ಚಂ|| ತಳಿರ್ಗಳ ಪಾಸಿನೊಳ್ ಪೊರಳುತಿರ್ದೞಲಂ ಕಿಡೆ ಸೋಂಕೆ ಸೋಂಕುಗಳ್
ಕಳೆದುವು ಮೆಯ್ಯ ಸುಯ್ಯ ಪದವೆಂಕೆಗಳಂ ಬಿಗಿಯಪ್ಪಿದಪ್ಪುಗಳ್|
ಕಳೆದುವು ನಾಣುಮಂ ಕಿಱದು ಜಾಣುಮನೞ್ಕಱನೀವ ಚುಂಬನಂ
ಕಳೆದುವು ಗರ್ವಮಂ ಕಳೆದುವಂತವರಿರ್ವರ ಮನ್ಮಥದ್ರವಂ|| ೨೭

ಮಾಲಿನಿ|| ಅಭಿನವ ಮದಲೇಖಾ ಲಾಲಿತಂ ವಿಭ್ರಮ ಭ್ರೂ
ರಭಸ ಗತಿವಿಳಾಸಂ ದೀಪ್ತ ಕಂದರ್ಪ ದರ್ಪ||
ಕ್ಷುಭಿತ ಗಳನಿನಾದಂ ಪ್ರಸುರದ್ಘರ್ಮವಾರಿ
ಪ್ರಭವಮೆಸೆದುದಂತಾ ಕಾಂತೆಗಾ ಕಾಂತಸಂಗಂ|| ೨೮

ವ|| ಅಂತು ಕಾಮದೇವನುಂ ರತಿಯುಂ ವಸಿಷ್ಠನುಮರುಂಧತಿಯುಮೀಶ್ವರನುಂ ಪಾರ್ವತಿಯುಮೆನಿಸಿ ಸಮರೂಪ ಸಮಸತ್ವ ಸಮರತಂಗಳೊಳೆ ಸಮಾನುರಾಗಮಂ ಪಡೆಯೆ ಸುಖಮಿರ್ಪನ್ನೆಗಂ ಸುಭದ್ರೆಗೆ ಗರ್ಭಚಿಹ್ನಂಗಳ್ ತೋ-

ಶುಭಕರವಾದ ದಿನ, ನಕ್ಷತ್ರಯೋಗ ಕರಣಗಳನ್ನು ನೋಡಿ- ೨೫. ಹಸಿರುವಾಣಿಯ ಚಪ್ಪರ, ಹಸೆಯಮಣೆ, ಪಂಡಿತರ ವೇದಘೋಷ ಇವು ಕಣ್ಣಿಗೆ ತೃಪ್ತಿಯನ್ನುಂಟುಮಾಡುತ್ತಿರಲು ಅಂಗಡಿಯ ಸಾಲಿನ ಹಾಗೆ ಶೂರರ, ಮಹಾ ಸಾಮಂತರ, ಸುಮಂಗಲೀಸ್ತ್ರೀಯರ ಸಮೂಹವು ಓಳಿಗೊಂಡಿರಲು ಮಂಗಳವಾದ್ಯ ಧ್ವನಿ ಘೋಷಿಸುತ್ತಿರಲು ಶ್ರೀಕೃಷ್ಣನು ಪ್ರೀತಿಯಿಂದ ಗುಣಾರ್ಣವ ಮಹಾರಾಜನಿಗೆ (ಅರ್ಜುನನಿಗೆ) ಕನ್ಯೆಯಾದ ಸುಭದ್ರೆಯನ್ನು ಧಾರಾಪೂರ್ವಕ ದಾನಮಾಡಿಕೊಟ್ಟನು. ವ|| ಹಾಗೆ ಅವರಿಬ್ಬರ ಪ್ರೇಮವೆಂಬ ಬಳ್ಳಿಗೆ ಹೊಯ್ ನೀರೆರೆಯುವಂತೆ ಧಾರಾಜಲವನ್ನು ಕೊಟ್ಟು ಯಥೇಚ್ಛವಾಗಿ ದ್ರವ್ಯವನ್ನು ದಾನಮಾಡಿದನು. ೨೬. ವಿಷ್ಣುವಿನ ಹೃದಯದಲ್ಲಿರುವ ಕೌಸ್ತುಭರತ್ನವನ್ನೂ ಕಾಂತಿಹೀನವನ್ನಾಗಿ ಮಾಡುವ ಅನೇಕ ಆಭರಣಗಳನ್ನೂ ಐರಾವತವನ್ನೂ ಕೀಳ್ಮಾಡುವ ಆನೆಗಳನ್ನೂ ಉಚ್ಚೆ

ಶ್ರವಸ್ಸನ್ನು ತಿರಸ್ಕರಿಸುವ ಕುದುರೆಗಳನ್ನೂ ಮನ್ಮಥನ ಪುಷ್ಪಬಾಣಗಳಂತಿರುವ ವೇಶ್ಯಾಸ್ತ್ರೀಯರನ್ನೂ ಅಸಂಖ್ಯಾತವಾಗಿ ಕೃಷ್ಣನು ತಂಗಿಗೆ ಬಳುವಳಿಯಾಗಿ ಕೊಟ್ಟನು. ವ|| ಹಾಗೆ ಬಳುವಳಿ ಕೊಟ್ಟ ಬಳಿಕ ಧರ್ಮರಾಜನು ಬಲರಾಮನನ್ನು ಅನೇಕ ಉಚಿತ ಸತ್ಕಾರಗಳಿಂದ ಸಂತೋಷಪಡಿಸಿ ದ್ವಾರಕಾಪಟ್ಟಣಕ್ಕೆ ಕಳುಹಿಸಿಕೊಟ್ಟನು. ಆ ಮದುವೆಯ ಮಹೋತ್ಸವವಾದ ಮೇಲೆ ೨೭. ಅರ್ಜುನ ಸುಭದ್ರೆಯರ ಸಂತೋಷಕ್ಕೆ ಪಾರವೇ ಇಲ್ಲದಾಯಿತು. ಚಿಗುರಿನ ಹಾಸಿಗೆಯಲ್ಲಿ ಹೊರಳುತ್ತಿದ್ದ ದುಖವನ್ನು ಅವರ ಪರಸ್ಪರ ಸ್ಪರ್ಶಗಳು ಕಳೆದುವು; ಶರೀರದ ಉಸುರಿನ ಬೆಂಕಿಯನ್ನು ಅವರ ಬಿಗಿಯಾಗಿ ಅಪ್ಪಿದ ಆಲಿಂಗನಗಳು ಕಳೆದುವು. ಲಜ್ಜೆಯನ್ನೂ ಜಾಣ್ಮೆಯನ್ನೂ ಅವರ ಪರಸ್ಪರ ಪ್ರೀತಿಯಿಂದ ಕೊಡುತ್ತಿರುವ ಮುತ್ತುಗಳು ಹೋಗಲಾಡಿಸಿದುವು. ಅವರಿಬ್ಬರ ಮದನೋದಕವು ಅವರ ಹೆಮ್ಮೆಯನ್ನು ಕಳೆದವು. ೨೮. ಹೊಸದಾದ ಮದಲೇಖೆಯಿಂದ ಲಾಲಿಸಲ್ಪಟ್ಟ, ಸುಂದರವಾದ ಹುಬ್ಬಿನ ವೇಗವಾದ ವಿಲಾಸವನ್ನುಳ್ಳ ಹೆಚ್ಚಾದ ಕಾಮಗರ್ವದಿಂದ ಕೆರಳಿದ ಕೊರಳಿನ ಶಬ್ದವನ್ನುಳ್ಳ ಪ್ರಕಾಶಮಾನವಾದ ಬೆವರುಗಳನ್ನು ಹುಟ್ಟಿಸುವ ಆ ಪ್ರಿಯನ ಸಮಾಗಮವು ಆ ಸುಭದ್ರೆಗೆ ಸಂತೋಷವನ್ನುಟುಮಾಡಿತು. ವ|| ಮನ್ಮಥನೂ ರತಿಯೂ, ವಸಿಷ್ಠನೂ ಅರುಂಧತಿಯೂ ಈಶ್ವರನೂ ಪಾರ್ವತಿಯೂ ಎನ್ನಿಸಿ ಸಮಾನವಾದ ರೂಪ, ಸಮಾನವಾದ ಶಕ್ತಿ, ಸಮಾನವಾದ ಸುರತಕ್ರೀಡೆಗಳಲ್ಲಿ ಸಮಾನವಾದ ಪ್ರೀತಿಯನ್ನು ಪಡೆಯುತ್ತಾ

ಕಂ|| ಒಟ್ಟಜೆಯಿಂ ಭಾರತದೊಳ್
ಕಟ್ಟಾಳ್ಗಳನಿಱದು ತವಿಸಲಾ ಜೆಟ್ಟಿಗರಂ|
ಪುಟ್ಟಿದನೆಂಬವೊಲದಟಂ
ಪುಟ್ಟಿದನಭಿಮನ್ಯು ಕಲಿತನಂ ಪುಟ್ಟುವವೋಲ್|| ೨೯

ವ|| ಅಂತಾತಂ ಪುಟ್ಟುವುದುಂ ತಮಗೆ ಸಂತಸಂ ಪುಟ್ಟಿ ಸುಖಮಿರ್ಪನ್ನೆಗಂ-

ಚಂ|| ಅಗರುವ ಮೆಚ್ಚುವಚ್ಚ ಸಿರಿಕಂಡದೊಳಗ್ಗಲಿಸಿತ್ತು ಸೂಡು ಶ
ಯ್ಯೆಗಳ ಬಿಯಕ್ಕೆ ಜೊಂಪದಲರ್ವಾಸುಗಳೊಳ್ ನೆಲಸಿತ್ತು ಪೂತ ಗೊ|
ಜ್ಜಗೆಗಳ ಸಿಂದುರಂಗಳೊಳಗೋಗರಗಂಪನೆ ಬೀಱುತಿರ್ಪ ಮ
ಲ್ಲಿಗೆಯೊಳರಲ್ದ ಸಂಪಗೆಯೊಳಗ್ಗಲಿಸಿತ್ತು ಬಸಂತಮಾಸದೊಳ್|| ೩೦

