ಪಕ್ಷಿ ವೀಕ್ಷಣೆಯ ಪ್ರಮುಖ ಅಂಗವೇ ಅದರ ದಾಖಲೀಕರಣ. ಯಾವ ಸ್ಥಳದಲ್ಲಿ, ಯಾವ ಸಮಯದಲ್ಲಿ ಯಾವ ಯಾವ ಪಕ್ಷಿಗಳು ಕಂಡುಬಂದಿತು ಎಂಬುದು ವಿಜ್ಞಾನಕ್ಕೆ ಬಹುಮುಖ್ಯವಾದದ್ದು. ಇದು ನಿರಂತರವಾಗಿ ನಡೆಯಬೇಕಾದ ಒಂದು ಪ್ರಕ್ರಿಯೆ. ಇದು ವೈಜ್ಞಾನಿಕವಾಗಿ ನಡೆದಾಗ ಒಂದು ಕಾಲಾವಧಿಯಲ್ಲಿ ಒಂದು ಪ್ರದೇಶದಲ್ಲಿನ ಪಕ್ಷಿಗಳ ಬಗ್ಗೆ ಮಹತ್ವದ ಮಾಹಿತಿ ಕೊಡುತ್ತದೆ. ಬೇರೆ ಪಕ್ಷಿಗಳು ಈ ಸ್ಥಳದಲ್ಲಿ ಕಂಡುಬಂದಿರಬಹುದು ಅಥವಾ ಇಲ್ಲಿ ಮೊದಲು ಕಾಣುತ್ತಿದ್ದ ಪಕ್ಷಿಗಳೇ ಈಗ ಕಂಡುಬರದಿರಬಹುದು. ಪ್ರದೇಶವೊಂದಕ್ಕೆ ಹೊಸ ಹಕ್ಕಿ ಬಂದಿತೆಂದರೆ ಅದು ಬೇರೊಂದೆಡೆ ನೆಲೆ ಕಳೆದುಕೊಂಡೂ ಬಂದಿರಬಹುದು. ಈ ಎಲ್ಲವನ್ನೂ ವೈಜ್ಞಾನಿಕವಾಗಿ ವಿಶ್ಲೇ಼ಷಣೆಗೆ ಮಾಡಬೇಕಾಗುತ್ತದೆ. ಒಂದು ವೇಳೆ ಯಾವುದಾದರೂ ಒಂದು ಹಕ್ಕಿ ಈಗ ಕಂಡುಬರುತ್ತಿಲ್ಲ ಎಂದಾದರೆ, ಹಿಂದೆ ಅದು ಇದೇ ಪ್ರದೇಶದಲ್ಲಿ ಕಂಡುಬರುತ್ತಿತ್ತು ಎಂಬುದಕ್ಕೆ ಆಧಾರವೇನು? ಈ ಪ್ರಶ್ನೆ ವಿಜ್ಞಾನಕ್ಕೆ ಬಹಳ ಮುಖ್ಯ. ಆ ಆಧಾರವನ್ನು ಒದಗಿಸುವುದೇ ದಾಖಲೆಗಳು. ನುರಿತ ಪಕ್ಷಿವೀಕ್ಷಕರು ಕ್ರಮವಾಗಿ ನಡೆಸಿದ ಪಕ್ಷಿವೀಕ್ಷಣೆಯ ದಾಖಲೆಗಳು. ಇವು ಇನ್ನು ಅನೇಕ ಕಾರಣಗಳಿಂದ ಮುಖ್ಯ.

ಕ್ರಮಬದ್ಧವಾದ ದಾಖಲಾತಿಯೆಂದರೆ ಒಂದು ನಿರ್ದಿಷ್ಟ ಸ್ಥಳದಲ್ಲಿ, ನಿರ್ದಿಷ್ಟ ಸಮಯದಲ್ಲಿ ಪಕ್ಷಿವೀಕ್ಷಕ ವೀಕ್ಷಣೆ ನಡೆಸಿ ದಾಖಲಿಸುವುದು. ಅನೇಕ ದೇಶಗಳಲ್ಲಿ ಹೀಗೆ ದಿನಂಪ್ರತಿ ವೀಕ್ಷಣೆಯನ್ನು ತಪ್ಪದೆ ವರ್ಷಗಟ್ಟಲೆ ಮಾಡಿದ ದಾಖಲೆಗಳಿವೆ. ಇದನ್ನು ಆಧರಿಸಿ ಸಂಶೋಧನೆ ನಡೆಸಬಹುದು. ಭಾರತದಲ್ಲಿ ಅತಿದೊಡ್ಡ ಕೊರತೆಯೆಂದರೆ ಇಂತಹ ನಿಯತವಾದ ದಾಖಲಾತಿಯ ಕೊರತೆ. ಪಕ್ಷಿವೀಕ್ಷಕರು ಈ ನಿಟ್ಟಿನಲ್ಲಿ ಶ್ರಮಿಸಬೇಕು.

