121. Indian Jungle Nightjar (Caprimulgus indicus) R Pigeon- ಅಡವಿ ನತ್ತಿಂಗ (ಕಾಡ್ ಕುರುಡಂಪಕ್ಷಿ)

29 ಸೆಂಮೀ. ಎಲ್ಲವೂ 120ರಂತೆ, ಆದರೆ, ಬಾಲದ ತುದಿ ಬಿಳಿ; ರೆಕ್ಕೆಗಳಲ್ಲಿ ಬಿಳಿ ಬಣ್ಣವಿಲ್ಲ; ಬಿಳಿ ಗಲ್ಲ; ಕಾಲಿನಲ್ಲಿ ಗರಿಗಳು. ಶೀತಪ್ರದೇಶಗಳಲ್ಲಿ ವಾಸ. 120ರದ್ದೇ ಸ್ವಭಾವ. ಹಗಲು ಮರದ ಬೊಡ್ಡೆ, ದಿಬ್ಬಗಳ ಮೇಲೆ ಕಳೆದು, ಇಡೀ ರಾತ್ರಿ ಕೀಟಗಳ ಬೇಟೆ. ತಡೆರಹಿತ ಚ್ಕೂ.ಚ್ಕೂ.ಚ್ಕೂ.ಚ್ಕೂ.. ಸಿಳ್ಳು ಕೂಗು ಬೆಳದಿಂಗಳ ಇರುಳು ರಾ ಕೇಳಬಹುದು.