116.  Jungle Owlet (Glaucidium radiatum) Barred Jungle Owlet R Myna+/- ಕಾಡು ಹಾಲಕ್ಕಿ (ಕಾಡ್ ಗೂಮ)

20 ಸೆಂಮೀ. ಕೆಂಗಂದು ಬೋಳುತಲೆಗೆ ಬಿಳಿ ಮೀಸೆ, ಹುಬ್ಬು; ಕಡುಗಂದು ಮೇಲ್ಮೈಗೆ ಕಂದು-ಬಿಳಿ ಪಟ್ಟೆಗಳು; ಬಿಳಿ ಕೆಳಮೈ ಮೇಲೆ ಬೂದು ಅಡ್ಡ ಪಟ್ಟಿಗಳು. ತೇಗ, ಬಿದಿರು ಕಾಡುಗಳಲ್ಲಿ ಒಂಟಿ ಅಥವಾ ಜೋಡಿಯಾಗಿ ರಾತ್ರಿಬೇಟೆ; ಹಗಲಿನಲ್ಲಿಯೂ ಕ್ರಿಯಾಶೀಲ. ಏರುಗತಿಯ ಕ್ವಾ.ಕಕ್.ಕ್ವಾ.ಕಕ್. ಕೂಗು.