ಪಕ್ಷಿವೀಕ್ಷಕರು ತಮ್ಮ ಪುಟ್ಟ ಟಿಪ್ಪಣಿ ಪುಸ್ತಕದಿಂದ ಬೇರೆ ಪುಸ್ತಕಕ್ಕೆ ವೀಕ್ಷಣೆಗಳನ್ನು ವರ್ಗಾಯಿಸುವುದರಿಂದ ಈ ದಾಖಲಾತಿ ಆರಂಭವಾಗುತ್ತದೆ. ಸಲೀಂ ಅಲಿ ಒಂದೊಂದು ಹಕ್ಕಿ ಪ್ರಬೇಧಕ್ಕೆ ಒಂದೊಂದು ಪುಸ್ತಕವನ್ನೇ ಇಟ್ಟಿದ್ದರು. ನಮ್ಮ ಇಂದಿನ ತಾಂತ್ರಿಕೆ ಯುಗದಲ್ಲಿ ಸಾಕಷ್ಟು ಮಾರ್ಗಗಳಿವೆ. ಪಕ್ಷಿವೀಕ್ಷಣಾ ಸ್ಥಳಗಳ ಅನುಗುಣವಾಗಿ ಇವನ್ನು ಯುಕ್ತವಾಗಿ ಬಳಸಿಕೊಳ್ಳಂಬಹುದು. ಒಂದು ಶಾಲೆಯಲ್ಲಿ ನಿರ್ದಿಷ್ಟ ದಿನ, ನಿರ್ದಿಷ್ಟ ಸಮಯದಲ್ಲಿ ಪಕ್ಷಿ ವೀಕ್ಷಣೆ ಮಾಡಲಾಗುತ್ತದೆ ಎಂದುಕೊಂಡರೆ ಅದನ್ನು ಒಂದು ಎಕ್ಸೆಲ್‍ ಹಾಳೆಯಲ್ಲಿ (Excel Sheet) ದಾಖಲಿಸಬಹುದು. ನಿಯತವಾಗಿ ಇದನ್ನು ದಾಖಲಿಸಿದರೆ ಆ ಶಾಲಾ ವಾತಾವರಣದಲ್ಲಿ ಕಂಡುಬರುವ ಪಕ್ಷಿಗಳ ದಾಖಲಾತಿ ಲಭ್ಯವಾಗುತ್ತದೆ. ಇಲ್ಲಿ ಇನ್ನೂ ಒಂದು ಸಾಧ್ಯತೆಯಿದೆ. ಇಲ್ಲಿನ ಪಕ್ಷಿಪಟ್ಟಿಯನ್ನು ಎಕ್ಸೆಲ್ಹಾಾಳೆಗೆ ಹಾಗಿ ದಿನ/ವಾರ/ಹದಿನೈದುದಿನ ಹೀಗೆ ನಿರ್ದಿಷ್ಟ ಅವಧಿಗೆ ಪಕ್ಷಿಗಳ “ಹಾಜರಾತಿ” ತೆಗೆಯಬಹುದು. ಇದು ಸಹ ವಿಜ್ಞಾನಕ್ಕೆ ಸಹಾಯಕವಾಗುತ್ತದೆ. ಇಂತಹ ಎಕ್ಸೆಲ್‍ ಹಾಳೆಗಳು ಅಂತರಜಾಲದಲ್ಲಿ ಹುಡುಕಿದರೆ ಸಿಗುತ್ತವೆ. ಆದರೆ, ನಮ್ಮ ಸ್ಥಳ, ಅವಶ್ಯಕತೆಗನುಸಾರವಾಗಿ ನಮ್ಮದೇ ಆದ ಎಕ್ಸೆಲ್‍ ಹಾಳೆಯನ್ನು ಸಿದ್ಧಪಡಿಸಿಕೊಂಡರೆ ಅದು ಹೆಚ್ಚು ಉಪಯುಕ್ತವಾಗುತ್ತದೆ. ಇಷ್ಟೆಲ್ಲಾ ಆದರೂ ಇನ್ನು ಬರೆಹದ ರೂಪದಲ್ಲಿ ದಾಖಲಾತಿ ಮಾಡಿಕೊಳ್ಳು ತ್ತಿರುವವರು ಇದ್ದಾರೆ.

