102. Banded Bay Cuckoo (Cacomantis sonneratii) Indian Bay-banded Cuckoo R Myna+ ಪಟ್ಟೆ ಕೋಗಿಲೆ (ಪಟ್ಟೆ ಕೋಗಿಲೆ)

24 ಸೆಂಮೀ. ಕೆಂಗಂದು ಮೇಲ್ಮೈ; ಬಿಳಿ ಹುಬ್ಬು ಮತ್ತು ಕೆಳಮೈ; ಕೆಳಮೈ ಮೇಲೆ ಅಲೆಗಳಂತಿರುವ ಕಂದು ಗೀರುಗಳು; ಬಿಳಿ ತುದಿಯ ಕೆಂಗಂದು ಬಾಲ. ಕಾಡಿನಲ್ಲಿ ಒಂಟಿಯಾಗಿ ಮರಗಳ ಮೇಲೆ ಓಡಾಟ. 4 ಸ್ವರದ ವೀ.ಟಿ.ಟೀ.ಟಿ.. ಕೂಗು ಮತ್ತು ಏರುಗತಿಯ ಟಿ.ಟಿಟೀ.ಟೀ.ಟಿಟೀ.. ಸಿಳ್ಳು. ಮಧುರಕಂಠ, ಪಿಕಳಾರ, ಗುಲಗಂಜಿ ಮತ್ತು ಹರಟೆಮಲ್ಲಗಳ ಗೂಡಿನಾಶ್ರಯ.