ಓಡು ಹೊರಗೆ, ಓಡು ನೋಡು:
ಮೂಡುತಿಹನು ದಿನಮಣಿ!
ಹಚ್ಚನೆ ಹಸುರು ಬಯಲಮೇಲೆ
ಮಿರುಗುತಿಹವು ಹಿಮಮಣಿ!

ಸಗ್ಗದ ಸಿರಿಯೆ ನೆಲಕೆ ಬಿದ್ದು
ಹುಡಿ ಹುಡಿ ಹುಡಿಯಾಗಿದೆ!
ಬುವಿಯ ಬಾಳು ಸಂತೋಷಕೆ
ಕಿಡಿ ಕಿಡಿ ಕಿಡಿವೋಗಿದೆ!

೨೬-೮-೧೯೩೫