ನಮ್ಮ (ಹಾಗೂ ಇತರರ) ವೀಕ್ಷಣೆಗಳನ್ನು ಕ್ರೋಢೀಕರಿಸುವ ಬರ್ಡ್ ಸ್ಪಾಟ್ನಂ್ತಹ ತಂತ್ರಾಂಶಗಳು (Software) ಉಚಿತವಾಗಿ ಲಭ್ಯವಿದೆ. ಬರ್ಡ್ ಸ್ಪಾಟ್‍ ಆಫ್ಲೈ್ನ್‍ ತಂತ್ರಾಂಶ. ಇಂದು ಆನ್ಲೈಹನ್‍ ತಂತ್ರಾಂಶಗಳೂ ಲಭ್ಯವಿವೆ. ಸಂಚಾರಿ ದೂರವಾಣಿಯಲ್ಲಿ ಒಳ್ಳೆಯ ಆ್ಯಪ್ಗಸಳೂ ಲಭ್ಯವಿವೆ. ಒಂದು ಪರಿಯೋಜನೆಗಾಗಿಯೇ ಅಗತ್ಯ ತಂತ್ರಾಂಶವನ್ನು ಅಭಿವೃದ್ಧಿಪಡಿಸಿಕೊಳ್ಳುಳವ ಪರಿಪಾಠವೂ ಇದೆ.

ವಿ-ಅಂಚೆ, ಸಾಮಾಜಿಕ ಜಾಲತಾಣಗಳ ಇಂದಿನ ಜಗತ್ತಿನಲ್ಲಿ ಪಕ್ಷಿವೀಕ್ಷಣಾ ಗುಂಪುಗಳು ಅನೇಕವಿವೆ. bngbirds@yahoogroups.com, kolkatabirds@yahoogroups.com ಹೀಗೆ ದೆಹಲಿ, ಮುಂಬೈ, ಕೇರಳ ಬರ್ಡ್ಸ್ ಗುಂಪುಗಳು ಯಾಹೂನಲ್ಲಿ ಸೃಷ್ಟಿಸಲಾಗಿದೆ ಹಾಗೂ ಇವು ತಜ್ಞರಲ್ಲಿಯೂ ಕೂಡ ಬಳಕೆಯಲ್ಲಿದೆ. ಇವುಗಳಿಗೆ ವಿಷಯದ ಸಾಲಿನಲ್ಲಿ ಸಬ್ಸಕ್ರೈಬ್‍ ಎಂದು ಬರೆದು ಕಳಿಸಿ ಸದಸ್ಯರಾಗಬಹುದು. ನಮ್ಮ ವೀಕ್ಷಣೆಗಳನ್ನು ಇಲ್ಲಿಗೆ ವಿ ಅಂಚೆ ಮೂಲಕ ಕಳಿಸಿದರೂ ಅದು ಒಂದು ಬಗೆಯ ದಾಖಲಾತಿಯಾಗುತ್ತದೆ. ಮೈಗ್ರಂಟ್ವಾಹಚ್‍, ಓರಿಯಂಟಲ್ಬ ರ್ಡ್ಸ್ ಇತ್ಯಾದಿ ಸಂಸ್ಥೆಗಳು ಸಹ ತಮ್ಮ ಜಾಲದಲ್ಲಿ ದಾಖಲಾತಿಗೆ ಅವಕಾಶಗಳನ್ನು ಕೊಟ್ಟಿದೆ. ಅಲ್ಲಿ ನೋಂದಾಯಿಸಿಕೊಂಡು ನಮ್ಮ ವೀಕ್ಷಣೆಗಳನ್ನು ದಾಖಲಿಸಬಹುದು.

ಇಂದು ebird.org ಎಂಬುದು ದೊಡ್ಡ ಪ್ರಮಾಣದಲ್ಲಿ ಬಳಕೆಯಲ್ಲಿದ್ದು ಇದು ದಾಖಲಾತಿಯೂ ಪಕ್ಷಿ ಸಂಬಂಧಿತ ಅನೇಕ ಕಾರ್ಯಗಳನ್ನು ಶ್ರದ್ಧೆಯಿಂದ ನಡೆಸುತ್ತಿದೆ.