Owls (Strigidae)

 

ಗೂಬೆಗಳು (ಗೂಮ)

 

ಗೂಬೆಗಳಷ್ಟು ನಿಗೂಢತೆಯನ್ನು ಪ್ರತಿನಿಧಿಸುವ, ಕುತೂಹಲಕಾರಿ, ಹಕ್ಕಿ ಬೇರೊಂದಿಲ್ಲ. ರಾತ್ರಿಯ ವೇಳೆ ಅವುಗಳ ಆಕೃತಿ, ಕೂಗು ಸಂಚಾರ ಇವುಗಳೆಲ್ಲ ಯಾರನ್ನಾದರೂ ಅಧೀರರನ್ನಾಗಿಸುವುದು. ಮುಖದ ಮುಂದೆ ನೇರ ದೃಷ್ಟಿಯ ದೊಡ್ಡ ಕಣ್ಣುಗಳು, ಎದ್ದು ಕಾಣುವ ಕಿವಿಗಳು; ಚಿಕ್ಕ, ಗಟ್ಟಿಮುಟ್ಟಾದ ಕೊಕ್ಕೆಯಂತಹ ಕೊಕ್ಕು; ಇದ್ದೂ ಇಲ್ಲದಂತಿರುವ ಕತ್ತು; ಗರಿಗಳಿಂದಾವೃತ ಕಾಲುಗಳು, ಚೂಪಾದ ಕಾಲುಗುರುಗಳು; ಚಿಕ್ಕ ಬಾಲ. ಹೆಣ್ಣು  ಗಾತ್ರದಲ್ಲಿ ತುಸು ದೊಡ್ಡದು. ಹಾರುವಾಗ ನಿಶ್ಶಬ್ದವಾಗಿರಲು, ಅಗಲವಾದ ರೆಕ್ಕೆಯ ಬುಡದಲ್ಲಿ ಮೃದುವಾದ ತುಪ್ಪಳ; ನಮಗಿಂತ 100 ಪಟ್ಟು ತೀಕ್ಷ್ಣ ದೃಷ್ಟಿ; ತಲೆಯನ್ನು 270 ಡಿಗ್ರಿ ಕೋನ ತಿರುಗಿಸಲು ರಬ್ಬರ್ ಕುತ್ತಿಗೆ; ಅತಿ ಸೂಕ್ಷ್ಮ ಶಬ್ದವನ್ನೂ ಗ್ರಹಿಸುವ ಕಿವಿ, ಇವೆಲ್ಲವೂ ರಾತ್ರಿ ಬೇಟೆಗೆ ಹೇಳಿ ಮಾಡಿಸಿದಂತಿವೆ. ಮರಗಳಲ್ಲಿ ವಾಸ. ಇಲಿ ಮುಂತಾದ ದಂಶಕಗಳೆ ಮುಖ್ಯ ಆಹಾರ. ರಾತ್ರಿಯಲ್ಲಿ ಹೊಲ-ಗದ್ದೆ, ಉಗ್ರಾಣಗಳ ಕಾವಲುಗಾರ. ಗುಳಿ, ರಂಧ್ರಗಳಲ್ಲಿ ಗೂಡು.

110. Eurasian Scops-Owl (Otus scops) Scops Owl LM Myna- ಚಿಟ್ಟುಗೂಬೆ (ಕ್ರ್ಗೂಮ)

19 ಸೆಂಮೀ. ಹಳದಿ ಕಣ್ಣಿನ, ಗೂಬೆ ಮುಖಕ್ಕೆ, ಸಣ್ಣ ಕಿವಿಗಳು; ಬೂದು ದೇಹದ ರಾ ಬಿಳಿ-ಕ್ಪ ಗೀರುಗಳು; ಗರಿಗಳಿಂದಾವೃತವಾದ ಕಾಲುಗಳು. ಹಗಲು ಮರಗಳ ಬಿಲಗಳಲ್ಲಿ ಅಲುಗಾಡದೆ, ಅವಿತು ಕುಳಿತು, ಸಂಜೆಯ ನಂತರ, ಬೇಟೆಗೆ ಸಿದ್ಧ. ರಾತ್ರಿಯಿಡೀ 3 ಸ್ವರದ ಟಕ್.ಟಕ್.ಟಕ್. ಕೂಗು.