Barn Owls  (Tytonidae)

 

ಕಣಜಗೂಬೆಗಳು (ಕಳಗೂಮ)

109.  Barn Owl (Tyto alba) Screech Owl R ಕಣಜಗೂಬೆ (ಕಳಗೂಮ)

36 ಸೆಂಮೀ. ಹೃದಯಾಕಾರದ ಮುಖ; ಬೂದು-ಹೊಂಬಣ್ಣದ ದೇಹದಲ್ಲಿ ಚಿಕ್ಕ ಬಿಳಿ-ಕ್ಪ ಚುಕ್ಕೆಗಳು; ಬಿಳಿ ಕೆಳಮೈ. ಕಣ್ಣು ಮತ್ತು ಕಿವಿ ಅತ್ಯಂತ ಚುರುಕು. ಕತ್ತಲಿನಲ್ಲಿ ಕುಳಿತಲ್ಲಿಂದಲೇ ದಂಶಕಗಳ ಕನಿಷ್ಟ ಚಲನೆ ಮತ್ತು ತೀಕ್ಷ್ಣ ಸ್ವರಗಳನ್ನು ಗ್ರಹಿಸಿ, ಅತಿ ವೇಗವಾಗಿ ಅವುಗಳ ಮೇಲೆ ಎರಗುವುವು. ಹಗಲು ಹೊತ್ತಿನಲ್ಲಿ ಯಾವುದಾದರೂ ಸಂದು ಅಥವಾ ಟರೆಯೊಳಗೆ ಗುಮ್ಮನೆ ಕುಳಿತು, ಸಂಜೆಯಾದೊಡನೆ ಬೇಟೆಗೆ ಅಣಿಯಾಗುತ್ತವೆ. ಕುರುಚಲುಕಾಡು, ಬೃಹತ್ ಮರ, ಕೋಟೆ, ಹಳೆಕಟ್ಟಡ ಮುಂತಾದೆಡೆ ವಾಸ. ಬೇಟೆಯಾಡುವಾಗ ನಿಶ್ಶಬ್ದ ಹಾರಾಟ. ಸುಗ್ಗಿಯ ಸಮಯದಲ್ಲಿ, ಹೊಲಗದ್ದೆಗಳಲ್ಲಿ, ಅಧಿಕ ಸಂಖ್ಯೆಯಲ್ಲಿ ವೃದ್ಧಿಯಾಗುವ ಇಲಿಗಳೇ ಮುಖ್ಯ ಆಹಾರವಾದ್ದರಿಂದ, ರೈತನ ಗೆಳೆಯ. ಮೂಳೆ, ಕ್ಕಗಳನ್ನು ಪಚನ ಮಾಡಿಕೊಳ್ಳಲಾರದೆ, ಆಗಾಗ ಅವುಗಳನ್ನು ಉಂಡೆಯಂತೆ ಉಗುಳುತ್ತದೆ. ಚೀರಾಟದ ್ರ. ಕೂಗು.  ಗೋಡೆ, ಮರಗಳಲ್ಲಿನ ಸಂದು-ಬಿಲಗಳಲ್ಲಿ, ಕಸ-ಕಡ್ಡಿಗಳಿಂದ ತಯಾರಾದ ಗೂಡು; ಮನುಷ್ಯ-ನಿರ್ಮಿತ ಗೂಡುಗಳೂ ಆಗಬಹುದು.