ಉ|| ಮುಂ ಮಹಿಯೆಲ್ಲಮಂ ಶಿಶಿರರಾಜನೆ ಬಿಚ್ಚತಮಾಳ್ದನೀಗಳಾ
ತಂ ಮಿಡುಕಲ್ಕೆ ಸಲ್ಲಿರದೆ ಪೋಪುದದೇಕೆನೆ ಕಾಮದೇವನಿ|
ತ್ತಂ ಮಧು ಪೆತ್ತನೀ ನೆಲನನಿಂತಿದು ಪತ್ತಳೆಯೆಂದು ಸಾಱುವ
ದಂ ಮಿಗೆ ಕರ್ಚಿ ಪಾಱದುವು ಕೆಂದಳಿರಂ ಗಿಳಿವಿಂಡಿನೋಳಿಗಳ್|| ೩೧

ಚಂ|| ಕೆೞಗಣ ಕೆಂದಳಿರ್ ಪುದಿದ ಮೇಗಣ ಪಂದಳಿರೊಂದಿದೊಂದು ಕೆ
ಯ್ಗೞದ ಪಸುರ್ಪುಮಂ ಪೊಳೆವ ಕೆಂಪುಮನಾಳ್ದಿರೆ ಬೇಟದೊಳ್ ಕನ|
ಲ್ದುೞದ ವಿಯೋಗಿಯಳ್ಳೆರ್ದೆಯನಾಯ್ದದನಾಟಿಸಲೆಂದೆ ಮನ್ಮಥಂ
ಘೞಯಿಸಿ ಕೆಂಪುವಾಸಿದವೊಲಿರ್ದುವು ಮಾಮರಗಳ್ ಬಸಂತದೊಳ್|| ೩೨

ಚಂ|| ಪರೆಯೆ ಪಸುರ್ಪು ಬೆಳ್ಪಡರೆ ಬಲ್ಮುಗುಳೊಳ್ ಪೊರೆದೋ ತೆಂಬೆರಲ್
ಪೊರೆವೊರೆಯಂ ಸಡಿಲ್ಚೆ ನಡು ಪೊಂಗಿರೆ ಮಲ್ಲಿಗೆಗಳ್ ಬಸಂತದೊಳ್|
ಬಿರಿದೊಡೆ ನಲ್ಲರಂ ನೆನೆದ ನಲ್ಲರ ಮೆಲ್ಲೆರ್ದೆಗಳ್ ಬಸಂತದೊಳ್
ಬಿರಿದುವಂದೆಂತೊ ಮಲ್ಲಿಗೆಗೆ ನಲ್ಲರ ಮೆಲ್ಲೆರ್ದೆ ವೇಳೆಗೊಂಡುದೋ|| ೩೩

ಸುಖವಾಗಿರಲು ಸುಭದ್ರೆಗೆ ಗರ್ಭ ಚಿಹ್ನೆಗಳು ತೋರಿದುವು. ೨೯. ಪರಾಕ್ರಮದಿಂದ ಭಾರತ ಯುದ್ಧದಲ್ಲಿ ಅತ್ಯಂತ ಶೂರರಾದ ವೀರನನ್ನು ಕತ್ತರಿಸಿ ನಾಶಪಡಿಸುವುದಕ್ಕೆ ಹುಟ್ಟಿದನೆಂಬ ಹಾಗೆ ಪರಾಕ್ರಮಶಾಲಿಯಾದ ಅಭಿಮನ್ಯುವು ಪರಾಕ್ರಮವೇ ಮೂರ್ತಿವತ್ತಾಗಿ ಹುಟ್ಟುವ ಹಾಗೆ ಹುಟ್ಟಿದನು. ವ|| ಆತನು ಹುಟ್ಟಲಾಗಿ ತಮಗೆ ಸಂತೋಷವೂ ಹುಟ್ಟಿ ಸುಖವಾಗಿರುವಷ್ಟರಲ್ಲಿ ೩೦. ವಸಂತಋತು ಪ್ರಾಪ್ತವಾಯಿತು. ಚಳಿಗಾಲದಲ್ಲಿ ಶಾಖಕ್ಕಾಗಿ ಉಪಯೋಗಿಸುತ್ತಿದ್ದ ಅಗರುವಿನಲ್ಲಿದ್ದ ತೃಪ್ತಿಯು ಸ್ವಚ್ಛವಾದ ಶ್ರೀಗಂಧದ ಲೇಪನದಲ್ಲಿ ಅತಿಶಯವಾಯಿತು. ಬೆಚ್ಚನೆಯ ಹಾಸಿಗೆಯಲ್ಲಿದ್ದ ಬಯಕೆಯು ಗೊಂಚಲಾಗಿರುವ ಹೂವಿನ ಹಾಸಿಗೆಯಲ್ಲಿ ನೆಲೆಸಿತು. ಹೂಬಿಟ್ಟಿದ್ದ ಸೇವಂತಿಗೆ ಮತ್ತು ಸಿಂಧುವಾರ ಹೂವುಗಳಲ್ಲಿದ್ದ ಆಸಕ್ತಿ ಮಿಶ್ರಗಂಧವನ್ನು ಬೀರುತ್ತಿರುವ ಮಲ್ಲಿಗೆಯಲ್ಲಿಯೂ ಅರಳಿದ ಸಂಪಗೆಯಲ್ಲಿಯೂ ಅತಿಶಯವಾಯಿತು. ೩೧. ಮೊದಲು ಭೂಮಿಯನ್ನೆಲ್ಲ ಮಾಗಿಯ ಕಾಲವೆಂಬ ರಾಜನು ತಾನೇ ತಾನಾಗಿ ಆಳಿದನು. ಈಗ ಆತನು ಚಲಿಸಲು ಸಾಧ್ಯವಿಲ್ಲ ಇರದೆಹೋಗಬೇಕು. ಅದೇಕೆಂದರೆ ಈ ಭೂಮಿಯನ್ನು ಮನ್ಮಥನು ಕೊಟ್ಟನು, ವಸಂತರಾಜನು ಪಡೆದನು. ಇದು ಹೀಗೆ ರಾಜಶಾಸನ (ಓಲೆಯಪತ್ರ) ಎಂದು ಡಂಗುರ ಹೊಡೆಯುವ ರೀತಿಯಲ್ಲಿ ಗಿಳಿಯ ಹಿಂಡಿನ ಸಾಲುಗಳು ಕೆಂಪಾದ ಚಿಗುರುಗಳನ್ನು ಕಚ್ಚಿಕೊಂಡು ಹಾರಿದುವು. ೩೨. ಕೆಳಭಾಗದ ಕೆಂಪು ಚಿಗುರಿನಿಂದ ಕೂಡಿದ ಮೇಲುಭಾಗದ ಹಸರು ಚಿಗುರು ಒಂದಕ್ಕೊಂದು ಕೂಡಿಸಿಕೊಂಡು ಅತಿಶಯವಾದ ಹಸಿರು ಬಣ್ಣವನ್ನೂ ಹೊಳೆಯುವ ಕೆಂಪು ಬಣ್ಣವನ್ನೂ ಹೊಂದಿರಲು ವಿರಹದಿಂದ ಕೆರಳಿ ಉಳಿದುಕೊಂಡ ವಿರಹಿಯ ನಡುಗುವ ಎದೆಯನ್ನು ಆಯ್ದುಕೊಂಡು ಅದನ್ನು ಬಯಸಲಿ ಎಂದೇ ಮನ್ಮಥನು ಅದನ್ನು ಸೇರಿಸಿ ಕೆಂಪು ಬಣ್ಣವನ್ನು ಹಾಸಿದ ಹಾಗೆ ಮಾವಿನ ಮರಗಳು ವಸಂತ ಕಾಲದಲ್ಲಿ ರಮ್ಯವಾಗಿದ್ದುವು. ೩೩. ವಸಂತಕಾಲದಲ್ಲಿ ಮಲ್ಲಿಗೆಯ ಹಸಿರು ಬಣ್ಣ ಹೋಗಿ ಬಲಿತ ಮೊಗ್ಗುಗಳಲ್ಲಿ ಬಿಳಿಯ ಬಣ್ಣವು ಕೂಡಿದವು. ದಳದ ಪದರಗಳು ತೋರುತ್ತಿರಲು ತಂಗಾಳಿಯು ಆ ದಳದ ಪದರಗಳನ್ನು ಸಡಲಿಸಿದವು. ಮೊಗ್ಗಿನ ಮಧ್ಯಭಾಗವು ಉಬ್ಬಿ ಮಲ್ಲಿಗೆಯು ಅರಳಿರಲು ಪ್ರಿಯರನ್ನು ನೆನಸಿಕೊಂಡ ವಿರಹಿಗಳ ಹೃದಯಗಳು ಒಡೆದುವು. ಮಲ್ಲಿಗೆಯ ಅರಳುವಿಕೆಗೆ ಪ್ರಿಯ ಮೃದುಹೃದಯವೂ ಸಮಯಪಾಲನೆ ಮಾಡಿವೆ ! ೩೪. ಹೂವಿನ

