ವ || ಕಂದರ್ಪ್ಪಸಾಗರಮೆಂಬ ನೋಂಪಿಯಂ | ಮಾರ್ಗ್ಗಶಿರಮಾಸದ | ಶುಕ್ಲಪಕ್ಷದ ಅಷ್ಟಮಿಯೆಂದುಪವಾಸಂಗೆಯ್ದು | ಪಾರ್ಶ್ವಭಟ್ಟಾರಕರ ಪ್ರತುಮೆಯಂ | ಹಾಲುತುಪ್ಪಮಂ ಕಲಸಿ ಸರ್ಕರೆಯಂ ಕಲಸಿ | ಅಹೋರಾತ್ರಿಯುಮದರೊಳವಗಹನನಿರಿಸಿ | ಮೂರುಪೊತ್ತು | ಮಷ್ಟವಿಧಾರ್ಚ್ಚನೆಯಿಂದರ್ಚಿಸಿ ನೋಂಪಿಯಂ ಮೊದಲ್ಗೊಂಡು ಮತ್ತ ಮಿಂತು | ಪದಿನಾರು ಅಷ್ಟಮಿವರಂ | ನೋಂತುಜ್ಜವಣೆಯಂಮಾಳ್ಪುದು | ಮಹಾಭಿಷೇಕಮಂಮಾಳ್ಪುದು | ನಿಚ್ಚನಿಚ್ಚ | ತುಪ್ಪದ ಸೊಡರಿಂ ಪೊತ್ತಿಸಿ ಅರ್ಚ್ಚಿಸದೂ | ಪಾಲೊಳಭಿಷೇಕಮಾಡಲು | ದೇವರಿಗೊಂದು ಪಯನಾಕಳಂ ಕೊಡುವುದು | ನೋಂಪಿಯನೆನೆಸಗವುದು | ಈ ನೋಂಪಿಯ ಫಲದಿಂ ನೋಂತವರುಂ | ಭವಭವಾಂತರದೊಳೆಲ್ಲಂ | ಕಾಮದೇವಗಂ | ರತಿವಿಳಾಸಕ್ಕಂಯಿಂದ್ರಗಂ ಶಚಿಮಹಾದೇವಿಗಂ | ಸಕಳಚಕ್ರವರ್ತ್ತಿಗಂ | ಸ್ತ್ರೀರತ್ನಕ್ಕಮಗ್ಗಳಮಪ್ಪ | ರೂಪಂ ಗಾಡಿಯುಂ | ಲಾವಣ್ಯಮುಂ ಬೆಡಗುಂ | ಹಾವಭಾವ ವಿಳಾಸ ವಿಭ್ರಮಂಗಳೊಳ್ಕೂಡಿದ ಗಾಡಿಕಾರರುಂ ಪೂತಕಾರ್ತಿಯರುಮಪ್ಪರು | ಭೋಗೋಪ ಭೋಗ ಸುಖಮಂ ತಮ್ಮನಲ್ಲರೊಳ್ಕೂಡಿ | ಅನುಭವಿಸುತ್ತಿರ್ಪರು | ಬೇಡಿದ ವಸ್ತುಗಳಂ | ಅನುಭವಿಸುತ್ತಮಿರ್ಪರು | ತದನಂತರದೊಳು | ಸರ್ವರ್ಜ್ಞ ಶ್ರೀಸುಖದೋಳ್ಕೂಡಿ ಕಂದರ್ಪಸಾಗರದ ನೋಂಪಿಯಂ | ನೋಂತವರ್ಗಂ | ನೋನಿಸಿದವರ್ಗಂ || ಜಯಮಂಗಳ ಮಹಾ ಶ್ರೀ ||