Hoopoes (Upupidae)

 

ಚಂದ್ರಮುಕುಟಗಳು (ಹೂಪ್)

 

145. Common Hoopoe (Upupa epops) Hoopoe R Bulbul+ ಚಂದ್ರಮುಕುಟ (ಹೂಪ್)

31 ಸೆಂಮೀ. ತಿಳಿಗಂದು ದೇಹಕ್ಕೆ ಕ್ಪ-ಬಿಳಿ ರೆಕ್ಕೆ; ಪಟ್ಟೆ ಬಾಲ; ಬಿಳಿ ಕೆಳಹೊಟ್ಟೆ; ಉದ್ದನಾದ, ತುಸು ಕೆಳಕ್ಕೆ ಬಾಗಿದ ಕೊಕ್ಕು; ತಲೆಯ ಮೇಲೆ ಜಪಾನ್ ಬೀಸಣಿಗೆಯಂತಹ ಕಿರೀಟದಲ್ಲಿ, ಬಿಳಿ-ಕ್ಪ ಅಂಚುಳ್ಳ ಗರಿಗಳು. ಕುರುಚಲು ಕಾಡು, ಬಯಲು ಪ್ರದೇಶ, ತೆಳು ಕಾಡುಗಳಲ್ಲಿ ಮತ್ತು ತೋಟಗಳಲ್ಲಿ, ನೆಲದ ಮೇಲೆ ಕ್ರಿಮಿ-ಕೀಟಗಳಿಗಾಗಿ ಕೆದಕುತ್ತ ಅಡ್ಡಾಡುತ್ತವೆ; ಅಲ್ಲದೆ ಕೀಟಗಳೊಂದಿಗೆ ಗೂಡುಗಳೊಳಗಿರುವ ಅವುಗಳ ಮರಿಹುಳಗಳು ಅತಿಪ್ರಿಯ; ಹಾಗಾಗಿ ರೈತನ ಅತ್ಯಂತ ಗೆಳೆಯ. ಅತ್ತಿತ್ತ ತಿರುಗುವಾಗ, ಒಂದೊಂದು ಸಾರಿಗೂ ಶಿಖೆಯನ್ನು ತೆಗೆದು ಮುಚ್ಚುತ್ತಿರುತ್ತವೆ. ಹಾರುವಾಗ ಅಲೆಅಲೆಯಂತೆ ಓಲಾಟ; ನೆಲದ ಮೇಲೆ ಜೂಗಾಟದ ನಡೆ. ಕಿವಿಗೆ ಇಂಪಾದ ಹುಪ್.ಪ್.ಪ್. ಕೂಗು. ಮರದ ಟರೆ, ಗೋಡೆಯ ರಂಧ್ರಗಳಲ್ಲಿ ಚಿಂದಿ, ಕಸ-ಕಡ್ಡಿಗಳ ಗೂಡು. ಗೂಡಿನ ಬಳಿ ಹೋದವರಿಗೆ, ಮರಿಗಳ ದುರ್ವಾಸನೆಯ ಪಿಚಕಾರಿ!