Bee-eaters (Meropidae)

 

ಪತ್ರಂಗಗಳು (ಬೊತ್ತ್ಅಳ್ಪ )

ಆಕರ್ಷಕ ಹಕ್ಕಿಗಳು. ಸಣ್ಣ ಗುಂಪಿನಲ್ಲಿ ಉದ್ಯಾನ, ಗದ್ದೆಯಂಚು, ಒಣಕಾಡುಗಳಲ್ಲಿ, ಬೇಲಿ, ಒಣರೆಂಬೆ, ತಂತಿಗಳ ಮೇಲೆ, ಚಡಪಡಿಸುತ್ತ, ಅತ್ತಿತ್ತ ನೋಡುತ್ತ, ಬೇಟೆಗೆ ಹೊಂಚುಹಾಕುತ್ತದೆ. ಸರ್ರನೆ ಹಾರಿ, ಕೀಟಗಳನ್ನು ಹಿಡಿದು, ತನ್ನ ಜಾಗಕ್ಕೆ ಹಿಂದಿರುಗಿ, ಬಡಿದು ಕೊಂದು ತಿನ್ನುತ್ತದೆ. ಹಸಿರು ಬಣ್ಣದ ದೇಹ; ಕಣ್ಣಿಗೆ ಕಳ್ಳನ ಪಟ್ಟಿ; ಉದ್ದ, ಸರ, ತುಸು ಕೆಳಗೆ ಬಾಗಿದ ಕೊಕ್ಕು; ಉದ್ದ, ಚೂಪಾದ ರೆಕ್ಕೆಗಳು; ಬಾಲದ ಕೊನೆಯಲ್ಲಿ ಎರಡು ನೀಳ ಕಡ್ಡಿಗಳು, ಇವು ಸಾಮಾನ್ಯ ಲಕ್ಷಣಗಳು. ಜೇನುನೊಣ, ಕಣಜ ಮತ್ತು ಅಂತಹ ಕೀಟಗಳೇ ಆಹಾರ. ಗದ್ದೆಯ ಬದುಗಳಲ್ಲಿ ಕೊರೆದ ಸುಮಾರು 4-5 ಅಡಿ ಉದ್ದದ ಸುರಂಗದ ಒಳಗೆ ದೊಡ್ಡ ಕೋಣೆಯ ಗೂಡು. ಗಂಡು-ಹೆಣ್ಣು ಹಕ್ಕಿಗಳೆರಡೂ ಮರಿಹಕ್ಕಿಗಳ ಷಣೆಯ ಜವಾಬ್ದಾರಿಯನ್ನು ಹಂಚಿಕೊಳ್ಳುತ್ತವೆ. ಗೂಡುಕಟ್ಟುವ ಕಾರ್ಯದಲ್ಲಿ ಕುಟುಂಬದ ಇತರ ಹಕ್ಕಿಗಳೂ ಸೇರಿ ಸಹಾಯ ಮಾಡುವುದನ್ನು ಕಾಣಬಹುದು.

 

139. Small Bee-eater (Merops orientalis) Green Bee-eater R Sparrow+ ಸಣ್ಣ ಕಳ್ಳಿಪೀರ (ಬೊತ್ತ್ಅಳ್ಪ)

21 ಸೆಂಮೀ. ಅಚ್ಚಹಸಿರು ದೇಹಕ್ಕೆ ಕೆಂಗಂದು ತಲೆ, ಹಿಂಗತ್ತು; ನೀಲಿ ಗಲ್ಲ; ಕ್ಪಸರ; ಬಾಲದ ಮಧ್ಯದೆರಡು ಗರಿಗಳು ಕಡ್ಡಿಗಳಂತೆ ಉದ್ದ. ಸಣ್ಣ ಗುಂಪಿನಲ್ಲಿ ಎಸ್ಟೇಟು, ಬಿದಿರುಗಾಡು, ಗದ್ದೆಯ ಬದಿ, ಜನವಸತಿ ಮತ್ತು ಉದ್ಯಾನಗಳಲ್ಲಿ, ಇತರ ಹಕ್ಕಿಗಳೊಡನೆ, ಬಾಗಿದ ಕೊಂಬೆಯ ತುದಿ ಅಥವಾ ತಂತಿಯ ಮೇಲೆ ಕುಳಿತು ಕೀಟಗಳ ಬೇಟೆ; ಹಾರುತ್ತಿರುವ ಜೇನುನೊಣವನ್ನು ಅಟ್ಟಿಸಿಕೊಂಡು ಹೋಗಿ ಹಿಡಿದು, ಹಿಂದಿರುಗಿ ಅಲ್ಲಿಗೇ ಬಂದು ಕುಳಿತು, ಬೇಟೆಯನ್ನು ಬಡಿದು ಕೊಂದು ತಿನ್ನುತ್ತದೆ. ಹರ್ಷದ ಟ್ರೀ.ಟ್ರೀ.. ಕೂಗಾಟ. ಸಂಜೆ ಗುಂಪಿನಲ್ಲಿ ಮರದ ಎಲೆಗಳ ನಡುವೆ ತಂಗುವಿಕೆ. ಬೆಳಿಗ್ಗೆ ಏಳಲು ಸೋಮಾರಿ.