ಕರತಲಾಮಲಕವಾಗದು | ಈ ಕರ್ಮಿಗಳಿಗೆ ಕರ್ಮಹರಿದು
ಬ್ರಹ್ಮ ತೋರದು || ಪ || ಕರಿ ಆಲಮಧ್ಯದಲ್ಲಿ
ಉರಿದ ಕಾಡು ಕಿಚ್ಚಿನಲ್ಲಿ | ಪರಮನಿರುವ ನೆಲೆಯ
ಕಂಡು ಪರಮನೊಳಗೆ ಬೆರೆಯೊತನಕ || ಪ ||

ಪಂಚಭೂತ ಮಹಿಮೆ ತಿಳಿಯುತಾ ಪಂಚಕರಣ
ಹಂಚಿಕೆಯ ಹಸಿಗೆ ಮಾಡುತಾ ಪಂಚ ಪಂಚ
ನಾವು ಕೂಡಿ ಪಂಚ ಅಂಗವನ್ನೆ ಕಳೆದು
ಪಂಚನಾದದೊಳಗೆ ಬೆರೆತು
ವಿಷ್ಟ್ರಪಂಚನಾಗೋತನಕ || ಕರತಲಾ ||

ವೇದಮೂಲ ಓದಿನೋಡುತಾ | ವೇದಮೂಲ
ವಾದವಸ್ತು ತಾನೆಯಾಗುತಾ | ವೇದಮೂಲ
ಓದಿನೋಡಿ ಗಾದೆನಾಶ್ವರ‍್ಯವಾಗಿ | ನಾದಬ್ರಹ್ಮ
ದೊಳಗೆ ಬೆರೆತು ನಿಷ್ಪ್ರಪಂಚನಾಗೋತನಕ || ಕರತಲಾ ||

ಆರುಗಿರಿಯ ಏರಿನೋಡುತಾ ತಾರಕಾಗ್ರ
ಮೇಲೆ ಶಿಖರ ಹತ್ತಿ ನೋಡುತಾ
ಮೂರು ನದಿಯ ಮಧ್ಯದಲ್ಲಿ
ಮುಕ್ತಿಕಾಂತೆಯನ್ನು ಕಂಡು
ದ್ವಾರವನ್ನು ದೂರಿ ಹೋಗಿ ಧೀರನೊಳಗೆ
ಬೆರೆಯೊತನಕ || ಕರತಲಾ ಕರತಲಾ ಕರತಲಾ ||