ಹೇಳಿದರೆ ಹಾಳಾಗುವುದೊ ಈ ಅನುಭವದ ಸವಿಯು;
ಹೇಳದಿರೆ ತಾಳಲಾರನೊ ಕವಿಯು!
ನುಡಿಗಳನು ತೊಡಗಿದರೆ ತೊದಲುವುದು ನಾಲಗೆಯು,
ಕಳ್ಳರಂದದೊಳೋಡುವುವು ಪದಗಳೆಲ್ಲ;
ತನ್ನಧಿಕತೆಗೆ ತಾನೆ ಮೂರ್ಛೆ ಹೋಹುದು ಭಾವ
ಮಾತ ಮೀರಿದ ಮೌನದೊಳು ಮಗ್ನವಾಗಿ!
ಒಲುಮೆಯಪ್ಪುಗೆಯಂತೆ ಎನಲು ಸಾಧಾರಣ;
ಯೋಗಿಯ ಸಮಾಧಿ ಎನೆ ಅತಿ ಅಪೂರ್ವ;
ಕವಿಯ ರಸರತಿ ಎನಲು ಕವಿಗೊರ್ವನಿಗೆ ವೇದ್ಯ;
ಮೃತ್ಯು ಮಾಧುರ್ಯಮೆನೆ ಬದುಕಿಹರಿಗರಿದಯ್ಯ!
೧೬-೭-೧೯೩೬
Leave A Comment