ಶ್ರೀ ವರಗುರು ಪಂಚಕಮಂ
ಭಾವಿಸಿ ನಾಂ ಕರ್ಮ್ಮ ನಿರ್ಜ್ಜರೆಯ ಸತ್ಕಥೆಯಂ

ವ್ಯಾವರ್ಣಿಸುವೆಂ ಮುದದಲಿ
ಭವ್ಯ ಜನಾವಳಿಗಘಹರಮನಮೃತ ಲಕ್ಷ್ಮೀಕರಮಂ ||

|| ವ || ಅದೆಂತೆಂದೊಡೆ ಜಂಬೂ ದ್ವೀಪದ ಭರತ ಕ್ಷೇತ್ರದೊಳು ಮಗಧೆಯೆಂಬುದು ನಾಡು ರಾಜಗೃಹಮೆಂಬುದು ಪುರಮದನಾಳ್ವರಸಂ ಶ್ರೇಣಿಕ ಮಹಾಮಂಡಳೇಶ್ವರನಾತನ ಪಟ್ಟದರಿಸಿ ಚೇಳಿನಿ ಮಹಾದೇವಿಯೆಂಬಳಂತವರಿರ್ವ್ವರುಂ | ಸುಖ ಸಂಕಥಾ ವಿನೋದದಿಂ ರಾಜ್ಯಂಗೆಯ್ಯುತ್ತಮಿರಲೊಂದು ದಿವಸಂ ವೊಡ್ಡೋಲಗಂಗೊಟ್ಟಿರ್ದ್ದ ಪ್ರಸ್ಥಾವದೊಳೊರ್ವ್ವ ಋಷಿ ನಿವೇದಕಂ ಬಂದು ಸಾಷ್ಟಾಂಗ ಪ್ರಣುತನಾಗಿ | ದೇವಾ ವಿಪುಲಾಚಲ ಗಿರಿಯಮೇಲೆ | ಶ್ರೀ ವರ್ದ್ಧಮಾನ ಸ್ವಾಮಿಯ ಸಮವಸರಣಂ ಬಂದು ನೆಲಸಿರ್ದ್ದಪುದೆಂದು ಬಿಂನಪಂಗೆಯ್ಯಲಾ ದೆಸೆಗೇಳಡಿಯಂ ನಡದು ಸಾಷ್ಟಾಂಗ ಪ್ರಣುತನಾಗಿ ಯೊಸಗೆ ದಂದಂಗಂಗಚಿತ್ತಮನಿತ್ತಾನಂದ ಭೇರಿಯಂ ಪೊಯ್ಸಿ ಪರಿಜನಂ ಪುರಜನಂ ಬಂದು ಜನಂಗಳ್ವೆರಸು ಪಾದಮಾರ್ಗ್ಗದಿಂದ ಪೋಗಿ ಸಮವಸರಣಮೆನೆಯ್ದಿ ಗಂಧಕುಟಿಯಂ ತ್ರಿಃ ಪ್ರದಕ್ಷಿಣಂಗೆಯ್ದರ್ಹತ್ಪರ ಮೇಶ್ವರನನನೇಕ ಸ್ತುತಿ ಶತ ಸಹಸ್ರಂಗಳಿಂ ಸ್ತುತಿಯಿಸಿ | ಅನೇಕಾರ್ಚ್ಛನೆಗಳಿಂದರ್ಚ್ಚಿಸಿ ವಂದಿಸಿ ಗುರು ಭಕ್ತಿ ಪೂರ್ವ್ವಕಂ ಗೌತಮ ಗಣಧರರ್ಮ್ಮೊದಲಾದ ರುಷಿ ಸಮುದಾಯಮಂ ಪೂಜಿಸಿ ವಂದಿಸಿ ಪಂನೊಂದನೆಯ ಮನುಷ್ಯ ಕೋಷ್ಟದೊಳ್ಕುಳ್ಳಿರ್ದ್ದು ಗೌತಮ ಸ್ವಾಮಿಗಳೂ ಶ್ರೇಣಿಕ ಮಹಾಮಂಡಲೇಶ್ವರಂ ಕೈಗಳಂ ಮುಗಿದೆಲೆ ಸ್ವಾಮಿ ಕರ್ಮ್ಮಂ ಪೋಪುದಕ್ಕುಪಾಯಮಾಗಿ ಯೆನಗಾವುದಾನುಮೊಂದು ನೋಂಪಿಯಂ ಬೆಸಸಿಮೆನಲವರಿಂ ಎಂದು ಪೇಳ್ದಪರುಜ್ಜೆನಿಯಂಬುದು ಪಟ್ಟಣಮದಱ ಕೆಲದೊಳೊಂದೊಕ್ಕಲುವಳ್ಳಿಯುಂಟದಱ ಗೌಂಡಂ ಬಲಭದ್ರನೆಂಬನಾತಂಗೇಳು ಪ್ರಜೆ ಗಂಡು ಮಕ್ಕಳವರ್ಗ್ಗೇಳು ಮಂದಿ ಸ್ತ್ರೀಯರೊಳು ಕಿಱಿಯ ಸೊಸೆ ಯತ್ರಾಸ್ತಮಿತ ವಾಸಿಗಳಪ್ಪ ತಪೋಧನರಾಗ್ರಾಮದ ಮಂದೆ ಕಾಯೋತ್ಸರ್ಗ್ಗಮಿರಲಱೆಯದೆ ತಂನ ಪಾಳೆಯದ ದಿವಸದ ಬೆಳಗಪ್ಪ ಜಾವದೊಳು | ಮನೆವಾಳು ನಿಮಿತ್ತ ಕಸವುಂ ಸಗಣಮಂ ಕಳೆದು ಕಾಯೋತ್ಸರ್ಗ್ಗದೊಳಾ ರಾತ್ರಿ ಪ್ರತಿಮಾ ಯೋಗದೊಳಿರ್ದ್ದ ತಪಸ್ವಿಯ ಮಸ್ತಕದೊಳಿಕ್ಕಿ ಪೋದಂನೆಗಮಾ ಬಲಭದ್ರನರಂಬ ಗೌಂಡಂ ಮನೆಯಿಂ ಪೊಱಮಟ್ಟು ಬಂದುಪಸರ್ಗ್ಗದೊಳಿರ್ದ್ದ ರುಷಿಯರಂ ಕಂಡವರ ಮಸ್ತಕದೊಳಿರ್ದ್ದ ಕಸವುಮಂ ಸಗಣಮುಮಂ ಪರಿಹರಿಸಿಯೆಲೆ ಸ್ವಾಮಿಯುಪಸರ್ಗ್ಗಂ ಪಿಂಗಿತು ಕಯ್ಯೆತ್ತಿಕೊಳ್ಳಿಮೆನೆ ಕೈಯೆತ್ತಿಕೊಂಡು ಬಿಜಯಂಗೆಯ್ದರಂನೆಗೆಮಾ ಸೊಸೆ ಕಾಲಾಂತರಕ್ಕೆ ಭವಾಂತರಮೆನೆಯ್ದು ಯೊರ್ವ್ವ ವೈಶ್ಯಂಗೆ ಮಗಳಾಗಿ ಪುಟ್ಟಿದುಳ್ಪುಟ್ಟಲೊಡಮಾಕೆಯ ತಾಯುಂ ತಂದೆಯುಂ ಬಂಧುಗಳುಂ ಸಾವುದುಂ | ಕರ್ಮ್ಮಿಯೆಂದು ಪಸರ್ವ್ವಡೆದನಾಥೆಯಾಗಿ ಶ್ರೀಮತಿ ಗಂತಿಯರಂಸಾರ್ದ್ದುಮಿರಲವರೊಡನಿರ್ದ್ದಜ್ಜಿಯರುಂ ಮುನಿದು ಪೊಱಮಡಿಸಲ್ಪೊಱಮಟ್ಟು ಮಾಯಜ್ಜಿಯರ್ಗ್ಗೆ ವೈಯ್ಯಾವೃತ್ಯಮಂ ಮಾಳ್ಪ ಶ್ರಾವಕರಂ ಪೊರ್ದ್ದಲವರುದಾಸೀನಂ ಮಾಡೆ | ಮತ್ತಮವರನೆ ಸಾರ್ದ್ಧಿರೆ | ಆ ಕರ್ಮ್ಮಿಗುದಾಸೀನದೊಳಂನಮುಂ ಕೊಡುತ್ತಿರಲೊಂದು ದಿವಸಮೊರ್ವ್ವ ಚಾರಣ ರುಷಿಯರ್ಗ್ಗಗನ ಮಾರ್ಗ್ಗದಿನವನೀತಳಕ್ಕವತರಿಸೆ ಬಾಗಿಲೊಳಿರ್ದ್ದ ಕರ್ಮ್ಮಿ ಕಂಡು ಗುರು ಭಕ್ತಿ ಪೂರ್ವ್ವಕಂ ವಂದಿಸಿ ಕೈಮುಗಿದಿರ್ಪ್ಪುದುಮಾ ಚಾರಣ ಪರಮೇಷ್ಠಿಗಳು ಕರುಣದಿನಿತೆಂದರೆಲೆ ಕರ್ಮ್ಮಿ | ಯಿಂದಾಶ್ವಯಿಜ ಮಾಸದ ಶುಕ್ಲ ಪಕ್ಷದೊಳು ಕರ್ಮ್ಮ ನಿರ್ಜ್ಜರೆಯ ಪಂಚಮಿಯ ದಿವಸ ನೀನೀ ನೋಂಪಿಯಂ ಮಾಡಲು ಕರ್ಮ್ಮಂ ಪೋಪುದೆನೆ | ಅಂತಾದೊಡಾ ನೋಂಪಿಯುಮನದಱ ವಿಧಾನಮುಮಂ | ಕಾರುಣ್ಯಂ ಮಾಡಿಯೆನಲವರಿಂತೆಂದರು | ಶ್ರೀ ಪಂಚ ಪರಮೇಷ್ಠಿಗಳ ಪ್ರತುಮೆಯಂ ಬಿಜಯಂಗೆಯ್ಸಿ ಆ ಪ್ರತುಮೆಯ ಸುತ್ತಲುಂ ರಂಗವಲ್ಲಿ ಯನಿಕ್ಕಿ ಬೆಲ್ಲದ ಕೇರ್ಗ್ಗಟ್ಟಂ ಕಟ್ಟಿ ಕಬ್ಬಿನಲ್ಕಂಭಗಟ್ಟಂ ಕಟ್ಟಿಯನೇಕ ಪುಷ್ಪಮಾಲೆಗಳಿಂ | ಪೊದಿಸಿಸಿ ಸಾಧಿನಿಂ ಸಾರಿಸಿ | ಕುಂಕುಮದಿಂ ಕಾರುಣಿಗೊಂಡು ಕರ್ಪ್ಪೂರದಿಂ ರಂಗವಲಿಯನಿಕ್ಕಿ ಶುಚಿರ್ಬ್ಬೂತರಾಗಿಯುಪವಾಸಮಂ ಮಾಡಿಯಿರುಳು ಜಾಗರಮಿರ್ದ್ದು ನಾಲ್ಕು ಜಾವ ಜಾವಂದಪ್ಪದೆಯಭಿಷೇಕ ಪೂಜೆಯಂ ಮಾಡಿ | ಆ ಪಂಚ ಪರಮೇಷ್ಠಿಗಳಷ್ಟವಿಧಾರ್ಚ್ಛನೆಯಂ ಮಾಳ್ಪು ಕ್ರಮಮೆಂತೆಂದೊಡೆ || ಜ್‌ ಹ್ರಾನ್‌ನಮೋರ್ಹತೆ ಘಾತಿ ಚತುಷ್ಟಯ ರಹಿತಾಯ | ನವ ಕೇವಲ ಲಬ್ಧಿ ಸಹಿತಾಯ ಸ್ವಾಹಾ || ೧ || ಓಂ ಹ್ರೀಂ ನಮಃ ಸಿದ್ಧಾಯ ಕರ್ಮ್ಮಾಷ್ಟಕ ವಿನಿರ್ಮ್ಮುಕ್ತಾಯ | ಗುಣಾಷ್ಟಕ ಪ್ರಮುಕ್ತಾಯ ಸ್ವಾಹಾ || ೨ || ಜ್‌ ಪ್ರೂರ್‌ ನಮಃ ಸೂರಯೆ | ಪಂಚೇಂದ್ರೀಯ ವಿಷಯ ವಿರಹಿಕಾಯ ಪಂಚ ವಿಧಾಚಾರ ನಿರತಾಯ ಸ್ವಾಹಾ || ೩ || ಜೆ ಹ್ರಾರ್‌ ನಮೋ ದೇಶಕಾಯ | ವ್ರತ ಸಮಿತಿ ಗುಪ್ತಿಯಕ್ತಾಯ ಕಷಾಯಾದಿ ರಿಪುವರ್ಗ್ಗಯುಕ್ತಾಯ ಸ್ವಾಹಾ || ೪ || ಜ್‌ ಹ್ರರ್‌ ನಮಃ ಸಾದವೇ ಮೂಲೋತ್ತರ ಗುಣ ಯುಕ್ತಾಯ | ಪರಮ ಪದದತ್ತಂ ಚಿತ್ತಾಯ ಸ್ವಾಹಾ || ೫ || ಯೆಂಬೀ ಮಂತ್ರಮನೋದುತ್ತಂ

|| ಕ || ಜಲಧಾರೆಯನಯ್ದುಂ ಸ
ತ್ತಿಲಕಮನಯ್ದುಂ ಸುಲಕ್ಷಣಾಕ್ಷರೆ ಪುಷ್ಪಂ
ಗಳನಯ್ದಂ ಜಿನಪದದೊಳು
