Nightjars (Caprimulgidae)

 

ನತ್ತಿಂಗಗಳು (ಕುರುಡಂಪಕ್ಷಿ)

 

ಕೆಂಗಂದು, ಬೂದು, ಕ್ಪ, ಬಿಳಿ ಬಣ್ಣಗಳ, ಮರೆಮಾಚಿಸುವ, ಚಿತ್ರವಿಚಿತ್ರ ವಿನ್ಯಾಸಗಳನ್ನು ಹೊಂದಿರುವ, ಬಹು ಸಂಕೋಚ ಸ್ವಭಾವದ, ರಾತ್ರಿಬೇಟೆಯನ್ನರಸುವ ಹಕ್ಕಿಗಳು. ಹಗಲಿನಲ್ಲೂ ಕಣ್ಣಿಗೆ ಕಾಣುವುದು ಅಪರೂಪ. ಎಷ್ಟೋ ವೇಳೆ ಅವುಗಳ ಕೂಗಿನಿಂದಲೇ ಗುರುತು ಹಿಡಿಯಬೇಕಷ್ಟೆ. ಮೃದು ಗರಿಗಳು, ದೇಹಕ್ಕೆ ದೊಡ್ಡ ತಲೆ, ಕಣ್ಣು; ಗಿಡ್ಡ ಕುತ್ತಿಗೆ; ಹಾರುತ್ತಿರುವಾಗಲೇ ಕೀಟಗಳನ್ನು ಭಕ್ಷಿಸಲು ಅನುಕೂಲವಾದ, ಅಗಲ ಬಾಯಿಗೆ ದುರ್ಬಲ ಕೊಕ್ಕು; ನೀಳ, ಚೂಪಾದ ರೆಕ್ಕೆಗಳು. ಅತಿಚಿಕ್ಕ ದುರ್ಬಲ ಕಾಲುಗಳು. ನಿಶ್ಶಬ್ದ, ಲೀಲಾಜಾಲ ಹಾರಾಟ; ವೇಗವಾಗಿ, ಎರ್ರಂಬಿರ್ರನೆ ಅತ್ತಿಂದಿತ್ತ ಚಲಿಸುತ್ತಾ, ಹಠಾತ್ತನೆ ಕೊಂಬೆಯ ಅಥವಾ ನೆಲದ ಮೇಲೆ ಕುಳಿತುಬಿಡುತ್ತವೆ. ಹಾರಾಡಿಕೊಂಡೇ ಹಿಡಿದ ದುಂಬಿ, ಪತಂಗ ಮುಂತಾದ ಕೀಟಗಳೆ ಆಹಾರ.  ನೆಲದ ಮೇಲೇ ನೇರವಾಗಿ ಮೊಟ್ಟೆಯಿಟ್ಟು ಕಾವು ಕೊಡುವುವು.

 

120. Common Indian Nightjar (Caprimulgus asiaticus) R Myna+/- ನತ್ತಿಂಗ (ಕುರುಡಂಪಕ್ಷಿ)

24 ಸೆಂಮೀ. ಕಾಡು ಹಾದಿಯ ಮೇಲೆ, ಸಂಜೆಯ ವೇಳೆ ಕಾಣಬಹುದು. ಬೂದುಗಂದು ದೇಹದ ಮೇಲೆ ಬಿಳಿ-ಕ್ಪ ವಿನ್ಯಾಸಗಳು; ಗಂಟಲ ಎರಡೂ ಬದಿಗಳಲ್ಲಿ ಮತ್ತು ರೆಕ್ಕೆಗಳ ಮೇಲೆ ಬಿಳಿ ಮಚ್ಚೆಗಳು. ಉದುರೆಲೆ, ಕುರುಚಲುಗಾಡು, ಬಂಡೆಪ್ರದೇಶಗಳಲ್ಲಿ ವಾಸ.  ಮುಸ್ಸಂಜೆಯ ನಂತರ, ನಿಶ್ಶಬ್ದವಾಗಿ, ಅಡ್ಡಾದಿಡ್ಡಿ ಹಾರಾಡಿದಂತೆ ಕಂಡರೂ, ಹಾರುವ ಕೀಟಗಳ ಬೇಟೆ. ರಾತ್ರಿವೇಳೆ ವಾಹನದ ಅಥವಾ ಟಾರ್ಚ್ ಬೆಳಕು ಬಿದ್ದಾಗ, ನೆಲದ ಮೇಲೆ ಅವಿಚಿಕೊಂಡು ಕುಳಿತಿರುವುದನ್ನು ಕಾಣಬಹುದು.  ಮೆಲುದನಿಯ ಚ್ಪ್.ಚ್ಪ್.ಚ್ಪ್ರ್ರ್ರ್.. ಕೂಗು.