ಶ್ರಾವಣಶುದ್ಧ ಆದಿತ್ಯವಾರ ಪ್ರಾರಂಭವು ||

ಶ್ರೀಮದಮರೇಂದ್ರ ವಂದ್ಯಂ
ಕೋಮಳಪದಯುಗಳಕೆರಗಭಕ್ತಿಯೊಳಾನುಂ
ಪ್ರೇಮದಿಂ ವಿರಚಿಪೆನೊಲವಿಂ
ಕಾಮಿತಫಲಸಿದ್ಧಿ ಯೀವಸಿದ್ದರಕಥೆಯಂ
||

|| ವ || ಅದೆಂತೆಂದೊಡೆ ಜಂಬೂದ್ವೀಪದ ಭರತ ಕ್ಷೇತ್ರದೊಳು ಸುರಮ್ಯಮೆಂಬುದು, ದೇಶವೈಜಯಂತಿಯೆಂಬುದು ಪುರಮದನಾಳ್ವಂ ಕ್ಷೇಮಂಕರನೆಂಬರಸನಾತನ ಪಟ್ಟದರಸಿ, ಲಕ್ಷ್ಮೀಮತಿ ಮಹಾದೇವಿಯಿಂತವರೀರ್ವರುಂ, ಸುಖಸಂಖಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲೊಂದುದಿವಸಂ, ಮುನಿಗುಪ್ತ ಭಟ್ಟಾರಕರಾದ ದಿವ್ಯಜ್ಞಾನಿಗಳು ವಿಹರಿಸುತ್ತಂಬ ಬಂದಾಪುರದ ಬಹಿರುದ್ಯಾನದೂಳು ಇರ್ಪುದುಂ, ವನಪಾಳಕ ನಿಂದರಿಸು ಸಮಸ್ತ ಪರಿಜನ ಪುರಜನವೆರಸು ಪಾದಮಾರ್ಗದಿಂ ಪೋಗಿ ತ್ರಿಃಪ್ರದಕ್ಷಿಣಂಗೆಯ್ದು ಫಲವರ್ಚನೆಗಳಂದರ್ಚಿಸಿ, ಭಕ್ತಿಪೂರ್ವಕಂ ವಂದಿಸಿ ಮುಂದೆಕುಳ್ಳಿರ್ದು ನಿರ್ಮಳಚಿತ್ತಂದಿಂ ಧರ್ಮಶ್ರವಣಂ ಕೇಳ್ದು ತದನಂತರಂ, ಲಕ್ಷ್ಮೀಮತಿ ಮಹಾದೇವಿ ಕರಕಮಳಂಗಳಂ ಮುಗಿದು ಸ್ವಾಮಿಯನ್ನ ಪುತ್ರರುಂ ಯನ್ನಪತಿಯುಂ ಸುಖಮಿರ್ಪುದಾವುದಾನೊಂದು ನೋಂಪಿಯಂ ಬೆಸಸಿ ಮೆನಲವರಿಂತೆಂದರು ಸಿದ್ಧರ ನೋಂಪಿಯುಂತಾನೋಂಪಿಯಂ ನೋನಿಮೆನೆ ಆನೋಂಪಿಯವಿಧಾನಮೆಂತೆಂದು ಪೇಳಿಮೆನಲವರಿತೆಂದರು ಶ್ರಾವಣಮಾಸದ ಚೈತ್ಯಾಲಯಕ್ಕೆ ಪೋಗಿ ರತ್ನತ್ರಯ ಪ್ರತುಮೆಗೆ ಅಭಿಷೇಕಾಷ್ಟವಿಧಾರ್ಚನೆಂ ಮಾಡಿ ತದನಂತರಂ ಆದಿಭಟ್ಟಾರಕರು ಅರಿಂಜಯರು ಅಮಿತಂಜಯರುಮೆಂಬ ಮೂವರ್ತ್ತಪೋನಿಧಿಗಳಂ ಕುಂಕುಮ ಕರ್ಪೂರ ಮಿಶ್ರವಾದ ಶ್ರೀಗಂಧದ ಬರದು ಮೂರುಮೂರು ಗಂಧದಬಟ್ಟು ಮೂರು ಅಕ್ಷತೆಯಪುಂಜ ಮೂರು ಪುಷ್ಪ ಮಾಲೆಯಂ ಮೂರುಬೊಳುಂಡಯುಂ ಚರುವನಿಡುವುದು ಮೂರು ಮೂರು ಧೂಪದೀಪಂ ಫಲಂಗಳಿಂದರ್ಚಿಸಿ ಕಥೆಯಂ ಕೇಳ್ದು ನಿತ್ಯವ್ರತೈಕಭುಕ್ತಮಂ ಕೈಕೊಂಡು ಮೂವರು ಸೊವಾಸಿನಿಯರಿಗೆ ಗಂಧಾಕ್ಷತೆಯನಿಟ್ಟು ಮೂರುಮೂರು ಉಂಡೆಯಂ ಬಾಯಿನಮಂಕೊಟ್ಟು ಬರಿಯುಬುಂಡೆಯನೇಕಭಕ್ತಮಂ ಮಾಳ್ಪುದು. ಈ ಕ್ರಮದಿಂ ಏಳುವರುಷದ ಶ್ರಾವಣಮಾಸದೊಳು ನೋನುತ್ತಮಿರೆ ಆಯುರ್ವರ್ದ್ಧನಮಾಗಿ ಪತಿಯಂ ತಾನುಂ ಪುತ್ರರುಂ ಸುಖಮಿರ್ಪ್ಪರುಂ ಸರ್ವವಿಘ್ನವಿನಾಶನಮಕ್ಕುಂ ಸಮಸ್ತ ದುರಿತ ನಿವಾರಣಂ ಬಂದಂಥಾ ವಿಪತ್ತನು ಪರಿಹರಿಸುಗುಮೆಂದು ಮುನೀಶ್ವರರು ಪೇಳೆ ಕೇಳ್ದು ಸಂತುಷ್ಟಚಿತ್ತೆಯಾಗಿ ಮುನೀಶ್ವರರಂ ವಂದಿಸಿ ಬೀಳ್ಕೊಂಡು ಪುರಮನರಮನೆಯಂಪೊಕ್ಕು ಆ ಮುನೀಶ್ವರರು ಪೇಳ್ದಕ್ರಮದಿಂ ನೊಂತುದರಿಂ ಪತಿಯುಂ ಪುತ್ರರುಂ ತಾನುಂ ಅನಂತಸುಖಭಾಗಿಗಳಾಗಿ ನವನಿಧಿಗೆ ಒಡೆಯರಾಗಿ ಫಲಂಬರರಸುಗಳು ಕೈಯ್ಯಲ್ಲೂ ಕಪ್ಪಮಂ ಕೊಳ್ಳುತ್ತ, ಪಲವುಕಾಲ ರಾಜ್ಯಂಗೆಯ್ದು ಸುಖಮಿರ್ದ್ದರಿಂತೀ ನೋಂಪಿಯ ನೋಂತವರ್ಗಂ ನೋನಿಸಿದವರ್ಗಂ ಬರದವರ್ಗಂ ಸಮಸ್ತದುರಿತ ಪರಿಹಾರ ಜಯಮಂಗಳಮಹಾ ಶ್ರೀ ಶ್ರೀ ಶ್ರೀ