14. Cattle Egret (Bubulcus ibis) R Hen ಗೋವಕ್ಕಿ (ಉಣ್ಣಿ ಳೆ)

51 ಸೆಂಮೀ. ಎಲ್ಲವೂ 11ರಂತಿದ್ದರೂ, ಕೊಕ್ಕು ಮಾತ್ರ ಹಳದಿ; ಸಂತಾನ ಋತುವಿನಲ್ಲಿ ತಲೆ, ಕತ್ತು, ಬೆನ್ನು ಹೊಂಬಣ್ಣಕ್ಕೆ ತಿರುಗುತ್ತವೆ. ಮೈದಾನದ ಪ್ರದೇಶ, ಕೃಷಿಭೂಮಿ ಮತ್ತು ನೀರಿನ ಬದಿಗಳಲ್ಲಿ ಮೇಯುತ್ತಿರುವ ಹಸು, ಎಮ್ಮೆಗಳ ಮೈಮೇಲೆ, ಉಳುತ್ತಿರುವ ನೇಗಿಲ ಹಿಂದೆ, ಗೊಬ್ಬರದ ಸುತ್ತ, ಹುಳು-ಹುಪ್ಪಟೆ, ಕೀಟ, ಮಿಡತೆಗಳನ್ನು ಬೇಟೆಯಾಡುತ್ತವೆ. ನೂರಾರು ಹಕ್ಕಿಗಳು ಒಟ್ಟಿಗೆ ಒಂದೇ ಮರದ ಮೇಲೆ ವಿಶ್ರಾಂತಿ ಪಡೆಯುತ್ತವೆ; ತಿಂಗಳ ಬೆಳಕಿನಲ್ಲಿ ಇದು ನಕ್ಷತ್ರ ಸಮೂಹದಂತೆ ಕಾಣುತ್ತದೆ!