ನನೆಯೆಳಗಂಪನೆತ್ತಿಯುಮಣಂ ನನೆ ನಾಱದರಲ್ದನೇಕ ಕೋ
ಕನದ ವನಂಗಳೊಳ್ ಸುೞದು ತಣ್ಣಸಮಾಗದೆ ಕೂಡೆ ಬಂದ ಮಾ|
ವಿನ ಪೊಸ ಪೂವಿನೊಳ್ ಪೊರೆದು ಪೊಣ್ಮಿದ ಕಂಪು ಮೊಗಂಗಳಂ ಚಳಿ
ಲ್ಲೆನೆ ಕೊಳೆ ಪೊಯ್ಯೆ ತೀಡಿದುದು ತೆಂಕಣ ಗಾಳಿ ವಸಂತಮಾಸದೊಳ್|| ೩೪

ಮುಗುಳ್ವದನಾದ ಸಂಪಗೆ ಮಡಲ್ತದಿರ್ಮುತ್ತೆ ಮರಲ್ದರಲ್ದ ಮ
ಲ್ಲಿಗೆ ನನೆಗರ್ಚಿ ಕಾಕಳಿಯೊಳಾಣತಿಗೆಯ್ವ ಮದಾಳಿ ಪೋ ಪುಗಲ್|
ಪುಗಲೆನುತಿರ್ಪ ಪಕ್ಕಿ ಮನುಮಂ ಕವರುತ್ತಿರೆ ಯೋಗಿಗಂ ವಿಯೋ
ಗಿಗಮರಿದಾಯ್ತು ಪೊಕ್ಕ ಪುಗಿಲಿಂತು ವಸಂತಕ ಚಕ್ರವರ್ತಿಯಾ|| ೩೫

ವ||ಅಂತು ಭುವನಕ್ಕೆಲ್ಲಮೊಸಗೆವರ್ಪಂತೆ ಬಂದ ವಸಂತದೊಳೊಂದು ದಿವಸಮನ್ನವಾಸದೋಲಗದೊಳುದಾತ್ತನಾರಾಯಣನುಂ ನಾರಾಯಣನುಮಿರ್ದಲ್ಲಿಗೊರ್ವಂ-

ಕಂ|| ತೊಟ್ಟೆಕ್ಕವಡಂ ಮರವಿಲ್
ಕಟ್ಟಿದ ಪಣೆಕಟ್ಟು ಬೇಂಟೆವ ದೊರೆಯೊಳೊಡಂ|
ಬಟ್ಟಸಿಯ ಸುರಗಿ ದಳಿವದ
ತೊಟ್ಟಂಗಿಗೆ ತನ್ನೊಳಮರೆ ಬೇಂಟೆಯನೊರ್ವಂ|| ೩೬

ಬಂದು ಪೊಡವಟ್ಟು ಕಂಡಿಂ
ತೆಂದಂ ಪೊಲನುಡುಗಿ ಬಂದುದುಡಿದುದು ಪುಲ್ ಕಾ|
ಡುಂ ದಲೆಲೆಯಿಕ್ಕಿ ಘಳಿಲೆನೆ
ನಿಂದುವು ತಣಿದುವು ಮೃಗಂಗಳೆತ್ತಲುಮೀಗಳ್|| ೩೭

ಸುೞಯದು ಗಾಳಿ ಮೃಗಂ ಕೆ
ಯ್ವಱಗಳ ಮೇತದೊಳೆ ತಣಿದಪುವು ಪಂದಿಗಳುಂ|
ಪೞ ನವಿರಿಕ್ಕಿದುವಾಳಂ
ಪೞು ಪರಿದಾಡಲ್ ಕರಂ ಬೆಡಂಗವನಿಪತೀ|| ೩೮

ಬರವಂ ಕಾಡಂ ಬೇಗೆಗೆ
ಕರಮಱದೆರಡುಂ ಮೃಗಗಳುಂ ತಣ್ಬುೞಲೊಳ್|
ನೆರೆದೊಡವಂದುವು ತಪ್ಪದಿ
ದರಿಕೇಸರಿ ಕಂಡು ಮೆಚ್ಚುವೈ ಕೋಳ್ಪಾಂಗಂ||  ೩೯

ಎಳೆಯ ವಾಸನೆಯನ್ನು ಧರಿಸಿಯೂ ಹೂವಿನ ವಾಸನೆಯಿಂದ ಗಂಧಯುಕ್ತವಾಗದೆ ಅರಳಿದ ತಾವರೆಯ ವನಗಳಲ್ಲಿ ಸುತ್ತಾಡಿಯೂ ತಂಪಾಗಿ ಆಗದೆ ಕೂಡಲೆ ಬಂದ ಹಣ್ಣಾದ ಮಾವಿನ ಮರದ ಹೊಸ ಹೂಗಳಲ್ಲಿ ಸೇರಿಕೊಂಡು ಅದರಿಂದ ಹೊರಹೊಮ್ಮಿದ ಸುವಾಸನೆಯು ಮುಖಗಳನ್ನು ಚಳಿಲ್ಲನೆ ಆಕ್ರಮಿಸಿ ಅಪ್ಪಳಿಸುವಂತೆ ವಸಂತಮಾಸದಲ್ಲಿ ತೆಂಕಣಗಾಳಿ ಬೀಸಿತು. ೩೫. ಮೊಗ್ಗಿನ ಹದಕ್ಕೆ ಬಂದ ಸಂಪಗೆಯೂ ಹಬ್ಬಿದ ಅದಿರ್ಮುತ್ತೆಯೂ ಚೆನ್ನಾಗಿ ಅರಳಿದ ಮಲ್ಲಿಗೆಯೂ ಹೂವನ್ನು ಕಚ್ಚಿಕೊಂಡು ಇಂಪಾದ ಧ್ವನಿಯಲ್ಲಿ ಆಲಾಪನೆ ಮಾಡುತ್ತಿರುವ ಸೊಕ್ಕಿದ ದುಂಬಿಯೂ, ಹೋಗಿ ಪ್ರವೇಶಿಸಿರಿ, ಪ್ರವೇಶಿಸಿರಿ ಎನ್ನುತ್ತಿರುವ ಕೋಗಿಲೆಪಕ್ಷಿಯೂ ಮನಸ್ಸನ್ನು ಸೂರೆಗೊಳ್ಳುತ್ತಿರಲು ಯೋಗಿಗೂ ವಿಯೋಗಿಗೂ ವಸಂತ ಚಕ್ರವರ್ತಿಯ ಪ್ರವೇಶವು ಸಹಿಸಲಸಾಧ್ಯವಾಯಿತು. ವ|| ಹಾಗೆ ಲೋಕಕ್ಕೆಲ್ಲ ಹಬ್ಬ ಬರುವ ಹಾಗೆ ಬಂದ ವಸಂತ ಕಾಲದಲ್ಲಿ ಒಂದು ದಿವಸ ಭೋಜನಶಾಲೆಯ ಸಭೆಯಲ್ಲಿ ಅರ್ಜುನನೂ ಕೃಷ್ಣನೂ ಇದ್ದ ಸ್ಥಳಕ್ಕೆ ೩೬. ತೊಟ್ಟ ಎಕ್ಕಡ, ಕಟ್ಟಿದ ಮರದ ಬಿಲ್ಲು, ಕಟ್ಟಿದ ಹಣೆಯ ಕಟ್ಟು, ಬೇಟೆಯ ಪರೆ (ತಮಟೆ) ಸರಿಯಾಗಿ ಹೊಂದಿಕೊಂಡಿರುವ ಸಣ್ಣ ಕತ್ತಿ, ಉತ್ತರೀಯದಿಂದ ಕೂಡಿದ ಅಂಗಿ ಇವುಗಳಿಂದ ಕೂಡಿದ ಬೇಟೆಗಾರನೊಬ್ಬನು ೩೭. ಬಂದು ನಮಸ್ಕಾರ ಮಾಡಿ ಹೀಗೆಂದನು: ಹೊಲಗಳಲ್ಲಿ ಕಾಳು ಕಡ್ಡಿಗಳನ್ನು ಬಿಡಿಸಿಯಾಯಿತು. ಹುಲ್ಲೊಕ್ಕಣೆಯೂ ಆಯಿತು. ಕಾಡು ನಿಜವಾಗಿಯೂ ಎಲೆ ಬಿಟ್ಟು ಚಿಗುರಿ ನಿಂತಿವೆ. ಎಲ್ಲ ಕಡೆಯಲ್ಲಿಯೂ ಈಗ ಮೃಗಗಳು ತೃಪ್ತಿಪಟ್ಟಿವೆ. ೩೮. ರಾಜನೇ ಈಗ ಗಾಳಿ ಬೀಸುವುದಿಲ್ಲ, ಮೃಗಗಳು ಹೊಲದ ದಾರಿಯಲ್ಲಿರುವ ಮೇವುಗಳಿಂದಲೇ ತೃಪ್ತಿಪಡುತ್ತಿವೆ. ಹಂದಿಗಳೂ ತಮ್ಮ ಹಳೆಯ ಕೂದಲುಗಳನ್ನು ವಿಶೇಷವಾಗಿ ಬೀಳಿಸಿಕೊಂಡಿವೆ. ಕಾಡು ಈಗ ಓಡಾಡಲು ಅತ್ಯಂತ ಸೊಗಸಾಗಿದೆ. ೩೯. ಮೃಗಗಳ ಬರುವಿಕೆಯನ್ನೂ ಕಾಡಿನ ಸ್ವರೂಪವನ್ನೂ ಚೆನ್ನಾಗಿ ತಿಳಿದು ಎರಡು ಜಿಂಕೆಗಳೂ ತಂಪಾದ ಮರಗಳ

ಈ ಪದ್ಯದ ಅರ್ಥ ಮತ್ತು ಅನ್ವಯ ಸ್ಪಷ್ಟವಾಗಿಲ್ಲ. ಏನೋ ಪಾಠದೋಷವಿರಬೇಕು.

