ಅಧ್ಯಯನದ ಫಲಿತಗಳು

ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಗ್ರಾಮಪಂಚಾಯತಿ ಸದಸ್ಯರ ಸಾಮಾಜಿಕ ಹಿನ್ನೆಲೆಯನ್ನು ತಿಳಿಯುವುದರೊಂದಿಗೆ ಗ್ರಾಮಪಂಚಾಯತ್ ಸದಸ್ಯತ್ವದ ಸಾಮಾಜಿಕ ಆಯಾಮಗಳನ್ನು ಅಧ್ಯಯನ ಮಾಡಲು ಪ್ರಯತ್ನಿಸಲಾಗಿದೆ. ನೀರಾವರಿ ಮತ್ತು ಒಣಭೂಮಿ ಈ ಎರಡು ಪ್ರದೇಶ ವ್ಯಾಪ್ತಿಗಳ ಸದಸ್ಯರ ಸಾಮಾಜಿಕ ಮತ್ತು ಆರ್ಥಿಕ ಗುಣಲಕ್ಷಣಗಳ ಒಟ್ಟು ಫಲಿತಗಳನ್ನು ಈ ರೀತಿಯಲ್ಲಿ ಸಂಕ್ಷಿಪ್ತಗೊಳಿಸಿ ವಿವರಿಸಲಾಗಿದೆ.

ಸಮೀಕ್ಷೆ ಮೂಲಕ ಸಂದರ್ಶಿಸಿದ ಒಟ್ಟು ಸದಸ್ಯರಲ್ಲಿ ಸುಮಾರು ಅರ್ಧದಷ್ಟು ಸದಸ್ಯರ ಸರಾಸರಿ ವಯಸ್ಸು ೨೫ ರಿಂದ ೩೫ ವರ್ಷಗಳಾಗಿದ್ದು ಇದು ಯುವ ಹಾಗೂ ಮಧ್ಯ ವಯಸ್ಸಿನ ಸದಸ್ಯತ್ವದ ಲಕ್ಷಣಗಳ ಸೂಚಿಯಾಗಿದೆ. ಪಂಚಾಯತ್ ವ್ಯವಸ್ಥೆ ಮತ್ತು ಕಾಯ್ದೆಯ ಆಶಯಗಳಲ್ಲಿ ಇದು ಮಹತ್ವದ್ದಾಗಿದ್ದು ಸಾಂಪ್ರದಾಯಿಕ ನಾಯಕತ್ವದ ಬದಲಿಗೆ ರೂಪುಗೊಳ್ಳುತ್ತಿರುವ ಯುವ ನಾಯಕತ್ವವನ್ನು ಈ ಸಂದರ್ಭದಲ್ಲಿ ಅಲ್ಲಗಳೆಯಲಾಗದು.

ಸುಮಾರು ಶೇ. ೪೪ ರಷ್ಟು ಸದಸ್ಯರು ೫ ರಿಂದ ೧೦ನೇ ತರಗತಿವರೆಗಿನ ಶಿಕ್ಷಣವನ್ನು ಹೊಂದಿರುತ್ತಾರೆ. ಶೇ. ೩೪ ರಷ್ಟು ಸದಸ್ಯರು ಅನಕ್ಷರಸ್ಥರಾಗಿರುತ್ತಾರೆ. ಶೇ. ೭೫ ರಷ್ಟು ಮಂದಿ ಸದಸ್ಯರು ವ್ಯವಸಾಯವನ್ನು ಅವಲಂಬಿಸಿದ್ದಾರೆ. ಶೇ. ೫೦ ರಷ್ಟು ಸದಸ್ಯರ ವಾರ್ಷಿಕ ಆದಾಯವು ರೂ. ೬,೦೦೦ ಗಳಿಂದ ೧೦,೦೦೦ ಗಳೆಂದು ತಿಳಿಸಿರುತ್ತಾರೆ. ಇದು ನಮ್ಮ ಸಮೀಕ್ಷೆಯ ರೀತಿಯಲ್ಲಿ ಹೇಳುವುದಾದರೆ ಮಧ್ಯಮ ಆದಾಯ ಗುಂಪು ಎಂದು ಪರಿಗಣಿಸಲ್ಪಡುತ್ತದೆ. ಶೇ. ೧೬.೬೨ ರಷ್ಟು ಸದಸ್ಯರು ಭೂರಹಿತರಾಗಿರುತ್ತಾರೆ. ಶೇ. ೩೫ ರಷ್ಟು ಮಂದಿ ಶೌಚಾಲಯವನ್ನು ಹೊಂದಿರುತ್ತಾರೆ. ಶೇ. ೩೯ ರಷ್ಟು ಮಂದಿ ಸದಸ್ಯರು ಸದಸ್ಯತ್ವದ ಜೊತೆಗೆ ಇಲ್ಲವೇ ಅವರ ಕುಟುಂಬದ ಸದಸ್ಯರ ಇತರೆ ಸಂಘ ಸಂಸ್ಥೆಗಳಲ್ಲಿ ಸದಸ್ಯರಾಗಿ ಕಾರ‍್ಯನಿರ್ವಹಿಸುತ್ತಿದ್ದಾರೆ. ಶೇ. ೫೪ ರಷ್ಟು ಸದಸ್ಯರ ಕುಟುಂಬದ ಗಾತ್ರ ೫ ರಿಂದ ೮ ಮಂದಿಯನ್ನೊಳಗೊಂಡಿದೆ.

