ಪಂಚತಂತ್ರವು ಪ್ರಪಂಚಪ್ರವಾಸ ಮಾಡಿದ ಭಾಗ್ಯಶಾಲಿಯಾದ ಗ್ರಂಥ. ಇದರ ಇತಿಹಾಸವನ್ನು ಕೂಲಂಕಷವಾಗಿ ಕಂಡುಹಿಡಿದ ಮಹನೀಯ ಜರ್ಮನಿ ಪ್ರಾಚ್ಯಜ್ಞನಾಗಿದ್ದ ಜೋನ್ಸ್ ಹರ್ಟೆಲ್ (Johnnes Hertel) ಪ್ರಪಂಚದಲ್ಲಿ ದೊರೆಯುವ ಸುಮಾರು ೫೦ -೬೦ ಭಾಷಾಂತರಗಳಲ್ಲಿ ಸುಮಾರು ಇನ್ನೂರಕ್ಕಿಂತ ಅಕ ರೂಪಾಂತರಗಳು ಸಿಗುತ್ತವೆ ಎಂಬ ಅದ್ಭುತವನ್ನು ಈತ ೧೯೧೪ರಲ್ಲಿ ಜಗತ್ತಿಗೆ ಸಾರಿದನು. ವಿಷ್ಣುಶರ್ಮನ ಪಂಚತಂತ್ರವು ವಿಶ್ವರೂಪ ತಾಳಿ ಹೇಗೆ ಪ್ರಪಂಚದ ಪಶ್ಚಿಮೋತ್ತರ ದೇಶಗಳಿಗೆ ಪ್ರಸಾರವಾಯಿತು ಎಂಬುದನ್ನು ಈತ ಗುರುತಿಸಿದ್ದಾನೆ ಇತ್ತೀಚೆಗೆ ಫ್ರಾಂಕ್ಲಿನ್ ಎಡ್ಗರ್‌ಟನ್ (Franklin Edgarton) ಎಂಬ ವಿದ್ವಾಂಸ Panchatantra Reconstructed (ಪಂಚತಂತ್ರ ಪುನರ್ರಚಿತ) ಎಂಬ ಗ್ರಂಥದಲ್ಲಿ ಪಂಚತಂತ್ರದ ಇನ್ನೊಂದು ಪಾಠ ಸಂಪ್ರದಾಯವು ಭಾರತದಿಂದ ಪೂರ್ವ ದಕ್ಷಿಣ ದೇಶಗಳಿಗೆ ಹೋಯಿತು ಎಂಬುದನ್ನು ಸಾರಿದ್ದಾನೆ.  

ಮೂಲಪಂಚತಂತ್ರವು ಕ್ರಿ.ಶ.ದ ಆರಂಭದ ಶತಮಾನದಲ್ಲಿ  ರಚಿತವಾಗಿದ್ದಿರಬೇಕು ಎಂದು ವಿದ್ವಾಂಸರು ಊಹಿಸಿದ್ದಾರೆ.  ವಿಷ್ಣುಶರ್ಮನ ಪಂಚತಂತ್ರ ಪಶ್ಚಿಮ ದೇಶಗಳಿಗೆ ಹೋದ ಕಥೆ  ಸ್ವಾರಸ್ಯವಾಗಿದೆ ಕ್ರಿ.ಶ. ೫೩೧ ರಿಂದ ೫೭೯ ರವರೆಗೆ ಪರ್ಷಿಯಾ ದೇಶವನ್ನು ಆಳಿದ ದೊರೆ ಖುಸ್ರು  ನೌ ಷೇರ್ವಾನ್ ಎಂಬುವನು ಸತ್ತವರನ್ನು ಬದುಕಿಸುವ ಮುಲಿಕೆಯೊಂದು ಭಾರತದಲ್ಲಿದೆ ಎಂಬುದನ್ನು ಕೇಳಿದನು. ತನ್ನ ಆಸ್ಥಾನ ವೈದ್ಯನಾದ ಬುರ್ಜೆ Buorze ಎಂಬುವನೊಡನೆ ಆಮುಲಿಕೆನ್ನು ತನಗೆ ತಂದು ಕೊಡಬೇಕೆಂದು ಹೇಳಿ ಅವನನ್ನು  ಭಾರತಕ್ಕೆ ಕಳುಹಿಸಿದನು.  