ಪಂಚತಂತ್ರವು ಗದ್ಯಭೂಯಿಷ್ಠವಾದ ಚಂಪೂರೂಪವಾಗಿದೆ. ಇದರಲ್ಲಿ

೧. ಭೇದಪ್ರಕರಣ ವರ್ಣನಂ

೨. ಪರೀಕ್ಷಾ ವ್ಯಾವರ್ಣನಂ

೩. ವಿಶ್ವಾಸ ಪ್ರಕರಣ ವರ್ಣನಂ

೪. ವಂಚನಾ ಪ್ರಕರಣ ವರ್ಣನಂ

೫. ಮಿತ್ರಕಾರ್ಯ ಪ್ರಕರಣಂ

ಎಂಬ ಹೆಸರಿನ ಐದು ತಂತ್ರಗಳಿವೆ. ಪಂಚತಂತ್ರದ ಕಥೆಗಳು ಹುಟ್ಟಿದ ವಿಚಾರವನ್ನು ಈ ರೀತಿಯಾಗಿ ಹೇಳಿದ್ದಾನೆ :

“ರಜತಗಿರಿಯಲ್ಲಿ ಪ್ರೀತಿಯಿಂದ ಗಿರಿಜಾಪತಿಯಾದ ಶಿವನೂ ಶಂಕರನೂ ಭಾಗೀರಥಿಯ ವಲ್ಲಭನೂ ದೇವದೇವನೂ ವರದನೂ ಸಮಸ್ತದೇವತೆಗಳ ರತ್ನಕಿರೀಟಗಳು ತಾಗಿದ ಪಾದಕಮಲವುಳ್ಳವನೂ ಆದ ಶಿವನು ಪ್ರಸಿದ್ದವಾದ ಈ ಕಥೆಯನ್ನು ಹೇಳುವುದಕ್ಕಾಗಿ ಅರ್ಧನಾರೀಶ್ವರನಾಗಿದ್ದನು. ಒಂದು ದಿನ ಪರಮೇಶ್ವರನು ಮೇರು ಪರ್ವತದ ಮೇಲೆ ಅತ್ಯಂತ ಸಂತೋಷದಿಂದ ಎಡದಲ್ಲಿ ಬ್ರಹ್ಮನು ಬಲದಲ್ಲಿ ವಿಷ್ಣುವು ಹಿಂದೆ ಮೂವತ್ತುಮೂರು ಕೋಟಿ ದೇವತೆಗಳೂ ಮುಂದೆ ನಂದೀಶ ವೀರಭದ್ರರೇ ಮೊದಲಾದ  ಗಣಗಳ ಒಡೆಯರೂ ತೊಡೆಯ ಮೇಲೆ ಗೌರಿಯೂ ಜಡೆಯಲ್ಲಿ ಗಂಗೆಯೂ ಸಹಿತವಾಗಿ ಓಲಗಗೊಟ್ಟು ಕುಳಿತಿದ್ದನು. ಹಾಗಿದ್ದ ಪರಮೇಶ್ವರನಿಗೆ ಗೌರಿಯು ಕರಕಮಲಗಳನ್ನು ಮುಗಿದು ದೇವಾ. ನೀವು ನನಗೆ ಒಂದು ಅಪೂರ್ವವಾದ ಕಥೆಯನ್ನು ಹೇಳಬೇಕು ಎನ್ನಲು ಹರನು ಮುಗುಳ್ನಕ್ಕು ಪಾರ್ವತಿಗೆ ಅಪೂರ್ವವಾದ ಕಥೆಗಳನ್ನು ಹೇಳುತ್ತಿದ್ದನು. ಆಗ ಆ ಕಥಾಗೋಷ್ಠಿಯಲ್ಲಿ ಪುಷ್ವದಂತನೆಂಬ ಗಣಪ್ರಧಾನನು ಇದ್ದು ಎಲ್ಲವನ್ನೂ ಕೇಳಿ ಆತನು ಏನೋ ಒಂದು ಕಾರಣದಿಂದ ಮನುಷ್ಯಲೋಕದಲ್ಲಿ ಹುಟ್ಟಿ ಗುಣಾಢ್ಯನೆಂಬ ಸತ್ಕವಿಯಾಗಿ ಶಾಲಿವಾಹನನೆಂಬ ಚಕ್ರವರ್ತಿಯ ಕವಿಯಾಗಿದ್ದು ಹರನು ಗೌರಿಗೆ  ಹೇಳಿದ ಕಥೆಗಳನ್ನು ಪೆಶಾಚಿಕ ಭಾಷೆಯಲ್ಲಿ ಬೃಹತ್ಕಥೆಗಳನ್ನಾಗಿ ಮಾಡಿ ಹೇಳಿದನು. ಅವುಗಳನ್ನು ವಸುಭಾಗಭಟ್ಟನು ಕೇಳಿ ಆ ಕಥಾ ಸಮುದ್ರದಲ್ಲಿ ಪಂಚರತ್ನವಾದ ಐದುಕಥೆಗಳನ್ನು ಆರಿಸಿ ಪಂಚತಂತ್ರ ಎಂದು ಹೆಸರಿಟ್ಟು ಸಮಸ್ತ ಜನರ ಉಪಕಾರಕ್ಕಾಗಿ ಹೇಳಿದನು. ಅದರಿಂದ, ರಾಜರಿಗೆ ಹಿತಕರವೂ ಸಮಸ್ತ ಪಂಡಿತರಿಂದ ಪ್ರಶಂಸಿತವೂ ಅದ ವಸುಭಾಗಭಟ್ಟನ ಕೃತಿಯನ್ನು  ಪ್ರಪಂಚದಲ್ಲಿ ಹೊಸತಾಗುವಂತೆ ಪಂಚತಂತ್ರವನ್ನು ಕನ್ನಡದಲ್ಲಿ ವಿರಚಿಸುವೆನು.

ಗ್ರಂಥದ  ಆದಿಯಲ್ಲಿ ವಿಷ್ಣುವನ್ನು ಮೊತ್ತಮೊದಲು ಸ್ತುತಿಸಿ ಬಳಿಕ ಈಶ್ವರ, ಬ್ರಹ್ಮ, ಸರಸ್ವತಿ, ಚಂದ್ರ, ಮನ್ಮಥ, ಸೂರ್ಯ, ಗಣಪತಿ, ದುರ್ಗೆ ಇವರನ್ನು ಅನುಕ್ರಮವಾಗಿ ಸ್ತುತಿಸಿದ್ದಾನೆ. ಪ್ರತಿಯೊಂದು ತಂತ್ರದ ಕೊನೆಯಲ್ಲೂ ಈ ಗದ್ಯಭಾಗವಿದೆ :

“ಇದು ವಿನಮದಮರರಾಜಮೌಳಿಮಾಣಿಕ್ಯಮರೀಚಿಮಂಜರೀ ಪುಂಜರಂಜಿತ ಭಗವದ್ಬವಾನೀವಲ್ಲಭಚರಣಸರಸಿರುಹಷಟ್ಚರಣಂ ಶ್ರೀಮನ್ಮಹಾ ಸಂವಿಗ್ರಹಿ ದುರ್ಗಸಿಂಹ ವಿರಚಿತಮಪ್ಪ ಪಂಚತಂತ್ರದೊಳ್ ….. ಪ್ರಕರಣಂ …… ತಂತ್ರಂ ಸಮಾಪ್ತಂ.

ಗ್ರಂಥದ ಅಂತ್ಯದಲ್ಲಿ ಎರಡು ವೃತ್ತಗಳಲ್ಲಿ ತನ್ನ ಕಾವ್ಯದ ಫಲಶ್ರುತಿಯನ್ನು ಹೀಗೆ ಹೇಳಿದ್ದಾನೆ :

ಪದವಛಿ ಕೊಳ್ಗೆ ಪಿರಿದುಂ ಬೆಳಗುರ್ವರೆಯಂ ಧರಾಪರ್
ಮುದದೆ ಸಧರ್ಮದಿಂದೆ ಪರಿಪಾಲಿಸುತಿರ್ಕೆ ಸಮಸ್ತವೇದ ಶಾ-
ಸ್ತ್ರದ ವಿಯಿಂದಿಳಾಮರಜನಂ ಸುರಪ್ರಜೆಯನೊಲ್ದು ಮಾಛ್ಕಿ
ಸಂಪದದೊಳನೂರಕ್ಕೆ ಪರದರ್ ಸಲೆ ಧಾರ್ಮಿಕರಕ್ಕೆ ಪಾದಜರ್ ||

 

ವಿಪುಳಶ್ರೀಸುಳಮ ಜೀವನಿವಹಕ್ಕೆಲ್ಲಂ ಕುಲಸ್ತ್ರೀಜನ
ಕ್ಕುಪಮಾತಿತಪತಿವ್ರತಾಗುಣದಿಂದೊಪ್ಪಕ್ಕೆವಾಗ್ದೇವಿ ಕೂ
ರ್ತುಪಯೊಜಾಸನನಚಿತೆಮಾಛ್ಕಿಕಳೆಯೊಳ್‌ವಿದ್ವಜ್ಜನಾನೀಕಮಂ
ನೃಪಗೋಬ್ರಾಹ್ಮಣ ಶಾಂತಿಯಕ್ಕೆ ನೆಗ್ಗಳ್ಗೀ ಕಾವ್ಯಂ ಧರಾಚಕ್ರದೊಳ್||

 

ಪಂಚತಂತ್ರದ ಕಥಾಮುಖವಾದ ನರಿಯ ಕಥೆಯೇ ಎಂಥವರ ಕುತೂಹಲವನ್ನು ಕೆರಳಿಸುವಂತಿದೆ. ಅದರಿಂದಲೇ ಆ ಮೂವರು ಮೂರ್ಖರಾಜಕುಮಾರರ ಮನಸ್ಸನ್ನು ಸೆರೆಹಿಡಿದು ವಸುಭಾಗಭಟ್ಟನು ಅವರನ್ನು ಪಳಗಿಸುವಂತಾದುದು.ಕತೆಗಳನ್ನು ಅಡಕಲು ಪಾತ್ರೆಗಳಚಿತೆ ಒಂದರೊಳಗೆ  ಒಂದನ್ನಿಟ್ಟು ನಮ್ಮ ಕುತೂಹಲದ ರಸ ಎಂದೂ ಬತ್ತಿಹೋಗದಂತೆ ನೋಡಿಕೊಂಡಿರುವುದು ದುರ್ಗಸಿಂಹನ ಜಾಣ್ಮಗೆ ಸಾಕ್ಷಿ ಯಾಗಿದೆ.