ಕಾಡೊಡಮ ವೇಳೆ ಸಲೆ ಕೆ
ಯ್ಗೂಡಿದುದೆನೆ ನೆಲದೊಳಿರ್ದ ನೆಲ್ಲಿಯ ಕಾಯುಂ|
ನೋಡ ನೆಲಮುಟ್ಟಲೞಯೊ
ಳಾಡುವೊಡೀ ದೆವಸಮಲ್ತೆ ಬೇಂಟೆಯ ದೆವಸಂ|| ಎ ೪೦

ವ|| ಮತ್ತಂ ಬೇಂಟೆ ಜಾಱಲ್ಲದೆ ಬೇಂಟೆಯ ಮಾತಂ ಬಿನ್ನಪಂಗೆಯ್ವೆಂ-

ಪಿರಿಯಕ್ಕರ|| ಆಡಲಾಡಿಸಲ್ ಪಾೞಯಂ ನಿಱಸಲುಂ ಪರಿಗೊಳಲ್ ತೊವಲಿಕ್ಕ ಲೊಳಗಂಬರಲ್
ಕಾಡ ಬೇಲಿಯಂ ಮಾರ್ಕಾಂಡನಱಯಲುಂ ಮೂಡಿಗೆ ಕಕ್ಕುಂಬಂ ಸುೞಸಿ ಜೊಂಪಂ|
ಬೀಡು ಬಿಡುವಿಂಬು ಕದಳಿ ತೆಂಗಿನ ತಾಣಂ ಜಾಣಿಂ ನೀರ್ದಾಣಮೆಂದೆಡೆಯಱದುಂ
ಮಾಡಲ್ ಮಾಡಿಸಲ್ ಪಡೆ ಮೆಚ್ಚೆ ನೀಂ ಬಲ್ಲೆ ನೀಂ ಮೆಚ್ಚೆ ಹರಿಗ ಕೇಳಾನೆ ಬಲ್ಲೆಂ|| ೪೧

ಕಂ|| ಮೃಗದೊಲವರಮುಮನರಸನ
ಬಗೆಯುಮನಱದಲಸದೆಳಸಲೋಲಗಿಸಲ್ ನೆ|
ಟ್ಟಗೆ ಬಲ್ಲನುಳ್ಳೊಡವನ
ಲ್ತೆ ಗುಣಾರ್ಣವ ಬೇಂಟೆಕಾಱನೊಲಗಕಾಱಂ|| ೪೨

ಪಿರಿಯಕ್ಕರ|| ಮೃಗಮಂ ಗಾಳಿಯನಿರ್ಕೆಯಂ ಪಕ್ಕೆಯಂ ಗಣಿದಮಂ ಕಂಡಿಯಂ ಮಾರ್ಕಂಡಿಯಂ
ಪುಗಿಲಂ ಪೋಗಂ ಬಾರಿಯಂ ಸನ್ನೆಯಂ ನೂಱುವಮರ್ಚುವ ನಿಲ್ವೆಡೆಯಂ|
ಬಗೆಯಂ ತೆಗೆಯನಲ್ಲಾಟಮಂ ಕಾಟಮಂ ನೋವುದಂ ಸಾವುದನೆಲ್ಲಂದದಿಂ
ಬಗೆದಾಗಳರಸರೊಳೆಲ್ಲ ಕೇಳ್ ನೀಂ ಬಲ್ಲೆ ಬೇಂಟೆಕಾಱರೊಳೆಲ್ಲವಾನೆ ಬಲ್ಲೆಂ|| ೪೩

ವ|| ಮತ್ತಂ ನೆಲನುಂ ಗಾಳಿಯುಂ ಕೆಯ್ಯುಂ ಮೃಗಮುಮನಱದು ಕಾಲಾಳೊಳಂ ಕುದುರೆಯೊಳಮೊಳಗಂ ಬರಲಾನೆ ಬಲ್ಲೆನಿದು ಪೆರ್ವೇಂಟೆಯಂದಂ ದೀವದ ಬೇಂಟೆಯಂ ಬಿನ್ನಪಂಗೆಯ್ವೊಡೆ ಗಾಳಿಯುಂ ಕೞವುಮುೞವುಂ ಕಾಂಪು ಮೇಪುಂ ತೋಡುಂ ಬೀಡುಂ ದೆಸೆಯುಂ ಮೆಚ್ಚುಂ ಬೆಚ್ಚುಂ ಪೋಗುಂ ಮೇಗುಂ ಬೆದಱುಂ ಕೆದಱುಂ ಪೆರ್ಚುಂ ಕುಂದುಮನಱದು ಕಾಣಲುಂ ಕಾಣಿಸಲುಂ ಕಡಂಗಲುಂ ಕಡಂಗಿಸಲುಮಡಂಗಲುಮಡಂಗಿಸಲುಮೊಡ್ಡಲು ಮೊಡ್ಡಿಸಲುಂ ಪುಗಿಸಲುಂ ಮಿಗಿಸಲುಂ ಕಾಣದುದಂ ಕಾಣಿಸಲುಂ ಮಾಣದುದಂ ಮಾಣಿಸಲುಮೇಱದುದನೇಱಸಲುಂ ಜಾಣನಾಗಿ ಮೂಱು ಕೊಂಬುಮನಾಱು ನಾಣ್ಪೋಗುಮನೆರೞ್ಪಜ್ಜೆಯುಮಂ ಮೂಱು

ತೋಪಿನಲ್ಲಿ ಸೇರಿ ಜೊತೆಗೂಡಿ ಬಂದಿವೆ. ಇದು ಸುಳ್ಳಲ್ಲ ಅರ್ಜುನನೇ ಮೃಗವು ಸಿಕ್ಕಿಬೀಳುವ ರೀತಿಯನ್ನು ನೀನು ಮೆಚ್ಚುತ್ತೀಯೆ.  ೪೦. ಕಾಡಿನಲ್ಲಿ ಸಂಗ್ರಹಿಸಬೇಕಾದ ವಸ್ತು, ಅದನ್ನು ಸಂಗ್ರಹಿಸಬೇಕಾದ ಕಾಲ ಇವೆರಡೂ ಕೈಗೂಡಿದೆಯೆನ್ನಲು ನೆಲದಲ್ಲಿ ಬಿದ್ದಿರುವ ನೆಲ್ಲಿಯ ಕಾಯೇ ಸಾಕ್ಷಿ. ನೆಲವನ್ನು ಮುಟ್ಟಿ ಆಟ ಆಡುವ ಪಕ್ಷದಲ್ಲಿ ಬೇಟೆಗೆ ಈ ದಿನವೇ ಯೋಗ್ಯವಾದ ದಿನವಲ್ಲವೇ? ವ|| ಬೇಟೆಯ ವಿಷಯವಾದ ಸುಳ್ಳು ಸಂದೇಶಗಳಿಲ್ಲದ ಬೇಟೆಯ ಫಲಾಫಲಗಳನ್ನು ಜ್ಞಾಪಿಸಿಕೊಳ್ಳುತ್ತೇನೆ. ೪೧. ಬೇಟೆಯಾಡುವುದಕ್ಕೂ ಆಡಿಸುವುದಕ್ಕೂ ಕ್ರಮವನ್ನು ಸ್ಥಾಪಿಸುವುದಕ್ಕೂ ಓಡುವುದಕ್ಕೂ ಚಿಗುರನ್ನು ಹಾಕುವುದಕ್ಕೂ ಒಳಗೆ ಪ್ರವೇಶಿಸುವುದಕ್ಕೂ ಕಾಡಿನ ಎಲ್ಲೆಯನ್ನೂ ಎದುರು ಕಾಡನ್ನೂ ತಿಳಿಯುವುದಕ್ಕೂ ಬತ್ತಳಿಕೆ ಕಕ್ಕುಂಬ (?)ಗಳನ್ನು ಸುಳಿಸಿ ಇದು ಜೊಂಪ (?) ಇದು ಬೀಡುಬಿಡಲು ಯೋಗ್ಯವಾದ ಸ್ಥಳ, ಇದು ಬಾಳೆ, ತೆಂಗು ಇರುವ ಸ್ಥಳ ಇದು, ಮೃಗಗಳು ನೀರು ಕುಡಿಯಲು ಬರುವ ಸ್ಥಳ ಎಂದು ಜಾಣ್ಮೆಯಿಂದರಿದು ಸೈನ್ಯವೆಲ್ಲ ಮೆಚ್ಚುವ ಹಾಗೆ ಮಾಡುವುದಕ್ಕೂ ಕೂಡಿಸುವುದಕ್ಕೂ ಸಮರ್ಥನಾಗಿದ್ದೀಯೆ. ಎಲೈ ಅರಿಗನೇ ನೀನು ಮೆಚ್ಚುವ ಹಾಗೆ ಮಾಡಲು ನಾನು ಬಲ್ಲೆ. ೪೨. ಪ್ರಾಣಿಗಳ ಮನಸ್ಸಿನ ಪಕ್ಷಪಾತವನ್ನೂ ಅರಸನ ಅಭಿಪ್ರಾಯವನ್ನೂ ತಿಳಿದು ಉದಾಸೀನ ಮಾಡದೆ ನೇರವಾಗಿ ಸೇವೆ ಮಾಡುವುದನ್ನು ತಿಳಿದಿರುವವನಲ್ಲವೇ ನಿಜವಾದ ಬೇಟೆಗಾರನೂ ಸೇವಾಳುವೂ ಆಗಿರುವವನು! ೪೩. ಪ್ರಾಣಿಗಳ ಸ್ವಭಾವವನ್ನೂ ಗಾಳಿ ಬೀಸುವ ದಿಕ್ಕನ್ನೂ ಪ್ರಾಣಿಗಳಿರುವ ಸ್ಥಳವನ್ನೂ ಅವು ಮಲಗುವ ಎಡೆಯನ್ನೂ ಅವುಗಳ ಸಂಖ್ಯೆಯನ್ನೂ ಅವು ನುಸುಳುವ ಕಂಡಿ ಪ್ರತಿಕಂಡಿಗಳನ್ನೂ ಅವುಗಳ ಪ್ರವೇಶ ಮತ್ತು ನಿರ್ಗಮನಗಳನ್ನೂ ಅವುಗಳಿಗೆ ಉಪಯೋಗಿಸಬೇಕಾದ ಸಂಜ್ಞೆಗಳನ್ನೂ ಅವುಗಳು ಸೇರುವ ನಿಲ್ಲುವ ಸ್ಥಳವನ್ನೂ ಅವುಗಳ ಆಸಕ್ತಿ ವಿರಕ್ತಿಗಳನ್ನೂ ಅವುಗಳ, ಚಲನೆ, ಹಿಂಸೆ, ಯಾತನೆ ಸಾವುಗಳನ್ನೂ ಎಲ್ಲ ರೀತಿಯಿಂದಲೂ ಯೋಚಿಸಿದಾಗ ರಾಜರುಗಳಲ್ಲೆಲ್ಲ ನೀನೂ ಬೇಟೆಗಾರರಲ್ಲೆಲ್ಲ ನಾನೂ ಸಮರ್ಥರಾದವರೆಂಬುದನ್ನು ನೀನೆ ತಿಳಿದಿದ್ದೀಯೆ. ವ|| ಅಲ್ಲದೆ ನೆಲದ ಏರು ತಗ್ಗುಗಳನ್ನೂ ಗಾಳಿಯು ಬರುವ ದಿಕ್ಕನ್ನೂ ಹೆಜ್ಜೆಯ ಗುರುತುಗಳನ್ನೂ ಮೃಗಗಳನ್ನೂ ತಿಳಿದು ಪದಾತಿಸೈನ್ಯ ಮತ್ತು ಈ ಪದ್ಯವೂ ಸರಿಯಾಗಿ ಅರ್ಥವಾಗುತ್ತಿಲ್ಲ.