ಅವನು ಅದನ್ನು ಭಾರತದಲ್ಲೆಲ್ಲಾ ಹುಡುಕಿ ಅದು ಎಲ್ಲಿಯೂ ಸಿಕ್ಕದಿರಲು ಅನುಭವಿಯಾದ ವೃದ್ಧನೊಬ್ಬನು ಅವನೊಡನೆ ಹೀಗೆ ಹೇಳಿದನು.  ‘ಅಂಥ ಮೂಲಿಕೆ ಯಾವುದು ಇರಲು ಸಾಧ್ಯವಿಲ್ಲ.  ಮೂಢರನ್ನು ಬುದ್ಧವಂತರನ್ನಾಗಿ ಮಾಡಬಲ್ಲ ‘ಪಂಚತಂತ್ರವೇ ಆ ಮೂಲಿಕೆ! ಅದನ್ನು ಕೇಳಿದ ಬುರ್ಜೆ ‘ಪಂಚತಂತ್ರದ ಪ್ರತಿಯೊಂದನ್ನು ಸಂಪಾದಿಸಿಕೊಂಡು ತನ್ನ ರಾಜಭಾಷೆಆದ ಪಹಲ್ವಿಗೆ ಅನುವಾದಿಸಿ ತನ್ನ ದೊರೆಗೆ ‘ಇದು ಸತ್ತವರನ್ನೂ ಎತ್ತಬಲ್ಲ ಭಾರತದ ಮೂಲಿಕೆ ಎಂದು ಅರ್ಪಿಸಿದನು.  ರಾಜನು ಅದನ್ನು ತನ್ನ ಪಹಲ್ವಿಭಾಷೆಯಲ್ಲಿ ‘ಕರಟಕ-ದಮನಕ ಎಂಬ ಹೆಸರಿನಿಂದ ಪ್ರಕಟಿಸಿದನಂತೆ.  ಅದು ಈಗ ದೊರೆಯುವುದಿಲ್ಲ.  ಅದನ್ನು ಆಧರಿಸಿದ ಅನುವಾದಗಳಿಂದ ನಮಗೆ ಈ ವಿಚಾರ ತಿಳಿದುಬರುತ್ತದೆ.

ಈ ಕೃತಿ ಪಾಶ್ಚ್ಯಾತ್ಯ ಜಗತ್ತಿನಲ್ಲಿ ಕ್ರಿ,ಶ. ೬ ನೆಯ ಶತಮಾನದಿಂದ ೧೬ನೆಯ ಶತಮಾನದವರೆಗೆ ಅನೇಕ ಅನುವಾದಗಳಾಗಲು ಪ್ರೇರೇಪಿಸಿತು;  ತುಂಬ ಪ್ರಭಾವವನ್ನು ಬೀರಿತು. ಇವುಗಳಲ್ಲಿ ಪರ್ಷಿಯಾದೇಶದ ದೊರೆಯ ಆಸ್ಥಾನದಲ್ಲಿದ್ದ ಬಡ್  (Bud) ಎಂಬವನು ‘ಕರಟಕ-ದಮನಕ ವನ್ನು ಕಾಲಿಲಾಗ್ ಮತ್ತು ದಮ್ನಾಗ್ (Kalilag And Damnag) ಎಂಬ ಹೆಸರಿನಲ್ಲಿ ಸಿರಿಯಾಭಾಷೆಗೆ ಅನುವಾದಿಸಿದನು.  ಇದರ ಭಾಷಾಂತರಗಳು ಜರ್ಮನ್ ಭಾಷೆಯಲ್ಲಿವೆ.  ಇದು  ನಂತರ  ಎಂಟನೆಯ ಶತಮಾನದಲ್ಲಿ ಅರಬ್ಬೀ ಭಾಷೆಗೆ ಅನುವಾದವಾಯಿತು.  ಅವುಗಳಲ್ಲಿ ಅಬ್ದುಲ್ಲ ಇಬನ್ ಅಲ್ ಮೊಖಾಫೆ   (Abdullah Ibn Al Moqaaff) ಎಂಬವನ ಅನುವಾದವು ಮುಖ್ಯವಾದುದು.

