136. White-breasted Kingfisher (Halcyon smyrnensis) R Myna ಗದ್ದೆ ಮಿಂಚುಳ್ಳಿ (ಂಗೊಟ್ಟು)

28 ಸೆಂಮೀ. ಕಡುಗಂದು ತಲೆ, ಕೆಳಮೈ; ಹೊಳೆಯುವ ನೀಲಿ ಮೇಲ್ಮೈ; ಕೆಂ ಕೊಕ್ಕು; ಬಿಳಿ ಎದೆ, ಹಾರುವಾಗ ಮಿಂಚುವ ನೀಲಿ ರೆಕ್ಕೆಗಳು ಮತ್ತು ತಳದಲ್ಲಿ ಬಿಳಿ ಬಾವುಟದಂತಹ ತೇಪೆ ಕಣ್ಣಿಗೆ ಅಂದ. ಎಸ್ಟೇಟು, ಕೃಷಿಭೂಮಿ, ನದೀತೀರ, ಕೆರೆ-ಕುಂಟೆ ಇರುವೆಡೆ ವಾಸ.  ಮಿಡತೆ, ಇಲಿ, ಕೀಟಗಳನ್ನೂ ತಿನ್ನುವುದರಿಂದ ನೀರಿನ ಎಡೆ ಬೇಕೆಂದಿಲ್ಲ. ಬೆಳಿಗ್ಗೆಯೇ ಎತ್ತರದ ಕಂಬ ಅಥವಾ ಮರದ ಮೇಲೆ ತನ್ನ ಬೇಟೆಗೆ ಸೂಕ್ತವಾದ ತಾಣವನ್ನು ಗುರುತಿಸಿಕೊಂಡು ಕುಳಿತುಬಿಡುತ್ತದೆ. ರೈತನ ಗೆಳೆಯ ಕೂಡ. ನಗುವಿನಂತಹ ತೀಕ್ಷ್ಣ ಕೆ.ಕ್ಕೆ.ಕ್ಕೆ..ಕ್ಕೆ.. ಕೂಗು.