ಪೊೞ್ತುಮಂ ಮೃಗದ ಮೂಱರವುಮ ನಾಱುರಯ್ಕೆಯುಮಂ ಗಾಳಿಯುಮನೆಱಂಕೆಯುಮಂ ಬಲ್ಲನಾಗಿ ನಂಬಿದ ಬರವುಮಂ ನಂಬದ ಬರವುಮನಱದು ಮಲೆದುದಂ ಮಲೆಯಿಸಲುಂ ಮಲೆದುದಂ ತೊಲಗಿಸಲುಂ ನಂಬದುದಂ ನಂಬಿಸಲುಂ ನಂಬಿದುದಂ ಬಿಡಿಸಲುಮೊಳಪುಗುವುದರ್ಕೆಡೆ ಮಾಡಲುಮೆಡೆಯಾಗದ ಮೃಗಮನವುಂಕಿಸಲುಮೊಲ್ದುಮೊಲ್ಲದ ನಲ್ಲರಂತೆ ಮಿಡುಕಿಸಲುಂ ಪಣಮುಡಿದರಂತಡ್ಡಂ ಮಾಡಲುಮೆಸೆದ ದೆಸೆಗಳ್ಗೋಡಿಸಲುಂ ಕುಮಾರಸ್ವಾಮಿಯ ನಿಮ್ಮಡಿಯ ಕೆಲದೊಳಾನೆ ಬಲ್ಲೆಂ-

ಕಂ|| ಬರೆದಂತೆ ಬೆನ್ನ ಕರ್ಪೆಸೆ
ದಿರೆ ಸೂಚಮನುರ್ಚಿ ಪುಲ್ಲೆಗಾಟಿಸಿ ಮಲೆತ|
ರ್ಪೆರಲೆಯ ಸೋಲಮನೞಯೊ
ಳರಿಕೇಸರಿ ನಿಂದು ನೋೞ್ದುದೊಂದರಸ್ತಲೇ|| ೪೪

ಪದಮುಮನಿಂಬುಮನಣಮಱ
ಯದದೇವುದು ಬದ್ದೆ ಬೆಳ್ಮಿಗಂ ಪಜ್ಜೆದಲೆಂ|
ಬುದನೆರಡುಮನಱವಾತನೆ
ಚದುರಂ ಚದುರಂಗೆ ಬದ್ದೆ ವಜ್ಜೆಗಳೊಳವೇ|| ೪೫

ವ|| ಮತ್ತಂ ಪಂದಿವೇಂಟೆಯ ಮಾತಂ ಬಿನ್ನಪಂಗೆಯ್ವೆಂ-

ಪಿರಿಯಕ್ಕರ|| ನೆಲನಂ ನಿಱುಗೆಯಂ ನಡೆವೊಂದು ಪದಮುಮಂ ಸೋವಳಿ ಮೇವಳಿ ಬಿಸುವಳಿಯಂ
ಬಲಮಂ ಶಕುನಮನೊಳ್ಳಿತ್ತುಪಾಯಮಂ ಪಿಡಿವಂದೀತನೆ ವಂದಿ ಕುರುಡು ಕುಂಟೆಂ|
ದಲಸದಱದಿಂತು ಬಲ್ಮೆಗೆ ಬೆರಲೆತ್ತಿ ಪಜ್ಜೆಯಂ ನೆಲೆಗಳಂ ಕಿಡಲೀಯದೆ
ಸಿಲೆಯ ಮೇಲಾದೊಡಂ ಶಕುನಮಂ ನಿಱಪಂತೆ ನಿಱಸುವೆಂಪ ಪಂದಿಯಂ ನೀಂ ಮೆಚ್ಚಲು|| ೪೬

ವ|| ಮತ್ತಂ ಪಂದಿವೇಂಟೆಯ ನಾಯೆಂತಪ್ಪುವೆಂದೊಡಸಿಯ ನಡುವುಮಗಲುರಮುಂ ತಳ್ತು ಕಟ್ಟಿದ ಕಿವಿಯುಂ ಪುರ್ವುಂ ತೋರಮಾಗಿ ನಿರ್ಮಾಂಸಮಪ್ಪ ಕಾಲ್ಗಳುಂ ನೆಲನಂ ಮುಟ್ಟದುಗುರ್ಗಳುಮನುಳ್ಳುದಾಗಿ ಜಾತ್ಯಶ್ವದಂತೆ ಬೇಗಮಾಗಿ ಕೋಳಿ ಕಾಳಿಕಾಱನಂತೆ ಬಱಯಱವಿಡಿದು ತುಂಬಿನ ನೀರನುರ್ಚಿದಾಗಳಡೆ ಪರಿದು ಮನ್ನೆಯರಂತೆ ಕಾದಿಯಲಸದೆ ಸೂಳೆಯಂತೆ ಕೋಳಂ ಪಟ್ಟಟ್ಟಿಸದೆ

