ನೋಡಮ್ಮಾ ಮುಗಿಲ ತುಂಬ
ಬೆಳ್ ಬೆಳಕಿನ ಮಲ್ಲಿಗೆ
ಹಾರಿಹೋಗಿ ಕಿತ್ತು ತಂದು
ಮುಡಿಸಲೇನು ತುರುಬಿಗೆ?
ನಮ್ಮ ಮನೆಯ ಅಂಗಳದಲಿ
ಅರಳಿ ನಗುವ ಹೂವಿಗಿಂತ
ದೊಡ್ಡವೇನೆ ಅವುಗಳು ?
ಹಸಿರು ನೆಲದ ಮೇಲೆ ಅರಳಿ
ನಗುವ ಬದಲು ಅಷ್ಟು ಮೇಲೆ
ಹೋದವೇಕೆ ಅವುಗಳು ?
ನಾನೆ ದೇವರಾಗಿದ್ದರೆ
ಚಿಕ್ಕೆಯೆಲ್ಲ ನಮ್ಮೂರಿನ
ಮನೆ ಮನೆಯಲಿ ಅರಳುವಂತೆ
ಸೃಷ್ಟಿ ಮಾಡುತಿದ್ದೆನು
ಇಷ್ಟು ತಿಳಿಯಲಿಲ್ಲವೇನೆ
ಜಗವ ಮಾಡಿದಂಥ ದೇವ
ನಿಜವಾಗಿಯು ದಡ್ಡನು !
Leave A Comment