ಸದಸ್ಯರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಅಂದರೆ ಶೇ. ೪೮ ರಷ್ಟು ಸದಸ್ಯರು ಇತರೆ ಹಿಂದುಳಿದ ಜಾತಿಗಳ ಸದಸ್ಯರಾಗಿರುತ್ತಾರೆ. ಶೇ. ೬೦ ರಷ್ಟು ಸದಸ್ಯರು ತಾವು ಸ್ನೇಹಿತರು ಮತ್ತು ಸಮುದಾಯದಿಂದ ರಾಜಕೀಯ ಪ್ರವೇಶಕ್ಕೆ ಪ್ರೇರಿತವಾದೆವು ಎಂದು ತಿಳಿಸುತ್ತಾರೆ. ಇದು ಏನನ್ನು ಸೂಚಿಸುತ್ತದೆ ಎಂದರೆ ಮೀಸಲಾತಿಯ ಪ್ರೇರಣೆ ಕಡಿಮೆ ಎಂದು ಹೇಳುವಂತಿಲ್ಲ. ಉದಾಹರಣೆಗೆ ಪರಿಶಿಷ್ಟರು ಮತ್ತು ಮಹಿಳೆಯರಿಗೆ ರಾಜಕೀಯ ಪ್ರವೇಶಕ್ಕೆ ಮೀಸಲಾತಿಯೆ ಪ್ರಮುಖ ಪ್ರೇರಣೆ ಎಂದು ನಮ್ಮ ಅಧ್ಯಯನದಿಂದ ತಿಳಿದುಬಂದರೂ, ಇವನ್ನು ಅವರು ನಿಖರವಾಗಿ ಎಲ್ಲೂ ಸೂಚಿಸುವುದಿಲ್ಲ. ಬದಲಿಗೆ ಜಾತಿ, ಸ್ನೇಹಿತರ ಪ್ರೇರಣೆ, ರಾಜಕೀಯ ಪಕ್ಷಗಳ ಒಲವು ಎಂದು ತಿಳಿಸುತ್ತಾರೆ. ಇದು ಸ್ವಲ್ಪ ಆಶ್ಚರ್ಯ ಸಂಗತಿ ಎಂದೆನಿಸಿದರೂ ನಿಜವಾಗಿ ಆಶ್ಚರ್ಯಪಡಬೇಕಾಗಿಲ್ಲ. ಪರಿಶಿಷ್ಟರು, ಮಹಿಳೆ ಹಾಗೂ ಹಿಂದುಳಿದವರಿಗೆ ರಾಜಕೀಯಕ್ಕೆ ಮೂಲ ಪ್ರೇರಣೆಯೆ ಮೀಸಲಾತಿ ಎಂದು ಹೆಚ್ಚಿನ ಅಧ್ಯಯನಗಳು ಶ್ರುತಿಪಡಿಸಿವೆ. ಇಲ್ಲಿ ಮುಜುಗರಕ್ಕೀಡಾದಂತೆ ಬದಲಿ ಉತ್ತರವನ್ನು ನೀಡಿದರೆ ಅದನ್ನು ಸರಿ ಎಂದು ಅಂದುಕೊಳ್ಳುವಂತಿದ್ದು ಇದಕ್ಕೆ ಕಾರಣಗಳು ಇದೆ. ಉದಾಹರಣೆಗೆ ಅರ್ಧದಷ್ಟು ಸದಸ್ಯರು ಹಿಂದುಳಿದ ಜಾತಿಗಳಿಗೆ ಸೇರಿದರೂ ಮೀಸಲಾತಿ ಪ್ರೇರಣೆ ಎಂದು ತಿಳಿಸದಿರಲು ಹಲವು ಸನ್ನಿವೇಶಗಳು ಕಾರಣವಾಗಿವೆ. ಇವರಿಗೆ ಸ್ನೇಹಿತರು, ಸಮುದಾಯ ಅಥವಾ ರಾಜಕೀಯ ಪಕ್ಷಗಳು ಕಾರಣ ಎಂದು ತಿಳಿಸಿದರೂ ತಕ್ಕಮಟ್ಟಿಗೆ ಸರಿ ಇವೆ. ಯಾಕೆಂದರೆ ಇತರ ಪ್ರಬಲ ಜಾತಿಗಳ ಜೊತೆಗಿನ ಹೊಂದಾಣಿಕೆ, ಯಜಮಾನರ ಪಾತ್ರ, ಪ್ರತಿಷ್ಠಿತ ಕುಟುಂಬ, ಇಲ್ಲವೇ ರಾಜಕೀಯ ಪಕ್ಷಗಳ ಸಂಪರ್ಕದ ಸಾಧ್ಯತೆಗಳಿವೆ. ಇದನ್ನು ಸಹಜವಾಗಿ ಸಹಜೀವನದ ಬಳುವಳಿ ಅಂದರೂ ಅನ್ನಬಹುದು. ಹಾಗೆಯೇ ತಕ್ಕಮಟ್ಟಿಗೆ ಮೀಸಲಾತಿಯು ಉಪಯೋಗಕ್ಕೆ ಬರುತ್ತವೆ. ಜಾತಿಯೊಳಗಿನ ಅಂತರದ ಬಿರುಕು ಕಡಿಮೆ ಇದೆ. ಪರಿಶಿಷ್ಟರು ಮತ್ತು ಮಹಿಳೆಯರ ಸಂದರ್ಭದಲ್ಲಿ ಬಹುಪಾಲು ಉತ್ತರವೇ ಮೀಸಲಾತಿಯಲ್ಲದೆ ಬೇರೇನು ಅಲ್ಲವೆಂಬುದು ವಾಸ್ತವ. ಇಲ್ಲೂ ಊರ ಯಜಮಾನರ, ಗಂಡಂದಿರ ಇಲ್ಲವೇ ಸಮುದಾಯದ ಪ್ರೇರಣೆ ಎಂದು ತಿಳಿಸಿದರೂ ಇದು ಆನುಷಂಗಿಕವಾಗಿದೆ. ಬಹುಮುಖ್ಯವಾಗಿ ಇಲ್ಲಿ ಮೇಲ್ನೋಟಕ್ಕೆ ಕಾಣಸಿಗುವ ಉತ್ತರವೇ ಮೀಸಲಾತಿಯಾಗಿದೆ, ಯಾಕೆಂದರೆ ಮಹಿಳಾ ಸಂದರ್ಭಧಲ್ಲಿ ರಾಜಕೀಯ ಪಕ್ಷಗಳು ಗ್ರಾಮ ಪಂಚಾಯತ್ ಚುನಾವಣೆ ಸಂದರ್ಭದಲ್ಲಿ ಮಹಿಳೆಗೆ ಹಣಕಾಸು ಒದಗಿಸಿದ ಇಲ್ಲವೆ ಪಕ್ಷಪ್ರೇರಿತ ಅಭ್ಯರ್ಥಿಗಳನ್ನು ನಿಲ್ಲಿಸಿರುವುದು ತೀರಾ ವಿರಳ (ವರ್ಮಿಂದರ್ ಕೌರ್). ಹಾಗೆಯೇ ಕರ್ನಾಟಕದ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಚುನಾವಣೆಗಳಲ್ಲಿ ರಾಜಕೀಯ ಪಕ್ಷಗಳಿಗೆ ಅಧಿಕೃತವಾದ ಎಂಟ್ರಿಯನ್ನು ೧೯೯೩ ರ ಕಾಯ್ದೆ ಮತ್ತು ನಂತರದ ಚುನಾವಣೆಗಳಲ್ಲಿ ಮಾನ್ಯ ಮಾಡಿಲ್ಲ (೧೯೮೩ರ ಕಾಯ್ದೆಯಲ್ಲಿ ಮಾತ್ರ ಈ ಮಾನ್ಯತೆ ಪ್ರಥಮ ಬಾರಿಗೆ ಶಾಸನಾತ್ಮಕವಾಗಿ ನೀಡಲಾಗಿದೆ.) ಇದರರ್ಥ ರಾಜಕೀಯ ಪಕ್ಷಗಳ ಪ್ರವೇಶವಿಲ್ಲವೆಂದಲ್ಲ. ನೂರಕ್ಕೆ ತೊಂಬತ್ತರಷ್ಟು ರಾಜಕೀಯ ಪಕ್ಷಗಳ ಪ್ರೇರಿತ ಅಭ್ಯರ್ಥಿಗಳೇ ಇಂದು ಪಂಚಾಯತಿ ಪ್ರತಿನಿಧಿಗಳು ಮತ್ತು ಇದು ಪಕ್ಷಪ್ರೇರಿತ ರಾಜಕೀಯ ಇನ್ನಿಂಗ್ಸ್ ಎಂದು ದಾಖಲಾಗುವಷ್ಟರ ಮಟ್ಟಿಗೆ ಅಧಿಕೃತತೆ ಇದೆ. ಆದರೆ ನೇರವಾಗಿ ಮಹಿಳೆಯರನ್ನು ತಟ್ಟುವಷ್ಟರ ಮಟ್ಟಿಗೆ ಇದು ಸಾಂಸ್ಥೀಕರಣ ಗೊಂಡಿಲ್ಲ. ಆ ಹಿನ್ನೆಲೆಯಲ್ಲಿ ಇಲ್ಲಿ ಮೀಸಲಾತಿಯೆ ಪ್ರಮುಖ ಪ್ರೇರಣೆ ಎಂದು ಉತ್ತರಿಸಿದಲ್ಲಿ ತಪ್ಪೇನಾಗಲಾರದು.