ಕುದುರೆಯ ಸೈನ್ಯಗಳ ಮಧ್ಯೆ ನಾನು ಬರಲು ಸಮರ್ಥ. ಇದು ಹೆಬ್ಬೇಟೆಯ ರೀತಿ; ಮೃಗಗಳನ್ನು ಒಡ್ಡಿ ಆಕರ್ಷಿಸುವ ದೀವಕ ಬೇಟೆಯನ್ನು ವಿಜ್ಞಾಪಿಸಿಗೊಳ್ಳುವುದಾದರೆ ಗಾಳಿಯ ದಿಕ್ಕನ್ನೂ ಪ್ರಾಣಿಗಳ ಹೋಗುವಿಕೆ ಮತ್ತು ಉಳಿಯುವಿಕೆಗಳನ್ನೂ ರಕ್ಷಣೆ ಮತ್ತು ಮೇವುಗಳನ್ನೂ ತೊಡುವುದನ್ನೂ ಬಿಡುವುದನ್ನೂ ದಿಕ್ಕುಗಳನ್ನೂ ಸಂಕೇತಸ್ಥಳಗಳನ್ನೂ ಆಸಕ್ತಿ ಭಯಗಳನ್ನೂ ಪೋಗುಮೇಗುಗಳನ್ನೂ (?) ಹೆದರಿಕೆ ಬೆದರಿಕೆಗಳನ್ನೂ ಹೆಚ್ಚು ಕುಂದುಗಳನ್ನೂ ತಿಳಿದು ಅವುಗಳನ್ನು ಕಾಣಲು ಕಾಣಿಸಲು ಅವುಗಳ ಮೇಲೆ ರೇಗಲೂ ಅವುಗಳನ್ನು ರೇಗಿಸಲೂ ಅವಿತುಕೊಳ್ಳಲೂ ಅವಿತುಕೊಳ್ಳಿಸಲೂ ಒಡ್ಡಲು ಒಡ್ಡಿಸಲೂ ಪ್ರವೇಶ ಮಾಡಿಸಲೂ ಬೇರೆಡೆಯಲ್ಲಿ ಉಳಿಯುವ ಹಾಗೆ ಮಾಡಲೂ ಕಾಣದಿರುವುದನ್ನು ಕಾಣಿಸಲೂ ತಡೆಯುವುದಕ್ಕಾಗದುದನ್ನು ತಡೆಯಲೂ ಹತ್ತದೆ ಇರುವುದನ್ನು ಹತ್ತಿಸಲೂ ಚಾತುರ್ಯದಿಂದ ಅವುಗಳ ಮೂರು ಸಂಕೇತ ಸ್ಥಳಗಳನ್ನೂ ಆರು ಬಗೆಯ ರತಿಕ್ರೀಡೆಯನ್ನೂ ಎರಡು ಹೆಜ್ಜೆಯನ್ನೂ ಮೂರು ಹೊತ್ತನ್ನೂ ಮೃಗದ ಮೂರು ಸ್ಥಿತಿಗಳನ್ನೂ ಆರು ಪೋಷಣಾಕ್ರಮವನ್ನೂ ಗಾಳಿಯನ್ನೂ ರಕ್ಕೆಯನ್ನೂ ತಿಳಿದವನಾದ ಕಾರಣ ಅಪಾಯವಿಲ್ಲವೆಂದು ನಂಬಿ ಬರುವ ಪ್ರಾಣಿಯನ್ನೂ ಸಂದೇಹದಿಂದ ಬರುವ ಪ್ರಾಣಿಯನ್ನೂ ತಿಳಿದು ಕೆರಳದೇ ಇರುವುದನ್ನು ಕೆರಳಿಸಲೂ ಕೆರಳಿರುವುದನ್ನು ತೊಲಗಿಸಲೂ ನಂಬದೇ ಇರುವುದನ್ನು ನಂಬಿಸಲೂ ನಂಬಿದುದನ್ನು ಬಿಡಿಸಲೂ ಒಳಗೆ ಪ್ರವೇಶ ಮಾಡುವುದಕ್ಕೆ ಅವಕಾಶಮಾಡಲೂ ಅನವಾಗದ ಮೃಗವನ್ನು ಅನ ಮಾಡಿಕೊಳ್ಳಲೂ ಪ್ರೀತಿಸಿಯೂ ಪ್ರೀತಿಸದ ಪ್ರೇಮಿಗಳ ಹಾಗೆ ವ್ಯಥೆಪಡಿಸಲೂ ಜೂಜಿನಲ್ಲಿ ಒತ್ತೆಯನ್ನು ಸೋತವರಂತೆ ಅಡ್ಡಗಟ್ಟಲೂ ಎಸೆದ ದಿಕ್ಕಿಗೆ ಓಡಿಸಲೂ ಕುಮಾರಸ್ವಾಮಿಯ (ಷಣ್ಮುಖನ) ಮತ್ತು ನಿಮ್ಮ ಸಾಕ್ಷಿಯಾಗಿ ನಾನೇ ಸಮರ್ಥನಾಗಿದ್ದೇನೆ. ೪೪. ಅರ್ಜುನನೇ ಚಿತ್ರಿಸಿದ ಹಾಗೆ ಬೆನ್ನಿನ ಮಚ್ಚೆಯು ಪ್ರಕಾಶಿಸುತ್ತಿರಲು ಹುಲ್ಲಿನ ಊಬುಗಳನ್ನು ಮುರಿದು ಹೆಣ್ಣಿನ ಜಿಂಕೆಗಾಗಿ ಬಯಸಿ ಔದ್ಧತ್ಯದಿಂದ ಬರುತ್ತಿರುವ ಗಂಡುಜಿಂಕೆಯ ಮೋಹವನ್ನು ಪ್ರೀತಿಯಿಂದ ನೋಡುವುದು ರಾಜರಿಗೆ ಯೋಗ್ಯವಾದ ವಿನೋದವಲ್ಲವೇ? ೪೫. ಪಾದವನ್ನೂ ಅದರ ವಿಸ್ತಾರವನ್ನೂ ಸ್ವಲ್ಪವೂ ತಿಳಿಯದ ಆ ಪ್ರೌಢಿಮೆಯೆಂತಹುದು? ಅಂಜುವ ಮೃಗ ಅದರ ನಿಜವಾದ ಹೆಜ್ಜೆ ಎರಡನ್ನೂ ತಿಳಿದವನೇ ಚತುರ. ಜಾಣನಿಗೂ ತಿಳಿಯದ ಪ್ರೌಢವಾದ ಹೆಜ್ಜೆಯ ಗುರುಗಳುಂಟೆ? ವ|| ಇನ್ನು ಹಂದಿಯ ಬೇಟೆಯ ಮಾತನ್ನು ವಿಜ್ಞಾಪಿಸಿಕೊಳ್ಳುತ್ತೇನೆ- ೪೬. ಹಂದಿಯನ್ನು ಹಿಡಿಯುವಾಗ ನೆಲವನ್ನೂ ನಿಂತ ಸ್ಥಳವನ್ನೂ ನಡೆಯುವ ರೀತಿಯನ್ನೂ ಹಿಡಿಯುವ ಕ್ರಮವನ್ನೂ ಮೇಯುವಿಕೆಯನ್ನೂ ಒಟ್ಟುಗೂಡಿಸು

ತಕ್ಕನಂತೆ ನಂಬಿಸಿಯ ಮೊತ್ತರದಂತೊತ್ತಿಯು ಮುರಿಯಳುರ್ವಂತಳುರ್ದುಕೊಳ್ವುದಿದು ಪಂದಿವೇಂಟೆಯ ನಾಯ್ ಮತ್ತಂ ಕಿಱುವೇಂಟೆಯ ನಾಯಂ ಕೊಂಡುಂ ಜಾಱಯುಂ ನೆಲನುಂ ಪೊೞ್ತುಂ ಪೊಲನುಮನಱದು ಬೞಯೊಳ್ ಪೊಸತುಂ ಪೞದುಮನಱದು ಪರಿಯಿಸಲ್ ನೀನೆ ಬಲ್ಲೆಯದನಾನೆ ಬಲ್ಲೆನೆಂದು ಬಿನ್ನಪಂಗೆಯ್ವೆನಂತುಮಲ್ಲದೆ ಬಲ್ಮೆಗಂ ಬಸನಕ್ಕಂ ಸವಿಯಪ್ಪ ಕಿಱುವೇಂಟೆಯುಂ ಪೆರ್ವೇಂಟೆಯುಮಲ್ಲದುೞದ ಬೇಂಟೆಯಂ ಬೇಂಟೆಯೆನ್ನೆಂ-

ಪಿರಿಯಕ್ಕರ|| ಪಸಿವು ದೊರೆಕೊಳ್ಗುಮುಣಿಸುಗಳಿನಿಕೆಯ್ಗುಮಾವಂದದೊಳ್ ಕನಲ್ದಾದ ಮೆಯ್ಯ
ನಸಿಯನಾಗಿಪುದುಳಿದುವಪ್ಪುವು ಬಗೆಗೊಳಲಪ್ಪುದು ಮೃಗದ ಮೆಯ್ಯೊಳ್|
ನಿಸದಮೆಸೆವುದಂ ಬಲ್ಲಾಳ ಬಿಲ್ಬಲ್ಮೆ ತನ್ನೊಳಮಿಸುತೆ ಲೇಸಪ್ಪುದು
ಬಸನಮೆಂದಱಯದೇಳಿಸುವರ್ ಬೇಂಟೆಯಂ ಬೇಂಟೆಯೆ ಬಿನದಂಗಳರಸಲ್ತೇ|| ೪೭

ವ|| ಎಂದು ಬಿನ್ನಪಂಗೆಯ್ದ ಬೇಂಟೆಯಾತಂಗೆ ಮೃಗ ವ್ಯಾಯಾಮ ಕಾರ್ತಿಕೇಯಂ ಮೆಚ್ಚಿ ಮೆಚ್ಚುಗೊಟ್ಟು ತೊವಲನಿಕ್ಕೆಂದು ಮುಂದೆ ಪೇೞ್ದಟ್ಟಿ ನಾರಾಯಣನುಂ ತಾನುಮಂತಪುರ ಪರಿವಾರಂಬೆರಸು ಬೇಂಟೆಗೆ ಪೊಱಮಟ್ಟು ಪರಿಯ ತಾಣಕ್ಕೆ ವಂದು ಬೇಲಿಯ ಕೆಲದೊಳಲ್ಲದೆ ಪೆಱಗಣುಲಿಪಿಂಗಮುಳ್ಳೊಳಕ್ಕಂ ಗೆಂಟಾಗಿ ಬೀಡಂ ಬಿಡಿಸಿ ಬೇಂಟೆಕಾಱನ ಸಮೆದ ಮಕರತೋರಣಮುಮಂ ಗುಣಣೆಯ ಬಾಣಸಿನ ಮಜ್ಜನದ ರಾಣಿವಾಸದ ಮನೆಗಳುಮಂ ನನೆಯ ಪಂದರುಮಂ ತಳಿರ ಕಾವಣಂಗಳುಮಂ ಮಾಡದ ನೆಲೆಯ ಚೌಪಳಿಗೆಗಳುಮನವಱ ಮೇಲಿರ್ದೆಲೆಯಡಕೆಯುಮಂ ತೆಂಗಿನೆಳನೀರುಮಂ ಕೊಳಲಿಂಬಪ್ಪಂತಿರೆ ಮಾಡಿ ನಟ್ಟ ಕೌಂಗಿನ ತೆಂಗಿನ ಮರಂಗಳುಮಂ ಪಣ್ವೆರಸು ನಟ್ಟ ಮೈಂದವಾೞೆಗಳುಮಂ ತೊವಲ್ವೆರಸು ನಟ್ಟಾಲಂಗಳುಮನಮರೆ ಮಾಡಿದ ಬಟ್ಟುಳಿಯ ಕಕ್ಕುಂಬ ತೊಡಂಬೆಯ ಮೂಡಿಗೆಯ ಕದಳಿಕೆಯ ಕಂಡಪಟಂಗಳುಮಂ ಪಲವುಂ ತೆಱದ ಪಲವುಂ ಪೊಯಾಗಿ ಕಟ್ಟಿದ ಬಲೆಗಳುಮಂ ಪಡಿಗಳನಮರ್ಚಿ ಬಿಲ್ಲುಂ ಕುದುರೆಯುಂ ಕಾಲಾಳುಂ ನಾಯ್ಗಳುಮಂ ತಿಣ್ಣಿಮಿರಿಸಿ ಕೆಯ್ಯಂ ನೇಣುಮನಳವಿಯೊಳ್ ಕೂಡಿ ನಡೆಯಗ್ವೇೞ್ದು

