129. Alpine Swift (Tachymarptis melba) RM Bulbul+ ಪರ್ವತ ಬಾನಾಡಿ (ಕುಂದ್ ಮಳೆಪಕ್ಷಿ)

22 ಸೆಂಮೀ. ಕಡುಗಂದು ಮೇಲ್ಮೈ ಮತ್ತು ಬಿಳಿ ಕೆಳಮೈ; ಎದೆಯ ಮೇಲೆ ಅಗಲವಾದ ಕಂದು ಪಟ್ಟಿ; ಸಣ್ಣ, ಚೊಟ್ಟೆ ಬಾಲ. ಅತಿವೇಗವಾಗಿ, ಆಕಾಶದಲ್ಲಿ ದಿನಕ್ಕೆ ನೂರಾರು ಕಿಮೀ. ಹಾರಾಡಿಕೊಂಡು ಕೀಟಗಳನ್ನು ಹಿಡಿಯುತ್ತವೆ. ಸಂಭ್ರಮದ ಚಿರ್ರ್.ಚಿ.ಚಿ.ಚಿ. ಕೂಗು. ಹುಲ್ಲು, ನಾರು, ಗರಿಗಳೊಂದಿಗೆ ಎಂಜಲನ್ನು ಸೇರಿಸಿ ತಯಾರಿಸಿದ ಮಿಶ್ರಣವನ್ನು ಗುಹೆ, ಬಂಡೆಯ ಕೊರಕಲುಗಳಲ್ಲಿ ಅಂಟಿಸಿದ ಗೂಡು.