* * *

ಕೋಷ್ಟಕ ೧ಸದಸ್ಯರ ವಯಸ್ಸಿನ ಹಂಚಿಕೆ

ವಯಸ್ಸು ನೀರಾವರಿ
ಶೇಕಡಾವಾರು
ಒಣಭೂಮಿ
ಶೇಕಡಾವಾರು
ಒಟ್ಟು ಶೇಕಡಾವಾರು
೨೫ ರಿಂದ ೩೦ ೧೫.೩೮ ೩೬.೩೬ ೨೫.೦೦
೩೧ ರಿಂದ ೩೫ ೨೧.೮೫ ೨೯.೫೪ ೨೫.೦೦
೨೬ ರಿಂದ ೪೦ ೧೦.೫೩ ೧೫.೯೦ ೧೩.೫೪
೪೧ ರಿಂದ ೪೫ ೧೭.೩೦ ೦೬.೮೧ ೧೩.೫೪
೪೬ ರಿಂದ ೫೦ ೧೭.೩೦ ೦೨.೨೭ ೧೧.೪೫
೫೦ ಮತ್ತು ಹೆಚ್ಚಿನ ೧೧.೫೩ ೦೯.೦೯ ೧೧.೪೫

 

ಕೋಷ್ಟಕ ೨ಸದಸ್ಯರ ಜಾತಿವಾರು ಹಂಚಿಕೆ

ಜಾತಿ ನೀರಾವರಿ
ಶೇಕಡಾವಾರು
ಒಣಭೂಮಿ
ಶೇಕಡಾವಾರು
ಒಟ್ಟು ಶೇಕಡಾವಾರು
ಪರಿಶಿಷ್ಟ ಜಾತಿ ೨೬.೯೨ ೧೫.೯೦ ೨೨.೯೧
ಪರಿಶಿಷ್ಟ ಪಂಗಡ ೦೭.೬೯ ೨೦.೪೫ ೧೪.೫೮
ಇತರೆ ಹಿಂದುಳಿದವರು ೩೬.೫೩ ೬೧.೩೬ ೪೭.೯೦
ಸಾಮಾನ್ಯ ೨೫.೦೦   ೧೩.೫೪

 

ಕೋಷ್ಟಕ ೩ಸದಸ್ಯರ ಶೈಕ್ಷಣಿಕ ಮಟ್ಟ

ಶಿಕ್ಷಣ ನೀರಾವರಿ
ಶೇಕಡಾವಾರು
ಒಣಭೂಮಿ
ಶೇಕಡಾವಾರು
ಒಟ್ಟು ಶೇಕಡಾವಾರು
೧ ರಿಂದ ೪ನೇ ತರಗತಿ ೦೩.೮೪ ೦೯.೦೯ ೦೬.೨೫
೫ ರಿಂದ ೭ನೇ ತರಗತಿ ೧೧.೩೩ ೩೬.೩೬ ೨೨.೯೧
೮ ರಿಂದ ೧೦ನೇ ತರಗತಿ ೨೫.೦೦ ೧೫.೯೦ ೨೦.೮೩
ಪಿ.ಯು.ಸಿ. ೦೫.೭೬ ೦೪.೫೪ ೦೫.೨೦
ಪದವಿ ೦೩.೮೪ ೦೨.೨೭ ೦೮.೩೩
ಅನಕ್ಷರಸ್ಥ ೧೯.೨೩ ೨೯.೫೪ ೩೪.೩೭

 

ಕೋಷ್ಟಕ ೪ಸದಸ್ಯರ ಲಿಂಗವಾರು ಹಂಚಿಕೆ

ಲಿಂಗ ನೀರಾವರಿ
ಶೇಕಡಾವಾರು
ಒಣಭೂಮಿ
ಶೇಕಡಾವಾರು
ಒಟ್ಟು ಶೇಕಡಾವಾರು
ಪುರುಷ ೫೯.೬೧ ೫೬.೮೧ ೫೮.೩೩
ಮಹಿಳಡ ೪೦.೩೮ ೪೩.೧೮ ೪೧.೬೬

 

ಕೋಷ್ಟಕ ೫ಸದಸ್ಯರ ಭೂಮಿವಾರು ಹಂಚಿಕೆ

ಭೂಮಿ ನೀರಾವರಿ
ಶೇಕಡಾವಾರು
ಒಣಭೂಮಿ
ಶೇಕಡಾವಾರು
ಒಟ್ಟು ಶೇಕಡಾವಾರು
ಒಣಭೂಮಿ ೯.೦೯ ೪.೧೬
ನೀರಾವರಿ ೬೯.೨೩ ೭೫.೦೦ ೭೧.೮೭
ಭೂರಹಿತರು ೨೬.೯೨ ೨.೨೭ ೧೫.೬೨

 

ಕೋಷ್ಟಕ ೬ಸದಸ್ಯರ ಉದ್ಯೋಗವಾರು ಹಂಚಿಕೆ

ವಯಸ್ಸು ನೀರಾವರಿ
ಶೇಕಡಾವಾರು
ಒಣಭೂಮಿ
ಶೇಕಡಾವಾರು
ಒಟ್ಟು ಶೇಕಡಾವಾರು
ಕೃಷಿ ೭೧.೧೫ ೮೧.೮೧ ೭೬.೦೪
ಕೃಷಿಯೇತರ ೧.೯೨ ೧.೦೪
ಕೃಷಿ ಕಾರ್ಮಿಕರು ೨೩.೦೭ ೨.೨೭ ೧೩.೫೪
ಇತರೆ ೧.೯೨ ೧೫.೯೦ ೮.೩೩

 

ಕೋಷ್ಟಕ ೭ಕುಟುಂಬದಲ್ಲಿ ವರಮಾನ ಗಳಿಸತಕ್ಕ ಸದಸ್ಯರ ಸಂಖ್ಯೆ

ಕುಟುಂಬ
ಸದಸ್ಯರ ಸಂಖ್ಯೆ
ನೀರಾವರಿ
ಶೇಕಡಾವಾರು
ಒಣಭೂಮಿ
ಶೇಕಡಾವಾರು
ಒಟ್ಟು ಶೇಕಡಾವಾರು
೧-೨ ೫೭.೬೯ ೫೪.೫೪ ೫೬.೨೫
೩-೪ ೫೩.೮೪ ೩೧.೨೧ ೪೩.೭೫
೫-೬ ೧.೯೨ ೬.೮೧ ೪.೧೬
೭ ಮತ್ತು ಹೆಚ್ಚಿನ ೧.೯೨ ೨.೨೭ ೨.೦೮

 