ವಿಕೆಯನ್ನೂ ಶಕ್ತಿಯನ್ನೂ ಶಕುನಸಂಕೇತಗಳನ್ನೂ ಒಳ್ಳೆಯ ಉಪಾಯಗಳನ್ನೂ (ಉಳ್ಳವನು) ಇವನೇ (ಎಂಬ ಪ್ರೌಢಿಮೆಯನ್ನು ಪಡೆದಿದ್ದೇನೆ). ಹಂದಿಯು ಕುರುಡು ಅಥವಾ ಕುಂಟು ಎಂದು ಉದಾಸೀನಮಾಡದೆ ನನ್ನ ಶಕ್ತಿಯನ್ನು ಪ್ರದರ್ಶಿಸಿ ಹೆಜ್ಜೆಯ ಗುರುಗಳನ್ನು ಅವುಗಳ ವಸತಿಗಳನ್ನು ಕೆಡಿಸದೆ ಕಲ್ಲಿನ ಮೇಲಾದರೂ ಸಂಕೇತವನ್ನು ಸ್ಥಾಪಿಸುವ ಹಾಗೆ ನೀನು ಮೆಚ್ಚುವಂತೆ ಹಂದಿಯನ್ನು ನಿಲ್ಲಿಸುತ್ತೇನೆ.

ವ|| ಮತ್ತು ಹಂದಿಯ ಬೇಟೆಯ ನಾಯಿಯು ಎಂತಹುದು ಎಂದರೆ ತೆಳುವಾದ ಸೊಂಟ, ಅಗಲವಾದ ಎದೆ, ನೆಟ್ಟಗೆ ನಿಂತಿರುವ ಕಿವಿಗಳು ಬಾಗಿದ ಹುಬ್ಬು, ದಪ್ಪವಾಗಿ ಮಾಂಸವಿಲ್ಲದ ಕಾಲುಗಳು, ನೆಲವನ್ನು ಮುಟ್ಟದ ಉಗುರು ಇವುಗಳಿಂದ ಕೂಡಿ ಜಾತಿಯ ಕುದುರೆಯಂತೆ ವೇಗವಾಗಿ ನಡೆದು ಶಾಕ್ತೇಯಮತದ ವಂಚಕನಂತೆ ತನ್ನ ಮಾರ್ಗವನ್ನು ಹಿಡಿದು, ತೂಬಿನ ನೀರಿನ ಹಾಗೆ ಸಡಿಲ ಮಾಡಿದ ತಕ್ಷಣವೇ ಅಡ್ಡವಾಗಿ ಹರಿದು, ಮಾನ್ಯರ ಸೇವಕನಂತೆ ಕಾದಲು ಆಲಸ್ಯ ಪಡದೆ ಸೂಳೆಯಂತೆ ಸುಲಿಗೆಗೊಂಡು ಓಡಿಸದೆ, ಯೋಗ್ಯನಂತೆ ನಂಬಿಸಿ ಒತ್ತರದಂತೆ (?) ಒತ್ತಿ ಉರಿಯು ಹರಡುವಂತೆ ಹರಡಿಕೊಳ್ಳುವುದು. ಇದು ಹಂದಿಬೇಟೆಯಲ್ಲಿ ಉಪಯೋಗಿಸುವ ನಾಯಿಯ ಲಕ್ಷಣ. ಇನ್ನು ಕಿರುಬೇಟೆಯ ನಾಯನ್ನು ತೆಗೆದುಕೊಂಡು ಸಡಿಲ ಮಾಡಿದ ನೆಲದ ಸ್ವರೂಪವನ್ನು ಹೊತ್ತನ್ನೂ ಹೊಲವನ್ನೂ ತಿಳಿದು ದಾರಿಯಲ್ಲಿಯೇ ಹೊಸದು ಹಳೆಯದೆಂಬುದನ್ನು ತಿಳಿದು ಹರಿಯಿಸಲು ನೀನೇ ಶಕ್ತನೆಂಬುದನ್ನು ನಾನು ಬಲ್ಲೆ. ಅಲ್ಲದೆ ಶಕ್ತಿಪ್ರದರ್ಶನಕ್ಕೂ ಸವಿಯಾಗಿರುವ ಕಿರುಬೇಟೆಯ್ನೂ ಹೆಬ್ಬೇಟೆಯನ್ನೂ ಬಿಟ್ಟು ಉಳಿದ ಬೇಟೆಯನ್ನು ಬೇಟೆಯೆಂದೇ ನಾನು ಕರೆಯುವುದಿಲ್ಲ. ೪೭. ಬೇಟೆಯಿಂದ ಹಸಿವುಂಟಾಗುತ್ತದೆ. ಆಹಾರ ರುಚಿಯಾಗುತ್ತದೆ. ಯಾವ ರೀತಿಯಲ್ಲಾದರೂ ಕೆರಳಿ ಕೊಬ್ಬಿದ ಬೊಜ್ಜು ಕರಗುತ್ತದೆ. ಉಳಿದುವೂ ಆಗುತ್ತದೆ. ಮೃಗಗಳ ಶರೀರ ಮತ್ತು ಮನಸ್ಸಿನ ಅರಿವುಂಟಾಗುತ್ತದೆ. ಪರಾಕ್ರಮಶಾಲಿಯ ಬಿಲ್ಲಿನ ಪ್ರೌಢಿಮೆ ನಿಶ್ಚಯವಾಗಿಯೂ ಪ್ರಕಾಶಿಸುತ್ತದೆ. ಬಾಣಪ್ರಯೋಗ ಮಾಡುವುದರಿಂದ ತನಗೂ ಒಳ್ಳೆಯದಾಗುತ್ತದೆ. ತಿಳಿಯದವರು ಬೇಟೆಯನ್ನು ವ್ಯಸನವೆಂದು ಕರೆಯುತ್ತಾರೆ. ಬೇಟೆಯು ವಿನೋದಗಳ ರಾಜನಲ್ಲವೆ? ವ|| ಎಂದು ವಿಜ್ಞಾಪನಮಾಡಿದ ಬೇಟೆಯವನಿಗೆ ಮೃಗಗಳಿಗೆ ವ್ಯಾಯಾಮ ಮಾಡಿಸುವುದರಲ್ಲಿ ಷಣ್ಮುಖನಂತಿರುವ ಅರ್ಜುನನು (ಅರಿಕೇಸರಿಯು) ಬಹುಮಾನವನ್ನಿತ್ತು ಚಿಗುರನ್ನು ಹಾಕು ಎಂದು ಮೊದಲು ಹೇಳಿಕಳುಹಿಸಿದನು. ಕೃಷ್ಣನೂ ತಾನೂ ರಾಣಿವಾಸದ ಪರಿವಾರದೊಡನೆ ಹೊರಟು ಬೇಟೆಯ ಪ್ರವೇಶಸ್ಥಳಕ್ಕೆ ಬಂದರು. ಬೇಲಿಯ ಪಕ್ಕದಲ್ಲಿಯೇ ಅಲ್ಲದೆ ಹಿಂದುಗಡೆಯ ಸದ್ದಿಗೂ ಗಲಭೆಗೂ ದೂರವಾಗಿ ಪಾಳೆಯವನ್ನು ಬಿಡಿಸಿದರು. ಬೇಟೆಗಾರನು ಸಿದ್ಧ ಮಾಡಿದ್ದ ಮಕರತೋರಣ, ನೃತ್ಯಶಾಲೆ, ಪಾಕಶಾಲೆ, ಸ್ನಾನಗೃಹ, ಅಂತಪುರ, ಹೂವಿನ ಚಪ್ಪರ, ಚಿಗುರಿನ ಹಂದರ, ಉಪ್ಪರಿಗೆಯ ಮನೆಯ ತೊಟ್ಟಿಗಳು, ಅವುಗಳ ಮೇಲಿದ್ದ, ಎಲೆಯಡಿಕೆ, ತೆಂಗಿನ ಎಳನೀರುಗಳನ್ನು ತೆಗೆದುಕೊಳ್ಳಲು ಅನುಕೂಲವಾಗುವ ಹಾಗೆ ಮಾಡಿ ನೆಟ್ಟಿರುವ, ಅಡಕೆ ಮತ್ತು ತೆಂಗಿನ ಮರಗಳು ಹಣ್ಣಿನಿಂದ ಕೂಡಿ ನೆಟ್ಟಿರುವ ಮಹೇಂದ್ರ ಬಾಳೆ, ಚಿಗುರಿನಿಂದ ಕೂಡಿ ನೆಟ್ಟಿರುವ ಆಲದ ಮರ, ಗಾಢವಾಗಿ ಸೇರಿಕೊಂಡಿರುವ ಬಟ್ಟುಳಿಯ (?) ಕಕ್ಕುಂಬದ (?) ಗೊಂಚಲುಗಳಿಂದ ಮಾಡಿದ ಬತ್ತಳಿಕೆ ಬಾವುಟ ತೆರೆಗಳು

ಬೇಂಟೆವಸದನಂಗೊಂಡು ಕಂಡಿಯ ಬಾಗಿಲೊಳುದಾತ್ತನಾರಾಯಣನುಂ ನಾರಾಯಣನುಮಿರ್ದು ಪುಗಿಲ ಪುಲ್ಲೆಯ ಮೊದಲುರಮುಮಂ ಪೆಱಗಣ ಪುಲ್ಲೆಯ ನಡುವುಮನಯ್ದಳ್ ಮೂಱುವಂ ಮೂಳೆರಡು ಮನೆರಡಳೊಂದುಮನೆಚ್ಚು ಬಿಲ್ಲ ಬಲ್ಮೆಯಂ ಮೆದು-

