ಬೊಬ್ಬುಳಿ ಗಿಡದಲಿ ಗುಬ್ಬಳಿಸುತ್ತಿದೆ
ಒಬ್ಬೊಂಟಿಗ ಚೋರೆ;
ಕಿವಿಗೊಟ್ಟಲುಗಾಡದ ಕೇಳುತ್ತಿದೆ
ಹಗಲ್ನಿದ್ದೆಯೊಳದ್ದಿದ ಬೋರೆ!
ವ್ಯೋಮದ ರವಿ, ಭೂಮಿಯ ಕವಿ,
ಪ್ರೇಕ್ಷಕರಿನ್ನೊಬ್ಬರ ಕಾಣೆ.
ಜಡ ಚೇತನದಾಲಿಂಗನ:
ಜುಮ್ಮೆಂದಿದೆ ಮೈ, ಶಿವನಾಣೆ!
ಸತ್ತಿಹ ಮೃತ್ತಾಗಿಹ ಬಿತ್ತರ ಬೋರೆಯ ಪುಲ್ನವಿರಿನ ಮೈ
ಚೋರೆಯ ಮಿಂಚುಲಿ ಹೊನಲಿಗೆ ರೋಮಾಂಚಿತವಾಗುತ್ತಿಹುದೈ!
ನಾನಿಲ್ಲಿಲ್ಲದೆ ಹೋಗಿದ್ದರೆ? ಹಾ ನಾನರಿಯೆ!
ನಾನಿಲ್ಲಿರುವಂದೆನಗಾದನುಭವವಿದನೆಂದೂ ಮರೆಯೆ!
೧೭-೯-೧೯೩೬
Leave A Comment