ಅನಂತ ಕಾಲವು ನಿನ್ನನು ಹೊತ್ತಿದೆ;
ಸಮಸ್ತ ವಿಶ್ವವೆ ನಿನ್ನನು ಹೆತ್ತಿದೆ.
ನನಗೆಂತುಟೊ ನಿನಗಂತುಟೆ ಸೃಷ್ಟಿ;
ನನ್ನಂತೆಯೆ ನಿನಗೂ ಇದೆ ದೃಷ್ಟಿ;
ನನ್ನಂತೆಯೆ ಅನುಭವಿಸುವ ಶಕ್ತಿ;
ನನ್ನಂತೆಯೆ ನೀನೂ ವ್ಯಕ್ತಿ!

೨೦-೧೧-೧೯೩೩