ದುರ್ಗಸಿಂಹನ ಕೃತಿ ಚಂಪೂ ರೀತಿಯಾದರೂ ಇಲ್ಲಿ ಗದ್ಯವೇ ಪ್ರಧಾನವಾದುದು. ಅವನ ಪದ್ಯಗಳಿಗಿಂತ ಗದ್ಯಭಾಗವೇ ಹೃದ್ಯವಾದುದು. ಅದರಿಂದ ಅವನ ಶೈಲಿಯನ್ನು ನಾವು ವಿವೇಚಿಸಬೇಕಾದಲ್ಲಿ ಅವನ ಗದ್ಯದ ಕಡೆಗೆ ವಿಶೇಷವಾಗಿ ದೃಷ್ಠಿ  ಹರಿಸಬೇಕು ರಾಮಾಯಣ, ಮಹಾಭಾರತ, ಭಾಗವತ, ಭಗವದ್ಗಿತೆಗಳಿಂದ ಅವನು ತನ್ನ ಕಥೆಗಳಲ್ಲಿ ಬರುವ ಪಾತ್ರಗಳು ಹೇಳುವ ಮಾತಿನ ಸಮರ್ಥನೆಗೆ ಶ್ಲೋಕಗಳನ್ನು ಮಂಡಿಸುತ್ತಾನೆ. ಇಂಥ ಮೋಸ ಮಾಡುವ ಕರಟಕ ದವನಕಗಳೇ ಈರೀತಿ ಶ್ಲೋಕಗಳನ್ನು ಉದ್ದರಿಸಿ ಮಾತನಾಡುವುದು ಹೆಚ್ಚು, ಇಂದು ಒಂದು ರೀತಿಯ ಆಷಾಢಭೂತಿತನದ ವಿಡಂಬನೆಯೂ ಇರಬಹುದು ಎಂಬಂತೆ ಅವುಗಳನ್ನು ಓದುವಾಗ ಅನ್ನಿಸುವುದುಂಟು. ಈ ಶ್ಲೋಕಗಳನ್ನು ಸಾರ್ವಕಾಲಿಕ ಸತ್ಯಧರ್ಮ ಗಳ ದೀಪಸ್ತಂಭಗಳಂತೆ ಈ ಗ್ರಂಥದಲ್ಲಿ ವಿರಾಜಿಸಿ ನಿಂತಿವೆ. ಬಹುಶ: ಈ ಶ್ಲೋಕಗಳನ್ನು ತೆಗೆದು ಹಾಕಿದರೆ ಪಂಚತಂತ್ರ ಕಾವ್ಯ ಶೋಭಿಸದು : ಮಹತ್ವ ಬಾರದು. ಉದಾ:

೧. ಸ್ವಭವನುವರ್ತಂತೇ ಪಾಂಡಿತ್ಯಂ ಕಿಂ ಕರಿಷ್ಯತಿ ||

೨. ಪ್ರಾಣಾಘಾತಾನ್ನಿವೃತ್ತಿ; ಪರಧನಹರಣೇ ಸಂಯಮ: ಸತ್ಯವಾಕ್ಯಂ
ಕಾಲೇ ಶಕ್ತ್ಯಾಪ್ರದಾನಂ ಯುವತಿಜನಕಥಾ ಮೂಕಭಾವ; ಪರೇಷಾಂ ತೃಷಾ ಸ್ರೋತೋ
ವಿಭಂಗೋ ಚ ಗುರುಷು ವಿನಯ :
ಸರ್ವಭೂತಾನುಕಂಪಾ ಸಾಮಾನ್ಯಂ ಸರ್ವಶಾಸ್ತ್ರೇಷ್ವನುಪಹತ
ವಿ ಶ್ರೇಯಸಾಮೇಷಪಂಥಾ ;

೩. ಅಸ್ಮಿನ್ಮಹತ್ಯಂಡಕಟಾಹ ಮಧ್ಯೇ ಸೂರ್ಯಗ್ನಿ ನಾ ರಾತ್ರಿ ದಿನೇಂಧ
ನೇನ ಮಾಸರ್ತು ದವೀ ಪರಿಘಟ್ಟನೇನ ಭೂತಾನಿ ಕಾಲ: ಪಚತೀತಿ ವಾರ್ತಾ ||

೪. ಪಂಚಮೇಹನಿ ಷಷ್ಠೇರಾ ಶಾಕಂ ಪಚತಿ ಯೋ ಗೃಹೇ
ಅನೃಣೋಹ್ಯಪರಪ್ರೇಷ್ಯ: ಸ ರಾತ್ರಿಂಚರ ಮೋದತೇ ||

೫. ಏಕಾ ಭಾರ್ಯಾಃ  ತ್ರಯಃ ಪುತ್ರಾ ದ್ವೌಹಲೌ ದಶಧೇನವ:
ಮದ್ಯರಾಷ್ರಂತು ಸುಕ್ಷೇತ್ರಂ ಅಸ್ತಿ ಚೇದತಿ ಸೇವತೇ||

೬. ಶ್ರೂಯತಾಂ ಧರ್ಮ ಸರ್ವಸ್ವಂ ಶ್ರುತ್ವಾ ಚೆವಾಧಾರ್ಯತಾಂ
ಆತ್ಮನ; ಪ್ರತಿಕೂಲಾನಿ ಪರೇಷಾಂ ನ ಸಮಾಚರೇತ್

೭. ಬ್ರಾಹ್ಮಣಾನ್ನವಮನ್ಯೇತ ನಾವಮನ್ಯೇತ ದೇವತಾ;
ಸರ್ವದೇವಮಯೋ ವಿಪೋ ನ ತದ್ವಚನಮನ್ಯಥಾ ||

೮. ಆಶಾ: ಪೂರಯಿತುಂ ಗುಣಾನ್ ಪ್ರಕಟಿತಂ ಮಾನೋನ್ನತಿಂ
ರಕ್ಷಿತುಂ ಕಾರ್ಯಂ ಸಾಧಯಿತುಂ ಖಲಾನ್ ಸ್ಕಲಯಿತುಂ

ಲಕ್ಮ್ಷೀಂ ಸಮಾಸೇವಿತುಂ
ಸ್ವಪ್ರಾಣೃ ಪರಿಕಲ್ಪಿತಾಂಜಲಿ ವಿಕ್ರೀಯ ದೇಹಸಿತಿಂ ಸಂತೋ
ಭೂಪತಿಮಾಶ್ರಯಂತಿ ನ ಪುನರ್ದೆನ್ಯಾಯ ದು:ಖಾಯ ಚ||

೯. ಉದ್ಯೋಗೀ ಪ್ರಾಪ್ಯ್ನಯಾದರ್ಥಂ ಯಶೋ ವಾ ಮೃತ್ಯುದೇವ
ವಾ ಮುತ್ಯುಮೇವ ನಿರುದ್ಯೋಗೀ ನ ಯಶೋ ನಾರ್ಥಸಂಪದ: ||

೧೦. ವರಮಗ್ನೌ ಪ್ರದೀಪ್ತೇತು ಪ್ರಾಣಾನಾಂ ಪರಿವರ್ಜನಂ ನ ಚಾರಿ
ಜನಸಂಸರ್ಗೇ ಮುಹೂರ್ತಾಮಪಿ ಸೇವನಂ ||

೧೧.ಧರ್ಮಾರ್ಥಂ ಕ್ಷೀಣಕೋಶಸ್ಯ ಕೃಶತ್ವಮತಿಶೋಭತೇ ಸುರೆಃ ಪೀತಾವಶೇಷಸ್ಯ
ರೇಖಾ        ಹಿಮರುಚೇರಿವ |

