Tree Swifts (Hemiprocnidae)

 

ಮರಬಾನಾಡಿಗಳು (ಕೊಟ್ಟ್ ಮಳೆಪಕ್ಷಿ)

ಬಾನಾಡಿಗಳಂತಿದ್ದರೂ, ಮರಗಳ ಮೇಲೆ ಆರಾಮವಾಗಿ ಕುಳಿತುಕೊಳ್ಳಬಲ್ಲವು; ಟೆಲಿನ್ ತಂತಿಯ ಮೇಲೆ ತೋರಣ ಕಟ್ಟಿದಂತೆ ಕುಳಿತು ಚಕ್ಕಂದ ನಡೆಸುತ್ತವೆ. ಹಾರಾಟ ಆಕರ್ಷಕವಾದರೂ, ಆಕಾಶಗುಬ್ಬಿಗಳಷ್ಟು ವೇಗವಿಲ್ಲ. ಉಳಿದೆಲ್ಲ ಸ್ವಭಾವ ಆಕಾಶಗುಬ್ಬಿಗಳಂತೆ.

 

131. Crested Tree-Swift (Hemiprocne coronata) R ಮರಬಾನಾಡಿ (ಕೊಟ್ಟ್ ಮಳೆಪಕ್ಷಿ)

23 ಸೆಂಮೀ. ತಿಳಿಬೂದು-ನೀಲಿ ಮೇಲ್ಮೈ; ತಿಳಿ ಕೆಂಗಂದು ಕೆನ್ನೆ, ಗಲ್ಲ; ಬೂದು-ಬಿಳಿ ಕೆಳಮೈ; ತಲೆಯ ಮೇಲೆ ಜುಟ್ಟು; ಆಳವಾಗಿ ಸೀಳಿದ ಬಾಲ. ಸಣ್ಣ ಗುಂಪಾಗಿ, ಕಾಡುಗಳಲ್ಲಿ ವಾಸ. ಹಾರುತ್ತಿರುವಾಗಲೇ ಬೇಟೆ ಮತ್ತು ನೀರು ಕುಡಿಯುವ ಸ್ವಭಾವ. ಕೆಳದನಿಯಲ್ಲಿ ವಿಕ್ಉಕ್. ವೀಕ್ಉಕ್. ಮೆಲ್ಲುಲಿ. ಒಣಕೊಂಬೆಯ ಮೇಲ್ಭಾಗದಲ್ಲಿ ಅಂಟಿಸಿದ ತಟ್ಟೆಯಂತಹ ಗೂಡು; ಕೆಳಗಿನಿಂದ ಕಾಣುವುದೇ ಇಲ್ಲ. ಮೊಟ್ಟೆಗಳು ಬಿದ್ದುಬಿಡುವ ಸಂಭವವಿರುವುದರಿಂದ ಅವುಗಳನ್ನೂ ಅಂಟಿಸಿರುತ್ತವೆ.