ಕಂ|| ಮುಂದಣ ಮಿಗಮಂ ಕೞಪದೆ
ಸಂದಿಸಿ ಬೞಗೊಳ್ವ ಮಿಗಮುಮಂ ಕೞಪದೆ ತಾ|
ನೊಂದಳವಿದಪ್ಪದೆಚ್ಚು ಬ
ಲಿಂದಮನಿಂ ಬಿಲ್ಲ ಬಲ್ಮೆಯಂ ಪೊಗೞಸಿದಂ|| ೪೮

ವ|| ಮತ್ತಂ ಬೆರ್ಚಿ ಪೊಳೆದು ಪರಿವ ಪೊಳೆವುಲ್ಲೆಗಳುಮಂ ತಲೆಯಂ ಕುತ್ತಿ ವಿಶಾಲಂಬರಿವ ಕರಡಿಗಳುಮನಡಂಗಿ ಪರಿವ ಪುಲಿಗಳುಮಂ ಸೋಂಕಿ ಪರಿವೆಯ್ಗಳುಮಂ ತಡಂಮೆಟ್ಟಿ ಪರಿವ ಕಡವಿನ ಕಾಡೆಮ್ಮೆಯ ಮರೆಯ ಪಿಂಡುಗಳು ಮನಳವಿದಪ್ಪದೊಂದೊಂದ ನಿಸುವಂತೆ ಪಲವನೆಚ್ಚು ನೆಲಂ ಬಿರಿಯೆ ಗಜಱ ಗರ್ಜಿಸಿ ಪಾಯ್ವ ಸಿಂಗಂಗಳುಮಂ ಕಂಡು-

ಕಂ|| ಆಸುಕರಂ ಗಡ ತಮಗತಿ
ಭಾಸುರ ಮೃಗರಾಜ ನಾಮಮುಂ ಗಡಮೆಂದಾ|
ದೋಸಕ್ಕೆ ಮುಳಿದು ನೆಗೞ್ದರಿ
ಕೇಸರಿ ಕೇಸರಿಗಳನಿತುಮಂ ತಳ್ತಿಱದಂ|| ೪೯

ಇಱದವಱ ನೆತ್ತರೊಳ್ ತ
ಳ್ಕಿಱದಂ ತನ್ನುರಮನುರು ಗಜಂಗಳನಾಟಂ|
ದಱಸಿ ಕೊಲುತಿರ್ಪವೆಂಬೀ
ಕಱುಪಿನೊಳರಿಗಂಬರಂ ಗಜಪ್ರಿಯರೊಳರೇ|| ೫೦

ವ|| ಅಂತು ನರ ನಾರಾಯಣರಿರ್ವರುಮನವರತ ಶರಾಸಾರ ಶೂನ್ಯೀಕೃತ ಕಾನನಮಾಗೆಚ್ಚು ಮೃಗವ್ಯ ವ್ಯಾಪಾರದಿಂ ಬೞಲ್ದು ಮನದಂತೆ ಪರಿವ ಜಾತ್ಯಶ್ವಂಗಳನೇಱ ಬರೆವರೆ-

ಹಲವು ರೀತಿಯ ಹಲವು ಹೊರೆಗಳಾಗಿ ಕಟ್ಟಿದ ಬಲೆಗಳು ಬಾಗಿಲುಗಳನ್ನು (ಭದ್ರಪಡಿಸಿ) ಸೇರಿಸಿ, ಬಿಲ್ಲ, ಕುದುರೆ ಕಾಲಾಳು ನಾಯಿ ಹೆಚ್ಚು ಸಂಖ್ಯೆಯ ಕೋಲು ಹಗ್ಗ ಮೊದಲಾದುವನ್ನೆಲ್ಲ ಸರಿಯಾದ ಪ್ರಮಾಣದಲ್ಲಿ ಸೇರಿಸಿ ನಡೆಯಹೇಳಿ ಬೇಟೆಯ ಉಡುಪನ್ನು (ಅಲಂಕಾರವನ್ನು) ತೊಟ್ಟು ಮೃಗವು ಹೊರಗೆ ಬರುವ ಸ್ಥಳದಲ್ಲಿ ಬಾಗಿಲಲ್ಲಿ ಅರ್ಜುನ ಕೃಷ್ಣರು ನಿಂತು ಬೇಟೆಗೆ ಪ್ರಾರಂಭಮಾಡಿದರು. ಪ್ರವೇಶ ಮಾಡುವ ಜಿಂಕೆಯ ಎದೆಯ ಮೊದಲ ಭಾಗವನ್ನು ಹೊರಗಣ ಹುಲ್ಲೆ ಮಧ್ಯಭಾಗವನ್ನೂ ಅಯ್ದರಲ್ಲಿ ಮೂರನ್ನೂ ಮೂರಲ್ಲಿ ಎರಡನ್ನೂ ಎರಡಲ್ಲಿ ಒಂದನ್ನೂ ಹೊಡೆದು ತಮ್ಮ ಬಿಲ್ವಿದ್ಯೆಯ ಪ್ರೌಢಿಮೆಯನ್ನು ಪ್ರಕಾಶಪಡಿಸಿದರು. ೪೮. ಮುಂದೆ ಬಂದ ಮೃಗವನ್ನೂ ಸಾಯಿಸದೆ ಅದನ್ನು ಅನುಸರಿಸಿ ಹಿಂದೆ ಬಂದ ಮೃಗವನ್ನೂ ಕೊಲ್ಲದೆ ತಾನು ಒಂದು ಅಳತೆಯನ್ನೂ ತಪ್ಪದೆ ಅರ್ಜುನನು ಬಾಣಪ್ರಯೋಗಮಾಡಿ ಕೃಷ್ಣನು ತನ್ನ ಬಿಲ್ವಿದ್ಯೆಯನ್ನು ಹೊಗಳುವ ಹಾಗೆ ಮಾಡಿದನು. ವ|| ಪುನ ಹೆದರಿ ಹೊಳೆದು ಹರಿಯುವ ಜಿಂಕೆಗಳನ್ನೂ ತಲೆತಗ್ಗಿಸಿಕೊಂಡು ದೂರವಾಗಿ ಹರಿಯುವ ಕರಡಿಗಳನ್ನೂ ಅಡಗಿಸಿ ಹರಿಯುವ ಹುಲಿಗಳನ್ನೂ ಮೆಟ್ಟಿ ಓಡಿಹೋಗುವ ಮುಳ್ಳು ಹಂದಿಗಳನ್ನೂ ಅಡ್ಡಗಟ್ಟಿ ಉದ್ದವಾಗಿ ಕಾಲಿಟ್ಟು ಹರಿಯುವ ಕಡವೆ ಮತ್ತು ಕಾಡೆಮ್ಮೆಯ ಮರಿಗಳ ಹಿಂಡುಗಳನ್ನು ಅಳತೆದಪ್ಪದೆ ಒಂದೊಂದನ್ನೂ ಹೊಡೆಯುವ ಹಾಗೆ ಹಲವನ್ನು ಹೊಡೆದು ಕೆಡವಿದನು. ಭೂಮಿಯು ಬಿರಿದುಹೋಗುವ ಹಾಗೆ ಆರ್ಭಟದಿಂದ ಘರ್ಜನೆಮಾಡಿಕೊಂಡು ಮುನ್ನುಗ್ಗುತ್ತಿರುವ ಸಿಂಹಗಳನ್ನು ಕಂಡು- ೪೯. ಇವು ಅತಿಕ್ರೂರವಾದುವು ಆದರೂ ಬಹು ಪ್ರಸಿದ್ಧವಾದ ಮೃಗರಾಜನೆಂಬ ಹೆಸರು ಇವಕ್ಕೆ ಇದೆಯಲ್ಲವೆ? ಎಂದು ಆ ದೋಷಗಳಿಗಾಗಿ ಕೋಪಿಸಿಕೊಂಡು ಪ್ರಸಿದ್ಧನಾದ ಅರಿಕೇಸರಿಯು ಕೇಸರಿ (ಸಿಂಹ)ಗಳಷ್ಟನ್ನೂ ಎದುರಿಸಿ ಕೊಂದನು (ಕತ್ತರಿಸಿದನು). ೫೦. ಅವುಗಳ ರಕ್ತದಿಂದ ತನ್ನ ಎದೆಯನ್ನು ಲೇಪನ ಮಾಡಿಕೊಂಡನು. ಈ ಸಿಂಹಗಳು ಶ್ರೇಷ್ಠವಾದ ಆನೆಗಳನ್ನೂ ಮೇಲೆಬಿದ್ದು ಹಿಂಸಿಸಿ ಕೊಲ್ಲುತ್ತಿವೆ ಎಂಬ ಈ ಕೋಪದಲ್ಲಿ ಅರಿಕೇಸರಿಯ ಮಟ್ಟಕ್ಕೆ ಬರುವ ಗಜಪ್ರಿಯರು (ಆನೆಯನ್ನು ಪ್ರೀತಿಸುವವರು) ಇದ್ದಾರೆಯೇ? ವ|| ಹಾಗೆ ನರನಾರಾಯಣರಿಬ್ಬರೂ ಎಡಬಿಡದ ಬಾಣಗಳ ಮಳೆಯಿಂದ ಕಾಡುಗಳನ್ನೆಲ್ಲ ಬರಿದು ಮಾಡಿ ಹೊಡೆದು ಬೇಟೆಯ ಕಾರ್ಯದಿಂದ ಬಳಲಿ ತಮ್ಮ ಮನಸ್ಸಿನಷ್ಟೇ ವೇಗದಿಂದ ಹರಿಯುವ ಜಾತಿ