೧೨. ಉದಯೇ ಸವಿತಾ ರಕ್ತೋರಕ್ತಾಶ್ಚಾಸ್ತಮಯೇ ತಥಾ
ಸಂಪತ್ತೌಚ ವಿಪತ್ತೌಚ ಮಹತಾಮೇಕರೂಪತಾ ||

೧೩. ಪೌಲಸ್ತ್ಯಃ ಕಥಮನ್ಯದಾರಹರಣೇ ದೋಷಂ ನ ವಿಜ್ಞಾತವಾನ್
ಕಾಕುತ್ಸ್ಥೇನ ಹೇಮಕಾಂತಿ ಹರಿಣಸ್ಯ ಸಂಭವೋ ಲಕ್ಷಿತಃ
ಅಕ್ಷಾಣಾಂ ನ ಯುಷ್ಠಿರೇಣ ವಿಷಣೊಮೋ ದೃಷ್ಟೋ ವಿಪಾಕಃ ಕಥಂ
ಪ್ರತ್ಯಾಸನ್ನವಿಪತ್ತಿಮೂಢಮನಸಾಂ ಪ್ರಾಯೋ ಮತಿಃ ಕ್ಷೀಯತೇ ||

೧೪. ಸುಲಭಾಃ ಪುರುಷಾ ರಾಜನ್ ಸತತಂ ಪ್ರಿಯವಾದಿನಃ
ಅಪ್ರಿಯಸ್ಯ ಚ ಪಥ್ಯಸ್ಯ ವಕ್ತಾ ಶ್ರೋತಾ ಚ ದುರ್ಲಭಃ ||

ಈ ಶ್ಲೋಕಗಳನ್ನು ದುರ್ಗಸಿಂಹನು ಎಲ್ಲಿಂದ ತೆಗೆದುಕೊಂಡನು  ಎಂದು ಸ್ಪಷ್ಟವಾಗಿ ಹೇಳುವುದು ಕಷ್ಟ. ಸುಮಾರು ಅರ್ಧಾಂಶದಷ್ಟಕ್ಕೆ ಅಕರಗಳು ಸಿಗುತ್ತವೆ. ಉಳಿದವನ್ನು  ಎಲ್ಲಿಂದ  ಎತ್ತಿಕೊಂಡನೆಂಬುದಕ್ಕೆ ಸಂಶೋಧನೆಯ ಅವಶ್ಯಕತೆ ಇದೆ. ಇವನ್ನು ನೋಡುವಾಗ ಒಂದು ವಿಚಾರ ನೆನಪಿಗೆ ಬರುತ್ತದೆ. ನವ್ಯಪಂಥದ ಕಾವ್ಯ  ಎಂದು ಹೇಳಲಾದ ಕಾವ್ಯರೀತಿಯಲ್ಲಿ ಉದ್ಧೃತಗಳನ್ನು ಬಳಸುವುದಿದೆ. ಟಿ. ಎಸ್.  ಎಲಿಯಟ್ ತನ್ನ ವೇಸ್ಟ್ ಲ್ಯಾಂಡ್ ಕವನದಲ್ಲಿ ೞಈZಠಿಠಿZ ಈZqsZbeqZಞ ಈZಞqsZಠಿZ ಖeZಠಿಜಿe oeZಠಿಜಿe oeZಠಿಜಿeೞಎಂಬ ಸಾಲುಗಳನ್ನು ಪರಿಣಾಮಕಾರಿಯಾಗಿ ಬೃಹದಾರಣ್ಯಕ ಉಪನಿಷತ್ತಿನಿಂದ ತೆಗೆದು ಉದ್ಧರಿಸಿದ್ದಾನೆ. ಈ ಉದ್ಧರಿಸುವ ಕ್ರಮ ನಮ್ಮ ಕವಿಗಳಿಗೇನೂ ಹೊಸತಲ್ಲ  ಎಂಬುದನ್ನು ದುರ್ಗಸಿಂಹ, ಬಸವಣ್ಣ, ಶಿವಶರಣರು, ದಾಸರು, ಸರ್ವಜ್ಞರಂಥ ಕವಿಗಳ ಕೃತಿಗಳನ್ನು ಕಂಡರೆ ತಿಳಿಯುವುದು. ದುರ್ಗಸಿಂಹನು ತನ್ನ ಗ್ರಂಥದ ಉದ್ದಕ್ಕೂ ಇಂಥ ಉದ್ಧೃತಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಿಕೊಂಡಿದ್ದಾನೆ.

ದುರ್ಗಸಿಂಹನು ತನ್ನ ಗ್ರಂಥದಲ್ಲಿ ಒಮ್ಮೆ ಬಳಸಿದ ಮಾತನ್ನು ಮತ್ತೊಮ್ಮೆ ಹಳಸುವ ಹಾಗೆ ಪ್ರಯೋಗಿಸಲಿಕ್ಕಿಲ್ಲ. ಶಿವಭೂತಿ ಕಥೆ, ನರಿಯ ಕಥೆ, ಕಪಿಯ ಕಥೆಗಳಲ್ಲಿ ಮುಖ್ಯವಾಗಿ ಈ ಅಂಶವನ್ನು ಓದುಗರು ಗಮನಿಸಬಹುದು, ಶಿವಭೂತಿಯ ಕಥೆಯಲ್ಲಿ ಹುಲಿ  ಎಂಬುದಕ್ಕೆ ಶಾರ್ದೂಲ, ಪುಂಡರೀಕ, ವ್ಯಾಘ್ರ, ಚಮೂರ  ಎಂಬ ಮಾತುಗಳನ್ನೂ, ನರಿಯ  ಕಥೆಯಲ್ಲಿ ನರಿ  ಎಂಬುದಕ್ಕೆ ಜಂಬುಕ, ಕ್ರೋಷ್ಟು, ಸೃಗಾಲ, ಬಳ್ಳು –  ಎಂಬ ಮಾತುಗಳನ್ನೂ, ಕಪಿಯ ಕಥೆಯಲ್ಲಿ  ಕಪಿ  ಎಂಬುದಕ್ಕೆ, ಕೋಡಗು, ಮರ್ಕಟ, ಗೋಲಾಂಗೂಲ, ಬಲೀಮುಖ –  ಎಂಬ ಮಾತುಗಳನ್ನು ಬಳಸಿರುವುದನ್ನೂ ನೋಡಬಹುದು.  ಇದರಿಂದ ಕವಿಯ ಶಬ್ದಸಂಪತ್ತು ಅರ್ಥವಾಗುತ್ತದೆ.  ಇದು ಪರೋಕ್ಷವಾಗಿ  ಓದುಗರನ್ನು ಪಂಡಿತರನ್ನಾಗಿ  ಮಾಡುತ್ತದೆ. ಇದೇ ರೀತಿ  ಎಲ್ಲ ಕಥೆಗಳಲ್ಲೂ ಬರುವ ಮನುಷ್ಯ, ಪ್ರಾಣಿ, ಪಕ್ಷಿ, ಕೀಟಗಳಿಗೆ ಅವುಗಳ ಪರ್ಯಾಯ ನಾಮಗಳನ್ನು ಬಳಸುವುದನ್ನು ಓದುಗರು ಗಮನಿಸಬೇಕು.