ಈತನ ಕೃತಿ ಪಾಶ್ಚಾತ್ಯ ಪ್ರಪಂಚದಲ್ಲೆಲ್ಲ ಪ್ರಸಾರವಾಯಿತು.  ಇದು ಕ್ರಿಶ. ೧೮೧೬ ರಿಂದ ಇಂಗ್ಲಿಷ್, ಜರ್ಮನ್, ಫ್ರೆಂಚ್, ಡೇನಿಷ್, ರಷ್ನ್, ಇಟ್ಯಾಲಿಯನ್, ಸ್ಪ್ಯಾನಿಷ್, ಜೆಕ್ ಮೊದಲಾದ ಭಾಷೆಗಳಿಗೆ ಅನುವಾದಗೊಂಡಿತು.  ಇದು ಹನ್ನೊಂದನೆಯ ಶತಮಾನದಲ್ಲೇ ಗ್ರಿಕ್ ಭಾಷೆಯಲ್ಲಿ ಬಂದು ಅದರಿಂದ ಲ್ಯಾಟಿನ್, ಸ್ಲಾವೋನಿಕ್, ಹೀಬ್ರೂ ಭಾಷೆಗಳಿಗೆ ಅನುವಾದಗೊಂಡಿತು.  ಕ್ರಿ.ಶ. ೧೫೭೦ ರಲ್ಲಿ ಸರ್ ಥಾಮಸ್ ನಾಥ್ (Sir Thomas Nath) ಎಂಬುವನು ‘ಮೊರೇಲ್ ಫಿಲಸೋಫಿಆ ಆಫ್ ಡೋಣಿ ಎಂಬುದಾಗಿ ಇಂಗ್ಲಿಷ್ ಭಾಷೆಯಲ್ಲಿ ಮೊತ್ತ ಮೊದಲು ಪಂಚತಂತ್ರವನ್ನು ಅನುವಾದಿಸಿದನು.

ಪಂಚತಂತ್ರದ ಇಂನ್ನೊದು ಶಾಖೆಯು ಪರ್ಷಿಯನ್ ಭಾಷೆಯಲ್ಲಿ ‘ಅನ್ವಾರೆ ಸುಹೈಲಿ ಇಂಬ ಹೆಸರಿನಿಂದ ಹದಿನೈದನೆಯ ಶತಮಾನದಲ್ಲಿ ಪ್ರಪಂಚ ಪ್ರಸಿದ್ಧವಾಯಿತು. ತಮಾಷೆಯೆಂದರೆ ಇದು ಮಧ್ಯ ಏಷ್ಯದ ನೂರಾರು ಭಾಷೆಗಳಲ್ಲಿ ಅನುವಾದವಾಗಿ ಪಂಚತಂತ್ರದ ಮಾತೃಭೂವಿಯಾದ ಭಾರತಕ್ಕೇ ಬಂದಿದೆ.  ‘ಅನ್ವಾರೆ ಸುಹೈಲಿ ಹದಿನಾರನೆಯ ಶತಮಾನದಲ್ಲಿ ಟರ್ಕಿಷ್ ಭಾಷೆಯಲ್ಲಿ ‘ಹುಮಾಯೂನ್ ನಾಮಾ ಎಂಬ ಹೆಸರಿನಿಂದ ಪ್ರಸಿದ್ಧವಾಯಿತು.  ಇದೂ ಮತ್ತೆ ಯೂರೋಪಿನ್ ಭಾಷೆಗಳಿಗೆ ಅನುವಾದಗೊಂಡಿತು.

ಅವುಗಳಲ್ಲಿ ಫ್ರೆಂಚ್ ಅನುವಾದ ಮುಖ್ಯವಾದುದು.  ‘ಅನ್ವಾರೆ ಸುಹೈಲಿಯ ಇನ್ರ್ನೆಂದು ಶಾಖೆ ಮಂಗೋಲಿಯನ್ ಭಾಷೆಗಳಿಗೆ ಹರಿದುಬಂತು.  ಹೀಗೆ ಪಂಚತಂತ್ರ ಪಹಲ್ವಿಯ ಭಾಷಾಂತರದಿಂದ ಸುಮಾರು ಹದಿಮೂರು ಶತಮಾನಗಳಲ್ಲಿ ದೇಶದೇಶಾಂತಗಳೆಲ್ಲೆಲ್ಲ ಭಾಷಾಂತರದಿಂದ ಮರುಭಾಷಾಚಿತರ ಗದ್ಯದಿಂದ ಪದ್ಯ, ಪದ್ಯದಿಂದ ಗದ್ಯ ಅಲ್ಲದೆ ಆಫ್ರಿಕಾಖಂಡದ ಬಹುಭಾಗವನ್ನಷ್ಟೇ ಅಲ್ಲದೆ ಆಫ್ರಿಕಾಖಂಡದ ಬಹುಭಾಗದಲ್ಲಿಯೂ ವಿವಿಧ ಹೆಸರುಗಳಿಂದಲೂ ರೂಪಗಳಿಂದಲೂ ಸಂಚಾರಮಾಡಿ ಪುನಃ ಭಾರತವನ್ನೇ ಪ್ರವೇಶಿಸಿರುವುದು ಬಹು ಸೋಜಿಗದ ಸಂಗತಿ. ಇವಿಷ್ಟು ಭಾರತವನ್ನೇ ಪ್ರವೇಶಿಸಿರುವುದು ಬಹು ಸೋಜಿಗದ ಸಂಗತಿ. ಇವಿಷ್ಟು ವಿಷ್ಣುಶರ್ಮನ ಪಂಚತಂತ್ರದ ಪ್ರವಾಸದ ಒಂದು ಸ್ಥೂಲ ಪರಿಚಯ.

ಪಂಚತಂತ್ರದ ಇನ್ನೊಂದು ಸಂಪ್ರದಾಯ ವಸುಭಾಗಭಟ್ಟನಿಂದ ಆರಂಭವಾಯಿತೆಂದು ಆಗಲೇ ಪ್ರಸ್ತಾಪಿಸಲಾಗಿದೆ.  ಇದು ಭಾರತದಿಂದ ದಕ್ಷಿಣ ಪೂರ್ವ ದೇಶಗಳಿಗೆ ಪ್ರವಾಸಹೋಯಿತು.

ಇದರ ಕನ್ನಡದ ಅವತಾರ ಕ್ರಿ.ಶ. ೧೦೩೧ ರಲ್ಲಿ ದುರ್ಗಸಿಂಹನೆಂಬ ಬ್ರಾಹ್ಮಣ ನಿಂದ ಆಯಿತು. ಈ ವಸುಭಾಗಬಟ್ಟ ಯಾರು, ಏನು, ಎಲ್ಲಿದ್ದ, ಯಾವಾಗ ಇದ್ದ ಎಂಬ ವಿಚಾರವು ವಿಷ್ಣುಶರ್ಮನ ವಿಚಾರದ ಹಾಗೆಯೇ ಒಗಟಾಗಿದೆ. ವಸುಭಾಗಭಟ್ಟನು ಯಾವ ಭಾಷೆಯಲ್ಲಿ ಪಂಚತಂತ್ರವನ್ನು ಬರೆದ ಎಂಬುದೂ ಗೊತ್ತಿಲ್ಲ. ವಿಷ್ಣುಶರ್ಮನ  ಹಾಗೆ ಇವನೂ ಸಂಸ್ಕತದಲ್ಲಿಯೆ ಬರೆದಿರಬಹುದೆಂದು ವಿದ್ವಾಂಸರು ಊಹಿಸುತ್ತಾರೆ. ತಾನು ವಸುಭಾಗಭಟ್ಟನ ಪಂಚತಂತ್ರವನ್ನು ಆಧರಿಸಿ ಬರೆದೆನೆಂದು ದುರ್ಗಸಿಂಹನು ಹೀಗೆ ಹೇಳುತ್ತಾನೆ: ಪುಷ್ವದಂತನೆಂಬ ಗಣಪ್ರಧಾನನು ಮಾನವಲೋಕದಲ್ಲಿ ಹುಟ್ಟಿ ಗುಣಾಢ್ಯನೆಂಬ ಸತ್ಕವಿಯಾಗಿ ಶಾಲಿವಾಹನನೆಂಬ ಚಕ್ರವರ್ತಿಯ ಕವಿಯಗಿದ್ದು ಹರನು ಗಿರಿಸುತೆಗೆ ಹೇಳಿದ ಕತೆಗಳನ್ನು ಪೆಶಾಚಿಕ ಭಾಷೆಯಲ್ಲಿ ಬೃಹತ್ಕಥೆಗಳನ್ನಾಗಿ ಮಾಡಿ ಹೇಳಲು ಅವುಗಳನ್ನು ವಸುಭಾಗಬಟ್ಟನು ಕೇಳಿ ಕಥಾಸಮುದ್ರದಲ್ಲಿ ಪಂಚರತ್ನವಾಗಿರುವ ಈ ಐದು ಕಥೆಗಳನ್ನು ಆಯ್ದು*ಪಂಚತಂತ್ರ ಎಂದು ಹೆಸರಿಟ್ಟು ಸಮಸ್ತ ಜಗತ್ತಿನ ಜನೋಪಕಾರಕ್ಕಾಗಿ ಹೇಳಿದನು. ವಸುಧಾದಿಪರಿಗೆ ಹಿತವೂ ಅಖಿಲ ವಿದ್ವಾಂಸರಿಂದ ಸ್ತುತ್ಯವೂ ಅದ ಅಂಥ ವಸುಭಾಗಬಟ್ಟನ ಕೃತಿಯನ್ನು ಹೊಸತಾಗಿ ಕನ್ನಡದಲ್ಲಿ ವಿರಚಿಸುತ್ತೆವೆ.

ದುರ್ಗಸಿಂಹನ ಕನ್ನಡ ಪಂಚತಂತ್ರವನ್ನು ೧೮೯೮ರಲ್ಲಿ ಮೊತ್ತ ಮೊದಲು ಸಂಪಾದಿಸಿ ಪ್ರಕಟಿಸಿದ ಶ್ರೀ ಎಸ್.ಜಿ.ನರಸಿಂಹಚಾರ‍್ಯರು ಶ್ರೀ ಮ.ಅ.ರಾಮಾನುಜಯ್ಯಂಗಾರರೂ ತಮ್ಮ ಗ್ರಂಥದ ಪೀಠಿಕೆಯಲ್ಲಿ ಹೀಗೆ ಹೇಳಿದ್ದಾರೆ: ಈ ಪಂಚತಂತ್ರಕ್ಕೂ ಪ್ರಕೃತದಲ್ಲಿ ಪ್ರಚಾರದಲ್ಲಿರುವ ವಿಷ್ಣುಶರ್ಮನ  ಪಂಚತಂತ್ರಕ್ಕೂ ತಂತ್ರಗಳ ಹೆಸರುಗಳಲ್ಲಿಯೂ ಅಂತರಾಳಿಕ ಕಥಾಭಾಗಗಳಲ್ಲಿಯೂ ಉದ್ದೃತವಾಗಿರುವ ಶ್ಲೋಕಗಳಲ್ಲಿಯೂ ಹಲವು ಭೇದಗಳಿವೆ. ಈ ಕವಿ  ವಿಷ್ಣುಶರ್ಮನ  ಪ್ರಸಿದ್ದವಾದ ಪಂಚತಂತ್ರವನ್ನು ಬಿಟ್ಟು ವಸುಭಾಗಭಟ್ಟನ ಪಂಚತಂತ್ರದ ವಿಚಾರವಾಗಿ  ಏನು ತಿಳಿಯದಿರುವುದೇ ಹೀಗೇ ಬರೆಯಲು ಕಾರಣ. ಅಲ್ಲಿಂದಿಚೇಗೆ ವಿದ್ವಾಂಸರ ಸಂಶೋಧನೆಗಳ ಫಲವಾಗಿ ವಸುಭಾಗಭಟ್ಟನ ಪಂಚತಂತ್ರದ ಸಂಪ್ರದಯವೇ  ಬೇರೆ  ಎಂದು ಅದು ಪೊರ್ವ ದಕ್ಷಿಣ ಪ್ರಫಂಚಕ್ಕೆ ವ್ಯಾಪಿಸಿತೆಂದೂ ತಿಳಿದುಬಂತು.

