135.  Stork-billed Kingfisher (Halcyon capensis) Brown-headed Kingfisher R Pigeon-ಹೆಮ್ಮಿಂಚುಳ್ಳಿ (ಬಲ್ಯ ಮೀಂಗೊತ್ತಿ)

38 ಸೆಂಮೀ. ಎಲ್ಲಕ್ಕಿಂತ ದೊಡ್ಡ ಮಿಂಚುಳ್ಳಿ; ತಲೆಗಿಂತ ದೊಡ್ಡ ಕೆಂ ಕೊಕ್ಕು; ಕಡುಗಂದು ತಲೆ; ತಿಳಿ ಹಸಿರು-ನೀಲಿ ಮೇಲ್ಮೈ; ಹಳದಿಗಂದು ಕೆಳಮೈ. ಒಂಟಿಯಾಗಿ, ಜೌಗು, ಕೆರೆ, ಕೊಳ ಮುಂತಾದ ನೀರಿರುವೆಡೆ, ಮರದ ಎಲೆಗಳ ನಡುವೆ ಅವಿತು ಕುಳಿತು ಬೇಟೆ ಹೊಂಚು ಹಾಕುವುದನ್ನು ಕಾಣಬಹುದು. ಏಡಿ, ಸಣ್ಣ ಸರೀಸೃಪಗಳು, ಟ್ಟ ಹಕ್ಕಿಗಳು ಮತ್ತು ಅವುಗಳ ಮೊಟ್ಟೆ ಅದರ ಅಹಾರದ ಪಟ್ಟಿಯಲ್ಲಿ ಸೇರಿವೆ. ಹೆಲಿಕಾಪ್ಟರಿನಂತೆ ತೂಗಿ ನಿಲ್ಲದು. ಕೆ.ಕ್ಕೆ.ಕ್ಕೆ.ಕ್ಕೆ.. ಅಪಹಾಸ್ಯದ ಕೂಗು.