ದುರ್ಗಸಿಂಹನ ಶೈಲಿಯ ಪ್ರಧಾನಗುಣ ವಿಡಂಬನ ವೀರತೆ (ಞಟ್ಚh eಛ್ಟಿಟಜಿoಞ). ಸಣ್ಣಮಾತಿನಲ್ಲಿ ಹೇಳಬಹುದಾದುದನ್ನು ದೊಡ್ಡಮಾತಿನಲ್ಲಿ ಸಂಸ್ಕೃತ ಭೂಯಿಷ್ಠ ಸಮಾಸ ಪುಂಜ ಪಿಂಜರಿತ ರೀತಿಯಲ್ಲಿ ಹೇಳಿ ಲೇವಡಿ ಮಾಡುತ್ತಾನೆ. ಸಣ್ಣಯಃಕಶ್ಚಿತ್ ಪ್ರಾಣಿಯೋ ಕೀಟವೋ ಪಕ್ಷಿಯೋ ಆ ಮಾತಿನ ಭಾರವನ್ನು ಹೊರಲಾರದಂತೆ ಗುಣವಿಶೇಷವನ್ನು ಅಡಕುತ್ತಾನೆ. ಪರೋಕ್ಷವಾಗಿ ಪ್ರಾಣಿ ಪಕ್ಷಿ ಕೀಟಗಳ ನೆಪದಿಂದ ಮನುಷ್ಯನ ಸಣ್ಣತನವನ್ನೋ, ನೀಚತನವನ್ನೋ, ಮೋಸ, ಸುಳ್ಳು, ಅನ್ಯಾಯವನ್ನೋ ಮನಸ್ಸು ಮುಟ್ಟುವಂತೆ  ಎತ್ತಿ ಅಣಕಮಾಡುತ್ತಾನೆ.  ಇದು  ಎಲ್ಲ ಪಂಚತಂತ್ರ ಕಥೆಗಳಿಗೆ ಅನ್ವಯಿಸುತ್ತದಾದರೂ ದುರ್ಗಸಿಂಹನ ಶೈಲಿಯಲ್ಲಿ ಒಂದು ಪಟ್ಟು ಹೆಚ್ಚಾಗಿಯೇ ಇದೆ. ’ಬ್ರಾಹ್ಮಣೋತ್ತಮನಪ್ಪ ನಾವೊಂದು ಪಾಪ ನಿವಾರಣಾರ್ಥವಾಗಿ ಗೋವಿನ ಜಠರಮಂ ಪೊಕ್ಕಿರ್ದೆವು  ಎಂದು ಸತ್ತ ಎತ್ತಿನ ಹೊಟ್ಟೆಯೊಳಗಿನಿಂದ ಹೊರಬರಲಾರದೆ ಒದ್ದಾಡುವ ನರಿ ಈ ಮಾತನ್ನು ಹೇಳುವಾಗ ನಾವು ನಗದಿರಲಾರೆವು. ಸಂಜೀವಕನೆಂಬ ಎತ್ತು ‘ಕಾಳಿಂದೀನದೀ; ಕಚ್ಚದೊಳಾತ್ಮೇಯಿಂ ನಲಿನಲಿದು ರುಚಿಕರಮಕತಶ್ಯಾಮದೂರ್ವಾಂಕುರ ಗ್ರಾಸದೊಳಂ ಅತಿಸ್ವಚ್ಚಸ್ವಾದುಸಲಿಲಪಾನದೊಳ ಮೆಲ್ಲಮೆಲ್ಲನೆ ಪಥಪರಿಶ್ರಮವನಾಛಿಸಿಕೊಂದು ಕೆಲವು ದಿವಸಕ್ಕೆ ಬಾಲೇಂದುಶೇಖರ ಶಕ್ವರಾಕಾಮಂ ತಾಳ್ದಿ ’ ಭಯಂಕರವಾಗಿ ತೋರಿತು ಎಂಬಾಗ ಮುಂದೆ ಸಿಂಹವು ಅದರ ಗುಟುರುನ್ನು ಕೇಳಿ ಗಾಬರಿಗೊಂಡುದು, ದವನಕನೂ ಅದರ ಹೆದರಿಕೆಯನ್ನು ದುರುಪಯೋಗ ಪಡಿಸಿಕೊಂಡುದೂ ಸಹಜವೆನ್ನಿಸುತ್ತದೆ. ‘ಪಿಂಗಳಕನತಿವಿಸ್ಮಂಯಂಬಟ್ಟು ಧಾತು ರಕ್ತಾಶೋಕಕಿಸಲಯವಿಭಾರಸಟಾಕಲಾಪ ಮಲ್ಲಾಡೆ ತಲೆಯಂ ತೂಗಿ, ಎಂಬಲ್ಲಿ ಸಿಂಹದ ಮೂರ್ತಿ ಚಿತ್ರವತ್ತಾಗಿ ಕಣ್ಣೆದುರು ನಿಲ್ಲುತ್ತದೆ.

‘ನರಿಯೂ ಬಿಲವೂ ಎಂಬ ಕಥೆಯಲ್ಲಿ ಹುಲಿ ಒಳಗಿರಬಹುದೆಂಬುದನ್ನು ಗೊತ್ತು ಮಾಡಿಕೊಳ್ಳಲು ನರಿ ಮಾಡುವ ಉಪಾಯವು ವರ್ತಿಸುವ ರೀತಿಯೂ ಹೃದಯಂಗಮವಾಗಿದೆ: “ ಬಿಲನೆ, ನೀನಿನಿತು ಕಾಲಂ ನಾಂ ಬರ್ಪಾಗಳಿದಿರ್ವಂದು ಸೇವೆಯಂ ಮಾಡುತಿರ್ದಯ್; ಈಗಳದುಗೆಟ್ಟು ಕರೆದೊಡಂ ಮೊದಲಾಗಿ ಸರಂದೋಱೆದಪೆಯಿಲ್ಲ; ಪೆಱನೊರ್ವಂಗೆ ಕೂರ್ತೆಯಕ್ಕುಂ ಮೇಣ್ ಬಲ್ಲಿದನಿರ್ದು ನಕ್ಕುಮಲ್ಲದೊಡೀಗಗಳೇಕುಸಿರದಿರ್ದಪೇ? ಅದೊಡಮೇಂ, ನಿನ್ನ ಗುಣಕ್ಕಿನ್ನೊರ್ಮೆ ಕರೆವಂ ಇನ್ನುಮುಸಿರದಿರ್ದೊಡೆ ಪಂತೊಂದು ಬಿಲನನಱಸಿಕೊಳ್ವೆಂ, ಆಹಾರವಿಲ್ಲದ ನರಿಯನ್ನು ಕಾಗೆಯು “ ಎಲೆ ಭಾವ ! ಏಂ ಬಡವಾದಿರಿ? ಎಂದು ಕೇಳುವುದು ತಮಾಷೆಯಾಗಿದೆ.ದವನಕನು ಸಂಜೀವಕನ ಹತ್ತಿರಕ್ಕೆ ಬಂದು ನಿಶ್ಚಯವಾಗಿಯೂ ಅದು ಎತ್ತಾಗಿರುವುದನ್ನು  ಕಂಡಾಗ ಕವಿ ಹೀಗೆ ವರ್ಣಿಸಿದ್ದಾನೆ. “ನರಿ ಹರಿಯ ಮರುಳ್ತನಕ್ಕೆ ನಕ್ಕು ನಾನೀಂೞ್ತನೆೞ್ತ್ಚಂ ಕಡೆನೆಂದು ನಿಷ್ಕಪಟವೃತ್ತಿಯಂ ಕೂರ್ತ ನಮ್ಮರಸಂಗೆ ಪೇೞ್ದೆನಪ್ಪೊಡೆ ನಾನೇಕತಂ ಬಾರ್ತೆಯಾಗಲಛೆಯೆಂ. ಕವಿಯು ಇಲ್ಲಿ ರಾಜರಿಗೆ ಮಂಡೆ ಇಲ್ಲವೆಂದೂ  ಅವರ ಮೂರ್ಖತನವನ್ನು  ದುರ್ಜನರು ದುರುಪಯೋಗಪಡಿಸಿಕೊಳ್ಳುವರೆಂದೂ ಎಷ್ಟು ಚೆನ್ನಾಗಿ ಗೇಲಿ ಮಾಡಿದ್ದಾನೆ! ಆ ಮೃಗಧೂರ್ತನು ಅಲ್ಲಿಂದ ಹೊರಟು ಪಿಂಗಳಕನ ಆಸ್ಥಾನಕ್ಕೆ  ಬಂದು “ವಿನಯವಿನಮಿತ್ತೋತ್ತಮಾಂಗನಾಗಿ ದವನಕಂ ಸಮುಚಿತಾಸದೊಳ್ ಕುಳ್ಳಿರ್ದಿಂತೆಂದು ಎಂಬಲ್ಲಿ ವಿನೀತವಾದ ಆ ಉತ್ತಮಾಂಗದಲ್ಲಿರುವ ಕಪಟವನ್ನು  ಚೆನ್ನಾಗಿ ಧ್ವನಿಸಿದ್ದಾನೆ.ಹೀಗೆ ದವನಕನು ಇಲಿಯನ್ನು ಹುಲಿಯೆಂಬಂತೆ ಆ ಎತ್ತನ್ನು ವರ್ಣಿಸಿದಾಗ ಅ ಸಿಂಹಕ್ಕೆ ಅದ ಗಾಬರಿಯನ್ನು ಬಹಳ ಚೆನ್ನಾಗಿ  ಮೂಡಿಸಿದ್ದಾನೆ: “ಪಿಂಗಳಕನು ಭಗ್ನಮನನಾಗಿ ಕಿಱೆದು ಬೇಗಂ ಪಂದೆಯಂ ಪಾವಡರ್ದಂತೆ ಮೇಗುಸಿರ್ವಿಟ್ಟು ಹವ್ಮ್ಮದಂಬೋಗಿ ಮುಮ್ಮನೆ ಬೆಮರ್ತು ತನ್ನಿಂ ತಾಂ ಚೇತರಿಸಿ ಕಾತರೆತೆಯ ಮಾಣ್ದು ದವನಕಂಗೆ ಪಿಂಗಳಕನಿಗೆ ಹೆದರುವ ಕಾರಣವಿಲ್ಲವೆಂದು ಧೆರ್ಯವನ್ನು ತುಂಬಿದಾಗ ಅವನಿಗಾದ ಹರ್ಷ, ಅಭಯ ಉತ್ಸಾಹಗಳ ಮಿಶ್ರಭಾವವನ್ನು ಇನ್ನಿಲ್ಲದ ರೀತಿಯಲ್ಲಿ ಕವಿ ಹೇಳಿದ್ದಾನೆ:

ಚಳದಳಕಂ ಹರ್ಷೋದ್ಗತ
ಪುಳಕಂ ನಖಮುಖವಿದಾರಿತೋಗ್ರೇಭಶಿರ;
ಫಳಕಂ ಮೃಗತಿಳಕಂ ಪಿಂ
ಗಳಕಂ ಪೋಗೆಂದು ಕಳುಪಿದಂ ದವನಕನಂ

ವನಜಾಕ್ಷಿ! ದೋಷಿ ಯಲ್ಲದ
ನಿನಗೆ ಕರಂ ಪೊಲ್ಲಗೆಯ್ದೆನೆಂದಿರದಾತ್ಮಾಂ-
ಗನೆಯ ಪದಕ್ಕೆಛಿಗಿದನೆ-
ನ್ನನುಮಛಿಗುಮೆ ಧೂರ್ತೆಯಪ್ಪ ಕಾಂತೆಯ ಮನಮಂ !

