Swifts (Apodidae)

 

ಬಾನಾಡಿ ಹಕ್ಕಿಗಳು (ಮಳೆಪಕ್ಷಿ)

 

ಜೆಟ್ ವಿಮಾನಗಳಂತೆ ಆಕಾಶದಲ್ಲಿ, ಅತಿ ವೇಗವಾಗಿ ಹಾರಾಡುವ ಹಕ್ಕಿಗಳ ಕುಟುಂಬ. ಹಾರುವಾಗ ಗಾಳಿಗೆ ಒಂದಿಷ್ಟೂ ತಡೆಯೊಡ್ಡದ ಸಣ್ಣ ಶರೀರವನ್ನು ಹೊಂದಿರುವ, ಆಕಾಶದಲ್ಲಿಯೇ ತಮ್ಮ ಜೀವಮಾನವನ್ನೆಲ್ಲಾ ಕಳೆಯುತ್ತವೆಯೇನೋ ಎನಿಸುತ್ತದೆ; ಅಷ್ಟೇಕೆ, ಹಾರಿಕೊಂಡೇ ವಿಶ್ರಾಂತಿ ಪಡೆಯುತ್ತವೆ! ಅಗಲವಾದ ಬಾಯಿ, ಸ್ವಲ್ಪ ಕೆಳಬಾಗಿದ ಕೊಕ್ಕು ಗಾಳಿಯಲ್ಲಿ ಕೀಟಗಳನ್ನು ಹಿಡಿಯಲು ಸಹಕಾರಿ; ಹಾರಾಟದಲ್ಲಿ ಪ್ರಭುತ್ವ ಮತ್ತು ಹತೋಟಿಯಿದ್ದು, ದಿನರ್ತಿ ಆಕಾಶದಲ್ಲಿ ಹಾರಾಡಲು ತಕ್ಕ ಬಿಲ್ಲಿನಂತಹ, ಉದ್ದ, ಸರ, ಚೂಪಾದ ರೆಕ್ಕೆಗಳು.  ಮುಂಜಾನೆಯ ಹೊತ್ತು ಇದ್ದಕ್ಕಿದ್ದಂತೆ ಎಲ್ಲಿಂದಲೋ, ಒಮ್ಮೆಲೇ ನೂರಾರು ಬಾನಾಡಿಗಳು ಪ್ರತ್ಯಕ್ಷವಾಗಿ ಬಿಡುತ್ತವೆ; ಸಂಜೆಯ ವೇಳೆಗೆ ಬಂದ ರೀತಿಯಲ್ಲೇ ಎತ್ತಲೋ ಹೋಗಿಬಿಡುತ್ತವೆ. ವಿವಿಧ ಪ್ರಭೇದದ ಆಕಾಶಗುಬ್ಬಿಗಳು ಒಟ್ಟಿಗೇ ವೇಗವಾಗಿ ಅತ್ತಿಂದಿತ್ತ ತೀಕ್ಷ್ಣಸ್ವರದ, ಸಂಭ್ರಮದ ಉಲಿತದೊಂದಿಗೆ ಹಾರುತ್ತಿರುವಾಗ, ಅವುಗಳನ್ನು ಗುರುತು ಹಿಡಿಯುವುದೇ ಕಷ್ಟ. ಅತಿ ಚಿಕ್ಕ ಕಾಲ್ಬೆರಳುಗಳು ಮುಂಚಾಚಿರುವುದರಿಂದ ನೆಲದ ಮೇಲೆ ಅಥವಾ ಕೊಂಬೆಗಳ ಮೇಲೆ ಕುಳಿತುಕೊಳ್ಳಲಾರವು. ಬದಲಿಗೆ ಗೋಡೆ, ಬದು, ಮರದ ತೊಗಟೆಗೆ ಆತು ಕುಳಿತು, ಸಾಮೂಹಿಕವಾಗಿ ತಂಗುತ್ತವೆ. ಎಂಜಲಿನೊಂದಿಗೆ, ಹುಲ್ಲು, ಎಲೆಗಳೊಂದಿಗೆ, ಮಣ್ಣು ಸೇರಿಸಿ, ಆ ಹಿಟ್ಟಿನಿಂದ ತಯಾರಾದ ಗೂಡನ್ನು, ಬಟ್ಟಲಿನ ರೀತಿ ಯಾವುದಾದರೂ ಗೋಡೆಗೆ ಅಂಟಿಸುತ್ತದೆ. ಸಂರ್ಣ ಎಂಜಲಿನಿಂದಲೇ ತಯಾರಾದ ಗೂಡು, ದುಬಾರಿ ಖಾದ್ಯವಸ್ತು.

 

124.  House Swift (Apus affinis) R Sparrow- ಬಾನಾಡಿ (ಮಳೆಪಕ್ಷಿ)

15 ಸೆಂಮೀ. ಹೊಗೆಗ್ಪ ದೇಹಕ್ಕೆ, ಬಿಳಿ ಗಂಟಲು, ಪೃಷ್ಠ. ಗುಂಪಾಗಿ, ಮನೆಗಳು, ಪಾಳು ಕಟ್ಟಡಗಳು, ಹಳೇಕೋಟೆ, ಬಾವಿ ಮುಂತಾದೆಡೆ  ವಾಸ. ಹಾರಾಡುವಾಗ ಕೀಚಲುಧ್ವನಿಯಲ್ಲಿ, ಹರ್ಷದ ಕೂಗಾಟ. ಸಂಜೆಯ ವೇಳೆ, ಆಕಾಶದಲ್ಲಿಯೇ ಕೀಟಗಳ ಬೇಟೆ.