117.  Spotted Owlet (Athene brama) R Myna- ಹಾಲಕ್ಕಿ (ಬೊಟ್ಟ್ ಗೂಮ)

21 ಸೆಂಮೀ. ಗುಂಡುಮುಖಕ್ಕೆ ಹಳದಿ ಕಣ್ಣುಗಳು; ಬೂದುಗಂದು ದೇಹದಲ್ಲಿ ಬಿಳಿ ಚುಕ್ಕೆಗಳು; ಹಿಂಗತ್ತಿನಲ್ಲಿ ಪೇಲವ ಕಾಲರು; ಎದೆಯಲ್ಲಿ ತಿಳಿಗಂದು ಮಚ್ಚೆಗಳು; ಬಿಳಿ ಕೆಳಮೈ. ಸಣ್ಣ ಗುಂಪಿನಲ್ಲಿ ಉದುರೆಲೆ, ಕುರುಚಲುಕಾಡು, ಜನವಸತಿ ಪ್ರದೇಶಗಳಲ್ಲಿ ವಾಸ. ಹೆದರಿಸಿದಾಗ ಪಟಪಟ ರೆಕ್ಕೆ ಬಡಿದು, ಪಕ್ಕದಲ್ಲಿ ಹೋಗಿ ಕುಳಿತು, ತಲೆಯನ್ನು ಟಿಸುತ್ತಾ ತಮಾಷೆಯಾಗಿ, ಆಗುಂತಕನನ್ನು ಗುಮ್ಮನೆ ದಿಟ್ಟಿಸಿ ನೋಡುವ ಸ್ವಭಾವ. ಹಗಲೆಲ್ಲಾ ಮರದ ಟರೆ, ಬಿರುಕುಗಳಲ್ಲಿ ವಿಶ್ರಮಿಸುತ್ತದೆ. ಮುಂಜಾವು-ಮುಸ್ಸಂಜೆಯಲ್ಲಿ ಬೇಟೆ. ದುಂಬಿ, ಮಿಡತೆ, ಇಲಿಮರಿಗಳೇ ಆಹಾರ.