ದೇವಶರ್ಮನ ಕಥೆಯಲ್ಲಿ ಬರುವ ತಂತುವಾಯಿಕೆಯ ವೃತ್ತಾಂತದಲ್ಲಿ ತುಂತುವಾಯನು ಬಯ್ಯುವ, ‘ನಿನ್ನ ಬೇಟದ ಮಿಂಡನಾವನವನಂ ಪೇೞ್ ಎಂಬ ಮಾತಿನಲ್ಲಿ ದೇಸಿಯ ಒಗರಿದೆ. ತಂತುವಾಯಿಕೆಯ ಕಪಟ ಪ್ರತಿಜ್ಞೆಯಲ್ಲೂ ಅದೇ ರುಚಿಯಿದೆ: “ಅನಂತಪ್ಪ ಒರ್ಬ ತಾಯ್ಗಂ ತಂದೆಗಂ ಪುಟ್ಟಿದೆನಾದೊಡೆ ನಾಂ ಪತವ್ರತೆಯಾದೊಡೆ, ಮನೆದೆವಂಗಳೆನಗೆ ಸನ್ನಿದಮಾದೊಡೆನ್ನ ಮೂಗು ಮುನ್ನಿನಂತಾಗಲೀ ಕಟ್ಟಿರ್ದ ಕಟ್ಟೆಲ್ಲಂ ಬಿಟ್ಟು ಪೋಗಲೆವೇಳ್ಕಂ,, ಮುಂದೆ ಆ ತಂತುವಾಯನು ಹೆಣ್ಣಿನ ಮನಸ್ಸನ್ನು ತಿಳಿಯದೆ ಶರಣಾಗತನಾದಂತೆ. ಇದರ ಪರಾಕಾಷ್ಠೆ;

ಶಿವಭೂತಿಯ ಕಥೆಯಲ್ಲಿ ಪುರಾಣಕೂಪದಲ್ಲಿ ಬಿದ್ದ ನಾಲ್ಕು ಪ್ರಾಣಿಗಳನ್ನು ಹೇಳುವಾಗ ಕಪಿಯನ್ನು ಕುರಿತು ಅದರ ಸ್ವಭಾವಕ್ಕನುಗುಣವಾಗಿ ರಸವತ್ತಾಗಿ ಬರೆದಿದ್ದಾನೆ:

“ಅನ್ನೆಗನೊಂದು ಚಪಲಕನೆಂಬ ಕಪಿ ನೀರ್ಗುಡಿಯಲೆಂದು ಬಾವಿಯಂ ಪುಗುತಂದು ತತ್ಕೂಪ ಸಮೀಪದೊಳ್ ನಿಂದು ಪೋಗಲಿಂಬಿಲ್ಲದೆ ತಡಿ ವಿಡಿದೆಳಲುತ್ತಿರ್ದ ಸರ್ಪನ ಬಾಲಮಂ ಬಳ್ಳಿಯೆಂದು ಬಗೆದು ಪಿಡಿದೆಳೆಯುತ್ತುಮಹಿಸಹಿತಂ ಬಿರ್ದುದು.,

ಎರಡು ಗಿಣಿಗಳ ಕಥೆಯಲ್ಲಿ ಬರುವ ಮುನಿಯ ಆಶ್ರಮವನ್ನು ವರ್ಣಿಸುತ್ತ ವೃದ್ಧ ತಾಪಸರ ಕಯ್ಯನ್ನು ಹಿಡಿದುಕೊಂಡು ಗೋಲಾಂಗೂಲಗಳು ನಡೆಯಿಸುತ್ತಿದ್ದವು  ಎನ್ನುತ್ತಾನೆ. ಇಲ್ಲಿ ಮನುಷ್ಯ ಮುದುಕನಾದಾಗ ಮಂಗನಿಗೆ ಸಮಾನ ಎಂಬುದನ್ನು ಒಳದನಿಯಿಂದ ಹೇಳಿ ನಕ್ಕಂತಿದೆ ! ‘ಕೃಷ್ಣೋರಗನನೊಳಕೊಂಡ ಒಳ್ಳೆಗಳ ಕಥೆ ಯಲ್ಲಿ “ಪ್ರಜಾಪಾಲನೆಂಬರಸು ಲೀಲೊದ್ಯಾನವನದೊಳ್ ಜಲಕೇಳಿನಿಮಿತ್ತಂ ಕ್ರೀಡಾಸರೋವರಂ ಮಾಡಿಸಿ ನೀರಂ ತೀವಿ ಮತ್ತಲ್ಲಿ ಜಲಕೇಳಿಯಾಡುವ ಗಾಡಿಕಾರ್ತಿಯರಂ ಕಾಡಲೆಂದೊಳ್ಳೆಗಳಂ ತಂದು ಬಿಡಿಸಿಯವರ್ಕೆ ಪಾಲನೆರೆದು ನಡೆಪುತ್ತಿರ್ಪನ್ನೆಗಂ; ಎಂಬಲ್ಲಿ ಅತೃಪ್ತ ಕಾಮದ ಕಾಮಿನಿಯರ ಚಿತ್ರವನ್ನು ಕೊಟ್ಟು ಹಾವನ್ನು ಲಿಂಗಸಂಕೇತಮಾಡಿ ಕವಿ ಅತ್ಯಂತ ಆಧುನಿಕ ಮನೋಭಾವದವನಾಗಿದ್ದಾನೆ.

ಒಟ್ಟೆಯಂ ಕಾಗೆಯಂ’ ಎಂಬ ಕಥೆಯಲ್ಲಿ ಬರುವ ಒಂಟೆಯನ್ನು ಒಂದು ಕಾಗೆಯು ಸಿಂಹದ ಆಸ್ಥಾನಕ್ಕೆ  ಕರೆದು ತರುತ್ತದೆ. ಆಗ ಅದನ್ನು ನೋಡಿ ಸಿಂಹಕ್ಕೆ ಹೀಗೆನ್ನಿಸಿದಂತೆ; ಅದಳ್ ವಿಕಟರೂಪಮಂ ಕಂಡು ಮದೋತ್ಕಟನುತ್ಕಟಹರ್ಷನಾಗಿ ನಮಗೊಂದು ವಿನೋದಪಾತ್ರಮಿದೊಂದಾದುದೆಂದು ಸಂತೋಷಂಬಟ್ಟು ನಾಲ್ವರು ಧೂರ್ತರೂ ಬ್ರಾಹ್ಮಣನು ಎತ್ತಿಕೊಂಡು ಹೋಗುತ್ತಿದ್ದ ಆಡನ್ನು ನಾಯಿಯೆಂದಾಗ ಆತ ಒಮ್ಮೆ ಭ್ರಮೆಗೊಳ್ಳುವಂತಾದ ಸಂದರ್ಭವನ್ನು ಸೊಗಸಾಗಿ ಕವಿಯು ಹೇಳಿದ್ದಾನೆ: “ ಭಟ್ಟಂಗೆ  ಭ್ರಾಂತಿ ಪುಟ್ಟಿ ನಿಂದು ಪೆಗಲೊಳಿರ್ದ ಛಾಗಲಮಂ ಭೂಭಾಗದೊಳಿೞೆಪಿ,

ಶ್ರವಣ ಶಿರ: ಪುಚ್ಚಾಸ್ಯಾ-
ದ್ಯವಯವಮಂ ಮುಟ್ಟಿ ನೋಡಿ ನಾಯಲ್ಲಿದು ಭೂ-
ಭುವನ ಪ್ರಸಿದ್ದಮಜಮೆಂ
ದವಧಾರಿಸಿ ಹೊತ್ತುಕೊಂಡು ಪೋದುಂ ಪಾರ್ವಂ ||”

‘ಟಟ್ಟಿಭ ಮಿಥುನಗಳ ಕಥೆ ಯಲ್ಲಿ ಬರುವ ಎನ್ನ ಮಾತಂ ಕೇಳದೆ ಕಲಹಕ್ಕೆ ಕಚ್ಚೆಯಂ ನಿನಗೆ ಕಚ್ಚಪ ಕಥೆಯಾಗದೆ ಪೋಗದು ಎಂಬ ಮಾತಿನ ರೀತಿ ಸೊಗಸಾಗಿದೆ. ‘ಸೊಸೆಯ ಮಾತಂ ಕೇಳದತ್ತೆಯ ಕಥೆಯಲ್ಲಿ ಅತಿಯಾಸೆಯಿಂದ ಬಂದ ಜೀವಂತ ಅತ್ತೆಯನ್ನು ಕಂಡ ರಕ್ಕಸಿಯರು, ಸಗ್ಗಮಿದಿರಂ ಬಂದುದು ಬಿಲದೊಳಗಿರ್ದ ಇಲಿಯಂ ತೆಗೆವಂತೆ ಪೊಳಲೊಳಗಿರ್ದು ಕುಮತಿಯಂ ಕಾಲಂ ಪಿಡಿದು ತೆಗೆದು ಇರ್ಬಗಿ ಮಾಡಿ ಕೊಂದು ತಿಂದರ್ ಎಂಬುದನ್ನು ಓದುವಾಗ ಕೆಟ್ಟ ಅತ್ತೆಯರ ಕಾಟವನ್ನನುಭವಿಸಿದ ಸಾಧು ಸೊಸೆಯರಿಗೆ ‘ಹಾಗೇ ಆಗಬೇಕು ಎಂಬಂತೆ ಬರೆದಿದ್ದಾನೆ. ‘ಯದ್ಭವಿಷ್ಯನೆಂಬ ಮತ್ಸ್ಯದ ಕಥೆಯಲ್ಲಿ ಪ್ರಾಣ ಉಳಿಸಿಕೊಳ್ಳಲು ಉಪಾಯ ಮಾಡಿದ ಮೀನಿನ ಚಿತ್ರ ಯಥಾವತ್ತಾಗಿದೆ. “ಮೀಂಗುಲಿಗರ್ ಬಲೆಯಂ ತೆಗೆದು ನೋಡಿ ಮುನ್ನಮೆ ಸತ್ತಂತಿರ್ದುತ್ಪನ್ನಮತಿಯಂ ಕಂಡು ಬಲೆಯಿಂ ತೆಗೆದು ನೆಲದೊಳಿರಿಸುವುದುಮದುಮೊಳೆದು ಜಳದೊಳ್ ಮುಳುಂಗಿ ಪೋದುದು. ಇಲ್ಲಿ ದುರ್ಗಸಿಂಹನು ಬ್ರಾಹ್ಮಣನಾದರೂ ಮೀನು ವರ್ತಿಸುವುದನ್ನು ಕಣ್ಣಾರೆ ಕಂಡು ಬರೆದಿದ್ದಾನೆ ಎನಿಸುತ್ತದೆ. ‘ಬಕನ ತತ್ತಿಯಂ ಮುಂಗುರಿಯುಂ, ಎಂಬ ಕಥೆಯಲ್ಲಿ ಬರುವ ಬಕ ಕರ್ಕಟಗಳ ಸಂಭಾಷಣೆಯನ್ನು ಕೇಳಿರಿ: “ಬಕಂ ಕಲುಷಿತ ಚಿತ್ತನಾಗಿಯೇಗೆಯ್ಯಲುಮಳೆಯದೊಂದು ದಿವಸಂ ಸಮುದ್ರತೀರದೊಳ್ ನಿಂದು ಜಾನಿಸುತಿರ್ಪುದನೊಂದು ಕರ್ಕಟಕಂ ಕಂಡೇ ಭಾವಾ ! ನೀನಿಂದಾಹಾರ ಚಿಂತೆಯ ಮಾಣ್ದು ವೇಹಾರಂಗೆಯ್ವರಂತೆ ಕಣ್ಣಂ ತಿಣ್ಣಂ ಮುಚ್ಚಿಕೊಂಡಿರ್ಪ ಕಾರಣಮಾವುದು….”

‘ಸೋಮಶರ್ಮನ ತಂದೆಯ ಕಥೆಯಲ್ಲಿ ಮುಂಗುಸಿಯು ಮಗುವನ್ನು ಸರ್ಪದ  ಬಾಯಿಯಿಂದ ರಕ್ಷಿಸಿದ ವೃತ್ತಾಂತವನ್ನು ಹೇಳುವಾಗ ದುರ್ಗಸಿಂಹನ ಕಥನಕಲೆ ಉನ್ನತಿಯನ್ನು ಮುಟ್ಟುವುದು ಕಾಣಬಹುದು. ಇಲ್ಲಿ ಸರ್ಪದ ಭೀಕರತೆಯನ್ನೂ, ಮುಂಗಸಿಯೂ ಧೆರ್ಯವನ್ನು, ಮಗುವಿನ ಮುಗ್ದತೆಯನ್ನು, ಬ್ರಾಹ್ಮಣನ ಅವಿವೇಕವನ್ನೂ ಒಟ್ಟೋಟ್ಟಿಗೆ ಚಿತ್ರಿಸಿ ಓದುಗರ ಹೃದಯ ಕರಗುವಂತೆ ಬರೆದಿದ್ದಾನೆ.

ಸ್ಪುರಿತ ವಿಷಾವಿಲ ದಂಷ್ಟ್ರಾಂ
ಕುರ ಸಂಕುಳ ಭೀಕಾರಾನನಂ ಸಾರ್ದತ್ತೊಂ
ಚುರಗಂ ಮೆಲ್ಲನೆ ಬಾಲಾ
ಸ್ತರಣಾಂಕಿತಮಂ ಕೃತಾಂತ ಪಾಶಪ್ರತಿಮಂ ||

ಅಂತು ಸಾರ್ತರ್ಪ ಭುಜಂಗನನಾ ಮುಂಗುರಿ ನಿಸರ್ಗವೆರಮಂ ನೆನೆದಿರದೆ ಸರ್ಪನಂ ಶತಖಂಡಂ ಮಾಡಿ ಕೊಂದು ತಿನ್ನುತ್ತಿರ್ಪುದುಂ ಕಿೞೆದಾನಂ ಬೇಗಕ್ಕೆ ಪಾರ್ವಂ ಬರ್ಪುದುಂ, ತನ್ನ ಸಾಹಸಮಂ ತನ್ನಾಳ್ದಂಗೆ ತೋಳಲೆಂದು ರುರಾರುಣಿತಮಾದ ನಖಮುಖಮುಂ ಪಲ್ಗಲೊಳ್ ಪತ್ತಿರ್ಪ ಖಂಡಂಗಳ್ವೆರಸು ಪರಿತಂದು ಕಾಲ ಮೇಲೆ ಪೊರೞ್ದು ಚಾಟುಕಾರಂಗೆಂಯ್ವುವದುಂ, ಪಾರ್ವಂ ಕಂಡೀ ಕಾವಲ್ ಕೂಸಂ ಕೊಂದುದಾಗಲವೇಲಳ್ಕುಮೆಂದು ವಿಚಾರಕವಿಕಳಂ ನಕುಲನ ಶಿರಮಂ ಬಿರಿಯೆ ಪೊಯುದ ಮಾಣದೆ ಪರಿತಂದು ನೋಡಿ ತೊಟ್ಟಿಲೊಳ್ ಸುಖನಿದ್ರಿತನುಮಕ್ಷತ ಶರೀರನುಮಾಗಿದ್ದ ಮಗನುಮನಾ ಕೆಲದೊಳ್ ಶತಖಂಡಮಾಗಿರ್ದ ಪಾವುಮಂ ಕಂಡು ಬಛೆಕ್ಕೆ ಪಾರ್ವಂ ಮುಂಗುರಿಯ ಮೇಲೆ ನೀರಂ ತಳಿದು ಬೀಸೆ ನಿರ್ಜೀವಮಾದುದಂ ಕಂಡು ಬೞೆಕ್ಕೆ ಪಾಪಕರ್ಮಂ ತಾಂ ಕೋಪವಶದಿಂ ಕೂಸಿನಂತೆ ನಡಪಿದ ನಕುಲಂ ಪರೀಕ್ಷಿಸದೆ ಕೊಂದನೆಂದು ಶೋಕಂಗೆಯ್ಯುತ್ತುಮಿರ್ಪಿನಂ,

ಕಾಗೆಗಳ ರಾಜ ಮೇಘವರ್ಣನ ವರ್ಣನೆಯಲ್ಲ ಅಡಂಬರವಿದೆ, ಅಣಕವಿದೆ, ರಾಜರನ್ನು ನೋಡಿದ ವಿಡಂಬನ ದೃಷ್ಟಿಯಿದೆ:

ಶಮಿತಾರಾತಿಪ್ರಭಾವಂ ಪರಿಜನಸಹಿತಂ ರಾಗದಿಂದಿರ್ಪನತ್ಯು
ತ್ತಮಸುದ್ದಾಮಾತ್ಯವರ್ಗಂ ವರಚರನಿಚಯಂ ಗುಪ್ತಮಂತ್ರಂ
ಸುಮಿತ್ರೋ ದ್ಯಮನುದ್ಯತ್ಕಾಕವೃಂದಾರಕಪತಿ ಪೆಸರಿಂ ಮೇಘ
ವರ್ಣಂ  ಪಯೋದಾಗಮಶುಂಭನ್ನೇಘವರ್ಣಂ ಖಗಗಣಿಕಾವ್ರತ
ಸಂಗೀತವರ್ಣಂ ||

‘ನಾರಾಯಣಭಟ್ಟನ ಕಥೆಯಲ್ಲಿ ಪತಿವ್ರತೆಯಂತೆ ತೋರಿಸುತ್ತಿದ್ದ ಹೆಂಡತಿಯೊಬ್ಬಳು ಹೇಗೆ ಪತಿತೆಯಾಗಿದ್ದಳು ಎಂಬುದನ್ನು ಸುಂದರವಾಗಿ ನಿರೂಪಿಸಿದ್ದಾನೆ. “ ಎನ್ನ ಪೆಂಡತಿ ಪತಿವ್ರತೆ, ಪರಪುರುಷನ ಮುಖಾವಲೋಕನಂಗೆಯ್ಯಳದು ಕಾರಣದಿಂದೀ ಶಿಶು ಗಂಡುಗೂಸಪ್ಪುದೞೆಂ ನೋಡಿದೊಡೆ ದೋಷಮೆಂದು ತನ್ನ ಮುಖಮಂ ಮುಚ್ಚಿಕೊಂಡು ಮೊಲೆಯೂಡಿದಪಳೆಂದು ಪೇಳ್ವದುಂ ಅಂಥ ಪರಮ ಪತಿವ್ರತೆಯೆಂಬವಳು ‘ತನ್ನ ಮನೆಯ ಪಸುಗಾವ ಗೋವನಂ ಪಿಡಿದು ಸುರತ ಕ್ರೀಡೆ ಯಾಡುವುದನ್ನು ತೋರಿಸಿ ಪತಿವ್ರತಾಗುಣದ ಆಷಾಢಭೂತಿತನವನ್ನು ಎತ್ತಿ ತೋರಿಸಿದಂತಿದೆ.