ಜಾವಾದ್ವೀಪದಲ್ಲಿ ಇದು ತಂತ್ರೀ ಎಂಬ ಹೆಸರಿನಿಂದ ಪ್ರಸಿದ್ದವಾಗಿದೆ. ಲೇಯಾಸ್ ದೇಶದ ಪಂಚತಂತ್ರವನ್ನು ತಂತೈ ಎಂದು ಕರೆಯುತ್ತಾರೆ. ಥಾಯ್ ದೇಶದಲ್ಲಿ ಇದನ್ನು ತಂತ್ರೈ ಎಂದು ಕರೆಯಲಾಗಿದೆ.  ಇಲ್ಲೆಲ್ಲ ಕಂಡುಬರುವ ವಸುಫಖ  ಎಂಬ ಅರ್ಥವಾಗದ ಮಾತು ವಸುಭಾಗಭಟ್ಟನ ಹೆಸರೇ  ಎಂಬುದನ್ನು ನಿರ್ಣಯಿಸಲಾಗಿದೆ.  ಇವಲ್ಲದೆ ಜಪಾನಿ ಭಾಷೆಗೊ ಇದು ಅನುವಾದವಾಗಿ ಹೋಗಿದೆ. ಭಾರತದಲ್ಲಿ*ಹೆಚ್ಚಾಗಿ ಬಳಕೆಯಲ್ಲಿರುವುದು ವಿಷ್ಣುಶರ್ಮನ  ಪಂಚತಂತ್ರ. ವಸುಭಾಗಭಟ್ಟನ ಪಂಚತಂತ್ರದ ರೂಪಾಂತರಗಳು ಭಾರತದ ಪೂರ್ವದಕ್ಷಿಣ ದೇಶದಲ್ಲಿ. ಕಂಡುಬರುವುದರಿಂದ ಅವನು ದಾಕ್ಷಿಣಾತ್ಯನಾಗಿದ್ದಿರಬಹುದು ಎಂದು ಊಹಿಸುತ್ತಾರೆ.

ಕನ್ನಡ ನಾಡಿನಲ್ಲಿ ಪಂಚತಂತ್ರವನ್ನು ಕುರಿತು ಆಳವಾದ ಆಧ್ಯಯನವನ್ನು ಮಾಡಲು ತಮ್ಮ ಜೀವಮಾನವನ್ನೇ ಮುಡಿಪಿಟ್ಟವರು ಡಾ. ಎ. ವೆಂಕಟಸುಬ್ಬಯ್ಯ ನವರು. ಪಂಚತಂತ್ರದಲ್ಲಿರುವ ಕಥೆಗಳ ಸಂಖ್ಯೆಯನ್ನು ಅವುಗಳಲ್ಲಿರುವ ಸಾಮ್ಯ ವೈಷಮ್ಯಗಳನ್ನೂ ಅಭ್ಯಾಸಿಸಿ ಅವರು ದುರ್ಗ ಸಿಂಹನ ಪಂಚತಂತ್ರದಲ್ಲಿ ಒಟ್ಟು ೬೫ ಕಥೆಗಳಿವೆ ಎಂದು ನಿರ್ಧರಿಸಿದ್ದಾರೆ ಥಾಯ್ಲೆಂಡಿನ ಪಂಚತಂತ್ರದಲ್ಲಿ ೩೬೦ ಕಥೆಗಳಿವೆಯಂತೆ.ಜಾವಾದೇಶದ ಪಂಚತಂತ್ರದಲ್ಲಿಯು ೩೬೦ ಕಥೆಗಳಿವೆಯಂತೆ. ವಿಷ್ಣುಶರ್ಮ ದುರ್ಗಸಿಂಹರ ೬೫ ಕಥೆಗಳಿರುವುದರಿಂದ ಮೂಲ ಪಂಚತಂತ್ರದಲ್ಲಿ ಕಥೆಗಳಿದ್ದಿರಬಹುದು ಎಂದು ವಿದ್ವಾಂಸರು ಊಹಿಸಿದ್ದಾರೆ. ದುರ್ಗ ಸಿಂಹನ ಪಂಚತಂತ್ರವು ವಸುಭಾಗಭಟ್ಟನ ಪಂಚತಂತ್ರದ ನೇರವಾದ ಅನುವಾದವಲ್ಲವೆಂಬುದು ‘ಪೊಸತಾಗಿರೆ ಎಂಬ ಅವನ ಮಾತಿನಿಂದ ತಿಳಿಯಬಹುದು.