122. Franklin’s Nightjar (Caprimulgus affinis) Allied Nightjar R Myna+/- Male, ಬಿಳಿಮಚ್ಚೆ ನತ್ತಿಂಗ

25 ಸೆಂಮೀ. 120ರಂತೆ, ಆದರೆ, ಭುಜದಿಂದ ಹಿಡಿದು, ಬೆನ್ನವರೆಗೆ V ಆಕಾರದ ಮಾಸಲು ಪಟ್ಟಿ; ಗಂಟಲಿನ ಎರಡೂ ಬದಿ ಬಿಳಿ ಮಚ್ಚೆ; ರೆಕ್ಕೆ ಮತ್ತು ಬಾಲದ ಅಂಚಿನಲ್ಲಿ ಬಿಳಿ. ಒಂಟಿಯಾಗಿ ಹುಲ್ಲು-ಕುರುಚಲುಗಾಡುಗಳಲ್ಲಿ ವಾಸ. ಮುಸ್ಸಂಜೆಯಿಂದ ಮುಂಜಾವಿನವರೆಗೂ, ಅದರಲ್ಲೂ ಪ್ರಜನನ ಕಾಲದಲ್ಲಿ, ಅದರ ವಿಶಿಷ್ಟವಾದ ಚೊಂಯ್.ಚೊಂಯ್..  ಸಿಳ್ಳೆಯಿಂದ ಕಂಡು ಹಿಡಿಯಬಹುದು.