‘ಮೊಸಳೆಯಂ ಕಪಿ ವಂಚಿಸಿದ ಕಥೆಯಲ್ಲಿ ಮೊಸಳೆಯ ಮೇಲೆ ಸವಾರಿ ಮಾಡಿದ ಕಪಿಯ ಸುಂದರ ಚಿತ್ರವನ್ನು ಕವಿ ಕೊಡುತ್ತಾನೆ.

“ಅಂತಾ ವಾನರಂ ಕೇದಗೆಯಬೇಱೆದ ಕೋಡಗದಂತೆ ಗೂಡುಗೊಂಡು ಪಲ್ಲಂ ಗಿಡಿಱೆದು ಮೆಲ್ಲನೆ ಮೊಸಳೆಗಂತರೀಪಮಿಲ್ಲಿಗಮಿನ್ನೆನಿತು ದೂರಮುಂಟೆಂಬುದುಂ, ‘ನರಿಯ ಮಾತಂ ನಂಬಿ ಸತ್ತ ಬೆಳ್ಗತ್ತೆಯ ಕಥೆಯಲ್ಲಿ ಕಾಮಪರವಶವಾದವರನ್ನು ಕತ್ತೆಗೆ ಹೋಲಿಸಿ ಅಣಕಿಸಿದ ಹಾಗೆ ಕಾಣುತ್ತದೆ. “ರಾಸಭೀವಿಲಾಸಿನಿಯರ್ ತಮಗೊವ್ಮ ಪುರುಷನಂ ತರವೇಳ್ಕುಮೆಂದೆನ್ನಂ ತುತಿಸುತ್ತಿರ್ದಪರ್; ನಿನಗಂ ಮನೋರಥ ಸಿದ್ದಿಯಕ್ಕುಂ ಬೇಗಂ ಬಾಯೆನಲೊಡಂ”

ರಾಗಸಿ ರಾಸಭನಿರದತಿ
ವೇಗದಿನಾ ನರಿಯ ಪಿಂದು ಪಿಂದನೆ ಬಂದಂ
ಮೇಗಪ್ಪಪಾಯಮಂ ಕಡು
ರಾಗಿಗಳೇಂ ಕಂಡರೊಳರೆ ಭೂಮಂಡಲದೊಳ್||

ಅಂತು ಪೋಪುದುಮಾ ನರಿ ಹರಿಯಿರ್ದ ಗುಹಾದ್ವಾರಮಂ ಗರ್ದಭೆಯರೊಳಗರ್ದರ್ ಪುಗೆನಲೊಡಂ ಪುಗುವ ಕಲ್ತೆಯಂ ಕಂಡು ಸಿಂಹಂ ಜವಗುಂದಿದ ಕಾರಣದಿಂ ಲಂಘನಾಸಕ್ತನಾಗಿ ಲಂಘಿಸಲಾಱದೆ ರಭಸಂ ಗೆಯ್ದೆಯ್ತರ್ಪುದುಂ ಕಛ್ತೆ ಬೆರ್ಚುತೋಡುತಿರ್ಪ್ಯದಂ ಕಂಡು ಸೃಗಾಲಂ ಕರಂ ಮುಳಿದು ಸಿಂಹನಲ್ಲಿಗೆ ಬಂದೇಂ ಗಡ ಕೞ್ತೆಯಂ ಮೊದಲಾಗಿ ಪಿಡಿಯಲಾರ್ತೆಯಿಲ್ಲ. ನೀನೆಂತು ಬರ್ದಪೆಯೆಂದು ನುಡಿಯೆ ಹರಿ ಕರಮೆ ಸಿದ್ದಿಗಾಗಿ ಗುಹೆಯಂ ಪೊಕ್ಕುದುಂ ಕೊಲ್ವುದಾವ ಗಹನಮೆಂದನವಧಾನದಿಂ ಪಾಯ್ದ ಕಾರಣದಿಂ ತಪ್ಪಿದುದು, ಇನ್ನದಂ ಕೊಂಡು ಬಾ ಕೊಂಡಾಗಲೆ ಬಿಡಾಲನಿಲಿಯಂ ಕೊಲ್ವಂತಶ್ರಮದೊಳೆ ಕೊಂದಪೆನೆಂದೊಡೆ ಮತ್ತೆ ನರಿ ಪರಿದಾ ಕಳ್ತೆಯಂ ಕಂಡೇ ಭಾವಾ! ನೀಂ ಕಳ್ಳರಂ ಕಂಡ ಬೆಳ್ಳಾಳಂತೆ ಬೆದಱೆಯೆನಗಂ ಪೇಳದೆ ಪೆಳಗಂ ನೋಡದೋಡಿ ಬಂದೆಯದೇಂ ಕಾರಣಮೆನೆ ರಾಸಭನಿಂತೆಂದಂ. ಆ ಗುಹೆಯನಾಂ ಪುಗಲೊಡನೊಂದು ರೂಪು ಮೊಳೆದು ಪರಿತಂದು ಮೇಲ್ವಾಯಲೊಡಂ ಭಯಂಬಟ್ಟು ಬಂದೆನೆನೆ ಸೃಗಾಲನೆಂದಂ: ಗಾಳುಗಳಪ್ಪ ಗರ್ದಭೆಯರ್ ವಿರೋದಿಕಾಮಿಗಳಪ್ಪುದಱೆಂ ಕಾತರಿಸಿ ಮೇಲೆ ಮೇಲೆ ಬೀಳಲ್ರೆಡಂ ಬಂದೆ, ನಿನ್ನ ಗಂಡುತನದ ಪುರುಳಂ ಕಂಡೆನ್ನ ತಂಗಿಯರ್ ಕರುಳಂ ಪಿಡಿದು ನಗೆಯಳ್ ಪೊರಳುತ್ತಮಿರ್ದರ್, ನೀನಂಜಲ್ವೇಡ ಬಂದವಳೊಳ್ ಸುರತ ಸುಖವನನುಭವಿಸತ್ತಿಮಿರ್ದಪೆ, ಬಾಯೆಂಬುದುಮಾ ಕೞ್ತೆ ಮಿೞ್ತುವಿನ ಬೆನ್ನೊಳ್ ಪೋಪಂತೆ ನರಿಯ ಬೆನ್ನೊಳ್ ಪೋಗಿ,

ಸುರತಸುಖಕಾಂಕ್ಷೆಯಿಂ ರಾ-
ಗರಸಾಂಧಂ ರಾಸಭಂ ಮಹಾದ್ರಿಗುಹಾಭ್ಯಂ
ತರಮಂ ಪೊಕ್ಕುದು ಮನ್ಮಥ
ಶರಪರವಶನಪ್ಪ ದೇಹಿ ಪುಗದೆಯುಂಟೇ !

ಈ ಭಾಗದಲ್ಲಿ ವಿಕೃತಕಾಮದ ಸಂಕೇತವಿದೆ. ಗುಹಾದ್ವಾರವು ಸ್ತ್ರೀಲಿಂಗ ಸಂಕೇತ ಅದು ವಿಕಾರಗೊಂಡಾಗ ಅದನ್ನು ಹೊಕ್ಕವನಿಗೆ ಮೃತ್ಯು ತಪ್ಪಿದಲ್ಲ ಎಂಬುದನ್ನು ಕವಿ ಇಲ್ಲಿ ಧ್ವನಿಸಿದ್ದಾನೆ. ಕಾಮಿಗಳಿಗೂ ಕತ್ತೆಗಳಿಗೂ ಎನೂ ವ್ಯತ್ಯಾಸವಿಲ್ಲ ಎಂಬುದನ್ನು ಕಲಾತ್ಮಕವಾಗಿ ಕವಿ ನಿರೂಪಿಸಿದ್ದಾನೆ. ವಿಡಂಬನ ವೀರ ಶೆಲಿ (moಛಿಞ- heಡಿoiಛಿ *ಣಥಿಟe)ಯ ಸ್ಪಷ್ಟ ರೂಪವನ್ನು  ‘ಗೂಗೆಗಳ್ ತುಂಬಿರ್ದ ಗುಹೆಯಂ ಕಾಗೆಗಳ್ ಸುಟ್ಟ ಕಥೆಯಲ್ಲಿ ಉದ್ದಕ್ಕೂ ಪರಿಭಾವಿಸಬಹುದು. ಕಾಗೆಗಳಿಗೂ ಗೂಗೆಗಳಿಗೂ ಮಸೆದ ಬದ್ದವೆರವನ್ನೂ ನೆಪಮಾಡಿಕೊಂಡು ಸಮಸ್ತ ರಾಜತಂತ್ರವನ್ನು  ಭೋದಿಸಿದ ರೀತಿ ಅನುಪಮವಾದುದು. ಇಲ್ಲಿ ಕಥೆಯ ಹೂವಿನಲ್ಲಿ ಕವಿ ಶಿಕ್ಷಣದ ಪರಿಮಳವನ್ನಿಟ್ಟು ನೀತಿಯ ಮಕರಂದವನ್ನು ಬಚ್ಚಿಟ್ಟಿದ್ದಾನೆ. ಹೀಗೆ ಕಥೆ, ಶಿಕ್ಷಣ, ನೀತಿಯ ತ್ರಿವೇಣಿ ಸಂಗಮವನ್ನು ಸಾಸಿದುದು ಪಂಚತಂತ್ರಕಾರನ ಅಗ್ಗಳಿಕೆ :