ಕೋಷ್ಟಕ ೮ಆದಾಯ

ಆದಾಯ ನೀರಾವರಿ
ಶೇಕಡಾವಾರು
ಒಣಭೂಮಿ
ಶೇಕಡಾವಾರು
ಒಟ್ಟು ಶೇಕಡಾವಾರು
೫,೦೦೦ ೨೬.೯೨ ೬.೮೧ ೧೭.೭೦
೬-೧೦೦೦ ೫೯.೬೧ ೩೮.೬೩‘ ೫೦.೦೦
೧೧-೧೫೦೦೦ ೧.೯೨ ೯.೦೯ ೫.೨೦
೧೫ ಮತ್ತು ಹೆಚ್ಚಿನ ೧೧.೫೩ ೩೯.೦೯ ೧೦.೪೧

 

ಕೋಷ್ಟಕ ೯ಕುಟುಂಬದ ಸದಸ್ಯರ ಸಂಖ್ಯೆ

ಕುಟುಂಬದ
ಸದಸ್ಯರ ಸಂಖ್ಯೆ
ನೀರಾವರಿ
ಶೇಕಡಾವಾರು
ಒಣಭೂಮಿ
ಶೇಕಡಾವಾರು
ಒಟ್ಟು ಶೇಕಡಾವಾರು
೧೩.೪೬ ೨೫. ೧೮.೭೫
೫೫.೭೬ ೫೨. ೫೪.೧೬
೧೨ ೨೬.೯೨ ೧೩.೬೩ ೨೧.೮೭
೧೩ ಮತ್ತು ಹೆಚ್ಚಿನ .೮೧ .೧೨

 

ಕೋಷ್ಟಕ ೧೦ಸಂಘ ಸಂಸ್ಥೆ ಸದಸ್ಯತ್ವ ವಿವರ

ಸಂಘ ಸಂಸ್ಥೆ
ಸದಸ್ಯತ್ವ ವಿವರ
ನೀರಾವರಿ
ಶೇಕಡಾವಾರು
ಒಣಭೂಮಿ
ಶೇಕಡಾವಾರು
ಒಟ್ಟು ಶೇಕಡಾವಾರು
ಇದೆ ೩೬.೫೩ ೪೦.೯೦ ೩೮.೪೫
ಇಲ್ಲ ೬೩.೪೬ —- ೩೪.೩೭

 

ಕೋಷ್ಟಕ ೧೧ಕುಡಿಯುವ ನೀರಿನ ಮೂಲ

ನೀರಿನ ಮೂಲ ನೀರಾವರಿ
ಶೇಕಡಾವಾರು
ಒಣಭೂಮಿ
ಶೇಕಡಾವಾರು
ಒಟ್ಟು ಶೇಕಡಾವಾರು
ಟ್ಯಾಂಕ್ ನೀರು ೧೦೦ ೫೪.೧೬
ಸಾರ್ವಜನಿಕ ನಳ ೮೪.೦೯ ೩೮.೫೪
ಬೋರು ನೀರು ೪.೫೪ ೨.೦೮
ಇತರೆ ೪.೫೪ ೨.೦೮

 

ಕೋಷ್ಟಕ ೧೨ಶೌಚಾಲಯ

ಶೌಚಾಲಯ ನೀರಾವರಿ
ಶೇಕಡಾವಾರು
ಒಣಭೂಮಿ
ಶೇಕಡಾವಾರು
ಒಟ್ಟು ಶೇಕಡಾವಾರು
ಇದೆ ೫೧.೯೨ ೯.೦೯ ೩೫.೪೧
ಇಲ್ಲ ೩೬.೫೩ ೭೫ ೫೯.೩೭

 

ಕೋಷ್ಟಕ ೧೩ರಾಜಕೀಯಕ್ಕೆ ಪ್ರೇರಣೆ

ಪ್ರೇರಣೆ ನೀರಾವರಿ
ಶೇಕಡಾವಾರು
ಒಣಭೂಮಿ ಶೇಕಡಾವಾರು ಒಟ್ಟು ಶೇಕಡಾವಾರು
ಸ್ನೇಹಿತರು/ಸಮುದಾಯ ೫೬.೧೫ ೫೪.೧೫ ೫೮.೪೧
ರಾಜಕೀಯ ವ್ಯಕ್ತಿಗಳು ೫.೭೬ ೨೯.೫೪ ೧೫.೬೬
ಸಂಪರ್ಕ      
ಪಕ್ಷದ ಕಾರ್ಯಕರ್ತ ೧೩.೪೬ ೭.೨೯
ಮೀಸಲಾತಿ …೨.೬೯   ೧೭.೭೦