Frogmouths  (Podargidae)

 

ಕಪ್ಪೆಬಾಯಿಗಳು

119.  Ceylon Frogmouth (Batrachostomus moniliger) R Myna+/- ಕಪ್ಪೆಬಾಯಿ

23 ಸೆಂಮೀ. ಬಲು ನಾಚಿಕೆ ಸ್ವಭಾವದ, ಸುತ್ತಲ ವಾತಾವರಣದಲ್ಲಿ ಕಂಡೂ ಕಾಣದಂತಿರುವ, ನಿಶಾಚರ ಹಕ್ಕಿಗಳು. ಅಗಲವಾದ, ಚಪ್ಪಟೆಯಾದ, ತ್ರಿಕೋಣಾಕಾರದ ಕೊಕ್ಕು; ಕಪ್ಪೆಯಂತಹ ಬಾಯಿ; ಗಿಡ್ಡ ಕತ್ತು-ಕಾಲುಗಳು. ಮೃದುವಾದ ತುಪ್ಪಳದ ಕಡುಗಂದು ದೇಹದಲ್ಲಿ ಬೂದು, ಕ್ಪ, ಬಿಳಿ ಅಡ್ಡಡ್ಡ ಗೀರು-ಪಟ್ಟಿಗಳು; ಪಟ್ಟೆ ಬಾಲ. ಹೆಣ್ಣು ಹಕ್ಕಿಗೆ ತುಸು ಬೂದು ಛಾಯೆ. ಸದಾಹಸಿರು, ತೇವವಿರುವ ಉದುರೆಲೆ ಹಾಗೂ ಬಿದಿರುಕಾಡುಗಳಲ್ಲಿ ಚಿಕ್ಕಮರ-ದೆಗಳಲ್ಲಿ ವಾಸ. ಹಗಲಿನಲ್ಲಿ ಮರಗಳ ಮೇಲೆ ಒಣಬೊಡ್ಡೆಯ ರೀತಿ ಮಲಗಿರುತ್ತದೆ;  ಅಣಕಿಸುವ ವ್ಹು! ಕೂಗು. ರಾತ್ರಿ, ಕೀಟಗಳ ಬೇಟೆ. ಕೊಂಬೆಗಳ ಕವೆಯಲ್ಲಿ ಒಣಎಲೆ, ನಾರುಕಡ್ಡಿ ಮತ್ತು ಅದರದ್ದೆ ಕೆಳಮೈ ಗರಿಗಳಿಂದ ಕೂಡಿದ ಗೂಡು.