“ಅಂತಾ ವಾಯಸಬಲಂ ಮಾಮಸಕಂ ಮಸಗಿ ಬಂದು ಕಾಳನೀಳಧರಂಗಳ್ ಕುಳಗಿರಿಯಂ ಮುತ್ತುವಂತರಿಮರ್ದನನ ಪುರವಾvರ್ದಂಜನಗಿರಿಯಂ ಸುತ್ತಿಮುತ್ತಿ ತಂತಮ್ಮ ತಂದ ಪುಲ್ಲುಂ ಪುಳ್ಳಿಯಂ ಮೊದಲಾದ ಕಸಂಗಳೆಲ್ಲಮಂ ಚಿರಂಜೀವಿ ತೋಳೆದ ಗಿರಿಗುಹಾದ್ವಾರಂಗಳೊಳಂ ತರುಕೋಟರಕುಟೀರಂಗಳೊಮಿಡಿದಿಡಿದು ತೀವಿ ಬೞ*ಕ್ಕೆ ಕೊಳ್ಳಿಗಳನಲ್ಲಿಗೆಗಲ್ಲಿಗೆ ತಗುಳ್ಚುವುದಂ ಶತಪತ್ರಮಿತ್ರಪುತ್ರಪತತ್ರಿಗೋತ್ರ ಪ್ರಧಾನಂಗೆ ಹುತವಹಸಖಂ ಸಹಾಯಮಾಗಿ ಸುಳೆಸುಛೆದು ತಗಳೆ  ಬೀಸಲೊಂಡಂ

ಎನಿತೋದನೋದಿಯಂ ಮನ
ಚನಿತೆ ವಲಂ ಬುದ್ದಿಯಕ್ಕುಮೆಂದು ಸುಮಸ್ತಾ-
ವನಿಯ ಜನಮೊನಕೆವಾಡ-
ಪ್ಪಿನೆಗಂ ಸಲೆ ಮಾಡಿದ ನುಡಿ ಯಥಾರ್ಥಂ ನಿನ್ನೊಳ್||

ಹೀಗೆ ಗ್ರಂಥದ ಉದ್ದಕ್ಕೂ ದುರ್ಗಸಿಂಹನ ಅನ್ಯಾದೃಶ ಅಣುಕುಶೆಲಿಯನ್ನು ಸಹೃದಯರು ಮನಗಾಣಬಹುದು. ತನ್ನ ಪಾತ್ರಗಳಿಗೆ ಹೆಸರಿಡುವಾಗಲೂ ಧ್ವನಿ ರಮ್ಯತೆಯನ್ನು, ಅನ್ವರ್ಥತೆಯನ್ನು ಮೆರೆದಿದ್ದಾನೆ; ಅನಾಗತಮತಿ, ಯದ್ಭವಿಷ್ಯ, ಉತ್ಪನ್ನಮತಿ ಎಂಬ ಮೀನುಗಳು, ಅರಿಮರ್ದನನೆಂಬ ಗೂಬೆಗಳ ರಾಜ ಅತಿ ಲೌಲ್ಯ, ಕರಟಕ, ದವನಕ, ಜಾಂಬವಂತ, ಮಹಾಭೀರು, ಮೃಗಧೂರ್ತ, ಲಂಬಕರ್ಣ, ಉಪಾಯ ನಿಪುಣ ಎಂಬ ನರಿಗಳು,ಜಿಂಹಾಕ್ಷ, ಕ್ರೂರಾಕ್ಷ, ರಕ್ತಾಕ್ಷ ಎಂಬ ಗೂಬೆಗಳು, ಅದೀಪಿ, ಉದೀಪಿ ಪ್ರದೀಪಿ ಚಿರಂಜೀವಿ ಲಘುಪತನಕ ಸಂದೀಪಿ ಮೇಘವರ್ಣ ಎಂಬ ಕಾಗೆಗಳು, ಕಕುದ್ಬಲ, ಕೃಷ್ಣವದನ, ನಾಳೀಜಂಘ, ಚಂಪಲಕ- ಎಂಬ ಕಪಿಗಳು, ಪಿಂಗಳಕ, ಮದೋತ್ಕಟ ಎಂಬ ಸಿಂಹಗಳು, ಬಲುದಲೆಯ, ಹಿರಣ್ಯರೋಮ ಎಂಬ ಇಲಿಗಲು, ಕ್ರಕಚ ಎಂಬ ಮೊಸಳೆ , ಜಲಪಾಲ ಎಂಬ ಕಪ್ಪೆ, ಮಂದಕ ಎಂಬ ಆಮೆ, ಚಂಡಪರಾಕ್ರಮ, ಮಧುರಾಲಾಪೆ ಎಂಬ ಟಿಟ್ಟಿಭ ಮಿಥುನ ಧವಲಪಕ್ಷ, ಸುಮಿತ್ರ, ಸಕಟ, ವಿಕಟ, ಎಂಬ ಹಂಸಗಳು ಸೂಚೀಮುಖ ಎಂಬ ಹಕ್ಕಿ ಮೊದಲಾದವುಗಳು ದುರ್ಗಸಿಂಹನ ಪಂಚತಂತ್ರದ ಮರೆಯಲಾಗದ ಪಾತ್ರಗಳು. ಇವು ಮನುಷ್ಯನ ಸುಗುಣ ದುರ್ಗುಣಗಳನ್ನು ಹೊತ್ತು ಮನುಷ್ಯನನ್ನೇ ಅಣಕಿಸುತ್ತವೆ.

ದುರ್ಗಸಿಂಹನು ಗ್ರಂಥದ ಉದ್ದಕ್ಕೂ ಕೆಲವು ಸಾರ್ವಕಾಲಿಕ ಸತ್ಯಗಳನ್ನು ಘೋಷಿಸಿದ್ದಾನೆ. ವಸುಭಾಗಭಟ್ಟನೆಂಬ ಬ್ರಾಹ್ಮಣನ ಬಾಯಿಯಿಂದ ತನ್ನನ್ನು ತಿರಸ್ಕರಿಸಿದ ಬ್ರಾಹ್ಮಣನನ್ನು ಜರೆಯಿಸಿದ್ದಾನೆ :

ಸಂಜೀವಕನು ಪಿಂಗಳಕನಿಗೆ ಸಂಸಾರದ ಅನಿತ್ಯತೆಯನ್ನು ಸಾರಿದ ಈ ಪದ್ಯ ವೈರಾಗ್ಯದ ಉತ್ತಮ ಭಾವಗೀತದಂತಿದೆ:

ಅನಿಮಿಷಚಾಪದಂತೆ ಸಿರಿ ಶಾರದನೀರದ ಕಾಂತಿಯಂತೆ ಯೌ
ವನದೆಸಕಂ ತೃಣಾಗ್ರಗತ ವಾಃಕಣಿಕಾಗಣದಂತೆ ಸಂದ ಜೀ
ವನಮದಱೆಂಭವಪ್ರಭವಜೀವಿಗೆ ನಿರ್ಮಲಧರ್ಮಮಾರ್ಗದೊಳ್
ಮನಮುಸೆದಾಗಳುಂ ನಡೆಯವೇೞ್ಟುದು ವಿಶ್ವಮೃಗೇಂದ್ರವಲ್ಲಭಾ

ತಂತುವಾಯನ ಕಥೆಯನ್ನೆಲ್ಲ ಕಣ್ಣಾರೆ ಕಂಡು ವೃದ್ದ ತಾಪಸನು ತೀರ್ಮಾನಕ್ಕೆ ಬರುತ್ತಾನೆ; ಅವನ ತೀರ್ಮಾನ ತಪ್ಪಲ್ಲ ಎಂದೆನಿಸುವುದು:

ನಂಬಿಪರೆನ್ನರಪ್ಪರುಮನೇಱದಿಂ ಸಲೆ ನಂಬೆ ಪಾಣ್ಬೆಯರ್
ಡಂಬಿಪರಿಂತನೇಕವಿಧದಿಂದೆ ವಿಚಾರಿಸಿ ನೋಡೆ ಪೆಂಡಿರಂ
ನಂಬಲೆಯಾಗ ನಂಬದಿರಲಾಗವರಿಲ್ಲದೆ ಬಾಳಲಾಗದೇ
ನೆಂಬುದಿದರ್ಕೆ ತಕ್ಕುದನೆ ಬಲ್ಲವನುಳ್ಳೊಡೆ ದೇವನಲ್ಲವೇ||