Hornbills  (Bucerotidae)

 

ಮಂಗಟ್ಟೆ ಹಕ್ಕಿಗಳು (ಕಿತ್ತೋಳೆಪಕ್ಷಿ)

 

ದೊಡ್ಡಗಾತ್ರದ ಹಕ್ಕಿಗಳು; ಮುಖದಲ್ಲಿ ತಲೆಗಿಂತ ದೊಡ್ಡದಾದ, ಎದ್ದುಕಾಣುವ ಕೊಕ್ಕು, ಅದರ ಮೇಲೆ ದೊಡ್ಡ ಕೋಡು, ಈ ಪಕ್ಷಿಗಳ ವೈಶಿಷ್ಟ್ಯ. ಈ ಕೋಡುಗಳು ಅವುಗಳ ಧ್ವನಿಯನ್ನು ಒಂದಷ್ಟು ಪಟ್ಟು ಹೆಚ್ಚಿಸುತ್ತವೆ. ಕಣ್ಣಿನ ಸುತ್ತ ನಗ್ನ ಚರ್ಮ; ಅಗಲವಾದ ದೊಡ್ಡ ರೆಕ್ಕೆಗಳು; ಉದ್ದನಾದ, ದೇಹಕ್ಕೆ ಭಾರವೆನಿಸುವ ಬಾಲ. ಆಯುಷ್ಯದ ಹೆಚ್ಚು ವೇಳೆಯನ್ನು ಮರದ ಮೇಲೆಯೇ ಕಳೆಯುತ್ತವೆ. ಅಂಜೂರದ ಜಾತಿಯ, ಕಾಡು ಮರಗಳ, ಧೂಪದ ಮರದ ಹಣ್ಣುಗಳೆಂದರೆ ಪ್ರಿಯ. ಜೊತೆಗೆ ಓತಿ, ಇಲಿ, ಪಕ್ಷಿಮರಿಗಳೂ ಆಹಾರ. ದಪ್ಪ ಧ್ವನಿಯ ಕರ್ಕಶ ಚೀರಾಟ. ಮರದಿಂದ ಮರಕ್ಕೆ ಹಾರುವಾಗ ಅಲೆಯ ಹಾಗೆ, ಗಾಳಿಯಲ್ಲಿ ತೇಲುವ ಹಾರಾಟ. ಗೂಡುಕಟ್ಟುವ ಪರಿ, ಇನ್ನೂ ವಿಚಿತ್ರ: ಗಂಡು-ಹೆಣ್ಣು ಹಕ್ಕಿಗಳು ಒಂದರ ಹಿಂದೆ ಒಂದು ಬಿಟ್ಟಿರದೆ ಹಾರಾಡುತ್ತಿರುತ್ತವೆ. ನಿರ್ದಿಷ್ಟ ಸಮಯ ಬಂದಾಗ, ಹೆಣ್ಣು ಮಂಗಟ್ಟೆಯನ್ನು ಒಂದು ಮರದ ಟರೆಯೊಳಗೆ ಕುಳ್ಳಿರಿಸಿ, ಬರೇ ಕೊಕ್ಕು ಹೊರಗೆ ಕಾಣುವಂತೆ ಸುತ್ತಲೂ ಮಣ್ಣು ಮೆತ್ತಿ ಮುಚ್ಚುತ್ತದೆ. ಅಲ್ಲಿಂದ ಮೊಟ್ಟೆಯೊಡೆದು, ಮರಿಗಳು ದೊಡ್ಡದಾಗುವವರೆಗೂ, ಇಡೀ ಸಂಸಾರಕ್ಕೆ ಆಹಾರ ಒದಗಿಸುವ ಭಾರವನ್ನು ಗಂಡುಹಕ್ಕಿಯೇ ಹೊರುತ್ತದೆ. ಈ ಸಮಯದಲ್ಲಿ ಗಂಡುಹಕ್ಕಿಗೆ ಅಪಾಯ ಸಂಭವಿಸಿದರೆ, ಇಡೀ ಕುಟುಂಬವೇ ನಾಶವಾಗುವ ಸಂಭವವಿದೆ!

 

146. Indian Grey Hornbill (Ocyceros birostris) Common Grey Hornbill R Kite- ಬೂದು ಮಂಗಟ್ಟೆ (ಬೂದ್ ಕಿತ್ತೋಳೆಪಕ್ಷಿ)

61 ಸೆಂಮೀ. ಬೂದುಗಂದು ಮೈ; ಕೋಡುಳ್ಳ, ಉದ್ದವಾದ, ತುಸು ಕೆಳಕ್ಕೆ ಬಾಗಿದ ಕ್ಪ-ಬೂದು ಕೊಕ್ಕು; ಭಾರವಾದ ಬಾಲದ ತುದಿ, ಕ್ಪ-ಬಿಳಿ. ದಟ್ಟ ಕಾಡುಗಳಲ್ಲಿ ವಿರಳ. ಗುಂಪಾಗಿ ಅಥವಾ ಜೋಡಿಯಾಗಿ, ಉದುರೆಲೆ ಕಾಡು, ತಿಳಿಗಾಡು-ತೋಗಳಿರುವೆಡೆ, ಉಳಿದ ಹಕ್ಕಿಗಳೊಂದಿಗೆ ಫಲಭರಿತ ಮರಗಳಲ್ಲಿ ಕಾಣಬಹುದು. ಬೀಜಪ್ರಸರಣದಲ್ಲಿ ಮುಖ್ಯ ಪಾತ್ರ. ಕೀಚಲುಧ್ವನಿಯ ಅರಚಾಟ, ಕೆ.ಕ್ಕೆ..ಕ್ಕೆ.. ಅಟ್ಟಹಾಸದ ನಗುವಲ್ಲದೆ, ಕೈಯಾಂ.. ಕೈಯಾಂ.. ಕೂಗು.