳೊಳು ಅನಾಹತಮಂ ಬರೆದು ಅನಂತರಂ ಹ್ರೀಂಕಾರದಿಂ ತ್ರಿಧಾವೇಷ್ಟಿತಂ ಮಾಡಿ ಕ್ರೋಂಕಾರ ನಿರುದ್ಧಂ ಮಾಡಿ ಅಲ್ಲಿಂದಂ ಮೇಲೆ ಭೂಮಂಡಲಂ ಬರದು ಸಿದ್ಧಚಕ್ರದಯಂತ್ರದ ವಿಧಾನ ಕ್ರಮ ಮೀ ಯಂತ್ರಮಂ ತಾಂಬ್ರಪತ್ರದೊಳಾನುಂ ಕಂಚಿನ ಹರಿವಾಣದೊಳಾನುಂ ಪಲಗೆಯೊಳಾನುಂ ಶ್ರೀಗಂಧ ಕುಂಕುಮ ಕರ್ಪ್ಪೂರ ದೇವಧಾರು ಅಗಿಲು ರಕ್ತಚಂದನ ಜಾಯಿಫಳ ಕೋಷ್ಟ ಜಟಾಮಾಂಸಿ ಕರ್ಕ್ಕೋಲ ಮೊದಲಾದ ಸುಹಂಧ ದ್ರವ್ಯಂಗಳಂ ತೇದು ಪೂಸಿ ಸುವರ್ನ್ನಬೆಳ್ಳಿ ದರ್ಭೆ ಮೇಣು ಶಲಾಕಯಿಂ ವಿಧಿಯುಕ್ತಮಾಗಿ ಬರದು ಶುದ್ಧಮಪ್ಪೆಡೆಯೊಳು ಭೂಮ್ಯಪತಿತ ಗೋಮಯದೊಳು ಮಾರ್ಜ್ಜನಮಂ ಮಾಡಿ ಪೀಠಮಂ ತರಿಸಿ ಅದಱ ಮೇಲೆ ಪಂಚ ಪರಮೇಷ್ಠಿಗಳ ಪ್ರತುಮೆಯಂ ಸ್ಥಾಪ್ಯಂ ಮಾಡಿ ಪಂಚಾಮೃತಭಿಷೇಕಂ ಮಾಡಿ ತದನಂತರಂ ಬರದ ಯಂತ್ರಮಂ ದೇವರ ಮುಂದೆ ಸ್ಥಾಪ್ಯಂ ಮಾಡಿ | ಓಂ ಹ್ರಾಂ ಹ್ರೀಂ ಹ್ರೂಂ ಹ್ರೌಂ ಹ್ರ ಅ ಸಿ ಆ ಉ ಸಾ ಸಿದ್ಧ ಚಕ್ರಾಧಿಪತೆಯೇ ಏಹಿ = ಸಂಪೌಷಟುಯೆಂದು ಆಹ್ವಾನ ಸ್ಥಾಪನೆ ಸಂನಿಧಿ ಕರಣ ಪುರಸ್ಸರಂ ಅಷ್ಟ ವಿಧಾರ್ಚ್ಚನೆಯಂ ಹಮ್ನೆರಡು ಬಾರಿ ಪ್ರತ್ಯೇಕಂ ಮಾಳ್ಪುದು ಅನಂತರಂ ಮಂತ್ರ ಪುಷ್ಪಮನಿಕ್ಕೂದು || ಓಂ ಹ್ರಾಂ ಹ್ರೀಂ ಹ್ರೂಂ ಹ್ರೌಂ ಹ್ರ ಅ ಸಿ ಆ ಉ ಸಾ ಅನಾಹುತ ವಿದ್ಯಾಯೈ ಣಮೋ ಅರ್ಹಂತಾಣಂ ಹ್ರಿಂ ನಮಃ ಎಂಬ ಮಂತ್ರದಿಂ ಜ್ಞಾನಮುದ್ರೆಯಿಂ ಸಹವಾಗಿ ನೂಱೆಂಟು ತೆಱದ ಜಪದಿಂ ನೂಱೆಂಟು ಪುಷ್ಪಮನಿಕ್ಕೂದು | ಜಲ ಗಂಧಾಕ್ಷತೆ ಪಂನೆಱಡು ತೆಱದ ಪುಷ್ಪಮನಿತ್ತು ಭಕ್ಷ ನೈವೇದ್ಯದಿಂ ದೀಪ ಧೂಪ ಫಲದಿಂದೊಂದೊಂದಕ್ಕೆ ಪಂನೆಱಡು ತೆಱದ ಅಷ್ಟವಿಧಾರ್ಚ್ಚನಾ ದ್ರವ್ಯಂಗಳಂ ಅಂದಂದಿಂಗೆ ಪೊಸತಾಗಿ ತಂದರ್ಚ್ಚಿಸೂದು | ಅಷ್ಟ ವಿಧಾರ್ಚ್ಛನೆಯ ಕ್ರಮಮೆಂತೆಂದೊಡೆ ಸದ್ಧೃಷ್ಟಾ ಪ್ರತಿಬಂಧಕವ್ಯ ಪದಮೆ ಕೈವಲ್ಯಯಜ್ಯಂ ನಯಾಸ್ಯಾದ್ವಾದೋದಿತಯಾಸಮಸ್ತ ಸಂಯುಜಾಧ್ಯಾತ್ರೆ ದಯಾ ನಿರ್ವ್ವೃಂತಿಂ | ಜೆ ಹ್ರೀಂ ಮರುಹಮನಹತಾಕ್ಷರ ಪರಾಸ್ವೇಸಾರ್ಚ್ಛನಾಖ್ಯಾ ನಮಃ ಹತೈಃ ಸದೃಶ್ವಚ್ಛ ಯಂತ್ರಿ ಸಮಯಂ ಸದ್ರವ್ಯಮಾತ್ಮೇ ತರಜ್ಞಾನದ್ಞಾನ ಘನಂ ವಿಶುದ್ಧಮಚಲಂ ಕರ್ತೃತ್ವ ಭೋಕ್ತೃತ್ವವತ್ | ಜೆ ಹ್ರೀಂ ಮಹರ್ ಮನಾಹತಾಕ್ಷರ ಪರಸ್ಟೇಸಾರ್ಚ್ಚನಾಖ್ಯಾ ನಮಃ ಹತೈಃ ಸ್ತಕ್ಷಣ ಸಿಂಧು ಚಂದನ ರಸೈಃ ಶ್ರೀ ಸಿದ್ಧ ಚಕ್ರಂ ಯಜೆ || ಗಂಧಂ || ಸನ್ಮಾತ್ರಂ ಸದ್ರುಶ್ರೇತರಾತ್ಮವಿಷಯಂ ವಾಗ್ದೃಷ್ಟಿ ಭಿಶ್ಚಾಚಿರಾದ್ಞಾನನು ಕ್ರಮ ಬಾರಿಣಾಸಹ ಚರದ್ದಿಷ್ವಿಗ್ದದ್ದರ್ಶನಂ | ಜೆ ಹ್ರೀಂ ಮಹರ್ = ಹೂತೈರಕ್ಷಸುಖಾಕ್ಷತಾಕ್ಷತ ಚಯ್ಯೆ ಶ್ರೀ ಸಿದ್ಧಚಕ್ರಂ ಯೆಜೆ || ಅಕ್ಷತಾಂ ಕ್ಷಿಪ್ರಂ ವೀರ್ಯ್ಯ ಮವಾಪ್ತಮೇಕ ವಿಬುತಾಂಭೋಗೌಪಭೋಗ ಪ್ರಧಾಮಾಂಭಾಂಪ್ತತ್ತ ದನಂತದರ್ಶನ ಸುಖಜ್ಞಾ ನಾನ್ಯಾನು ಪ್ರಾಣಯತ್ ಜೆ ಹ್ರೀರ್ ಮ = ಪೂತೈ ದಿವ್ಯ ವಿನುದ್ರ ಜಾತಿ ಕುಸುಮೈ ಶ್ರೀ ಸಿದ್ಧ ಚಕ್ರಂ ಯಜೆ || ಪುಷ್ಪಂ || ಯಿಷ್ಟಾನಿಷ್ಟಯಥಾ ಸ್ವಗೋಚರಾ ಭರೈರಧ್ಯಾತ್ಮ ಮಕ್ಷ್ಮಿರ್ಮ್ಮನೋ ವಾರೆಣಾನುಭವ ಪ್ರಮಾನುಮನ ಸೋಜೈಲ್ಲಾ ಸಿ ಸೌಖ್ಯಾ ಸುಖಂ | ಜೆ ಹ್ರೀರ್ ಮ ಪೂತೈಶ್ಚಿ ತ್ರ ಸುಧಾಸು ಗರ್ಭ್ಯ ಚರುಭಿ ಶ್ರೀ ಸಿದ್ಧಚಕ್ರಂ ಯಜೆ | ಚರುಂ || ಜಿ ವತ್ವೇನ ನಿರುದ್ಧ ಜನ್ಮ ಮರಣೆ ಜ್ಞಾನೇನ ಸಂಭಾವಿನಾಭಾವ ಪ್ರಾಣಯಮೇ ನಜೀವಿತ ಸುಖದ್ರವೈ ಕ್ಷುತೇಷ್ಟ ಕ್ಷಯಂ | ಜೆ ಹ್ರೀಮ = ಪೌತೈರತ್ನಸಪತ್ನ ದೀಪ ನಿಕರೈ ಶ್ರೀ ಸಿದ್ಧ ಚಕ್ರಂಯೆ ಜೆ || ದೀಪ || ಶಿಷ್ಟಂ ಪುದ್ಗಲ ಪಾಕಿ ಕಮ್ಮನಿ ನಿಭಯೈ ಮೂರ್ತ್ತತ್ವಮಾಸಂ ಶ್ರೀತೈರ್ಯ್ಯ ತ್ಸಾಖಾವಿಕ ಸುದ್ಧ ಚಿತ್ಫರಿಣಾತೌತನ್ಮಾಭ್ಯುತಂ ತಕ್ಷಯ | ಓಂ ಹ್ರೀಂ ಮ = ಪೂತೈರುತ್ತಮ ಧೂಪ ದೂಮ ಪಟಲೈ ಶ್ರೀ ಸಿದ್ಧಚಕ್ರಂ ಯಜೆ || ಫಲಂ || ಸಂತಾನುಕ್ರಮ ವೃತ್ತಿ ವರ್ಣ್ನ ವಿಲಸನ್ನೀಚೋಭ್ಯ ರ್ನ್ನಿ ಚೋಚೈವ್ಯಪದೆ ಶದೂರ ಕರುಣಾಪ್ರಾಪ್ತಂ ಪ್ರತಿಷ್ಠಾಪರುಂ | ಜೆ ಹ್ರಿರ್‌ಮೃಕ್ಯಮೃಕ್ಕಹೂತೈಃ ಕಲ್ಪತರು ಪ್ರತಾಕರ ಫಲೈ ಶ್ರೀ ಸಿದ್ಧ ಚಕ್ರಂ ಯಜೆ || ಫಲಂ ನಾನಾ ತ್ವನಸ ಹೈಕ್ಯ ಮೃಕ್ಯಮೃಕ ಸಹಿತಂ ನಾನಾ ತ್ವಯಂ ವ್ಯಾಹತಂ ಭಿಭೃಂ ನಿತ್ಯ ಮಿಮೈರನಂತ ಗುಣಮಪ್ಯಷ್ಟಾಭಿರಿಷ್ಟಂ ಗುಣೈಃ | ಜೆ ಹೀರ್‌ಮ = ಪೂತೈರ್ಮಾಂಗಲಿ ಕೈಃ ಕೃತಾರ್ಗ್ಘ್ಯರಚನೈ ಶ್ರೀ ಸಿದ್ಧ ಚಕ್ರಂ ಯಜೆ || ಅರ್ಗ್ಘ್ಯಂ || ಯಿದ್ಧಂ ಚಕ್ರ ಮುಹಾಸ್ಯ ದಿವ್ಯವಪುರಾಹ್ವ್ವಾನಾದಿ ಪೂರ್ವ್ವಂಜ್ವಲ ದ್ಯಾತ್ವಾನಾ ಹತಮಂ ತರಂಗಮದೀಯಂ ಸಂಶುಭ್ರತೇ ಜೋಮಯಂ | ಯ ಸ್ಯಾದ್ವಾರ್ಹತಮಂತ್ರ ಮಾಧ್ಯಮದಿಯಂ ಜಪ್ಯಂಶಿ ವಾಶಾದರ ಪ್ರಾಗ್ಮಂತ್ರಂವಿದೀವಜ್ಜಹೊತಿಯಥಾದ್ಯಾನಂಫಲಾನ್ನ ಶ್ರುತೆ | ಜೆ ಬಿಂದ್ವಿಕಾರ ಹ ರೋದ್ವರೇಫ ಬಿಂದ್ವಿ ನವಾಕ್ಷರಂ | ನಾಲಾದ ಸ್ಯಂತಿಪಿಯೂ ಷಂ ಬಿಂದು ಬಿಂದುಮನಾಹತಂ || ಅನಾಹತ ಲಕ್ಷಣಂ || ತೆವೋ ಪುರುಷಾಯಾ ರೊರೂಯಂ ಣಿಯ ಸರೀರ ಗಂಬತೋಸಿಯಾ ಕಿರಿಣ ವಿಪುರಂ ತೋ ಅಂಪಾಪರಮಂ ಮಯಂ ಸಹಾ ಯಂ ವೊ || ಸಂ ಮಂಕಣಾದಂ ಸಣವಿರಿಯ ಸಂಹುಮಂ ತಹೇವ ಅವಗಹಣಂ | ಅಗುರುಗಲ ಹುಗಮನಾಹಂ ಅಂಠಗುಣಾಹೊಂತಿ ಸಿಂದಾಣಂ || ಕರ್ಮ್ಮಾಷ್ಟಕ ಬ್ವಿನಿರ್ಮ್ಮುಕ್ತಂ ಮೋಕ್ಷಲಕ್ಷ್ಮಿ ನಿಕೇತನಂ | ಸಮ್ಯಕ್ತ್ವಾದಿ ಗುಣೋಪಿತಂ ಸಿದ್ಧ ಚಕ್ರಯಂ ಜಾಮ್ಯಹಂ || ಅರ್ಹಮಿತ್ಯಕ್ಷರಂ ಬ್ರಹ್ಮವಾಚಕಂ ಪರಮೇಷ್ಠಿನಃ | ಸಿದ್ಧ ಚಕ್ರಸ್ಯಸದ್ಬೀಜಂ ಸರ್ವ್ವತಃ ಪ್ರಣಿದ ದ್ಮಹೇ || ಆಕ್ರುಷ್ಟಿಂ ಸುರಸಂಪದಾಂ ವಿಧದತ್ತಿ ಮುಕ್ತಿ ಶ್ರೀಯೋ ವಶ್ಯತಾಂ | ಉಚ್ಚಾಟಂ ವಿಪದಾಂ ಚತುರ್ಗ್ಗತಿ ಭವಾಂ ವಿದ್ವೇಷಮಾತ್ಮೈನಸಾಂ | ಸ್ತಂಭಂ ದುರ್ಗ್ಗಮನಂ ಪ್ರತಿ ಪ್ರಯತತೋ ಮೋಹಸ್ಯ ಸಂಮೋಹನಂ | ಪಾಯಾತ್ಪಂಚ ನಮಸ್ಕ್ರಿಯಾಕ್ಷರಮಯೀ ಸಾರಾಧನಾ ದೇವತಾ || ಶ್ರೀ