ವಿಲಸಿತಮಾಗಲೈ ಮಾಡೂದು ನೋಂಪವರ್ಗ್ಗಳು ||

ಆಯ್ದುಂ ಪುಷ್ಪದೊಳಂ ಮ
ತ್ತೈದುಮನೈದಯ್ದು ಭಕ್ಷದೊಳಗಯ್ದಯ್ದಂ
ಅಯ್ದಯ್ದು ದೀಪ ಧೂಪಮ
ನಯ್ದಂ ಫಲದೊಳಗೆ ಪೂಜಿಸುಉದಯ್ದಯ್ದಂ ||

ಅಂತಷ್ಟ ವಿಧಾರ್ಚ್ಚನೆಯಂ
ಸಂತೋಷದಿಂ ಮಾಡಿ ಮತ್ತೆ ಪುಷ್ಪಾಂಜಲಿಯಂ
ಶಾಂತಿಕರಮಿದು ಜಗಕ್ಕೇನು
ತಂ ತಡೆಯದೆ ಪುಷ್ಪಾಂಜಲಿಯಂ ಕೊಟ್ಟಾಗಳೂ ||

ಓ ನಮಃ ಪಂಚಪರಮೇಷ್ಟಿಭ್ಯಃ ಹ್ರಾ ಹ್ರಿರ್‌ ಹ್ರೂಕ್‌ ಹ್ರಾರ್‌ ಹ್ರಾರ್‌ ಹ್ರರ್‌ ಃ ಮಮ ಸರ್ವ್ವ ಶಾಂತಿಂ ಕುರುಕುರು ಸ್ವಾಹಾ || ಯೆಂಬೀ ಮಂತ್ರಮನೋದುತ್ತಂ ಜಲಗಂಧಾಕ್ಷತೆ ಪುಷ್ಪ ಬೆರಸರ್ಗ್ಘ್ಯಮಂ ಕೊಟ್ಟು ಶ್ರುತಮಂ ಗುರುಗಳುಮಂ ಪೂಜಿಸಿ ಧರ್ಮ್ಮಕಥೆಯಂ ಕೇಳುತ್ತಂ ಬೆಳಗಾಗಲೊಡಂ | ಹುಗ್ಗಿ ಹೆಚ್ಚಂಬಲಿ ಕಲಸುಗಳೇಂಬಿದನೊಂಭತ್ತು ಹೊಸ ಬೆಸಣಿಗೆಯೊಳಕ್ಕಿ ಮೇಲೆ ಮಂಡಿಗೆಯನಿಕ್ಕಿ ಮುಚ್ಚಿ ಸುವರ್ಣ್ನ ಸಹಿತಂ ಹೊಸ ತುಪ್ಪಮಂ ಹೊಸ ಗಿಂಣಿಲೊಳಗಿಕ್ಕಿ | ದೇವರ್ಗೊಂದು ಶ್ರುತಕ್ಕೊಂದು ಗುರುಗಳಿಗೊಂದು ತನಗೊಂದು | ಉಳಿದದ್ದು ಬಾಯಿನಮಂ ಸಮ್ಯಗ್ಧೃಷ್ಟಿಗಳಪ್ಪ ಸೋವಾಸಿನಿಯರ್ಗ್ಗೆ ಕುಡುಉದು | ಅಜ್ಜಿಯರ್ಗ್ಗಾಹಾರಕ್ಕೆ ಯಥಾಶಕ್ತಿಯಿಂ ಚರ್ತುರ್ವ್ವಿಧ ದಾನಮಂ ಮಾಡಿ ಬಳಿಕ್ಕಂ ಪಾರಣೆಯಂ ಮಾಳ್ಪುದೆಂದುದ್ಯಾಪನೆಯ ಕ್ರಮಮಂ ಬೆಸಸಿಮನೆ ಪಂಚಪರಮೇಷ್ಠಿಗಳ ಪ್ರತುಮೆಯಂ ಮಾಡಿಸೂದು | ಅಯ್ದು ತಂಡ ಋಷಿಯರ್ಗ್ಗೆ ತಟ್ಟು ಕುಂಚ ಗುಂಡಿಗೆ ಸಹವಾಗಿ ಕೊಡುಉದು | ಮುಂ ಪೇಳ್ದ ಕ್ರಮದಿಂ ಸವಿಸ್ತರದಿಂ ಮಾಡಿ ಮುಂ ಪೇಳ್ದ ಕ್ರಮದಿಂಬಾಯಿಯನಮಂ ಕೊಡುಉದು ಆ ಮಂತ್ರವೆಂತೆಂದೊಡೆ ಜ್‌ ಹ್ರಿ‌ ಪಂಚಕಲ್ಯಾಣ ಸಂಪೂರ್ಣ್ನಾಯ ನವ ಕೇವಲ ಲಬ್ಧಿ ಸಹಿತಾಯ ನಮ ಸ್ವಾಹಾಯೆಂಬೀ ಮಂತ್ರದಿಂ ಕೊಡುಉದೆಂದು ಬೆಸಸಿ ಬಿಜಯಂಗೆಯ್ಯಲವರು ಪೇಳ್ದ ಕ್ರಮದಿಂದೀ ನೋಂಪಿಯಂ ನೋನುತ್ತಮಿರಲುಮಾ ಪುರದರಸನ ಮಗಂಗೆ ಸರ್ಪ್ಪದಷ್ಟಮಾಗೆ ಅರಸಿ ಪಿರಿದುಂ ಸಂಕ್ಲೇಶ ಚಿತ್ತೆಯಾಗಿ ನಾಂ ನಮನ ಕುಮಾರಂಗೆ ಮದುವೆಯಂ ಮಾಡಿ ನೋಡಲ್ಪಡೆದಿನಿಲ್ಲೆಂದರಸಂಗೆ ಪೇಳ್ವುದುಂ ಹೆಣಕ್ಕೆ ಹೆಂಣಂ ಕುಡುವರಾನೆನೆ ಯೆಂತಾದೊಡಂ ಮದುವೆಯಂ ಮಾಡಲ್ಪೇಳ್ಕುಮೆನೆ ಸಹಸ್ರ ಸಂಖ್ಯೆಯ ಪೊಂನ ಪೊಟ್ಟಣಮಂ ಗಳೆಯ ತುದಿಯೊಳ್ಕಟ್ಟಿಯಾವಳೊರ್ವ್ವ ಸತ್ಕುಲ ಪ್ರಸೂತೆಯಪ್ಪ ಕಂನಿಕೆಯಂ ಕುಮಾರಂಗೆ ಕೊಡುವರುಂಟಾದೊಡೆ ಪೊಟ್ಟಣದ ಪೊಂನಂ ಕುಡುವೆವೆಂದು ಪುರದೊಳು ಘೋಷಣೆಯ ಡಂಗುರಮಂ ಪೊಯಿಸಲಾ ಡಂಗುರುಂ ಮನೆಯ ಬಾಗಿಲಿಂಗೆ ಬರಲಾ ಕರ್ಮ್ಮಿ ಕಂಡಾ ಪೊಟ್ಟಣಮಂ ಪಱೆದು ಕೊಂಡಜ್ಜಿಯರಿರ್ರ್ದದೆ ಹರದಲ್ಲಿ ಗರವರನೊಡಗೊಂಡು ಬರೆ | ತದೃತ್ತಾಂತಮಂ ಕೇಳ್ದು ನೀಂಪೊಲ್ಲಕೈದೆ ಪೆಣಕ್ಕೆ ಮದುವೆಯಾದವರುಂಟೆಯೆನಲಾ ವೈಶ್ಯ ಪುತ್ರಿ ಕೇಳದಂತೆ ಘೋಷಣೆಯವರ್ಗ್ಗಳ ಬೆಂಬಳಿಯನೆ ಪೋಗಿಯರಮನೆಯಂ ಪೊಕರಸನುಮರಸಿಯುಮಂ ಕಂಡಿರಾ ಅರಸಿ ನೋಡಿ ಅಮೂಲ್ಯಾಭರಣಂಗಳಂತುಡಿಸಿ ಅಪೂರ್ವ್ವ ವಸ್ತ್ರಮನುಡಿಸಿ ವಿವಾಹ ವಿಧಿಯಂ ನಿರ್ವ್ವರ್ತ್ತಿಸಿಯಾ ಪೆಣನ ಸಂಸ್ಕಾರಂ ಗೆಯ್ಯಲೆಂದು ರುಧ್ರಭೂಮಿಗೆ ಕೊಂಡು ಹೋಹ ಪ್ರಸ್ಥಾವದೊಳಸ್ತಮಾನಮಾಗೆ ಪಟ್ಟಣದ ಜನಮೆಲಂ ನೆರೆಯ ಕಾಣಲ್ಲೇಳ್ಕುಮೆಂದು ಬೆಳಗಾದಾಗಳು ದಹನಂಗೆಯ್ಯ್ವಮೆಂದು ಪುರದ ಪೊಱವಳಲೊಳು ವಿಮಾನ ಸಹಿತಂ ಶ್ರಬಕ್ಕೆ ಸುತ್ತಲುಂ ಕಾಪುಗೊಟ್ಟು ಪೋಗಲಾ ವೈಶ್ಯ ಪುತ್ರಿಗಂ ಅಂದಿನ ದಿನಮೇ ನೋಂಪಿಯ ದಿನವಾಗಲು ನೀಡುಂ ಭಾವಿಸಿ | ಯೆಂನ ನೋಂಪಿಯಡವಱೆಯಲಾಗದೆಂದು ಮಳಲುಗಳನಯ್ದಕ್ಕಿಯ ಪುಂಜವೆಂದಿಕ್ಕಿ ಭಾವ ಪೂಜೆಯಿಂದರ್ಚ್ಚಿಸಿ ಪಂಚಪರಮೇಷ್ಠಿಗಳಂ ಬಾವಿಸುತ್ತಿರ್ಪ್ಪಂನೆಗಮಾ ರಾತ್ರೆಯೊಳು ಪದ್ಮಾವತಿಗಾಸನ ಕಂಪಮಾಗಲವಧಿಯಿಂದಱೆದಾ ವೈಶ್ಯ ಪುತ್ರಿಯ ಸಮ್ಯಕ್ತ್ವಕ್ಕೆ ಮೆಚ್ಚಿ ಬಂದು ಪ್ರತ್ರಕ್ಷಮಾಗಿ ಮುಂದೆ ನಿಂದಿರ್ದು ನೀನೇನಂ ಬಾವಿಸುತ್ತಿರ್ದ್ದಪೆಯೆನೆ ತಂನ ವೃತ್ತಾಂತಮನಾ ಕರ್ಮ್ಮಿ ಪೇಳಲಾ ಪದ್ಮಾವತಿಯೆಂಗು ನಿಂನ ಗೆಯ್ದುಪಾಯಂ ಪೊಲ್ಲದು | ಪೆಣಕ್ಕೆ ಮದುವೆ ನಿಂದುದಲ್ಲದೆ ಮಳಲ ಪುಂಜಮನಿಕ್ಕಿ ನೋಂತಡೆ | ಫಲಮಿಲ್ಲ ಬೆಳಗಾದ ಮುನ್ನ ನೀನೆಂನೆ ಕೊಡೆ ಬರ್ಪ್ಪುದುತ್ತಮೆನಲಾ ಕರ್ಮ್ಮಿಯೆಂಗುಂ | ರಾಜ ಪುತ್ರಂಗೆ ಶರೀರಮಂ ಮಾಱುಗೊಟ್ಟೆಂ ಮನಮಂ ಶ್ರೀಪಂಚಪರಮೇಷ್ಠಿಗಳೆ ಚಲನೆಯಿಲ್ಲದೆ ಕೊಟ್ಟೆಂ | ಉಳಿದ ಮಾತಾಗದ ಮಾತು ನಿಂಮಂದಿಗರಿಂತುಸಿರ್ವ್ವುದುಚಿತಮಲ್ಲೆನೆಯಾ ದೇವತೆ ನಿಂನ ಮನದ ದೃಢತನರಮನಾರೈದುಮೀ ಕುಮಾರಂಗೆ ನಿರ್ವಿಷಂ ಮಾಡಲ್ಪಂದೆನೆನೆ | ನೀನತಿ ನಿಶ್ಚಲಮತಿಯಿಂದಿರ್ದ್ದುದಕ್ಕೆ ಮೆಚ್ಚಿದೆನೆಂದಾ ಪದ್ಮಾವತಿಯಾ ಕುಮಾರಂಗೆ ನಿರ್ವ್ವಿಷಂ ಮಾಡಿ ಪ್ರಾಣಮನೆತ್ತಿಪೋದಳಿತ್ತಲಾ ಕುಮಾರಂ ನಿದ್ರೆಯಿಂದೆಚ್ಚತ್ತವರ ಮಾರ್ಗ್ಗದಿಂ ಮೈಮುರಿದೆದ್ದು ಮಿಕ್ಕೆಲನಂ ನೋಳೊಗಳು ಕೆಲದಳಿರ್ದ್ದ ಕರ್ಮ್ಮಿಯಂ ಕಂಡು ಯೆಲೆ ನೀನಾರ್ಗ್ಗೆಂದು ಕೇಳ್ದುಮಾ ಕರ್ಮ್ಮಿ ತದ್ಧೃತಾತಮೆಲ್ಲಮಂ ಸವಿಸ್ತರಂ ಪೇಳುತ್ತಮಿರಲಾ ಕುಮಾರನಂ ಪ್ರತಿಧ್ವನಿ ಗೊಟ್ಟು ನುಡಿವ ವಚನಮಂ ಕಾಪಿನವರಾಲಸಿ ಕೇಳ್ದವರರಸಂಗಪುರಸಿಗಂ ಪ್ರಧಾನಿ ಪುರೋಹಿತಾದಿಗಳ್ಗೆಲ್ಲಮಱೆಪುಉದು ಮವರಾಕ್ಷಣದೊಳ್ಪಂದು ನಿಶ್ಚಿಂತ ಮನನಾಗಿರ್ದ್ದ ಕುಮಾರನುಮನಾ ಕರ್ಮ್ಮಿಯುಮಂ ಕೆಲದೊಳಿರ್ದ್ದ ಮಳಲ ಪುಂಜಗಳುಮಂ ಕಂಡಿದಾಉದು ನಿಮಿತ್ತಮೀ ಮಳಲ ಪುಂಜಂಗಳಾವ ಕಾರಣ ನೀನೀ ಗೆಯ್ದುಂಮ ಮಗನ ಪ್ರಾಣಮಂ ಪಡದೆಯೆಂದರಸನುಮರಸಿಯುಂ ಹರುಷಂ ಮಿಗೆ ಕೇಳ್ವುದುಮಾ ಕರ್ಮಿ ತಂನ ಮುಂನಿನ ವೃತ್ತಾಂತಮಂ ದಿವ್ಯ ಚಾರಣರು ಕೃಪೆಯಿಂ ತನುಗುಪದೇಶಂ ಗೆಯ್ದು ಕರ್ಮ್ಮ ನಿರ್ಜ್ಜರೆಯ ನೋಂಪಿಯುಮಂ | ತಾನಾದಿನ ಭಾವ ಪೂಜೆಯಿಂದಿರ್ದ್ದ ಶುಭ ಭಾವನೆಯಿಂದಾ ಪುಂಜಮನೆ ಸಾಕ್ಷಾತ್ಪಂಚ ಪರಮೇಷ್ಠಿಗಳಪ್ಪಂತು ಧ್ಯಾನಿಸಿ ಅಭಿಷೇಕಾಷ್ಟ ವಿದಾರ್ಚ್ಛನೆಗಳಂ ಸಂಕಲ್ಪಂಗೆಯ್ದ ನೋಂಪಿಯ ಫಲದೊಳು | ಭವನ ವಾಸಿಗ ಲೋಕದೊಳ್ಕುಳಿರ್ದ್ದ ಪದ್ಮಾವತಿ ಪ್ರತ್ಯಕ್ಷಮಾಗಲಲ್ಲಿಗವತರಿಸಿ | ಯೆಂನ ಮನಮಲ್ಲಾಡಿಯೀ ಯಡಿವೊಯೊಳೇಕಾಕಿಯಾಗಿರಲೇಕೆಂನ ಕೂಡೆ ಬಾಯೆಂಬುದುಮೆನಗವಶ್ಯಮೀ ಕುಮಾರಂಗಿತ್ತ ಶರೀರಂ ಪಂಚ ಪರಮೇಷ್ಠಿಗಳ್ಗೆ ಕೊಟ್ಟಮನಂ | ಮತ್ತಿಂನಾರ್ಗ್ಗಂ ಕುಡುವುದುಚಿತಮಲ್ಲೆನೆ ಯಿಲ್ಲಿಂದಿತ್ತಲಾದುದಪ್ಪೆನೆನೆ ಮೆಚ್ಚಿ ನಿರ್ವಿಷಂ ಮಾಡಿ ಪೋದಳಾ ಪದ್ಮಾವತಿ | ನಾನುಮಿಲ್ಲಿರ್ರ್ದೆನನೆ ಪಿರಿದು ಸಂತೋಷಂ ಬಟ್ಟು ಸಂಭ್ರಮದಿಂ ಪುರಮನರಮನೆಯಂ ಪೊಕ್ಕಾ ಕರ್ಮ್ಮಿಗಂ ಕುಮಾರಂಗಂ ಮಹಾವಿಭೂತಿಯಿಂ ಮದುವೆಯ ಮಾಡಿ | ಮಹಾದಾನ ಸನ್ಮಾನಾದಿಗಳಿಂ ಚಾತುರ್ವ್ವರ್ನ್ನಂಗಳಾಂ ಸಂತುಷ್ಟರಂ ಮಾಡಿ ಪಲಕಾಲಂ ರಾಜ್ಯಂಗೆಯ್ದು ಸಹಜ ವೈರಾಗ್ಯದಿಂ ಸಂಸಾರ ಶರೀರ ಭೋಗಂಗಳ್ಗೆ ಪೇಸಿ ರಾಜ್ಯಭಾರಮಂ ಸುತನ ಮಸ್ತಕದೊಳ್ನಿಲಿಸಿ ಜಿನದೀಕ್ಷೆಯಂ ಕೈಕೊಂಡು ಗ್ರೋಗ್ರ ತಪಶ್ಚರಣಂಗೆಯ್ದು ಕಡೆಯೊಳ್ಸನ್ಯಸನ ವಿಧಿಯಿಂ ಶರೀರ ಭರಮನಿಳಿಯಚ್ಯುತ ಕಲ್ಪದೊಳುಚ್ಯುತ ತೇಂದ್ರನಾಗಿ ಜನಿಯಿಸಿದರೆಂದು ಗೌತಮ ಗಣಧರರು ಶ್ರೇಣಿಕ ಮಹಾ ಮಂಡಳೇಶ್ವರಂಗಂ ಚೇಳಿನಿ ಮಹಾದೇವಿಗಂ ಪೇಳೆ ಕೇಳ್ದಾ ನೋಂಪಿಯಂ ಕೈಕೊಂಡು | ಜಿನ ಭಟ್ಟಾರಕಂಗಂ ಗಣಧರ ಪರಮೇಷ್ಠಿಗಳಂ ವಂದಿಸಿ ಬೀಳ್ಕೊಂಡು ಪುರಮನರಮನೆಯಂಪೊಕ್ಕು ಸುಖಮಿರ್ಪ್ಪುದುಮಾಶ್ವಯಿಜ ಮಾಸಂ ಬರ್ಪ್ಪುದುಂ ಸವಿಸ್ತರದಿ ನೋಂತುಮಯ್ದನೆಯ ವರ್ಷದೊಲುದ್ಯಾಪನೆಯಂ ಮಾಳ್ಪಾಗಳು | ಶ್ರಿ ಪರಮೇಷ್ಠಿಗಳ ಪ್ರತುಮೆಯಂ ಮಾಡಿಸಿ ಶಿಲ್ಪಕದೋಷಮಂ ಕಳೆದು ಶುಭದಿನ ಮೂಹೂರ್ತದೊಳು ಪ್ರತಿಷ್ಠೆಯಂ ಮಾಡಿಸಿ | ಒಂಭತ್ತು ಬಾಯಿನಂಗಳೊಳು ಒಂಭತ್ತು ಬಟ್ಟಲುಗಳಿಂ ಮುಂಪೇಳ್ದ ಕ್ರಮದೊಳು ಬಾಯಿನಮಂ ಕೊಡುವ ಮಂತ್ರ || ಜ್‌ ಹ್ರೀರ್‌ ಪಂಚ ಮಹಾಕಲ್ಯಾಣ ಸಂಪೂರ್ಣಾಯ ನವ ಕೇವಲಭ್ಧಿ ಸಮನ್ವಿತಾಯ ಸ್ವಾಹಾ || ಯೆಂದು ಬಾಯಿನಮಂ ಕೊಡುಉದು | ಕೊಂಬವರ್ಗ್ಗಳು | ಜ್‌ ನಮೋ ಭಗವತೆ ಪಂಚ ಪರಮೇಷ್ಠಿರ್ಭ್ಭಗವನ್‌ ಸರ್ವ್ವಕರ್ಮ್ಮ ನಿಜ್ಜರಾಂ ಕುರು ಸ್ವಾಹಾ || ಯೆಂದು ಬಾಯಿನಮಂ ಕೊಂಬುದುಮೀ ಕ್ರಮದಿಂ ನೋಂತುದ್ಯಾಪನೆಯಂ ಮಾಡಿದವರನಂತ ಜನ್ಮದ ಕರ್ಮ್ಮಮಂ ಕಿಡಿಸಿ ಸಕಳ ಸುಖಕ್ಕಧಿಪತಿಯಪ್ಪರು || ಪಾಂತು ಶ್ರೀಪಾದ ಪದ್ಮಾನಿ ಪಂಚನಾಂ ಪರಮೇಷ್ಠಿನಾಂ ಲಾಲಿತಾನೀ ಸುರಾಧೀಶಂ ಚೂಡಾಮಣಿ ಮರೀಭಿಃ ||

ಭವಭವದೊಳು ನೆನಪಿದ ಕ
ರ್ಮ್ಮವೊರ್ಮ್ಮೊದಲೆಯ್ದೆ ಕೆಡಿಪುದೀ ನೋಂಪಿಯಿದಂ
ಸವಿಯದಿಂ ನೋಂತವರ್ಗ್ಗ
ಳ್ಭುವನ ಸ್ತುತ ಸ್ವರ್ಗ್ಗ ಮೋಕ್ಷ ಸುಖಮಂ ಪಡೆವರು ||

ಯೀ ಕರ್ಮ್ಮ ನಿರ್ಜ್ಜರೆಯ ನೋಂಪಿಯಂ ನೋಂತವರ್ಗ್ಗಂ ನೋನಿಸಿದವರ್ಗ್ಗ ಕೆಳ್ದವರ್ಗ್ಗಂ ಕ್ರಮದಿಂದೊಡಂಬಟ್ಟವರ್ಗ್ಗಂ ಮಂಗಳ ಮಹಾ ಶ್ರೀ